ಸೂರ್ಯಕಾಂತಿ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೂರ್ಯಕಾಂತಿ ಗಿಡ
ಹೂವು
ವಿತ್ತನ
ಗಾಣ ತರಹದ ಎಣ್ಣೆ ತೆಗೆಯುವ ಯಂತ್ರ
ಹಿಂಡಿ

ಸೂರ್ಯಕಾಂತಿ ಎಣ್ಣೆಯನ್ನು ಸೂರ್ಯಕಾಂತಿ ಬೀಜಗಳಿಂದ ತೆಗೆಯುತ್ತಾರೆ. ಸೂರ್ಯಕಾಂತಿ ಬೀಜದಿಂದ ಉತ್ಪನ್ನ ಮಾಡಿದ ಎಣ್ಣೆ ಆಹಾರ ಯೋಗ್ಯವಾದ ಎಣ್ಣೆ. ಅಡುಗೆ ಮಾಡುವುದರಲ್ಲಿ ಉಪಯೋಗಿಸುವುದಕ್ಕೆ ಯೊಗ್ಯವಾದ ತೈಲ. ಸೂರ್ಯಕಾಂತಿ ಗಿಡ ಏಕವಾರ್ಷಿಕ ಗಿಡ. ಈ ಗಿಡವನ್ನು ಬೀಜಕ್ಕಾಗಿ ಬೆಳೆಸುವರು. ಇದು ಸಸ್ಯ ಜಾತಿಯಲ್ಲಿ ಅಸ್ಟರೇಸಿ (sateraceae)ಕುಟುಂಬಕ್ಕೆ ಸೇರಿದ ಸಸ್ಯ. ಈ ಸಸ್ಯದ ವೃಕ್ಷ ಶಾಸ್ತ್ರ ಹೆಸರು ಹೆಲಿಯಂಥಸ್ ಅನ್ನೂಸ್(helianthus annus). ಈ ಗಿಡದ ಹುಟ್ಟುಸ್ಥಾನ ಅಮೆರಿಕ[೧].೫ ಸಾವಿರ ವರ್ಷಕ್ಕಿಂತ ಮುಂಚೆ ಇದನ್ನು ಗೊತ್ತು ಮಾಡಲಾಗಿದೆ. ಕಿ.ಪೂ. 2600 ಕಾಲದಲ್ಲಿ ಮೆಕ್ಸಿಕೋ ದಲ್ಲಿ ಇದನ್ನು ಬೆಳೆಸುತ್ತಿದ್ದರೆಂದು ತಿಳಿದು ಬಂದಿದೆ[೨]. ಸ್ಪಾನಿಷ್ ಪರಿಶೋಧಕರು ಸೂರ್ಯಕಾಂತಿ ಗಿಡವನ್ನು ಯುರೋಪ್ಗೆ ತಂದು, ಅಲ್ಲಿ ಮೊದಲು ಬೆಳೆಸಲಾಗಿ, ಅಲ್ಲಿಂದ ಅಕ್ಕ ಪಕ್ಕ ದ ಪ್ರಾಂತ್ಯಗಳಿಗೆ ವಿಸ್ತರಣೆ ಹೊಂದಿದೆ. [೩]. ಹೀಗೆ ಸೂರ್ಯಾಕಾಂತಿ ಗಿಡದಲ್ಲಿ ಹಲವಾರು ತರದ ಸಂಕರ ತಳಿಗಳಿವೆ. ಇವು ಹೆಚ್ಚಿನ ವಿತ್ತನವನ್ನು ಇಳುವರಿ ನೀಡುತ್ತವೆ. ಹೀಗೆ ಪ್ರಪಂಚದಲ್ಲಿ ಬಹಳ ದೇಶಗಳು ಎಣ್ಣೆಯ ಸಲುವಾಗಿ ಸೂರ್ಯಕಾಂತಿ ಫಯಿರನ್ನು ಸಾಗುವಳಿ ಮಾಡುತ್ತಿವೆ.

