ಸಿಡ್ನಿ ಲ್ಯೂಮೆಟ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Sidney Lumet
ಜನನ(೧೯೨೪-೦೬-೨೫)೨೫ ಜೂನ್ ೧೯೨೪
ಮರಣApril 9, 2011(2011-04-09) (aged 86)
New York City, New York, US
ಮರಣಕ್ಕೆ ಕಾರಣLymphoma
ರಾಷ್ಟ್ರೀಯತೆAmerican
ಹಳೆ ವಿದ್ಯಾರ್ಥಿColumbia University
ಉದ್ಯೋಗDirector, producer, screenwriter, actor
ಸಕ್ರಿಯ ವರ್ಷಗಳು೧೯೩೯–೨೦೦೭
ಜೀವನ ಸಂಗಾತಿRita Gam
(m. ೧೯೪೯–೧೯೫೫, divorced)
Gloria Vanderbilt
(m. ೧೯೫೬–೧೯೬೩, divorced)
Gail Jones
(m. ೧೯೬೩–೧೯೭೮, divorced)
Mary Gimbel
(m. ೧೯೮೦–೨೦೧೧, his death)
ಮಕ್ಕಳುAmy, Jenny
ಪೋಷಕರುBaruch Lumet, Eugenia Wermus

ಸಿಡ್ನಿ ಲ್ಯೂಮೆಟ್‌ (/[unsupported input]lˈmɛt/ loo-met; ಜೂನ್‌‌ ೨೫, ೧೯೨೪– ಏಪ್ರಿಲ್‌‌ ೯, ೨೦೧೧) ಎಂಬಾತ ಓರ್ವ ಅಮೇರಿಕದ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿದ್ದು ೫೦ಕ್ಕೂ ಹೆಚ್ಚಿನ ಸಂಖ್ಯೆಯ ಚಲನಚಿತ್ರಗಳು ಅವರ ಹೆಸರಿನೊಂದಿಗೆ ತಳಕು ಹಾಕಿಕೊಂಡಿವೆ. ೧೨ ಆಂಗ್ರಿ ಮೆನ್‌‌ (೧೯೫೭), ಡಾಗ್‌ ಡೇ ಆಫ್ಟರ್‌ನೂನ್‌‌ (೧೯೭೫), ನೆಟ್‌ವರ್ಕ್‌ (೧೯೭೬) ಮತ್ತು ದ ವರ್ಡಿಕ್ಟ್‌ (೧೯೮೨) ಚಲನಚಿತ್ರಗಳ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶಕ ಅಕಾಡೆಮಿ ಪ್ರಶಸ್ತಿಗಳಿಗೆ ನಾಮಾಂಕಿತಗೊಂಡಿದ್ದರು. ಅವರು ಯಾವುದೇ ವೈಯಕ್ತಿಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರಲಿಲ್ಲವಾದರೂ ಒಂದು ಅಕಾಡೆಮಿ ಗೌರವಾರ್ಥ ಪ್ರಶಸ್ತಿಯನ್ನು ಪಡೆದಿದ್ದು ೧೦ ಕ್ಷೇತ್ರಗಳಲ್ಲಿ ನಾಮಾಂಕಿತಗೊಂಡು, ೪ ಪ್ರಶಸ್ತಿಗಳನ್ನು ಗೆದ್ದ ನೆಟ್‌ವರ್ಕ್‌ ನಂತಹಾ ತಮ್ಮ ಚಲನಚಿತ್ರಗಳಲ್ಲಿ ೧೪ ಚಿತ್ರಗಳಲ್ಲಿ ಹಲವು ಆಸ್ಕರ್‌ ಪ್ರಶಸ್ತಿಗಳಿಗಾಗಿ ನಾಮಾಂಕಿತಗೊಂಡಿದ್ದಾರೆ.

ದ ಎನ್‌ಸೈಕ್ಲೋಪೀಡಿಯಾ ಆಫ್‌ ಹಾಲಿವುಡ್‌ ಕೃತಿಯು ಹೇಳುವ ಪ್ರಕಾರ ಲ್ಯೂಮೆಟ್‌ರು ಆಧುನಿಕ ಯುಗದ ಬಹುತೇಕ ಫಲಪ್ರದ ನಿರ್ದೇಶಕರುಗಳಲ್ಲಿ ಒಬ್ಬರಾಗಿದ್ದು ೧೯೫೭ರಲ್ಲಿ ತಮ್ಮ ಪ್ರಥಮ ನಿರ್ದೇಶಕನಾಗಿ ಆರಂಭಿಸಿದ ನಂತರ ಸರಾಸರಿಯಾಗಿ ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಚಿತ್ರಗಳನ್ನು ಮಾಡುತ್ತಾ ಬಂದಿದ್ದಾರೆ.[೧] ಅವರು ಟ್ಯೂನರ್‌ ಕ್ಲಾಸಿಕ್‌ ಮೂವೀಸ್‌ ಸಂಸ್ಥೆಯಿಂದ ತಮ್ಮ "ನಟರುಗಳನ್ನು ಪರಿಣಾಮಕಾರಿಯಾಗಿ ನಿರ್ದೇಶಿಸುವಿಕೆ ", "ಪ್ರಚಂಡ ಕಥಾನಿರೂಪಣೆ" ಮತ್ತು "ಸಾಮಾಜಿಕ ವಾಸ್ತವಿಕತೆ"ಗಳಿಂದ ಕೂಡಿದ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಮನ್ನಣೆಯನ್ನು ಪಡೆದುಕೊಂಡಿದ್ದಾರೆ.[೨] ಚಿತ್ರ ವಿಮರ್ಶಕ ರೋಗರ್‌ ಎಬರ್ಟ್‌ರು ಆತನನ್ನು "ಚಲನಚಿತ್ರ ನಿರ್ದೇಶಕರುಗಳೆಲ್ಲರಲ್ಲಿ ಅತ್ಯುತ್ತಮ ಕೌಶಲ್ಯವನ್ನು ಹೊಂದಿದ್ದ ಹಾಗೂ ಭಾವಪೂರ್ಣ ಮಾನವತಾವಾದಿಗಳಲ್ಲಿ ಒಬ್ಬರಾಗಿದ್ದರೆಂದು" ವರ್ಣಿಸಿದ್ದರು.[೩] ಲ್ಯೂಮೆಟ್‌ರು "ನಟರುಗಳ ನಿರ್ದೇಶಕ"ರೆಂದೂ ಹೆಸರಾಗಿದ್ದು ಅತ್ಯುತ್ತಮ ನಟರುಗಳೊಂದಿಗೆಲ್ಲಾ ಕಾರ್ಯನಿರ್ವಹಿಸಿದ್ದರು, ತಮ್ಮ ವೃತ್ತಿಜೀವನದ ಅವಧಿಯಲ್ಲಿ ಇದು ಬಹುಶಃ "ಇತರ ಯಾವುದೇ ನಿರ್ದೇಶಕ"ರಿಗಿಂತ ಹೆಚ್ಚಿನ ಮಟ್ಟದ್ದಾಗಿತ್ತು."[೪]

ಲ್ಯೂಮೆಟ್‌ರು ಆಫ್‌-ಬ್ರಾಡ್‌ವೇ ರಂಗದಲ್ಲಿ ಓರ್ವ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ, ನಂತರ ಬಹು ದಕ್ಷ TV ನಿರ್ದೇಶಕರಾದರು. ಅವರ ಪ್ರಪ್ರಥಮ ಚಲನಚಿತ್ರವು ಅವರ ಅತ್ಯುತ್ತಮ ನಿರ್ದೇಶನಕ್ಕೆ ಪ್ರಾತಿನಿಧಿಕವೆಂಬಂತಿತ್ತು : ಒಂದು ಉತ್ತಮ ನಟನೆಯ, ಬಿಗುವಿನಿಂದ ಕೂಡಿದ "ಸಮಸ್ಯಾತ್ಮಕ ಚಿತ್ರವೆಂದು," ತೀವ್ರವಾಗಿ ಪರಿಗಣಿಸಲ್ಪಟ್ಟ ಚಿತ್ರ ೧೨ ಆಂಗ್ರಿ ಮೆನ್‌‌ (೧೯೫೭) ಅದಾಗಿತ್ತು. ಈ ಕಾಲಘಟ್ಟದಿಂದ ಆರಂಭಿಸಿ ಲ್ಯೂಮೆಟ್‌ರು ತಮ್ಮ ಪ್ರತಿಭೆಯನ್ನು ನಾಟಕಗಳು ಮತ್ತು ಕಾದಂಬರಿಗಳ ಸಾಹಿತ್ಯಪೂರ್ಣ ಅಳವಡಿಕೆಗಳು, ಬೆಡಗಿನಿಂದ ಕೂಡಿದ ದೊಡ್ಡ ಚಿತ್ರಗಳು, ನ್ಯೂಯಾರ್ಕ್‌ -ಮೂಲದ ವಿಕಟ ವೈನೋದಿಕಗಳು ಮತ್ತು ಸರ್ಪಿಕೋ ಮತ್ತು ಪ್ರಿನ್ಸ್‌ ಆಫ್‌ ದ ಸಿಟಿ ಸೇರಿದಂತೆ ವಾಸ್ತವವಾದಿ ಪತ್ತೇದಾರಿ ರೂಪಕಗಳೊಂದಿಗೆ ಇತರೆ ಆದರ್ಶನಿಷ್ಠ ಸಮಸ್ಯಾತ್ಮಕ ಚಲನಚಿತ್ರಗಳಿಗಾಗಿ ಎಂಬಂತೆ ವಿಭಜಿಸಿಕೊಂಡರು. ೧೨ ಆಂಗ್ರಿ ಮೆನ್‌‌ ಚಿತ್ರವನ್ನು ನಿರ್ದೇಶಿಸುವುದರ ಪರಿಣಾಮವಾಗಿ, ಅವರು TV ಕ್ಷೇತ್ರದಿಂದ ಚಲನಚಿತ್ರಗಳೆಡೆಗೆ ಯಶಸ್ವಿ ಸ್ಥಿತ್ಯಂತರವನ್ನು ಕೈಗೊಂಡ ನಿರ್ದೇಶಕರ ಮೊದಲ ಅಲೆಯ ನೇತೃತ್ವವನ್ನು ವಹಿಸಿಕೊಳ್ಳುವುದಕ್ಕೆ ಕೂಡಾ ಹೊಣೆಗಾರರಾದರು. ೨೦೦೫ರಲ್ಲಿ ಲ್ಯೂಮೆಟ್‌ರು "ಚಿತ್ರಕಥೆಗಾರರು, ಕಲಾವಿದರು ಹಾಗೂ ಚಲನಚಿತ್ರ ಕಲೆಗೆ ನೀಡಿದ ಪ್ರತಿಭಾಪೂರ್ಣ ಸೇವೆಗಳಿಗಾಗಿ" ಜೀವಮಾನದ ಸಾಧನೆಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಎರಡು ವರ್ಷಗಳ ನಂತರ ಅವರು ಬಿಫೋರ್‌‌ ದ ಡೆವಿಲ್‌ ನೋಸ್‌ ಯೂ ಆರ್‌ ಡೆಡ್‌ (೨೦೦೭) ಎಂಬ ಶ್ಲಾಘನೀಯ ರೂಪಕ ಚಲನಚಿತ್ರದೊಂದಿಗೆ ತಮ್ಮ ವೃತ್ತಿಜೀವನಕ್ಕೆ ಮಂಗಳ ಹಾಡಿದರು.

ಆರಂಭಿಕ ವರ್ಷಗಳು[ಬದಲಾಯಿಸಿ]

1940ರ ನಾಟಕ "ಜರ್ನಿ ಟು ಜೆರುಸಲೇಂ"ನಲ್ಲಿ

ಲ್ಯೂಮೆಟ್‌ರು ಪೆನ್ಸಿಲ್‌ವೇನಿಯಾದ ಫಿಲಡೆಲ್ಫಿಯಾ ನಗರದಲ್ಲಿ ಜನಿಸಿದ್ದರು. ನ್ಯೂಯಾರ್ಕ್‌ನ ಪ್ರೊಫೆಷನಲ್‌ ಚಿಲ್ಡ್ರನ್ಸ್‌ ಸ್ಕೂಲ್‌ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಅವರು ರಂಗಭೂಮಿಯ ಅಭಿನಯವನ್ನು ಅಧ್ಯಯನ ಮಾಡಿದ್ದರು.[೫][೬]

ಅವರ ತಂದೆ ತಾಯಿಗಳಾದ ಬರೂಚ್‌ ಲ್ಯೂಮೆಟ್‌ ಮತ್ತು ಯೂಜೆನಿಯಾ ವರ್ಮಸ್‌ರವರುಗಳಿಬ್ಬರೂ ಯಿಡಿಷ್‌ ರಂಗಭೂಮಿಯ ನಟನಾಪಾರಂಗತರಾಗಿದ್ದರು.[೭] ಆತನ ತಂದೆಯು ಓರ್ವ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಲೇಖಕರಾಗಿದ್ದರೆ ಆತನ ತಾಯಿಯು ಓರ್ವ ನೃತ್ಯಗಾತಿಯಾಗಿದ್ದರು. ಆತನಿನ್ನೂ ಮಗುವಾಗಿರುವಾಗಲೇ ಆತನ ತಾಯಿಯು ಮರಣವನ್ನಪ್ಪಿದ್ದರು. ಲ್ಯೂಮೆಟ್‌ರೇಡಿಯೋದಲ್ಲಿನ ತನ್ನ ವೃತ್ತಿಪರ ಪ್ರವೇಶವನ್ನು ನಾಲ್ಕನೆಯ ವಯಸ್ಸಿನಲ್ಲಿ ಮಾಡಿದ್ದರೆ, ಯಿಡಿಷ್‌ ರಂಗಭೂಮಿಯಲ್ಲಿ ರಂಗಪ್ರವೇಶವನ್ನು ಐದನೆಯ ವಯಸ್ಸಿನಲ್ಲಿ ಮಾಡಿದನು.[೮] ಬಾಲಕನಾಗಿದ್ದಾಗಲೇ ಆತನು ೧೯೩೫'ರ ಡೆಡ್‌ ಎಂಡ್‌ ಮತ್ತು ಕರ್ಟ್‌ ವೇಲ್‌‌ ರ ದ ಎಟರ್ನಲ್‌ ರೋಡ್‌ ಸೇರಿದಂತೆ ಹಲವು ಬ್ರಾಡ್‌ವೇ ನಾಟಕಗಳಲ್ಲಿ ಕೂಡಾ[೭] ಅಭಿನಯಿಸಿದ್ದನು. ರೇಡಿಯೋ ತಾರೆ ಹರ್ಮನ್‌ ಯಾಬ್ಲೋಕಾಫ್‌‌ರ ಸಹನಿರ್ಮಾಣವನ್ನು ಹೊಂದಿದ್ದ ಹೆನ್ರಿ ಲಿನ್‌‌ರ ಕಿರು ಚಿತ್ರವಾದ ಪೇಪಿರಾಸ್ಸೆನ್‌‌ ನಲ್ಲಿ (ಯಿಡಿಷ್‌ ಭಾಷೆಯಲ್ಲಿ ಹಾಗೆಂದರೆ "ಸಿಗರೇಟುಗಳು" ಎಂದರ್ಥ) ೧೯೩೫ರಲ್ಲಿ ತನ್ನ ೧೧ನೆಯ ವಯಸ್ಸಿನಲ್ಲಿ ಲ್ಯೂಮೆಟ್‌ ಕಾಣಿಸಿಕೊಂಡಿದ್ದನು. ಅದೇ ಶೀರ್ಷಿಕೆಯನ್ನು ಹೊಂದಿದ್ದ "ಪೇಪಿರಾಸ್ನ್‌ " ಎಂಬ ಜನಪ್ರಿಯ ಗೀತೆಯನ್ನು ಆಧರಿಸಿದ ರಂಗಭೂಮಿಯ ನಾಟಕದ ಮೂಲಕ ಚಿತ್ರವನ್ನು ಪ್ರಸ್ತುತಪಡಿಸಲಾಗಿತ್ತು. ಬ್ರಾಂಕ್ಸ್‌ ಮೆಕ್‌ಕಿನ್ಲೆ ಸ್ಕ್ವೇರ್‌ ಥಿಯೇಟರ್‌ನಲ್ಲಿ ಈ ನಾಟಕ ಹಾಗೂ ಕಿರು ಚಿತ್ರಗಳೆರಡೂ ಕಾಣಿಸಿಕೊಂಡಿವೆ.[೯] ಆತನು ತನ್ನ ೧೫ನೆಯ ವಯಸ್ಸಿನಲ್ಲಿ ೧೯೩೯ರಲ್ಲಿ ಒನ್‌ ಥರ್ಡ್‌ ಆಫ್‌ ಎ ನೇಷನ್‌ ಎಂಬ ಚಲನಚಿತ್ರದಲ್ಲಿ ತನ್ನ ಏಕೈಕ ಪೂರ್ಣ ಪ್ರಮಾಣದ ನಟಿಸುವಿಕೆಯನ್ನು ಮಾಡಿದನು.[೧೦][೧೧] ಆತನ ಆರಂಭಿಕ ನಟನಾ ವೃತ್ತಿಜೀವನಕ್ಕೆ ೧೯೩೯ರಲ್ಲಿ ವಿಶ್ವ ಸಮರ II‌ ಅಡ್ಡಿಪಡಿಸಿದುದರಿಂದಾಗ ಆತ ಮೂರು ವರ್ಷಗಳನ್ನು US ಸೇನಾಪಡೆಯಲ್ಲಿ ಕಳೆದನು.

ಭಾರತ ಮತ್ತು ಬರ್ಮಾಗಳಲ್ಲಿ ರಾಡಾರ್‌ ದುರಸ್ತಿ ತಜ್ಞನಾಗಿ ವಿಶ್ವ ಸಮರ II‌ರ ಸೇವೆಯಿಂದ (೧೯೪೨–೧೯೪೬) ಮರಳಿದ ನಂತರ, ಆತನು ಆಕ್ಟರ್ಸ್‌ ಸ್ಟುಡಿಯೋದಲ್ಲಿ ತನ್ನನ್ನು ತೊಡಗಿಸಿಕೊಂಡ, ನಂತರ ತನ್ನದೇ ಆದ ರಂಗಭೂಮಿಯ ಕಾರ್ಯಾಗಾರವನ್ನು ರೂಪಿಸಿದರು.[೧೨] ಆಫ್‌-ಬ್ರಾಡ್‌ವೇ ತಂಡವೊಂದನ್ನು ಸಿದ್ಧಪಡಿಸಿ ತಾನು ಅದರ ನಿರ್ದೇಶಕನಾಗಿದ್ದುಕೊಂಡು ಬೇಸಿಗೆಯ ಸಂಗ್ರಹ ನಾಟಕರಂಗದಲ್ಲಿ ನಿರ್ದೇಶನವನ್ನು ಮುಂದುವರಿಸುತ್ತಲೇ, ಹೈಸ್ಕೂಲ್‌ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ ಸಂಸ್ಥೆಯಲ್ಲಿ ನಟನೆಯನ್ನು ಹೇಳಿಕೊಡುತ್ತಿದ್ದರು.[೧೦] ನವೀನ ೪೬ನೆಯ St. (ಹೆಗ್ಗುರುತು) "ಪರ್ಫಾರ್ಮಿಂಗ್‌ ಆರ್ಟ್ಸ್‌' ("ಪ್ರಖ್ಯಾತಿ‌") ಕಟ್ಟಡದ ರಂಗಶಾಲೆಯಲ್ಲಿ ಆತ ಹಿರಿಯ ನಟನಾ ತರಬೇತುದಾರರಾಗಿದ್ದರು. ೨೫ ವರ್ಷಗಳ ವಯಸ್ಸಿನ ಲ್ಯೂಮೆಟ್‌ "ದ ಯಂಗ್‌ ಅಂಡ್‌ ಫೇರ್‌‌"ನ ನಿರ್ಮಾಣದಲ್ಲಿ ರೂಪಕ/ನಟನಾ ವಿಭಾಗದ ನಿರ್ದೇಶನವನ್ನು ಕೈಗೊಂಡಿದ್ದನು.[ಸೂಕ್ತ ಉಲ್ಲೇಖನ ಬೇಕು]

ವೈಯಕ್ತಿಕ ಜೀವನ[ಬದಲಾಯಿಸಿ]

ಲ್ಯೂಮೆಟ್‌ರು ನಾಲ್ಕು ಬಾರಿ ವಿವಾಹವಾಗಿದ್ದರು ; ಮೊದಲ ಮೂರು ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಂಡವು. ಅವರು ೧೯೪೯–೧೯೫೫ರ ಅವಧಿಯಲ್ಲಿ ನಟಿ ರೀಟಾ ಗ್ಯಾಮ್‌ರೊಂದಿಗೆ ವಿವಾಹವಾಗಿದ್ದರು ;[೨] ೧೯೫೬–೧೯೬೩ರ ಅವಧಿಯಲ್ಲಿ ಸಾಮಾಜಿಕ ಪ್ರಮುಖೆ ಗ್ಲೋರಿಯಾ ವಾಂಡರ್‌ಬಿಲ್ಟ್‌ರೊಂದಿಗೆ ವೈವಾಹಿಕ ಜೀವನ ನಡೆಸಿದರು ; ೧೯೬೩–೧೯೭೮ರ ಅವಧಿಯಲ್ಲಿ ಗೇಲ್‌ ಜೋನ್ಸ್‌ರೊಂದಿಗೆ (ಲೇನಾ ಹಾರ್ನೆಯವರ ಪುತ್ರಿ) ವೈವಾಹಿಕ ಜೀವನ ನಡೆಸಿದರಲ್ಲದೇ ೧೯೮೦ರಿಂದ ತಮ್ಮ ಅಂತ್ಯದವರೆಗೆ ಮೇರಿ ಗಿಂಬೆಲ್‌ರೊಡನೆ ವಿವಾಹಿತರಾಗಿದ್ದರು. ಅವರಿಗೆ ಜೋನ್ಸ್‌ರಿಂದ ಇಬ್ಬರು ಪುತ್ರಿಯರಿದ್ದಾರೆ : ಅವರುಗಳೆಂದರೆ ೧೯೯೦–೧೯೯೩ರವರೆಗೆ P. J. ಓ'ರೂರ್ಕೆಯವರೊಂದಿಗೆ ವಿವಾಹಿತರಾಗಿದ್ದ ಆಮಿ ಮತ್ತು ಆತನ ಚಲನಚಿತ್ರ Q & A ನಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದ ನಟಿ/ಚಿತ್ರಕಥೆಗಾರ್ತಿ ಜೆನ್ನಿ. ೨೦೦೮ರ ಚಲನಚಿತ್ರ ರಾಚೆಲ್‌ ಗೆಟಿಂಗ್‌ ಮ್ಯಾರೀಡ್‌ಗೆ ಕೂಡಾ ಆಕೆ ಚಿತ್ರಕಥೆಯನ್ನು ಬರೆದಿದ್ದರು[೧೦][೧೩]

ನಿರ್ದೇಶನದಲ್ಲಿನ ವೃತ್ತಿಜೀವನ[ಬದಲಾಯಿಸಿ]

ಆರಂಭಿಕ ವೃತ್ತಿಜೀವನ[ಬದಲಾಯಿಸಿ]

