ಸಿಂಧನೂರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಾಯಚೂರು ಜಿಲ್ಲೆಯಲ್ಲಿ ಸಿಂಧನೂರು ತಾಲ್ಲೂಕು

ಸಿಂಧನೂರು ನಗರ ಸಿಂಧನೂರು ತಾಲ್ಲೂಕಿನ ಕೇಂದ್ರವಾಗಿದ್ದು, ರಾಯಚೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ತಾಲ್ಲೂಕಿನ ಹೆಚ್ಚಿನ ಕೃಷಿ ಭೂಮಿಯು ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ನೀರಾವರಿಯ ಸೌಕರ್ಯ ವರ್ಷದ ಎರಡೂ ಬೆಳಗಳಿಗೆ ಲಭ್ಯವಾಗಿ ಭತ್ತವನ್ನು ಎಥೇಚ್ಛವಾಗಿ ಬೆಳೆಯಲಾಗುತ್ತದೆ. ಆದ್ದರಿಂದ ಈ ತಾಲ್ಲೂಕನ್ನು ಭತ್ತದ ಖಣಜ ಎಂದು ಕರೆಯಲಾಗುತ್ತದೆ. ೨೦೦೧ನೇ ಜನಗಣತಿಯ ಪ್ರಕಾರ ತಾಲ್ಲೂಕಿನ ಜನಸಂಖ್ಯೆಯು ೩೬೦೧೬೪ ಇದ್ದು ಸಾಕ್ಷರತೆ ಪ್ರಮಾಣ ಶೇ. ೫೦.೬ ರಷ್ಟಿದೆ. ತಾಲ್ಲೂಕಿನ ವಿಸ್ತೀರ್ಣ ೧೫೬೭.೭೦ ಚದರ ಕಿ.ಮೀ. ಇದೆ.

ಭೌಗೋಳೀಕ ಲಕ್ಷಣಗಳು[ಬದಲಾಯಿಸಿ]

ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಕೃಷಿ ಭೂಮಿಯು ಕಪ್ಪು ಮಣ್ಣಿನಿಂದ ಕೂಡಿದ್ದು, ಫಲವತ್ತಾಗಿದೆ. ಭೂಮಿಯು ಸಮತಟ್ಟಾಗಿದ್ದು, ಭತ್ತ ಬೆಳೆಯಲು ಯೋಗ್ಯವಾಗಿದೆ.

ರಾಜಕೀಯ[ಬದಲಾಯಿಸಿ]

