ಸುಮಂತ್ ಮೂಲ್ಗಾಂವ್ ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Sumant moolgaokar.jpg
'ಟೆಲ್ಕೊ ಕಂಪೆನಿಯ ಮೂಲ ಶಿಲ್ಪಿ,'ಸುಮಂತ್ ಮೂಲ್ಗಾಂವ್ ಕರ್'

(೧೯೭೨-೧೯೮೮)

ಟಾಟಾ ಮೋಟರ್ ಕಂಪೆನಿಯ 'ಮೂಲ ಶಿಲ್ಪಿ'[ಬದಲಾಯಿಸಿ]

'ಸುಮಂತ್ ಮೂಲ್ಗಾಂವ್ ಕರ್' ರವರನ್ನು ಟಾಟಾ ಮೋಟರ್ ಕಂಪನಿಯ ಮೂಲ ಶಿಲ್ಪಿಯೆಂದೇ ಕರೆಯಲಾಗುತ್ತದೆ. ಈ ಉಪಾಧಿಯನ್ನು ಅವರಿಗೆ ಕೊಟ್ಟವರು ಬೇರೆಯಾರೂ ಅಲ್ಲ-ಸ್ವಯಂ 'ಜೆ.ಆರ್.ಡಿ.ರವರೇ'. ೧೯೪೫ ರಲ್ಲಿ 'ಟೆಲ್ಕೋ' ಎಂಬ ಹೆಸರಿನಿಂದ ಸ್ಥಾಪಿಸಲ್ಪಟ್ಟ ಕಾರ್ಖಾನೆ ಈಗ ಬೃಹತ್ ಸ್ವಯಂಚಾಲಿತ ಯಂತ್ರಗಳ ತಯಾರಿಕೆಯ ಕಣಜವಾಗಿ ಬೆಳೆದು ನಿಂತಿದೆ. ೪೦ ವರ್ಷಗಳಕಾಲ ಅದನ್ನು ಅವರು ಕಟ್ಟಿ ಬೆಳೆಸಿದರು. ವಿಶ್ವದ ಮಾರುಕಟ್ಟೆಗಳಲ್ಲಿ ಟಾಟಾ ವಾಹನಗಳನ್ನು ಖ್ಯಾತಿಗೊಳಿಸಿ ಅವುಗಳ ಗುಣಮಟ್ಟವನ್ನು ವಿಶ್ವಸ್ತರದಲ್ಲಿ ಸ್ಥಾಪಿಸಿದ ಹೆಗ್ಗಳಿಕೆಗೆ ಪಾತ್ರರು. ಟೆಲ್ಕೋ ಕಂಪೆನಿಯ ಸ್ಥಾಪನೆ ಟಾಟಾ ಸಾಮ್ರಾಜ್ಯದ ಮೈಲಿಗಲ್ಲುಗಳನ್ನು ಸಧೃಢಪಡಿಸುವಲ್ಲಿ ಸಹಕಾರಿಯಾಯಿತು. ಜೆ.ಆರ್.ಡಿ ಟಾಟಾರವರ ಅತ್ಯಂತ ಮೆಚ್ಚುಗೆಯಾದ, ಹಾಗೂ ಅವರಿಗೆ ಗೌರವ, ಆತ್ಮಸಂತೋಷ ಮತ್ತು ಅತ್ಮಸ್ಥೈರ್ಯ ತಂದ ಕಂಪೆನಿಗಳಲ್ಲಿ 'ಟೆಲ್ಕೊ' ಒಂದು. ಜೆ.ಆರ್.