ಲ್ಯೂಮೆಟ್‌ರು ತಮ್ಮ ವೃತ್ತಿಜೀವನವನ್ನು ಆಫ್‌-ಬ್ರಾಡ್‌ವೇ ನಿರ್ಮಾಣಗಳಲ್ಲಿ ನಿರ್ದೇಶಕರಾಗಿ ಆರಂಭಿಸಿ ನಂತರ ಬಹಳ ಗೌರವಾರ್ಹ TV ನಿರ್ದೇಶಕರಾಗಿ ವಿಕಸನಗೊಂಡರು. ಆಫ್‌-ಬ್ರಾಡ್‌ವೇ ಮತ್ತು ಬೇಸಿಗೆಯ ಸಂಗ್ರಹನಾಟಕ ರಂಗಗಳಲ್ಲಿ ಅಮೂಲ್ಯವಾದ ಅನುಭವಗಳನ್ನು ಗಳಿಸಿಕೊಂಡ ನಂತರ ೧೯೫೦ರಲ್ಲಿ ಅವರು ನವೀನ ಮಾಧ್ಯಮವಾದ ಕಿರುತೆರೆಯಲ್ಲಿ ನಿರ್ದೇಶನ ಮಾಡುವುದನ್ನು ಆರಂಭಿಸಿದರು, ಮೊದಲಿಗೆ ಓರ್ವ ಸ್ನೇಹಿತರಿಗೆ ಸಹಾಯಕರಾಗಿ ಕೆಲಸ ಮಾಡಿದ ನಂತರ ಆಗಿನ-ನಿರ್ದೇಶಕ ಯುಲ್‌ ಬ್ರೈನ್ನರ್‌‌ರೊಂದಿಗೆ ಕೂಡಾ ಸಹಾಯಕರಾಗಿ ಕೆಲಸ ನಿರ್ವಹಿಸಿದರು. ಕಿರುತೆರೆಗೆ ಅಗತ್ಯವಾದ ತ್ವರಿತ ತಯಾರಿಕೆಯ ಅಗತ್ಯವನ್ನು ಮನಗಂಡು ಅವರು ಶೀಘ್ರವಾಗಿ "ಮಿಂಚಿನ ವೇಗದ " ಚಿತ್ರೀಕರಣ ವಿಧಾನವನ್ನು ಅಭಿವೃದ್ಧಿಪಡಿಸಿಕೊಂಡರು. ಇದರ ಪರಿಣಾಮವಾಗಿ CBSನ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಆತ ಡೇಂಜರ್‌ (೧೯೫೦–೧೯೫೫), ಮಾಮಾ/ಮಮ್ಮಾ (೧೯೪೯–೧೯೫೭), ಮತ್ತು ವಾಲ್ಟರ್‌ ಕ್ರಾಂಕೈಟ್‌‌ರ ತಮ್ಮ ಆರಂಭಿಕ ನಾಯಕ ಪಾತ್ರಗಳಲ್ಲಿ ಒಂದಾಗಿ ಪಾತ್ರವಹಿಸಿದ್ದ ಸಾಪ್ತಾಹಿಕ ಸರಣಿ ಯೂ ಆರ್‌ ದೇರ್‌‌ (೧೯೫೩–೧೯೫೭)ಗಳ ನೂರಾರು ಪ್ರಕರಣಗಳನ್ನು ನಿರ್ದೇಶಿಸಿದ್ದರು. ಅವರು ಸಚೇತಕನಾಗಿ ಕ್ರಾಂಕೈಟ್‌ನನ್ನು ಆಯ್ಕೆ ಮಾಡಿದ್ದರು ಅದರ ಬಗ್ಗೆ ಲ್ಯೂಮೆಟ್‌ರು "ಏಕೆಂದರೆ ಕಾರ್ಯಕ್ರಮದ ಸ್ಥಳವು ಎಷ್ಟು ಸರಳವಾಗಿ ವೈಪರೀತ್ಯಗಳಿಂದ ಕೂಡಿತ್ತೆಂದರೆ ಬಹುತೇಕ ಅಮೇರಿಕನ್‌ ಆದ, ಒರಟು ಹಾಸ್ಯವನ್ನು ಮಾಡಬಲ್ಲ ಸರಾಗವಾಗಿ ಉತ್ಸಾಹದಿಂದ ನಿರೂಪಿಸಬಲ್ಲ ವ್ಯಕ್ತಿಯ ಅಗತ್ಯ ನಮಗಿತ್ತು " ಎಂದಿದ್ದರು.[೧೪]

ಪ್ಲೇಹೌಸ್‌ ೯೦ , ಕ್ರಾಫ್ಟ್‌ ಟೆಲಿವಿಷನ್‌ ಥಿಯೇಟರ್‌ ಮತ್ತು ಸ್ಟುಡಿಯೋ ಒನ್‌ ಗಳಿಗಾಗಿ ಅವರು ಮೂಲ ನಾಟಕಗಳನ್ನು ಕೂಡಾ ನಿರ್ದೇಶಿಸಿದ್ದರಲ್ಲದೇ, ಸುಮಾರು ೨೦೦ ಪ್ರಕರಣಗಳನ್ನು ಚಿತ್ರೀಕರಿಸಿದ್ದರಿಂದ ಟ್ಯೂನರ್‌ ಕ್ಲಾಸಿಕ್‌ ಮೂವೀಸ್‌ನ ಪ್ರಕಾರ "ವ್ಯವಹಾರದಲ್ಲಿನ ಬಹು ಫಲಪ್ರದ ಮತ್ತು ಗೌರವಾನ್ವಿತ ನಿರ್ದೇಶಕರುಗಳಲ್ಲಿ ಒಬ್ಬರು " ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡರು. ಚಿತ್ರೀಕರಣವನ್ನು ನಡೆಸುವಾಗಿನ ಅವರ ಶೀಘ್ರಗತಿಯ ಸಾಮರ್ಥ್ಯವು ಅವರ ಚಲನಚಿತ್ರದ ವೃತ್ತಿಜೀವನದಲ್ಲಿಯೂ ಮುಂದುವರೆಯಿತು.[೨] ಕಿರುತೆರೆ ರೂಪಕಗಳಲ್ಲಿ ಹಲವು ರೂಪಕಗಳ ಗುಣಮಟ್ಟವು ಎಷ್ಟು ಅದ್ಭುತವಾಗಿತ್ತೆಂದರೆ, ನಂತರ ಅವುಗಳಲ್ಲಿ ಹಲವನ್ನು ಚಲನಚಿತ್ರಗಳನ್ನಾಗಿ ತಯಾರಿಸಲಾಯಿತು.

ಅವರ ಮೊತ್ತಮೊದಲ ೧೨ ಆಂಗ್ರಿ ಮೆನ್‌‌ ಚಲನಚಿತ್ರವು ಲ್ಯೂಮೆಟ್‌ರ ಪಾಲಿಗೆ ಶುಭಕಾರಕ ಆರಂಭವಾಯಿತು. ಈ ಚಿತ್ರವು ವಿಮರ್ಶಕರುಗಳಿಂದ ಉತ್ತಮ ಮನ್ನಣೆಯನ್ನು ಪಡೆಯಿತಲ್ಲದೇ ನಾಟಕದ ಗುಣಲಕ್ಷಣಗಳನ್ನು ಚಲನಚಿತ್ರಗಳಲ್ಲಿ ಒಡಮೂಡಿಸಬಲ್ಲ ಚಾಕಚಕ್ಯತೆಯ ನಿರ್ದೇಶಕರೆಂದು ಲ್ಯೂಮೆಟ್‌ರಿಗೆ ಮನ್ನಣೆಯನ್ನು ತಂದುಕೊಟ್ಟಿತು. US ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸೋನಿಯಾ ಸೋಟೋಮೇಯರ್‌ರ ಪಾಲಿಗೆ ಈ ಚಿತ್ರವನ್ನು ಪ್ರಥಮ ಬಾರಿಗೆ ವೀಕ್ಷಿಸಿದುದು ಅವರ ಜೀವನದ "ನಿರ್ಣಾಯಕ ಘಟ್ಟವಾಗಿ" ಪರಿಣಮಿಸಿತ್ತು, ಏಕೆಂದರೆ ಆಗ ಆಕೆಯು ವಕೀಲಿಯನ್ನು ತನ್ನ ವೃತ್ತಿಜೀವನವನ್ನಾಗಿ ಮಾಡಿಕೊಳ್ಳುವ ಯೋಚನೆಯಲ್ಲಿದ್ದರು. ಆಕೆಯು "ಅದು ನಾನು ಸರಿಯಾದ ಮಾರ್ಗದಲ್ಲಿಯೇ ಮುನ್ನಡೆಯುತ್ತಿದ್ದೇನೆ ಎಂದು ನನಗೆ ಹೇಳಿತು," ಎಂದಿದ್ದರು.[೧೫]

ಲ್ಯೂಮೆಟ್‌ರ ಒಟ್ಟಾರೆ ಚಲನಚಿತ್ರಗಳಲ್ಲಿ ಸಂಪೂರ್ಣವಾಗಿ ಅರ್ಧದಷ್ಟು ಚಿತ್ರಗಳು ರಂಗಭೂಮಿಯನ್ನು ತಮ್ಮ ಮೂಲವನ್ನಾಗಿ ಹೊಂದಿವೆ."[೧೬] ಅವರು ತಮ್ಮ ಪ್ರತಿಭೆಯನ್ನು ನಾಟಕಗಳು ಮತ್ತು ಕಾದಂಬರಿಗಳ ಸಾಹಿತ್ಯಪೂರ್ಣ ಅಳವಡಿಕೆಗಳು, ದೊಡ್ಡ ಬೆಡಗಿನಿಂದ ಕೂಡಿದ ಚಿತ್ರಗಳು, ಭಾವಾತಿರೇಕದ ನಾಟಕಗಳು ಮತ್ತು ಸಮಾಜ ಹಾಗೂ ಅಮೇರಿಕಾದ ಸಂಸ್ಕೃತಿಗಳನ್ನು ಬಿಂಬಿಸುವ ನ್ಯೂಯಾರ್ಕ್‌ -ಮೂಲದ ವಿಕಟ ವೈನೋದಿಕಗಳು ಮತ್ತು ಇತರೆ ಆದರ್ಶನಿಷ್ಠ ಸಮಸ್ಯಾತ್ಮಕ ಚಲನಚಿತ್ರಗಳಿಗಾಗಿ ಎಂಬಂತೆ ವಿಭಜಿಸಿಕೊಂಡರು. ೧೯೬೦ರಲ್ಲಿ ಆತ ನಿರ್ದೇಶಿಸಿದ ಒಂದು ವಿವಾದಾಸ್ಪದ TV ಷೋ/ಕಾರ್ಯಕ್ರಮವು ಅವರಿಗೆ ಕುಖ್ಯಾತಿಯನ್ನು ತಂದುಕೊಟ್ಟಿತ್ತು : ಅದೆಂದರೆ NBCಯಲ್ಲಿ ಪ್ರಸಾರವಾದ ದ ಸ್ಯಾಕ್ಕೋ-ವ್ಯಾನ್‌ಝೆಟ್ಟಿ ಸ್ಟೋರಿ  ; ದ ನ್ಯೂಯಾರ್ಕ್‌ ಟೈಮ್ಸ್ ನ ಪ್ರಕಾರ, "ಮೆಸಾಚುಸೆಟ್ಸ್‌‌ ರಾಜ್ಯದಲ್ಲಿ ಭರ್ಜರಿ ಪ್ರಚಾರ ಪಡೆದಿತ್ತು (ಅಲ್ಲಿಯೇ ಸ್ಯಾಕ್ಕೋ ಮತ್ತು ವ್ಯಾನ್‌ಝೆಟ್ಟಿರವರುಗಳ ವಿಚಾರಣೆ ನಡೆದು ಅವರಿಗೆ ಶಿಕ್ಷೆ ಜಾರಿಯಾದದ್ದು) ಏಕೆಂದರೆ ಅದು ಆಪಾದಿತ ಕೊಲೆಗಡುಕರು ವಸ್ತುತಃ ಸಂಪೂರ್ಣವಾಗಿ ನಿರ್ದೋಷಿಗಳು ಎಂಬಂತೆ ಬಿಂಬಿಸುತ್ತಿತ್ತು. ಆದರೆ ಈ ಕೋಲಾಹಲವು ಹಲವು ಪ್ರತಿಷ್ಠಿತ ಚಲನಚಿತ್ರಗಳ ಕಾರ್ಯಭಾರಗಳನ್ನು ಇವರಿಗೆ ಬರುವ ಹಾಗೆ ಮಾಡಿ ವಾಸ್ತವವಾಗಿ ಲ್ಯೂಮೆಟ್‌ರಿಗೆ ಕೆಟ್ಟದುದಕ್ಕಿಂತ ಹೆಚ್ಚು ಒಳ್ಳೆಯದನ್ನು ಮಾಡಿತು."[೧೭]

ಅವರು ಚಲನಚಿತ್ರ ಹಾಗೂ ಕಿರುತೆರೆಗಳೆರಡರಲ್ಲೂ ಶ್ರೇಷ್ಠ ನಾಟಕಗಳನ್ನು ಅಳವಡಿಸಲು ಆರಂಭಿಸಿದರು. ಅವರು ಮಾರ್ಲನ್‌ ಬ್ರಾಂಡೋ ಮತ್ತು ಜೊವಾನ್ನೆ ವುಡ್‌ವರ್ಡ್‌ರವರುಗಳನ್ನು ಟೆನ್ನೆಸ್ಸೆ ವಿಲಿಯಮ್ಸ್‌ರ ನಾಟಕ ಓರ್ಫಿಯಸ್‌ ಡಿಸೆಂಡಿಂಗ್‌ ವನ್ನಾಧರಿಸಿದ್ದ ದ ಫ್ಯುಜಿಟಿವ್‌ ಕೈಂಡ್‌ ಎಂಬ ಚಲನಚಿತ್ರದಲ್ಲಿ ೧೯೫೯ರಲ್ಲಿ ನಿರ್ದೇಶಿಸಿದ್ದರು. ಅವರು ನಂತರ ಯುಜೆನೆ ಓ'ನೀಲ್‌‌ರ ದ ಐಸ್‌ಮನ್‌ ಕಮೆಥ್‌ ನ ಕಿರುತೆರೆಯ ಪ್ರತ್ಯಕ್ಷ ಆವೃತ್ತಿಯೊಂದನ್ನು ನಿರ್ದೇಶಿಸಿದರು, ಅದಾದ ನಂತರ ಆರ್ಥರ್‌ ಮಿಲ್ಲರ್‌ ರಚಿತ ನಾಟಕವನ್ನಾಧರಿಸಿದ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿದ ರೂಪಕ ೧೯೬೨ರ ಚಲನಚಿತ್ರ, ಎ ವ್ಯೂ ಫ್ರಮ್‌ ದ ಬ್ರಿಡ್ಜ್‌ ಅನ್ನು ನಿರ್ದೇಶಿಸಿದರು. ಇದಾದ ನಂತರ ಯುಜೆನೆ ಓ'ನೀಲ್‌‌ರ ಮತ್ತೊಂದು ನಾಟಕವನ್ನು ಪರಿವರ್ತಿಸಲಾದ ಚಲನಚಿತ್ರ, ಲಾಂಗ್‌ ಡೇಸ್‌ ಜರ್ನಿ ಇನ್‌ಟು ನೈಟ್‌ ವನ್ನು ೧೯೬೨ರಲ್ಲಿ ನಿರ್ದೇಶಿಸಿದ್ದರು, ಇದರಲ್ಲಿ ಮಾದಕವಸ್ತುಗಳಿಗೆ ದಾಸಳಾದ ಗೃಹಿಣಿಯ ಪಾತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ಕ್ಯಾಥರೀನ್‌ ಹೆಪ್‌ಬರ್ನ್‌ರು ಒಂದು ಆಸ್ಕರ್‌ ನಾಮನಿರ್ದೇಶನವನ್ನು ಪಡೆದರೆ ; ೧೯೬೨ರ ಕ್ಯಾನ್ನೆಸ್‌ ಚಲನಚಿತ್ರೋತ್ಸವದಲ್ಲಿ ನಾಲ್ವರು ಪ್ರಧಾನ ನಟರು ನಟನೆಗೆ ಸಂಬಂಧಿಸಿದಂತೆ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.[೧೮] ಈ ಚಿತ್ರಕ್ಕೆ ವರ್ಷದ "ಹತ್ತು ಅತ್ಯುತ್ತಮ ಚಲನಚಿತ್ರಗಳಲ್ಲಿ" ಒಂದು ಎಂಬ ಹೆಗ್ಗಳಿಕೆಯನ್ನು ದ ನ್ಯೂಯಾರ್ಕ್‌ ಟೈಮ್ಸ್‌‌ ನಿಂದ ಪಡೆದುಕೊಂಡಿತ್ತು.

ನಿರ್ದೇಶನಾ ಶೈಲಿ ಹಾಗೂ ವಿಷಯವಸ್ತುಗಳು[ಬದಲಾಯಿಸಿ]

ವಾಸ್ತವಿಕತೆ ಮತ್ತು ಚುರುಕಾದ ಶೈಲಿ[ಬದಲಾಯಿಸಿ]

ಚಿತ್ರ ವಿಮರ್ಶಕ ಓವೆನ್‌ ಗ್ಲೇಬರ್‌ಮನ್‌ರ ಪ್ರಕಾರ ಲ್ಯೂಮೆಟ್‌ರು ಓರ್ವ "ನಿರ್ದಾಕ್ಷಿಣ್ಯ ಸ್ವಭಾವದ ನೇರಾನೇರ ಚಿತ್ರೀಕರಣಕಾರರು" ಆಗಿದ್ದರು, ಅವರು ೧೯೫೦ರ ದಶಕದ ಕಿರುತೆರೆಯ ಸ್ವರ್ಣಯುಗದ ಅವಧಿಯಲ್ಲಿ ತರಬೇತಿ ಪಡೆದವರಾಗಿದ್ದ ಅವರು ತಮ್ಮ ಚುರುಕಾದ ನಿರ್ದೇಶನದ ಶೈಲಿಗೆ ಹೆಸರಾಗಿದ್ದರು. ಮುಂದುವರೆಸುವ ಅವರು "ಸಿಡ್ನಿ ಲ್ಯೂಮೆಟ್‌ " ಮತ್ತು "ಚುರುಕುತನ" ಎಂಬ ಪದಗಳು ಬಹುಮಟ್ಟಿಗೆ ಸಮಾನಾರ್ಥಕವೆನಿಸಿಕೊಂಡವು : "ಮೌನದಿಂದ ಕೂಡಿದ ಕ್ಷಣಗಳಲ್ಲಿ ಕೂಡಾ ಚೈತನ್ಯವಿರುತ್ತಿತ್ತು. ಅದೊಂದು ಒಳಗಿನ ಚೈತನ್ಯಶಕ್ತಿಯಾಗಿದ್ದು ಲ್ಯೂಮೆಟ್‌ರು ಜನರಲ್ಲಿ ಗಮನಿಸಿದ್ದ ಹಾಗೂ ಅವರಿಂದ ಹೊರತೆಗೆದ ಅಸ್ತಿತ್ವದ ಝೇಂಕಾರವಾಗಿತ್ತು . . . [ಆತನು] ನ್ಯೂಯಾರ್ಕ್‌ನ ಬೀದಿಗಳಲ್ಲಿ ಹೊರಹೊರಟಾಗ . . . ಅವನ್ನು ಚುರುಕಾದ ಚಲನಶೀಲವಾಗುವಂತೆ ಮಾಡುತ್ತಿದ್ದರು:[೧೯]

It was a working class outer-borough energy. Lumet's streets were just as mean as Scorsese's, but Lumet's seemed plain rather than poetic. He channeled that New York skeezy vitality with such natural force that it was easy to overlook what was truly involved in the achievement. He captured that New York vibe like no one else because he saw it, lived it, breathed it — but then he had to go out and stage it, or re-create it, almost as if he were staging a documentary, letting his actors square off like random predators, insisting on the most natural light possible, making offices look as ugly and bureaucratic as they were because he knew, beneath that, that they weren't just offices but lairs, and that there was a deeper intensity, almost a kind of beauty, to catching the coarseness of reality as it truly looked.[೧೯]

ಸಹಯೋಗ[ಬದಲಾಯಿಸಿ]

ಲ್ಯೂಮೆಟ್‌ರು ಸಾಧಾರಣವಾಗಿ ಚಲನಚಿತ್ರಗಳಲ್ಲಿ ಸಹಭಾಗಿತ್ವವನ್ನು ಮೂಡಿಸಲು ಒತ್ತಾಯಿಸುತ್ತಿದ್ದರು, "ವೈಯಕ್ತಿಕ" ನಿರ್ದೇಶಕತ್ವದ ಪ್ರಾಬಲ್ಯವನ್ನು ಕೆಲವೊಮ್ಮೆ ಅಪಹಾಸ್ಯ ಮಾಡುತ್ತಿದ್ದರು ಎಂದು ಚಲನಚಿತ್ರ ಕ್ಷೇತ್ರದ ಇತಿಹಾಸಕಾರ ಫ್ರಾಂಕ್‌ P. ಕನ್ನಿಂಗ್‌ಹ್ಯಾಮ್‌‌ ಬರೆಯುತ್ತಾರೆ. ಇದರ ಪರಿಣಾಮವಾಗಿ ಲ್ಯೂಮೆಟ್‌ರು ಚಲನಚಿತ್ರ ಛಾಯಾಗ್ರಾಹಕರು ಮತ್ತು ನಟರುಗಳಿಬ್ಬರಲ್ಲೂ " ಲೇಖಕ, ನಟ ಮತ್ತು ಇತರೆ ಕಲಾವಿದರುಗಳೊಂದಿಗೆ ತನ್ನ ಸೃಜನಾತ್ಮಕ ಕಲ್ಪನೆಗಳನ್ನು ಹಂಚಿಕೊಳ್ಳುವ ಹೊಂದಿಕೊಳ್ಳುವ ಸ್ವಭಾವದ ಬಗ್ಗೆ ಜನಪ್ರಿಯರಾದರು".[೨೦] ಕನ್ನಿಂಗ್‌ಹ್ಯಾಮ್‌‌ರ ಪ್ರಕಾರ, ಲ್ಯೂಮೆಟ್‌ರಿಗೆ ರಂಗಭೂಮಿ ಮೂಲದ ಹಲವು "ಅತ್ಯುತ್ತಮ ನಟರುಗಳನ್ನು ವೈಶಿಷ್ಟ್ಯಪೂರ್ಣವಾಗಿ ನಿರ್ದೇಶಿಸುವುದರಲ್ಲಿ," ಸರಿಸಾಟಿಯಾಗಿ ಯಾರೂ ಇರಲಿಲ್ಲ. ಆದ್ದರಿಂದಲೇ ಆತ ರಾಲ್ಫ್‌ ರಿಚರ್ಡ್‌ಸನ್‌, ಮಾರ್ಲನ್‌ ಬ್ರಾಂಡೋ, ರಿಚರ್ಡ್‌ ಬರ್ಟನ್‌, ಕ್ಯಾಥರೀನ್‌ ಹೆಪ್‌ಬರ್ನ್‌, ಜೇಮ್ಸ್‌ ಮೇಸನ್‌, ಸೋಫಿಯಾ ಲಾರೆನ್‌, ಗೆರಾಲ್ಡೀನ್‌ ಫಿಟ್ಜ್‌ಗೆರಾಲ್ಡ್‌‌ , ಬ್ಲೈತೆ ಡ್ಯಾನರ್‌ , ರಾಡ್‌ ಸ್ಟೇಗರ್‌ , ವ್ಯಾನೆಸ್ಸಾ ರೆಡ್‌ಗ್ರೇವ್‌ , ಪಾಲ್‌ ನ್ಯೂಮನ್‌, ಸೀನ್‌ ಕಾನರಿ, ಹೆನ್ರಿ ಫಾಂಡಾ, ಡಸ್ಟಿನ್‌ ಹಾಫ್‌ಮನ್‌, ಆಲ್ಬರ್ಟ್‌ ಫಿನ್ನೆ, ಸಿಮೋನ್‌ ಸಿಗ್ನೋರೆಟ್‌ ಮತ್ತು ಆನ್ನೆ ಬ್ಯಾನ್‌ಕ್ರಾಫ್ಟ್‌ರವರುಗಳಂತಹಾ ಪ್ರತಿಭಾಶಾಲಿ ಕಲಾವಿದರಿಂದ 'ಅತ್ಯದ್ಭುತ ಪ್ರತಿಭಾಪ್ರದರ್ಶನ'ವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರು. ""ಆತನಿಗೆ ಒಬ್ಬ ಒಳ್ಳೆಯ ನಟನನ್ನು ಕೊಡಿ, ನಂತರ ಆತನು ಅವರೊಳಗಿರುವ ಅತ್ಯುತ್ತಮ ನಟನನ್ನು ಹೊರತೆಗೆಯುತ್ತಾರೆ," ಎಂದು ಚಿತ್ರ ವಿಮರ್ಶಕ ಮಿಕ್‌ ಲಾಸ್ಯಾಲ್ಲೆ ಬರೆಯುತ್ತಾರೆ.[೨೧]

ಅಗತ್ಯಬಿದ್ದಾಗ ಲ್ಯೂಮೆಟ್‌ರು ತರಬೇತಿ ಪಡೆಯದ ನಟರನ್ನೂ ಆಯ್ಕೆ ಮಾಡುತ್ತಿದ್ದರೂ, ಒಮ್ಮೆ ಸ್ಪಷ್ಟವಾಗಿ ಹೀಗೆಂದಿದ್ದರು, "ತೊಂಬತ್ತು ಪ್ರತಿಶತ ಸಂದರ್ಭಗಳಲ್ಲಿ ನಾನು ನನಗೆ ಸಿಗಬಹುದಾದುದರಲ್ಲೇ ಅತ್ಯುತ್ತಮ ಸಲಕರಣೆಗಳನ್ನು ಇಚ್ಛಿಸುತ್ತೇನೆ : ನಟರು, ಲೇಖಕರು, ದೀಪವ್ಯವಸ್ಥೆಯವರು, ಛಾಯಾಗ್ರಾಹಕರು, ರಂಗಸಜ್ಜಿಕೆನೋಡುವವರು ಇತ್ಯಾದಿ."[೨೦] ಅದೇನೇ ಇರಲಿ, ಅವರು "ಸಂಪೂರ್ಣ ಆಳವರಿಯದ " ನಟರುಗಳನ್ನು ತನ್ನ ಪಾತ್ರವರ್ಗದಲ್ಲಿ ಬಳಸಿಕೊಂಡಾಗಲೂ, ಆತನು ಅವರುಗಳಿಂದ ಅತ್ಯುತ್ತಮವಾದ ಸ್ಮರಣೀಯವಾದ ನಟನಾ ಪ್ರದರ್ಶನಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರು, ಅವರು ನಿಕ್‌ ನೋಲ್ಟೆ , ಆಂಥನಿ ಪರ್ಕಿನ್ಸ್‌ , ಅರ್ಮ್ಯಾಂಡ್‌ ಅಸ್ಸಾಂಟೆ, ಜೇನ್‌ ಫೊಂಡಾ/ಫಾಂಡಾ, ಫಾಯೆ ಡನ್‌ಅವೇ, ಟಿಮೋತಿ ಹಟ್ಟನ್‌ ಮತ್ತು ಆತನನ್ನು "ಪ್ರತಿ ನಟನ ಕನಸಿನ ನಿರ್ದೇಶಕ"ರೆಂದು ಹೆಸರಿಸಿದ್ದ ಅಲಿ ಮೆಕ್‌ಗ್ರಾಳೂ ಸೇರಿದಂತೆ ಈ ನಟವರ್ಗಕ್ಕೆ ಹಾಗೆಯೇ ಮಾಡಿದ್ದರು."[೨೨] ಜೇನ್‌ ಫೊಂಡಾ/ಫಾಂಡಾರ ಅಭಿಪ್ರಾಯದಲ್ಲಿ, "ಅವರೊಬ್ಬ ನಿಪುಣ ನಿರ್ದೇಶಕ. ತಮ್ಮ ಕೌಶಲ್ಯದ ಮೇಲೆ ಅಷ್ಟೊಂದು ನಿಯಂತ್ರಣವನ್ನು ಅವರು ಹೊಂದಿದ್ದರು. ಅವರು ದೃಢವಾದ, ಪ್ರಗತಿಪರ ಮೌಲ್ಯಗಳನ್ನು ಹೊಂದಿದ್ದು ಅವುಗಳನ್ನು ಎಂದಿಗೂ ಕಡೆಗಣಿಸುತ್ತಿರಲಿಲ್ಲ."[೨೩]

While the goal of all movies is to entertain, the kind of film in which I believe goes one step further. It compels the spectator to examine one facet or another of his own conscience. It stimulates thought and sets the mental juices flowing.

