ಸಾಸೇಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kiełbasa Biała (ಬಿಳಿ ಸಾಸೇಜ್), Szynkowa (ಚಪ್ಪಟೆ), Śląska ಮತ್ತು Podhalańska styles (ಪೋಲ್ಯಾಂಡ್)

ಸಾಸೇಜ್ ಅನ್ನುವುದು ಸಾಮಾನ್ಯವಾಗಿ ರುಬ್ಬಿದ ಮಾಂಸ, ಮತ್ತು ಉಪ್ಪು, ವನಸ್ಪತಿಗಳು, ಮತ್ತು ಮಸಾಲೆ ಪದಾರ್ಥಗಳಿಂದ ತಯಾರಿಸಿದ ಒಂದು ಆಹಾರ.

ಸಾಂಕೇತಿಕವಾಗಿ ಸಾಸೇಜ್‌ನ್ನು ಸಾಂಪ್ರದಾಯಿಕವಾಗಿ ಕರುಳುನಿಂದ ಮಾಡಿದ, ಅಥವಾ ಕೆಲವು ಸಲ ಕೃತಕವಾಗಿ ಮಾಡಿದ ಹೊರಕವಚದಲ್ಲಿ ರಚಿಸಲಾಗುತ್ತದೆ. ಕೆಲವು ಸಾಸೇಜ್‌ಗಳನ್ನು ಸಂಸ್ಕರಣೆಯ ಸಮಯದಲ್ಲಿ ಬೇಯಿಸಿ ಮತ್ತು ನಂತರ ಹೊರಕವಚವನ್ನು ತಗೆಯಬಹುದಾಗಿದೆ.

ಸಾಸೇಜ್ ಮಾಡುವಿಕೆಯು ಒಂದು ಸಾಂಪ್ರದಾಯಬದ್ದವಾದ ಆಹಾರ ಸಂರಕ್ಷಣೆಯ ತಂತ್ರವಾಗಿದೆ. ಸಾಸೇಜ್‌ಗಳನ್ನು ಸಂಸ್ಕರಣೆ ಮಾಡುವಿಕೆಯಿಂದ (ಕೆಡಂತೆ ಮಾಡುವಿಕೆಯಿಂದ), ಒಣಗಿಸುವುದರಿಂದ, ಅಥವಾ ಹೊಗೆಯಾಡಿಸುವುದರಿಂದ ಸಂರಕ್ಷಿಸಬಹುದಾಗಿದೆ.

ಇತಿಹಾಸ[ಬದಲಾಯಿಸಿ]

ಹಂಗೇರಿಯಲ್ಲಿ ಸಾಸೇಜ್ ಮಾಡುವ ವಿಧಾನ

ದುಂದುವೆಚ್ಚ ಮಾಡದ ಕಸಾಯಿಖಾನೆಗಳ ಪರಿಣಾಮವಾಗಿ ಸಾಸೇಜ್‌ಗಳು ಹುಟ್ಟಿಕೊಂಡಿವೆ. ಸಾಂಪ್ರದಾಯಬದ್ದವಾಗಿ, ಸಾಸೇಜ್-ತಯಾರಿಕರು, ತಿನ್ನಬಹುದಾದಂತಹ ಮತ್ತು ಪುಷ್ಟಿದಾಯಕ ಅಂಗಾಂಶಗಳನ್ನು ಮತ್ತು ಅಂಗಗಳನ್ನು ಉಪಯೋಗಿಸುತ್ತಾರೆ, ಆದರೆ, ಉಳಿಕೆಪಳಿಕೆಗಳು, ಅವಯುವಗಳ ಮಾಂಸಗಳು, ರಕ್ತ, ಮತ್ತು ಕೊಬ್ಬುಗಳಂತಹವು-ಸಂರಕ್ಷಣೆಗೆ ಅನುಕೂಲವಾಗುವಂತಹ ವಿಧಾನದಲ್ಲಿ ಪ್ರಮುಖ ಆಕರ್ಷಕವಾಗಿರುವುದಿಲ್ಲ: ಸಾಂಕೇತಿಕವಾಗಿ, ಉಪ್ಪುಮಿಶ್ರಮಾಡಲಾಗುತ್ತದೆ ಮತ್ತು ಪ್ರಾಣಿಗಳ ಕರುಳನ್ನು ಒಳಗೆ ಹೊರಗೆ ಶುಭ್ರಗೊಳಿಸಿ, ಮತ್ತು ಒಳಭಾಗವನ್ನು ಹೊರಕ್ಕೆ ಬರುವಂತೆ ತಿರುಗಿಸಿ ಮಾಡಿದ ಕೊಳವೆ ಆಕಾರದ ಹೊರಕವಚದಲ್ಲಿ ತುಂಬಲಾಗುತ್ತದೆ, ಇದು ನೋಡಲು ಸಿಲಿಂಡರ್ ಆಕಾರದಲ್ಲಿರುತ್ತದೆ. ಆದ್ದರಿಂದ, ಇವನ್ನು ಬೇಯಿಸಿ ಕೂಡಲೆ ತಿಂದರೂ ಅಥವಾ ವಿವಿಧ ಡಿಗ್ರಿಗಳಿಗೆ ಒಣಗಿಸಿದರೂ, ಸಾಸೇಜ್‌ಗಳು, ಪುಡ್ಡಿಂಗ್‌ಗಳು ಮತ್ತು ಸಲಾಮಿ (ಖಾರವಾದ ಮಾಂಸದ ಕಡುಬು)ಗಳು ಸಿದ್ದಗೊಳಿಸಿದ ಆಹಾರಗಳಲ್ಲಿ ಅತೀ ಹಳೆಯದಾದವಾಗಿರುತ್ತವೆ.

ಮೊದಲ ಸಾಸೇಜ್‌ಗಳನ್ನು, ಕರಿದ ಕರುಳುಗಳನ್ನು ಹೊಟ್ಟೆಗಳಿಗೆ ತುಂಬಿಸುವುದರ ಮೂಲಕ, ಆದಿ ಮಾನವರಿಂದ ಮಾಡಲಾಗಿತ್ತು.[೧] 589 BC ಯಲ್ಲಿ, ಒಂದು ಚೈನೀಸ್ ಸಾಸೇಜ್ ಲಚಾಂಗ್ ಮೇಕೆ ಮತ್ತು ಕುರಿಮರಿ ಮಾಂಸವನ್ನು ಒಳಗೊಂಡಿದೆ ಎಂದು ನಮೂದಿತಗೊಂದಿತ್ತು. ಗ್ರೀಕ್ ಕವಿ ಹಮೆರ್ ಒಡಿಸ್ಸೆಯಲ್ಲಿ ರಕ್ತ ಸಾಸೇಜ್ ನಮೂನೆಯನ್ನು ನಮೂದಿಸಿದರು, ಮತ್ತು ಎಪಿಚಾರ್ಮಸ್ ದಿ ಸಾಸೇಜ್ ಹೆಸರಿನ ಒಂದು ಹಾಸ್ಯ ಲೇಖನವನ್ನು ಬರೆದರು. ಪುರಾವೆಗಳ ಪ್ರಕಾರ ಸಾಸೇಜ್‌ಗಳು ಪ್ರಾಚೀನ ಗ್ರೀಕ್‌ಜನರಲ್ಲಿ ಮತ್ತು ರೋಮನ್‌ಜನರಲ್ಲಿ ಈಗಾಗಲೇ ಪ್ರಸಿದ್ಧವಾಗಿವೆ, ಮತ್ತು ಯುರೋಪಿನ ಬಹುತೇಕಭಾಗವನ್ನು ಆಕ್ರಮಿಸಿದ ಅನಕ್ಷರಸ್ಥ ಬುಡಕಟ್ಟು ಜನಾಂಗಗಳಲ್ಲೂ ಇದು ಸಂಭವನೀಯವಾಗಿ ಪ್ರಸಿದ್ದವಾಗಿದೆ.

ಜರ್ಮನ್ ವುರ್ಸ್ಟ್: ಯಕೃತ್ ಸಾಸೇಜ್, ರಕ್ತ ಸಾಸೇಜ್ ಮತ್ತು ತೊಡೆ ಸಾಸೇಜ್

ಸಾಸೇಜ್ ಇಟಲಿಯ ಲುಕಾನಿಯದಲ್ಲಿ ಇದರ ಮೂಲವನ್ನು ಹೊಂದಿದೆ, ಈಗ ಇದನ್ನು ಬಸಿಲಿಕಟ ಎಂದು ಗುರುತಿಸಲಾಗುತ್ತಿದೆ. ಸಿಸೆರೊ ಮತ್ತು ಮಾರ್ಟಿಯಲ್‌ರಂತಹ ತತ್ವಜ್ಞಾನಿಗಳು ಲುಕಾನಿಯ ಎಂದು ಕರೆಯಲ್ಪಡುವ ಸಾಸೇಜ್ ನಮೂನೆಯನ್ನು ಗೊತ್ತುಪಡಿಸಿದರು, ನಿಜವಾಗಿಯು ಇಟಲಿಯಲ್ಲಿ ವ್ಯಾಪಕವಾಗಿ ಹರಡಿದ್ದನ್ನು, ಲುಕಾನಿಯಾನ್ ಗುಲಾಮರಿಂದ ರೋಮನ್ ಚಕ್ರಾದಿಪತ್ಯದ ಸಮಯದಲ್ಲಿ ಪರಿಚಯಿಸಲಾಯಿತು.[೨] ರೋಮನ್ ಚಕ್ರವರ್ತಿ ನೆರೊರ ಅಧಿಪತ್ಯದ ಸಮಯದಲ್ಲಿ, ಸಾಸೇಜ್‌ಗಳನ್ನು ಲುಪೆರ್ಕಾಲಿಯ ಹಬ್ಬದಲ್ಲಿ ಉಪಯೋಗಿಸಲಾಗುತ್ತಿತ್ತು. 10ನೆಯ ಶತಮಾನದ ಆರಂಭದಲ್ಲಿ ಬಿಜಂಟೈನ್ ಚಕ್ರಾದಿಪತ್ಯದಲ್ಲಿ, ಫುಡ್ ಪಾಯಿಸನಿಂಗ್ (ಸೇವಿಸಿದ ಆಹಾರ ವಿಷಾಕಾರಿಯಾಗುವಿಕೆ) ಸಂಘಟನೆಗಳ ನಂತರ, ಲಿಯೊ VI ದಿ ವೈಸ್ ರಕ್ತ ಸಾಸೇಜ್‌ಗಳ ಉತ್ಪಾದನೆಯನ್ನು ನಿಷೇಧಿಸಿದರು.

ಸಾಂಪ್ರದಾಯಬದ್ಧವಾಗಿ, ಸಾಸೇಜ್ ಹೊರಕವಚಗಳನ್ನು ಶುಭ್ರಗೊಳಿಸಿದ ಕರುಳುಗಳಿಂದ ಮಾಡಲಾಗುತ್ತದೆ, ಅಥವಾ ಹಗ್ಗೀಸ್ ಮತ್ತು ಇತರ ಸಾಂಪ್ರದಾಯಿಕ ಪುಡ್ಡಿಂಗ್‌ಗಳ ವಿಷಯಗಳಲ್ಲಿ ಹೊಟ್ಟೆಗಳಿಂದ ಮಾಡುತ್ತಾರೆ. ಪ್ರಸ್ತುತ ದಿನಗಳಲ್ಲಿ, ಹೇಗಾದರೂ ಸ್ವಾಭಾವಿಕ ಹೊರಕವಚಗಳ ಬದಲಿಗೆ ಕೊಲ್ಲಾಜನ್, ಸೆಲ್ಯುಲೊಸ್ ಅಥವಾ ಪ್ಲಾಸ್ಟಿಕ್ ಕವಚಗಳನ್ನು ಸಹ ಉಪಯೋಗಿಸಲಾಗಿತ್ತಿದೆ, ಇದು ಮುಖ್ಯವಾಗಿ ಕೈಗಾರಿಕೆಯಲ್ಲಿ ಉತ್ಪತ್ತಿಮಾಡಿದ ಸಾಸೇಜ್‌ಗಳಿಗೆ. ಘನರೂಪದ ಸಾಸೇಜ್‌ಗಳಂತಹ, ಕೆಲವು ರೀತಿಯ ಸಾಸೇಜ್‌ಗಳನ್ನು ಹೊರಕವಚ ಇಲ್ಲದೆ ತಯಾರಿಸಲಾಗುತ್ತದೆ. ಇದರ ಜೊತೆಗೆ, ಲಾಂಚೆಯೊನ್ ಮಾಂಸ ಮತ್ತು ಸಾಸೇಜ್ ಮಾಂಸಗಳು ಹೊರಕವಚಗಳಿಲ್ಲದೆ ಟಿನ್ ಕ್ಯಾನುಗಳಲ್ಲಿ ಮತ್ತು ಜಾಡಿಗಳಲ್ಲಿ ಲಭಿಸುತ್ತಿವೆ.

ಅತೀ ಮೂಲ ಸಾಸೇಜ್, ತುಂಡುಗಳಾಗಿ ಕತ್ತರಿಸಿದ ಅಥವಾ ರುಬ್ಬಿದ ಮಾಂಸವನ್ನು ಒಳಗೊಂಡಿರುತ್ತದೆ, ಮತ್ತು ಇದನ್ನು ಹೊರಕವಚದಲ್ಲಿ ತುಂಬಿಸಲಾಗಿರುತ್ತದೆ. ಮಾಂಸವು ಯಾವುದೇ ಪ್ರಾಣಿಯದ್ದಾಗಿರಬಹುದು, ಆದರೆ ಸಾಂಪ್ರದಾಯಿಕವಾಗಿ ಹಂದಿಯ ಮಾಂಸ, ಗೋಮಾಂಸ ಅಥವಾ ಆಕಳಕರುವಿನ ಮಾಂಸಗಳನ್ನು ಉಪಯೋಗಿಸಲಾಗುತ್ತದೆ. ಮಾಂಸ ಮತ್ತು ಕೊಬ್ಬಿನ ಪ್ರಮಾಣ ಶೈಲಿ ಮತ್ತು ಉತ್ಪಾದಕರನ್ನು ಅವಲಂಭಿಸಿರುತ್ತದೆ, ಆದರೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಕೊಬ್ಬಿನ ಅಂಶವನ್ನು ಶೈಲಿಯನ್ನು ಆಧರಿಸಿ, ತೂಕಕ್ಕೆ ತಕ್ಕಂತೆ, ಗರಿಷ್ಟ 30%, 35% ಅಥವಾ 50%, ಪ್ರಮಾಣದಲ್ಲಿರುವಂತೆ ಕಾನೂನುಬದ್ಧವಾಗಿ ಮಿತಿಗೊಳಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್‌ ಡಿಪಾರ್ಟ್‌ಮೆಂಟ್ ಆಫ್ ಅಗ್ರಿಕಲ್ಚರ್ ವಿವಿಧ ಸಾಸೇಜ್‌ಗಳ ಒಳ ಅಂಶಗಳನ್ನು ಗೊತ್ತುಪಡಿಸುತ್ತದೆ, ಸಾಮಾನ್ಯವಾಗಿ ಇದು ತುಂಬಿಸುವವರನ್ನು ಮತ್ತು ವಿಸ್ತಾರಗೊಳಿಸುವವರನ್ನು ನಿಷೇದಿಸುತ್ತದೆ.[೩] ಯುರೋಪಿನ ಮತ್ತು ಏಸಿಯಾದ ಬಹುತೇಕ ಸಾಸೇಜ್ ಶೈಲಿಗಳು ಬ್ರೆಡ್ ಆಧರಿತ ತುಂಬುವ ಅಂಶಗಳನ್ನು ಉಪಯೋಗಿಸುವುದಿಲ್ಲ, ಬದಲಾಗಿ ಇವು 100% ಮಾಂಸ ಮತ್ತು ಕೊಬ್ಬಿನಿಂದ ಕೂಡಿದ್ದು, ಸುವಾಸನೆ ನೀಡುವ ಯಾವುದೇ ಅಂಶಗಳನ್ನು ಒಳಗೊಂಡಿರುವುದಿಲ್ಲ.[೪] ಇಂಗ್ಲಿಷ್ ಅಡಿಗೆ ವಿಧಾನವನ್ನು ಹೊಂದಿದ್ದ, UK ಮತ್ತು ಇತರ ದೇಶಗಳಲ್ಲಿ, ಅಡಕಗಳಲ್ಲಿ 25% ವರೆಗು ಬ್ರೆಡ್ ಮತ್ತು ಗಂಜಿ-ಆಧಾರಿತ ಒಳ ಅಂಶಗಳು ಸೇರಿರುತ್ತವೆ. ಬಹುತೇಕ ಸಾಸೇಜ್‌ಗಳಲ್ಲಿ ಉಪಯೋಗಿಸಿದ ಒಳ ಅಂಶಗಳು ಬೇಯಿಸಿದಾಗ ಅವುಗಳ ಆಕಾರಗಳನ್ನು ಉಳಿಸಿಕೊಳ್ಳಲು ಸಹಾಯಕವಾಗಿರುತ್ತವೆ. ಶಾಖದಲ್ಲಿ ಮಾಂಸ ಕುಗ್ಗುತ್ತದೆ, ಆದ್ದರಿಂದ ಇದರಲ್ಲಿನ ಒಳ ಅಂಶಗಳು ಮಾಂಸದಿಂದ ಬಿಡುಗಡೆಯಾದ ದ್ರವವನ್ನು ಹೋರಿಕೊಂಡು ಹಿಗ್ಗುತ್ತವೆ.

ಸಾಸೇಜ್ ಅನ್ನುವ ಪದವನ್ನು ಪ್ರಾಚೀನ ಪ್ರೆಂಚ್ ಪದ ಸಾಸ್ಸಿಚ್ , ಹಾಗು ಲ್ಯಾಟಿನ್ ಪದ ಸಲ್‌ಸಸ್ ನಿಂದ ಪಡೆಯಲಾಗಿದೆ, ಇದರ ಅರ್ಥ ಉಪ್ಪಿನಿಂದ ಕೂಡಿದ .