ಡಿಯವರ ಕಾರ್ಯಕಾಲಾವಧಿಯಲ್ಲಿ ಅವರು ಪ್ರಾರಂಭಿಸಿದ ಅತ್ಯಂತ ಸಮರ್ಪಕವಾದ, ಅತ್ಯಂತ ದೂರದೃಷ್ಟಿಯಿಂದ ಸಂಯೋಜಿಸಿದ ಬೃಹತ್ ಕಾರ್ಯವೆಂದರೆ, ಟೆಲ್ಕೋ ಕಂಪೆನುಯನ್ನು ಸ್ಥಾಪನೆ ಮಾಡಿದ್ದು. ಸುಮಂತ್ ಮೂಲ್ಗಾವ್ ಕರ್ ರವರ ನಿರಂತರ ಶ್ರಮ, ಸಾಧನಾ ಹುಮ್ಮಸ್ಸು , ಸಹೋದ್ಯೋಗಿಗಳಲ್ಲಿ ಹೊಂದಿಕೊಂಡು ಅವರಿಂದ ಅಸಮಾನ್ಯಕಾರ್ಯಗಳನ್ನು ಹೊರತರುವ ಅದ್ಭುತ ತಂತ್ರಗಳನ್ನೆಲ್ಲಾ ಮೇಳೈಸಿರುವ ಒಬ್ಬ ಅಸಮಾನ್ಯ ವ್ಯಕ್ತಿಯನ್ನು ಬಹಳವಾಗಿ ಮೆಚ್ಚಿಕೊಂಡರು. ಜೆ.ಆರ್.ಡಿ ಅಂತಹ ವ್ಯಕ್ತಿಗಾಗಿ ಸುದೀರ್ಘ ಹುಡುಕಾಟದಲ್ಲಿದ್ದರು. ಅಂತಹ ಬೃಹತ್ ಸಂಸ್ಥೆಯನ್ನು ಬೆಳೆಸಿ ಪೋಷಿಸುವ ಕಾರ್ಯಮಾಡಲು ಒಬ್ಬ ವ್ಯಕ್ತಿಗೆ ಇರಬೇಕಾದ ಮುಖ್ಯ ಗುಣಗಳು, ಕೆಚ್ಚು ಸಾಹಸ, ಧಾರ್ಯ ಮತ್ತು ಆತ್ಮವಿಶ್ವಾಸ,'ಸುಮಂತ್ ಮೂಲ್ಗಾಂವ್ ಕರ್' ರವರಲ್ಲಿ ಹೇರಳವಾಗಿತ್ತು. ಮೇಲಾಗಿ ನಮ್ಮ ದೇಶದ ದೇಸಿಪ್ರತಿಭೆಗಳನ್ನು ಮತ್ತು ತಂತ್ರಜ್ಞಾನಗಳನ್ನು ಸಮಯೋಚಿತವಾಗಿ ತೂಗಿಸಿಕೊಂಡು ಮುನ್ನಡೆಯುವ ಪ್ರಚಂಡ ಸ್ಥರ್ಯ, 'ಸುಮಂತ್ ಮೂಲ್ಗಾಂವ್ ಕರ್', ರವರಲ್ಲಿತ್ತು. ಕಂಪನಿಯ ಬೆಳವಣಿಗಳಜೊತೆಗೆ ದೇಶದ ಅಗತ್ಯಗಳನ್ನೂ ಅವರು ಮನಗಂಡಿದ್ದರು. ಭಾರತದ ಔದ್ಯೋಗಿಕ ಪ್ರಗತಿಯಿಂದಲೇ ದೇಶದ ಸಂಪತ್ತನ್ನು ಹೆಚ್ಚಿಸಲುಸಾದ್ಯವೆಂದು ಅವರು ಮನಗಂಡಿದ್ದರು. ಅದಕ್ಕಾಗಿ, ತಕ್ಕ ಜನರನ್ನು ತಯಾರುಮಾಡುವುದು, ಮುಖ್ಯವೆಂದು ಧೃಢವಿಶ್ವಾಸ ಅವರದು. ದೇಶದ ಕಾರ್ಖಾನೆಗಳು ತಮ್ಮ ಕಾಲಿನಮೇಲೆ ತಾವು ನಿಲ್ಲುವಷ್ಟು ಸಮರ್ಥವಾಗಿರಬೇಕು.

