ಸ್ವರ (ಭಾಷೆ)
ಕನ್ನಡ ಭಾಷೆಯು ನಾಲ್ಕು ದ್ರಾವಿಡ ಭಾಷೆಗಳಲ್ಲಿ ಒಂದು. ಕನ್ನಡದಲ್ಲಿ ಒಟ್ಟು ೪೯ ಅಕ್ಷರಗಳಿವೆ. ಅವುಗಳನ್ನು ವರ್ಣ ಮಾಲೆ ಎಂದು ಕರೆಯುತ್ತಾರೆ . ವರ್ಣಗಳ ಈ ಮಾಲೆಯನ್ನು ಕನ್ನಡ ಮಾತೆಯಾದ ತಾಯಿ ಭುವನೇಶ್ವರಿಗೆ ಶ್ರದ್ಧಾ ಭಕ್ತಿಗಳಿಂದ ಅರ್ಪಿಸೋಣ !!!
ವರ್ಣಮಾಲೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ . ಅವು ಕ್ರಮವಾಗಿ ಸ್ವರಗಳು, ವ್ಯಂಜನಗಳು ಮತ್ತ್ತು ಯೋಗವಾಹಗಳು. ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ಸ್ವರಗಳೆಂದು ಕರೆಯುತ್ತೇವೆ .
ಸ್ವಯಂ ರಂಜತಿ ಇತಿ ಸ್ವರಃ
ಇವು ಒಟ್ಟು ಹದಿಮೂರು. ಅವು , ಅ, ಆ , ಇ, ಈ, ಉ, ಊ, ಋ, ಎ, ಏ, ಐ, ಒ, ಓ, ಔ (ೠ ಎಂಬ ಅಕ್ಷರದಿಂದ ಪದಗಳು ದೊರಕದೆ ಇರುವುದರಿಂದ ಈ ಅಕ್ಷರವನ್ನು ಕೈಬಿಡಲಾಗಿದೆ)
ಇವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು .
- ಹ್ರಸ್ವಾಕ್ಷರಗಳು - ಅ, ಇ, ಉ, ಋ, ಎ, ಒ (ಒಟ್ಟು ೬)
- ದೀರ್ಘಾಕ್ಷ್ಸರಗಳು - ಆ, ಈ, ಊ, ಏ, ಐ, ಓ, ಔ (ಒಟ್ಟು ೭)
ವ್ಯಂಜನಗಳು ಅರ್ಧ ಮಾತ್ರಾ ಕಾಲ ಉಚ್ಚಾರ ಉಳ್ಳ ಅಕ್ಷ ರಗಳಾದ್ದರಿಂದ ಇವುಗಳನ್ನು ಸ್ವತಂತ್ರವಾಗಿ ಉಚ್ಚರಿಸಲು ಬಹಳ ಕಷ್ಟ . ಇವುಗಳ ಸುಲಲಿತವಾದ ಸುಲಭ ಉಚ್ಚಾರಣೆಗಾಗಿ ಸ್ವರಗಳ ಸಹಾಯಬೇಕು. ಹೇಗೆಂದರೆ
ಕ್ + ಅ = ಕ
ಕ್ + ಆ = ಕಾ
ಕ್ + ಇ = ಕಿ
ಕ್ + ಈ = ಕೀ
ಕ್ + ಉ = ಕು
ಕ್ + ಊ = ಕೂ
ಕ್ + ಋ = ಕೃ
ಕ್ + ಎ = ಕೆ
ಕ್ + ಏ = ಕೇ
ಕ್ + ಏ = ಕೈ
ಕ್ + ಒ = ಕೊ
ಕ್ + ಓ = ಕೋ
ಕ್ + ಔ = ಕೌ