ಸಾಸೇಜ್‌ನ ವರ್ಗೀಕರಣ[ಬದಲಾಯಿಸಿ]

Réunion ಸಾಸೇಜ್‌ಗಳು
Swojska (ಪೋಲಿಶ್)
Krajańska (ಪೋಲಿಶ್)
Szynkowa (ಪೋಲಿಶ್)

ಸಾಸೇಜ್‌ಗಳ ವರ್ಗೀಕರಣವು ಪ್ರಾದೇಶಿಕ ಅಭಿಪ್ರಾಯಗಳ ಭಿನ್ನತೆಯಮೇಲೆ ಆಧಾರವಾಗಿರುತ್ತದೆ. ಅಡಕಗಳ ವಿಧಗಳು, ಸಾಂದ್ರತೆ, ಮತ್ತು ಉಪಯೋಗಿಸಿದ ತಯಾರಿಕೆ ವಿಧಾನಗಳಂತಹ ಭಿನ್ನವಾದ ಮೆಟ್ರಿಕ್‌ಗಳನ್ನು ಅವಲಂಭಿಸಿರುತ್ತದೆ. ಆಂಗ್ಲಭಾಷೆ-ಮಾತನಾಡುವ ಪ್ರಪಂಚದಲ್ಲಿ, ಈ ಕೆಳಗೆ ನಮೂದಿಸಿದ ತಾಜಾ , ಬೇಯಿಸಿದ , ಮತ್ತು ಒಣಗಿಸಿದ ಸಾಸೇಜ್‌ಗಳ ನಡುವಿನ ವ್ಯತ್ಯಾಸಗಳು ಹೆಚ್ಚು-ಕಡಿಮೆ ಸಮ್ಮತಿಸಿದವುಗಲಾಗಿ ಕಾಣುತ್ತವೆ:

  • ಬೇಯಿಸಿದ ಸಾಸೇಜ್‌ಗಳನ್ನು ತಾಜಾ ಮಾಂಸದಿಂದ ಮಾಡಲಾಗುವುದು ಮತ್ತು ನಂತರ ಸಂಪೂರ್ಣ ಬೇಯಿಸಲಾಗುವುದು. ಅವನ್ನು ಬೇಯಿಸಿದ ನಂತರ ಕೂಡಲೇ ಸೇವಿಸಲಾಗುತ್ತದೆ ಇಲ್ಲದಿದ್ದರೆ ಕಡ್ಡಾಯವಾಗಿ ಶೀತಲವಾಗಿಡಲಾಗುತ್ತದೆ. ಉದಾಹರಣೆಗೆ ಹಾಟ್ ಡಾಗ್ಸ್, Braunschweiger ಮತ್ತು ಲಿವರ್ ಸಾಸೇಜ್.
  • ಬೇಯಿಸಿ ಹೊಗೆಯಾದಿಸಿದ ಸಾಸೇಜ್‌ಗಳನ್ನು ಬೇಯಿಸಿ ನಂತರ ಹೊಗೆಯಾಡಿಸಲಾಗುವುದು ಅಥವಾ ಹೊಗೆಸಮೇತ-ಬೇಯಿಸಲಾಗುವುದು. ಅವನ್ನು ಬಿಸಿಯಾಗಿ ಅಥವಾ ತಣ್ಣಗೆ ತಿನ್ನಲಾಗುವುದು, ಆದರೆ ಅವನ್ನು ಅವಶ್ಯಕವಾಗಿ ಶೀತಲವಾಗಿಡತಕ್ಕದ್ದು. ಉದಾಹರಣೆಗೆ Gyulai kolbász, ಕೈಲ್‌ಬಾಸ ಮತ್ತು ಮೊರ್ಟಡೆಲ್ಲ.
  • ತಾಜಾ ಸಾಸೇಜ್‌ಗಳನ್ನು ಮೊದಲೇ ಸಂಸ್ಕರಿಸಿ ಇಡದ ಅಂದರೆ ತಾಜಾ ಮಾಂಸದಿಂದ ಮಾತ್ರ ಮಾಡಲಾಗುತ್ತದೆ. ಅವನ್ನು ಕಡ್ಡಾಯವಾಗಿ ಶೀತಲವಾಗಿಡಲಾಗುವುದು ಮತ್ತು ಸೆವಿಸುವ ಮೊದಲು ಸಂಪೂರ್ಣವಾಗಿ ಬೇಯಿಸಲಾಗುವುದು. ಉದಾಹರಣೆಗೆ Boerewors, ಇಟಾಲಿಯನ್ ಪೋರ್ಕ್ ಸಾಸೇಜ್ ಮತ್ತು ಬ್ರೇಕ್‌ಪಾಸ್ಟ್ ಸಾಸೇಜ್.
  • ತಾಜಾ ಹೊಗೆಯಾಡಿಸಿದ ಸಾಸೇಜ್‌ಗಳು , ಇಲ್ಲಿ ತಾಜಾ ಸಾಸೇಜ್‌ಗಳಿಗೆ ಹೊಗೆಯಾಡಿಸಲಾಗುತ್ತದೆ. ಅವನ್ನು ಕಡ್ಡಾಯವಾಗಿ ಶೀತಲವಾಗಿಟ್ಟು ಸೇವಿಸುವ ಮೊದಲು ಸಂಪೂರ್ಣವಾಗಿ ಹೊಗೆಯಾಡಿಸತಕ್ಕದ್ದು. ಉದಾಹರಣೆಗೆ Mettwurst ಮತ್ತು Teewurst.
  • ಒಣಗಿದ ಸಾಸೇಜ್‌ಗಳು , ಇಲ್ಲಿ ಸಂಸ್ಕರಿಸಿದ ಸಾಸೇಜ್‌ಗಳನ್ನು ಹುಳಿಬರಿಸಿ, ಒಣಗಿಸಲಾಗುವುದು. ಸಾಮಾನ್ಯಾವಿ ಅವನ್ನು ತಣ್ಣಗೆ ಸೇವಿಸಲಾಗುವುದು ಮತ್ತು ದೀರ್ಘಕಾಲದವರೆಗು ಇಡಲಾಗುವುದು. ಉದಾಹರಣೆಗೆ ಸಲಮಿ, Droë wors, ಸುಕಸ್, Landjäger, ಮತ್ತು ಸಮ್ಮರ್ ಸಾಸೇಜ್.
  • ಬಲ್ಕ್ ಸಾಸೇಜ್ , ಅಥವಾ ಕೆಲವುಸಲ ಸಾಸೇಜ್ ಮಾಂಸ ಎನ್ನುವುದು, ಹಸಿಯ, ರುಬ್ಬಿದ, ಕಾರದ ಮಾಂಸವನ್ನು ಸೂಚಿಸುತ್ತದೆ, ಸಾಮಾನ್ಯವಾಗಿ ಇದನ್ನು ಯಾವುದೇ ಹೊರಕವಚ ಇಲ್ಲದೆ ಮಾರಲಾಗುತ್ತದೆ.

ಕೆಲವು ಸಾಸೇಜ್‌ಗಳ ಭಿನ್ನವಾದ ಸ್ವಾದಯುಕ್ತ ರುಚಿಗೆ ಕಾರಣ ಲ್ಯಾಕ್ಟೊಬೆಸಿಲ್ಲಸ್ , ಪಿಡಿಯೊಕೊಕಸ್ ಅಥವಾ ಮೈಕ್ರೊಕೊಕಸ್ (ಸ್ಟಾರ್ಟರ್ ಕಲ್ಚರ್‌ಗಳಂತೆ ಸೇರಿಸಿರುವುದು) ಇವುಗಳಿಂದ ಹುಳಿಬರಿಸುವಿಕೆ ಅಥವಾ ಹೊಗೆಯಾಡಿಸುವ ಸಮಯದಲ್ಲಿನ ನೈಸರ್ಗಿಕ ಪ್ಲೊರ (ವನಸ್ಪತಿ).

ಏನೇಯಾಗಲಿ, ಇತರ ದೇಶಗಳು ವಿಂಗಡನೆಗೆ ಭಿನ್ನವಾದ ಪದ್ದತಿಗಳನ್ನು ಉಪಯೋಗಿಸುತ್ತವೆ. ಉದಾಹರಣೆಗೆ ಜರ್ಮನಿ, 1200 ವಿಧದ ಸಾಸೇಜ್‌ಗಳಿಗಿಂತಲು ಅಧಿಕವಾಗಿ ಉತ್ಪಾದಿಸುವ ಹೆಗ್ಗಳಿಕೆಯನ್ನು ಹೊಂದಿದೆ, ಇವನ್ನು ಕಚ್ಚಾ , ಬೇಯಿಸಿದ ಮತ್ತು ಮೊದಲೇ-ಬೇಯಿಸಿದ ಸಾಸೇಜ್‌ಗಳೆಂದು ವಿಂಗಡಿಸಲಾಗುವುದು.

  • ಕಚ್ಚಾ ಸಾಸೇಜ್‌ಗಳನ್ನು ಹಸಿ ಮಾಂಸದಿಂದ ಮಾಡಲಾಗುತ್ತದೆ ಮತ್ತು ಇವನ್ನು ಬೇಯಿಸಿರುವುದಿಲ್ಲ. ಅವನ್ನು ಲ್ಯಾಕ್ಟಿಕ್ ಯಾಸಿಡ್ ಫೆರ್‌ಮೆಂಟೇಷನ್ ಮೂಲಕ ಸಂರಕ್ಷಿಸಿಡಲಾಗುವುದು, ಮತ್ತು ಬಹುಶಃ ಒಣಗಿಸಲಾಗುವುದು, ಉಪ್ಪುನೀರು ಸೇರಿಸಿರಬಹುದು ಅಥವಾ ಹೊಗೆಯಾಡಿಸಿಲಾಗುವುದು. ಬಹುತೇಕ ಕಚ್ಚಾ ಸಾಸೇಜ್‌ಗಳನ್ನು ದೀರ್ಘ ಕಾಲದ ವರೆಗು ಇಡಲಾಗುತ್ತದೆ. ಉದಾಹರಣೆಗೆ ಮೆಟ್‌ವರ್ಸ್ಟ್t ಮತ್ತು ಸಲಮಿ.
  • ಬೇಯಿಸಿದ ಸಾಸೇಜ್‌ಗಳು ಬಹುಶಃ ನೀರು ಮತ್ತು ಇಮಲ್ಸಿಪಾಯರ್‌ (ಜಿಡ್ಡಿನ ಸೂಕ್ಷ್ಮ ಕಣಗಳುಳ್ಳ ಪದಾರ್ಥ)ಗಳನ್ನು ಒಳಗೊಂಡಿರುತ್ತದೆ ಮತ್ತು ಇವನ್ನು ಯಾವಾಗಲೂ ಬೇಯಿಸಿಡಲಾಗುತ್ತದೆ. ಅವನ್ನು ದೀರ್ಘ ಕಾಲಕ್ಕೆ ಇಡಲಾಗುವುದಿಲ್ಲ. ಉದಾಹರಣೆಗೆ ಸರ್ವೆಲಟ್, ಜಾಗ್ದ್‌ವ್ರಸ್ಟ್ ಮತ್ತು ವೈ‌ಬ್ರಸ್ಟ್.
  • ಮೊದಲೇ-ಬೇಯಿಸಿದ ಸಾಸೇಜ್‌ಗಳು (ಕಚ್‌ವ್ರಸ್ಟ್ ) ಇವನ್ನು ಬೇಯಿಸಿದ ಮಾಂಸದಿಂದ ಮಾಡಲಾಗುತ್ತದೆ, ಮತ್ತು ಇದು ಅವಯುವಗಳ ಹಸಿ ಮಾಂಸವನ್ನು ಒಳಗೊಂಡಿರಬಹುದಾಗಿದೆ. ಬಹುಶಃ ಅವನ್ನು ಹೊರಕವಚದಲ್ಲಿ ತುಂಬಿಸಿದ ನಂತರ ಬೇಯಿಸಬಹುದು, ಮತ್ತು ಕೇವಲ ಸ್ವಲ್ಪ ದಿನಗಳ ಮಟ್ಟಿಗೆ ಇಡಲಾಗುತ್ತದೆ. ಉದಾಹರಣೆಗೆ Saumagen ಮತ್ತು Blutwurst.

ಇಟಲಿಯಲ್ಲಿನ, ಮೂಲಭೂತ ಭೇದಗಳು:

  • ಹಸಿ ಸಾಸೇಜ್ ('salsiccia") ತೆಳುವಾದ ಹೊರಕವಚದೊಂದಿಗೆ
  • ಸಂಸ್ಕರಿಸಿದ ಮತ್ತು ಬಹಳ ಕಾಲದ ಸಾಸೇಜ್ ("salsiccia stagionata" ಅಥವಾ "salsiccia secca")
  • ಬೇಯಿಸಿದ ಸಾಸೇಜ್ ("wuerstel")
  • ರಕ್ತ ಸಾಸೇಜ್ ("Sanguinaccio" ಅಥವಾ "boudin")
  • ಲಿವೆರ್ (ಪಿತ್ತಜನಕಾಂಗ) ಸಾಸೇಜ್ ("salsiccia di fegato")
  • ಸಲಮಿ (ಇಟಲಿಯಲ್ಲಿ "ಸಲಮಿಯು", ಹುಳಿಬರೆಸಿದ ಮತ್ತು ಒಣಗಿಸಿ, ಸಂಸ್ಕರಿಸಿದ ದೊಡ್ಡ ಸಾಸೇಜ್, "ಸಲೇಮ್‌ನ" ಬಹುವಚವಾಗಿದೆ).

U.S. ಪಿಕ್ಕಲ್ಡ್ ಸಾಸೇಜ್‌ಗಳು ಎಂದು ಕರೆಯುವ ಇಂದು ವಿಶಿಷ್ಟ ಭಗೆಯನ್ನು ಒಳಗೊಂಡಿದೆ, ಸಾಮಾನ್ಯವಾಗಿ ಇವನ್ನು ಅನಿಲ ತಾಣಗಳಲ್ಲಿ ಮತ್ತು ರಸ್ತೆಬದಿಯ ಚಿಕ್ಕ ಡೆಲಿಕ್ಯಾಂಟೀನ್ (ಉಪಹಾರ ಮಂದಿರ)ಗಳಲ್ಲಿ ಕಾಣಬಹುದಾಗಿದೆ. ಅವು ಸಾಮಾನ್ಯವಾಗಿ ಹೊಗೆಯಾಡಿಸಿ ಬೇಯಿಸಿದ ಸಾಸೇಜ್‌ಗಳಾಗಿದ್ದು, ಇವನ್ನು ತಯಾರಿಸಲು ಅತೀ ಜಾಗೃತವಾಗಿ ಪರಿಷ್ಕರಿಸಿದ ಹಾಟ್‌ ಡಾಗ್ ಅಥವಾ ಕೈಲ್‌ಬಾಸಗಳನ್ನು, ವೆನೆಗರ್, ಉಪ್ಪು, ಮಸಾಲೆದಿನಿಸುಗಳು ಮತ್ತು ಅಗಾಗ್ಗೆ ಗುಲಾಬಿ ಬಣ್ಣ ಸೇರಿಸಿದ ಕುದಿಯುವ ದ್ರವಣದಲ್ಲಿ ಮುಳುಗಿಸಲಾಗುತ್ತದೆ ಮತ್ತು ನಂತರ ಮಸನ್ ಜಾಡಿಗಳಲ್ಲಿ ತುಂಬಿಸಿಡಲಾಗುತ್ತದೆ. ಅವು ಬಿಡಿ ಬ್ಲಿಸ್ಟರ್ ಪ್ಯಾಕ್ಗಳಲ್ಲಿಯು ಲಭ್ಯವಿರುತ್ತವೆ ಅಥವಾ ಜಾಡಿಗಳಿಂದಲೇ ಮಾರಾಟ ಮಾಡಲಾಗುತ್ತದೆ. ಅವು ಸ್ವಯಂ ಬಾಳಿಕೆ ಬರುವಂತಹ ವಾಗಿವೆ, ಮತ್ತು ಸತತವಾಗಿ ಬೀಪ್ ಜರ್ಕಿ, ಸ್ಲಿಮ್ ಜಿಮ್‌ಗಳು, ಮತ್ತು ಇತರ ಕಿಪ್ಪರ್ಡ್ ತಿಂಡಿಗಳ ಬದಲಾಗಿ ಒದಲಾಗಿಸಲಾಗುತ್ತದೆ.

ನಿರ್ದಿಷ್ಟ ದೇಶಗಳಲ್ಲಿ ಸಾಸೇಜ್ ವಿಧಗಳ ವಿಂಗಡಣೆಯನ್ನು, ಸಾಂಪ್ರದಾಯಬದ್ದವಾಗಿ ಸಾಸೇಜ್‌ನ್ನು ಉತ್ಪಾದಿಸುವ ಪ್ರದೇಶಗಳಿಗನುಗುಣವಾಗಿ ಮಾಡಲಾಗುತ್ತದೆ:

  • ಪ್ರಾನ್ಸ್: Montbéliard, Morteau,, ಸ್ಟ್ರಾಸ್‌ಬರ್ಗ್, Toulouse,,...
  • ಜೆರ್ಮನಿ: Frankfurt am Main, ತುರಿಂಗಿಯ, ನುರೆಂಬರ್ಗ್, ಪೊಮೆರನಿಯ, ...
  • ಆಷ್ಟ್ರೇಲಿಯ: ವಿಯನ್, ...
  • ಇಟಲಿ: ಮೆರನೊ (Meraner Wuerst), ಲುಕಾನಿಯ (ಲುಗನೆಗ),
  • UK: ಕಂಬರ್‌ಲ್ಯಾಂಡ್, ಚಿಲ್ಟರ್ನ್, ಲಿಂಕನ್‌ಶೈರ್, ಗ್ಲಾಮರ್‌ಗನ್, ...
  • ಸ್ಲೊವೆನಿಯ: ಕ್ರಂಜಸ್ಕ (ಕ್ಲೊಬಾಸ), ಕಾರ್ನಿಯೋಲ ಪ್ರಾಂತದ ಸ್ಲೊವೆನಿಯನ್ ಹೆಸರಿನ ಅನುಸರಣೆಯಲ್ಲಿ.
  • ಸ್ಪೇನ್: ಬೊಟಿಫೆರಾ ಕಟಲನ, ಚೊರಿಜೊ ರಿಯೊಜಾನೊ, ಚೊರಿಜೊ ಗಲ್ಲೆಗೊ, ಚೊರಿಜೊ ದೆ ಟೆರರ್, ಲೊಂಗಾನಿಜಾ ದೆ ಅರಗಾನ್, ಮೊರ್ಸಿಲ್ಲಾ ದೆ ಬರ್ಗೋಸ್, ಮೊರ್ಸಿಲ್ಲಾ ದೆ ರೊಂಡ, morcilla extremeña, morcilla dulce canaria, llonganissa de Vic, fuet d'Olot, ಸೊಬ್ರಸ್ಸಾಡ ಮಲ್ಲೊರ್‌ಕ್ವಿನ, botillo de León, ಲೊಂಗಾನಿಸ್ಸಾ ದೆ ವಾಲೆನ್ಸಿಯ, ಪಾರಿನಟೊ ದೆ ಸಲಾಮನ್ಕ, ...
  • ಪೊಲ್ಯಾಂಡ್: ಕೈಲ್ಬಾಸ ಕ್ರಕೋವ್‌ಸ್ಕ (ಕ್ರಕೋವ್-ಶೈಲಿ), toruńska (Toruń)), żywiecka (Żywiec), bydgoska (Bydgoszcz), krotoszyńska (Krotoszyn), podwawelska (ಅಕ್ಷರಶಃ: "ವಾವೆಲ್ ಅಡಿಯಿಂದ"), zielonogórska (zielonogórska), rzeszowska (Rzeszów)), śląska (ಸಿಲೆಸಿಯ), swojska, wiejska, ಜಲೊಕೊವ, zwyczajna, polska, krajańska, szynkowa, parówkowa, ...
  • ಹಂಗಾರಿ: kolbászgyulai (ಗ್ಯುಲ ನಗರದ ನಂತರ), csabai (Békéscsaba ನಗರದ ನಂತರ), ಡಿಬ್ರೆಸೆನರ್ (ಡಿಬ್ರೆಸನ್ ನಗರದ ನಂತರ).