Engineering Research Centre, The Machine Tool and The Press Tool Division[ಬದಲಾಯಿಸಿ]

ವಿದೇಶಿ ಜೊತೆ ಯಾಗಿ ಕೆಲಸಮಾಡುವುದು ಅನಿವಾರ್ಯ. ನಮ್ಮಲ್ಲಿ ಅಂತಹ ಟೆಕ್ನೊಲೋಲಜಿ, ಬೆಳೆಸಿ ಅದು ತನ್ನ ಗಟ್ಟಿಯಾದ ಬೇರುಬಿಡುವವರೆಗೆ, ನಾವು ಅತ್ಯಂತ ಜಾಗರೂಕತೆಯಿಂದ ಕೆಲಸಮಾಡಬೇಕು. 'ಸುಮಂತ್ ಮೂಲ್ಗಾಂವ್ ಕರ್,' ನಮ್ಮ ಕೆಲಸಮಾಡಿಕೊಳ್ಳಲು ನಮ್ಮದೇ ಅದ ವರ್ಕ್ ಶಾಪ್ (ಕಾರ್ಯಾಗಾರ), ವನ್ನು ನಿರ್ಮಿಸುವ ಕೆಲಸ ಅವರು ಕೈಗೊಂಡರು. ಇದು ಅತ್ಯಂತ ಶ್ಲಾಘನೀಯವಾದ ಕೆಲಸ. ಪ್ರತಿ ಕೆಲಸಗಾರನನ್ನೂ ಅವನ ಕೆಲಸದ ವೈಖರಿಯನ್ನು ಉತ್ತಮಪಡಿಸಲು ಹೊಸ ತಿಳುವಳಿಕೆಯನ್ನು ಕೊಡುವ ಮಟ್ಟದಲ್ಲಿ ತಯಾರು ಮಾಡಿದರು. ಕಾರ್ಯ ಕುಶಲತೆ. Engineering Research Centre, The Machine Tool and The Press Tool Division, ಆವರ ಕೂಸು. ಕಂಪೆನಿಯನ್ನು ನಡೆಸಿಕೊಂಡುಹೋಗುವಾಗ ಅನೇಕ ಕಷ್ಟಗಳನ್ನು ಅವರು ಅನುಭವಿಸಬೇಕಾಯಿತು. "Expect the best, ask for it, pursue it relentlessly and you will get it", ಇದು 'ಸುಮಂತ್ ಮೂಲ್ಗಾಂವ್ ಕರ್,' ಪದೇ ಪದೇ ಹೇಳುತ್ತಿದ್ದಮಾತುಗಳು. ಹೊಸದೊಂದು ವ್ಯವಸ್ಥೆಯನ್ನು ಸ್ಥಾಪಿಸಿ ಅದನ್ನು ಬೆಳೆಸುವುದು ನಿಜವಾಗಿಯೂ ಕಷ್ಟಸಾಧ್ಯದ ಮಾತು. ಸಹಜನರ ಜೊತೆಯಲ್ಲಿ, ತಾವೂ ದುಡಿದು, ಕೆಲವು ಮಟ್ಟದವರೆಗೆ ತಾವೇನಿರ್ಧರಿಸುವ ಸ್ವಾತಂತ್ರ್ಯ , ಸಹಕಾರಗಳನ್ನು ಮತ್ತು ಅಧಿಕಾರಗಳನ್ನೂ ಅವರಿಗೆಕೊಡುವುದರಿಂದ ಹೆಚ್ಚಿನ ಕೆಲಸವನ್ನು ಅಪೇಕ್ಷಿಸಬಹುದು. 'Tata Motors culture,'ಕೆಲಸದಲ್ಲಿ ತೊಡಗಿರುವ ಜನರನ್ನು ಹುರಿದುಂಬಿಸಿದಾಗ, ಅವರಲ್ಲಿನ ಸುಪ್ತಶಕ್ತಿಸಾಮರ್ಥ್ಯ ಗಳನ್ನು ಹೊರತೆಗೆಯಬಹುದು.