— Sidney Lumet[೨೪]

ಚಲನಚಿತ್ರಗಳನ್ನು ನಿರ್ದೇಶಿಸುವುದು ಒಂದು ಕಲಾಕೌಶಲ್ಯವೆಂದು ಭಾವಿಸಿದ್ದ ಲ್ಯೂಮೆಟ್‌ರು ಒಮ್ಮೆ ಹೀಗೆಂದಿದ್ದರು "ಚಲನಚಿತ್ರಗಳನ್ನು ನಿರ್ಮಿಸುವುದರಲ್ಲಿ ತೋರಿಸುವ ಕಾಳಜಿಯು ಗುಣಮಟ್ಟದ ಚಿತ್ರಗಳ ನಿರ್ಮಾಣಕ್ಕೆ ನೇರ ಅನುಪಾತದಲ್ಲಿರುತ್ತದೆ."[೨೫] ಅವರು ತಮ್ಮ ವೃತ್ತಿಜೀವನವನ್ನು ಓರ್ವ ನಟನಾಗಿ ಆರಂಭಿಸಿದುದರಿಂದ ಅವರು "ನಟವರ್ಗದ ನಿರ್ದೇಶಕ ," ಎಂದು ಹೆಸರುಗಳಿಸಿದರಲ್ಲದೇ ಹಲವು ವರ್ಷಗಳ ಅವಧಿಯಲ್ಲಿ ನಟರುಗಳಲ್ಲಿ ಅತ್ಯುತ್ತಮರಾದವರೊಂದಿಗೆ ಕಾರ್ಯನಿರ್ವಹಿಸಿದ್ದರು, ಈ ಸರದಿಪಟ್ಟಿಯನ್ನು ಬಹುಶಃ ಇತರೆ ಯಾವುದೇ ನಿರ್ದೇಶಕರೂ ಸರಿಗಟ್ಟಿಲ್ಲ."[೪] ಇದನ್ನು ಒಪ್ಪುವ ನಟನಾ ವಿದ್ವಾಂಸ ಫ್ರಾಂಕ್‌ P. ಟೊಮಾಸುಲೋರವರು ಓರ್ವ ನಟನ ದೃಷ್ಟಿಕೋನದಿಂದ ನಟನೆಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದ್ದ ಹಲವು ನಿರ್ದೇಶಕರೆಲ್ಲೂ "ಅತ್ಯುತ್ತಮ ಸಂವಹನಕಾರರಾಗಿದ್ದರು" ಎಂದು ಎತ್ತಿ ತೋರಿಸುತ್ತಾರೆ."[೨೬]

ಗೆರಾಲ್ಡ್‌ ಮ್ಯಾಸ್ಟ್‌‌ ಮತ್ತು ಬ್ರೂಸ್‌ ಕ್ಯಾವಿನ್‌ ಎಂಬ ಚಲನಚಿತ್ರ ಇತಿಹಾಸಕಾರರುಗಳ ಪ್ರಕಾರ, ನಟರುಗಳ ಬಗ್ಗೆ ಹಾಗೂ ಮಹಾನಗರದ ಮಿಡಿತದ ಬಗ್ಗೆ ಲ್ಯೂಮೆಟ್‌ರು ಹೊಂದಿದ್ದ ಸೂಕ್ಷ್ಮಜ್ಞತೆಯು ಅವರನ್ನು " ದೀರ್ಘಕಾಲ ಜೀವಿಸಿದ ಅಮೇರಿಕಾದ ೧೯೫೦ರ ದಶಕದ ನವ-ವಾಸ್ತವಿಕತಾವಾದಿ ಸಂಪ್ರದಾಯ ಮತ್ತು ಅದರ ಋಜುಮಾರ್ಗವನ್ನನುಸರಿಸುವ ತ್ವರಿತ ಬದ್ಧತೆಯ ಅನುಸರಣೆಗಾರರನ್ನಾಗಿಸಿತ್ತು."[೨೭] ಆತನ ಆರಂಭಿಕ ಚಿತ್ರವಾದ ದ ಹಿಲ್‌‌ (೧೯೬೫)ಅನ್ನು "೧೯೬೦ರ ದಶಕದ ಬಹುತೇಕ ರಾಜಕೀಯವಾಗಿ ಮತ್ತು ನೈತಿಕವಾಗಿ ತೀವ್ರಗಾಮಿಯಾದ ಚಲನಚಿತ್ರಗಳಲ್ಲಿ ಒಂದೆಂದು " ಉದ್ಧರಿಸುತ್ತಾರೆ."

ಲ್ಯೂಮೆಟ್‌ರ ಚಲನಚಿತ್ರಗಳಲ್ಲಿ ಪ್ರಸ್ತಾಪಿತವಾದ ಸಾಮಾಜಿಕ ಘರ್ಷಣೆಗಳು ತಮ್ಮೊಳಗೆಯೇ "ಮಾನವ ಸಂಬಂಧಗಳಲ್ಲಿ ಪ್ರೀತಿ ಹಾಗೂ ವಿವೇಕಗಳನ್ನು ಅಂತಿಮವಾಗಿ ಮೇಲುಗೈ ಪಡೆದುಕೊಳ್ಳುತ್ತವೆ," ಎಂದೂ ಹಾಗೆ "ಕಾನೂನು ಹಾಗೂ ನ್ಯಾಯಗಳು ಅಂತಿಮವಾಗಿ ಸಲ್ಲಬೇಕಾದವರಿಗೆ ಸಲ್ಲುತ್ತವೆಯೋ ಇಲ್ಲವೋ" ಎಂದು ಪ್ರತಿಪಾದಿಸುತ್ತವೆ ಎಂದು ಅವರು ಹೇಳುತ್ತಾರೆ."[೨೭] ಅವರ ವೃತ್ತಿಪ್ರವೇಶದ ಚಿತ್ರ, ಟ್ವೆಲ್ವ್‌‌ ಆಂಗ್ರಿ ಮೆನ್‌ ಚಿತ್ರವು ತನ್ನ ಕಾಲದಲ್ಲಿ ಅತ್ಯಂತ ಶ್ಲಾಘನೆಗೊಳಪಟ್ಟ ಚಿತ್ರವಾಗಿದ್ದು ಐಸೆನ್‌ಹೋವರ್‌ ಯುಗದಲ್ಲಿನ ಉದಾರವಾದ ವಿವೇಕ ಹಾಗೂ ಸಹಭಾಗಿತ್ವಗಳಿಗೆ ಮಾದರಿಯಾಗಿತ್ತು ; ಅಥವಾ ಎಷ್ಟು ಸುಲಭವಾಗಿ ನ್ಯಾಯಮಂಡಲಿಯೊಂದನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದಾಗಿದೆ ಎಂಬುದನ್ನು ಎಚ್ಚರಿಸುವ ಉದಾಹರಣೆಯೂ ಆಗಿದ್ದಿರಬಹುದು."[೨೮] ಈ ಚಿತ್ರ ಹಾಗೂ ಅದರ ನಿರ್ದೇಶಕರನ್ನು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲಾಗಿತ್ತು. ಲ್ಯೂಮೆಟ್‌ರನ್ನು ಡೈರೆಕ್ಟರ್ಸ್‌‌ ಗಿಲ್ಡ್‌ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲಾಗಿತ್ತಲ್ಲದೇ ಚಿತ್ರವು ವಿಮರ್ಶಕರುಗಳಿಂದ ವ್ಯಾಪಕವಾದ ಪ್ರಶಂಸೆಯನ್ನು ಪಡೆದುಕೊಂಡಿತ್ತು.[೧೦]

ದ ಎನ್‌ಸೈಕ್ಲೋಪೀಡಿಯಾ ಆಫ್‌ ವರ್ಲ್ಡ್‌ ಬಯೋಗ್ರಾಫಿ ಕೃತಿಯು, "ಲೌಕಿಕವಾದ ಆತ್ಮಾವಲೋಕನದಿಂದ ಕೂಡಿದ ಶೈಲಿಯನ್ನು ಹೊಂದಿದ ಹಲವು ವೇಳೆ "ತಾದಾತ್ಮ್ಯ ಅಭಿನಯ"ವನ್ನು ಅಭ್ಯಸಿಸಿದ ಕಲಾವಿದರನ್ನು ಆತನ ಚಲನಚಿತ್ರಗಳಲ್ಲಿ ಕಾಣಬಹುದಿತ್ತು " ಎಂದು ತಿಳಿಸುತ್ತದೆ. ಅಂತಹಾ "ತಾದಾತ್ಮ್ಯ ಅಭಿನಯದ" ನಟರಿಗೆ ಅತ್ಯುತ್ತಮ ಉದಾಹರಣೆಯೆಂದರೆ ತಮ್ಮ ವೃತ್ತಿಜೀವನದ ಆರಂಭದಲ್ಲಿಯೇ ತಾದಾತ್ಮ್ಯ ಅಭಿನಯದ ಗುರು ಲೀ ಸ್ಟ್ರಾಸ್‌ಬರ್ಗ್‌ರಡಿಯಲ್ಲಿ ಅಧ್ಯಯನ ಮಾಡಿದ್ದ ಅಲ್‌ ಪಸೀ/ಕೀನೋ ಆಗಿದ್ದಾರೆ. ಲ್ಯೂಮೆಟ್‌ರು ಸ್ವಾಭಾವಿಕತೆ/ಸ್ವಯಂಪ್ರೇರಿತತೆಗಳನ್ನು ತಮ್ಮ ನಟವರ್ಗದವರು ಹಾಗೂ ಚಿತ್ರಸಜ್ಜಿಕೆಗಳೆರಡರಲ್ಲಿಯೂ ಇರಬೇಕೆಂಬ ಒಲವನ್ನು ಹೊಂದಿದ್ದರೆಂಬುದನ್ನು "ತನ್ನ ಕೃತಿಗಳಲ್ಲಿ ಹಲವನ್ನು ಬಹುಮಟ್ಟಿಗೆ ಆಯಾ ಸ್ಥಳಗಳಲ್ಲಿಯೇ ಚಿತ್ರೀಕರಿಸಿರುವುದರ ಮೂಲಕ ಗಳಿಸಿಕೊಂಡ ಸುಧಾರಿತ ನೋಟ"ವು ಪ್ರತಿಪಾದಿಸುತ್ತದೆ."[೨೯]

ತಾಲೀಮು ಮತ್ತು ಪೂರ್ವಸಿದ್ಧತೆ[ಬದಲಾಯಿಸಿ]

ಲ್ಯೂಮೆಟ್‌ರು ತಾಲೀಮಿನ ಬಗ್ಗೆ ದೃಢವಾದ ನಂಬಿಕೆಯಿದ್ದವರಾಗಿದ್ದು, ತಾನು ಸರಿಯಾದ ರೀತಿಯಲ್ಲಿ ತಾಲೀಮನ್ನು ನಡೆಸಿದ್ದರೆ ನಟನು ಸ್ವಾಭಾವಿಕತೆ/ಸ್ವಯಂಪ್ರೇರಿತತೆಯನ್ನು ಕಳೆದುಕೊಳ್ಳುವ ಯಾವುದೇ ಸಾಧ್ಯತೆಯಿರುವುದಿಲ್ಲ. ನಟನಾ ಕೃತಿಕರ್ತ ಇಯಾನ್‌ ಬರ್ನಾರ್ಡ್‌ರ ಪ್ರಕಾರ, ತನ್ನ ಭಾವನೆ ಏನೆಂದರೆ ಇದು ನಟರಿಗೆ "ಪಾತ್ರದ ಸಂಪೂರ್ಣ ಪಥವನ್ನು ಸ್ಪಷ್ಟಪಡಿಸಿರುತ್ತವೆ," ಇದರಿಂದಾಗಿ ಅವರುಗಳು ಆ ಒಂದು ನಿರ್ದಿಷ್ಟ "ಮನಮೋಹಕವಾದ ಅನಿರೀಕ್ಷಿತತೆಯನ್ನು" ಕಂಡುಕೊಳ್ಳುವ ಸ್ವಾತಂತ್ರ್ಯವನ್ನು ಕೊಡುತ್ತದೆ."[೩೦] ನಿರ್ದೇಶಕ ಪೀಟರ್‌ ಬೊಗ್ಡಾನೊವಿಚ್‌ರು ಒಮ್ಮೆ ಅವರಿಗೆ ನೀವು ಭಾರೀ ಪ್ರಮಾಣದಲ್ಲಿ ತಾಲೀಮನ್ನು ಮಾಡುತ್ತೀರಾ ಎಂದು ಕೇಳಿದಾಗ ಲ್ಯೂಮೆಟ್‌ ಹೀಗೆ ಉತ್ತರಿಸಿದ್ದರು "ನಾನು ಕನಿಷ್ಟ ಚಿತ್ರೀಕರಿಸಲಿರುವುದಕ್ಕಿಂತ ಎರಡು ವಾರಗಳ ಮುಂಚೆಯೇ ತಾಲೀಮನ್ನು ನಡೆಸಿರಲಿಚ್ಛಿಸುತ್ತೇನೆ."[೪]

ಅವರು ತ್ವರಿತ ಗತಿಯಲ್ಲಿ ನಿರ್ಮಾಣವನ್ನು ಯೋಜಿಸಲು ಹಾಗೂ ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದುದರಿಂದ ಅವರು ಸತತವಾಗಿ ತಾವು ನಿಗದಿಪಡಿಸಿಕೊಂಡಿದ್ದ ಮಿತ ವೆಚ್ಚದಲ್ಲಿಯೇ ಚಿತ್ರವನ್ನು ಮುಗಿಸಲು ಸಾಧ್ಯವಾಗುತ್ತಿತ್ತು. ಉದಾಹರಣೆಗೆ ಪ್ರಿನ್ಸ್‌ ಆಫ್‌ ದ ಸಿಟಿ ಯ ಚಿತ್ರೀಕರಣದಲ್ಲಿ, ೧೩೦ಕ್ಕಿಂತಲೂ ಹೆಚ್ಚಿನ ಸಂಭಾಷಣೆಯ ಪಾತ್ರಗಳು ಹಾಗೂ ೧೩೫ ಬೇರೆ ಬೇರೆ ತಾಣಗಳಿದ್ದರೂ ಅವರು ಇಡೀ ಚಿತ್ರೀಕರಣವನ್ನು ೫೨ ದಿನಗಳಲ್ಲಿಯೇ ಪೂರ್ಣಗೊಳಿಸಲು ಸಾಧ್ಯವಾಗಿತ್ತು. ಇದರ ಪರಿಣಾಮವಾಗಿ ಇತಿಹಾಸಕಾರರುಗಳಾದ ಚಾರ್ಲ್ಸ್‌ ಹಾರ್ಪೋಲ್‌‌ ಮತ್ತು ಥಾಮಸ್‌ ಸ್ಕಾಟ್ಜ್‌ ರವರುಗಳು ಹೀಗೆಂದು ಬರೆಯುತ್ತಾರೆ, "ನಟರುಗಳ ಅತ್ಯುತ್ತಮ ನಿರ್ದೇಶಕ"ರೆಂದು ಆತನನ್ನು ಪರಿಗಣಿಸುತ್ತಿದ್ದುದರಿಂದ ಅತ್ಯುತ್ತಮ ಪ್ರತಿಭಾವಂತ ನಟರು ಅವರೊಂದಿಗೆ ಕಾರ್ಯನಿರ್ವಹಿಸಲು ಹಾತೊರೆಯುತ್ತಿದ್ದರು." ನಂತರ ಮುಂದುವರೆಸುವ ಅವರು "ಹಲವು ನಿರ್ದೇಶಕರು ತಾಲೀಮುಗಳನ್ನು ಕೈಗೊಳ್ಳುವುದನ್ನು ಅಥವಾ ನಟರುಗಳಿಗೆ ತಮ್ಮ ಪಾತ್ರವನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಲಹೆ ನೀಡುವುದನ್ನು ಇಷ್ಟಪಡದಿದ್ದರೂ, ಲ್ಯೂಮೆಟ್‌ ಎರಡರಲ್ಲೂ ಶ್ರೇಷ್ಠತೆಯನ್ನು ಗಳಿಸಿಕೊಂಡಿದ್ದರು" ಎಂದು ಸೂಚಿಸುತ್ತಾರೆ."[೨೫] ಇದರ ಪರಿಣಾಮವಾಗಿ, ಅವರು ತಮ್ಮ ಕಲಾವಿದರಿಗೆ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಚಲನಚಿತ್ರಿಕ ವೇದಿಕೆಯನ್ನೊದಗಿಸಿಕೊಡುತ್ತಿದ್ದರಲ್ಲದೇ ಅವರು ತಮ್ಮ ನಟನಾ ಕೌಶಲ್ಯದ ಕೊಡುಗೆಯನ್ನು ಇನ್ನಷ್ಟು ಹರಿತಗೊಳಿಸುವ ಅವಕಾಶ ನೀಡಲು ಅವರಿಗೆ ಸಾಧ್ಯವಾಗಿರುತ್ತಿತ್ತು. ಡೆತ್‌‌ಟ್ರ್ಯಾಪ್‌‌ ಚಲನಚಿತ್ರದಲ್ಲಿ ಸಹನಟರಾಗಿದ್ದ ನಟ ಕ್ರಿಸ್ಟೋಫರ್‌ ರೀವ್‌‌, ಲ್ಯೂಮೆಟ್‌ರಿಗೆ "ತಾಂತ್ರಿಕ ಭಾಷೆಯನ್ನು ಹೇಗೆ ಮಾತನಾಡಬೇಕೆಂದು ಗೊತ್ತಿತ್ತು — ನೀವು ಆ ರೀತಿಯ ಕೆಲಸವನ್ನು ಮಾಡಬೇಕೆಂದಿದ್ದರೆ — ಅವರಿಗೆ ತಾದಾತ್ಮ್ಯತೆಯ ಬಗ್ಗೆ ಹೇಗೆ ಮಾತನಾಡಬೇಕೆಂದು ಗೊತ್ತಿತ್ತು, ಅದನ್ನು ಹೇಗೆ ಸುಧಾರಿಸಬೇಕೆಂದೂ ತಿಳಿದಿತ್ತು ಹಾಗೂ ಅವರು ಇವೆರಡನ್ನೂ ಅಷ್ಟೇ ಉತ್ತಮವಾಗಿಯೇ ನಿಭಾಯಿಸುತ್ತಿದ್ದರು."[೪]

ದ ವರ್ಡಿಕ್ಟ್‌ ನ ಚಿತ್ರೀಕರಣದ ಬಗ್ಗೆ ಬರೆಯುತ್ತಾ ಜೊವಾನ್ನಾ ರ್ರ್ಯಾಪ್‌ಫ್‌ರು ಲ್ಯೂಮೆಟ್‌ರು ತಮ್ಮ ನಟರುಗಳ ಬಗ್ಗೆ ಸಾಕಷ್ಟು ವೈಯಕ್ತಿಕ ಗಮನವನ್ನು ಕೊಡುತ್ತಾರೆ, "ಅವರ ಮಾತುಗಳನ್ನು ಕೇಳುತ್ತಾ, ಅವರ ಮನಮುಟ್ಟುವಂತೆ ನಡೆದುಕೊಳ್ಳುತ್ತಾರೆ" ಎಂದು ಹೇಳುತ್ತಾರೆ. ಚಿತ್ರೀಕರಿಸಬೇಕಾಗಿದ್ದ ಪ್ರಮುಖ ದೃಶ್ಯದ ಬಗ್ಗೆ ಚಿತ್ರಿಸಲು ಹೇಗೆ ಪ್ರಮುಖ ಚಿತ್ರೀಕರಣಸ್ಥಾನದಿಂದ ಪ್ರತ್ಯೇಕವಾಗಿದ್ದ ಅಡ್ಡಣಿಗೆಯ ಮೇಲೆ ಲ್ಯೂಮೆಟ್‌ ಹಾಗೂ ತಾರಾನಟ ಪಾಲ್‌ ನ್ಯೂಮನ್‌ ಕುಳಿತಿದ್ದರು ಹಾಗೂ ಅಲ್ಲಿ ನ್ಯೂಮನ್‌ರು ತಮ್ಮ ಕಾಲಿನಲ್ಲಿದ್ದ ಪಾದರಕ್ಷೆಗಳನ್ನು ತೆಗೆದಿಟ್ಟು ಗಮನವಿಟ್ಟು ಕೇಳುತ್ತಿದ್ದರು ಎಂದು ಆಕೆ ವರ್ಣಿಸುತ್ತಾರೆ. . . . ಚಿತ್ರೀಕರಣವು ಆರಂಭವಾಗುವ ಮುನ್ನವೇ ನಟವರ್ಗವು ತಮ್ಮ ದೃಶ್ಯಗಳನ್ನು ಆದ್ಯಂತವಾಗಿ ತಿಳಿದುಕೊಂಡಿರುತ್ತಾರೆ. ಈ ರೀತಿಯ ಪೂರ್ವಸಿದ್ಧತೆಗೆ ಕಾರಣವೆಂದರೆ ಲ್ಯೂಮೆಟ್‌ರು ಒಂದು ದೃಶ್ಯದ ಚಿತ್ರೀಕರಣವನ್ನು ಒಂದೇ ಬಾರಿಗೆ ಹೆಚ್ಚೆಂದರೆ ಎರಡು ಬಾರಿಯಲ್ಲಿ ಪೂರೈಸಲು ಇಚ್ಛಿಸುತ್ತಾರೆ. "ನಾನು ಅವರನ್ನು "ಸ್ಪೀಡಿ ಗಾಂಜಾಲಿಸ್‌ ಎಂದು ಕರೆಯುವೆ," ವೇಶ್ಯಾಗೃಹದ ಮುಂದೆ ಪಕ್ಕ ನಿಲುಗಡೆ ಮಾಡುವ ನನಗೆ ತಿಳಿದಿರುವ ಏಕೈಕ ಪುರುಷ" ಎಂದು ಖಾಸಗಿಯಾಗಿ ಪಾಲ್‌ ನ್ಯೂಮನ್‌ರನ್ನು ಆಡಿಕೊಳ್ಳುತ್ತಾಳೆ. "ಅವರು ತಾನು ಮಾಡಬೇಕೆಂದಿರುವುದಕ್ಕಿಂತ ಹೆಚ್ಚಿನ ಬಾರಿ ಚಿತ್ರೀಕರಣ ನಡೆಸುವ ಬಗ್ಗೆ ವಿಪರೀತ ಕೋಪ ತೋರಿಸುತ್ತಾರೆ. ಅವರು ತಮಗೆ ತಾವು ಯಾವುದೇ ರಕ್ಷಣೆಯನ್ನು ಪಡೆದುಕೊಳ್ಳುವುದಿಲ್ಲ. ನನಗೆ ಗೊತ್ತು, ನಾನು ತೆಗೆದುಕೊಳ್ಳುತ್ತೇನೆ" ಎಂದು ನ್ಯೂಮನ್‌ ಸೇರಿಸುತ್ತಾರೆ.[೪] ಇದಕ್ಕೆ ಸಮ್ಮತಿಸುವ ಚಿತ್ರ ವಿಮರ್ಶಕ ಬೆಟ್ಸೆ ಷಾರ್ಕೆ, " ಕ್ಲಿಂಟ್‌ ಈಸ್ಟ್‌ವುಡ್‌‌ರು ಗಮನಾರ್ಹ ವಿಶೇಷ ವ್ಯಕ್ತಿ ಎಂದೆನಿಸಿಕೊಳ್ಳುವ ವರ್ಷಗಳ ಮೊದಲೆಯೇ ಇವರು ಒಂದು ಅಥವಾ ಎರಡು ಬಾರಿಗಳಲ್ಲಿಯೇ ಚಿತ್ರೀಕರಣ ಮುಗಿಸುವ ಉತ್ಕೃಷ್ಠ ನಿರ್ದೇಶಕರಾಗಿದ್ದರು" ಎಂದು ಅದಕ್ಕೆ ಸೇರಿಸುತ್ತಾರೆ. ಷಾರ್ಕೆಯವರು ಒಮ್ಮೆ "[ಫಾಯೇ] ಡನ್‌ಅವೇ ತಿರುಗು ಚಕ್ರದ ಸ್ಕೇಟ್‌ಗಳ ಮೇಲಿರುವಷ್ಟು ವೇಗದಿಂದ ಲ್ಯೂಮೆಟ್‌ರು ಕಾರ್ಯನಿರ್ವಹಿಸುತ್ತಿದ್ದರು. ಒಂದು ವಿಶಾಲವಾದ ಹೃದಯದಿಂದ ಉತ್ಪಾದಿತವಾದ ವೇಗವರ್ಧಕ ತುಡಿತ ಅದಾಗಿತ್ತು ಎಂದು ಹೇಳಿದ್ದರು" ಎಂದು ಸ್ಮರಿಸುತ್ತಾರೆ."[೩೧]

ಪಾತ್ರವರ್ಗದ ಬೆಳವಣಿಗೆ[ಬದಲಾಯಿಸಿ]

ಜೀವನಚರಿತ್ರೆಕಾರ ಜೊವಾನ್ನಾ ರ್ರ್ಯಾಪ್‌ಫ್‌ರು ಲ್ಯೂಮೆಟ್‌ರು ಯಾವಾಗಲೂ "ಸ್ವತಂತ್ರ ನಿರ್ದೇಶಕ"ರಾಗಿದ್ದರು ಹಾಗೂ ಯಾವಾಗಲೂ "ವ್ಯವಸ್ಥೆಯನ್ನು ಎದುರಿಸಿ ನಿಲ್ಲುವ ಕೆಚ್ಚೆದೆಯನ್ನು ಬೆಳೆಸಿಕೊಳ್ಳುವ ವ್ಯಕ್ತಿಗಳನ್ನು ಕುರಿತು, ದೊಡ್ಡ ವ್ಯವಸ್ಥೆಯನ್ನು ವಿರೋಧಿಸುವ ಸಾಧಾರಣ ವ್ಯಕ್ತಿಯ ಕುರಿತು "ಚಲನಚಿತ್ರಗಳನ್ನು ನಿರ್ಮಿಸಲು ಉತ್ಸುಕರಾಗಿದ್ದರು ಎಂದು ಸೂಚಿಸುತ್ತಾರೆ."[೪]: Intro  ಇದು ಗಾರ್ಬೋ ಟಾಕ್ಸ್‌ ನಂತಹಾ ಆತನ ಚಲನಚಿತ್ರಗಳಲ್ಲಿನ ಮಹಿಳಾ ಪಾತ್ರಗಳನ್ನೂ ಒಳಗೊಂಡಿದೆ. "ಲ್ಯೂಮೆಟ್‌ರು ಆಕರ್ಷಿಕರಾಗುವಂತಹಾ ರೀತಿಯ ಪಾತ್ರವನ್ನು ಆನ್ನೆ ಬ್ಯಾನ್‌ಕ್ರಾಫ್ಟ್‌ ಒಳಗೊಂಡಿದೆ — ಎಲ್ಲಾ ರೀತಿಯ ಅನ್ಯಾಯಗಳ ವಿರುದ್ಧ ಸಿಡಿದೇಳುವ ಓರ್ವ ಬದ್ಧತೆಯುಳ್ಳ ಕ್ರಿಯಾವಾದಿಯಾದ ಆಕೆ, ತುಳಿತಕ್ಕೊಳಗಾದವರ ಹಕ್ಕುಗಳ ಬಗ್ಗೆ ಎದ್ದುನಿಂತು ಹೋರಾಡುವ, ಚಟುವಟಿಕಾಶೀಲ, ಖಂಡಿತವಾದಿ, ಧೈರ್ಯಶಾಲಿ, ಅನುಕೂಲಕ್ಕೆ ಸರಿಯಾಗಿ ಬದಲಾಗುವುದನ್ನು ವಿರೋಧಿಸುವ ಹಾಗೂ ತಾನು ಜೀವನವನ್ನು ಅರ್ಥಮಾಡಿಕೊಂಡಿರುವ ರೀತಿಯು ತನಗೆ ಘನತೆಯಿಂದಲೇ ಮರಣಿಸುವ ಅವಕಾಶ ನೀಡುತ್ತದೆ ಎಂದು ಭಾವಿಸುತ್ತಾಳೆ ... ಗಾರ್ಬೋ ಟಾಕ್ಸ್‌ ಅನೇಕ ವಿಧಗಳಲ್ಲಿ ನ್ಯೂಯಾರ್ಕ್‌ ನಗರಕ್ಕೆ ಒಂದು ವ್ಯಾಲೆಂಟೈನ್‌‌ನಂತಿದೆ."[೪]

೨೦೦೬ರಲ್ಲಿ ನಡೆದ ಸಂದರ್ಶನದುದ್ದಕ್ಕೂ ಅವರು ಹೀಗೆ ಪುನರುಚ್ಚರಿಸಿದ್ದರು "ತೀವ್ರಾಸಕ್ತಿಗಳು ಮತ್ತು ಬದ್ಧತೆಗಳನ್ನು ಅನುಸರಿಸುವಲ್ಲಿ ಒಳಗೊಳ್ಳುವ ಮಾನವ ಶಕ್ತಿಯ ವ್ಯಯ ಹಾಗೂ ಅಂತಹಾ ತೀವ್ರಾಸಕ್ತಿಗಳು ಮತ್ತು ಬದ್ಧತೆಗಳು ಇತರರ ಮೇಲೆ ಹೇರುವ ವ್ಯಯಗಳನ್ನು ಕಂಡು ವಿಸ್ಮಿತರಾಗಿದ್ದರು." ರ್ರ್ಯಾಪ್‌ಫ್‌ "ನ್ಯೂಯಾರ್ಕ್‌ ಮಹಾನಗರದ ಆರಕ್ಷಕ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗೆಗಿನ ಕಥೆಗಳು ಹಾಗೂ ಡ್ಯಾನಿಯೆಲ್‌ ನಂತಹಾ ಕೌಟುಂಬಿಕ ರೂಪಕಗಳೂ ಒಳಗೊಂಡಂತೆ " ಇವೇ ಅವರ ಚಲನಚಿತ್ರಗಳ ಕೇಂದ್ರ ವಿಷಯವಸ್ತುವಾಗಿವೆ ಎಂದು ಸೂಚಿಸುತ್ತಾರೆ.

ಮನೋವೈಜ್ಞಾನಿಕ ರೂಪಕಗಳು[ಬದಲಾಯಿಸಿ]

ಚಲನಚಿತ್ರ ಇತಿಹಾಸಕಾರ ಸ್ಟೀಫನ್‌ ಬೌಲ್ಸ್‌ರ ಪ್ರಕಾರ, ಲ್ಯೂಮೆಟ್‌ರು ತಮ್ಮನ್ನು ತಾವು "ಗಂಭೀರ ಮನೋವೈಜ್ಞಾನಿಕ ರೂಪಕಗಳ ನಿರ್ದೇಶಕರಾಗಿ ಸಾಬೀತುಪಡಿಸಿದ್ದು ಅದೇ ತಮಗೆ ಪರಿಣಾಮಕಾರಿ ಹಾಗೂ ಹೆಚ್ಚು ಹಿತಕರವೆಂಬ ಭಾವನೆಯುಳ್ಳವರು ಹಾಗೂ ಹಗುರ ಮನೋರಂಜಕ ಚಿತ್ರಗಳನ್ನು ಪ್ರಯತ್ನಿಸುವಾಗ ಅವರು ಬಹುಮಟ್ಟಿಗೆ ಎಡವುವ ಸಾಧ್ಯತೆಗಳಿರಬಹುದು. ಅವರ ಮೊದಲ ಚಿತ್ರ ಟ್ವೆಲ್ವ್‌‌ ಆಂಗ್ರಿ ಮೆನ್‌ ನಿಂದ ಹಿಡಿದು ದ ವರ್ಡಿಕ್ಟ್‌ ನವರೆಗೆ ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನವನ್ನು ಹೊಂದಿದ ಅವರ ಎಲ್ಲಾ ಚಿತ್ರಗಳು, ಉದಾಹರಣೆಗೆ ಸಮಸ್ಯೆಯಲ್ಲಿರುವ ವ್ಯಕ್ತಿಗಳ ವ್ಯಕ್ತಿಚಿತ್ರಣಗಳನ್ನೇ ಹೊಂದಿದ್ದವು. ಲ್ಯೂಮೆಟ್‌ರು ಅಕ್ಷರಶಃ ನಾಟಕ/ರಂಗಭೂಮಿಯ ಒಂದು ಮಗುವಾಗಿದ್ದರು." "ಲ್ಯೂಮೆಟ್‌ರ ಚಿತ್ರಪಟದ ಬಹುತೇಕ ಎಲ್ಲಾ ಪಾತ್ರಗಳೂ ನ್ಯಾಯ,ಪ್ರಾಮಾಣಿಕತೆ ಹಾಗೂ ಸತ್ಯಗಳ ಅರಸುವಿಕೆಯಿಂದ ಹಿಡಿದು ಅಸೂಯೆ, ನೆನಪು ಅಥವಾ ತಪ್ಪಿತಸ್ಥತೆಗಳ ಬಿಗಿಹಿಡಿತಗಳವರೆಗೆ ಗೀಳು ಅಥವಾ ತೀವ್ರಾಸಕ್ತಿಗಳಿಂದ ಪ್ರೇರಿತರಾಗಿರುತ್ತಿರುತ್ತಿದ್ದರು. ಅದೆಷ್ಟೇ ಇದ್ದರೂ ಅವರ ಸ್ಥಿರೀಕರಣೆಗಳ ವಿಷಯವಸ್ತುವಿನ ಬದಲಿಗೆ ಅವರ ಗೀಳಿನ ಪರಿಸ್ಥಿತಿಯೇ ಲ್ಯೂಮೆಟ್‌ರ ಆಸಕ್ತಿಯನ್ನು ಹೆಚ್ಚು ಕೆರಳಿಸುತ್ತಿದ್ದುದು" ಎಂದು ಸೂಚಿಸುತ್ತಾರೆ."[೧೬]

ಆದ್ದರಿಂದ ಬೌಲ್ಸ್‌ ಹೇಳುತ್ತಾರೆ, "ಲ್ಯೂಮೆಟ್‌ರ ಕಥಾನಾಯಕರು ಒಂದು ಸಮೂಹ/ಗುಂಪು ಅಥವಾ ಸಂಸ್ಥೆಯನ್ನು ವಿರೋಧಿಸುವ ಒಬ್ಬಂಟಿಗರಾಗಿರುವ ಸಾಧಾರಣ ವ್ಯಕ್ತಿಗಳೇ ಆಗಿರುತ್ತಿದ್ದರು. ಕಥಾನಾಯಕನು ನ್ಯಾಯಾಸ್ಥಾನದ ಸದಸ್ಯನೇ ಆಗಿರಲಿ ಅಥವಾ ವಿಫಲಗೊಂಡ ದರೋಡೆಯ ಭಾಗಿಯೇ ಆಗಿರಲಿ ಆತನು ತನ್ನದೇ ಆದ ಅಂತಃಪ್ರೇರಣೆ ಹಾಗೂ ಒಳಅರಿವುಗಳನ್ನೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಸುತ್ತಾನೆ. ಲ್ಯೂಮೆಟ್‌ರ ಅತ್ಯಂತ ಪ್ರಮುಖ ಮಾನದಂಡವು ಈ ವ್ಯಕ್ತಿಗಳ ಕೃತ್ಯಗಳು ಸರಿಯೋ ಅಥವಾ ತಪ್ಪೋ ಎಂದಲ್ಲ ಬದಲಿಗೆ ಅವರ ಕೃತ್ಯಗಳು ಯಥಾರ್ಥವಾದ/ನಿಷ್ಕಪಟವಾದವೇ ಎಂಬುದಾಗಿದೆ. ಈ ಕೃತ್ಯಗಳನ್ನು ಓರ್ವನ ಮನಸ್ಸಾಕ್ಷಿಗೆ ಒಪ್ಪಿಗೆಯಾಗುವುದಾದರೆ, ಅದು ಆತನ ನಾಯಕರುಗಳಿಗೆ ಒತ್ತಡಗಳು, ದೂಷಣೆಗಳು ಹಾಗೂ ಇತರರ ಅನ್ಯಾಯಗಳನ್ನು ಸಹಿಸಿಕೊಳ್ಳುವ ಅಸಾಮಾನ್ಯ ಶಕ್ತಿಯನ್ನು ಹಾಗೂ ಧೈರ್ಯವನ್ನು ತಂದುಕೊಡುತ್ತದೆ. ಉದಾಹರಣೆಗೆ ಫ್ರಾಂಕ್‌ ಸರ್ಪಿಕೋ, ಸಮಾನಸ್ಕಂಧರ ಗುಂಪುಗಳ ಅಧಿಕಾರವನ್ನು ಪ್ರತಿಭಟಿಸುವುದು ಹಾಗೂ ತಮ್ಮದೇ ಆದ ನೈತಿಕ ಮೌಲ್ಯಗಳ ಸ್ವಂತ ಸಂಹಿತೆಯ ಪ್ರತಿಪಾದನೆಯನ್ನು ಮಾಡುವಲ್ಲಿ ಅತ್ಯುತ್ಕೃಷ್ಟ ಲ್ಯೂಮೆಟ್‌ ನಾಯಕನಾಗಿರುತ್ತಾನೆ."[೧೬] ಲ್ಯೂಮೆಟ್‌ ತನ್ನ ಆತ್ಮಚರಿತ್ರೆಯಲ್ಲಿ ಸರ್ಪಿಕೋ ಚಲನಚಿತ್ರವನ್ನು "ನಿರ್ದಿಷ್ಟವಾದ ಧ್ಯೇಯವೊಂದನ್ನು ಹೊಂದಿರುವ ನಿಜವಾದ ಬಂಡಾಯಗಾರನ ಚಿತ್ರಣ" ಎಂದು ವರ್ಣಿಸಿದ್ದಾರೆ."[೩೨]

ಸಾಮಾಜಿಕ ನ್ಯಾಯದ ವಿವಾದಗಳು[ಬದಲಾಯಿಸಿ]

ಟ್ಯೂನರ್‌ ಕ್ಲಾಸಿಕ್‌ ಮೂವೀಸ್‌ ಸಂಸ್ಥೆಯು "ಲ್ಯೂಮೆಟ್‌ರನ್ನು ವಾಸ್ತವವಾಗಿ ಪ್ರತಿಬಿಂಬಿಸಿದ ಆತನ ಉತ್ಕೃಷ್ಟ ಕೃತಿಗಳಲ್ಲಿ ಹರಡಿರುವುದು ಸಾಮಾಜಿಕ ವಾಸ್ತವಿಕತೆಯೇ ಆಗಿದೆ — ಭ್ರಷ್ಟಾಚಾರದಿಂದ ತುಳಿತಕ್ಕೊಳಗಾಗಿರುವ ಯುವಸಮೂಹದ ಆದರ್ಶಗಳು ಮತ್ತು ದುರ್ಬಲ ಸಾಮಾಜಿಕ ಸಂಸ್ಥೆಗಳ ಅಸಹಾಯಕತೆಗಳ ವಿಷಯಸೂಚಿಗಳು ಇತರೆ ಯಾವುದೇ ನಿರ್ದೇಶಕರು ನಿರ್ಮಿಸಲಾರದಂತಹಾ ಮೊನಚಾದ ಹಾಗೂ ಪ್ರಬಲ ಚಲನಚಿತ್ರಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಟ್ಟವು."[೨] ಸರ್ಪಿಕೋ ವು (೧೯೭೩) ೧೯೭೦ರ ದಶಕದಲ್ಲಿ "ತಮ್ಮ ತಲೆಮಾರಿನ ಅತ್ಯುತ್ತಮ ಚಿತ್ರನಿರ್ಮಾಣಕಾರರಲ್ಲಿ ಒಬ್ಬರನ್ನಾಗಿಸಿದ "ಅವರು ನಿರ್ದೇಶಿಸಿದ ನಾಲ್ಕು "ಮೂಲಭೂತ" ಚಲನಚಿತ್ರಗಳಲ್ಲಿ ಮೊದಲನೆಯದಾಗಿದೆ." ಈ ಚಿತ್ರವು "ಭ್ರಷ್ಟಾಚಾರದ ಮುಂದೆ ನಿರ್ದೋಷತ್ವವು ಕಳೆದುಹೋಗುತ್ತದೆ ಎಂಬ ಕಲ್ಪನೆಯೊಂದಿಗೆ" ನ್ಯೂಯಾರ್ಕ್‌ ಮಹಾನಗರದ ಆರಕ್ಷಕ ದಳದ ಪ್ರಾಬಲ್ಯ/ಅಧಿಕಾರ ಮತ್ತು ವಿಶ್ವಾಸಘಾತಕತನದ ಕಥೆಯಾಗಿದೆ." ಈ ಚಿತ್ರವು "ಓರ್ವ ಆದರ್ಶನಿಷ್ಠ ಏಕಾಕಿ ವ್ಯಕ್ತಿ ಸರಿಪಡಿಸಲು ಅಸಾಧ್ಯವೆನ್ನಿಸುವಂತಹಾ ಅವ್ಯವಸ್ಥೆಯ ವಿರುದ್ಧ ಹೋರಾಡುತ್ತಿರುವ" ಆರಕ್ಷಕರು, ನ್ಯಾಯವಾದಿಗಳು ಹಾಗೂ ಬೀದಿಬದಿಯ ಅಪರಾಧಿಗಳ ಒಳಜಗತ್ತನ್ನು ಚಿತ್ರಿಸಲು ಲ್ಯೂಮೆಟ್‌ ಬಳಸುವ ಒಂದು ನೀಲನಕ್ಷೆಯಾಗಿ ಬಿಟ್ಟಿತು."[೨]

"ಅಮೇರಿಕದ ಕೈಗಾರಿಕಾ ಕುಸಿತದ ಪರಿಣಾಮವಾಗಿ ನ್ಯೂಯಾರ್ಕ್‌ ಮಹಾನಗರದಲ್ಲಿ ತನ್ನ ಸುತ್ತಮುತ್ತ ಕೇವಲ ಬಡತನ ಹಾಗೂ ಭ್ರಷ್ಟಾಚಾರಗಳೊಂದಿಗೆ ಸುತ್ತುವರೆಯಲ್ಪಟ್ಟಿದ್ದ ಲ್ಯೂಮೆಟ್‌ರು ಪ್ರಜಾಪ್ರಭುತ್ವಕ್ಕೆ ನ್ಯಾಯವನ್ನೊದಗಿಸುವುದರ ಮಹತ್ವವನ್ನು ಮನಗಂಡರು ಎಂದು ಜೊವಾನ್ನಾ ರ್ರ್ಯಾಪ್‌ಫ್‌ ಬರೆಯುತ್ತಾರೆ. ಅವರು ಸಮಾಜವು ಇದು 'ಸರಿ' ಇದು 'ತಪ್ಪು' ಎಂದು ಪರಿಗಣಿಸುವ ವಸ್ತುಗಳು, ಜನರು, ಸಂಸ್ಥೆಗಳನ್ನು ಪ್ರಶ್ನಿಸುವುದನ್ನು ಇಷ್ಟಪಡುತ್ತಿದ್ದರು ಎಂದು ಈತ ಹೇಳುತ್ತಾರೆ.'"[೪][೪] ಆದಾಗ್ಯೂ ಕಲೆಯು ಸ್ವತಃ ತಾನೊಂದೇ ಏನನ್ನೇ ಆಗಲಿ ಬದಲಾಯಿಸುವ ಶಕ್ತಿಯನ್ನು ಹೊಂದಿದೆ ಎಂಬ ಭಾವನೆಯನ್ನೇನು ತಾನು ಹೊಂದಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಮನರಂಜನಾ ಉದ್ಯಮದಲ್ಲಿ ಬಹಳಷ್ಟು 'ಹೊಲಸುತನ'ವಿದೆಯೆಂದೂ ಹೇಳುವ ಅವರು ಉತ್ತಮ ಕಾರ್ಯದ ರಹಸ್ಯವೆಂದರೆ ನಿಮ್ಮ ಪ್ರಾಮಾಣಿಕತನ ಹಾಗೂ ನಿಮ್ಮ ಭಾವಾವೇಶವನ್ನು ಕಳೆದುಕೊಳ್ಳದಿರುವುದು ಎನ್ನುತ್ತಾರೆ."[೪]

ಚಲನಚಿತ್ರ ಇತಿಹಾಸಕಾರ ಡೇವಿಡ್‌ ಥಾಮ್ಸನ್‌ ಹೀಗೆಂದು ಬರೆಯುತ್ತಾರೆ "ಅವರು ಸ್ಥಾಯಿಯಾದ ವಿಷಯಸೂಚಿಯನ್ನು ಹೊಂದಿದ್ದರು : ಅವುಗಳೆಂದರೆ ನ್ಯಾಯದ ದೌರ್ಬಲ್ಯ ಮತ್ತು ಆರಕ್ಷಕರು ಹಾಗೂ ಅವರ ಭ್ರಷ್ಟಾಚಾರ".". ಅವರು ಮುಂದುವರೆಸುತ್ತಾ, "ಲ್ಯೂಮೆಟ್‌ರು ತ್ವರಿತವಾಗಿಯೇ ಮನ್ನಣೆಯನ್ನು ಪಡೆದರು ... [ಮತ್ತು ಅವರು] ದೊಡ್ಡದಾದ ಸಮಸ್ಯೆಗಳ ಕುರಿತು ಚಿತ್ರ ಮಾಡುವ ಹವ್ಯಾಸ ಬೆಳೆಸಿಕೊಂಡರು — ಫೇಲ್‌-ಸೇಫ್‌, 'ದ ಪಾನ್‌ ಬ್ರೋಕರ್‌ , ದ ಹಿಲ್‌‌ , — ಹಾಗೂ ನೀರಸತೆ ಹಾಗೂ ಶೋಕಪೂರ್ಣತೆಗಳ ನಡುವೆ ನಲುಗಿದಂತಾಗಿಹೋದರು . ... ನೆಟ್‌ವರ್ಕ್‌ ಚಿತ್ರ ವು ... ಅವರು ನಿರ್ದೇಶಿಸಿದ ಯಶಸ್ವಿತನಕ್ಕೆ ಹತ್ತಿರವಾದ ಹಾಸ್ಯಭರಿತ ಚಲನಚಿತ್ರ. ತನ್ನ ವಿಷಯವಸ್ತುವನ್ನು ಪ್ರಸ್ತುತಪಡಿಸುವುದರಲ್ಲಿ ಸಂತುಷ್ಟನಾದರೂ ಅದರಿಂದ ಬಾಧಿತನಾಗಿರದಂತಿರುವ ಅಥವಾ ಬದಲಾಗದಂತಿರುವ ನಿರ್ದೇಶಕನೆಂಬ ಅವರು ೧೯೭೦ರ ದಶಕದ ಅಪರೂಪದ ವ್ಯಕ್ತಿಯಾಗಿದ್ದರು. ... ನಟರುಗಳ ಬಗ್ಗೆ ಹಾಗೂ ಮಹಾನಗರದ ಮಿಡಿತದ ಬಗ್ಗೆ ಲ್ಯೂಮೆಟ್‌ರು ಹೊಂದಿದ್ದ ಸೂಕ್ಷ್ಮಜ್ಞತೆಯು ಅವರನ್ನು " ದೀರ್ಘಕಾಲ ಜೀವಿಸಿದ ಅಮೇರಿಕಾದ ೧೯೫೦ರ ದಶಕದ ನವ-ವಾಸ್ತವಿಕತಾವಾದಿ ಸಂಪ್ರದಾಯ ಮತ್ತು ಅದರ ಋಜುಮಾರ್ಗವನ್ನನುಸರಿಸುವ ತ್ವರಿತ ಬದ್ಧತೆಯ ಅನುಸರಣೆಗಾರರನ್ನಾಗಿಸಿತ್ತು."[೨೮]

ಸಿನೆಮಾ ನೇಷನ್‌ ಎಂಬ ಚಲನಚಿತ್ರ ನಿಯತಕಾಲಿಕೆಗಾಗಿ ನಡೆಸಿದ ಸಂದರ್ಶನದಲ್ಲಿ ತಮ್ಮ ಪ್ರಧಾನ ಚಿತ್ರವಿಷಯವಸ್ತುಗಳಲ್ಲಿ ಒಂದಾದ ಆರಕ್ಷಕರುಗಳ ಭ್ರಷ್ಟಾಚಾರದ ಬಗ್ಗೆ ಚರ್ಚಿಸುತ್ತಾ ತಮ್ಮ ಭಾವನೆಗಳನ್ನು ಲ್ಯೂಮೆಟ್‌ರು ಹೀಗೆ ಹಂಚಿಕೊಂಡಿದ್ದರು:

I have just finished a movie called Prince of the City. It's a long, complex film and one of the most difficult and satisfying movies I've ever made. It's about a cop informing on other cops ... [It's] not only about informing, however. It is also about cops and the complexity of their lives. I've known a lot of cops, most of whom join the force with a good deal of idealism. They wind up with the highest suicide and alcoholism rates of any profession.[೩೨]

ನ್ಯೂಯಾರ್ಕ್‌ ಮಹಾನಗರದ ಸಜ್ಜಿಕೆಗಳು[ಬದಲಾಯಿಸಿ]

ಲ್ಯೂಮೆಟ್‌ರ ಜೀವನಚರಿತ್ರೆಕಾರ ಜೊವಾನ್ನಾ ರ್ರ್ಯಾಪ್‌ಫ್‌, "ಹಾಲಿವುಡ್‌ದ ಪ್ರಾಬಲ್ಯವನ್ನು ದೂರ ಮಾಡುತ್ತಾ" ಲ್ಯೂಮೆಟ್‌ರು ಯಾವಾಗಲೂ ನ್ಯೂಯಾರ್ಕ್‌ ನಗರವನ್ನೇ ಕಾರ್ಯನಿರ್ವಹಿಸಲು ಆಯ್ದುಕೊಳ್ಳುತ್ತಿದ್ದರು. "ಹಾಲಿವುಡ್‌ಗೆ ಹೋಗಲು" ನಿರಾಕರಿಸುವುದರ ಮೂಲಕ ಅವರು ಶೀಘ್ರದಲ್ಲಿಯೇ ನ್ಯೂಯಾರ್ಕ್‌ನೊಂದಿಗೆ ಬಲವಾಗಿ ಗುರುತಿಸಿಕೊಳ್ಳುವವರಾಗಿ ಮಾರ್ಪಟ್ಟು ತನ್ನ ಚಲನಚಿತ್ರಗಳಲ್ಲಿ ಬಹುಪಾಲನ್ನು ಅಲ್ಲಿಯೇ ಚಿತ್ರೀಕರಿಸಿದ್ದರು. ವುಡೀ ಅಲ್ಲೆನ್‌ರಂತೆಯೇ ತಮ್ಮನ್ನು ಅವರು ಓರ್ವ ನ್ಯೂಯಾರ್ಕರ್‌ ಎಂದು ಗುರುತಿಸಿಕೊಂಡರು. "ನಾನು ಯಾವಾಗಲೂ ವುಡೀ ಅಲ್ಲೆನ್‌ರ ವಿಶ್ವದಲ್ಲಿಯೇ ಇರಲು ಇಚ್ಛಿಸುತ್ತೇನೆ," ಎಂದು ಅವರು ಹೇಳಿದ್ದರು. ಅವರು ಹೀಗೆಂದು ಹೇಳಿಕೊಂಡಿದ್ದರು "ಮಹಾನಗರದ ವೈವಿಧ್ಯತೆ, ಅದರ ಹಲವು ಜನಾಂಗೀಯ ನೆರೆಹೊರೆಗಳು , ಅದರ ಕಲೆ ಮತ್ತು ಅದರ ಅದರ ಅಪರಾಧಪ್ರಪಂಚ, ಅಲ್ಲಿನ ಅದ್ಭುತ ತಂತ್ರಜ್ಞಾನ ಮತ್ತು ಅಲ್ಲಿನ ಭ್ರಷ್ಟಾಚಾರ, ಅದರ ಸೌಂದರ್ಯ ಹಾಗೂ ಅದರ ಕೊಳಕುತನ ಇವೆಲ್ಲವೂ ಒಟ್ಟಾಗಿ ಸೇರಿ ಅವರನ್ನು ಪ್ರೇರೇಪಿಸುತ್ತಿದ್ದವು."[೪] ಒಂದು ದೃಶ್ಯವನ್ನು ಚಿತ್ರಿಸಲು ವಾಸ್ತವತೆಯನ್ನು ಪ್ರತಿದಿನವೂ ಎದುರಿಸುವುದು ಮುಖ್ಯವಾಗಿರುತ್ತದೆ ಎಂದು ಅವರು ಭಾವಿಸಿದ್ದರು. ಲ್ಯೂಮೆಟ್‌ರ ಪಾಲಿಗೆ, "ನ್ಯೂಯಾರ್ಕ್‌ ಸಂಪೂರ್ಣವಾಗಿ ವಾಸ್ತವತೆಯಿಂದ ಕೂಡಿದೆ ; ಹಾಲಿವುಡ್‌ ಒಂದು ಮೋಹಕಲೋಕವಾಗಿದೆ.[೪]

ಚಿತ್ರ ಇತಿಹಾಸಕಾರರಾದ ಸ್ಕಾಟ್‌ ಮತ್ತು ಬಾರ್ಬರಾ ಸೀಗೆಲ್‌ರವರುಗಳ ಪ್ರಕಾರ ಅವರು ನ್ಯೂಯಾರ್ಕ್‌ ನಗರವನ್ನು ತಮ್ಮ "ಅಮೇರಿಕದ ಅಧೋಗತಿಯ ಬಗೆಗಿನ ಪೂರ್ವಾಗ್ರಹದ" ಸಂಕೇತವಾಗಲ್ಲದಿದ್ದರೆ—ಕನಿಷ್ಟ ಹಿನ್ನೆಲೆಯಾಗಿಯಾದರೂ -- ಪದೇ ಪದೇ ಬಳಸಿದ್ದಾರೆ.[೧] ಲ್ಯೂಮೆಟ್‌ರ ಪಾಲಿಗೆ ಮಹಾನಗರದ ಸಜ್ಜಿಕೆಗಳ ಬಗ್ಗೆ ಚರ್ಚಿಸುತ್ತಾ ಬೌಲ್ಸ್‌ ಹೀಗೆಂದು ಸೂಚಿಸುತ್ತಾರೆ, "ಸಂದರ್ಭಕ್ಕೆ ಸಂಬಂಧಿಸಿದ ಹಾಗೆಯೇ, ಲ್ಯೂಮೆಟ್‌ರು ಅಪರಾಧವು ಪಾತ್ರಗಳ ಸಮೂಹಗಳು ಒಟ್ಟಿಗೆ ಒಂದೆಡೆ ಸೇರುವಂತಹಾ ಸಂದರ್ಭವನ್ನು ಸೃಷ್ಟಿಸುವಂತಹಾ ರೀತಿಗೆ ಸತತವಾಗಿ ಆಕರ್ಷಿತರಾಗಿರುತ್ತಿದ್ದರು. ಸಾಧಾರಣವಾಗಿ ಈ ಪಾತ್ರಗಳು ತಾವು ಅರ್ಥಮಾಡಿಕೊಳ್ಳಲೂ ಆಗದ ಅಥವಾ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲೂ ಆಗದ ಆದರೆ ಪರಿಹರಿಸಲು ತಾವೆಲ್ಲರೂ ಗಮನಹರಿಸಲೇ ಬೇಕಾದ ಘಟನೆಗಳ ಸುಳಿಯಲ್ಲಿ ಸಿಲುಕಿಕೊಂಡಿರುತ್ತವೆ."[೧೬]

ನ್ಯೂಯಾರ್ಕ್‌ ನಿಯತಕಾಲಿಕೆಗೆ ನೀಡಿದ ೨೦೦೭ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಅವರನ್ನು ಹೀಗೆ ಕೇಳಲಾಗಿತ್ತು "ನಿಮ್ಮ ಬಹುತೇಕ ಎಲ್ಲಾ ಚಲನಚಿತ್ರಗಳಲ್ಲಿ — ದ ಪಾನ್‌ ಬ್ರೋಕರ್‌ ನಿಂದ ಹಿಡಿದು ಇತ್ತೀಚಿನ ಚಿತ್ರದವರೆಗೆ ಎಲ್ಲವೂ — ಆ ವಿಖ್ಯಾತ ನ್ಯೂಯಾರ್ಕ್‌ನ ಕೆಚ್ಚೆದೆಯನ್ನು/ಸಹಿಷ್ಣುತೆಯ ತೀವ್ರತೆಯನ್ನು ಎತ್ತಿ ತೋರಿಸುತ್ತದೆ. ನಮ್ಮಲ್ಲಿ ಮತ್ತು ಹಾಲಿವುಡ್‌ನಲ್ಲಿ ನಗರದ ಸೂಕ್ಷ್ಮ ಪರಿಚಯವು ಅಷ್ಟೊಂದು ವ್ಯತ್ಯಾಸವನ್ನುಂಟು ಮಾಡುತ್ತದೆಯೇ ?" ಲ್ಯೂಮೆಟ್‌ರು ಹೀಗೆಂದು ಉತ್ತರಿಸಿದ್ದರು: "L.A.ನಲ್ಲಿ, ಹಾದಿಬೀದಿಗಳೇ ಇಲ್ಲ! ನೆರೆಹೊರೆಯ ಯಾವುದೇ ರೀತಿಯ ಛಾಪು ಇಲ್ಲ! ನಾವಿರುವಂತಹುದೇ ಅಪಾರ್ಟ್‌ಮೆಂಟ್‌ ಸಮುಚ್ಛಯದಲ್ಲಿ ಬೇರೆ ಯಾರು ವಾಸಮಾಡುತ್ತಿರಬಹುದು ಎಂಬುದನ್ನೇ ತಿಳಿದುಕೊಳ್ಳದೆಯೇ ನಮ್ಮ ಬಗ್ಗೆ ಮಾತನಾಡುತ್ತಾರೆ - ಅಸಂಬದ್ಧ ಜನ! ನಾನಿರುವ ಕಟ್ಟಡದಲ್ಲಿ ಯಾರು ಯಾರು ವಾಸಿಸುತ್ತಾರೆಂದು ನನಗೆ ಗೊತ್ತು. L.A.ನಲ್ಲಿ , ವಾಸ್ತವವಾಗಿ ನೆರೆಹೊರೆಯಲ್ಲಿರುವ ಇತರರ ಬಗ್ಗೆ ನೀವು ಎಷ್ಟರ ಮಟ್ಟಿಗೆ ತಿಳಿದುಕೊಳ್ಳಲು ಸಾಧ್ಯ? ... ದಿಟವಾಗಿಯೂ, ಇವೆಲ್ಲವೂ ಕೇವಲ ಮಾನವ ಸಂಪರ್ಕಗಳಿಗೆ ಸಂಬಂಧಪಟ್ಟಿದ್ದಾಗಿದೆ ಅಷ್ಟೇ. ನನಗನ್ನಿಸುವ ಪ್ರಕಾರ ನಮ್ಮ ಇತ್ತೀಚಿನ ಬೃಹತ್‌ ಸಮಸ್ಯೆಗಳೆಲ್ಲವೂ ಎಲ್ಲೆಡೆಯಲ್ಲೂ ಜನರ ನಡುವೆ ಹೆಚ್ಚಾಗಿ ಏರ್ಪಡುತ್ತಿರುವ ಪ್ರತ್ಯೇಕತೆಯಿಂದಾಗಿ ಉಂಟಾಗುತ್ತಿದೆ."[೩೩]

ಸಮಕಾಲೀನ ಯಹೂದಿ ವಿಷಯಸೂಚಿಗಳ ಬಳಕೆ[ಬದಲಾಯಿಸಿ]

ವುಡೀ ಅಲ್ಲೆನ್‌, ಮೆಲ್‌ ಬ್ರೂಕ್ಸ್‌ ಮತ್ತು ಪಾಲ್‌ ಮೇಜರ್‌ಸ್ಕಿರಂತಹಾ ಇತರೆ ನ್ಯೂಯಾರ್ಕ್‌ ಮೂಲದ ಯಹೂದಿ ನಿರ್ದೇಶಕರುಗಳ ಹಾಗೆಯೇ, ಲ್ಯೂಮೆಟ್‌ರ ಪಾತ್ರಗಳು ಕೂಡಾ ಆಗ್ಗಾಗ್ಗೆ ಸಮಕಾಲೀನ ವಿವಾದಾಸ್ಪದ ಸಮಸ್ಯೆಗಳ ಬಗ್ಗೆ ರಾಜಾರೋಷವಾಗಿ ಮಾತಾಡುತ್ತವೆ. ಚಲನಚಿತ್ರ ಇತಿಹಾಸಕಾರ ಡೇವಿಡ್‌ ಡೆಸ್ಸರ್‌ರು ಟಿಪ್ಪಣಿಸುವ ಪ್ರಕಾರ ಚಿತ್ರನಿರ್ಮಾರ್ತೃಗಳು ಹಾಗೂ ಅವರ ಕೃತಿಗಳು "ತಮ್ಮ ಯಹೂದಿ ಸಂವೇದನೆಯ ಮೂಲಕ ಹಾದುಬರುವಂತಹವು," ಎಂದು ಭಾವಿಸಲಾಗುವುದರಿಂದ ಅವರು ತಮಗೆ ಯಾವುದೇ ನಿರ್ಬಂಧವು ಅನ್ವಯಿಸುವುದಿಲ್ಲ ಎಂದೇ ಭಾವಿಸುತ್ತಾರೆ. ಇತರರ ಹಾಗೆಯೇ ಲ್ಯೂಮೆಟ್‌ರು ಕೂಡಾ, ಸಮಕಾಲೀನ ಅಮೇರಿಕಾದ ಸಂಸ್ಕೃತಿಯ[೩೪]: 3  ಗುಣಲಕ್ಷಣವಾದ ಜನಾಂಗೀಯ ಸಂವೇದನೆಗಳನ್ನು ಬೆಳೆಸಿಕೊಳ್ಳುವಂತೆ ಮಾಡಲು ಹಾಗೂ ಅದರ "ಅನನ್ಯ ತುಯ್ತ/ಸೆಳೆತಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆ"ಯನ್ನು ಕ್ರಿಯಾತ್ಮಕವಾಗಿ ಎತ್ತಿತೋರಿಸಲು ಕೆಲವೊಮ್ಮೆ ಯಹೂದಿ ವಿಷಯಸೂಚಿಗಳೆಡೆಗೆ ಹೊರಳಿದ್ದರು. ಇದು ಕೆಲವೊಮ್ಮೆ ಮಹಾನಗರಗಳಲ್ಲಿನ ಜೀವನಶೈಲಿಯ ಬಗೆಗೆ ಲ್ಯೂಮೆಟ್‌ರಿಗಿದ್ದ ಪೂರ್ವಾಗ್ರಹದಲ್ಲಿ ಭಾಗಶಃ ವ್ಯಕ್ತವಾಗುತ್ತದೆ".[೩೪]: 6  ಉದಾಹರಣೆಗೆ ಅವರ ಚಲನಚಿತ್ರ ಎ ಸ್ಟ್ರೇಂಜರ್‌ ಅಮಾಂಗ್‌ ಅಸ್‌ ಎಂಬುದು ಓರ್ವ ಬೇಹುಗಾರಿಕಾ ಆರಕ್ಷಕ ಅಧಿಕಾರಿಣಿಯ ಹಾಗೂ ನ್ಯೂಯಾರ್ಕ್‌ ಮಹಾನಗರದೊಳಗಿನ ಯಹೂದಿ ಅನುಭಾವ ಪಂಥೀಯ ಸಮುದಾಯದಲ್ಲಿನ ಆಕೆಯ ಅನುಭವಗಳ ಕಥೆಯನ್ನು ಹೊಂದಿತ್ತು.

"ತಪ್ಪಿತಸ್ಥತೆ/ದಂಡಾರ್ಹತೆ"ಯ ವಿಷಯವು ಲ್ಯೂಮೆಟ್‌ರ ಹಲವು ಚಲನಚಿತ್ರಗಳಲ್ಲಿ ಪ್ರಾಧಾನ್ಯತೆಯನ್ನು ಹೊಂದಿದೆ ಎಂದು ಡೆಸ್ಸರ್‌ ವಿವರಿಸುತ್ತಾರೆ. ಓರ್ವ ಯುವಕನ ತಪ್ಪಿತಸ್ಥತೆ ಅಥವಾ ನಿರ್ದೋಷಿತ್ವವನ್ನು ನ್ಯಾಯಮಂಡಲಿಯೊಂದು ನಿರ್ಧರಿಸಬೇಕಾದ ಕಥೆಯನ್ನು ಹೊಂದಿದ್ದ ಅವರ ಮೊತ್ತಮೊದಲ ಚಲನಚಿತ್ರ, ಟ್ವೆಲ್ವ್‌‌ ಆಂಗ್ರಿ ಮೆನ್‌ ನಿಂದ (೧೯೫೭), ಹಿಡಿದು ಓರ್ವ ವಕೀಲನು ಓರ್ವ ನಿಷ್ಠುರವಾದಿ ಆರಕ್ಷಕ ಅಧಿಕಾರಿಯ ತಪ್ಪಿತಸ್ಥತೆ ಹಾಗೂ ಹೊಣೆಗಾರಿಕೆಯ ಪ್ರಶ್ನೆಯನ್ನು ನಿರ್ಧರಿಸಬೇಕಾಗಿ ಬರುವ Q & A ನವರೆಗೆ (೧೯೯೦) "ತಪ್ಪಿತಸ್ಥತೆ/ದಂಡಾರ್ಹತೆ"ಯು "ಲ್ಯೂಮೆಟ್‌ರ ವೈವಿಧ್ಯಮಯ ಹಾಗೂ ಸಂಕೀರ್ಣ ಕೃತಿಚಕ್ರದ ಭಿನ್ನ ಭಿನ್ನ ಭಾಗಗಳನ್ನು ಸಂಪರ್ಕಿಸುತ್ತದೆ" ಎಂದು ಡೆಸ್ಸರ್‌ ತಿಳಿಸುತ್ತಾರೆ." ಹೀಗಿದ್ದರೂ ಮರ್ಡರ್‌ ಆನ್‌ ದ ಓರಿಯೆಂಟ್‌ ಎಕ್ಸ್‌ಪ್ರೆಸ್‌ ನಂತಹಾ (೧೯೭೪) ಚಲನಚಿತ್ರಗಳಲ್ಲಿ ಎಲ್ಲಾ ಆರೋಪಿಗಳೂ ತಪ್ಪಿತಸ್ಥರೇ ಆಗಿರುತ್ತಾರೆ.[೩೪]: 172  ತಪ್ಪಿತಸ್ಥತೆ/ದಂಡಾರ್ಹತೆಯ ಬಗ್ಗೆ ಲ್ಯೂಮೆಟ್‌ರ ಕಲ್ಪನೆಯಲ್ಲಿ ಹಲವು ಮಗ್ಗಲುಗಳಿದ್ದು ಅವು ಬೈಬಲಿಗನುಸಾರವೆಂಬಂತಿದ್ದು ಎಂದು ಪ್ರಸ್ತಾಪಿಸುವ ಡೆಸ್ಸರ್‌, ಅವುಗಳಲ್ಲಿ ಲ್ಯೂಮೆಟ್‌ರು ತಪ್ಪಿತಸ್ಥತೆ/ದಂಡಾರ್ಹತೆ ಮತ್ತು ಹೊಣೆಗಾರಿಕೆಗಳ ಬಗ್ಗೆ ಹಳೆಯ ಒಡಂಬಡಿಕೆಯ ಪ್ರಶ್ನೆಗಳನ್ನು ಪರಿಶೋಧಿಸುತ್ತಾರೆ : "ತಪ್ಪಿತಸ್ಥತೆ/ದಂಡಾರ್ಹತೆಯ ಬಗ್ಗೆ ಲ್ಯೂಮೆಟ್‌ರ ಕಲ್ಪನೆಯು, ಓರ್ವ ತಂದೆಯ ತಪ್ಪಿತಸ್ಥತೆ/ದಂಡಾರ್ಹತೆಯು ಆತನ ಮಕ್ಕಳಿಗೆ ಮುಂದುವರಿದು ಅವರ ಮೇಲೆ ಗಂಭೀರವಾದ ಪ್ರಭಾವ ಬೀರುತ್ತದೆ ಎಂಬುದಾಗಿದ್ದು. . . ಅದು ಲ್ಯೂಮೆಟ್‌ರ ಚಲನಚಿತ್ರಗಳಲ್ಲಿ ಹೊಡೆದು ಕಾಣುವಂತಿರುತ್ತದೆ." ಡೆಸ್ಸರ್‌ರ ಪ್ರಕಾರ, ಲ್ಯೂಮೆಟ್‌ರ ವಿಷಯಸೂಚಿಗಳಲ್ಲಿ ಪ್ರಾಧಾನ್ಯತೆ ಹೊಂದಿರುವ ತಪ್ಪಿತಸ್ಥತೆ/ದಂಡಾರ್ಹತೆಯ ಮೇಲಿನ ಅಂತಹಾ ಏಕಾಗ್ರತೆ/ಗಮನೀಯತೆ ಮತ್ತು ಹೊಣೆಗಾರಿಕೆಯು ನೇರವಾಗಿ ಯಹೂದಿ ಸಂಪ್ರದಾಯದಿಂದ ಅದರಲ್ಲೂ ನಿರ್ದಿಷ್ಟವಾಗಿ ಯಹೂದ್ಯ ಮತದಿಂದ ಬರುತ್ತದೆ : ಅದರಲ್ಲಿ ಇದೊಂದು ನೆನಪಿಸಲೇಬೇಕಾದ ಕಟ್ಟಳೆಯಾಗಿರುತ್ತದೆ." ಈ ಒಂದು "ಸ್ಮರಣೆಯ" ಮಗ್ಗಲನ್ನು ಸುವ್ಯಕ್ತವಾಗಿ ದ ಪಾನ್‌ ಬ್ರೋಕರ್‌ ಮತ್ತು ಡ್ಯಾನಿಯೆಲ್‌, ಚಿತ್ರಗಳಲ್ಲಿ ಕಾಣಬಹುದಾಗಿದ್ದು ಎರಡರಲ್ಲೂ "ಸ್ಮಾರಕೋತ್ಸವವನ್ನು ನಡೆಸಲಾಗುತ್ತದೆ, ಅವರು ಅದನ್ನು ಉತ್ಸವವನ್ನಾಗಿಸುವುದಿಲ್ಲ."[೩೪]: 173 

ಆತನ ಚಲನಚಿತ್ರಗಳಲ್ಲಿ "ಕುಟುಂಬ"ದೊಳಗಿನ ಎದೆಗುದಿಗಳ ಮೇಲೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಅದರಲ್ಲಿಯೂ ಸುವ್ಯಕ್ತವಾಗಿ "ಕೌಟುಂಬಿಕ ಜೀವನದ ಪ್ರಾಧಾನ್ಯತೆಗಳ" ಮೇಲಿನ ಆಗ್ರಹಗಳನ್ನು ತೋರಿಸುತ್ತದೆ."[೩೪]: 172  ಸರ್ಪಿಕೋ (೧೯೭೪), ಪ್ರಿನ್ಸ್‌ ಆಫ್‌ ದ ಸಿಟಿ (೧೯೮೧), ಮತ್ತು Q&A ನಂತಹಾ ಆರಕ್ಷಕರ ಕಥೆಗಳನ್ನು ಹೊಂದಿರುವ ಮೂರು ಚಿತ್ರಗಳಂತೆಯೇ ಕುಟುಂಬದ ಮೇಲಿನ ಪ್ರಾಧಾನ್ಯತೆಯಲ್ಲಿ "ಬದಲಿ ಕುಟುಂಬಗಳನ್ನು" ಕೂಡಾ ಒಳಗೊಂಡಿರುತ್ತದೆ. ಡಾಗ್‌ ಡೇ ಆಫ್ಟರ್‌ನೂನ್‌‌ (೧೯೭೫) ಚಿತ್ರದಲ್ಲಿ "ಅಸಾಂಪ್ರದಾಯಿಕ ಕುಟುಂಬಗಳು" ಕೂಡಾ ಅಂತರ್ಗತವಾಗಿದೆ.[೩೪]: 172  ಡೆಸ್ಸರ್‌ರ ಪ್ರಕಾರ ಯಹೂದಿ ಅನುಭಾವಕ್ಕೆ ಕುಟುಂಬದ ಪ್ರಾಮುಖ್ಯತೆಯು — ಹಾಗೂ ಕುಟುಂಬವೊಂದು ತನ್ನ ಮೌಲ್ಯಗಳನ್ನು ತನ್ನ ಮಕ್ಕಳಲ್ಲಿ ಮೂಡಿಸುವ ರೀತಿಯು ಲ್ಯೂಮೆಟ್‌ರ ವಿಶ್ವನೋಟದ ಪ್ರಮುಖ ಭಾಗಗಳಾಗಿವೆ.[೩೪]: 209 