ಭಾರತೀಯ ಭಾಷೆಗಳಲ್ಲಿ ಸೂರ್ಯಾಕಾಂತಿ ಗಿಡದ ಸಾಧಾರಣ ಹೆಸರು[೪][೫][ಬದಲಾಯಿಸಿ]

ಪ್ರಪಂಚದಲ್ಲಿ ಅಧಿಕ ಸಾಗುವಳಿ ಮಾಡುವ ದೇಶಗಳು[ಬದಲಾಯಿಸಿ]

ಪ್ರಪಂಚದಲ್ಲಿ ಅನೇಕ ದೇಶಗಳು ಸದ್ಯದಲ್ಲಿ ಸೂರ್ಯಕಾಂತಿಯನ್ನು ಅಧಿಕ ವಿಸ್ತೀರ್ಣದಲ್ಲಿ ಬೆಳೆಸುತ್ತಿದ್ದಾರೆ. ರಷ್ಯಾದೇಶ ಪ್ರಥಮ ಸ್ಥಾನದಲ್ಲಿದೆ. ಇನ್ನೂ ಅರ್ಜೆಂಟಿನಾ,ಬಲ್ಗೆರಿಯಾ, ದಕ್ಷಿಣ ಅಮೆರಿಕ, ಚೈನಾ ಮತ್ತು ಭಾರತ ದೇಶಗಳಲ್ಲಿ ಸೂರ್ಯಕಾಂತಿ ಫಯಿರನ್ನು ಬೆಳೆಸುತ್ತಾರೆ.

ಭಾರತ ದೇಶದಲ್ಲಿ ಅಧಿಕವಾಗಿ ಸಾಗುವಳಿ ಮಾಡುತ್ತಿರುವ ರಾಜ್ಯಗಳು[ಬದಲಾಯಿಸಿ]

ಭಾರತದಲ್ಲಿ ಕರ್ನಾಟಕರಾಜ್ಯದಲ್ಲಿ ಹೆಚ್ಚು ವಿಸ್ತೀರ್ಣದಲ್ಲಿ ವ್ಯಾಪಕವಾಗಿ ಸೂರ್ಯಕಾಂತಿ ಫಯಿರನ್ನು ಬೆಳೆಸುತ್ತಾರೆ.

ಸಾಗುವಳಿ[ಬದಲಾಯಿಸಿ]

ಎಲ್ಲಾ ತರಹದ ನೆಲಗಳಲ್ಲಿ ಇದು ಬೆಳೆಯುತ್ತದೆ. ಆದರೆ ಕಪ್ಪುಮಣ್ಣಿನ ನೆಲಗಳು ಒಳ್ಳೆಯವು. ಬಿತ್ತುವ ಸಮಯದಿಂದ ಅಂಕುರ ಬರುವ ತನಕ ತಂಪು ಹವೆಯಳತೆ ಇರಬೇಕು. ಬೆಳೆಯುವುದು ಮೊದಲಾಗಿನಿಂದ ಹೂವು ಬಿಡುವವರೆಗೆ ಬೆಚ್ಚನೆ ಹವೆಯಳತೆ ಇರಬೇಕು. ಭೂಮಿಯ PH 6.5-8.0 ತನಕ ಇರಬೇಕು. ಫಯಿರ್ ಬೆಳೆಯುವ ಕಾಲ ೯೦-೧೧೦ ದಿನಗಳು. ಒಂದು ಹೆಕ್ಟೇರುಗೆ ಫಸಲು ೧೨೦೦-೧೫೦೦ ಕಿಲೋಗಳು ಬರುತ್ತದೆ. ವಿತ್ತನ ದೀರ್ಘಅಂಡಾಕಾರವಾಗಿ ಮಧ್ಯದಲ್ಲಿ ಗೇಬೆಯಾಗಿ ಇರುತ್ತದೆ, ಎರಡು ಕಡೆ ಅಂಚುಗಳು ಚೂಪಾಗಿರುತ್ತವೆ. ವಿತ್ತನವನ್ನು ಹಕ್ಕಿಗಳ ಆಹಾರವನ್ನಾಗಿಯು ಉಪಯೋಗಿಸುತ್ತಾರೆ. ವಿತ್ತನದಲ್ಲಿ ಎಣ್ಣೆ,ಪ್ರೋಟಿನ್, ನಾರು ಪದಾರ್ಥಗಳು ಸಾಕಷ್ಟು ಇರುತ್ತವೆ.

