ಸೋಮನಾಥಪುರ
Wikipedia ಇಂದ
ಸೋಮನಾಥಪುರ ಮೈಸೂರು ನಗರದಿಂದ ೩೦ ಕಿ.ಮಿ ದೂರದಲ್ಲಿರುವ ಒಂದು ಪಟ್ಟಣ. ಇದು ಹೊಯ್ಸಳರು ಕಟ್ಟಿಸಿದ ಚೆನ್ನಕೇಶವ ದೇವಾಲಯಕ್ಕೆ ಹೆಸರುವಾಸಿ. ಈ ದೇವಾಲಯವನ್ನು ೧೨೬೮ರಲ್ಲಿ ಹೊಯ್ಸಳ ಸಾಮ್ರಾಜ್ಯದಲ್ಲಿ ದಂಡನಾಯಕನಾಗಿದ್ದ ಸೋಮ ಎಂಬಾತನು ಕಟ್ಟಿಸಿದನು. ಇದು ಇಂದು ಕರ್ನಾಟಕದ ಪ್ರೇಕ್ಷಣೀಯ ಸ್ಥಳವಾಗಿ ಬೆಳೆದಿದೆ.