ಸುಲಭ್ ಇಂಟರ್ನ್ಯಾಶನಲ್
ವಿಕಿಪೀಡಿಯ ಇಂದ
ಸುಲಭ್ ಇಂಟರ್ನ್ಯಾಶನಲ್ ಎಂಬುದು 'ಸುಲಭ್ ಇಂಟರ್ನ್ಯಾಶನಲ್ ಸಮಾಜ ಸೇವಾ ಸಂಸ್ಥೆ' (SISSO)ಯ ಸಂಕ್ಷಿಪ್ತ ರೂಪವಾಗಿದೆ. ೧೯೭೦ರಲ್ಲಿ ಡಾ.ಬಿಂದೇಶ್ವರ್ ಪಾಟಕ್ ಎಂಬುವವರಿಂದ ಸ್ಥಾಪಿತಗೊಂಡ ಈ ಸಂಸ್ಥೆಯ ಮುಖ್ಯ ಕಚೇರಿ ದೆಹಲಿಯಲ್ಲಿದೆ. ಆರೋಗ್ಯವಂತ ಸಮಾಜ ನಿರ್ಮಾಣ ಮತ್ತು ಪರಿಸರ ನೈರ್ಮಲ್ಯ ನಿವಾರಣೆಗಾಗಿ ಹುಟ್ಟಿಕೊಂಡ ಸುಲಭ್ ಇಂಟರ್ ನ್ಯಾಶನಲ್ ಭಾರತದ ಉದ್ದಗಲಕ್ಕೂ ಶೌಚಾಲಯಗಳನ್ನು ನಡೆಸುತ್ತಿದ್ದು ತನ್ಮೂಲಕ ಸಹಸ್ರಾರು ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ.ಇದಲ್ಲದೇ ಸುಲಭ್ ಇಂಟರ್ ನ್ಯಾಶನಲ್ ಸಮಾಜಮುಖಿ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಪ್ರತಿವರ್ಷ ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದೆ.
ವಿಶೇಷತೆ[ಬದಲಾಯಿಸಿ]
ಸುಲಭ್ ಇಂಟರ್ ನ್ಯಾಶನಲ್ ಸಂಸ್ಥೆಯು ದೆಹಲಿಯಲ್ಲಿ ಶೌಚಾಲಯದ ಪರಿಕರಣಗಳ ಕುರಿತಂತೆ ಮ್ಯೂಸಿಯಂ ನಡೆಸುತ್ತಲಿದೆ.