ವಿತ್ತನದಲ್ಲಿದ್ದ ಸಮ್ಮೇಳನ ಪದಾರ್ಥಗಳು[೪]

ಸಮ್ಮೇಳನ ಪದಾರ್ಥ ವಿದೇಶಿಯ ವಿತ್ತನ ದೇಶಿಯ ವಿತ್ತನ
ತೇವೆ% 3.3-12.8% 5.0-6.0%
ಕಚ್ಚಾ ಪ್ರೋಟಿನ್ 13.5-19.1 20.0-30.0
ಎಣ್ಣೆ 22.2-36.5 30.0-50.0
ಎಣ್ಣೆಯಲ್ಲಿರುವ ಅನ್ ಸಪೋನಿಫಿಯಬುಲ್ ಪದಾರ್ಥ 0.8-1.5
ನಾರು ಪದಾರ್ಥ 23.5-32.3 11.0-22.0
ಬೂದಿ 2.6-4 3.0-6.0
ಸಾರಜನಕ 8.0-20.0

ಎಣ್ಣೆ-ಉತ್ಪಾದನೆ[ಬದಲಾಯಿಸಿ]

ವಿತ್ತನದಿಂದ ಎರಡು ರೀತಿಯಲ್ಲಿ ಎಣ್ಣೆಯನ್ನು ತೆಗೆಯುತ್ತಾರೆ. ಒಂದು ತರಹದಲ್ಲಿ ವಿತ್ತನವನ್ನು ಎಕ್ಸುಪೆಲ್ಲರು ಎಣ್ಣೆ ಯಂತ್ರಗಳಲ್ಲಿ ತೆಗೆಯುತ್ತಾರೆ. ಈ ವಿಧಾನದಲ್ಲಿ ಹಿಂಡಿಯಲ್ಲಿ ೬-೧೦% ವರೆಗೆ ಎಣ್ಣೆ ಉಳಿದಿರುತ್ತದೆ. ಸಾಲ್ವೆಂಟ್ ಪ್ಲಾಂಟ್ ನಲ್ಲಿ ಹೆಕ್ಸೇನನ್ನು ಸಾಲ್ವೆಂಟ್ ಸಹಾಯದಿಂದ, ಹಿಂಡಿಯಲ್ಲಿರುವ ಎಲ್ಲಾ ಎಣ್ಣೆಯನ್ನು ತೆಗೆಯಲಾಗುತ್ತದೆ. ಇನ್ನೊಂದು ತರಹದಲ್ಲಿ ವಿತ್ತನವನ್ನು ಎಕ್ಸುಟ್ರೂಡರು ಎನ್ನುವ ಯಂತ್ರದಲ್ಲಿ ಹಾಕಿ ಪುಡಿಯಾಗಿ ಮಾಡಿ, ಈ ಪುಡಿಯನ್ನು ಸಾಲ್ವೆಂಟ್ ಪ್ಲಾಂಟ್ ಕ್ಕೆ ಕಳುಹಿಸಿ ಎಣ್ಣೆಯನ್ನು ತೆಗೆವರು. ಬೀಜ ಪ್ರಮಾಣ ಕಡಿಮೆ ಇದ್ದರೆ ಬೇಬಿ ಎಕ್ಸುಪೆಲ್ಲರುನಲ್ಲಿ ತೆಗೆವರು. ವಿತ್ತನದ ಮೇಲಿದ್ದ ಹೋಟ್ಟನ್ನು ತೆಗೆದು, ಇಲ್ಲವೆ ನೇರವಾಗಿ ವಿತ್ತನವನ್ನು ಕರ್ಷಿಂಗ್ ಮಾಡುವರು.

