ಸೃಷ್ಟಿ ಮತ್ತು ಉಪನಿಷತ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು



ಪರಿವಿಡಿ

ತೈತ್ತಿರೀಯೋಪನಿಷತ್ ಮತ್ತು ವಿಶ್ವ ಸೃಷ್ಟಿ [ಬದಲಾಯಿಸಿ]

ಪೀಠಿಕೆ : [ಬದಲಾಯಿಸಿ]

ಯಜುರ್ವೇದದಲ್ಲಿ ಶುಕ್ಲ ಯಜುರ್ವೇದ ಮತ್ತು ಕೃಷ್ಣ ಯಜುರ್ವೇದ ಎಂಬ ಎರಡು ಮುಖ್ಯ ವಿಭಾಗಗಳಿವೆ. ಕೃಷ್ಣ ಯಜುರ್ವೇದಕ್ಕೆ ಸೇರಿದ ತೈತ್ತೀರಿಯಾರಣ್ಯಕದ ಏಳು, ಎಂಟು, ಒಂಭತ್ತನೆಯ ಪ್ರಪಾಠಕಗಳೇ ಈ ಉಪನಿಷತ್ತಿನ ಶಿಕ್ಷಾವಲ್ಲಿ, ಆನಂದವಲ್ಲಿ(ಬ್ರಹ್ಮಾನಂದವಲ್ಲಿ) ಭೃಗುವಲ್ಲಿ ಭಾಗಗಳು. ಅದರಲ್ಲಿ ಎರಡನೇ ಆನಂದವಲ್ಲಿಯ ಒಂದು, ಆರು ಮತ್ತು ಏಳನೆಯ ಆನುವಾಕಗಳಲ್ಲಿ ಸಂಕ್ಷಿಪ್ತವಾಗಿ ಸೃಷ್ಟಿಯ ಕ್ರಮವನ್ನು ಹೇಳಿದೆ. ಸೃಷ್ಟಿಗೆ ಮೂಲವಾದ ಆತ್ಮವು - ಸತ್ಯಂ ಜ್ಞಾನಂ ಅನಂತಂ ಬ್ರಹ್ಮ -ರಸೋ ವೈ ಸಃ (ಬ್ರಹ್ಮವು ಸತ್ಯವೂ-ಎಂದರೆ ಬದಲಾವಣೆ ಇಲ್ಲದ್ದೂ (ಜಗತ್ತು ಮಾಯೆ ಅಥವಾ ಅಧ್ಯಾಸವಾಗಿರುವುದರಿಂದ ಮೂಲ ಬ್ರಹ್ಮವು ಬದಲಾವಣೆಯಾಗಿಲ್ಲವೆಂದು ಭಾವ.), ಮೂಲ ಅರಿವಿನ ಸ್ವರೂಪದ್ದೂ , ಅನಂತಂ ಎಂದರೆ ಅಂತ್ಯ ವಿಲ್ಲದ್ದು - ನಾಶವಿಲ್ಲದ್ದು , ಅಲ್ಲದೆ ಅವನು ಆನಂದ (ರಸ) ಸ್ವರೂಪನು - ಎಂದು ಬ್ರಹ್ಮದ ಲಕ್ಷಣವನ್ನು ಹೇಳಿದೆ..

ಮಂತ್ರ || ಅನುವಾಕ ೭ || (ಗದ್ಯ) [ಬದಲಾಯಿಸಿ]

ಅಸದ್ವಾ ಇದಮಗ್ರ ಆಸೀತ್ | ತತೋ ವೈ ಸದಜಾಯತ | ತದಾತ್ಮಾನಗ್ ಂ ಸ್ವಯಂಕುರುತ | ತಸ್ಮಾತ್ ತತ್ ಸುಕೃತಮುಚ್ಯತ ಇತಿ ||