ರಾಷ್ಟ್ರೀಯ ವೈವಿಧ್ಯಗಳು[ಬದಲಾಯಿಸಿ]

ರಷಿಯಾದಲ್ಲಿ ಸಾಸೇಜ್ ಮಾಡುವುದು

ಬಹುತೇಕ ರಾಷ್ಟ್ರಗಳು ಮತ್ತು ಪ್ರದೇಶಗಳು ತಮ್ಮದೇ ಆದ ವಿಶೇಷ ಗುಣಗಳುಳ್ಳ ಸಾಸೇಜ್‌ಗಳನ್ನು ಹೊಂದಿವೆ, ಮಾಂಸ ಮತ್ತು ಆಯಾ ಪ್ರಾಂತಗಳಲ್ಲಿ ಸಿಗುವ ಇತರ ಮಿಶ್ರಣಾಂಕಗಳನ್ನು ಉಪಯೋಗಿಸಿ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಮಾಡುವಲ್ಲಿ ತೊಡಗಿರುತ್ತವೆ.

ಯುರೋಪ್‌[ಬದಲಾಯಿಸಿ]

ಬ್ರಿಟನ್ & ಐರ್‌ಲ್ಯಾಂಡ್[ಬದಲಾಯಿಸಿ]

ಆಕ್ಸ್‌ಫರ್ಡ್‌ನ ಕವರ್ಡ್ ಮಾರ್ಕೆಟ್‌ನಲ್ಲಿ ಕಾಣುವ ಸಾಸೇಜ್‌ಗಳು.

UK ಮತ್ತು ಐರ್‌ಲ್ಯಾಂಡ್‌ನಲ್ಲಿ, ಸಾಸೇಜ್‌ಗಳು ಬಹಳ ಪ್ರಸಿದ್ಧವಾಗಿವೆ ಮತ್ತು ಇವು ರಾಷ್ಟ್ರೀಯ ಆಹಾರ ಪದ್ಧತಿ ಮತ್ತು ಪ್ರಸಿದ್ಧ ಸಂಸ್ಕೃತಿಯ ಸರ್ವೇಸಾಮಾನ್ಯ ವೈಶಿಷ್ಟ್ಯವಾಗಿವೆ.

ಬ್ರಿಟಿಷ್ ಮತ್ತು ಐರಿಷ್ ಸಾಸೇಜ್‌ಗಳನ್ನು ಸಾಮಾನ್ಯವಾಗಿ ಹಸಿ ಹಂದಿ ಅಥವಾ ಗೋಮಾಂಸವನ್ನು ವಿವಿಧ ವನಸ್ಪತಿಗಳು ಮತ್ತು ಮಸಾಲೆದಿನಿಸುಗಳು ಮತ್ತು ದವಸ ಧಾನ್ಯಗಳನ್ನು ಮಿಶ್ರಮಾಡಿ ತಯಾರಿಸಲಾಗುತ್ತದೆ, ಬಹುತೇಕ ಪಾಕಗಳನ್ನು ಸಾಂಪ್ರದಾಯಬದ್ದವಾಗಿ ಪ್ರತ್ಯೇಕ ಪ್ರದೇಶಗಳೊಂದಿಗೆ ಸೇರಿಸಲಾಗಿದೆ (ಉದಾಹರಣೆಗೆ ಕುಂಬರ್‌ಲ್ಯಾಂಡ್ ಸಾಸೇಜ್‌ಗಳು. ಸಾಮಾನ್ಯವಾಗಿ ಅವು ನಿರ್ಧಿಷ್ಟ ಪ್ರಮಾಣದ ರಸ್ಕ್ (ಸಾಮಾನ್ಯ ಬಿಸ್ಕೀಟು) ಅಥವಾ ಬ್ರೆಡ್-ರಸ್ಕ್‌ನ್ನು ಒಳಗೊಂಡಿರುತ್ತವೆ, ಮತ್ತು ಅವನ್ನು ತಿನ್ನುವ ಮೊದಲು ಸಂಪ್ರದಾಯಬದ್ದವಾಗಿ ಹುರಿಯುವುದರಿಂದ, ಜಾಲರಿಯಮೇಲೆ ಇಟ್ಟು ಸುಡುವುದರ ಮೂಲಕ ಅಥವಾ ಕರಿಯುವುದರ ಮೂಲಕ ಬೇಯಿಸಲಾಗುತ್ತದೆ.

ಅವುಗಳ ಬಿಗಿಯಾಗಿ ಕೂಡಿಸಿದ ಹೊರಚರ್ಮದ ಕಾರಣದಿಂದ ಬೇಯಿಸುವಾಗ ಅವು ಸ್ಫೋಟಗೊಳ್ಳುವದರಿಂದ, ಅವನ್ನು ಸಾಮಾನ್ಯವಾಗಿ ಬ್ಯಾಂಗರ್ಸ್ ಎಂದು ಸೂಚಿಸಲಾಗುತ್ತದೆ, ಮುಖ್ಯವಾಗಿ ಅತೀ ಸಾಮಾನ್ಯವಾಗಿ ಜೊತೆಯಲ್ಲಿ ಕೊಡುವ ಜಜ್ಜಿದ ಆಲುಗಡ್ಡೆಗಳೊಂದಿಗೆ, ಬ್ಯಾಂಗರ್ಸ್ ಆಂಡ್ ಮ್ಯಾಷ್ ಎಂದು ಗುರುತಿಸುವ ದ್ವಿ-ರಾಷ್ಟ್ರೀಯ ಅಡುಗೆಯನ್ನು ತಯಾರಿಸಲು ಬಡಿಸಿದಾಗ. (ಬ್ಯಾಂಗರ್ ಅನ್ನುವ ಬಿರುದು ಕೊನೆಯಪಕ್ಷ 1919ರ ಹೊಂದಿನಿಂದಲೇ ವಾಡಿಕೆಯಲ್ಲಿದೆ ಮತ್ತು ಇದು IIನೆಯ ಪ್ರಪಂಚ ಯುದ್ಧದ ಸಮಯದಲ್ಲಿ ಪ್ರಸಿದ್ಧವಾಗಿದೆ ಎಂದು ಹೇಳಲಾಗುತ್ತದೆ, ಬಹುತೇಕ ಸಾಸೇಜ್ ತಯಾರಿಕರಿಗೆ ಕೆರಿಕೆಮಾಡುವಾಗ ನೀರು ಸೇರಿಸಲು ಕಾರಣವಾಗುವಂತಹ ಮಾಂಸವು, ಬೇಯಿಸುವಾಗ ಸಂಭವನೀಯವಾಗಿ ಸ್ಫೋಟಗೊಳ್ಳುವಂತಹದಾಗಿರುತ್ತದೆ.)

ವ್ಯಾಪಾರಕ್ಕಾಗಿ ಉತ್ಪಾದಿಸಿದ ಬಹುತೇಕ ಸಾಸೇಜ್‌ಗಳು ಒಳಗೊಂಡಿರುವ ಮಾಂಸದ ಗುಣಮಟ್ಟದಿಂದ ಆರೋಗ್ಯದಮೇಲಿನ ಪರಿಣಾಮಗಳ ತಿಂತನೆಯಿಂದ (1990ರಲ್ಲಿನ BSE ಪರಿಸ್ಥಿತಿಯಿಂದ ತೀವ್ರಗೊಳಿಸಲಾಯಿತು), ಸಾಮಾನ್ಯವಾಗಿ ದೊರೆಯುವ ಬ್ರಿಟಿಷ್ ಸಾಸೇಜ್‌ಗಳಲ್ಲಿ ಒಳಗೊಂಡಿದ ಮಾಂಸದ ಗುಣಮಟ್ಟದಲ್ಲಿ ಮಾರುಕಟ್ಟೆ ಸುಧಾರಣೆಗಳನ್ನು ಮಾಡಲಾಯಿತು, ಇದು ಮುಂಚೆ ಅವನತಿಯಲ್ಲಿದ್ದ, ಉತ್ತಮಗುಣಮಟ್ಟದ ಸಾಂಪ್ರದಾಯಬದ್ಧವಾದ ಪಾಕಗಳನ್ನು ಉಪಯೋಗಿಸಿ ಕಸಬುದಾರರಿಂದ ಉತ್ಪಾದನೆಗೆ ಮರಳುವುದನ್ನು ಒಳಗೊಂಡಿದೆ. ಏನೇಯಾಗಲಿ, ಮಾರುಕಟ್ಟೆಯಲ್ಲಿ ದೊರೆಯುವ ಬಹುತೇಕ ಅಗ್ಗವಾದ ಸಾಸೇಜ್‌ಗಳು, ಯಾಂತ್ರಿಕವಾಗಿ ಸುಧಾರಿಸಿದ ಮಾಂಸವನ್ನು ಅಥವಾ ಮಾಂಸದ ಸ್ಲರ್ರಿ (ದ್ರವದೊಂದಿಗೆ ಮಿಶ್ರಮಾಡಿದ ಮಾಂಸ)ವನ್ನು ಉಪಯೋಗಿಸುತ್ತವೆ.

UKಯಲ್ಲಿ ಸಾಸೇಜ್‌ಗಳು ಒಳಗೊಂಡಿರುವ ಮಾಂಸದ ಗುಣಮಟ್ಟದ ಕಾಳಜಿಗಂತಲೇ ಅನೇಕ ಕಾನೂನುಗಳಿವೆ, ಹಂದಿ ಮಾಂಸದ ಸಾಸೇಜ್‌ಗಳು ಕನಿಷ್ಟ ಪ್ರಮಾಣ ಅಂದರೆ 42% ಮಾಂಸವನ್ನು ಹೊಂದಿರಬೇಕು (ಇತರ ಬಗೆಯ ಮಾಂಸದ ಸಾಸೇಜ್‌ಗಳಲ್ಲಿ ಇದು 30% ಇರಬೇಕು), ಹಂದಿ ಮಾಂಸವು ಮಾಂಸದ ಗುಂಪಿಗೆ ಸೇರಿದರೂ, ಇದು 30% ಕೊಬ್ಬಿನಂಶ ಮತ್ತು 25% ಜೋಡಣೆಯ ಟಿಷ್ಯು (ಜೀವಕೋಶ)ಗಳನ್ನು ಒಳಗೊಂಡಿರುತ್ತದೆ. ಮಳಿಗೆಗಳಲ್ಲಿ ಬಹುತೇಕವಾಗಿ ದೊರೆಯುವ ಅಗ್ಗದ ಹಂದಿ ಮಾಂಸದ ಸಾಸೇಜ್‌ಗಳು, ಹಂದಿ ಮಾಂಸದ ಸಾಸೇಜ್‌ಗಳೆಂದು ಹೇಳಲು ಅವಶ್ಯಕವಾದ ಪ್ರಮಾಣದ ಮಾಂಸವನ್ನು ಹೊಂದಿರುವುದಿಲ್ಲ ಮತ್ತು ಇವು 'ಸಾಸೇಜ್‌ಗಳು' ಅನ್ನುವ ನಾಮ ಫಲಕವನ್ನು ಮಾತ್ರ ಹೊಂದಿರುತ್ತವೆ. ಇವು ಸಾಂಕೇತಿಕವಾಗಿ EU ಕಾನೂನ ಅಡಿಯಲ್ಲಿ ಮಾಂಸವೆಂದು ಹೇಳದMRMನ್ನು ಹೊಂದಿರುತ್ತವೆ.[೫][೬]

UKಯಲ್ಲಿನ ಅನೇಕ ಪ್ರಾಂತಗಳಲ್ಲಿ ಪ್ರಸ್ತುತ ಇರುವ ಲಿನ್ಕೊಲ್ನ್‌ಶೈರ್‌ಗಳಂತಹ ಸಂಸ್ಥೆಗಳು ಅವರ ಸಾಸೇಜ್‌ಗಳಿಗೆ ಯುರೋಪಿನ ಪ್ರೊಟೆಕ್ಟೆಡ್ ಡೆಸಿಗ್‌ನೇಷನ್ ಆಫ್ ಒರಿಜಿನ್‌ (PDO)ಗಾಗಿ ಪ್ರಯತ್ನಿಸುತ್ತಿವೆ, ಇದರಿಂದ ಅವನ್ನು ಸಮರ್ಪಕ ಪ್ರದೇಶಗಳಲ್ಲಿ ಮಾತ್ರ ಮಾಡಬಹುದಾಗಿರುತ್ತದೆ ಮತ್ತು ಇವು ಪ್ರಮಾಣೀಕರಿಸಿದ ಪಾಕ ಮತ್ತು ಗುಣಮಟ್ಟದೊಂದಿಗೆ ಮಾಡಪ್ಲಟ್ಟವಂತಹವಾಗಿರುತ್ತವೆ.[೭]

ಪ್ರಸಿದ್ಧವಾಗಿ, ಇವು ಸಂಪೂರ್ಣ ಇಂಗ್ಲಿಷ್ ಅಥವಾ ಐರಿಷ್ ಬ್ರೇಕ್‌ಫಾಸ್ಟ್‌ನ ಅಗತ್ಯ ಅಂಶಗಳಾಗಿವೆ. UKನಲ್ಲಿಯೇ, 470 ಬೇರೆಬೇರೆ ವಿಧಗಳ ಸಾಸೇಜ್‌ಗಳಿವೆ ಎಂದು ನಂಭಲಾಗಿದೆ;[೮] ಕೆಲವು ಸಾಂಪ್ರದಾಯಬದ್ಧ ಪ್ರಾಂತಗಳ ಪಾಕಗಳಿಂದ ಮಾಡಿದವುಗಳಾಗಿವೆ, ಉದಾಹರಣೆಗೆ ಕಂಬರ್‌ಲ್ಯಾಂಡ್ ಅಥವಾ ಲಿನ್ಕೊಲ್ನ್‌ಶೈರ್‌‌ಗಳಲ್ಲಿ ಮಾಡಿದವು, ಮತ್ತು ಹೆಚ್ಚಿನವು ಆಧುನಿಕ ಪಾಕಗಳಾದ ಮಾಂಸದೊಂದಿಗೆ ಸೆಬು ಅಥವಾ ಜಲದಾರು ಹಣ್ಣುಗಳನ್ನು ಸೇರಿಸುವ ಪಾಕಗಳನ್ನು ಉಪಯೋಗಿಸಿ ಮಾಡಿದವು, ಅಥವಾ 3}ಟವ್‌ಲೂಸ್ ಅಥವಾ ಕೊರಿಜೊಗಳಂತಹ ಯುರೋಪಿನ ಶೈಲಿಯಿಂದ ಪ್ರಭಾವಿತಗೊಂಡವಾಗಿವೆ.

ವ್ಯಾಪಕವಾಗಿ ವ್ಯಾಪಿಸಿದ ಮತ್ತು ಪ್ರಸಿದ್ಧವಾದ ತಿನಿಸು ಎಂದರೆ, ಸಾಸೇಜ್ ರೋಲ್, ಇದನ್ನು ಸಾಸೇಜ್-ಮಾಂಸವನ್ನು ಫಪ್ ಕಣಕದಲ್ಲಿ ಸುತ್ತಿ ಇಟ್ಟು ಮಾಡಲಾಗುತ್ತದೆ; ಅವನ್ನು ಬಹುತೇಕ ಎಲ್ಲಾ ಬೇಕರಿಗಳಲ್ಲಿ ಮಾರಲಾಗುತ್ತದೆ ಮತ್ತು ಆಗಾಗ್ಗೆ ಮನೆಯಲ್ಲಿಯೂ ಮಾಡಲಾಗುತ್ತದೆ.

ಅವನ್ನು ಯೋರ್ಕ್‌ಶೈರ್ ಫುಡ್ಡಿಂಗ್ ಹಿಟ್ಟಿನಲ್ಲೂ ಸುಟ್ಟಿ "ಟೋಡ್ ಇನ್ ದಿ ಹೋಲ್‌ನ್ನು" ಮಾಡಲಾಗುತ್ತದೆ, ಮತ್ತು ಇದನ್ನು ಹೆಚ್ಚಾಗಿ ಬೇಯಿಸಿದ ಮಾಂಸರಸ ಮತ್ತು ಈರುಳ್ಳಿ ಜೊತೆಗೆ ಬಡಿಸಲಾಗುತ್ತದೆ.

ಬಹುತೇಕ ಪ್ರದೇಶಗಳಲ್ಲಿ, ಹುರಿಯಲು ಮತ್ತು ಕೋಳಿ ಮತ್ತು ಮಾಂಸಗಳಲ್ಲಿ ತುಂಬಿಸಲು "ಸಾಸೇಜ್ ಮಾಂಸವನ್ನು", ಯಾವುದೇ ಹೊರಕವಚವಿಲ್ಲದೆ ಒತ್ತಿ ಮಾಡಿದ ಉದ್ದನೆಯ ಬ್ಲಾಕ್‌ ಮಾಂಸದಿಂದ ಹೋಳುಗಳಾಗಿ ಕತ್ತರಿಸಿ ಮಾರಲಾಗುತ್ತದೆ: ಸ್ಕಾಟ್‌ಲ್ಯಾಂಡ್‌ನಲ್ಲಿ ಇದನ್ನು ಲಾರ್ನ್ ಸಾಸೇಜ್ ಅಥವಾ ಹೆಚ್ಚಾಗಿ ಸ್ಲೈಸ್ಡ್ ಸಾಸೇಜ್ ಅಥವಾ ಸ್ಕೊಯರ್ ಸಾಸೇಜ್ ಎಂದು ಗುರುತಿಸಲಾಗುತ್ತದೆ, ಸಾಮಾನ್ಯ ಪದ್ಧತಿಯಲ್ಲಿ ಕೆಲವುಸಲ ಸಾಸೇಜ್ ಲಿಂಕ್ಸ್ ಎಂದು ಸಹ ಕರೆಯಲಾಗುತ್ತದೆ. ಗ್ಲಾಸ್‌ಗೋವ್‌ನ ಒಳಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಾರ್ನ್ ಸಾಸೇಜ್ ಬಹಳ ಪ್ರಸಿದ್ಧವಾಗಿದೆ. ಹುರಿಯುವುದು ಅಸಾಮಾನ್ಯ ಅಲ್ಲದಿದ್ದರೂ, ಇದನ್ನು ಸಾಮಾನ್ಯವಾಗಿ ಜಾಲರಿಯಮೇಲೆ ಇಟ್ಟು ಕೆಂಡದಮೇಲೆ ಸುಡಲಾಗುತ್ತದೆ.

