ಸ್ವಾಹಿಲಿ ಭಾಷೆ
ವಿಕಿಪೀಡಿಯ ಇಂದ
(ಸ್ವಾಹಿಲಿ ಇಂದ ಪುನರ್ನಿರ್ದೇಶಿತ)
ಸ್ವಾಹಿಲಿ (ಕಿಸ್ವಾಹಿಲಿ) ಭಾಷೆಯು, ಕಾಮರೋಸ್ ದ್ವೀಪಗಳ ಸಹಿತ, ದಕ್ಷಿಣ ಸೋಮಾಲಿಯಾದಿಂದ ಉತ್ತರ ಮೊಜ್ಯಾಂಬಿಕ್‌ವರೆಗಿನ ಹಿಂದೂ ಮಹಾಸಾಗರ ಕಡಲತೀರದ ಹಲವು ದೊಡ್ಡ ಭೂಪ್ರದೇಶಗಳಲ್ಲಿ ನೆಲೆಸಿರುವ ವಿವಿಧ ಬುಡಕಟ್ಟು ಗುಂಪುಗಳಿಂದ ಬಳಸಲ್ಪಡುತ್ತದೆ. ಕೇವಲ ೫ ರಿಂದ ೧೦ ದಶಲಕ್ಷ ಜನ ಮಾತ್ರ ಇದನ್ನು ತಮ್ಮ ಸ್ಥಳೀಯ ಭಾಷೆಯಾಗಿ ಬಳಸುತ್ತಾರಾದರೂ, ಸ್ವಾಹಿಲಿ ಭಾಷೆಯು ಪೂರ್ವ ಆಫ್ರಿಕಾ ಹಾಗೂ ಕಾಂಗೋ ಗಣರಾಜ್ಯದ ಬಹಳಷ್ಟು ಭಾಗದ ಸಂಪರ್ಕ ಭಾಷೆ, ನಾಲ್ಕು ರಾಷ್ಟ್ರಗಳ ರಾಷ್ಟ್ರೀಯ ಅಥವಾ ಅಧಿಕೃತ ಭಾಷೆ, ಮತ್ತು ಆಫ್ರಿಕಾದ ಒಕ್ಕೂಟದ ಅಧಿಕೃತ ಬಳಕೆ ಭಾಷೆಗಳ (ವರ್ಕಿಂಗ್ ಲ್ಯಾಂಗ್ವಿಜ್) ಪಟ್ಟಿಯಲ್ಲಿರುವ ಆಫ್ರಿಕಾ ಮೂಲದ ಏಕೈಕ ಭಾಷೆಯೂ ಆಗಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |