ಸಿದ್ಧಾಪುರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಿದ್ಧಾಪುರ
India-locator-map-blank.svg
Red pog.svg
ಸಿದ್ಧಾಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಉತ್ತರ ಕನ್ನಡಾ
ನಿರ್ದೇಶಾಂಕಗಳು 14.347° N 74.894° E
ವಿಸ್ತಾರ
 - ಎತ್ತರ
 km²
 - 564 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2011)
 - ಸಾಂದ್ರತೆ
40000
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 581 355
 - +08389
 - 
ಸಿದ್ಧಾಪುರ ಭಾಷೆ
Language Percent
ಕನ್ನಡ
  
75%
ಕೊಂಕಣಿ
  
10%
ಮರಾಠಿ
  
05%
ಉರ್ದು
  
05%
ಇತರೆ
  
05%



ಸಿದ್ದಾಪುರ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ಪಂಚಾಯತಿ ಪಟ್ಟಣ.ಇದು ಇದೇ ಹೆಸರಿನ ತಾಲೂಕಿನ ಕೇಂದ್ರವೂ ಹೌದು.

ಭೌಗೋಳಿಕ ಮಾಹಿತಿ[ಬದಲಾಯಿಸಿ]

ಸಿದ್ಧಾಪುರದ ಅಕ್ಷಾಂಶ / ರೇಖಾಂಶಗಳು ೧೪.೨೦ ಡಿಗ್ರಿ ಉತ್ತರ ಮತ್ತು ೭೪.೫೩ ಡಿಗ್ರಿ ಪೂರ್ವ. ಸಮುದ್ರಮಟ್ಟದಿಂದ ಸರಾಸರಿ ಎತ್ತರ ೫೬೪ ಮೀಟರುಗಳು.

ಜನಸಂಖ್ಯೆ ಅಂಕಿಅಂಶಗಳು[ಬದಲಾಯಿಸಿ]

೨೦೦೧ರ ಜನಗಣತಿಯ ಪ್ರಕಾರ ಸಿದ್ಧಾಪುರದ ಜನಸಂಖ್ಯೆ ೧೪,೦೪೯. ಇದರಲ್ಲಿ ಪುರು಼ಷರು ೫೧% ಮತ್ತು ಸ್ತ್ರೀಯರು ೪೯% ಇದ್ದಾರೆ.ಇಲ್ಲಿಯ ಸರಾಸರಿ ಶೇಕಡಾ ಅಕ್ಷರತೆ ೭೭% ರಾಷ್ಟ್ರೀಯ ಸರಾಸರಿಗಿಂತ (೫೯.೫%) ಗಿಂತ ಹೆಚ್ಚಾಗಿದೆ. ೮೨% ಪುರುಷರೂ, ೭೨% ಸ್ತ್ರೀಯರೂ ಸಾಕ್ಷರರಾಗಿದ್ದಾರೆ. ೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಒಟ್ಟು ಜನಸಂಖ್ಯೆಯ ೧೧%ರಷ್ಟು ಇದ್ದಾರೆ. ಇಲ್ಲಿಯ ಮುಖ್ಯ ಭಾಷೆ ಕನ್ನಡ. ಕೊಂಕಣಿ ಮತ್ತು ಕನ್ನಡದ ಪ್ರಬೇಧಗಳಲ್ಲೊಂದಾದ ಹವ್ಯಕ ಭಾಷೆಯನ್ನಾಡುವವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ.

ಅರ್ಥ ವ್ಯವಸ್ಥೆ ಮತ್ತು ಉದ್ಯೋಗ[ಬದಲಾಯಿಸಿ]

ಕೃಷಿ ಇಲ್ಲಿಯ ಮುಖ್ಯ ಉದ್ಯೋಗ. ಅಡಿಕೆ ಬೆಳೆಯುವಿಕೆ ಹಾಗೂ ಅದಕ್ಕೆ ಸಂಬಂಧಪಟ್ಟ ಇತರ ಕೆಲಸಗಳನ್ನು ಅವಲಂಬಿಸಿದವರ ಸಂಖ್ಯೆ ಪ್ರಧಾನವಾಗಿದೆ. ಅಡಿಕೆಯಲ್ಲದೆ ಇತರ ಬೆಳೆಗಳಾದ ಭತ್ತ, ಕಾಫಿ,ಅನಾನಸ್, ಏಲಕ್ಕಿ, ಕರಿಮೆಣಸು ಇವುಗಳನ್ನು ಬೆಳೆಯುವವರ ಸಂಖ್ಯೆಯೂ ಸಾಕಷ್ಟಿದೆ.ವೆನಿಲ್ಲಾ ಈಚೆಗೆ ಜನಪ್ರಿಯವಾದ ಒಂದು ಬೆಳೆ.