ಬ್ಯಾಟರ್ಡ್ ಸಾಸೇಜ್, ಇದು ಸಾಸೇಜ್‌ನ್ನು ಹಿಟ್ಟಿನಲ್ಲಿ ಅದ್ದುವುದನ್ನು, ಮತ್ತು ಕರಿಯುವುದನ್ನು ಒಳಗೊಂಡಿರುತ್ತದೆ, ಇದನ್ನು ಬ್ರಿಟನ್ನಿನಾದ್ಯಂತ ಫಿಷ್ ಆಂಡ್ ಚಿಪ್ ಅಂಗಡಿಗಳಲ್ಲಿ ಮಾರಲಾಗುತ್ತದೆ. ಇಂಗ್‌ಲ್ಯಾಂಡ್‌ನಲ್ಲಿ, ಸಾವ್‌ಲಾಯ್ ಒಂದು ವಿಧದ ಮೊದಲೇ-ಬೇಯಿಸಿದ ಸಾಸೇಜ್, ಇದು ಬಿಸಿಬಿಸಿಯಾಗಿ ಬಡಿಸುವ ಹಾಟ್-ಡಾಗ್‌ಗಿಂತಲೂ ದೊಡ್ಡದಾಗಿರುತ್ತದೆ. ಸಾವ್‌ಲಾಯ್‌ನ ಮೇಲ್ಪದರಕ್ಕೆ ಸಾಂಪ್ರದಾಯಬದ್ದವಾಗಿ ಬಿಸ್‌ಮಾರ್ಕ್-ಬ್ರವ್ನ್ (ಕಂದುಬಣ್ಣ) ಹಚ್ಚಲಾಗುತ್ತದೆ, ಇದು ಸಾವ್‌ಲಾಯ್‌‌ಗೆ ಭಿನ್ನವಾದ ಉಜ್ವಲ ಕೆಂಪು ಬಣ್ಣವನ್ನು ಕೊಡುತ್ತದೆ.

ಚಿಪೊಲಟ ಅಥವಾ 'ಕಾಕ್‌ಟೈಲ್ ಸಾಸೇಜ್' ಎಂದು ಗುರುತಿಸುವ ಒಂದು ವಿಧದ ಚಿಕ್ಕ ಸಾಸೇಜ್, ಇದನ್ನು ಹೆಚ್ಚಾಗಿ ಬಾಕೋನ್‌ನಲ್ಲಿ ಸುತ್ತಲಾಗುವುದು ಮತ್ತು ಕ್ರಿಸ್ಮಸ್ ಸಮಯದಲ್ಲಿ ಸುಟ್ಟ ಟರ್ಕಿಗಳ ಜೊತೆಯಲ್ಲಿ ಬಡಿಸಲಾಗುವುದು ಮತ್ತು ಇವನ್ನು ಪಿಗ್ಸ್ ಇನ್ ಅ ಬ್ಲಾಂಕೆಟ್ ಅಥವಾ "ಪಿಗ್ಸ್ ಇನ್ ಬ್ಲಾಂಕೆಟ್ಸ್" ಎಂದು ಗುರುತಿಸಲಾಗುತ್ತದೆ. ಅವನ್ನು ವರ್ಷಪೂರ್ತಿ ಮಕ್ಕಳ ಔತಣಗಳಲ್ಲಿ ತಣ್ಣಗೆ ಬಡಿಸಲಾಗುತ್ತದೆ.

ಯ್ರೋಪಿನಲ್ಲಿಯಂತೆ, ಸಾಸೇಜ್‌ಗಳ ಪ್ರಾದೇಶಿಕ ವಿಧಗಳನ್ನು ಬ್ಲ್ಯಾಕ್ ಫುಡ್ಡಿಂಗ್, ವೈಟ್ ಫುಡ್ಡಿಂಗ್, ಹಾಂಗ್’ಸ್ ಫುಡ್ಡಿಂಗ್ ಮತ್ತು ಹಗ್ಗೀಸ್‌ಗಳಂತಹ ಫುಡ್ಡಿಂಗ್‌ಗಳ ಬದಲಾಗಿ ಉಪಯೋಗಿಸಲಾಗುತ್ತದೆ.

ಕ್ರೋಟಿಯ/ಸರ್ಬಿಯ[ಬದಲಾಯಿಸಿ]

ಕುಲೆನ್ ಒಂದು ವಿಧದ ಪರಿಮಳಹೊಂದಿದ ಸಾಸೇಜ್, ಇದನ್ನು ಕ್ರೊಟಿಯ (ಸ್ಲವೊನಿಯ) ಮತ್ತು ಸೆರ್ಬಿಯ (ವೊಜ್‌ವೋಡಿನ)ಗಳಲ್ಲಿ ಸಾಂಪ್ರದಯಬದ್ದವಾಗಿ ಉತ್ಪಾದಿಸಿ, ಕತ್ತರಿಸಿ ತುಂಡುಮಾಡಿದ ಹಂದಿಮಾಂಸದಿಂದ ಮಾಡಲಾಗುತ್ತದೆ, ಮತ್ತು ಇದರ ಅಂಕಿತದ ಮೂಲಸ್ಥಾನವನ್ನು ಸಂರಕ್ಷಿಸಲಾಗಿದೆ. ಇದರ ಮಾಂಸವು ಕಡಿಮೆ ಕೊಬ್ಬಿನಾಂಶವನ್ನು ಹೊಂದಿರುತ್ತದೆ, ಹಾಗು ಪೆಡಸಾಗಿ, ದಟ್ಟವಾಗಿರುತ್ತದೆ, ಮತ್ತು ಪರಿಮಳ ಘಾಟಾಗಿರುತ್ತದೆ. (ಸಿಹಿಯಾಗಿರುವ) ಕೆಂಪು ಮೆಣಸು ಇದಕ್ಕೆ ಪರಿಮಳ ಮತ್ತು ಬಣ್ಣವನ್ನು ಕೊಡುತ್ತದೆ ಮತ್ತು ಬೆಳ್ಳುಳ್ಳಿ ಮಸಾಲೆಯನ್ನು ಹೆಚ್ಚಿಸುತ್ತದೆ. ಘಾಟಾದ ಪರಿಮಳವು ಇದರಲ್ಲಿನ ಕೆಂಪು ಮೆಣಸಿನಿಂದ ಬರುವ ಕಾರಣ, ಮೂಲ ಕುಲೆನ್ ಪಾಕವು ಕಪ್ಪು ಮೆಣಸನ್ನು ಒಳಗೊಂಡಿರುವುದಿಲ್ಲ.

ಫ್ರಾನ್ಸ್‌‌[ಬದಲಾಯಿಸಿ]

ಫ್ರಾನ್ಸ್‌ನ ದಕ್ಷಿಣದಲ್ಲಿರುವ ಮಾರುಕಟ್ಟೆಯಲ್ಲಿ ಸಾಸೇಜ್

ಸಾಸಿಸ್ಸನ್ ಅನ್ನುವುದು ಬಹುಶಃ ಪ್ರಾನ್ಸ್‌ನಲ್ಲಿನ ಅತ್ಯಂತ ಪ್ರಸಿದ್ಧವಾದ ಒಂದು ವಿಧದ ಒಣಗಿಸಿದ ಸಾಸೇಜ್, ಇದು ಪ್ರದೇಶದಿಂದ ಪ್ರದೇಶಕ್ಕೆ ಅನೇಕ ವ್ಯತ್ಯಾಸಗಳನ್ನು ಹೊಂದಿದೆ. ಸಾಮಾನ್ಯವಾಗಿ ಸಾಸಿಸ್ಸನ್ ಉಪ್ಪು, ಸರಾಯಿ ಮತ್ತು/ಅಥವಾ ಸ್ಪಿರಿಟ್ಸ್‌ಗಳ ಮಿಶ್ರಣದಿಂದ ಸಂಸ್ಕರಿಸಿದ, ಹಂದಿಮಾಂಸವನ್ನು ಒಳಗೊಂಡಿರುತ್ತದೆ. ಪ್ರಾದೇಶಿಕ ವಿಧಗಳು ಬೀಜಗಳು ಮತ್ತು ಹಣ್ಣುಗಳಂತಹ ಅಸಂಪ್ರದಾಯಕ ಒಳಾಂಶಗಳನ್ನು ಒಳಗೊಂಡಿರುತ್ತವೆ ಎಂದು ತಿಳಿಯಲಾಗಿದೆ.

ಜರ್ಮನಿ[ಬದಲಾಯಿಸಿ]

ಎ ಪ್ಲೇಟ್ ಆಫ್ ಮಿಲ್ಜ್‌ವುರ್ಸ್ಟ್ -ಜರ್ಮನಿಯ ಮುನಿಚ್‌ನಲ್ಲಿ ಸ್ಪ್ಲೀನ್ ಸಾಸೇಜ್, ಇದನ್ನು ಬೇಯಿಸಿ ಪುಡಿಮಾಡಿದ ಆಲೂಗಡ್ಡೆ, ಮಯೋನೀಸ್ ಮತ್ತು ನಿಂಬೆಗಳ ಜೊತೆ ನೀಡಲಾಗುತ್ತದೆ.

ಜರ್ಮನಿ ವಿಶಾಲವಾದ ವಿವಿಧ ಬಗೆಯ ಮತ್ತು ಪಾರಂಪರಿಕವಾಗಿ ಸಾಸೇಜ್‌ಗಳನ್ನು ತಯಾರಿಸುವಿಕೆಗೆ ಪ್ರಸಿದ್ಧಿಯಾಗಿದೆ. ಜರ್ಮನ್ ಸಾಸೇಜ್‌ಗಳು, ಅಥವಾ ವುರ್ಸ್ಟೆಗಳು, ಪ್ರಾಂಕ್‌ಪರ್ಟರ್ಸ್, ಬ್ರಾಟ್‌ವರ್ಸ್ಟೆ, ರಿಂಡ್ಸ್‌ವರ್ಸ್ಟೆ, ಕ್ನಾಕ್‌ವರ್ಸ್ಟೆ, ಮತ್ತು ಬಾಕ್‌ವರ್ಸ್ಟೆ‌ಗಳಂತಹ ಬೆಯಿಸದ ಮತ್ತು ತುಂಬಿಸದ (ಹೊರ ಕವಚವಿಲ್ಲದ) ಪದಾರ್ಥಗಳನ್ನು ಹೊಂದಿರುತ್ತವೆ.

ಹಂಗೇರಿ[ಬದಲಾಯಿಸಿ]

ಹಂಗೇರಿಯ ಸಾಸೇಜ್‌ಗಳು, ಇವನ್ನು ಹೊಗೆಯಾಡಿಸಿ, ಒಣಗಿಸಿದಾಗ, ಕೊಲ್ಬಾಸ್ಜ್ ಎಂದು ಕರೆಯಲಾಗುತ್ತದೆ - ಬಗೆಬಗೆಯ ವಿಧಗಳನ್ನು ಅವುಗಳ ಪ್ರಾಂತಗಳಿಂದ ವಿಂಗಡಿಸಲಾಗುತ್ತದೆ, ಉ.ದಾ. "ಗ್ಯುಲೈ" ಮತ್ತು "ಕ್ಸಬೈ" ಸಾಸೇಜ್. ಆಂಗ್ಲಭಾಷೆಯಲ್ಲಿನಂತೆ ಹಂಗೇರಿಯಲ್ಲಿ "ಸಾಸೇಜ್‌ಗೆ" ಸಾಮೂಹಿಕ ಪದ ಇಲ್ಲದಿರುವುದರಿಂದ, ಲೋಕಲ್ ಸಲಮೀಸ್ (ಉ.ದಾ. ವಿಂಟರ್ ಸಲಾಮಿ ನೋಡಿ) ಮತ್ತು ಬಾಯಿಲ್ಡ್ ಸಾಸೇಜ್‌ಗಳು ಎಂದು ಹೇಳಲಾಗುತ್ತದೆ, ಪ್ರಾದೇಶಿಕ ಸಾಸೇಜ್‌ಗಳ ವಿಧಗಳ ಪಟ್ಟಿಮಾಡುವಾಗ ಹೆಚ್ಚಾಗಿ "hurkaವನ್ನು" ಪರಿಗಣಿಸುವುದಿಲ್ಲ. ಅತೀ ಸಾಧಾರಣವಾದ ಬೇಯಿಸಿದ ಸಾಸೇಜ್‌ಗಳೆಂದರೆ ರೈಸ್ ಲಿವರ್ ಸಾಸೇಜ್ ("Májas Hurka") ಮತ್ತು ಬ್ಲಡ್ ಸಾಸೇಜ್ ("Véres Hurka"). ಮೊದಲನೆಯದರಲ್ಲಿ, ಅತೀ ಮುಖ್ಯ ಒಳಾಂಶವು ಪಿತ್ತಜನಕಾಂಗವಾಗಿದ್ದು, ಇದನ್ನು ಅಕ್ಕಿಯಿಂದ ಮಾಡಿದ ತುಂಬುವ ಪದಾರ್ಥಗಳೊಂದಿಗೆ ಮಿಶ್ರಮಾಡಲಾಗಿರುತ್ತದೆ. ನಂತರದರಲ್ಲಿ, ರಕ್ತವನ್ನು ಅಕ್ಕಿ ಪದಾರ್ಥದೊಂದಿಗೆ, ಅಥವಾ ಬ್ರೆಡ್ ರೋಲ್‌ಗಳ ತುಂಡುಗಳೊಂದಿಗೆ ಮಿಶ್ರಮಾಡಲಾಗುತ್ತದೆ. ಇದಕ್ಕೆ ಮಸಾಲೆದಿನುಸುಗಳು, ಕಾಳು ಮೆಣಸು, ಉಪ್ಪು ಮತ್ತು ಮರ್ಜೋರಮ್‌ನ್ನು (ಅಡಿಗೆಯಲ್ಲಿ ಬಳಸುವ ಸುವಾಸನೆಯ ಒಂದು ಸೊಪ್ಪು) ಸೇರಿಸಲಾಗುತ್ತದೆ.

ಇಟಲಿ[ಬದಲಾಯಿಸಿ]

ಇಟಲಿಯನ್ ಸಾಸೇಜ್‌ಗಳು (ಸಾಲ್ಸಿಸ್ಸಿಯ - ಬಹುವಚನ. "ಸಾಲ್ಸಿಸ್ಸೆ"), ಇವನ್ನು ಹೆಚ್ಚಾಗಿ ಶುದ್ಧ ಹಂದಿಮಾಂಸದಿಂದ ಮಾಡಲಾಗುತ್ತದೆ. ಕೆಲವು ಸಲ ಅವು ಗೋಮಾಂಸವನ್ನು ಸಹ ಒಳಗೊಂಡಿರಬಹುದು. ದಕ್ಷಿಣ ಇಟಲಿಯಲ್ಲಿ ಸಾಮಾನ್ಯವಾಗಿ ಕಪ್ಪು ಜೀರಿಗೆ ಕಾಳುಗಳು ಮತ್ತು ಮೆಣಸಿನಕಾಯಿಗಳನ್ನು ಪ್ರಾಥಮಿಕ ಮಸಾಲೆದಿನಿಸುಗಳನ್ನಾಗಿ ಉಪಯೋಗಿಸಲಾಗುವುದು, ಮತ್ತು ಇಟಲಿಯ ಉತ್ತರ ದಿಕ್ಕಿನಲ್ಲಿ ಕಪ್ಪು ಮೆಣಸು ಮತ್ತು/ಅಥವಾ parsleyಗಳನ್ನು ಉಪಯೋಗಿಸಲಾಗುತ್ತದೆ

ಮೆಸಿಡೋನಿಯಾ[ಬದಲಾಯಿಸಿ]

ಮೆಸಿಡೋನಿಯಾ ಸಾಸೇಜ್‌ಗಳು (ಕೊಲ್ಬಾಸ್, ಲುಕನೆಕ್ ), ಇವನ್ನು ಕರಿದ ಹಂದಿಮಾಂಸ, ಈರುಳ್ಳಿಗಳು, ಮತ್ತು ಲೀಕ್‌ಗಳನ್ನು ವನಸ್ಪತಿಗಳು ಮತ್ತು ಮಸಾಲೆದಿನಿಸುಗಳೊಂದಿಗೆ ಸೇರಿಸಿ ಮಾಡಲಾಗುತ್ತದೆ.

ಮಾಲ್ಟಾ[ಬದಲಾಯಿಸಿ]

ಜಾಲ್‌ಜೆಟ್ ಟಾಲ್-ಮಾಲ್ಟಿ ಅಥವಾ ಮಾಲ್ಟೆಸೆ ಸಾಸೇಜ್, ಇದನ್ನು ಸಾಂಕೇತಿಕವಾಗಿ ಹಂದಿಮಾಂಸ, ಸಮುದ್ರದ ಉಪ್ಪು, ಕಪ್ಪು ಮೆಣಸು, ದನಿಯ, ಬೆಳ್ಳುಳ್ಳಿ ಮತ್ತು ಸುಗಂಧ ವನಸ್ಪತಿಗಳಿಂದ ಮಾಡಲಾಗುತ್ತದೆ.

ನೆದರ್‌ಲ್ಯಾಂಡ್ಸ್[ಬದಲಾಯಿಸಿ]

ಡಟ್ಚ್ ಕಸೈನ್ ಅದರ ಸಾಂಪ್ರದಾಯಿಕ ಅಡಿಗೆಗಳಲ್ಲಿ ಸಾಸೇಜ್‌ಗಳನ್ನು ಹೇರಳವಾಗಿ ಉಪಯೋಗಿಸುವಿಕೆಗೆ ಹೆಸರುವಾಸಿಯಲ್ಲ. ಹಾಗಿದ್ದರೂ, ಡಟ್ಚ್ ಅನೇಕ ಸಂಖ್ಯೆಯ ಸಾಸೇಜ್ ವಿಧಗಳನ್ನೊಂದಿದೆ, ಅವುಗಳಲ್ಲಿ ಕೆಲವು ರೂಕ್‌ವರ್ಸ್ಟ್ (ಹೊಗೆಯಾಡಿಸಿದ ಸಾಸೇಜ್) ಮತ್ತು ಸ್ಲಾಗೆರ್ಸ್ ವರ್ಸ್ಟ್ (ಲಿಟ್. ಬಚ್ಚರ್ಸ್ ಮೀಟ್ ಅಥವಾ ಸಾಸೇಜ್), ಹೆಚ್ಚಾಗಿ ಇವು ಪ್ರವೀಣತೆಯ ಮಾಂಸದ ವ್ಯಪಾರಿಗಳ ಅಂಗಡಿಗಳಲ್ಲಿ ದೊರೆಯುತ್ತವೆ ಮತ್ತು ಇವನ್ನು ಈಗಲೂ ಸಾಂಪ್ರದಾಯಬದ್ದವಾಗಿ ಮನೆಯಲ್ಲಿ ಮಾಡುವ ಅಡುಗೆ ಪಾಕವನ್ನೇ ಅನುಸರಿ ಕೈಯಿಂದಲೇ ಮಾಡಿ, ಮಸಾಲೆದಿನಿಸುಗಳನ್ನು ಸೆರಿಸಲಾಗುತ್ತದೆ. ನೆದರ್‌ಲ್ಯಾಂಡ್ಸ್‌ನಲ್ಲಿ ದೊರೆಯುವ ಮತ್ತೊಂದು ಸರ್ವೇಸಾಮಾನ್ಯ ವಿಧವೆಂದರೆ runderworst , ಇದನ್ನು ಗೋಮಾಂಸದಿಂದ ಮಾಡಲಾಗಿರುತ್ತದೆ ಮತ್ತು ಒಣಗಿದ ಸಾಸೇಜ್‌ಗಳನ್ನು ಮೆಟ್‌ವರ್ಸ್ಟ್ ಅಥವಾ ಡ್ರಾಗ್‌ವರ್ಸ್ಟ್ ಎಂದು ಗುರುತಿಸಲಾಗುತ್ತದೆ. ಡಟ್ಚ್ ಬ್ರಾಡ್‌ವರ್ಸ್ಟ್‌'ಗಳು, ಇವುಗಳ ಹೆಸರು ಜೆರ್ಮನ್‌ನ ಬ್ರಟ್‌ವರ್ಸ್ಟ್ ವಿಧವನ್ನಾಗಿ ಸೂಚಿಸಬಹುದು, ಆದರೆ ಅದು ಸತ್ಯ ಅಲ್ಲ ಮತು ಇದು ಪ್ರಖ್ಯಾತ ಆಪ್ರಿಕಾನೆರ್ ಬೊರೆವರ್ಸ್‌ಗೆ ಬಹಳ ಹತ್ತಿರವಾಗಿ ಸಂಬಂಧಪಟ್ಟಿದೆ.