ನಿರ್ದೇಶನದ ತಂತ್ರಗಳು[ಬದಲಾಯಿಸಿ]

ಜೊವಾನ್ನಾ ರ್ರ್ಯಾಪ್‌ಫ್‌ರ ಪ್ರಕಾರ ಲ್ಯೂಮೆಟ್‌ರು ನೈಸರ್ಗಿಕತೆ ಹಾಗೂ/ಅಥವಾ ವಾಸ್ತವಿಕತೆಗಳನ್ನೇ ಯಾವಾಗಲೂ ಆಯ್ದುಕೊಳ್ಳುತ್ತಿದ್ದರು. ಅವರು "ಅಲಂಕಾರಕಾರರುಗಳ ನೋಟ"ವನ್ನು ಇಷ್ಟಪಡುತ್ತಿರಲಿಲ್ಲ "; ಅಪರೂಪವಾಗಿಯಷ್ಟೇ ಅವರು "ಛಾಯಾಗ್ರಾಹಕವು ಗಮನವನ್ನು ತನ್ನೆಡೆಗೆಯೇ ಸೆಳೆದುಕೊಳ್ಳುವುದನ್ನು ಇಷ್ಟಪಟ್ಟಿದ್ದಿರಬಹುದು; ಹಾಗೂ ಸಂಪಾದನೆಯು ಖಂಡಿತವಾಗಿ ಗಮನಕ್ಕೆ ಬಾರದಂತಿರಬೇಕು." ಅವರ ಚಲನಚಿತ್ರಗಳ ಛಾಯಾಗ್ರಾಹಕ ರಾನ್‌ ಫಾರ್ಚುನೇಟೋರು ಹೀಗನ್ನುತ್ತಾರೆ "ಯಾವುದಾದರೂ ದೃಶ್ಯವು ತೀರ ಕಲಾಕೌಶಲ್ಯವೆಂಬಂತೆ ಎದ್ದು ಕಾಣುತ್ತದೆಂದು ಅನಿಸಿದರೆ ಸಿಡ್ನಿ ಸಿಡಿಮಿಡಿಗೊಳ್ಳುತ್ತಿದ್ದರು."[೪]

ಬಹುಶಃ ಸಾಕಷ್ಟು ಸಂಖ್ಯೆಯಲ್ಲಿ ಗಮನಾರ್ಹ ಸಾಮಾಜಿಕ ವಿವಾದಗಳು ಹಾಗೂ ಸಮಸ್ಯೆಗಳ ಕುರಿತು ಚಿತ್ರಗಳನ್ನು ಮಾಡಲು ಸಿದ್ಧವಿರುತ್ತಿದ್ದುದು ಹಾಗೂ ಆ ಸಾಮರ್ಥ್ಯವನ್ನು ಹೊಂದಿರುತ್ತಿದ್ದುದು ಭಾಗಶಃ ಕಾರಣವಾಗಿ, "ಅವರು ಪ್ರಧಾನ ಪಾತ್ರಧಾರಿಗಳಿಂದ ಅತ್ಯದ್ಭುತವೆನ್ನಿಸುವಂತಹಾ ಪಾತ್ರನಿರ್ವಹಣೆಗಳನ್ನು ಹಾಗೂ ಪಾತ್ರ ನಟವರ್ಗದಿಂದ ಸೂಕ್ಷ್ಮ ಪಾತ್ರನಿರ್ವಹಣೆಯನ್ನು ಹೊರತೆಗೆಯುವಲ್ಲಿ ಅವರು ಸಿದ್ಧಹಸ್ತರಾಗಿರುತ್ತಿದ್ದರು," ಎಂದು ಚಲನಚಿತ್ರ ಇತಿಹಾಸಕಾರ ಥಾಮ್ಸನ್‌ ಉಲ್ಲೇಖಿಸುತ್ತಾರೆ. ಅವರು "ನ್ಯೂಯಾರ್ಕ್‌ ಚಿತ್ರತಯಾರಕರುಗಳಲ್ಲಿ ಅಗ್ರಮಾನ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಉತ್ತಮ ಹಸ್ತಪ್ರತಿಗಳನ್ನು ಪಡೆದುಕೊಂಡರೆ ಅದಕ್ಕೆ ಬದ್ಧರಾಗಿರುತ್ತಾರೆ."[೨೮]

ಕ್ಯಾಟ್ಜ್‌ಜ್‌ ಫಿಲ್ಮ್‌ ಎನ್‌ಸೈಕ್ಲೋಪೀಡಿಯಾ ದ ಪ್ರಕಾರ, "ಲ್ಯೂಮೆಟ್‌ರ ಕಾರ್ಯನಿರ್ವಹಣೆಯ ಬಗ್ಗೆ ವಿಮರ್ಶಕೀಯ ಮೌಲ್ಯೀಕರಣವು ಚಿತ್ರದಿಂದ ಚಿತ್ರಕ್ಕೆ ವ್ಯಾಪಕವಾದ ವ್ಯತ್ಯಾಸಗಳನ್ನು ಹೊಂದಿರುತ್ತಿದ್ದರೂ ಅವರ ಇಡಿಯಾಗಿ ನಿರ್ದೇಶಕತ್ವವು ಅತ್ಯದ್ಭುತ ಮನ್ನಣೆಯನ್ನು ಪಡೆದುಕೊಂಡಿತ್ತು. ವಿಮರ್ಶಕರ ಅಭಿಪ್ರಾಯದ ಪ್ರಕಾರ ಗಮನಾರ್ಹವಾದ ಉತ್ತಮ ಅಭಿರುಚಿಯನ್ನು ಹೊಂದಿರುವ ವೈವಿಧ್ಯಮಯ ತಂತ್ರಗಳು ಹಾಗೂ ಶೈಲಿಗಳೊಂದಿಗೆ ಪ್ರಯೋಗ ಮಾಡುವ ಸ್ಥೈರ್ಯವನ್ನು ಹೊಂದಿರುವ ಹಾಗೂ ನಟರನ್ನು ಸಂಭಾಳಿಸುವ ದೈವದತ್ತ ಕೌಶಲ್ಯವನ್ನು ಹೊಂದಿರುವ ಓರ್ವ ಸೂಕ್ಷ್ಮಗ್ರಾಹಿ ಬುದ್ಧಿವಂತ ನಿರ್ದೇಶಕರಾಗಿದ್ದಾರೆ."[೧೦] ಇತರೆ ಕೆಲವು ನಿರ್ದೇಶಕರ ಹಾಗಲ್ಲದೇ ಲ್ಯೂಮೆಟ್‌ರು, ತಮ್ಮ ಚಿತ್ರಗಳ ನಟವರ್ಗದ ಖಾಸಗಿ ಜೀವನದಿಂದ ವೃತ್ತಿಪರ ಅಂತರವನ್ನು ಕಾಪಾಡಿಕೊಂಡಿರಲು ಪ್ರಯತ್ನಿಸುತ್ತಿದ್ದರು : "ಎಲಿಯಾ ಕಝಾನ್‌ರು ತನ್ನ ಜೊತೆ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬರ ಎಲ್ಲಾ ವಿಚಾರಗಳಲ್ಲಿಯೂ ಅವರ ಮನೋಭಾವಗಳನ್ನು ಕೂಡಾ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು," ಎಂದು ೨೦೦೭ರಲ್ಲಿ ದ ನ್ಯೂಯಾರ್ಕ್‌ ಟೈಮ್ಸ್‌‌ ಪತ್ರಿಕೆಗೆ ಪ್ರಭಾವಿ ನಿರ್ದೇಶಕರ ಬಗ್ಗೆ ಉಲ್ಲೇಖಿಸುತ್ತಾ ಲ್ಯೂಮೆಟ್‌ ಹೀಗೆಂದಿದ್ದರುr. "ನಾನು ಅದಕ್ಕೆ ಸಂಪೂರ್ಣವಾಗಿ ತದ್ವಿರುದ್ಧ ಪಂಥದವನು. ನಾನು ಖಾಸಗಿ ವಿಚಾರಗಳಲ್ಲಿ ಒಳಗೊಳ್ಳಲು ಬಯಸುವುದಿಲ್ಲ."[೩೫]

ತನ್ನ ಗ್ರಂಥವೊಂದರಲ್ಲಿನ ಉಲ್ಲೇಖವೊಂದರಲ್ಲಿ, ಲ್ಯೂಮೆಟ್‌ರು ನಿರ್ದೇಶನಕ್ಕೆ ಸಂಬಂಧಿಸಿದ ವ್ಯವಸ್ಥಾಪನ ತಂತ್ರದ ಬಗ್ಗೆ ಒತ್ತಿ ಹೇಳಿದ್ದರು:

Someone once asked me what making a movie was like. I said it was like making a mosaic. Each setup is like a tiny tile (a setup, the basic component of a film's production, consists of one camera position and its associated lighting). You color it, shape it, polish it as best you can. You'll do six or seven hundred of these, maybe a thousand. (There can easily be that many setups in a movie.) Then you literally paste them together and hope it's what you set out to do.[೩೬]

೧೯೭೦ರಲ್ಲಿ ಲ್ಯೂಮೆಟ್‌ರು ಹೀಗೆಂದಿದ್ದರು, "ನೀವು ಒಬ್ಬ ನಿರ್ದೇಶಕರಾಗಿದ್ದರೆ, ನೀವು ಅಲ್ಲಿ ನಿರ್ದೇಶನವನ್ನು ಮಾಡಲೇಬೇಕು ... ಸನ್ನಿವೇಶಗಳು ಸರಿಹೊಂದುವವರೆಗೆ ಹಾಗೂ ಎಲ್ಲವೂ ಜ್ವಾಜಲ್ಯಮಾನವಾಗಿ ಹಾಗೂ ಅಸಾಧಾರಣವಾಗಿ ಸಿದ್ಧಗೊಳ್ಳುವ ತನಕ ನೀವು ಆರಾಮವಾಗಿ ಕುಳಿತುಕೊಂಡಿರಬೇಕು ಎಂದು ನಾನು ಭಾವಿಸುವುದಿಲ್ಲ ... ನಾನು ಹಸಿವಿನಿಂದಿದ್ದೇನೆ ಎಂಬುದಕ್ಕಾಗಿ ನಾನೆಂದೂ ಚಿತ್ರವೊಂದನ್ನು ಮಾಡಿಲ್ಲ ... ನಾನು ಮಾಡಿದ್ದ ಪ್ರತಿಯೊಂದು ಚಿತ್ರವೂ ಸಕ್ರಿಯವಾದ, ನಂಬಲರ್ಹವಾದ, ಗಾಢಾನುರಕ್ತವಾದ ಆಕಾಂಕ್ಷೆಯಿಂದ ಕೂಡಿರುತ್ತಿತ್ತು. ನಾನು ಮಾಡಬೇಕೆಂದಿದ ಎಲ್ಲ ಚಿತ್ರಗಳನ್ನೂ ಕೂಡಾ ನಾನು ಮಾಡಿದ್ದೇನೆ ... ನಾನೀಗ ನನ್ನ ಉತ್ತಮ ಕಾಲದಲ್ಲಿದ್ದೇನೆ."

IMDBನಲ್ಲಿ ದಾಖಲಾಗಿದ್ದ ಹೇಳಿಕೆಯೊಂದರಲ್ಲಿ ಲ್ಯೂಮೆಟ್‌ರು ಹೀಗೆಂದಿದ್ದರು "ನಾನು ಆರಾಧಿಸುವಂತಹಾ ಚಿತ್ರಕಥೆಯು ನನ್ನಲ್ಲಿಲ್ಲದೇ ಹೋದರೇ, ನನಗಿಷ್ಟವಾದುದನ್ನು ನಾನು ಮಾಡುತ್ತೇನೆ. ನಾನು ಇಷ್ಟಪಡುವಂತಹದ್ದು ಇರದಿದ್ದರೆ, ನಾನು ಇಷ್ಟಪಡುವ ನಟವಿರುವ ಚಿತ್ರವನ್ನು ಮಾಡುತ್ತೇನೆ ಅಥವಾ ಒಂದು ತಾಂತ್ರಿಕ ಸವಾಲನ್ನು ಒಡ್ಡುವ ಚಿತ್ರವನ್ನು ಮಾಡಲಿಚ್ಛಿಸುತ್ತೇನೆ." ವಿಮರ್ಶಕ ಜಸ್ಟಿನ್‌ ಚಾಂಗ್‌ ಹೀಗೆಂದು ಸೇರಿಸುತ್ತಾರೆ ಲ್ಯೂಮೆಟ್‌ರ ಓರ್ವ ನಿರ್ದೇಶಕನಾಗಿ ಹಾಗೂ ಕಸುವಿನಿಂದ ಕೂಡಿದ ಕಥೆಗಳನ್ನು ಅಭಿವೃದ್ಧಿಪಡಿಸುವ ಕೌಶಲ್ಯವು ೨೦೦೭ರಲ್ಲಿನ ಅವರ ಕಡೆಯ ಚಿತ್ರದವರೆಗೂ ಮುಂದುವರೆದುಕೊಂಡು ಬಂದಿತ್ತು, "ನಟವರ್ಗದೊಂದಿಗಿನ ಅವರ ಚುರುಕು ಗತಿಯ ಸ್ಪರ್ಶ, ಒಂದೆಡೆಯಲ್ಲೇ ಬಹುಮಟ್ಟಿನ ಬೆಚ್ಚನೆಯ ಭಾವ ಹಾಗೂ ಉತ್ಸಾಹಭರಿತ ಹಾಸ್ಯವನ್ನು ಮೂಡಿಸುವ ಸಾಮರ್ಥ್ಯ ಹಾಗೂ ಅವೆಲ್ಲವುಗಳನ್ನೂ ಮತ್ತೂ ದಟ್ಟವಾದ ತೀವ್ರವಾದ ಎದೆಗುದಿ ತಲ್ಲಣಗಳಿಂದ ಭಾವದೆಡೆಗೆ ಕರೆ ತರುವ,ವ್ಯಂಗ್ಯವಾದ ಶೀರ್ಷಿಕೆಯನ್ನುಳ್ಳ ಅಂತಿಮ ಚಿತ್ರ ಬಿಫೋರ್‌‌ ದ ಡೆವಿಲ್‌ ನೋಸ್‌ ಯೂ ಆರ್‌ ಡೆಡ್‌ನಲ್ಲಿ ಮನತಣಿಯುವಂತೆ ಪ್ರದರ್ಶಿತವಾಗಿದೆ[೩೭]

ಭವಿಷ್ಯದ ಚಲನಚಿತ್ರಗಳ ಮುಂಗಾಣ್ಕೆ[ಬದಲಾಯಿಸಿ]

ನ್ಯೂಯಾರ್ಕ್‌ ನಿಯತಕಾಲಿಕೆಯೊಂದಿಗಿನ ಅದೇ ಸಂದರ್ಶನದಲ್ಲಿ, ಚಿತ್ರನಿರ್ಮಾಣದ ಮುಂದಿನ ಅಲೆಯೆಂದು ತಾವು ಏನನ್ನು ಭಾವಿಸುತ್ತೀರಿ ಎಂದು ಕೇಳಲ್ಪಟ್ಟಾಗ, ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದರು, "ಹ್ಞಾ, ಒಮ್ಮೆ ಆಸ್ಟೋರಿಯಾದಲ್ಲಿ ನಾವು ಚಿತ್ರೀಕರಣವನ್ನು ಕೈಗೊಂಡಿದ್ದೆವು, ಹಾಗೂ ಒಂದು ದಿನ ಸ್ಟುಡಿಯೋದ ಸಮೀಪದಲ್ಲಿರುವ ಶಾಲೆಯ ಹೊರಗೆ ನಿಂತುಕೊಂಡಿದ್ದ ಒಂದಷ್ಟು ಮಕ್ಕಳನ್ನು ನಾನು ಗಮನಿಸುತ್ತಿದ್ದೆ. ಅದೊಂದು ಕೌತುಕಕರ ಅನುಭವವಾಗಿತ್ತು: ಭಾರತೀಯ ಹುಡುಗಿಯರು ಸೀರೆಗಳನ್ನು ಉಟ್ಟುಕೊಂಡಿರುತ್ತಿದ್ದರು, ಪಾಕಿಸ್ತಾನ, ಕೊರಿಯಾಗಳ ಮಕ್ಕಳು, ಎಲ್ಲೆಡೆಯಿಂದ ಮಕ್ಕಳು ಬಂದಿದ್ದರು. ಆದ್ದರಿಂದ ನನಗನಿಸುತ್ತದೆ ಈ ತರಹದ ಸಮುದಾಯಗಳಿಂದ ತಮ್ಮ ಕಥೆಗಳನ್ನು ಹೇಳುವ ಬಹಳಷ್ಟು ನಿರ್ದೇಶಕರುಗಳನ್ನು ನೀವು ಕಾಣಲಿದ್ದೀರಿ. ನಿಮಗೆ ತಿಳಿದಿದೆಯೋ ಇಲ್ಲವೋ, ನಾನು ಯಹೂದಿಗಳು ಹಾಗೂ ಇಟಾಲಿಯನ್ನರು ಮತ್ತು ಐರಿಷ್‌ ಜನರುಗಳ ಬಗ್ಗೆ ಚಲನಚಿತ್ರಗಳನ್ನು ಮಾಡಲು ಆರಂಭಿಸಿದ್ದೆ ಏಕೆಂದರೆ ನನಗೆ ಬೇರೇನೂ ಗೊತ್ತಿರಲಿಲ್ಲ."[೩೩]

ಮರಣ[ಬದಲಾಯಿಸಿ]

ಲ್ಯೂಮೆಟ್‌ರು ೮೬ನೆಯ ವಯಸ್ಸಿನಲ್ಲಿ ದುಗ್ಧರಸ ಗ್ರಂಥಿಯ ಅರ್ಬುದದಿಂದಾಗಿ ನ್ಯೂಯಾರ್ಕ್‌ಮ್ಯಾನ್‌ಹಾಟ್ಟನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಏಪ್ರಿಲ್‌‌ ೯, ೨೦೧೧ರಂದು ನಿಧನರಾದರು.[೫][೨೪] ೧೯೯೭ರಲ್ಲಿ ನಡೆದ ಸಂದರ್ಶನವೊಂದರಲ್ಲಿ ನೀವು ಪ್ರಪಂಚವನ್ನು ಹೇಗೆ "ತ್ಯಜಿಸಿ ಹೋಗಬೇಕೆಂದಿದ್ದೀರಿ" ಎಂದು ಕೇಳಲ್ಪಟ್ಟಾಗ ಲ್ಯೂಮೆಟ್‌ ಹೀಗೆ ಪ್ರತಿಕ್ರಯಿಸಿದ್ದರು, "ನಾನು ಅದರ ಬಗ್ಗೆ ಯೋಚಿಸಲು ಹೋಗುವುದಿಲ್ಲ. ನಾನು ಧಾರ್ಮಿಕ ವ್ಯಕ್ತಿಯಲ್ಲ. ನಾನು ಯಾವುದೇ ಸ್ಥಳವನ್ನು ಆಕ್ರಮಿಸುವುದು ನನಗೆ ಇಷ್ಟವಿಲ್ಲ ಎಂದು ನನಗೆ ಗೊತ್ತಿದೆ. ನನ್ನ ದೇಹವನ್ನು ದಹಿಸಿ ಅದರ ಬೂದಿಯನ್ನು ಕ್ಯಾಟ್ಜ್‌ಸ್‌ ಡೆಲಿಕೇಟೆಸ್ಸೆನ್‌ ಸಿದ್ಧಭಕ್ಷ್ಯದಂಗಡಿಯ ಸುತ್ತ ಹರಡಿ."[೩೮]

ಅವರ ಮರಣಾನಂತರ, ನ್ಯೂಯಾರ್ಕ್‌ ಮಹಾನಗರದ ಹಲವು ಸ್ಮರಣಾರ್ಹ ಚಿತ್ರಣಗಳಿಂದ ಕೂಡಿದ ಇನ್ನೂ ಅಸ್ತಿತ್ವದಲ್ಲಿರುವಂತಹಾ ಅವರ ನಿರ್ದೇಶನದ ಕೃತಿಗಳ ಸಾಧನೆಗಾಗಿ ಹಲವು ರೀತಿಯ ಶ್ರದ್ಧಾಂಜಲಿಗಳನ್ನು ಸಲ್ಲಿಸಲಾಯಿತು. ಅವರ ಸಹೋದ್ಯೋಗಿ ನ್ಯೂಯಾರ್ಕ್‌ ನಿರ್ದೇಶಕರುಗಳಾದ ವುಡೀ ಅಲ್ಲೆನ್‌ ಮತ್ತು ಮಾರ್ಟಿನ್‌ ಸ್ಕಾರ್ಸೆಸ್ಸೆರವರುಗಳಿಬ್ಬರೂ ಲ್ಯೂಮೆಟ್‌ರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲೆನ್‌ರು ಅವರನ್ನು "ಸರ್ವೋತ್ಕೃಷ್ಟವಾದ ನ್ಯೂಯಾರ್ಕ್‌ ಚಿತ್ರನಿರ್ಮಾತೃ " ಎಂದು ಕರೆದರೆ , ಸ್ಕಾರ್ಸೆಸ್ಸೆರವರು "ಸರ್ಪಿಕೋ , ಡಾಗ್‌ ಡೇ ಆಫ್ಟರ್‌ನೂನ್‌‌ ಮತ್ತು ಎಲ್ಲವುಗಳಿಗಿಂತಲೂ ಹೆಚ್ಚಾಗಿ ಅಪೂರ್ವವಾದ ಪ್ರಿನ್ಸ್‌ ಆಫ್‌ ದ ಸಿಟಿ ಯಂತಹಾ ಶ್ರೇಷ್ಠ ಚಿತ್ರಗಳಿಂದ ಮಹಾನಗರದ ಬಗೆಗಿನ ನಮ್ಮ ನೋಟವನ್ನು ಉನ್ನತೀಕರಿಸಿ ಹಾಗೂ ಗಹನವಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಾಗಿದೆ" ಎಂದಿದ್ದರು."[೩೯] ನಮ್ಮ ಮಹಾನಗರದ ಶ್ರೇಷ್ಠ ಚರಿತ್ರೆಗಾರರಲ್ಲಿ ಒಬ್ಬರಾಗಿದ್ದರು" ಎಂದು ಅವರನ್ನು ಹೊಗಳಿದ ನ್ಯೂಯಾರ್ಕ್‌ನ ಮಹಾಪೌರ ಮೈಕೆಲ್‌ ಬ್ಲೂಮ್‌ಬರ್ಗ್‌‌ರಿಂದಲೂ ಲ್ಯೂಮೆಟ್‌ರು ಪ್ರಶಂಸೆಯನ್ನು ಪಡೆದಿದ್ದರು".[೩೯]

ಲ್ಯೂಮೆಟ್‌ರನ್ನು "ಹಲವು ಪೀಳಿಗೆಗಳ ನೀತಿಪ್ರಜ್ಞೆಗೆ ಸಂಬಂಧಿಸಿದ್ದ ಪಾತ್ರಗಳನ್ನು ವಿಶ್ವದ ಹಲವು ಗೌರವಾನ್ವಿತ ನಟರುಗಳಿಗೆ ಮಾರ್ಗದರ್ಶನ ಮಾಡಿದ" ಅವರ ವೃತ್ತಿಜೀವನವನ್ನು ಸ್ಮರಿಸುತ್ತಾ ನಡೆಸಿದ ಶ್ರದ್ಧಾಂಜಲಿ ಕಾರ್ಯಕ್ರಮವೊಂದರಲ್ಲಿ ಅವರನ್ನು "ಚಲನಚಿತ್ರ ರಂಗದ ಶ್ರೇಷ್ಠ ನೈತಿಕವಾದಿಗಳಲ್ಲಿ ಕೊನೆಯವರು " ಎಂದು ಕರೆಯಲಾಗಿತ್ತು."[೪೦]

ಪರಂಪರೆ[ಬದಲಾಯಿಸಿ]