ಪ್ರವಾಸಿ ಆಕರ್ಷಣೆಗಳು[ಬದಲಾಯಿಸಿ]

ಪಶ್ಚಿಮ ಘಟ್ಟಗಳ ಸೆರಗಿನಲ್ಲಿದ್ದು , ಮಲೆನಾಡಿನ ಭಾಗವಾಗಿರುವ ಸಿದ್ಧಾಪುರದ ಸುತ್ತ ಮುತ್ತ ಕಾಡುಗಳೂ, ಬೆಟ್ಟ ಗುಡ್ಡಗಳೂ ವಿಪುಲವಾಗಿದ್ದು ಚಾರಣ ಹವ್ಯಾಸಿಗಳಿಗೆ ಪ್ರಿಯವಾಗಿದೆ. ಸಮೀಪದಲ್ಲಿ ಅನೇಕ ಜಲಪಾತಗಳಿದ್ದು ಅವುಗಳಲ್ಲಿ ಕೆಲ ಪ್ರಸಿದ್ಧವಾದವುಗಳೆಂದರೆ

ಶಂಕರಮಠ, ಭುವನಗಿರಿ , ಇಟಗಿ ಮತ್ತು ಚಂದ್ರಗುತ್ತಿಬಿಳಗಿ, ಸುತ್ತಮುತ್ತಲಿನ ಧಾರ್ಮಿಕ ಸ್ಥಳಗಳು.

ಕಲೆ[ಬದಲಾಯಿಸಿ]

Yakshagana artist with Kirita depicts King
Yakshagana artist with Kedige

ಯಕ್ಷಗಾನವು ಇಲ್ಲಿಯ ಪ್ರಮುಖ ಕಲೆಯಾಗಿದ್ದು,ಜನಜೀವನದಲ್ಲಿ ಹಾಸುಹೊಕ್ಕಾಗಿದೆ.

ಶಾಲಾ ಕಾಲೇಜುಗಳು[ಬದಲಾಯಿಸಿ]

  • ಮಾದರಿ ಕನ್ನಡ ಹೆಣ್ಣುಮಕ್ಕಳ ಶಾಲೆ
  • ಗಂಡುಮಕ್ಕಳ ಶಾಲೆ
  • ಪ್ರಶಾಂತಿ ಗುರುಕುಲ ವಿದ್ಯಾ ಕೇಂದ್ರ
  • ಬಾಲಿಕೊಪ್ಪ ಸರ್ಕಾರೀ ಪ್ರಾಥಮಿಕ ಶಾಲೆ.
  • ಎಸ್.ಆರ್‍.ಜಿ.ಎಚ್.ಎಮ್. ಹೆಣ್ಣುಮಕ್ಕಳ ಪ್ರೌಢಶಾಲೆ
  • ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಾಪುರ
  • ಎಮ್.ಜಿ.ಸಿ. ಕಲಾ, ವಾಣಿಜ್ಯ ಮತ್ತು ಜಿ.ಎಚ್. ವಿಜ್ಞಾನ ಕಾಲೇಜು
  • ಧನ್ವಂತರಿ ಆಯುರ್ವೇದ ವೈದ್ಯಕೀಯ ಕಾಲೇಜು
  • ಸರಕಾರಿ ಪಾಲಿಟೆಕ್ನಿಕ್
  • ಸರಕಾರಿ ಪದವಿ ಕಾಲೇಜು
  • ಸರಕಾರಿ ಪ್ರೌಡಶಾಲೆ ಹಾಳದಕಟ್ಟಾ
  • ಸಿದ್ದಿ ವಿನಾಯಕ ಪ್ರೌಡಶಾಲೆ
  • ಸರಕಾರಿ ಪ್ರೌಢಶಾಲೆ ನಾಣಿಕಟ್ಟಾ

ಸಿದ್ಧಾಪುರಕ್ಕೆ ತಲುಪುವುದು ಹೇಗೆ?[ಬದಲಾಯಿಸಿ]

ಸಿದ್ಧಾಪುರ ಬೆಂಗಳೂರಿನಿಂದ ೪೦೦ ಕಿ.ಮೀ ದೂರದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣ, ೧೩೦ ಕಿ. ಮೀ ದೂರದಲ್ಲಿರುವ ಹುಬ್ಬಳ್ಳಿ . ಸುಮಾರು ಹದಿನೈದು ಕಿ.ಮೀ ದೂರದ ತಾಳಗುಪ್ಪಾದಲ್ಲಿ ರೈಲುನಿಲ್ದಾಣವಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬೆಂಗಳೂರಿನಿಂದ ಸಾಗರ ಮೂಲಕವಾಗಿ ಸಿದ್ಧಾಪುರಕ್ಕೆ ಪ್ರತಿ ದಿನ ವಾತಾನುಕೋಲಿತ ವೊಲ್ವೋ ಬಸ್ಸಿನ ಸೌಕರ್ಯವನ್ನು ಈಚೆಗೆ ಪ್ರಾರಂಭಿಸಿದೆ.

ಹೆಚ್ಚಿನ ಮಾಹಿತಿಗಾಗಿ[ಬದಲಾಯಿಸಿ]

Karnataka-icon.jpg
ಉತ್ತರ ಕನ್ನಡ ತಾಲ್ಲೂಕುಗಳು
ಅಂಕೋಲಾ | ಕಾರವಾರ | ಕುಮಟಾ | ಜೋಯ್ಡಾ | ಭಟ್ಕಳ | ಮುಂಡಗೋಡು | ಯಲ್ಲಾಪುರ | ಶಿರಸಿ | ಸಿದ್ದಾಪುರ | ಹಳಿಯಾಳ | ಹೊನ್ನಾವರ