ನಾರ್ಡಿಕ್ ಕಂಟ್ರೀಸ್[ಬದಲಾಯಿಸಿ]

ನಾರ್ಡಿಕ್ ಸಾಸೇಜ್‌ಗಳು (ದನಿಷ್: pølse , ನಾರ್ವೆಗಿಯನ್: pølsa/pølse/pylsa/korv/kurv , ಐಲ್ಯಾಂಡಿಕ್: bjúga/pylsa , ಸ್ವೆಡಿಷ್: ಕಾರ್ವ್ ), ಇವುಗಳನ್ನು ಸಾಮಾನ್ಯವಾಗಿ 60-75% ಬಹಳ ನುಣ್ಣಗೆ ರುಬ್ಬಿದ ಹಂದಿ ಮಾಂಸದಿಂದ ಮಾಡಲಾಗಿದ್ದು, ಕಾಳು ಮೆಣಸು, ಜಾಕಾಯಿ, ಮೆಣಸು ಅಥವಾ ಅದೇತರಹದ ಸಿಹಿಯಾದ ಮಸಾಲೆದಿನಿಸುಗಳನ್ನು (ರುಬ್ಬಿದ ಸಾಸಿವೆ, ಈರುಳ್ಳಿ ಮತ್ತು ಸಕ್ಕರೆಯನ್ನು ಸಹ ಸೇರಿಸಬಹುದಾಗಿದೆ) ಸೇರಿಸಲಾಗುತ್ತದೆ. ನೀರು, ಲಾರ್ಡ್, ತೊಗಟೆ, ಆಲುಗಡ್ಡೆಯ ಗಂಜಿ ಹಿಟ್ಟು ಮತ್ತು ಸಾಯ್ ಅಥವಾ ಹಾಲಿನ ಪ್ರೊಟೀನ್‌ಗಳನ್ನು ಆಗಾಗ್ಗೆ ಬೈಂಡಿಂಗ್‌ಗಾಗಿ (ಬಿಗಿಯಲು) ಮತ್ತು ತುಂಬಿಸಲು ಉಪಯೋಗಿಸಲಾಗುತ್ತದೆ. ದಕ್ಷಿಣದ ನಾರ್ವೇಯಲ್ಲಿ, ಗ್ರಿಲ್ ಮತ್ತು ವಿಯ್‌ನೆರ್ ಸಾಸೇಜ್‌ಗಳನ್ನು ಆಗಾಗ್ಗೆ ಲೆಫ್ಸೆ (ಒಂದು ತರಹದ ಚಪ್ಪಟೆ ಆಕಾರದ ಬ್ರೆಡ್)ದಂತಹ ಆಲುಗಡ್ಡೆಯ ಲೋಂಪ್‌‌ಗಳಲ್ಲಿ ಸುತ್ತಿ ಮಾಡಲಾಗುತ್ತದೆ.

ವಾಸ್ತವಿಕವಾಗಿ ಎಲ್ಲಾ ಸಾಸೇಜ್‌ಗಳನ್ನು ಔದ್ಯೋಗಿಕವಾಗಿ ಮೊದಲೇ ಬೇಯಿಸಿ ಇಡಲಾಗುವುದು ಮತ್ತು ನಂತರ ಉಪಯೋಗಕಾರರಿಂದ ಅಥವಾ ಹಾಟ್ ಡಾಗ್ ಸ್ಟ್ಯಾಂಡ್‌ಗಳಲ್ಲಿ ಇದನ್ನು ಹುರಿಯಲಾಗುವುದು ಅಥವಾ ಬಿಸಿ ನೀರಿನಲ್ಲಿಟ್ಟು ಬಿಸಿಮಾಡಲಾಗುವುದು. ಹಾಟ್ ಡಾಗ್ ಸ್ಟ್ಯಾಂಡ್‌‌ಗಳು ಡೆನ್ಮಾರ್ಕ್‌ನ ಎಲ್ಲೆಡೆಯು ಇರುವುದರಿಂದ, ಕೆಲವು ಜನರು pølser ಗೆ ಹೆಚ್ಚಿನ ಮನ್ನಣೆಯನ್ನು ನೀಡುತ್ತಾರೆ, ಇದು ರಾಷ್ಟ್ರೀಯ ಅಡುಗೆಗಳಲ್ಲಿ ಇಂದಾಗಿದೆ, ಬಹುಶಃ ಇದನ್ನು medisterpølse ಹೆಸರಿನ, ಕರಿದ, ನುಣ್ಣಗೆ ರುಬ್ಬಿದ ಹಂದಿಮಾಂಸದ ಮತ್ತು ಬೇಕನ್ ಸಾಸೇಜ್‌ಗಲ ಜೊತೆಯನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ದನಿಷ್ ಕುದಿಸಿದ ಸಾಸೇಜ್‌ಗಳ ಅತ್ಯಂತ ಗಮನಾರ್ಹ ಅಂಶವೆಂದರೆ, ಅವುಗಳ ಹೊರಕವಚವು ಹೆಚ್ಚಾಗಿ ಸಾಂಪ್ರದಾಯಿಕ ಹೊಳೆಯುವ ಕೆಂಪುಬಣ್ಣವನ್ನು ಹೊಂದಿರುತ್ತದೆ. ಅವನ್ನು wienerpølser ಎಂದು ಸಹ ಕರೆಯಲಾಗುತ್ತದೆ ಮತ್ತು ದಂತಕಥೆಗಳ ಪ್ರಕಾರ ಇವುಗಳ ಮೂಲಸ್ಥಾನವಾದ ವಿಯನ್ನದಲ್ಲಿ ಒಂದು ಸಲ ಹಿಂದಿನ ದಿನದ ಸಾಸೇಜ್‌ಗಳನ್ನು ಬಣ್ಣಹಚ್ಚುವುದರ ಮೂಲಕ ಸೂಚನೆ ನೀಡಬೇಕೆಂದು ಆಜ್ಞಾಪಿಸಲಾಯಿತು. ಸ್ವೆಡಿಷ್ falukorv ಸಹ ಅದೇ ರೀತಿಯಲ್ಲಿ ಕೆಂಪು ಬಣ್ಣ ಹಚ್ಚಿದ ಸಾಸೇಜ್, ಆದರೆ ಇದು ಸುಮಾರು 5 ಸೆಂ.ಮಿ ದಪ್ಪವಿರುತ್ತದೆ, ಮತ್ತು ಇದನ್ನು ಸಾಮಾನ್ಯವಾಗಿ ಸಾಸಿವೆಯಲೇಪನದೊಂದಿಗೆ ವೋವೆನ್‌ನಲ್ಲಿ ಬೇಯಿಸಲಾಗುತ್ತದೆ ಅಥವಾ ಹೋಳುಗಳನ್ನಾಗಿ ಕತ್ತರಿಸಿ ಕರಿಯಲಾಗುತ್ತದೆ. ಸಾಮಾನ್ಯ ಸಾಸೇಜ್‌ಗಳಿಂದ ಭಿನ್ನವಾಗಿ, ಇದು ಮನೆಯಲ್ಲಿ ಮಾತ್ರ ಮಾಡುವಂತ ಅಡುಗೆಯಾಗಿದೆ, ಇದನ್ನು ಹಾಟ್ ಡಾಗ್ ಸ್ಟ್ಯಾಂಡ್ಸ್‌ಗಳಲ್ಲಿ ಮಾರುವುದಿಲ್ಲ. ಇತರ ಸ್ವೆಡಿಷ್ ಸಾಸೇಜ್‌ಗಳೆಂದರೆ, prinskorv , fläskkorv , ಮತ್ತು isterband ; ಇವೆಲ್ಲವನ್ನು falukorv ಜೊತೆಗೆ, ಬ್ರೆಡ್ಡಿಗೆ ಬದಲಾಗಿ ಹಿಚುಕಿದ ಆಲುಗಡ್ಡೆಯನ್ನು ಅಥವಾ ರೋಟ್‌ಮಾಸ್‌ ನ್ನು (ಬೇರು ತರಕಾರಿಯನ್ನು ಹಿಚುಕಿ ಮಾಡಿದ್ದು) ಹೊಂದಿರುತ್ತವೆ. ಐಲ್ಯಾಂಡ್‌ನಲ್ಲಿ, ಸಾಸೇಜ್‌ಗಳಿಗೆ ಲ್ಯಾಂಬ್ನ್ನು ಸೇರಿಸಲಾಗುತ್ತದೆ, ಇದು ಅವಕ್ಕೆ ವಿಭಿನ್ನವಾದ ರುಚಿಯನ್ನು ಕೊಡುತ್ತದೆ. ಹಾರ್ಸ್ ಸಾಸೇಜ್ ಮತ್ತು ಮಟನ್ ಸಾಸೇಜ್‌ಗಳ ಜನಪ್ರಿಯತೆಯು ಕ್ಷೀಣಿಸುತ್ತಿದ್ದರೂ, ಇವು ಸಹ ಐಲ್ಯಾಂಡ್‌ನಲ್ಲಿನ ಸಾಂಪ್ರದಾಯಕ ಆಹಾರಗಳಾಗಿವೆ.

ಫಿನ್‌ಲ್ಯಾಂಡ್[ಬದಲಾಯಿಸಿ]

ಫಿನ್ನಿಶ್ ಮುಸ್ತಮಕ್ಕರ ಜೊತೆ ಲಿಂಗೊನ್‌ಬೆರಿ ಜಾಮ್

ಫಿನ್ನಿಷ್ ಮಕ್ಕರ ಗಳು ನೋಡಲು ಪೋಲಿಷ್ ಸಾಸೇಜ್‌ಗಳು ಅಥವಾ ಬ್ರಾಟ್‌ವರ್ಸ್ಟ್‌ಗಳಂತೆ ಗೋಚರಿಸುತ್ತವೆ, ಆದರೆ ಅವುಗಳಿಂದ ಬಹಳ ಭಿನ್ನವಾದ ರುಚಿ ಮತ್ತು ರಚನೆಯನ್ನು ಹೊಂದಿವೆ. ನಕ್ಕಿ ಯು ಮಕ್ಕರದ ಅತೀ ಚಿಕ್ಕ ರೂಪ. ಮಕ್ಕರದ ವಿಧಗಳ ಹಾಗೆನಕ್ಕಿಗಳ ಲ್ಲಿಯು ಬಹುಸಂಖ್ಯೆಯ ಭಿನ್ನವಾದ ವಿಧಗಳಿವೆ. ನಾಕ್‌ವರ್ಸ್ಟ್ ಅನ್ನುವುದು ನಕ್ಕಿ ದೊಂದಿಗೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿದೆ.

ಬಹುತೇಕ ಮಕ್ಕರ ಗಳು ಕಡಿಮೆ ಮಸಾಲೆಗಳನ್ನು ಹೊಂದಿರುತ್ತವೆ, ಆದ್ದರಿಂದ ಇವನ್ನು ಹೆಚ್ಚಾಗಿ ಸಾಸಿವೆ, ಚಟ್ನಿ ಅತವಾ ಇತರ ನರೆ ಪದಾರ್ಥಗಳೊಂದಿಗೆ ಬನ್‌ ಇಲ್ಲದೆ ಸೇವಿಸಲಾಗುತ್ತದೆ. ಸಾಮಾನ್ಯವಾಗಿ ಕಕ್ಕರಗಳನ್ನು ಗ್ರಿಲ್‌ (ಜಾಲರಿ)ನಲ್ಲಿಟ್ಟು, ಕೆಂಡದ ಮೇಲೆ ಅಥವಾ ಬೆಂಕಿಯಲ್ಲಿ ಸುಡಲಾಗುತ್ತದೆ, ಅಥವಾ ಹಬೆಯಲ್ಲಿ ಬೇಯಿಸಲಾಗುತ್ತದೆ (ಇವನ್ನು höyrymakkara ಎಂದು ಕರೆಯಲಾಗುತ್ತದೆ) ಅಥವಾ ಸಾನ ಶಾಖದ ಕಲ್ಲುಗಳಮೇಲೆ ಬೇಯಿಸಲಾಗುತ್ತದೆ.

ಫಿನ್ನಿಷ್‌ನ ಒಂದು ವಿಧದ ಸಾಸೇಜ್ ಎಂದರೆ ಮಸ್ಟಮಕ್ಕರ , ಲಿಟ್.ಬ್ಲ್ಯಾಕ್ ಸಾಸೇಜ್. ಮಸ್ಟಮಕ್ಕರ ವನ್ನು ರಕ್ತದೊಂದ ಮಾಡಲಾಗುತ್ತದೆ ಮತ್ತು ಇದು ಟಾಂಪೆರ್‌ನ ವೈಶಿಷ್ಟ್ಯವಾಗಿದೆ. ಇದು ಸ್ಕೋಟಿಷ್‌ನ ಬ್ಲ್ಯಾಕ್ ಫುಡ್ಡಿಂಗ್‌ನ ಹಾಗೆ ಇರುತ್ತದೆ.

ಕತ್ತರಿಸಿ, ಹುರಿದ ಬನ್‌ ಜೊತೆಗೆ ಸೌತೆಕಾಯಿ ಕೋಸಂಬರಿ ಮತ್ತು ಇತರ ತುಂಬು ಪದಾರ್ಥಗಳಿಂದ ತುಂಬಿಸಿ ತಯಾರಿಸಿದ (ಸುಮಾರು 10 cm) ದಪ್ಪದ ಮಕ್ಕರ ದಿಂದ ಕತ್ತ್ರಿಸಿ ಮಾಡಿದ ತುಂಡು, ಪೋರಿ ಪಟ್ಟಣದ ಜ್ಞಾಪಕಾರ್ಥ ಪೋರಿಲೈನೆನ್‌ ಆಗುತ್ತದೆ.

ತುಂಡುಗಳಂತೆ ಸೇವಿಸುವ ಉದ್ದೇಶದಿಂದ ಮಾಡಿದ ಉಪ್ಪಿಕಾಯಿ ಮಕ್ಕರವನ್ನು ಕೆಸ್ಟೋಮಕ್ಕರ ಎಂದು ಕರೆಯಲಾಗುತ್ತದೆ. ಈ ತರಹದವು ವಿವಿಧ ಮೆಟ್‌ವರ್ಸ್ಟ್, ಸಲಾಮಿ ಮತ್ತು ಬಾಲ್ಕನೆಸ್‌ಕ್ಯು ಶೈಲಿಗಳನ್ನು ಹೊಂದಿರುತ್ತವೆ. ಫಿನ್‌ಲ್ಯಾಂಡ್‌ನಲ್ಲಿನ ಅತ್ಯಂತ ಜನಪ್ರಿಯ ಕೆಸ್ಟೋಮಕ್ಕರ ಎಂದರೆ ಮೀಟ್‌ವರ್ಸ್ಟಿ (ನಿಷ್ಪತ್ತಿಯಾಗಿ ಈ ಪದ ಬಂದದ್ದು ಮೆಟ್‌ವರ್ಸ್ಟ್‌ ನಿಂದ), ಇದು ನುಣ್ಣಗೆ ರುಬ್ಬಿದ ಪೂರ್ಣ ಮಾಂಸವನ್ನು, ರುಬ್ಬಿದ ಕೊಬಿನಾಂಶ ಮತ್ತು ವಿವಿಧ ಮಸಾಲೆಗಳನ್ನು ಒಳಗೊಂಡಿರುತ್ತದೆ. ಇದು ಸಹ ಸಲಾಮಿಗಿಂತಲೂ ಭಿನ್ನವಾದದ್ದಲ್ಲ, ಆದರೆ ಸಾಮಾನ್ಯವಾಗಿ ದಪ್ಪವಾಗಿರುತ್ತದೆ ಮತ್ತು ಕಡಿಮೆ ಉಪ್ಪನ್ನು ಹೊಂದಿರುತ್ತದೆ. ಮೀಟ್‌ವರ್ಸ್ಟಿ ಯನ್ನು ಅಧಿಕವಾಗಿ ಕುದುರೆ ಮಾಂಸವನ್ನು ಹೊಂದಿರಲು ಉಪಯೋಗಿಸಲಾಗುತ್ತದೆ, ಆದರೆ ಕೇವಲ ಕೆಲವು ಬ್ರಾಂಡ್‌ಗಳು (ವ್ಯಾಪಾರ ನಾಮಗಳು) ಮಾತ್ರ ಇದನ್ನು ಹೊಂದಿರುತ್ತವೆ, ಬಹುಶಃ ಇದರ ಹೆಚ್ಚಿನ ತಯಾರಿಕಾ ವೆಚ್ಚವೇ ಇದಕ್ಕೆ ಕಾರಣವಾಗಿರಬಹುದು. ಅಲ್ಲಿ ಡೀರ್, ಮೂಸ್ ಅಥವಾ ರೈನ್‌ಡೀರ್ ಮೀಟ್‌ಗಳಂತಹ ಬೇಟೆಗಳೊಂದಿಗೆ, ಮಕ್ಕರ ಮತ್ತು ಮೀಟ್‌ವರ್ಸ್ಟಿ ಗಳೂ ಇವೆ. ಲೋಹಿಮಕ್ಕರ , ಅಂದರೆ ಸಲ್ಮಾನ್ ಸಾಸೇಜ್, ಸಹ ಇದೆ.