ಚಲನಚಿತ್ರ ಇತಿಹಾಸಕಾರ ಬೌಲ್ಸ್‌ರ ಪ್ರಕಾರ, ಲ್ಯೂಮೆಟ್‌ರು ಓರ್ವ ಮುಂಚೂಣಿಯ ರೂಪಕ ಚಿತ್ರನಿರ್ಮಾತೃವಾಗಿ ಯಶಸ್ವಿಯಾಗಲಿಕ್ಕೆ ಭಾಗಶಃ ಕಾರಣ " ಅವರ ಪ್ರಧಾನವಾದ ಮಾನದಂಡವು[ನಿರ್ದೇಶಿಸುವಾಗ] ತನ್ನ ಕಥಾನಾಯಕ/ಕಿಯರ ಕೃತ್ಯಗಳು ಸರಿಯೇ ಅಥವಾ ತಪ್ಪೇ ಎಂಬುದಲ್ಲ ಬದಲಿಗೆ ಅವರ ಕೃತ್ಯಗಳು ಯಥಾರ್ಥ/ನಿಷ್ಕಪಟವಾಗಿದೆಯೇ ಇಲ್ಲವೇ ಎಂಬುದಾಗಿತ್ತು." ಈ ಕೃತ್ಯಗಳು ಓರ್ವನ ಮನಸ್ಸಾಕ್ಷಿಗೆ ಒಪ್ಪಿಗೆಯಾಗುವುದಾದರೆ, ಅದು ಆತನ ನಾಯಕರುಗಳಿಗೆ ಒತ್ತಡಗಳು, ದೂಷಣೆಗಳು ಹಾಗೂ ಇತರರ ಅನ್ಯಾಯಗಳನ್ನು ಸಹಿಸಿಕೊಳ್ಳುವ ಅಸಾಮಾನ್ಯ ಶಕ್ತಿಯನ್ನು ಹಾಗೂ ಧೈರ್ಯವನ್ನು ತಂದುಕೊಡುತ್ತದೆ". ಆದ್ದರಿಂದಲೇ ಆತನ ಚಲನಚಿತ್ರಗಳು ಸತತವಾಗಿ "ಸಮಾನಸ್ಕಂಧರ ಗುಂಪುಗಳ ಅಧಿಕಾರವನ್ನು ಪ್ರತಿಭಟಿಸುವ ಹಾಗೂ ತಮ್ಮದೇ ಆದ ನೈತಿಕ ಮೌಲ್ಯಗಳ ಸ್ವಂತ ಸಂಹಿತೆಯ ಪ್ರತಿಪಾದನೆಯನ್ನು ಮಾಡುವಲ್ಲಿ ಅತ್ಯುತ್ಕೃಷ್ಟ ನಾಯಕನನ್ನು " ಕೊಡುತ್ತಾ ಬಂದಿವೆ."[೧೬]

ಚಲನಚಿತ್ರ ನಿರ್ಮಾಣದಲ್ಲಿನ ತನ್ನ ಜೀವನದ ಬಗೆಗಿನ ಪ್ರಕಟವಾದ ಲ್ಯೂಮೆಟ್‌ರ ಆತ್ಮಚರಿತ್ರೆ ಮೇಕಿಂಗ್‌ ಮೂವೀಸ್‌ (೧೯೯೬)ನಲ್ಲಿ "ಅವರು ಬಹಳವೇ ಲವಲವಿಕೆಯಿಂದ ಕೂಡಿದ ಚಲನಚಿತ್ರ ನಿರ್ಮಾಣದ ಕಲೆಯ ತಮ್ಮ ಹುಮ್ಮಸ್ಸನ್ನು ಇತರರಿಗೆ ಸಾಂಕ್ರಾಮಿಕದ ರೀತಿಯಲ್ಲಿ ಹರಡುವ ವ್ಯಕ್ತಿ," ಎಂದು ಬರೆಯುತ್ತಾ ಬೌಲ್ಸ್‌ರು " ಅವರ ಬಹುತೇಕ ಚಲನಚಿತ್ರಗಳ ಛಾಯೆ ಹಾಗೂ ಶೈಲಿಗೆ ಎದ್ದುತೋರುವಷ್ಟು ವಿರುದ್ಧವಾಗಿದ್ದರು. ಬಹುಶಃ ಲ್ಯೂಮೆಟ್‌ರ ಛಾಪು ನಿರ್ದೇಶಕರಾಗಿ ನಟವರ್ಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದುದರಲ್ಲಿ ಇತ್ತು — ಹಾಗೂ ಉತ್ತಮ ಗುಣಮಟ್ಟದ, ಕೆಲವೊಮ್ಮೆ ಅಸಾಧಾರಣವೆನಿಸುವಂತಹಾ ಪಾತ್ರನಿರ್ವಹಣೆಗಳನ್ನು ಕೆಲವು ವೇಳೆ ಬಹುತೇಕ ಅನಿರೀಕ್ಷಿತವಾದಂತಹಾ ವ್ಯಕ್ತಿಗಳಿಂದಲೂ ಹೊರತೆಗೆಯಬಲ್ಲ ಸಾಮರ್ಥ್ಯದಲ್ಲಿತ್ತು"[೧೬] ಇದನ್ನು ಅನುಮೋದಿಸುವ ಅಸೋಸಿಯೇಟೆಡ್‌ ಪ್ರೆಸ್‌ ಲೇಖಕ ಜೇಕ್‌ ಕಾಯ್ಲೆ ಹೀಗೆನ್ನುತ್ತಾರೆ: "ಲ್ಯೂಮೆಟ್‌ರೇ ಹಲವು ವರ್ಷಗಳ ಕಾಲ ಸಾಕ್ಷೇಪವಾಗಿ ಕಡಿಮೆ ಮನ್ನಣೆಯನ್ನು ಪಡೆದುಕೊಂಡಿದ್ದರೂ ಅವರ ಮೇಲುಸ್ತುವಾರಿಯಲ್ಲಿ ನಡೆದ ನಟವರ್ಗದವರೆಲ್ಲರೂ ಸತತವಾಗಿ ತಮ್ಮ ಸ್ಮರಣಾಹ ಅಭಿನಯಗಳನ್ನು ನೀಡುತ್ತಾ ಬಂದಿದ್ದಾರೆ. ಕ್ಯಾಥರೀನ್‌ ಹೆಪ್‌ಬರ್ನ್‌ರಿಂದ ಫಾಯೆ ಡನ್‌ಅವೇವರೆಗೆ, ಹೆನ್ರಿ ಫಾಂಡಾರಿಂದ ಪಾಲ್‌ ನ್ಯೂಮನ್‌ವರೆಗೆ, ಲ್ಯೂಮೆಟ್‌ರು ಓರ್ವ ನಟರ ನಿರ್ದೇಶಕ ,"[೪೧] ಎಂದು ಹೆಸರುವಾಸಿಯಾಗಿದ್ದಾರೆ ಹಾಗೂ ಅಲಿ ಮೆಕ್‌ಗ್ರಾರಂತಹಾ ಕೆಲವರ ಪಾಲಿಗೆ, ಅವರು "ಪ್ರತಿ ನಟನ ಕನಸು" ಎಂದು ಪರಿಗಣಿಸಲ್ಪಟ್ಟಿದ್ದಾರೆ."[೨೨]

ಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್ಸ್‌ನ ಅಧ್ಯಕ್ಷ ಫ್ರಾಂಕ್‌ ಪಿಯೆರ್ಸನ್‌ ಹೀಗೆಂದಿದ್ದರು, "ಲ್ಯೂಮೆಟ್‌ರು ಅಮೇರಿಕಾದ ಚಲನಚಿತ್ರೋದ್ಯಮದ ಇತಿಹಾಸದಲ್ಲಿನ ಅತ್ಯಂತ ಪ್ರಮುಖ ಚಿತ್ರ ನಿರ್ದೇಶಕರುಗಳಲ್ಲಿ ಒಬ್ಬರಾಗಿದ್ದಾರೆ, ಹಾಗೂ ಅವರ ಕೃತಿಗಳು ವೀಕ್ಷಕರು ಹಾಗೂ ಚಲನಚಿತ್ರದ ಇತಿಹಾಸದ ಮೇಲೆಯೇ ಒಂದು ಅಳಿಸಲಾರದ ಛಾಪನ್ನು ಮೂಡಿಸಿವೆ."[೪೨] ಬೋಸ್ಟನ್‌ ಹೆರಾಲ್ಡ್‌‌ ನ ಲೇಖಕ ಜೇಮ್ಸ್‌‌ ವರ್ನೀಯೆರ್‌ರು ಸೂಚಿಸಿದ ಹಾಗೆ "ಅಮೇರಿಕಾದ ಚಲನಚಿತ್ರೋದ್ಯಮವು ಎಷ್ಟು ತಳಮಟ್ಟಕ್ಕೆ ತಾನು ಹೋಗಬಹುದು ಎಂಬುದನ್ನು ಎದುರುನೋಡುತ್ತಿರುವಂತಹಾ ಕಾಲಘಟ್ಟದಲ್ಲಿಯೂ ಕೂಡಾ, ಸಿಡ್ನಿ ಲ್ಯೂಮೆಟ್‌ರು ನೈತಿಕವಾಗಿ ಸಂಕೀರ್ಣವಾದ ಅಮೇರಿಕನ್‌ ರೂಪಕಗಳ ನಿಪುಣರಾಗಿಯೇ ಉಳಿದುಕೊಂಡಿದ್ದರು."[೪೩]

ಲ್ಯೂಮೆಟ್‌ರ "ಗಮನ ಕೆರಳಿಸುವ ಕಥನಗಳು ಹಾಗೂ ಮರೆಯಲಾಗದ ಪಾತ್ರನಿರ್ವಹಣೆಗಳು ಅವರ ಪ್ರಬಲವಾದ ಛಾಪಿನ ಭಾಗವಾಗಿದೆ," ಎಂದು ಭಾವಿಸುವ ನಿರ್ದೇಶಕ ಮತ್ತು ನಿರ್ಮಾಪಕ ಸ್ಟೀವನ್‌ ಸ್ಪೀಲ್‌ಬರ್ಗ್‌ , "ಚಲನಚಿತ್ರೋದ್ಯಮದ ದೀರ್ಘಕಾಲೀನ ಇತಿಹಾಸದಲ್ಲಿ ಅತ್ಯುತ್ತಮ ನಿರ್ದೇಶಕರುಗಳಲ್ಲಿ ಲ್ಯೂಮೆಟ್‌ರು ಒಬ್ಬರು" ಎಂದು ಭಾವಿಸಿದ್ದರು."[೪೪] ಲ್ಯೂಮೆಟ್‌ರ ಮರಣದ ವಾರ್ತೆ ಕೇಳಿದ ಅಲ್‌ ಪಸೀ/ಕೀನೋರು , ತಮ್ಮ ಚಲನಚಿತ್ರಗಳೊಂದಿಗೆ ಅವರು, "ಅವರು ತಮ್ಮ ಹಿಂದೆ ಶ್ರೇಷ್ಠವಾದ ಹಿರಿಮೆಯೊಂದನ್ನು ಬಿಟ್ಟುಹೋಗಿರುತ್ತಾರೆ, ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಸನಿಹವಾಗಿದ್ದ ವ್ಯಕ್ತಿಗಳಲ್ಲಿ, ಅವರು ಮನುಷ್ಯರಲ್ಲೇ ಅತ್ಯಂತ ನಾಗರಿಕರಾಗಿದ್ದ ಹಾಗೂ ನಾನು ಎಂದಿಗೂ ನೋಡಿರುವವರಲ್ಲೇ ಅತ್ಯಂತ ಕರುಣಾಳು ವ್ಯಕ್ತಿಯಾಗಿ ಉಳಿಯುತ್ತಾರೆ" ಎಂದಿದ್ದರು."[೪೪]

ಅವರು ವೈಯಕ್ತಿಕ ಅಕಾಡೆಮಿ ಪ್ರಶಸ್ತಿಯನ್ನೇನೂ ಗಳಿಸಿರಲಿಲ್ಲವಾದರೂ, ಒಂದು ಅಕಾಡೆಮಿ ಗೌರವಾರ್ಥ ಪ್ರಶಸ್ತಿಯನ್ನು ಪಡೆದಿದ್ದು ೧೦ ಕ್ಷೇತ್ರಗಳಲ್ಲಿ ನಾಮಾಂಕಿತಗೊಂಡು, ೪ ಪ್ರಶಸ್ತಿಗಳನ್ನು ಗೆದ್ದ ನೆಟ್‌ವರ್ಕ್‌ ನಂತಹಾ ತಮ್ಮ ಚಲನಚಿತ್ರಗಳಲ್ಲಿ ೧೪ ಚಿತ್ರಗಳಲ್ಲಿ ಹಲವು ಆಸ್ಕರ್‌ ಪ್ರಶಸ್ತಿಗಳಿಗಾಗಿ ನಾಮಾಂಕಿತಗೊಂಡಿದ್ದಾರೆ. ೨೦೦೫ರಲ್ಲಿ, ಲ್ಯೂಮೆಟ್‌ರು "ಚಿತ್ರಕಥೆಗಾರರು, ಕಲಾವಿದರು ಹಾಗೂ ಚಲನಚಿತ್ರ ಕಲೆಗೆ ನೀಡಿದ ಪ್ರತಿಭಾಪೂರ್ಣ ಸೇವೆಗಳಿಗಾಗಿ" ಜೀವಮಾನದ ಸಾಧನೆಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು." ಅಕಾಡೆಮಿ ಪ್ರಶಸ್ತಿ ಸಂಸ್ಥೆಯಿಂದ ಮನ್ನಣೆಯನ್ನು ಗಳಿಸಿಕೊಂಡ ನಂತರ ಲ್ಯೂಮೆಟ್‌ರು ಹೀಗೆಂದಿದ್ದರು, "ನಾನು ಒಂದು ಪ್ರಶಸ್ತಿಯನ್ನು ಬೇಕೆಂದುಕೊಂಡಿದ್ದೆ, ಹಾಳಾಗಿ ಹೋಗಲಿ, ನಾನು ಒಂದಕ್ಕೆ ಅರ್ಹನಿದ್ದೇನೆ ಎಂದು ನನಗನ್ನಿಸಿತ್ತು."[೪೦] ಅದೇನೇ ಇರಲಿ ನಿರ್ದೇಶಕ ಸ್ಪೈಕ್‌ ಲೀ ಹೀಗೆಂದು ವ್ಯಾಖ್ಯಾನಿಸಿದ್ದರು "ಅವರ ಅತ್ಯದ್ಭುತ ಕೃತಿಗಳು ನಮ್ಮೊಂದಿಗೆ ಶಾಶ್ವತವಾಗಿರುತ್ತವೆ. ಅದು ಆಸ್ಕರ್‌ ಪ್ರಶಸ್ತಿ ಗಳಿಸುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯದ್ದು. ಅಲ್ಲವೇ?"[೪೫]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ವರ್ಷ ಚಲನಚಿತ್ರ ಪಾತ್ರವರ್ಗ
1957 12 ಆಂಗ್ರಿ ಮೆನ್‌‌ ಹೆನ್ರಿ ಫಾಂಡಾ, ಲೀ J. ಕಾಬ್‌
1958 ಸ್ಟೇಜ್‌ ಸ್ಟ್ರಕ್‌ ಹೆನ್ರಿ ಫಾಂಡಾ, ಸೂಸನ್‌ ಸ್ಟ್ರಾಸ್‌ಬರ್ಗ್‌
1959 ದಟ್‌ ಕೈಂಡ್‌ ಆಫ್‌ ವುಮನ್‌ ಸೋಫಿಯಾ ಲಾರೆನ್‌, ಟ್ಯಾಬ್‌ ಹಂಟರ್‌
1959 ದ ಫ್ಯುಜಿಟಿವ್‌ ಕೈಂಡ್‌ ಮಾರ್ಲನ್‌ ಬ್ರಾಂಡೋ, ಜೊವಾನ್ನೆ ವುಡ್‌ವರ್ಡ್‌, ಅನ್ನಾ ಮ್ಯಾಗ್ನನಿ
1961 ಎ ವ್ಯೂ ಫ್ರಮ್‌ ದ ಬ್ರಿಡ್ಜ್‌ ರ್ರ್ಯಾಫ್‌ ವಾಲ್ಲೊನೆ, ಜೀನ್‌ ಸಾರೆಲ್‌
1962 ಲಾಂಗ್‌ ಡೇಸ್‌ ಜರ್ನಿ ಇನ್‌ಟು ನೈಟ್‌ ಕ್ಯಾಥರೀನ್‌ ಹೆಪ್‌ಬರ್ನ್‌ , ರಾಲ್ಫ್‌ ರಿಚರ್ಡ್‌ಸನ್‌ , ಜೇಸನ್‌ ರಾಬರ್ಡ್ಸ್‌
1964 ದ ಪಾನ್‌ ಬ್ರೋಕರ್‌ ರಾಡ್‌ ಸ್ಟೇಗರ್‌ , ಗೆರಾಲ್ಡೀನ್‌ ಫಿಟ್ಜ್‌ಗೆರಾಲ್ಡ್‌‌
1964 ಫೇಲ್‌-ಸೇಫ್‌ ಹೆನ್ರಿ ಫಾಂಡಾ, ಡ್ಯಾನ್‌ ಓ'ಹರ್ಲಿಹಿ , ವಾಲ್ಟರ್‌ ಮತ್ಥಾವು, ಲ್ಯಾರ್ರಿ ಹ್ಯಾಗ್‌ಮನ್‌.
1965 ದ ಹಿಲ್‌ ಸೀನ್‌ ಕಾನರಿ, ಹ್ಯಾರಿ ಆಂಡ್ರ್ಯೂಸ್‌
1966 ದ ಗ್ರೂಪ್‌ ಕ್ಯಾಂಡಿಸ್‌ ಬರ್ಗೆನ್‌ , ಜೋನ್‌ ಹ್ಯಾಕೆಟ್‌
1967 ದ ಡೆಡ್ಲಿ ಅಫೇರ್‌ ಜೇಮ್ಸ್‌ ಮೇಸನ್‌ , ಹ್ಯಾರಿ ಆಂಡ್ರ್ಯೂಸ್‌
1968 ಬೈ ಬೈ ಬ್ರೇವರ್‌ಮ್ಯಾನ್‌ ಜಾರ್ಜ್‌ ಸೇಗಲ್‌ , ಜ್ಯಾಕ್‌ ವಾರ್ಡನ್‌‌
1968 ದ ಸೀ ಗಲ್‌ ವ್ಯಾನೆಸ್ಸಾ ರೆಡ್‌ಗ್ರೇವ್‌, ಸಿಮೋನ್‌ ಸಿಗ್ನೋರೆಟ್‌
1969 ದ ಅಪಾಯಿಂಟ್‌ಮೆಂಟ್‌‌ ಓಮರ್‌ ಷರೀಫ್‌ , ಅನೌಕ್‌ ಐಮೀ
1970 King: A Filmed Record... Montgomery to Memphis ಪಾಲ್‌ ನ್ಯೂಮನ್‌ (ನಿರೂಪಣೆ), ಜೊವಾನ್ನೆ ವುಡ್‌ವರ್ಡ್‌ (ನಿರೂಪಣೆ)
1970 ಲಾಸ್ಟ್‌ ಆಫ್‌ ದ ಮೊಬೈಲ್‌ ಹಾಟ್‌ ಷಾಟ್ಸ್‌ ಲಿನ್‌ ರೆಡ್‌ಗ್ರೇವ್‌, ಜೇಮ್ಸ್‌ ಕೋಬರ್ನ್‌
1971 ದ ಆಂಡರ್‌ಸನ್‌ ಟೇಪ್ಸ್‌ ಸೀನ್‌ ಕಾನರಿ, ಡ್ಯಾನ್‌ ಕ್ಯಾನನ್, ಮಾರ್ಟಿನ್‌ ಬಾಲ್ಸಮ್‌
1972 ಚೈಲ್ಡ್‌ಸ್‌ ಪ್ಲೇ ಜೇಮ್ಸ್‌ ಮೇಸನ್‌, ರಾಬರ್ಟ್‌ ಪ್ರೆಸ್ಟನ್‌
1972 ದ ಅಫೆನ್ಸ್‌ ಸೀನ್‌ ಕಾನರಿ , ಇಯಾನ್‌ ಬ್ಯಾನ್ನೆನ್‌ , ಟ್ರೆವರ್‌ ಹೋವರ್ಡ್‌
1973 ಸರ್ಪಿಕೋ ಅಲ್‌ ಪಸೀ/ಕೀನೋ
1974 ಲವಿಂಗ್‌ ಮೊಲ್ಲಿ ಆಂಥನಿ ಪರ್ಕಿನ್ಸ್‌ , ಬ್ಯೂ ಬ್ರಿಡ್ಜಸ್‌
1974 ಮರ್ಡರ್‌ ಆನ್‌ ದ ಓರಿಯೆಂಟ್‌ ಎಕ್ಸ್‌ಪ್ರೆಸ್‌ ಆಲ್ಬರ್ಟ್‌ ಫಿನ್ನೆ, ಲಾರೆನ್ ಬಾಕಾಲ್‌‌ , ಸೀನ್‌ ಕಾನರಿ , ಇಂಗ್ರಿಡ್‌ ಬರ್ಗ್‌ಮ್ಯಾನ್‌
1975 ಡಾಗ್‌ ಡೇ ಆಫ್ಟರ್‌ನೂನ್‌‌ ಅಲ್‌ ಪಸೀ/ಕೀನೋ , ಜಾನ್‌ ಕ್ಯಾಜಲೇ
1976 ನೆಟ್‌ವರ್ಕ್ ಪೀಟರ್‌ ಫಿಂಚ್‌ , ಫಾಯೆ ಡನ್‌ಅವೇ , ವಿಲಿಯಂ ಹಾಲ್ಡೆನ್‌ , ರಾಬರ್ಟ್‌ ಡುವಾಲ್‌ , ನೆಡ್‌ ಬೀಟ್ಟಿ
1977 ಈಕ್ವಸ್‌ ರಿಚರ್ಡ್‌ ಬರ್ಟನ್‌
1978 ದ ವಿಜ್‌ ಡಯಾನಾ ರಾಸ್‌ , ಮೈಕೆಲ್‌ ಜ್ಯಾಕ್‌ಸನ್‌ , ನಿಪ್ಸೆ ರಸೆಲ್‌ , ಟೆಡ್‌ ರಾಸ್‌ , ರಿಚರ್ಡ್‌ ಪ್ರೈಯಾರ್‌ , ಮೇಬಲ್‌ ಕಿಂಗ್‌‌ , ಲೇನಾ ಹಾರ್ನೆ
1980 ಜಸ್ಟ್‌ ಟೆಲ್‌ ಮಿ ವಾಟ್‌ ಯೂ ವಾಂಟ್‌ ಅಲನ್‌ ಕಿಂಗ್‌, ಅಲಿ ಮೆಕ್‌ಗ್ರಾ
1981 ಪ್ರಿನ್ಸ್‌ ಆಫ್‌ ದ ಸಿಟಿ ಟ್ರೀಟ್‌ ವಿಲಿಯಮ್ಸ್‌ , ಜೆರ್ರಿ ಆರ್‌ಬ್ಯಾಚ್‌
1982 ಡೆತ್‌‌ಟ್ರ್ಯಾಪ್‌‌ ಮೈಕೆಲ್‌ ಕೈನೆ , ಕ್ರಿಸ್ಟೋಫರ್‌ ರೀವ್‌‌ , ಡ್ಯಾನ್‌ ಕ್ಯಾನನ್
1982 ದ ವರ್ಡಿಕ್ಟ್‌ ಪಾಲ್‌ ನ್ಯೂಮನ್‌ , ಜ್ಯಾಕ್‌ ವಾರ್ಡನ್‌‌
1983 ಡ್ಯಾನಿಯೆಲ್‌ ಟಿಮೋತಿ ಹಟ್ಟನ್‌ , ಮ್ಯಾಂಡಿ ಪ್ಯಾಟಿಂಕಿನ್‌
1984 ಗಾರ್ಬೋ ಟಾಕ್ಸ್‌ ಆನ್ನೆ ಬ್ಯಾನ್‌ಕ್ರಾಫ್ಟ್‌ , ರಾನ್‌ ಸಿಲ್ವರ್‌
1986 ಪವರ್‌ ರಿಚರ್ಡ್‌ ಗೆರೆ/ಗೇರ್‌ , ಜ್ಯೂಲಿ ಕ್ರಿಸ್ಟೀ, ಜೀನ್‌ ಹ್ಯಾಕ್‌ಮ್ಯಾನ್‌
1986 ದ ಮಾರ್ನಿಂಗ್‌ ಆಫ್ಟರ್‌ ಜೇನ್‌ ಫೊಂಡಾ/ಫಾಂಡಾ, ಜೆಫ್‌ ಬ್ರಿಡ್ಜಸ್‌
1988 ರನ್ನಿಂಗ್‌‌ ಆನ್‌ ಎಂಪ್ಟಿ ರಿವರ್‌ ಫೀನಿಕ್ಸ್‌ , ಜಡ್‌ ಹಿರ್ಷ್‌‌
1989 ಫ್ಯಾಮಿಲಿ ಬಿಸಿನೆಸ್‌ ಸೀನ್‌ ಕಾನರಿ , ಡಸ್ಟಿನ್‌ ಹಾಫ್‌ಮನ್‌
1990 Q & A ಟಿಮೋತಿ ಹಟ್ಟನ್‌ , ನಿಕ್‌ ನೋಲ್ಟೆ , ಅರ್ಮ್ಯಾಂಡ್‌ ಅಸ್ಸಾಂಟೆ
1992 ಎ ಸ್ಟ್ರೇಂಜರ್‌ ಅಮಾಂಗ್‌ ಅಸ್‌ ಮೆಲನಿ ಗ್ರಿಫಿತ್‌ , ಜಾನ್‌ ಪ್ಯಾಂಕೌ
1993 ಗಿಲ್ಟಿ ಆಸ್‌ ಸಿನ್‌ ಡಾನ್‌ ಜಾನ್ಸನ್‌ , ರೆಬೆಕ್ಕಾ ಡೆ ಮಾರ್ನೆ
1997 ನೈಟ್‌ ಫಾಲ್ಸ್‌ ಆನ್ ಮ್ಯಾನ್‌ಹಾಟ್ಟನ್‌ ಆಂಡಿ ಗಾರ್ಸಿಯಾ , ಇಯಾನ್‌ ಹಾಲ್ಮ್‌ , ಲೆನಾ ಆಲಿನ್‌ , ರಿಚರ್ಡ್‌ ಡ್ರೆಫಸ್‌
1997 ಕ್ರಿಟಿಕಲ್‌ ಕೇರ್‌ ಜೇಮ್ಸ್ ಸ್ಪೇಡರ್‌ , ಕೈರಾ ಸೆಡ್ಜ್‌ವಿಕ್‌
1999 ಗ್ಲೋರಿಯಾ ಷರೋನ್‌ ಸ್ಟೋನ್‌ , ಜಾರ್ಜ್‌ C. ಸ್ಕಾಟ್‌
2004 ಸ್ಟ್ರಿಪ್‌ ಸರ್ಚ್‌ ಗ್ಲೆನ್‌ ಕ್ಲೋಸ್‌ , ಮ್ಯಾಗಿ ಗಿಲ್ಲೆನ್‌ಹಾಲ್‌
2006 ಫೈಂಡ್‌ ಮೀ ಗಿಲ್ಟೀ ವಿನ್‌ ಡೀಸೆಲ್‌ , ಅಲೆಕ್ಸ್‌ ರೊಕ್ಕೋ
2007 ಬಿಫೋರ್‌‌ ದ ಡೆವಿಲ್‌ ನೋಸ್‌ ಯೂ ಆರ್‌ ಡೆಡ್‌ ಫಿಲಿಪ್‌ ಸೇಮರ್‌ ಹಾಫ್‌ಮನ್‌ , ಎಥಾನ್‌ ಹಾಕೆ , ಆಲ್ಬರ್ಟ್‌ ಫಿನ್ನೆ