ಅರ್ಥ: ಇದು (ಆತ್ಮವು- ಬ್ರಹ್ಮವು) ಮೊದಲು ಅಸತ್ತೇ ( ಅಸತ್ತು - ಎಂದರೆ ಇಲ್ಲದ್ದು - ಇಲ್ಲವೇನೋ ಎಂಬಂತೆ ಇತ್ತು - ಕಾರಣ - ಇಲ್ಲದೇ ಇರುವುದರಿಂದ ಇರುವುದು ಉಂಟಾಗಲಾರದು.) ಆಗಿತ್ತು. ಅದರಿಂದಲೇ ಇರುವುದು ಉತ್ಪನ್ನವಾಯಿತು. ಅದು ತನ್ನನ್ನು ತಾನೇ ಉತ್ಪತ್ತಿ ಮಾಡಿಕೊಂಡಿತು. ಆದುದರಿಂದ ಆದು ಸ್ವಯಂ ಕೃತ , ಹೀಗೆಂದು ಹೇಳುತ್ತಾರೆ.

ಮಂತ್ರ || ಅನುವಾಕ ೬ || (ಗದ್ಯ) [ಬದಲಾಯಿಸಿ]

|| ಅನುವಾಕ ೬ || ಸೋsಕಾಮಯತ | ಬಹುಸ್ಯಾಂ ಪ್ರಜಾಯೇಯೇತಿ | ಸತಪೋsಪ್ಯತ | ಸ ತಪಸ್ತಪ್ತ್ವಾ | ಇದಗ್ ಂ ಸರ್ವಮಸೃಜತ | ಯದಿದಂ ಕಿಂಚ | ತತ್ ಸೃಷ್ಟ್ವಾ | ತದೇನುಪ್ರಾವಿಶತ್ | ತದನುಪ್ರವಿಶ್ಯ | ಸಚ್ಚ ತ್ಯಚ್ಚಾಭವತ್ | ನಿರುಕ್ತಮ್ ಚಾನಿರುಕ್ತಂ ಚ | ನಿಲಯನಮ್ ಚಾನಿಲಯನಮ್ ಚ | ವಿಜ್ಜ್ನಾನಮ್ ಚಾವಿಜ್ನಾನಮ್ ಚ |ಸತ್ಯಂ ಚಾನೃತಂ ಚ ಸತ್ಯಮಭವವತ್ | ಯದಿದಂ ಕಿಂ ಚ | ತತ್ತ್ ಸತ್ಯಮಿತ್ಯಾಚಕ್ಷತೇ | ತದಪ್ಯೇಷ ಶ್ಲೋಕೋ ಭವತಿ ||

ಅರ್ಥ: ಅವನು (ಆತ್ಮನು-ಬ್ರಹ್ಮನು) ನಾನು ಬಹುವಾಗಿ (ಅನೇಕವಾಗಿ) ಹುಟ್ಟುವೆನು. ಹೀಗೆಂದು ಸಂಕಲ್ಪಿಸಿದನು. ಅವನು ತಪಸ್ಸನ್ನು ಮಾಡಿದನು. (ತಪಿಸು ಎಂದರೆ ಬಿಸಿಯಾಗು, ಶಾಖ ಹೊಂದು , ಎಂದೂ ಅರ್ಥ ಮಾಡಬಹುದು - ವೈಜ್ಞಾನಿಕ ವಿಕಾಸವಾದಕ್ಕೆ ಹೊಂದುವುದು )) ಅವನು ತಪಸ್ಸನ್ನು (ಶಾಖಹೊಂದಿ- ತಪಃ ತಪ್ತ್ವಾ- ಶಾಖದಿಂದ ಕುದಿದು -( ಮಹಾ ಸ್ಪೋಟ ವಿಜ್ಞಾನ ವಿಕಾಸವಾದ- ನೋಡಿ) ಮಾಡಿ ಇದೆಲ್ಲವನ್ನೂ ಸೃಷ್ಟಿಸಿದನು. ಅದನ್ನು ಸೃಷ್ಟಿಸಿ, ಅದನ್ನೇ ಪ್ರವೇಶಿಸಿದನು (ಒಳಹೊಕ್ಕನು). ಅದನ್ನು ಪ್ರವೇಶಿಸಿ ಸತ್ತನ್ನೂ (ಮೂರ್ತ ರೂಪವನ್ನೂ -ಕಣ್ಣಿಗೆ ತೋರವುದು), ಮತ್ತು ಅಮೂರ್ತರೂಪವನ್ನೂ (ತ್ಯತ್ ಚ), ಸ್ಪಷ್ಟವಾದ ಪ್ರತ್ಯೇಕ ಲಕ್ಷಣಗಳುಳ್ಳ ಮತ್ತು ಲಕ್ಷಣಗಳಿಲ್ಲದ (ಭಿನ್ನತೆಗಳಿಲ್ಲದ), ಆಶ್ರಯವುಳ್ಳ ಮತ್ತು ಆಶ್ರಯವಿಲ್ಲದ, ಚೇತನವಿರುವ (ವಿಜ್ಞಾನಂಚ), ಚೇತನವಿಲ್ಲದ, ವ್ಯವಹಾರ ವಿಷಯವಾದ ಸತ್ಯ ಮತ್ತು ಇರುವ ಹಾಗೆ ತೋರಿಕೊಳ್ಳುವ (ಯತಾರ್ಥವಲ್ಲದ) ಇವೆಲ್ಲವೂ ಆದನು. ಇನ್ನೂ ಎನೇನಿದೆಯೋ (ಅದೆಲ್ಲವೂ ಆದನು). ಆ ಬ್ರಹ್ಮವು ಸತ್ಯವೆಂದು ಹೇಳುತ್ತಾರೆ. ಈ ವಿಷಯದಲ್ಲಿ ಶ್ಲೋಕವಿರುವುದು.