ಸಾಮಾನ್ಯವಾಗಿ, ಸ್ಕಾಂಡಿನವಿಯದಲ್ಲಿ ಕುದುರೆ ಮಾಂಸವನ್ನು ಸೇವಿಸುವ ವಿರುದ್ಧ ಯಾವುದೇ ಬಹಿಷ್ಕಾರವಿಲ್ಲ, ಆದರೆ ಸರಿದೂಗುವ ಕುದುರೆ ಮಾಂಸದ ಲಭ್ಯತೆಯ ಕೊರತೆಯಿಂದ, ಇದರ ಜನಪ್ರಿಯತೆಯು ಕ್ಷೀಣಿಸಿದೆ.

ಪೊಲೆಂಡ್[ಬದಲಾಯಿಸಿ]

ಮರದ ಬಟ್ಟಲಿನಲ್ಲಿ ಹದಿನಾರು ಹಸಿ ಸಾಸೇಜ್‌ಗಳು.

ಪೋಲಿಷ್ ಸಾಸೇಜ್‌ಗಳು, Kiełbasaಗಳು, ವಿಶಾಲವಾದ ಶೈಲಿಗಳಲ್ಲಿ ಹೊರಬಂದಿವೆ, ಅವುಗಳೆಂದರೆ, Swojska, Krajańska, Szynkowa, Biała, śląska, Krakowska, podhalańska, ಮತ್ತು ಇತರವುಗಳು. ಪೊಲೆಂಡ್‌ನಲ್ಲಿನ ಸಾಸೇಜ್‌ಗಳನ್ನು ಸಾಮಾನ್ಯವಾಗಿ ಹಂದಿ ಮಾಂಸದಿಂದ, ಮತ್ತು ಬಹಳ ವಿರಳವಾಗಿ ಗೋಮಾಂಸದಿಂದ ಮಾಡಲಾಗುತ್ತದೆ. ಕಡಿಮೆ ಪ್ರಮಾಣದ ಮಾಂಸವನ್ನು ಮತ್ತು ಸಾಯ್ ಪ್ರೊಟೀನ್, ಆಲುಗಡ್ಡೆಯ ಹಿಟ್ಟು ಅಥವಾ ನೀರಿನ ಬೈಂಡಿಂಗ್‌ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿದ್ದ ಸಾಸೇಜ್‌ಗಳನ್ನು ಕಡಿಮೆ ಗುಣಮಟ್ಟದ ಸಾಸೇಜ್‌ಗಳೆಂದು ಪರಿಗಣಿಸಲಾಗುವುದು. ಮೆಡಿಟರೇನಿಯನ್ ನಂತಹ ದೇಶಗಳಲ್ಲಿ, ಹವಾಮಾನದ ಪರಿಸ್ಥಿತಿಗಳ ಕಾರಣಕ್ಕಾಗಿ, ಸಾಸೇಜ್‌ಗಳನ್ನು ಒಣಗಿಸುವುದಕ್ಕಿಂತಲೂ ಹೊಗೆಯಾಡಿಸುವುದರ ಮೂಲಕ ಸಂರಕ್ಷಿಸಲಾಗುವುದು.

14ನೆಯ ಶತಮಾನದಿಂದಲೂ, ಪೊಲೆಂಡ್ ಸಾಸೇಜ್‌ಗಳ ಉತ್ಪಾದನೆಯಲ್ಲಿ ಮಿನುಗಿದೆ, ಇದು ವರ್ಜಿನ್ ಕಾಡಿನಾದ್ಯಂತ ಸಂಚರಿಸಿ ಕಂಡು ಹಿಡಿದು, ಸ್ನೇಹಿ ಕುಟುಂಬಗಳೀಗೆ ಮತ್ತು ವಿವಿಧ ಧರ್ಮದ ಶ್ರೇಣಿಯವರಿಗೆ ದೇಶದಾದ್ಯಂತ ಉಡುಗೊರೆಯಾಗಿ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲೇಬೇಕು. ಇದರ ಲಾಭವನ್ನು ಪಡೆಯುವವರ ವಿಸ್ತರಿಸಿದ ಪಟ್ಟಿಯು ನಗರದ ನ್ಯಾಯಾಧಿಪತಿಗಳನ್ನು, ಶೈಕ್ಷಣಿಕ ಪ್ರಾಧ್ಯಾಪಕರನ್ನು, ಮಿಲಿಟರಿ ಕಮಾಂಡರ್‌ಗಳನ್ನು, szlachta ಮತ್ತು ಕಪಿತುಲರನ್ನು ಒಳಗೊಂಡಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಹಸಿ ಮಾಂಸವನ್ನು ವಿತರಣೆಮಾಡಲಾಗುವುದು, ಮತ್ತು ವರ್ಷದ ಉಳಿದ ಎಲ್ಲಾ ದಿನಗಳಲ್ಲಿ ಪ್ರಕ್ರಿಯೆಗೊಳಪಡಿಸಿದ ಮಾಂಸವನ್ನು ಕೊಡಲಾಗುವುದು. ವೈವಿಧ್ಯ ವಿಷಯಕ್ಕೆ ಸಂಬಂಧಪಟ್ಟಂತೆ, ಆದಿ ಇಟಲಿಯ, ಪ್ರೆಂಚಿನ ಮತ್ತು ಜರ್ಮನ್‌ಗಳ ಪ್ರಭಾವಗಳು ಮಹತ್ತರವಾದ ಪಾತ್ರವನ್ನು ವಹಿಸಿವೆ. ಸಾಮಾನ್ಯವಾಗಿ ಮಾಂಸವನ್ನು ಕೊಬ್ಬಿನಂಶದಲ್ಲಿ ಹೊಗೆಯಾಡುಸುವಿಕೆಯಿಂದ ಸಂರಕ್ಷಿಸಿಡಲಾಗುತ್ತದೆಂದು ಚರಿತ್ರಗಾರ ಜಾನ್ ಡ್ಲುಗೋಜ್‌ರವರಿಂದ, 965 ರಿಂದ 1480ರ ವರೆಗಿನ ವಿದ್ಯಮಾನಗಳನ್ನು ಒಳಗೊಂಡ ಅವರ ವಾರ್ಷಿಕ ವೃತ್ತಾಂತ ಅನ್ನಲೆಸ್ ಸೆಯ್ ಕ್ರೊನಿಸಿ ಇನ್‌ಕ್ಲಿಟಿ ರೆಗ್ನಿ ಪೊಲೊನಿಯ್‌ ನಲ್ಲಿ ಪ್ರಸ್ತಾಪಿಸಲಾಗಿತ್ತು, ಅಲ್ಲಿ Niepołomiceನಲ್ಲಿನ ಬೇಟೆಯ ಕೋಟೆಯನ್ನು, 13ನೆಯ ಶತಮಾನದಲ್ಲಿ ಪ್ರಾರಂಭವಾದ ಪೋಲಿಷ್ ರಾಯಲ್ಟಿರ ಅತ್ಯಂತ ಪ್ರಸಿದ್ಧ ಬೇಟೆಯ ತಾಣವಾದ Niepołomice ಕಾಡಿನಿಂದ ಬೇಟೆಯನ್ನು ರಾಜ Władysław, ರಾಣಿ ಜೊಪಿಯಗೆ ಕಳುಹಿಸುವುದರ ಜೊತೆಗೆ ನಮೂದಿಸಲಾಯಿತು.[೧]

ಪೋರ್ಚುಗಲ್, ಸ್ಫೇನ್ ಮತ್ತು ಬ್ರೆಜಿಲ್[ಬದಲಾಯಿಸಿ]

ಎಂಬುಟಿಡೊಗಳು ಅಥವಾ ಎಂಚಿಡೋಗಳು ಸಾಮಾನ್ಯವಾಗಿ ಕೊಚ್ಚಿದ ಮಾಂಸವನ್ನು ಹೊಂದಿರುತ್ತವೆ, ಅದರಲ್ಲೂ ಮುಖ್ಯವಾಗಿ ಹಂದಿ ಮಾಂಸ, ಮತ್ತು ಇದನ್ನು ಸುಗಂಧ ವನಸ್ಫತಿಗಳಿಂದ ಅಥವಾ ಮಸಾಲೆ ದಿನಿಸುಗಳಿಂದ (ಕಾಳು ಮೆಣಸು, ಕೆಂಪು ಮೆಣಸು, ಸಿಹಿಯಾಗಿರುವ ಮೆಣಸು, ಬೆಳ್ಳುಳ್ಳಿ, ಸುವಾಸನೆಯ ಹಸಿರು ಸಸಿ, ತೈಮ್ (ಒಂದು ಬಗೆಯ ಸುವಾಸನೆಯ ಎಲೆ), ಲವಂಗ, ಶುಂಟಿ, ಜಾಕಾಯಿ, ಮೊದಲಾದವು) ಒಗ್ಗರಣೆ ಮಾಡಲಾಗುತ್ತದೆ.

ಸ್ಫೇನ್‌ನಲ್ಲಿ ಸಾಲ್ಚಿಚ ಎಂದು ಕರೆಯುವ ವಿಶಿಷ್ಟ ಎಂಬುಟಿಡೊವು ಇಂಗ್ಲಿಷ್ ಅಥವಾ ಜರ್ಮನ್ ಸಾಸೇಜ್‌ಗಳನ್ನೇ ಹೋಲುತ್ತದೆ. ಸ್ಫಾನಿಷ್ ಸಾಸೇಜ್‌ಗಳು ಕೆಮ್ಪು ಅಥವಾ ಬಿಳಿಯ ಬಣ್ಣದಲ್ಲಿರಬಹುದು. ಕೆಂಪು ಸಾಸೇಜ್‌ಗಳು ಸಿಹಿಯಾಗಿರುವ ಕೆಂಪು ಮೆಣಸನ್ನು (ಸ್ಫಾನಿಷ್‌ನಲ್ಲಿ ಪಿಮೆಂಟನ್) ಹೊಂದಿರುತ್ತವೆ ಮತ್ತು ಇವನ್ನು ಸಾಮಾನ್ಯವಾಗಿ ಕರಿದು ಮಾಡಲಾಗುತ್ತದೆ. ಬಿಳಿಯ ಸಾಸೇಜ್‌ಗಳು ಸಿಹಿಯಾಗಿರುವ ಕೆಮ್ಪು ಮೆಣಸನ್ನು ಹೊಂದಿರುವುದಿಲ್ಲ ಮತ್ತು ಇವನ್ನು ಸರಾಯಿಯಲ್ಲಿ ಕರಿದು ಅಥವಾ ಬೇಯಿಸಿ ಮಾಡಲಾಗುವುದು.

ಚೊರಿಜೊ ಅಥವಾ ಸಾಲ್ಚಿಚಾಸ್‌ಗಳಂತೆ ಸ್ಫಾನಿಷ್ ಎಂಬುಟಿಡೊಗಳನ್ನು "ಸಾಸೇಜ್‌ಗಳೆಂದು" ಕರೆಯಬಹುದಾಗಿದ್ದರೂ, ಸ್ಫಾನಿಷ್ ಮಾತನಾಡುವವರಿಗೆ ಅವು ಸಾಲ್‌ಚಿಚಾಸ್‌ಗಳೇ ಅಲ್ಲ.

ಸ್ಕಾಟ್‌ಲ್ಯಾಂಡ್[ಬದಲಾಯಿಸಿ]

ಸ್ಕಾಟಿಷ್ ಸಾಸೇಜ್‌ಗಳು ಭಿನ್ನವಾಗಿಯೂ ಮತ್ತು ಪ್ರತ್ಯೇಕವಾಗಿಯೂ ಇರುತ್ತವೆ. ಸ್ಕೊಯರ್ ಸಾಸೇಜ್ ಅನ್ನುವುದು ಒಂದು ಪ್ರಸಿದ್ಧವಾದ ಬ್ರೇಕ್‌ಫಾಸ್ಟ್ ಆಹಾರವಾಗಿದೆ. ಇದನ್ನು ಸಾಮಾನ್ಯವಾಗಿ ಪೂರ್ಣ ಸ್ಕೊಟಿಷ್ ಬ್ರೇಕ್‌ಫಾಸ್ಟ್‌ನ ಅಂಗವಾಗಿ ಅಥವಾ ಸ್ಕೋಟಿಷ್‌ನ ಬೆಳಗಿನ ಆಹಾರವಾಗಿ ಸೇವಿಸಲಾಗುವುದು. ಸಾಸೇಜ್‌ನ್ನು ಪ್ರತಿಯೊಂದು ಭಾಗವನ್ನು ಕತ್ತರಿಸಿದ ಸಮಚತುರ್ಕೋನಾಕೃತಿಯ ಬ್ಲಾಕ್‌ನಲ್ಲಿ ತಯಾರಿಸಲಾಗುವುದು. ಮುಖ್ಯವಾಗಿ ಇದನ್ನು ಕಾಳುಮೆಣಸಿನಿಂದ ಒಗ್ಗರಣೆ ಮಾಡಲಾಗುವುದು. ಇದು ಅದ್ವಿತೀಯ ಸುವಾಸನೆಯನ್ನು ಹೊಂದಿದ್ದರೂ, ಸ್ಕೊಯರ್ ಸಾಸೇಜ್‌ನ್ನು ಸ್ಕಾಟ್‌ಲ್ಯಾಂಡ್‌ನ ಹೊರಪ್ರದೇಶಗಳಲ್ಲಿ ಅತೀ ವಿರಳವಾಗಿ ಕಾಣಲಾಗುವುದು ಮತ್ತು ವಾಸ್ತವವಾಗಿ ಇದನ್ನು ಹೈಲ್ಯಾಂಡ್ಸ್‌ನಲ್ಲಿ ಇನ್ನೂ ಅಪುರೂಪವಾಗಿ ಕಾಣಲಾಗುತ್ತದೆ. ಸಾಸೇಜ್‌ನ ಇತರ ವಿಧಗಳು ಬ್ಲ್ಯಾಕ್ ಪುಡ್ಡಿಂಗ್‌ನ್ನು (ಸ್ಕೋಟ್ಸ್) ಒಳಗೊಂಡಿರುತ್ತವೆ : ಬ್ಲ್ಯಾಕ್ ಪುಡ್ಡಿಂಗ್‌ , ಇದು ಜರ್ಮನ್ ಮತ್ತು ಪೋಲಿಷ್‌ನ ಬ್ಲಡ್ ಸಾಸೇಜ್‌ಗಳನ್ನು ಹೋಲುತ್ತದೆ. ಸ್ಟೋರ್ನೊವೇ ಬ್ಲ್ಯಾಕ್ ಪುಡ್ಡಿಂಗ್‌‌ ಇದನ್ನು ಪ್ರಸ್ತುತ EU ಭೌಗೋಳ ಶಾಸ್ತ್ರೀಯ ರಕ್ಷಣೆಯಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದ ಹೆಚ್ಚಿನ ಕಾಳಜಿ ಮತ್ತು ಅಳತೆಗಳಲ್ಲಿ ಮಾಡಲಾಗುತ್ತದೆ. ಇದರ ಜೊತೆಗೆ ಆ ಪ್ರದೇಶದ ಅತ್ಯಂತ ಜನಪ್ರಿಯ ಸಾಸೇಜ್ ವಿಧವೆಂದರೆ ರೆಡ್ ಪುಡ್ಡಿಂಗ್(ಸ್ಕೋಟ್ಸ್: ರಿಡ್ ಪುಡ್ಡಿನ್ ). ದೇಶದ ಈಶಾನ್ಯ ಭಾಗಗಳಲ್ಲಿ ಇದು ಸರ್ವೇಸಾಮಾನ್ಯ ಮತ್ತು ಇದು ಚಿಪ್ ಶಾಪ್‌ನ ಅಚ್ಚುಮೆಚ್ಚಿನ ತಿಂಡಿ, ಅಲ್ಲಿ ಇದನ್ನು ಚಿಪ್‌ ಸಪ್ಪೆರ್‌ನ ಅಂಗವಾಗಿ ಕಲಿಸಿದ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರೆಯಲಾಗುವುದು. ಇದು ಇತರ ಯುರೋಪಿನ ಸಾಸೇಜ್‌ಗಳಾದ ಚೊರಿಜೊ ಅಥವಾ ಬಲೋನೆಯ್‌ಗಳನ್ನು ಹೋಲುತ್ತದೆ.

ಸ್ವಿಜರ್ಲೆಂಡ್‌[ಬದಲಾಯಿಸಿ]

ಸರ್ವೆಲೆಟ್.

ಸರ್ವೆಲಟ್ ಹೆಸರಿನ, ಬೇಯಿಸಿದ ಸಾಸೇಜ್‌ನ್ನು, ಆಗಾಗ್ಗೆ ಸ್ವಿಜರ್ಲೆಂಡ್‌’ನ ರಾಷ್ಟ್ರೀಯ ಸಾಸೇಜ್ ಎಂದು ಸೂಚಿಸಲಾಗುತ್ತದೆ. ಅತೀ ಹೆಚ್ಚಿನ ಸಂಖ್ಯೆಯ ಪ್ರಾದೇಶಿಕ ಸಾಸೇಜ್ ವೈಶಿಷ್ಟ್ಯತೆಗಳು ಸಹ ಇದರಲ್ಲಿ ಒಳಗೊಂಡಿರುತ್ತವೆ.

ಸ್ವಿಡನ್[ಬದಲಾಯಿಸಿ]

ಪಲುಕೋರ್ವ್ ದೊಡ್ಡದಾದ ಸಾಂಪ್ರದಾಯಿಕ ಸ್ವೆಡಿಷ್ ಸಾಸೇಜ್, ಇದನ್ನು ತುರಿದ ಹಂದಿಮಾಂಸ ಮತ್ತು ಗೋಮಾಂಸ ಅಥವಾ ದನದ ಕರುವಿನ ಮಾಂಸವನ್ನು ಆಲುಗಡ್ಡೆಯ ಹಿಟ್ಟು ಮತ್ತು ಸ್ವಲ್ಪ ಮಸಾಲೆದಿನಿಸುಗಳ ಮಿಶ್ರಣದಿಂದ ಮಾಡಲಾಗುತ್ತದೆ. ಈ ಸಾಸೇಜ್ ಇದರ ಮೂಲಸ್ಥಾನವಾದ ಪಾಲಮ್ ನಗರದಿಂದ ಇದರ ಹೆಸರನ್ನು ಪಡೆದುಕೊಂಡಿದೆ.

ಟರ್ಕಿ[ಬದಲಾಯಿಸಿ]

ಟರ್ಕಿಯಲ್ಲಿ, ಸಾಸೇಜ್ ‌ನ್ನು ಸೊಸಿಸ್ ಎಂದು ಗುರುತಿಸಲಾಗುತ್ತದೆ, ಮತ್ತು ಇದನ್ನು ಗೋಮಾಂಸದಿಂದ ಮಾಡಲಾಗುತ್ತದೆ.

ಸಕಕ್ (ಕೊನೆಯಲ್ಲಿ ಒಂದೇ ಸ್ವರದ ಅಕ್ಷರದ ಉಚ್ಚಾರಹೊಂದಿಗೆ tsudjuck ಅಥವಾ soudjouk ಅಥವಾ ಸುಜಕ್ ಎಂದು ಉಚ್ಚರಿಸುವ) ಒಂದು ವಿಧದ ಸಾಸೇಜ್ ಆಗಿದ್ದು ಇದನ್ನು ಟರ್ಕಿ ಮತ್ತು ನೆರೆಯ ಬಾಲ್ಕನ್ ದೇಶಗಳಲ್ಲಿ ಮಾಡಲಾಗುತ್ತದೆ.

