ಸುನ್ನಿ ಇಸ್ಲಾಂ
ವಿಕಿಪೀಡಿಯ ಇಂದ
ಸುನ್ನಿ ಇಸ್ಲಾಂ ಇಸ್ಲಾಂ ಧರ್ಮದ ಅತಿ ಹಳೆಯ ಹಾಗು ದೊಡ್ಡ ಪಂಗಡ. ಸುನ್ನಿ ಪದ "ಸುನ್ನ", ಅಂದರೆ ಮೊಹಮ್ಮದ್ ಅವರ ನುಡಿ ಮತ್ತು ನಡತೆಗಳು ಎಂಬುದರಿಂದ ಬಂದಿದೆ. ಸುನ್ನಿಗಳ ಪ್ರಕಾರ ಇಸ್ಲಾಂ ಧರ್ಮದ ಮೊದಲ ನಾಲ್ಕು ಖಲೀಫಾಗಳಾದ ಹಜರತ ಅಬೂ ಬಕರ, ಹಜರತ ಉಮರ, ಹಜರತ ಉಸ್ಮಾನ ಗನಿ ಹಾಗೂ ಹಜರತ ಅಲಿ ಯವರನ್ನು ಅನುಸರಿಸುವ ಒಂದು ಬೃಹತ ಸಮುದಾಯ. ನಂತರದ ಶತಕಗಳಲ್ಲಿ ಶಿಯಾ ಇಸ್ಲಾಂ ಎಂಬ ಹೊಸ ಪಂಗಡ ಹುಟ್ಟಿತು ಇದು ಕೇವಲ ಹಜರತ ಅಲಿ ಹಾಗೂ ಅವರ ಮಕ್ಕಳನ್ನು ಅನುಸಿರಿಸಿತು. ೧೮ನೇ ಶತಮಾನದಲ್ಲಿ ವಹಾಬಿ ಅಥವಾ ಸಲಫಿ ಎಂಬ ಪಂಗಡ ಹುಟ್ಟಿಕೊಂಡಿತು. ಇದರ ಅಸ್ತಿತ್ವ ಈಗ ಬಹಳಷ್ಟು ಉಪ ಪಂಗಡಗಳಲ್ಲಿ ಹಂಚಿಹೋಗಿದೆ.