ಸೈಂಟ್ ಮೇರೀಸ್ ದ್ವೀಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೈಂಟ್ ಮೇರೀಸ್ ದ್ವೀಪ
ಸೈಂಟ್ ಮೇರೀಸ್ ದ್ವೀಪ.
ದ್ವೀಪ
Four Islands -Coconut Island, the North Island, the Daryabahadurgarh Island and the South Island

ಸೈಂಟ್ ಮೇರೀಸ್ ದ್ವೀಪ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ಕಿನಾರೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ದ್ವೀಪ. ಸೈಂಟ್ ಮೇರೀಸ್ ದ್ವೀಪವನ್ನು ಕೊಕೊನಟ್ ಐಸ್‍ಲ್ಯಾಂಡ್ ಎಂದು ಇನ್ನೊಂದು ಹೆಸರಿನಲ್ಲಿ ಕರೆಯುತ್ತಾರೆ. ಕಾಲೊಮ್ನಾರ್ ಬಾಲೆಸ್ಟಿಕ್ ಲಾವಾದಿಂದಾಗಿ ಈ ದ್ವೀಪ ಬಹಳ ಹೆಸರುವಾಸಿ ಯಾಗಿದೆ[೧]. ಕರ್ನಾಟಕ ರಾಜ್ಯದ ಕೇವಲ ೪ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಸೈಂಟ್ ಮೇರೀಸ್ ದ್ವೀಪವೂ ಒಂದು ಹಾಗು ದೇಶದ ೨೬ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದು ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಘೋಷಿಸಿದೆ.

ಇತಿಹಾಸ[ಬದಲಾಯಿಸಿ]

ಇದರ ಮೊದಲ ಹೆಸರು ತೋನ್ಸೆ ಪಾರ್ ಇತಿಹಾಸದ ಪ್ರಕಾರ ೧೪೯೭ರಲ್ಲಿ ಪೋರ್ಚುಗೀಸ್‌ ಶೋಧಕ ವಾಸ್ಕೋ ಡ ಗಾಮ , ಯುರೋಪ್‌ನಿಂದ ಭಾರತದ ಕಡೆಗೆ ಸಾಗರ ಮಾರ್ಗದಲ್ಲಿ ಪ್ರಯಾಣಿಸುವಾಗ ಈ ದ್ವೀಪದಲ್ಲಿ ಇಳಿದನೆಂದು ಹಾಗು ಅಲ್ಲಿ ಶಿಲುಬೆಯೊಂದನ್ನು ನೆಟ್ಟು "El Padron de Santa Maria" ಅಂದರೆ "ತಾಯಿ ಮೇರಿಗಾಗಿ ಸಮರ್ಪಿಸಿದ ತಾಣ" ಎಂದು ಹೆಸರಿಟ್ಟ ಎಂದೂ ಹಾಗಾಗಿ ಈ ದ್ವೀಪ ಸೈಂಟ್ ಮೇರೀಸ್ ಎಂಬ ಹೆಸರನ್ನು ಪಡೆಯಿತು ಎಂದು ಹೇಳಲಾಗುತ್ತದೆ[೨].

ಭೂವಿಜ್ಞಾನ ಹಾಗು ಸ್ಥಳವಿವರಣೆ[ಬದಲಾಯಿಸಿ]

ಸೈಂಟ್ ಮೇರೀಸ್ ದ್ವೀಪವು ೪ ದ್ವೀಪಗಳ ಸಮೂಹದಿಂದಾಗಿದೆ. ೪ ದ್ವೀಪಗಳಲ್ಲಿನ ಒಂದಾದ ಉತ್ತರದ ದ್ವೀಪ ಬಸಾಲ್ಟ್-ರಯೋಡೇಸೈಟು ವರ್ಗದ ಶಿಲೆ (ಬಸಾಲ್ಟಿಕ್-ರಿಯೋಡಾಸಿಟಿಕ್ ಬಂಡೆಗಳು) ಗಳಿಂದ ರಚನೆಯಾಗಿದ್ದು ಷಡ್ಭುಜ ಆಕೃತಿಯ ಶಿಲೆಗಳ ಸಮೂಹವಾಗಿದೆ. ಈ ಬಗೆಯ ಸುಂದರ ಷಡ್ಭುಜ ಆಕೃತಿಯ ಶಿಲಾರಚನೆಗಳು ದೇಶದಲ್ಲಿ ಇವು ಏಕಮಾತ್ರ ಎನ್ನಲಾಗಿದೆ. ದ್ವೀಪದ ವಿಸ್ತಾರವು ಸುಮಾರು ೫೦೦ ಮೀ (೧,೬೪೦.೪ ಅಡಿ). ಉದ್ದವಾಗಿದ್ದು ಅಗಲವು ೧೦೦ ಮೀ ಇದೆ. ದ್ವೀಪದ ತುಂಬೆಲ್ಲಾ ತೆಂಗಿನ ಮರಗಳು ಇವೆ. ದ್ವೀಪದಲ್ಲಿ ಮನುಷ್ಯ ನೆಲೆ ಇಲ್ಲ[೩][೪]. ಉತ್ತರ-ದಕ್ಷಿಣ ದಿಕ್ಕಿನಲ್ಲಿ ಚಾಚಿಕೊಂಡಿರುವ ದ್ವೀಪಸಮೂಹವು ೪ ದೊಡ್ದ ದ್ವೀಪಗಳಿಂದ ಕೂಡಿದೆ. ಈ ೪ ದೊಡ್ದ ದ್ವೀಪಗಳೆಂದರೆ

  1. ನಾರಿಕೇಳ(ಕೊಕೊನೆಟ್) ದ್ವೀಪ
  2. ಉತ್ತರ ದ್ವೀಪ
  3. ದರಿಯಾ ಬಹದ್ದೂರ್ ದ್ವೀಪ
  4. ದಕ್ಷಿಣ ದ್ವೀಪ

ದ್ವೀಪದ ಛಾಯಾಚಿತ್ರಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "Columnar Basalt". Geological Survey of India. Archived from the original on 2011-07-21. Retrieved 2008-07-26.
  2. Prabhu, Ganesh (2006-03-31). "A beach and an island to relax on". ದ ಹಿಂದು. Archived from the original on 2006-12-13. Retrieved 2008-10-28.
  3. "St Mary's Island". Retrieved 2009-01-24.
  4. "Where rocks tell a tale". ದಿ ಹಿಂದೂ. 2002-09-16. Retrieved 2009-01-24.