ಕಾರ್ಖಾನೆಯ ಪರ್ಯಾವರಣವನ್ನು ಕಾಪಾಡುವ ಆದ್ಯತೆಯನ್ನು ಸಾಧಿಸಿದರು[ಬದಲಾಯಿಸಿ]

ಪಲ್ಯೂಶನ್ ನಿವಾರಿಸಲು, ಒಳ್ಳೆಯ ವೃಕ್ಷಗಳನ್ನು ನೆಟ್ಟು, ಕಾರ್ಖಾನೆಯ ಸುತ್ತಮುತ್ತಲಪರ್ಯಾವರಣವನ್ನು ಕಾಪಾಡುವ ಕ್ರಿಯೆಗೆ, ಆದ್ಯತೆ ಕೊಟ್ಟರು. ಕೈಗೆ ತೆಗೆದುಕೊಂಡ ಕೆಲಸದಲ್ಲಿ ಪ್ರೀತಿ, ಅದರಲ್ಲಿ ದಕ್ಷತೆ, ಸಾಧಿಸುವ ಛಲ, ಕೆಲಸದಲ್ಲಿ ಆಸಕ್ತಿ ಮತ್ತು ಪ್ರೀತಿ, ಇವು 'ಸುಮಂತ್ ಮೂಲ್ಗಾಂವ್ ಕರ್' ರಲ್ಲಿ ಬೇರೂರಿದ್ದ ಶ್ರೇಷ್ಟ ಗುಣಗಳು. ಅವರು ಒಳ್ಳೆಯ ಪ್ರಕೃತಿಪ್ರಿಯರು. ಟೆಲ್ಕೋ ಕಂಪೆನಿಯ ಪರಿಸರದಲ್ಲಿ ಮೊದಲು ಅವರು ಮರಗಳನ್ನು ನೆಡುವ ಕೆಲಸವನ್ನು ಕೈಗೆ ತೆಗೆದುಕೊಂಡರು. ಆಲ್ಲಿನ ಪಲ್ಯೂಶನ್ ನಿವಾರಿಸಲು. ಅಲ್ಲಿದ್ದ ಬಂಜರುಭೂಮಿಯನ್ನು ಒಡೆದು ಸ್ವಚ್ಛಗೊಳಿಸಿ, ಅಲ್ಲಿ ಅನೇಕ ಮರಗಳನ್ನು ನೆಟ್ಟರು. ಈಗ ಮರಗಳಿಗೆ ನೀರಿನ ಅಗತ್ಯವನ್ನು ಮನಗಂಡರು. ಅಲ್ಲಿನ ಹತ್ತಿರದ ಪಶ್ಚಿಮಮಘಟ್ಟಗಳ ಜಲಧಾರೆಗಳಿಗೆ ಅಣೆಕಟ್ಟು ಕಟ್ಟಿದರು. ನೀರಿನಿಂದ ಆ ಸ್ಥಳ ಅತ್ಯಂತ ಸುಂದರವಾದ ಉದ್ಯಾನಗಳನ್ನು ನಿರ್ಮಿಸಲು ಸಹಾಯವಾಯಿತು. ಇಂದು ಇಲ್ಲಿ ಒಂದು ಸುಂದರ ಕೊಳವಿದೆ. ವಿಶ್ವದಾದ್ಯಂತ ಹಾರಾಡುತ್ತಾ ವಲಸೆಬರುವ, ಹೊಸ ಹೊಸ ಪಕ್ಷಿಗಳಿಗೆ ಮನೆಯಾಗಿದೆ. ಟಾಟಾ ಮೋಟಾರ್ಸ್, ಒಂದು ಭವ್ಯ ಮಾನವನಿರ್ಮಿತ ವಿಹಾರಸ್ಥಳವಾಗಿ ಕಾಣಿಸುತ್ತದೆ.