 • ಶ್ರೀ ಮದುಸೂದನ ಗುಡಿ [ದೇಸಾಯಿ ಫ಼ಾರ್ಮ್ ಇಕ್ವಿಪಮೆಂಟ್,ಸಿಂದನೂರು] ವ್ಯಕ್ತಿತ್ವವನ್ನು ನೋಡಬಹುದು.
 • ಶ್ರೀ ಕರಡಿ ಸಂಗಣ್ಣ, ಸಂಸದರು, ಕೊಪ್ಪಳ ಕ್ಷೇತ್ರ ಇವರು ಕೊಪ್ಪಳರವರಾಗಿದ್ದು, ಬಿ ಜೆ ಪಿ ಪಕ್ಷದಿಂದ ಚುನಾಯಿತರಾಗಿದ್ದಾರೆ.
 • ಶ್ರೀ ಹಂಪನ ಗೌಡ ಬಾದರ್ಲಿ ಶಾಸಕರು, ಸಿಂಧನೂರು ವಿಧಾನ ಸಭಾ ಕ್ಷೇತ್ರ. ಕಾಂಗ್ರೇಸ್ ಪಕ್ಷದಿಂದ ಚುನಾಯಿತರಾಗಿದ್ದಾರೆ.
 • ಗೊರೇಬಾಳ ಶ್ರೀಶರಣಬಸವೇಶ್ವರ ಪವಿತ್
 • ಕನ್ನಡ,ತೆಲುಗು,ತಮಿಳು,ಬೆಂಗಾಲಿ,ರಾಜಸ್ತಾನಿ ಹಾಗು ಉರ್ದು ಮಾತನಾಡುವ ಬಾ‍‍‍‍‌‌ಸಿಕರಿದ್ದಾರೆ.
 • ಒಂದು ಮೂಲದ ಪ್ರಕಾರ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಟ್ರ್ಯಾಕ್ಟರ್ ಗಳು ಮಾರಾಟವಾಗುವ/ ಉಪಯೋಗಿಸುವ ಕೇಂದ್ರವಾಗಿದೆ.
 • ಇಲ್ಲಿ ಉತ್ಕೃಷ್ಟ ಗುಣಮಟ್ಟದ ವಿದೇಶಗಳಿಗೆ ರಫ್ತಾಗುವ ಸೋನಾಮಸೂರಿ ಹಾಗೂ ಬಾಸುಮತಿ ಅಕ್ಕಿಯನ್ನು ಬೆಳೆಯಲಾಗುತ್ತದೆ.
 • ಇಂದು ೦೫-೦೧-೨೦೧೫ ರಂದು ಅಂಬಾಮಟದ ಅಂಬಾದೇವಿಯ ತೇರು ಎಳಯುವುದು.ಸಂಜೆ ೦೫:೦೦ ಗಂಟೆಗೆ
 • ಸಿಂದನೂರು ತಾಲೂಕಿನ,ಅಂಬಾಮಟ ಅಂಬಾದೇವಿಯ ಪ್ರಸಿದ್ದ ದೇವಾಲಯವಿರುತ್ತದೆ ಇದು ದೇಶದಲ್ಲಿಯೇ ಎರಡನೆ ಬಗಳಾಮುಖಿ ಆಗಿದ್ದು ,
 • ಸಿಂಧನೂರು ಅನೇಕ ವಿಶೇಷಗಳಲ್ಲಿ ವಿಶೇಷವಾದದ್ದು ಎಂದರೆ ಆಶ್ಛರ್ಯ ಪಡಬೇಕಾಗಿಲ್ಲ.ಇಲ್ಲಿ ಬರುವ ಅನೇಕ ಸಹಕಾರಿ ಸಂಸ್ಥೆಗಳಿಗೆ ಶ್ರೀ ಬಿ ರಾಜಶೇಖರ ಎನ್ನುವ ಕ್ರೀಯಾಶಿಲ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಸ್ಥುತರ್ಯ. ವ್ಯಕ್ತಿ ತಮ್ಫ ಭೇಟಿ ನೀಡುವ ರಾಜ್ಯದ ಯಾವುದೆ ಸಹಕಾರಿಯ ಆಡಳಿತ ಮಂಡಳಿ, ಸಿಬ್ಬಂಧಿ ಅಥವಾ ಸಹಕಾರಿ ಕ್ಷೇತ್ರದ ಆಸಕ್ತರಿಗೆ ಅವರು ನೀಡುವ ಮಾಹಿತಿ ಉತ್ಕ್ರಷ್ಟವಾಗಿರುತ್ತದೆ. ಇವರು ನೀಡುವ ಸಲಹೆಗಳನ್ನು ಪಡೆದ ಅನೇಕ ಸಹಕಾರಿ ಸಂಘಗಳು ಪ್ರಗತಿಪತದಲ್ಲಿ ನಡೆಯುತ್ತಿವೆ.
 • ಅತಿ ಹೆಚ್ಚು ವರದಿಗಾರರು ಇಲ್ಲಿದ್ದಾರೆ. ಅಶೋಕ ಬೆನ್ನೂರು ಪ್ರಮುಖರು ಇಲ್ಲಿದ್ದಾರೆ.
 • ಸಾಹಿತ್ಯ ಕ್ಷೇತ್ರಗಳಲ್ಲಿ ಪುರಾಣ ಪುಣ್ಯಕಥೆಗಳ ಬರೆದು ಹೆಸರಾದ ಪ್ರಭಾನಂದ ಪಂಡಿತರು ಈ ತಾಲೂಕಿನ ರವುಡಕುಂದಿ ಗ್ರಾಮದವರಾಗಿದ್ದಾರೆ.
 • ಅತಿ ಹೆಚ್ಚು ಸಹಕಾರಿ ಸಂಘಗಳಿರುವ ತಾಲೂಕು ಈ ಸಿಂಧನೂರು ತಾಲೂಕಾಗಿದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:
"http://kn.wikipedia.org/w/index.php?title=ಸಿಂಧನೂರು&oldid=529070" ಇಂದ ಪಡೆಯಲ್ಪಟ್ಟಿದೆ