ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಸ್ಥೆಯ ಬಗ್ಗೆ[ಬದಲಾಯಿಸಿ]

ಸ್ನೇಹ[೧] ಶಿಕ್ಷಣ ಸಂಸ್ಥೆಯು[೨] ಸುಳ್ಯ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಿಂದ ಸುಮಾರು 1.25 ಕಿ. ಮೀ.ಗಳಷ್ಟು ದೂರವಿದ್ದು ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಬಲಬದಿಯಲ್ಲಿ ಸ್ನೇಹಶಿಲಾ ಎಂಬಲ್ಲಿ ಸ್ಥಾಪನೆಯಾಗಿದೆ. ಇದು ತನ್ನ ಮೊದಲ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯನ್ನು 1996ರಲ್ಲಿ ಪ್ರಾರಂಭಿಸಿ, ಬಳಿಕ 2000ದಲ್ಲಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯನ್ನು ಸ್ಥಾಪಿಸಿದೆ.

ಇಲ್ಲಿ ಬಾಲವಾಡಿಯಿಂದ[೩] 10ನೆಯ ತರಗತಿಯವರೆಗೆ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಶಿಕ್ಷಣ ಸಂಸ್ಥೆಯ ಆಡಳಿತದಲ್ಲಿ ಒಟ್ಟು ಎರಡು ವಿದ್ಯಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಹೆಸರೇ ತಿಳಿಸುವಂತೆ ‘ಸ್ನೇಹ’ ಅಂದರೆ ಗೆಳೆತನ. ವಿಭಿನ್ನ ವೃತ್ತಿಯಲ್ಲಿನ ಸಮಾನ ಮನಸ್ಕ ಗೆಳೆಯರ ಸೃಷ್ಟಿಯೇ ಈ ವಿದ್ಯಾಸಂಸ್ಥೆ. ಇದರಲ್ಲಿ ವೈದ್ಯರು, ಶಿಕ್ಷಕರು, ಇಂಜಿನಿಯರರು ಹಾಗೂ ಉದ್ಯಮಿಗಳಿದ್ದಾರೆ. ಪ್ರಸ್ತುತ ನಿವೃತ್ತ ಶಿಕ್ಷಕ ಡಾ| ಚಂದ್ರಶೇಖರ ದಾಮ್ಲೆಯವರು ಇದರ ಅಧ್ಯಕ್ಷರಾಗಿದ್ದು ವೈದ್ಯ ಡಾ|ವಿದ್ಯಾಶಾಂಭವ ಪಾರೆಯವರು ಇದರ ಸಂಚಾಲಕರಾಗಿದ್ದಾರೆ. ನಿರ್ದೇಶಕರಾಗಿ ಭಾರತದ ಸೇತು ಬ್ರಹ್ಮ, ತೂಗು ಸೇತುವೆಗಳ ಸರದಾರ ಗಿರೀಶ್ ಭಾರಧ್ವಾಜ್, ಕಾಂಕೂಡ್ ಎಂಬ ಮರಕ್ಕೆ ಸಂವಾದಿಯಾಗಿರುವ ಕೃತಕ ವಸ್ತುವಿನ ಸೃಷ್ಟಿಕರ್ತ ಎಸ್ ಕೆ ಆನಂದ ಕುಮಾರ್, ಉದ್ಯಮಿ ಶ್ರೀಕರ ದಾಮ್ಲೆ ಮೊದಲಾದವರಿದ್ದಾರೆ. ಸಂಸ್ಥೆಯು ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ಸತತ 7 ಬಾರಿ ಶೇಕಡಾ 100 ಫಲಿತಾಂಶ ಗಳಿಸುತ್ತಿದೆ.


ಉಲ್ಲೇಖ[ಬದಲಾಯಿಸಿ]