ಸಿಯೆರ್ರಾ ಲಿಯೋನ್
ವಿಕಿಪೀಡಿಯ ಇಂದ
(ಸಿಯರ್ರ ಲಿಯೋನ್ ಇಂದ ಪುನರ್ನಿರ್ದೇಶಿತ)
| ಧ್ಯೇಯ: "Unity - Freedom - Justice" | |
| ರಾಷ್ಟ್ರಗೀತೆ: High We Exalt Thee, Realm of the Free | |
| ರಾಜಧಾನಿ | ಫ್ರೀಟೌನ್ |
| ಅತ್ಯಂತ ದೊಡ್ಡ ನಗರ | ರಾಜಧಾನಿ |
| ಅಧಿಕೃತ ಭಾಷೆ(ಗಳು) | ಆಂಗ್ಲ |
| ಸರಕಾರ | ಸಾಂವಿಧಾನಿಕ ಗಣರಾಜ್ಯ |
| - ರಾಷ್ಟ್ರಪತಿ | ಅರ್ನೆಸ್ಟ್ ಬಾಯ್ ಕೊರೊಮ |
| ಸ್ವಾತಂತ್ರ್ಯ | |
| - ಯು.ಕೆ. ಇಂದ | ಏಪ್ರಿಲ್ ೨೭, ೧೯೬೧ |
| ವಿಸ್ತೀರ್ಣ | |
| - ಒಟ್ಟು ವಿಸ್ತೀರ್ಣ | 71,740 ಚದರ ಕಿಮಿ ; (119th) |
| 27,699 ಚದರ ಮೈಲಿ | |
| - ನೀರು (%) | 1.0 |
| ಜನಸಂಖ್ಯೆ | |
| - ಜುಲೈ ೨೦೦೭ರ ಅಂದಾಜು | 5,866,000 (103rd1) |
| - ಸಾಂದ್ರತೆ | 83 /ಚದರ ಕಿಮಿ ; (114th1) 199 /ಚದರ ಮೈಲಿ |
| ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
| - ಒಟ್ಟು | $4.921 billion (151st) |
| - ತಲಾ | $903 (172nd) |
| ಮಾನವ ಅಭಿವೃದ್ಧಿ ಸೂಚಿಕ (೨೦೦೪) |
|
| ಕರೆನ್ಸಿ | ಲಿಯೋನ್ (SLL) |
| ಕಾಲಮಾನ | GMT (UTC+0) |
| ಅಂತರ್ಜಾಲ TLD | .sl |
| ದೂರವಾಣಿ ಕೋಡ್ | +232 |
| 1 Rank based on 2007 figures. | |
ಸಿಯೆರ್ರಾ ಲಿಯೋನ್, ಅಧಿಕೃತವಾಗಿ ಸಿಯೆರ್ರಾ ಲಿಯೋನ್ ಗಣರಾಜ್ಯ, ಪಶ್ಚಿಮ ಆಫ್ರಿಕಾದಲ್ಲಿನ ಒಂದು ಸಾಂವಿಧಾನಿಕ ಗಣರಾಜ್ಯ. ಇದರ ಉತ್ತರಕ್ಕೆ ಗಿನಿ, ದಕ್ಷಿಣಕ್ಕೆ ಲೈಬೀರಿಯ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ. ೧೮ನೇ ಶತಮಾನದಲ್ಲಿ ಗುಲಾಮಗಿರಿಯ ವಹಿವಾಟಿಗೆ ಈ ಪ್ರದೇಶ ಪ್ರಮುಖವಾಗಿತ್ತು. ಇದರ ರಾಜಧಾನಿ ಫ್ರೀಟೌನ್ ಅನ್ನು ಅಮೇರಿಕದ ಕ್ರಾಂತಿಕಾರಿ ಯುದ್ಧದಲ್ಲಿ ಯುಕೆ ಪರವಾಗಿ ಹೋರಾಡಿ ಬಿಡುಗಡೆಗೊಂಡ ಗುಲಾಮರು ೧೭೮೭ರಲ್ಲಿ ಸ್ಥಾಪಿಸಿದರು. ಮುಂದೆ ೧೮೦೮ರಲ್ಲಿ ಇದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿತು. ೧೯೬೧ರಲ್ಲಿ ಸ್ವಾತಂತ್ರ್ಯ ಪಡೆದ ಈ ದೇಶ, ೧೯೯೧ರಿಂದ ೨೦೦೨ರವರೆಗೆ ತೀವ್ರ ಅಂತಃಕಲಹ ಅನುಭವಿಸಿತು. ಈಗ ಶಾಂತಿಯುತವಾಗಿರುವ ಈ ದೇಶ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುತ್ತಿದೆ.
ಫ್ರೀಟೌನ್ ಸಿಯೆರ್ರಾ ಲಿಯೋನ್ನ ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವಾಣಿಜ್ಯ ಕೇಂದ್ರ. ಎರಡನೇ ದೊಡ್ಡ ನಗರ ಬೋ. ಇತರೆ ಪ್ರಮುಖ ನಗರಗಳೆಂದರೆ ಕೆನೆಮಾ, ಮಕೇನಿ ಮತ್ತು ಕೊಯ್ಡು ಟೌನ್.