ಅಕಾಡೆಮಿ ಪ್ರಶಸ್ತಿಗಳು[ಬದಲಾಯಿಸಿ]

ಲ್ಯೂಮೆಟ್‌ರು ನಿರ್ದೇಶಿಸಿದ ಈ ಕೆಳಕಂಡ ಚಲನಚಿತ್ರಗಳು ಅಕಾಡೆಮಿ ಪ್ರಶಸ್ತಿಗಳು ಹಾಗೂ ನಾಮನಿರ್ದೇಶನಗಳನ್ನು ಪಡೆದುಕೊಂಡಿವೆ:

ವರ್ಷ ಚಲನಚಿತ್ರ ನಾಮನಿರ್ದೇಶನಗಳು ಪ್ರಶಸ್ತಿಗಳು
1957 12 ಆಂಗ್ರಿ ಮೆನ್‌‌ 3 style="text-align:center;"
1962 ಲಾಂಗ್‌ ಡೇಸ್‌ ಜರ್ನಿ ಇನ್‌ಟು ನೈಟ್‌ 1 style="text-align:center;"
1965 ದ ಪಾನ್‌ ಬ್ರೋಕರ್‌ 1 style="text-align:center;"
1970 King: A Filmed Record... Montgomery to Memphis 1 style="text-align:center;"
1973 ಸರ್ಪಿಕೋ 2 style="text-align:center;"
1974 ಮರ್ಡರ್‌ ಆನ್‌ ದ ಓರಿಯೆಂಟ್‌ ಎಕ್ಸ್‌ಪ್ರೆಸ್‌ 6 1
1975 ಡಾಗ್‌ ಡೇ ಆಫ್ಟರ್‌ನೂನ್‌ 6 1
1976 ನೆಟ್‌ವರ್ಕ್ 10 4
1977 ಈಕ್ವಸ್‌ 3
1978 ದ ವಿಜ್‌ 4
1981 ಪ್ರಿನ್ಸ್‌ ಆಫ್‌ ದ ಸಿಟಿ 1
1982 ದ ವರ್ಡಿಕ್ಟ್‌ 5
1986 ದ ಮಾರ್ನಿಂಗ್‌ ಆಫ್ಟರ್‌ 1
1988 ರನ್ನಿಂಗ್‌‌ ಆನ್‌ ಎಂಪ್ಟಿ 2

ಇತರ ಪ್ರಶಸ್ತಿಗಳು[ಬದಲಾಯಿಸಿ]

ಉಲ್ಲೇಖಗಳು‌‌[ಬದಲಾಯಿಸಿ]

  1. ೧.೦ ೧.೧ ಸೀಜೆಲ್‌ , ಸ್ಕಾಟ್‌ ಮತ್ತು ಬಾರ್ಬರಾ. ದ ಎನ್‌ಸೈಕ್ಲೋಪೀಡಿಯಾ ಆಫ್‌ ಹಾಲಿವುಡ್‌ (೨೦೦೪) ಚೆಕ್‌ಮಾರ್ಕ್‌ ಬುಕ್ಸ್‌, ೨೫೬
  2. ೨.೦ ೨.೧ ೨.೨ ೨.೩ ೨.೪ "TCM ಜೀವನಚರಿತ್ರೆ"
  3. ಎಬರ್ಟ್‌, ರೋಗರ್‌. "ಸಿಡ್ನಿ ಲ್ಯೂಮೆಟ್‌ : ಇನ್‌ ಮೆಮೋರಿ" Archived November 23, 2012[Date mismatch], ವೇಬ್ಯಾಕ್ ಮೆಷಿನ್ ನಲ್ಲಿ. ಷಿಕಾಗೋ ಸನ್‌ ಟೈಮ್ಸ್ , ಏಪ್ರಿಲ್‌‌ ೯, ೨೦೧೧
  4. ೪.೦೦ ೪.೦೧ ೪.೦೨ ೪.೦೩ ೪.೦೪ ೪.೦೫ ೪.೦೬ ೪.೦೭ ೪.೦೮ ೪.೦೯ ೪.೧೦ ೪.೧೧ ೪.೧೨ ಕ್ನಾಪ್‌ಫ್‌, ಜೊವಾನ್ನಾ E. ಸಿಡ್ನಿ ಲ್ಯೂಮೆಟ್‌ : ಇಂಟರ್‌ವ್ಯೂಸ್‌ , Univ. ಪ್ರೆಸ್‌ ಆಫ್‌ ಮಿಸಿಸಿಪ್ಪಿ (೨೦೦೬)
  5. ೫.೦ ೫.೧ "Obituary: Sidney Lumet". BBC News. ಏಪ್ರಿಲ್ 9, 2011. Retrieved ಏಪ್ರಿಲ್ 10, 2011.
  6. "Film Obituaries; Sidney Lumet". The Daily Telegraph. ಏಪ್ರಿಲ್ 9, 2011. Retrieved ಏಪ್ರಿಲ್ 10, 2011.
  7. ೭.೦ ೭.೧ French, Philip (ಏಪ್ರಿಲ್ 10, 2011). "Sidney Lumet, giant of American cinema, dies at 86". The Observer. London: Guardian Media Group. Retrieved ಏಪ್ರಿಲ್ 10, 2011. {{cite news}}: Text "Film" ignored (help); Text "The Observer" ignored (help)
  8. Honeycutt, Kirk (ಏಪ್ರಿಲ್ 9, 2011). "Sidney Lumet Made New York City Star of His Films". The Hollywood Reporter. Retrieved ಏಪ್ರಿಲ್ 10, 2011.
  9. ಬ್ರಿಡ್ಜ್‌ ಆಫ್‌ ಲೈಟ್‌ (ಯಿಡಿಷ್‌ ಫಿಲ್ಮ್‌ ಬಿಟ್ವೀನ್‌ ಟು ವರ್ಲ್ಡ್‌ಸ್‌ ), ಪುಟಗಳು ೨೦೮, ೨೦೯ , J. ಹೋಬರ್‌ಮನ್‌, ಮ್ಯೂಸಿಯಮ್‌ ಆಫ್‌ ಮಾಡರ್ನ್‌ ಆರ್ಟ್‌‌, ಷಾಕೆನ್‌ ಬುಕ್ಸ್‌ ಸಂಸ್ಥೆಯಿಂದ ಪ್ರಕಟಿತ, ೧೯೯೧, YIVO ಭಾಷಾಂತರಗಳು
  10. ೧೦.೦ ೧೦.೧ ೧೦.೨ ೧೦.೩ ೧೦.೪ ಕ್ಯಾಟ್ಜ್‌, ಎಫ್ರೈಮ್. ದ ಫಿಲ್ಮ್‌ ಎನ್‌ಸೈಕ್ಲೋಪೀಡಿಯಾ (೧೯೯೮) ಹಾರ್ಪರ್‌ ಕಾಲಿನ್ಸ್‌, ೮೫೬
  11. "Sidney Lumet Biography". Filmreference.com. Retrieved ಏಪ್ರಿಲ್ 10, 2011.
  12. "Award-winning director Sidney Lumet dies". Los Angeles Times. Associated Press. ಏಪ್ರಿಲ್ 9, 2011. Archived from the original on ಏಪ್ರಿಲ್ 13, 2011. Retrieved ಏಪ್ರಿಲ್ 10, 2011.
  13. AMCTV.comನಲ್ಲಿ ಸಿಡ್ನಿ ಲ್ಯೂಮೆಟ್‌ರ ಜೀವನಚರಿತ್ರೆ. ಅಗಸ್ಟ್ ೩೦, ೨೦೦೬ರಲ್ಲಿ ಮರು ಸಂಪಾದನೆ.
  14. "ವಾಲ್ಟರ್‌ ಕ್ರಾಂಕೈಟ್‌‌ – ಇನ್‌ ಮೆಮೋರಿಯಮ್‌ 1916 – 2009" PBS , ಜುಲೈ ೨೦, ೨೦೦೯
  15. "ದ ಮೂವೀ ದಟ್‌ ಮೇಡ್‌ ಎ ಸುಪ್ರೀಮ್‌ ಕೋರ್ಟ್‌ ಜಸ್ಟೀಸ್‌", ನ್ಯೂಯಾರ್ಕ್‌ ಟೈಮ್ಸ್ , Oct. ೧೭, ೨೦೧೦
  16. ೧೬.೦ ೧೬.೧ ೧೬.೨ ೧೬.೩ ೧೬.೪ ೧೬.೫ ಬೌಲ್ಸ್‌, ಸ್ಟೀಫನ್‌ E. ಇಂಟರ್‌ನ್ಯಾಷನಲ್‌ ಡಿಕ್ಷನರಿ ಆಫ್‌ ಫಿಲ್ಮ್‌ಸ್‌ ಅಂಡ್‌ ಫಿಲ್ಮ್‌ ಮೇಕರ್ಸ್‌ , (೨೦೦೧) ದ ಗೇಲ್‌ ಗ್ರೂಪ್‌ Inc.
  17. "Sidney Lumet – Biography". Movies.nytimes.com. ಜೂನ್ 25, 1924. Retrieved ಏಪ್ರಿಲ್ 11, 2011.
  18. ೧೮.೦ ೧೮.೧ "Festival de Cannes: Long Day's Journey into Night". festival-cannes.com. Retrieved ಫೆಬ್ರವರಿ 23, 2009.
  19. ೧೯.೦ ೧೯.೧ Gleiberman, Owen (ಏಪ್ರಿಲ್ 9, 2011). "Sidney Lumet was the quintessential New York filmmaker, a prince of the city who captured our flawed souls". Entertainment Weekly. Retrieved ಏಪ್ರಿಲ್ 19, 2011.
  20. ೨೦.೦ ೨೦.೧ ಕನ್ನಿಂಗ್‌ಹ್ಯಾಮ್‌‌ , ಫ್ರಾಂಕ್‌ R. ಸಿಡ್ನಿ ಲ್ಯೂಮೆಟ್‌ : ಫಿಲ್ಮ್‌ ಅಂಡ್‌ ಲಿಟರರಿ ವಿಷನ್‌ , Univ. ಪ್ರೆಸ್‌ ಆಫ್‌ ಕೆಂಟುಕಿ (೧೯೯೧, ೨೦೦೧) p. ೭
  21. "ಡೈರೆಕ್ಟರ್‌ ಸಿಡ್ನಿ ಲ್ಯೂಮೆಟ್‌ ಎ ಹೀರೋ ಆಫ್‌ ಮ್ಯಾನ್‌ ಬ್ಯಾಟ್ಲಿಂಗ್‌ ಪ್ಯಾಕ್‌", SFGate , ಏಪ್ರಿಲ್‌‌ ೧೫, ೨೦೧೧
  22. ೨೨.೦ ೨೨.೧ "ಅಲಿ ಮೆಕ್‌ಗ್ರಾ ರಿಫ್ಲೆಕ್ಟ್‌ಸ್‌ ಆನ್‌ ಹರ್‌ ಕೆರಿಯರ್‌ ಇನ್‌ ಫ್ರಂಟ್‌ ಆಫ್‌ ಕ್ಯಾಮರಾ", ವಾಲ್‌ ಸ್ಟ್ರೀಟ್‌ ಜರ್ನಲ್‌, Jan. ೧೫, ೨೦೧೧
  23. "ಜೇನ್‌ ಫೊಂಡಾ/ಫಾಂಡಾ ರಿಮೆಂಬರ್ಸ್ 'ಕೈಂಡ್‌ ಅಂಡ್‌ ಜನರಸ್‌ ' ಸಿಡ್ನಿ ಲ್ಯೂಮೆಟ್‌ " Contactmusic.com , ಏಪ್ರಿಲ್‌‌ ೧೧, ೨೦೧೧
  24. ೨೪.೦ ೨೪.೧ Berkvist, Robert (ಏಪ್ರಿಲ್ 9, 2011). "Sidney Lumet, Director of American Film Classics, Dies at 86". The New York Times. Retrieved ಏಪ್ರಿಲ್ 9, 2011.
  25. ೨೫.೦ ೨೫.೧ ಹಾರ್ಪೋಲ್‌, ಚಾರ್ಲ್ಸ್‌, ಮತ್ತು ಷಾಟ್ಜ್‌, ಥಾಮಸ್. ಹಿಸ್ಟರಿ ಆಫ್‌ ದ ಅಮೇರಿಕನ್‌ ಸಿನೆಮಾ: ಎ ನ್ಯೂ ಪಾಟ್ ಆಫ್‌ ಗೋಲ್ಡ್‌, ಸಿಮೊನ್‌ ಅಂಡ್‌ ಷಸ್ಟರ್‌ (೨೦೦೦)
  26. ಟೊಮಾಸುಲೋ, ಫ್ರಾಂಕ್‌ P. ಮೋರ್‌ ದ್ಯಾನ್‌ ಎ ಮೆಥಡ್‌ : ಟ್ರೆಂಡ್ಸ್‌ ಅಂಡ್‌ ಟ್ರೆಡಿಷನ್ಸ್‌ ಇನ್‌ ಕಾಂಟೆಂಪೋರರಿ ಫಿಲ್ಮ್‌ ಪರ್ಫಾಮೆನ್ಸ್‌ , ವೇನ್‌ ಸ್ಟೇಟ್‌ Univ. Press (೨೦೦೪) p. ೬೪
  27. ೨೭.೦ ೨೭.೧ ಮಸ್ಟ್‌, ಗೆರಾಲ್ಡ್‌, ಮತ್ತು ಕ್ಯಾವಿನ್‌, ಬ್ರೂಸ್‌‌ F. ಎ ಷಾರ್ಟ್‌ ಹಿಸ್ಟರಿ ಆಫ್‌ ದ ಮೂವೀಸ್‌ (೨೦೦೬) ಪಿಯರ್‌ಸನ್‌ ಎಜುಕೇಶನ್, Inc. ೫೩೮
  28. ೨೮.೦ ೨೮.೧ ೨೮.೨ ಥಾಮ್ಸನ್‌, ಡೇವಿಡ್. "ಎ ಬಯೋಗ್ರಾಫಿಕಲ್‌ ಡಿಕ್ಷನರಿ ಆಫ್‌ ಫಿಲ್ಮ್‌ " (೧೯೯೫) ಆಲ್ಫ್ರೆಡ್‌ A. ಕ್ನಾಪ್‌ಫ್‌, ೪೫೯
  29. Gale, Thomson. "Sidney Lumet". Encyclopedia of World Biography.
  30. ಬರ್ನಾರ್ಡ್‌, ಅಯಾನ್. ಫಿಲ್ಮ್‌ ಅಂಡ್‌ ಟೆಲಿವಿಷನ್‌ ಆಕ್ಟಿಂಗ್‌ : ಫ್ರಮ್‌ ಸ್ಟೇಜ್‌ ಟು ಸ್ಕ್ರೀನ್‌ , ಫೋಕಲ್‌ ಪ್ರೆಸ್‌ (೧೯೯೮)
  31. ಷಾರ್ಕೆ , ಬೆಟ್ಸೆ/ಬೆಟ್ಸಿ. "ಲ್ಯೂಮೆಟ್‌ರು ಸರಳವದ ಮನುಷ್ಯನಾಗುವ ಗೊಂದಲಮಯ ವಿಚಾರಕ್ಕೆ ಮಾರುಹೋಗಿದ್ದರು ", ಲಾಸ್‌ ಏಂಜಲೀಸ್ ಟೈಮ್ಸ್‌ , ಏಪ್ರಿಲ್‌‌ ೧೧, ೨೦೧೧
  32. ೩೨.೦ ೩೨.೧ Lumet, Sidney. Cinema Nation (2000) Avalon Publishing, pgs. 271–275
  33. ೩೩.೦ ೩೩.೧ "Q&A With 'Before the Devil Knows You're Dead' Director Sidney Lumet". New York. ಸೆಪ್ಟೆಂಬರ್ 24, 2007. Retrieved ಏಪ್ರಿಲ್ 10, 2011.
  34. ೩೪.೦ ೩೪.೧ ೩೪.೨ ೩೪.೩ ೩೪.೪ ೩೪.೫ ೩೪.೬ ಡೆಸ್ಸರ್‌, ಡೇವಿಡ್‌; ಫ್ರೀಡ್‌ಮನ್‌, ಲೆಸ್ಟರ್‌ D. ಅಮೇರಿಕನ್‌ ಜ್ಯೂವಿಷ್‌ ಫಿಲ್ಮ್‌ಮೇಕರ್ಸ್ , Univ. ಆಫ್‌ ಇಲಿನಾಯ್ಸ್‌ ಪ್ರೆಸ್‌ (೨೦೦೪)
  35. "ಫಲಪ್ರದ ಅಮೇರಿಕಾದ ಚಿತ್ರ ನಿರ್ದೇಶಕ ಸಿಡ್ನಿ ಲ್ಯೂಮೆಟ್‌ ಮರಣಿಸಿದರು" Archived May 11, 2011[Date mismatch], ವೇಬ್ಯಾಕ್ ಮೆಷಿನ್ ನಲ್ಲಿ., WXEL, ಏಪ್ರಿಲ್‌‌ ೯, ೨೦೧೧
  36. Lumet, Sidney. "Making Movies" (1996) Vintage Books, 58
  37. ಚಾಂಗ್‌, ಜಸ್ಟಿನ್‌. "ಲ್ಯೂಮೆಟ್‌ರು ಸಮಾಜದ ಸೋಲುಗಳನ್ನು ಅಳೆದರು", ವೆರೈಟಿ , ಏಪ್ರಿಲ್‌ ೧೦, ೨೦೧೧
  38. ಕ್ವಶ್ಚನ್ಸ್‌ ಫಾರ್‌ ಸಿಡ್ನಿ ಲ್ಯೂಮೆಟ್‌ , ದ ನ್ಯೂಯಾರ್ಕ್‌ ಟೈಮ್ಸ್‌‌ ನಿಯತಕಾಲಿಕೆ , Nov. ೨೩, ೧೯೯೭
  39. ೩೯.೦ ೩೯.೧ "Director Sidney Lumet remembered by Hollywood stars". BBC. Retrieved ಏಪ್ರಿಲ್ 10, 2011.
  40. ೪೦.೦ ೪೦.೧ "ಸಿಡ್ನಿ ಲ್ಯೂಮೆಟ್‌ : ಲಾಸ್ಟ್‌ ಆಫ್‌ ದ ಗ್ರೇಟ್‌ ಮೂವೀ ಮಾರಲಿಸ್ಟ್‌ಸ್‌ ", FatherhoodChannel.com, ಏಪ್ರಿಲ್‌‌ ೧೦, ೨೦೧೧
  41. ಕಾಯ್ಲೆ, ಜ್ಯಾಕ್‌. AP ವರ್ಲ್ಡ್‌‌ಸ್ಟ್ರೀಮ್‌, ಫೆಬ್ರವರಿ ೨೮, ೨೦೦೫
  42. "Sidney Lumet gets honorary Oscar". Guardian. Retrieved ಏಪ್ರಿಲ್ 11, 2011.
  43. ವರ್ನೀಯೆರ್‌, ಜೇಮ್ಸ್‌. "ಮಾರಲ್‌ ಕಾಂಪ್ಲೆಕ್ಸಿಟಿ ರಿಮೇನ್ಸ್‌ ಡೈರೆಕ್ಟರ್‌ ಸಿಡ್ನಿ ಲ್ಯೂಮೆಟ್‌ 'ಸ್‌ ಸ್ಪೆಷಾಲ್ಟಿ ," ದ ಬೋಸ್ಟನ್‌ ಹೆರಾಲ್ಡ್‌‌ , ಮೇ ೧೬, ೧೯೯೭
  44. ೪೪.೦ ೪೪.೧ "ಸ್ಟೀವನ್‌ ಸ್ಪೀಲ್‌ಬರ್ಗ್‌ ರಿಮೆಂಬರ್ಸ್‌ ಸಿಡ್ನಿ ಲ್ಯೂಮೆಟ್‌ ", ಹಾಲಿವುಡ್‌ ರಿಪೋರ್ಟರ್‌ , ಏಪ್ರಿಲ್‌‌ ೧೧, ೨೦೧೧
  45. "ಅಪ್ರಿಷಿಯೇಟಿಂಗ್‌ ಸಿಡ್ನಿ ಲ್ಯೂಮೆಟ್‌ ; ಒಬಿಟ್ಸ್‌, ಸ್ಪೈಕ್‌ ಲೀ ಟ್ವೀಟ್ಸ್‌ , ಫೋಟೋಸ್‌ ಅಂಡ್‌ ಕ್ಲಿಪ್ಸ್‌ " Archived April 14, 2011[Date mismatch], ವೇಬ್ಯಾಕ್ ಮೆಷಿನ್ ನಲ್ಲಿ., Indiewire.com, ಏಪ್ರಿಲ್‌‌ ೧೦, ೨೦೧೧
  46. "IMDB.com: Awards for The Group". imdb.com. Retrieved ಫೆಬ್ರವರಿ 26, 2010.
  47. "Berlinale 1964: Prize Winners". berlinale.de. Archived from the original on ಮಾರ್ಚ್ 19, 2015. Retrieved ಫೆಬ್ರವರಿ 20, 2010.
  48. "IMDB.com: Awards for That Kind of Woman". imdb.com. Retrieved ಜನವರಿ 10, 2010.
  49. "7th Berlin International Film Festival: Prize Winners". berlinale.de. Archived from the original on ಏಪ್ರಿಲ್ 4, 2014. Retrieved ಡಿಸೆಂಬರ್ 28, 2009.
  50. "Festival de Cannes: A Stranger Among Us". festival-cannes.com. Retrieved ಆಗಸ್ಟ್ 13, 2009.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]

  1. REDIRECT Template:Iobdb name
  1. REDIRECT Template:Sidney Lumet
  2. REDIRECT Template:Golden Globe Award for Best Director 1966–1990