ಎಣ್ಣೆಯ ಭೌತಿಕ ಧರ್ಮಗಳು-ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ವಿವರಣೆ[ಬದಲಾಯಿಸಿ]

ಸೂರ್ಯಕಾಂತಿ ಗಿಡಗಳಲ್ಲಿ ಹಲವಾರು ಮಿಶ್ರತಳಿ ಇರುವುದಕ್ಕೆ ಕಾರಣ, ಅವು ಬೆಳೆವ ನೆಲದ ಸ್ವಭಾವ, ಉಪಯೋಗಿಸಿದ ರಸಾಯನಿಕ ಗೊಬ್ಬರ ಕಾರಣವಾಗಿ ಎಲ್ಲಾ ಎಣ್ಣೆಗಳಲ್ಲಿ ಕೊಬ್ಬಿನ ಆಮ್ಲಗಳ ಶೇಕಡ ಒಂದೇ ತರಹ ಇರುವುದಿಲ್ಲ. ಸ್ವಲ್ಪ ವ್ಯತ್ಯಾಸ ಇರುತ್ತದೆ. ಅದರಿಂದ ಅದರ ಸಾಂದ್ರತೆ, ಅಯೋಡಿನ್ ಮೌಲ್ಯಗಳಲ್ಲಿ ವ್ಯತ್ಯಾಸವನ್ನು ಕಂಡು ಹಿಡಿಯ ಬಹುದು. ಕೆಳಗೆ ಮೂರು ತರಹಾ ಎಣ್ಣೆಗಳನ್ನು ಪಟ್ಟಿಯಲ್ಲಿ ತೋರಿಸಲಾಗಿದೆ.

ಸೂರ್ಯಕಾಂತಿ ಎಣ್ಣೆ ಭೌತಿಕ ಧರ್ಮಗಳು [೬][೪]

ಭೌತಿಕ ಧರ್ಮ ಸಾಧಾರಣ ಸೂರ್ಯಕಾಂತಿ ಎಣ್ಣೆ -ಸರಾಸರಿ ಮಧ್ಯಸ್ಥವಾಗಿ ಒಲಿಕ್ ಆಮ್ಲ ಉಳ್ಳ ಎಣ್ಣೆ ಹೆಚ್ಚು ಒಲಿಕ್ ಆಮ್ಲವಿದ್ದ ಎಣ್ಣೆ
ಸಾಂದ್ರತೆ250C/200C 0.910-0.923 0.914 0.909-0.915(250C)
ವಕ್ರಿಭವನ ಸೂಚಕ(ND 40C) 1.461-1.466 1.461-1471(250C) 1.467-1.472-1(250C)
ಸಪೋನಿಫಿಕೆಸನ್ ಸಂಖ್ಯೆ/ಮೌಲ್ಯ 188-194 190-191 182-194
ಅಯೋಡಿನ್ ಮೌಲ್ಯ 118-141 94-122 78-90
ಅನ್ ಸಪೋನಿಫಿಯಬುಲ್ ಪದಾರ್ಥ ≤1.5 ≤1.5 ≤1.5

ಸರಾಸರಿ ಒಲಿಕ್ ಮತ್ತು ಲಿನೊಲಿಕ್ ಆಮ್ಲಗಳಿದ್ದ ಸೂರ್ಯಕಾಂತಿ ಎಣ್ಣೆ[೭]

ಬೆಳೆಸಿದ ಸಂಕರ ತಳಿ, ನೆಲ, ಉಪಯೋಗಿಸಿದ ರಾಸಾಯನಿಕ ಎರುಬುಗಳ ಪ್ರಭಾವ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ನಿಷ್ಫತ್ತಿ ಮೇಲೆ ಪ್ರಭಾವ ತೋರಿಸುತ್ತದೆ. ಭಾರತದಲ್ಲಿ ಸೂರ್ಯಕಾಂತಿ ಎಣ್ಣೆಯಲ್ಲಿ ಒಲಿಕ್ ಆಮ್ಲ ೧೯-೪೪%, ಮತ್ತು ಲಿನೊಲಿಕ್ ಆಮ್ಲ ೪೦-೭೫% ಸಾಮಾನ್ಯವಾಗಿರುತ್ತದೆ. ಆ ತರಹದ ಒಂದು ಎಣ್ಣೆಯಲ್ಲಿನ ಕೊಬ್ಬಿನ ಆಮ್ಲಗಳ ಪಟ್ಟಿ ಯನ್ನು ಕೆಳಗೆ ಕೊಡಲಾಗಿದೆ.