ಅನೇಕ ವಿಧದ ಸಕಕ್‌ಗಳಿವೆ, ಆದರೆ ಇವೆಲ್ಲವನ್ನು ಗೋಮಾಂಸದಿಂದಲೇ ಮಾಡಲಾಗುತ್ತದೆ. ಇದನ್ನು ಹುದುಗಿಸಲಾಗುವುದು, ಮಸಾಲೆಭರಿತವನ್ನಾಗಿ ಮಾದಲಾಗುದು (ಬೆಳ್ಳುಳ್ಳಿ ಮತ್ತು ಕಾಳು ಮೆಣಸಿನೊಂದಿಗೆ) ಮತ್ತು ತಿನ್ನಲಾಗದಂತಹ ಹೊರಕವಚದಲ್ಲಿ ತುಂಬಲಾಗುವುದು, ಆದ್ದರಿಂದ ಸೇವಿಸುವ ಮುನ್ನ ಇದನ್ನು ಅವಶ್ಯಕವಾಗಿ ತೆಗೆದುಹಾಕಬೇಕಾಗುತ್ತದೆ. ಸ್ವಲ್ಪಮಟ್ಟಿಗೆ ಹೊಗೆಯಾಡಿಸಿದ ಸಕಕ್‌ಗಳನ್ನು ಉನ್ನತ ಗುಣಮಟ್ಟದವೆಂದು ಪರಿಗಣಿಸಲಾಗುವುದು. ಇದರ ರುಚಿಯು ಖಾರವಾಗಿ, ಉಪ್ಪಾಗಿ ಮತ್ತು ಸ್ವಲ್ಫ ಹಸಿಯಾಗಿ, ಪೆಪ್ಪೆರೊನಿಗೆ ಹೋಲುವಂತಿರುತ್ತದೆ. ಕೆಲವು ವಿಶಿಷ್ಟ ಸಾಸೇಜ್‌ಗಳು ಅತ್ಯಂತ ಖಾರವಾಗಿರುತ್ತವೆ ಮತ್ತು/ಅಥವಾ ಅಧಿಕ ಜಿಡ್ಡಿನಂಶವನ್ನು ಹೊಂದಿರುತ್ತವೆ. ಕೆಲವು ಟರ್ಕಿಗಳೊಂದಿಗೆ, ನೀರು ಕೋಣದ ಮಾಂಸ, ಕುರಿಯ ಕೊಬ್ಬು ಅಥವಾ ಕೋಳಿಯ ಮಾಂಸದಿಂದ "ಮಿಶ್ರಿತಗೊಂಡಿರುತ್ತವೆ".

ಸಕಕ್‌ದಿಂದ ಅನೇಕ ಬಗೆಯ ಅಡುಗೆಗಳನ್ನು ಮಾಡಲಾಗುತ್ತದೆ, ಆದರೆ ಜಾಲರಿಯಲ್ಲಿಟ್ಟು ಕೆಂಡದಲ್ಲಿ ಸುಟ್ಟ ಸಕಕ್ ಅತ್ಯಂತ ಜನಪ್ರಿಯವಾಗಿದೆ. ಹೊಗೆಯಾಡಿಸಿ ಒಣಗಿಸಿದ ವಿಧಗಳನ್ನು ಸ್ಯಾಂಡ್‌ವಿಚ್‌ನಲ್ಲಿ ಹಸಿಯಾಗಿಯೇ ಸೇವಿಸಲಾಗುತ್ತದೆ. ಕರುಳಿನ ಕುಣಿಕೆಯು ಒಂದು ಸಕಕ್. ಸಾಮಾನ್ಯವಾಗಿ ಹೊಗೆಯಾಡಿಸಿದ ಸಕಕ್ ನೇರವಾಗಿರುತ್ತದೆ.

ಉತ್ತರ ಅಮೆರಿಕ[ಬದಲಾಯಿಸಿ]

ಫ್ರಾಂಕ್‌ಫರ್ಟ್ ಸಾಸೇಜು

ಉತ್ತರ ಅಮೆರಿಕಾದ ಬ್ರೇಕ್‌ಫಾಸ್ಟ್ ಅಥವಾ ಕಂಟ್ರಿ ಸಾಸೇಜ್‌ನ್ನು ತುರಿದ ಹಸಿ ಹಂದಿ ಮಾಂಸವನ್ನು ಕಾಳುಮೆಣಸು, ಸೇಜ್ "ಅಡುಗೆಯಲ್ಲಿ ಬಳಸುವ ಒಂದು ವಿಧದ ಸುವಾಸನೆಯ ಎಲೆ", ಮತ್ತು ಇತರ ಮಸಾಲೆದಿನಿಸುಗಳೊಂದಿಗೆ ಮಿಶ್ರಮಾಡಿ ಮಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ದೊಡ್ಡದಾದ ಸಿಂಥೆಟಿಕ್ ಪ್ಲಾಸ್ಟಿಕ್ ಹೊರಕವಚದಲ್ಲಿ, ಮಾರಲಾಗುತ್ತದೆ ಅಥವಾ ಇದು ಪ್ರೊಟೀನ್ ಹೊರಕವಚವನ್ನು ಸಹ ಹೊಂದಿರಬಹುದಾಗಿದೆ. ಕೆಲವು ಮಾರುಕಟ್ಟೆಗಳಲ್ಲಿ ಇದನ್ನು ಹೊರಕವಚವಿಲ್ಲದೆ ಕಟ್ಟುಗಳಲ್ಲಿ ಮಾರಾಟಮಾಡಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಚಿಕ್ಕ ಚಿಕ್ಕ ಪಟ್ಟಿಗಳನ್ನಾಗಿ ಕತ್ತರಿಸಿ ಹೆಂಚಿನ ಮೆಲೆ ಹುರಿದು, ಅಥವಾ ಬೇಯಿಸಿ, ಮೊಟ್ಟೆಯನ್ನು ಕದಡಿ ಮಾಡಿದ ಅಥವಾ ಗ್ರೇವಿಯಲ್ಲಿ ಮಿಶ್ರಮಾಡಲಾಗುವುದು. ಸ್ಕ್ಯಾಂಬಲ್ ಹಂದಿಮಾಂಸ ಆಧಾರಿತ ಬ್ರೆಕ್‌ಫಾಸ್ಟ್ ಮಾಂಸವಾಗಿದ್ದು ಇದು ಮಿಡ್ ಅಟ್ಲಾಂಟಿಕ್ ಸ್ಟೇಟ್ಸ್‌ನ ಮೂಲವನ್ನು ಹೊಂದಿದೆ. ಇಟಾಲಿಯನ್, ಬ್ರಾಟ್‌ವರ್ಸ್ಟ್, ಚೊರಿಜೊ, ಮತ್ತು ಆಂಡೊವಿಲ್ಲೆಗಳನ್ನು ಒಳಗೊಂಡು, ಇತರ ಹಸಿ ಸಾಸೇಜ್‌ಗಳು ಸಹ ಸರಪಳಿಯ ರೂಪದಲ್ಲಿ ವಿಶಾಲವಾಗಿ ದೊರೆಯುತ್ತವೆ.

ಪ್ರಾಂಕ್‌ಪರ್ಟರ್ ಅಥವಾ ಹಾಟ್ ಡಾಗ್ ಅನ್ನುವುದು U.S. ಮತ್ತು ಕೆನಡದಲ್ಲಿ ಸರ್ವೇಸಾಮಾನ್ಯವಾದ ಮೊದಲೇ ಬೇಯಿಸಿಟ್ಟ ಸಾಸೇಜ್. ಉತ್ಪಾದನೆಯಲ್ಲಿ ಮತ್ತು ವ್ಯಾಪಾರದಲ್ಲಿ (ಹೆಚ್ಚಾಗಿ ಮಾಡದೇ ಯಿದ್ದ) ಸರಿಯಾದ ಪರಿಭಾಷೆಯನ್ನು ಗಮನಿಸಿದರೆ, "ಪ್ರಾಂಕ್‌ಪರ್ಟರ್ಸ್‌ಗಳನ್ನು" ಅತ್ಯಂತ ಮಧ್ಯದಲ್ಲಿ ಪಕ್ವಗೊಳಿಸಲಾಗಿರುತ್ತದೆ, "ಹಾಟ್ ಡಾಗ್ಸ್‌ಗಳು" ಅತ್ಯಂತ ದೃಢವಾಗಿರುತ್ತವೆ. ಮತ್ತೊಂದು ಜನಪ್ರಿಯ ವಿಧ ಎಂದರೆ ಕಾರ್ನ್ ಡಾಗ್, ಇದನ್ನು ತಯಾರಿಸಲು ಹಾಟ್ ಡಾಗ್‌ನ್ನು ಕಾರ್ನ್ ಮೀಲ್ (ಜೋಳದ ಭೋಜನದ) ಹಿಟ್ಟಿನಲ್ಲಿ ಅದ್ದಿ ಕರಿಯಲಾಗುತ್ತದೆ ಮತ್ತು ಇದನ್ನು ಕಡ್ಡಿಗೆ ಚುಚ್ಚಿ ಬಡಿಸಲಾಗುತ್ತದೆ.

ಹೆಚ್ಚಾಗಿ ಸ್ಯಾಂಡ್‌ವಿಚ್‌ನೊಂದಿಗೆ ಸೇವಿಸುವ, ಸೇವಿಸಲು ಮೊದಲೆ ಸಿದ್ದಗೊಳಿಸಿದ ಸಾಸೇಜ್‌ಗಳ ಇತರ ವಿಧಗಳು, ಸಲಾಮಿ, ಅಮೆರಿಕಾ-ಶೈಲಿಯ ಬೊಲೊಗ್ನ, ಲೆಬನಾನ್ ಬೊಲೊಗ್ನ, liverwurst, ಮತ್ತು ಹೆಡ್ ಚೀಸ್‌ಗಳನ್ನು ಒಳಗೊಂಡಿವೆ. ಪೆಪ್ಪೆರೊನಿ ಮತ್ತು ಇಟಲಿಯ ಕ್ರಂಬಲ್ಸ್‌ಗಳು ಜನಪ್ರಿಯ ಪಿಜ್ಜಾ ಅಗ್ರಸ್ಥಾನದವಾಗಿವೆ. ಕಾಜುನ್ ಕುಸನ್‌ನಲ್ಲಿ ಬೊವ್‌ದಿನ್ ಜನಪ್ರಿಯವಾಗಿದೆ.

ಲ್ಯಾಟಿನ್ ಅಮೆರಿಕ[ಬದಲಾಯಿಸಿ]

ಬಹುತೇಕ ಲ್ಯಾಟಿನ್ ಅಮೆರಿಕದಲ್ಲಿ ಸಾಸೇಜ್‌ಗಳ ಕೆಲವು ಮೂಲ ವಿಧಗಳನ್ನು ಮಾತ್ರ, ಪ್ರತಿಯೊಂದು ಪಾಕದಲ್ಲೂ ಸ್ವಲ್ಪ ಮಟ್ಟಿನ ಪ್ರಾದೇಶಿಕ ವ್ಯತ್ಯಾಸದೊಂದಿಗೆ ಸೇವಿಸಲಾಗುತ್ತದೆ. ಹಂದಿ ಮಾಂಸವನ್ನು ಹೆಚ್ಚಾಗಿ ಹೊಂದಿದ್ದ ಸ್ಪಾನಿಷ್‌ನ ಸಮಾನತೆಯ ಸಾಸೇಜ್‌ಗಳಲ್ಲಿ ಗೋಮಾಂಸವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದುತ್ತದೆ. ಅವುಗಳೆಂದರೆ ಚೊರಿಜೊ (ಇದರ ಸ್ಪಾನಿಷ್‌ನವುಕ್ಕಿಂತಲೂ ತೇವಾಂಶವನ್ನು ಹೊಂದಿದ್ದು ತಾಜಾವಾಗಿರುತ್ತವೆ), ಲೊಂಗನಿಜ (ಸಾಮಾನ್ಯವಾಗಿ ಚೊರಿಜೊ ನಂತೆ ಇರುತ್ತದೆ ಆದರೆ ಅದಕ್ಕಿಂತಲೂ ಉದ್ದವಾಗಿ ತೆಳ್ಳಗೆ ಇರುತ್ತದೆ), ಮೊರ್ಸಿಲ್ಲ ಅಥವಾ ರೆಲ್ಲೆನೊ (ಬ್ಲಡ್ ಸಾಸೇಜ್), ಮತ್ತು salchichas ಹೆಚ್ಚಾಗಿ ಹಾಟ್ ಡಾಗ್‌ಗಳು ಅಥವಾ ವಿಯನ್ನ ಸಾಸೇಜ್‌ಗಳಿಗೆ ಸಮನಾಗಿರುತ್ತವೆ).

ಮೆಕ್ಸಿಕೋ[ಬದಲಾಯಿಸಿ]

Salchicha Oaxaqueña, ಓಕ್ಸಾಕದ ಮೆಕ್ಸಿಕನ್ ರಾಜ್ಯದ ಅರೆ-ಒಣಗಿದ ಸಾಸೇಜ್.

ಅತ್ಯಂತ ಸರ್ವೇಸಾಮಾನ್ಯ ಮೆಕ್ಸಿಕೋದ ಸಾಸೇಜ್ ಚೊರಿಜೊ. ಇದು ತಾಜಾವಾಗಿದ್ದು ಸಾಮಾನ್ಯವಾಗಿ ಅತೀ ಕೆಂಪು ಬಣ್ಣವನ್ನು ಹೊಂದಿರುತ್ತದೆ (ಬಹುತೇಕ ಉಳಿದ ಲ್ಯಾಟಿನ್ ಅಮೆರಿಕದಲ್ಲಿ, ಚೊರಿಜೊ ಯಾವುದೆ ಬಣ್ಣವನ್ನು ಹೊಂದಿರುವುದಿಲ್ಲ ಮತ್ತು ಒರಟಾಗಿ ಕತ್ತರಿಸಿರುತ್ತದೆ). ಕೆಲವು ಚೊರಿಜೊಗಳು ಬಹಳ ಅಳ್ಳಕವಾಗಿದ್ದು ಅದರ ಹೊರಕವಚವನ್ನು ಕತ್ತರಿಸಿದ ಕೂಡಲೇ ಹೊರ ಚೆಲ್ಲುತ್ತವೆ; ಈ ರೀತಿಯ ಚೊರಿಜೊ , ಟೊರ್ಟ ಸ್ಯಾಂಡ್‌ವಿಚ್‌ಗಳ, ಬ್ರೇಕ್‌ಫಾಸ್ಟ್ ಬರ್ರಿಟೊಗಳ ಮತ್ತು ಟಕೊಗಳ ಬಹಳ ಪ್ರಸಿದ್ಧ ಪಿಲ್ಲಿಂಗ್ (ಒಳಾಂಶ) ಆಗಿದೆ. Salchichas , longaniza (ಉದ್ದನೆಯ, ತೆಳ್ಳಗಿನ, ಒರಟಾಗಿ ಕತ್ತರಿಸಿದ ಸಾಸೇಜ್) ಮತ್ತು ಹೆಡ್ ಚೀಸ್‌ಗಳನ್ನು ಸಹ ವ್ಯಾಪಕವಾಗಿ ಸೇವಿಸಲಾಗುತ್ತದೆ.

ಅರ್ಜೆಂಟೈನ ಮತ್ತು ಊರುಗ್ವಾಯ್‌[ಬದಲಾಯಿಸಿ]

ಅರ್ಜೆಂಟೈನ ಮತ್ತು ಊರುಗ್ವಾಯ್‌‍ನಲ್ಲಿ ಅನೇಕ ಸಾಸೇಜ್‌ಗಳನ್ನು ಸೇವಿಸಲಾಗುತ್ತದೆ. ಸಾಂಪ್ರಧಾಯಕ ಅಸಾಡೊನ ಭಾಗವಾಗಿ ಸೇವಿಸಲಾಗುವ, ಚೊರಿಜೊ (ಗೋಮಾಂಸ ಮತ್ತು/ಅಥವಾ ಹಂದಿಮಾಂಸ, ಮಸಾಲೆಗಳೊಂದಿಗೆ ಸುವಾಸನೆಭರಿತ ಗೊಳಿಸಿದ) ಮತ್ತು ಮಾರ್ಸಿಲ್ಲ (ಬ್ಲಡ್ ಸಾಸೇಜ್ ಅಥವಾ ಬ್ಲ್ಯಾಕ್ ಪುಡ್ಡಿಂಗ್)ಗಳು ಅತ್ಯಂತ ಜನಪ್ರಿಯವಾದ ಸಾಸೇಜ್‌ಗಳು. ಇವೆರಡು ಸ್ಪಾನಿಷ್ ಮೂಲವನ್ನು ಹೊಂದಿರುತ್ತವೆ. salchicha ಅರ್ಜೆಂಟೈನ, ಕ್ರಿಯೊಲ್ಲ (ಅರ್ಜೆಂಟೈನಾದ ಸಾಸೇಜ್) ಅಥವಾ ಪರ್ರಿಲ್ಲೆರ (ಶುದ್ಧ ಬಾರ್ಬೆಕ್ಯು ಶೈಲಿಯ) ಸ್ಥಳೀಯ ವಿಧವಾಗಿದೆ, ಇದನ್ನು ಚೊರಿಜೊ ತಯಾರಿಸುವ ಇನ್‌ಗ್ರೇಡಿಯೇಂಟ್ಸ್ (ಒಳಾಂಶ)ಗಳಿಂದಲೇ ಮಾಡಲಾಗುವುದು ಆದರೆ ಇದು ತೆಳ್ಳಗಿರುತ್ತದೆ.[೯]

ನೂರಾರು ಸಲಾಮಿ-ಶೈಲಿಯ ಸಾಸೇಜ್‌ಗಳಿವೆ. ಸಲೇಮ್ ಟಂಡಿಲೆರೊ, ಟಂಡಿಲ್‌ ನಗರದಿಂದ ಬಹಳ ಜನಪ್ರಿಯವಾಗಿದೆ. ಇತರ ಉದಾಹರಣೆಗಳು: ಲೊಂಗನಿಜ, ಕಂಟಿಮ್‌ಪಾಲೊ ಮತ್ತು ಸೊಪ್ರೆಸಟ್ಟ.[೧೦]

ವಿಯನ್ನ ಸಾಸೇಜ್‌ಗಳನ್ನು ಅಪ್ಪೆಟೈಜೆರ್‌ಗಳಾಗಿ ಅಥವಾ ಸಾಮಾನ್ಯವಾಗಿ ಇತರ ಚಟ್ನಿಗಳು ಮತ್ತು ಸಲಾಡ್‌ಗಳೊಂದಿಗೆ ಬಡಿಸುವ ಹಾಟ್ ಡಾಗ್ಸ್ (ಪಾಂಚೊಸ್‌ಗಳೆಂದು ಕರೆಯುವ)ಗಳಲ್ಲಿ ಸೇವಿಸಲಾಗುತ್ತದೆ.