ಕ್ + ಅ + ಂ = ಕಂ } ಇವು ಯೋಗವಾಹಗಳ ಬಳಕೆ. ( ಂ ಎಂಬ ಚಿಹ್ನೆ ಯನ್ನು ಅನುಸ್ವಾರ ಎಂದು ಕರೆಯುತ್ತಾರೆ . ಃ ಎಂಬ ಚಿಹ್ನೆ ಯನ್ನು ವಿಸರ್ಗ ಎಂದು ಕರೆಯುತ್ತಾರೆ) ಕ್ + ಆ + ಃ = ಕಃ }
ಇವುಗಳನ್ನು ಗುಣಿತಾಕ್ಷ ರಗಳೆಂದು ಕರೆಯುತ್ತಾರೆ. (ಕಾ ಗುಣಿತ -- ಎಂದು ಕೆಲವರು ಕರೆದರೂ, ಕ ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ, ಅದು ಕಾ ಗುಣಿತ ಎನ್ನಬಹುದಾಗಿದೆ . ಗ ಎಂಬ ವ್ಯಂಜನಕ್ಕೆ ಸ್ವರಗಳನ್ನು ಸೇರಿಸಿದಾಗ ಅದು ಗಾ ಗುಣಿತ ಎನ್ನುವುದು ಸೂಕ್ತವೇ ? )
ವ್ಯಂಜನಗಳು ಒಟ್ಟು ೩೪. ಇವುಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ . ಅವು
ವರ್ಗೀಯ ವ್ಯಂಜನಗಳು ಒಟ್ಟು ೨೫. ಅವರ್ಗೀಯ ವ್ಯಂಜನಗಳು ಒಟ್ಟು ೯.
ವರ್ಗೀಯ ವ್ಯಂಜನಗಳು ಈ ರೀತಿ ಇವೆ :-
| ಅಲ್ಪ ಪ್ರಾಣ | ಮಹಾಪ್ರಾಣ | ಅಲ್ಪ ಪ್ರಾಣ | ಮಹಾಪ್ರಾಣ | ಅನುನಾಸಿಕ | |
|---|---|---|---|---|---|
| ಕ ವರ್ಗ | ಕ | ಖ | ಗ | ಘ | ಙ |
| ಚ ವರ್ಗ | ಚ | ಛ | ಜ | ಝ | ಞ |
| ಟ ವರ್ಗ | ಟ | ಠ | ಡ | ಢ | ಣ |
| ತ ವರ್ಗ | ತ | ಥ | ದ | ಧ | ನ |
| ಪ ವರ್ಗ | ಪ | ಫ | ಬ | ಭ | ಮ |
ಹೀಗೆ ವರ್ಗೀಯ ವ್ಯಂಜನಗಳು ಐದು ವರ್ಗಗಳ ಐದು ಗುಂಪಿದೆ. ಪ್ರತಿ ವರ್ಗದ ಮೊದಲ ಮತ್ತು ಮೂರನೆಯ ಅಕ್ಷರಗಳನ್ನು ಅಲ್ಪ ಪ್ರಾಣಾಕ್ಷರಗಳು ಎನ್ನುತ್ತಾರೆ . ಹಾಗೆಯೇ ಎರಡನೇ ಮತ್ತು ನಾಲ್ಕನೇ ಅಕ್ಷರಗಳನ್ನು ಮಹಾಪ್ರಾಣಾಕ್ಷರಗಳು ಎನ್ನುತ್ತಾರೆ. ವರ್ಗದ ಕೊನೆ - ಐದನೇ ಅಕ್ಷರವನ್ನು ಅನುನಾಸಿಕಾಕ್ಷರ ಎನ್ನುತ್ತಾರೆ.
ಅವರ್ಗೀಯ ವ್ಯಂಜನಗಳು ಒಟ್ಟು ೯. ಇವು ,
ಯ, ರ, ಲ, ವ, ಶ, ಷ, ಸ, ಹ, ಳ (ಕ್ಷ , ತ್ರ --- ಇವು ಸಂಯುಕ್ತಾಕ್ಷರಗಳು)