ಸುಮಧ್ವ ವಿಜಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ನಾರಾಯಣ ಪಂಡಿತಾಚಾರ್ಯರಿಂದ ಬರೆಯಲ್ಪಟ್ಟ ಶ್ರೀ ಮಧ್ವಾಚಾರ್ಯಜೀವನ ಕಥೆಯೇ ಸುಮಧ್ವ ವಿಜಯ. ಕಳೆದ ಏಳು ಶತಮಾನಗಳಿಂದ ಮಾಧ್ವರಿಗೆಲ್ಲ ಪವಿತ್ರ ಗ್ರಂಥವೆನಿಸಿದ್ದು ಅನೇಕರು ಈ ಗ್ರಂಥವನ್ನು ಆಳವಾಗಿ ಅಭ್ಯಸಿಸುತ್ತಾರೆ. ಶ್ರೀ ಮದಾಚಾರ್ಯರ ಕೃತಿಗಳನ್ನು ಅಧ್ಯಯನ ಮಾಡುವವರು ಮೊದಲು ಇದನ್ನು ಭಕ್ತಿಯಿಂದ ಅಧ್ಯಯನ ಮಾಡಬೇಕು ಎಂಬ ಪ್ರತೀತಿ ಇದೆ.


ಈ ಕೃತಿಯು ಒಟ್ಟು ೧೦೦೮ ಶ್ಲೋಕಗಳನ್ನು ಒಳಗೊಂಡಿದ್ದು ಅವನ್ನು ೧೬ ಸರ್ಗಗಳಲ್ಲಿ ವಿಭಾಗಿಸಲಾಗಿದೆ. ಇದೊಂದು ಅತ್ಯುತ್ತಮ ಕಾವ್ಯವಾಗಿದ್ದು ಇದನ್ನು ಪಠಿಸಿದವರಿಗೆ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬುತ್ತಾರೆ. ನಾರಾಯಣ ಪಂಡಿತಾಚಾರ್ಯರು ಹೇಳುವಂತೆ ’ಮನೋವಿಶುದ್ಧೈ ಚರಿತಾನುವಾದ:’, ಅಂದರೆ ನಮ್ಮ ಮನಃಶುದ್ಧಿಗಾಗಿ ದೊಡ್ಡವರ ಚರಿತ್ರೆಯನ್ನು ಓದಬೇಕು. ಶ್ರೀ ಮಧ್ವಾಚಾರ್ಯರು ಎಲ್ಲ ಜೀವರಲ್ಲಿ ಉತ್ತಮರಾದ ಶ್ರೀ ವಾಯುದೇವರ ಅವತಾರವಾಗಿದ್ದರಿಂದ ಅವರ ಚರಿತ್ರೆಯ ಅಧ್ಯಯನ ಎಲ್ಲ ರೀತಿಯಿಂದ ಸೂಕ್ತವಾಗಿದೆ ಎಂದು ನಂಬುತ್ತಾರೆ. ಅಲ್ಲದೇ, ನಾರಾಯಣ ಪಂಡಿತಾಚಾರ್ಯರು ಮಧ್ವಾಚಾರ್ಯರ ಕಾಲದಲ್ಲಿ ಇದ್ದು ಅವರ ಮಹಿಮೆಗಳನ್ನು ಕಣ್ಣಾರೆ ಕಂಡಿದ್ದನ್ನು ವಿವರಿಸಿದ್ದರಿಂದ ಇದಕ್ಕೆ ವಿಶೇಷ ಮಹತ್ವವಿದೆ.


ಶ್ರೀ ನಾರಾಯಣ ಪಂಡಿತಾಚಾರ್ಯರು ಸುಮಧ್ವ ವಿಜಯದ ಸಂಕ್ಷಿಪ್ತ ರೂಪವನ್ನೂ ಬರೆದಿದ್ದಾರೆ. ಇದಕ್ಕೆ ಅಣು ಮಧ್ವ ವಿಜಯ ಎಂದು ಹೆಸರು. ೧೬ ಅಧ್ಯಾಯಗಳಿಗೆ ತಲಾ ೨ ಶ್ಲೋಕಗಳನ್ನು ಹೊಂದಿರುವ ಇದರಲ್ಲಿ ಒಟ್ಟು ೩೨ ಶ್ಲೋಕಗಳಿವೆ.