ಕೊಬ್ಬಿನ ಆಮ್ಲ ಶೇಕಡ
ಪಾಮಿಟಿಕ್ ಆಮ್ಲ( C16:0) 6.52±1.75
ಸ್ಟಿಯರಿಕ್ ಆಮ್ಲ(C18:0) 1.98±1.44
ಒಲಿಕ್ ಆಮ್ಲ(C18:1) 45.39±18.77
ಲಿನೊಲೆಕ್ ಆಮ್ಲ(C18:2) 46.02±16.75
ಲಿನೊಲೆನಿಕ್ ಆಮ್ಲ(C18:3) 0.12±0.09

ಎಣ್ಣೆಯಲ್ಲಿ ಬಹುಳ (ಎರಡು)ದ್ವಿಬಂಧವುಳ್ಳ ಲಿನೊಲಿಕ್ ಆಮ್ಲ ೪೦-೭೦% ವರೆಗೆ ಇದ್ದ ಕಾರಣ ಇದು ಒಳ್ಳೆ ಅಡುಗೆ ಎಣ್ಣೆ. ಈ ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳು ೧೦%ಕ್ಕಿಂತ ಹೆಚ್ಚು ಇರುವುದಿಲ್ಲ.

ವಿವಿಧ ತರಹದ ಸಂಕರ ತಳಿ ಸೂರ್ಯಕಾಂತಿ ಎಣ್ಣೆ- ಇರುವ ಕೊಬ್ಬಿನ ಆಮ್ಲಗಳ ನಿಷ್ಫತ್ತಿ[೪]

ಸಂಕರ ತಳಿ ಪಾಮಿಟಿಕ್ ಸ್ಟಿಯರಿಕ್ ಒಲಿಕ್ ಲಿನೊಲಿಕ್
1701 6.9 3.5 18.9 70.4
1703 7.0 3.9 18. 70.5
1710 10.8 8.0 27.2 53.3
KSP-9 9.0 8.1 24.7 57.4
KSP-10 7.6 5.3 24.8 61.5
camp-7 8.3 3.2 19.5 68.8
KSR-11 6.6 4.6 20.2 68.1
EC 68415 6.2 5.0 30.8 58.0
ಸರಾಸರಿ 5.9 5.8 44.0 44.3

ಎಣ್ಣೆಯ ಉಪಯೋಗಗಳು[ಬದಲಾಯಿಸಿ]

ಅಡುಗೆ ಎಣ್ಣೆಯಾಗಿ ಉಪಯೋಗಿಸುತ್ತಾರೆ. ಸೌಂದರ್ಯ ದ್ರವ್ಯಗಳು, ಲೇಪನಗಳು ಮತ್ತು ಚರ್ಮ ರಕ್ಷಣಾ ದ್ರವ್ಯ ಲೇಪನಗಳಲ್ಲಿ ಬಳಸುತ್ತಾರೆ.

ಇವುಗಳನ್ನೂ ನೋಡಿ[ಬದಲಾಯಿಸಿ]

ಉಲ್ಲೇಖನ[ಬದಲಾಯಿಸಿ]

  1. Blackman et al. (2011) [೧]. PNAS.
  2. Lentz et al. (2008) [http:// www. pnas. org/ content/ 105/17/ 6232. full.pdf. PNAS.]
  3. "ಆರ್ಕೈವ್ ನಕಲು". Archived from the original on 2015-03-15. Retrieved 2013-10-14.
  4. ೪.೦ ೪.೧ ೪.೨ ೪.೩ SEA HandBook-2009,by The Solvent Extractors' Association of India
  5. http://www.flowersofindia.net/catalog/slides/Sunflower.html
  6. http://www.sunflowernsa.com/uploads/resources/51/warner_.pdf/ KATHLEEN WARNER1 , BRADY VICK2 , LARRY KLEINGARTNER3 , RUTH ISAAK3 , AND KATHI DOROFF4
  7. Studies on the Fatty Acid Composition of Edible Oil K. Chowdhury, L. A. Banu, S. Khan and A. Latif IFST, BCSIR, Dhaka-1205, Bangladesh