ಟಾಟಾ ಮೋಟಾರ್ಸ್ ಲಿಮಿಟೆಡ್ , ಟೆಲ್ಕೊ, ಭಾರತದ ಅತ್ಯಂತ ಭಾರಿ ಪ್ಯಾಸೆಂಜರ್ ಕಾರ್ ತಯಾರಿಕೆಯ ಕಂಪೆನಿ[ಬದಲಾಯಿಸಿ]

ಇದು ವಿಶ್ವದ ೫ ನೆಯ ಅತಿ ದೊಡ್ಡ ವಾಣಿಜ್ಯ ವಾಹನ ತಯಾರಿಕೆಯ, ಟಾಟಾ ಗ್ರೂಪ್ ನ ಒಂದು ಭಾಗ. ಆದರ ಮೇನ್ ಆಫೀಸ್ ಮುಂಬೈನಲ್ಲಿದೆ.

ದೇಶದಲ್ಲಿ ಮನೆಮಾತಾಗಿರುವ, ಟಾಟಾ ಮೋಟಾರ್ಸ್, ಸಂಸ್ಥೆ ಅನೇಕ ವಿಕ್ರಮಗಳನ್ನು ಸಾಧಿಸಿದೆ[ಬದಲಾಯಿಸಿ]

  • ೧೯೪೫ ರಲ್ಲಿ ಸ್ಥಾಪನೆಯಾಯಿತು. ಟಾಟ ಮೋಟರ್ ನ ಯಶಸ್ಸು, ನಮ್ಮ ದೇಶಕ್ಕೆ ಬೇಕಾದ ಕಾರುಗಳನ್ನು ನಮ್ಮದೇಶದಲ್ಲೇ ರಚಿಸಿ ತಯಾರಿಸಿದ್ದು. ಮೊದಲು ಭಾರತೀಯ ತಂತ್ರಜ್ಞರನ್ನು ಟ್ರೈನ್ ಮಾಡಲು ಪ್ರಾರಂಭ.
  • ೩೨೦ ಬಿಲಿಯನ್ ರೂಗಳು. ೨೦೦೧-೨೦೦೬ ರಲ್ಲಿ ೧೦ ಪ್ರಮುಖ ಐಶ್ವರ್ಯವಂತ ಕಂಗಳ ಪಟ್ಟಿಯಲ್ಲಿ.
  • ಮಾರ್ಚ್ ೨೦೦೫, ರಲ್ಲಿ, ಟಾಟಾ ಸಮುದಾಯ ಕಂಪೆನಿಗಳು, ಭಾರತದ ಅತಿದೊಡ್ಡ ಕಾಂಗ್ಲೊಮರೇಟ್ ಕಂಪೆನಿ ಗಳಾಗಿ ಬೆಳೆದಿದ್ದು, ದೇಶದ ಖಜಾನೆಗೆ ಅತಿಹೆಚ್ಚು ರೆವಿನ್ಯು ಸಂದಾಯಮಾಡಿವೆ.
  • ೨೦೦೫-೦೬ ರಲ್ಲಿ ರೂ. ೯೬೭,೨೨೯ ಮಿಲಿಯನ್ (US $ ೨೧.೯ ಬಿಲಿಯನ್).
  • ಟಾಟಾ ಗ್ರೂಪ್, ನಲ್ಲಿ ಒಟ್ಟು ೯೬ ಕಂಪನಿಗಳಿವೆ. ಅದರಲ್ಲಿ, ೭ ಬಿಸಿನೆಸ್ ಸೆಕ್ಟರ್ಸ್ ನಲ್ಲಿ, ೬೫.೮% ಓನರ್ಶಿಪ್, ನ್ನು ಟಾಟಾ ಸಮುದಾಯ ಚಾರಿಟಿ ಟ್ರಸ್ಟ್, ಕೂಡ ಇದೆ.