ಮಂತ್ರ || ಅನುವಾಕ ೧ || (ಗದ್ಯ) [ಬದಲಾಯಿಸಿ]

|| ಅನುವಾಕ ೧ || ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಂಭೂತಃ | ಆಕಾಶಾದ್ವಾಯುಃ | ವಾಯೋರಗ್ನಿಃ | ಆಗ್ನೇರಾಪಃ | ಅದ್ಭ್ಯಃ ಪೃಥೀವೀ | ಪೃಥಿವ್ಯಾ ಓಷಧಯಃ | ಓಷದೀಬ್ಯೋನ್ನಮ್ | ಅನ್ನಾತ್ ಪುರುಷಃ ||

ಅರ್ಥ: ಈ ಆತ್ಮನಿಂದ ಆಕಾಶವು ಉತ್ಪನ್ನವಾಯಿತು . ಆಕಾಶದಿಂದ ವಾಯುವೂ (ಅಧ್ಯಾತ್ಮ-ಪ್ರಾಣ ; ವಿಜ್ಞಾನ-ಅನಿಲ ?), ವಾಯುವಿನಿಂದ ಅಗ್ನಿಯೂ (ವಿಜ್ಞಾನ-ಶಾಖ ಮತ್ತು ವಿದ್ಯತ್ ?), ಅಗ್ನಿಯಿಂದ ನೀರೂ (ದ್ರವ -ಮ್ಯಾಗ್ಮಾ?), ನೀರಿನಿಂದ ಪೃಥ್ವಿಯೂ, ಪಂಚ ಭೂತಗಳು ಪ್ರಥ್ವಿಯಿಂದ ಸಸ್ಯಗಳೂ, ಸಸ್ಯಗಳಿಂದ ಅನ್ನವೂ, ಅನ್ನದಿಂದ ಪುರುಷನೂ (ಪ್ರಾಣಿಗಳು - ವಿಜ್ಞಾನ) (ಉತ್ಪನ್ನವಾದವು).


ಆಧಾರ [ಬದಲಾಯಿಸಿ]

  • ೧.ತೈತ್ತಿರೀಯೋಪನಿಷತ್
  • ೨.ತೈತ್ತಿರೀಯೋಪನಿಷತ್ -ವ್ಯಾ ಖ್ಯಾನ ಸ್ವಾಮಿ ಚಿನ್ಮಯಾನಂದ, ಕನ್ನಡ ಅನುವಾದ,
  • .೩.ಲೇಖನ : *( ಸದಸ್ಯ:Bschandrasgr/ಪರಿಚಯದಿಂದ ನಿರ್ದೇಶಿತ :- ಕಾಪಿ ರೈಟಿನಿಂದ ಮುಕ್ತ)

ವರ್ಗ: ಹಿಂದೂ ಧರ್ಮ | ಪುರಾಣ | ಸೃಷ್ಟಿ ಮತ್ತು ಪುರಾಣ | ಉಪನಿಷತ್