Leberwurst ಇದನ್ನು ಸಾಮಾನ್ಯವಾಗಿ ಪ್ರತಿಯೊಂದು ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ ಮತ್ತು ಇದನ್ನು ತಣ್ಣನೆಯ ತುಂಡುಗಳಾಗಿ ಅಥವಾ ಪೇಟ್‌ಗಳಾಗಿ ಸೇವಿಸಲಾಗುವುದು.

Weisswurst ಸಹ ಸಾಮಾನ್ಯ ಅಡುಗೆ ಯಾಗಿದೆ, ಕೆಲವು ಪ್ರದೆಶಗಳಲ್ಲಿ ಇದನ್ನು ಬೇಯಿಸಿ ಪುಡಿಮಾಡಿದ ಆಲುಗಡೆಯೊಂದಿಗೆ ಅಥವಾ ಚಕ್ರಟ್ (Sauerkraut)ಗಳೊಂದಿಗೆ ಸೇವಿಸಲಾಗುತ್ತದೆ.[೧೧][೧೨]

ಕೊಲಂಬಿಯಾ[ಬದಲಾಯಿಸಿ]

ಬೆಣ್ಣೆಹಚ್ಚಿದ ಅರೆಪ ದೊಂದಿಗೆ ಬಡಿಸುವ ಜಾಲರಿಯಲ್ಲಿಟ್ಟು ಕೆಂಡದಲ್ಲಿ ಸುಟ್ಟ ಚೊಯ್‌ಜೊ ಸಹ ಕೊಲಂಬಿಯಾದಲ್ಲಿನ ಬಹಳ ಪ್ರಸಿದ್ಧವಾದ ಬೀದಿ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ.

ಸ್ಟ್ಯಾಂಡರ್ಡ್ ಲ್ಯಾಟಿನ್ ಅಮೆರಿಕನ್ ಸಾಸೇಜ್‌ಗಳ ಜೊತೆಗೆ, ಒಣಗಿಸಿದ ಹಂದಿಮಾಂಸದ ಸಾಸೇಜ್‌ಗಳನ್ನು ಸಹ ಬಡಿಸಲಾಗುವುದು, ಇವನ್ನು ಹೆಚ್ಚಾಗಿ ಬೀರ್ ಕುಡಿಯುವಾಗ ಜೊತೆಯಲ್ಲಿ ಸೇವಿಸುವ ತಿಂಡಿಗಳಂತೆ ಕೊಡಲಾಗುವುದು. ಇವು ಕಬನೊಸ್ (ಉಪ್ಪಾಗಿ, ಚಿಕ್ಕದಾಗಿ, ತೆಳ್ಳಗೆ ಇರುತ್ತವೆ, ಮತ್ತು ಪ್ರತ್ಯೇಕವಾಗಿ ಬಡಿಸಲಾಗುತ್ತದೆ), ಬೊಟಿಪರ್ರ (ಕಟಲಾನ್ ಮೂಲದ; ಖಾರದ, ಚಿಕ್ಕದಾದ, ದಪ್ಪವಾಗಿದ್ದ ಮತ್ತು ಕಬಾನೊಸ್‌ಗಿಂತಲೂ ತೆವಾಂಶ ಹೊಂದಿದ) ಮತ್ತು ಸಾಲ್ಚಿಚೋನ್ (ಉದ್ದನೆಯ, ತೆಳ್ಳಗಿನ ಮತ್ತು ಸಂವೃದ್ಧವಾಗಿ ಪ್ರಕ್ರಿಯೆಗೊಳಿಸಿ ಹೋಳುಗಳಾಗಿ ಕತ್ತರಿಸಿ ಬಡಿಸುವ ಸಾಸೇಜ್)ಗಳನ್ನು ಒಳಗೊಂಡಿವೆ.

ಏಷ್ಯಾ[ಬದಲಾಯಿಸಿ]

ಚೀನಾ[ಬದಲಾಯಿಸಿ]

Lap cheongಗಳು (ಲ್ಯಾಪ್ ಚೊಂಗ್, ಲ್ಯಾಪ್ ಚುಂಗ್, ಲೋಪ್ ಚೊಂಗ್ ಎಂದು ಸಹ ಕರೆಯುವ) ಒಣಗಿಸಿದ ಹಂದಿಮಾಂಸದ ಸಾಸೇಜ್‌ಗಳು, ಇವು ಖಾರವಾಗಿರುವಂತೆ ಕಾಣುತ್ತವೆ ಮತ್ತು ಭಾಸವಾಗುತ್ತವೆ ಆದರೆ ಅವು ಬಹಳ ಸಿಹಿಯಾಗಿರುತ್ತವೆ. ಚಿನಾದ ನೈರುತ್ಯ ದಿಕ್ಕಿನಲ್ಲಿ, ಸಾಸೇಜ್‌ಗಳು ಉಪ್ಪು, ಕೆಂಪು ಮೆಣಸು ಮತ್ತು ಕಾಡು ಮೆಣಸುಗಳೊಂದಿಗೆ ಮಸಾಲೆಭರಿತಗೊಂಡಿರುತ್ತವೆ. ಇಲ್ಲಿನ ಜನರು ಹೆಚ್ಚಾಗಿ ಸಾಸೇಜ್‌ಗಳನ್ನು ಹೊಗೆಯಾಡಿಸುವುದರ ಮೂಲಕ ಮತ್ತು ಒಣಗಿಸುವುದರ ಮೂಲಕ ಸಂರಕ್ಷಿಸಿಡುತ್ತಾರೆ.

ಜಪಾನ್‌[ಬದಲಾಯಿಸಿ]

ಜಪಾನ್‌ನ ಸಾಸೇಜ್‌ಗಳು ಕೆಲವೇ ವಿಧಗಳನ್ನು ಹೊಂದಿವೆ, ಆದರೆ ಮಳಿಗೆಗಳಿಗೆ ಅನುಕೂಲವಾಗುವಂತೆ ಎಲ್ಲಾಕಡೆ, ರುಬ್ಬಿದ ಮೀನಿನ ಮಾಂಸದಿಂದ ಮಾಡಿದ ಸಾಸೇಜ್‌ಗಳನ್ನು ಒಳಗೊಂಡಿದೆ.

ಕೊರಿಯಾ[ಬದಲಾಯಿಸಿ]

ಸಂಡೇ, ಒಂದು ವಿಧದ ಬ್ಲಡ್ ಸಾಸೇಜ್, ಇದು ಸಾಂಪ್ರಧಾಯಿಕ ಕೊರೆಯನ್ ಸಾಸೇಜ್ ಆಗಿದೆ. ಬೀದಿಬದಿಯಲ್ಲಿ ಸಿಗುವ ಜನಪ್ರಿಯ ಆಹಾರವಾದ, ಸಂಡೇಯನ್ನು ಸಾಮಾನ್ಯವಾಗಿ ಆಕಳ ಅಥವಾ ಹಂದಿಯ ಕರುಳುಗಳಲ್ಲಿ ವಿವಿಧ ಇನ್‌ಗ್ರೇಡಿಯೇಂಟ್ಸ್‌ನ್ನು ತುಂಬಿಸಿ, ಆವಿಯಲ್ಲಿ ಬೇಯಿಸುವುದರ ಮೂಲಕ ಅಥವಾ ಕುದಿಸುವ ಮೂಲಕ ತಯಾರಿಸಲಾಗುತ್ತದೆ. ಅತ್ಯಂತ ಸಾಮಾನ್ಯ ಬಗೆ ಎಂದರೆ, ಹಂದಿಮಾಂಸದ ರಕ್ತ, ಸೆಲ್ಲೋಪೇನ್ ಶಾವಿಗೆ, ಮತ್ತು ಜವೆಗೋದಿಯ ಮಿಶ್ರಣವನ್ನು ಹಂದಿಯ ಕರುಳಿನಲ್ಲಿ ತುಂಬಿ ಮಾಡಿರುವುದು, ಆದರೆ ಇತರ ಪ್ರಾದೇಶಿಕ ಮಾರ್ಪಾಟುಗಳು ಸ್ಕ್ವಿಡ್ ಅಥವಾ ಆಲಾಸ್ಕ ಪೊಲ್ಲೊಕ್ ಹೊರಕವಚಗಳನ್ನು ಒಳಗೊಂಡಿವೆ. ಸಂಡೇವನ್ನು ಕುದಿಸಿ, ಅಥವಾ ಕಲಸುತ್ತಾ-ಹುರಿದುದರ ಭಾಗವಗಿ, ಪ್ಲೇನಾಗಿ (ಬರಿಯದಾಗಿ) ಸೇವಿಸಲಾಗುತ್ತದೆ.

ಫಿಲಿಪ್ಪೀನ್ಸ್‌‌[ಬದಲಾಯಿಸಿ]

ಫಿಲಿಪ್ಪೀನ್ಸ್‌‌‌ನಲ್ಲಿ, ಮೂಲದ ಗಾತ್ರವನ್ನು ಆಧರಿಸಿದ ಮಿಶ್ರಣದೊಂದಿಗೆ "ಲೊಂಗಾನಿಜ" ಅಥವಾ "ಲೊಂಗಾನಿಸ" ಎಂದು ಕರೆಯುವ ವಿವಿಧ ಭಗೆಯ ಸಾಸೇಜ್‌ಗಳಿವೆ: ವಿಗನ್ ಲೊಂಗಾನಿಜ, ಲಕ್ಬನ್ ಲೊಂಗಾನಿಜ, ಮತ್ತು ಸೆಬು ಲೊಂಗಾನಿಜಗಳು ಕೆಲವು ಉದಾಹರಣೆಗಳಾಗಿವೆ.

ಇದೇ ಸಮಯದಲ್ಲಿ ಲೊಂಗಾನಿಸ ಎನ್ನುವ ಹೆಸರನ್ನು ಸ್ಥಳೀಯ ಸಾಸೇಜ್‌ಗಳ ಪದವನ್ನಾಗಿ ವ್ಯಾಪಕವಾಗಿ ಅಂಗೀಕರಿಸಲಾಯಿತು, ವಿಜಯಾಸ್ ಮತ್ತು ಮಿಂಡಾನೋದ ಕೆಲವು ಭಾಗಗಳಲ್ಲಿ ಚೊರಿಸೊ ಬಹಳ ಸಾಧಾರಣವಾದ ಪದ. ವಿಗನ್ (ಬೆಳ್ಳುಳ್ಳಿಯನ್ನು ಹೇರಳವಾಗಿ ಹೊಂದಿರುತ್ತವೆ ಮತ್ತು ಸಿಹಿಹೊಂದಿರುವುದಿಲ್ಲ) ಲಕ್ಬನ್ (ಒರೆಗಾನೊ ಮತ್ತು ಮಂದವಾದ ಹಂದಿಮಾಂಸದ ಕೊಬ್ಬನ್ನು ಹೊಂದಿರುತ್ತದೆ) ನಂತಹ ಸ್ಥಳೀಯ ವಿಧಗಳಿವೆ, ಬಹುತೇಕ ಲಂಗನಿಸಾಸ್‌ಗಳು ಪ್ರಾಗ್ಯು ಪುಡಿಯನ್ನು ಒಳಗೊಂಡಿರುತ್ತವೆ ಮತ್ತು ಬಹಳ ವಿರಳವಾಗಿ ಹೊಗೆಯಾಡಿಸಿ ಸಂರಕ್ಷಿಸಿಡಲಾಗುತ್ತದೆ ಮತ್ತು ಸಮಾನ್ಯವಾಗಿ ತಾಜಾ ಇರುವಂತೆಯೇ ಮಾರಾಟಮಾಡಲಾಗುತ್ತದೆ. ಸಾಧಾರಣವಾಗಿ ಅಲ್ಲಿ ಅನೇಕ ಸಾಮಾನ್ಯ ವೈವಿದ್ಯತೆಯ ವಿಧಗಳಿವೆ:

  • ಮಟಾಮಿಸ್ (ಸಿಹಿ)
  • ಹಮೊನಡೊ (ಹೆರಳವಾದ ಬೆಳ್ಳುಳ್ಳಿ, ಕಪ್ಪು ಕಾಳು ಮೆಣಸು ಮತ್ತು ಇತರ ಮಸಾಲೆಗಳೊಂದಿಗೆ)
  • ಸ್ಕಿನ್‌ಲೆಸ್ಸ್ (ಪ್ಲಾಸ್ಟಿಕ್ ಷೀಟ್‌ಗಳಲ್ಲಿ ಸುತ್ತುವುದರ ಬದಲಾಗಿ ಸಾಮಾನ್ಯ ನೈಸರ್ಗಿಕ ಕವಚರಹಿತವಾಗಿರುವುದು.)
  • Macao (ಚೈನೀಸ್ Macao ಪ್ರಸ್ತಾಪದೊಂದಿಗೆ. ಸಿಹಿಯಾಗಿರುತ್ತವೆ ಮತ್ತು ಹೇರಳವಾಗಿ ಮಂದವಾದ ಕೊಬ್ಬಿನೊಂದಿಗೆ ಒಣಗಿಸಿಡಲಾಗಿರುತ್ತವೆ ಮತ್ತು ಕೆಂಪು ಬಣ್ಣದ ಅಬಾಕ ಟ್ವಿನ್ ನೊಂದಿಗೆ ಗುರುತಿಸಲ್ಪಟ್ಟಿರುತ್ತವೆ)
  • Chorizo de Bilbao (ಸಿಹಿಯಾದ ಕೆಂಪು ಮೆಣಸನ್ನು ಹೊಂದಿದ್ದು ಸಾಮಾನ್ಯವಾಗಿ ಲಾರ್ಡ್‌ನೊಂದಿಗೆ ಡಬ್ಬಿಯಲ್ಲಿಡಲಾಗಿರುತ್ತದೆ. ಬಹಳ ಉತ್ತಮ ಮತ್ತು ಅತ್ಯಂತ ಜನಪ್ರಿಯ ವ್ಯಾಪಾರದ ಗುರುತು ಮಾರ್ಕ ಎಲ್‌ರೇ, ಮತ್ತು ಇದು Bilbao ಸ್ಪೇನ್‌ನಿಂದ ಬಂದಿದೆ ಎಂಬ ಪ್ರಸಿದ್ಧವಾದ ನಂಬಿಕೆಗೆ ವಿರುದ್ಧವಾಗಿ, ಇದನ್ನು USAನಲ್ಲಿ ತಯಾರಿಸಲಾಗುತ್ತದೆ. Chorizo de Bilbao ಪಿಲಿಫಿನೊದ ಆವಿಕ್ಷಾರದಂತೆ ಕಾಣುತ್ತದೆ ಮತ್ತು ಈ ವಿಶಿಷ್ಟ ಬಗೆಯು ಸ್ಫೇನ್‌ನಲ್ಲಿ ಲಭ್ಯವಿಲ್ಲ.)

ಥೈಲೆಂಡ್‌‌[ಬದಲಾಯಿಸಿ]

ಥಾಯ್ ಸಾಸೇಜ್‌ಗಳಲ್ಲಿಯು ಸಹ ಅನೆಕ ವಿಧಗಳಿವೆ. ಉತ್ತರ ದಿಕ್ಕಿನ ಪ್ರಸಿದ್ಧ ಸಾಸೇಜ್ Sai-Ua, ಇದನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಿದ ಹಂದಿಮಾಂಸ ಹಾಗು ವನಸ್ಪತಿಗಳು ಮತ್ತು ಮೆಣಸಿನಕಾಯಿಯನ್ನು ಕುಟ್ಟಿ ಮಾಡಿದ ಮುದ್ದೆಯಿಂದ ತುಂಬಿಸಿ ಮಾಡಲಾಗುತ್ತದೆ. ನೈರುತ್ಯ ಸಾಸೇಜ್ ಹುಳಿಯಾದ ರುಚಿ ಹೊಂದಿದ ಹುದುಗಿಸಿದ ಸಾಸೇಜ್. ಥಾಯ್ ಜನರು ತಾಜಾ ತರಕಾರಿಗಳನ್ನು ಸಹ ಸೇವಿಸುತ್ತಾರೆ, ಕೆಲವರು ತಾಜಾ ಮೆಣಸಿನ ಕಾಯಿಯನ್ನು, ಸಾಸೇಜ್‌ಗಳೊಂದಿಗೆ ಸಲಾಡಿನಮ್ತೆ ಸೇವಿಸಲಾಗುತ್ತದೆ.

ವಿಯೆಟ್ನಾಮ್‌‌[ಬದಲಾಯಿಸಿ]

ಆಫ್ರಿಕಾ[ಬದಲಾಯಿಸಿ]

ಉತ್ತರ ಆಫ್ರಿಕಾ[ಬದಲಾಯಿಸಿ]

Merguez ಅನ್ನುವುದು, ಮೊರೊಕೊ, ಅಲ್ಗೆರಿಯ, ತುನಿಸಿಯ ಮತ್ತು ಲಿಬ್ಯ, ಉತ್ತರ ಆಫ್ರಿಕಾದ ಒಂದು ಕೆಂಪು, ಮಸಾಲೆಭರಿತ ಸಾಸೇಜ್. ಪ್ರಾನ್ಸ್, ಇಸ್ರಾಯಲ್, ಬೆಲ್ಜಿಯಮ್‌, ನೆದೆರ್‌ಲ್ಯಾಂಡ್ಸ್ ಮತ್ತು ಜೆರ್ಮನ್ ರಾಜ್ಯವಾದ ಸಾರ್ಲ್ಯಾಂಡ್‌ನಲ್ಲು ಸಹ ಇದು ಪ್ರಸಿದ್ಧವಾಗಿದೆ, ಅಲ್ಲಿ ಆಗಾಗ್ಗೆ ಇದನ್ನು Schwenkerಮೇಲೆ ಜಾಲರಿಯಿಂದ ಸುಡಲಾಗುವುದು. Merguezಯನ್ನು ಕುರಿಮರಿ ಮಾಂಸ, ಗೋಮಾಂಸ, ಅಥವಾ ಎರಡರ ಮಿಶ್ರಣದಿಂದ ಮಾಡಲಾಗುತ್ತದೆ. ಹುಳಿರುಚಿಗಾಗಿ ಸುಮಕ್, ಮತ್ತು ಕೆಂಪು ಮೆಣಸು, ಕೆಯೆನ್ನೆ ಕಾಳು ಮೆಣಸು, ಅಥವಾ ಹರಿಸ್ಸ, ಕೆಂಪು ಬಣ್ಣವನ್ನು ನೀಡುವಂತ ಖಾರವಾದ ಮೆಣಸಿನ ಕಾಯಿಯ ಚಟ್ನಿಗಳಂತಹ ವಿಶಾಲ ಶ್ರೇಣಿಯ ಮಸಾಲೆಗಳೊಂದಿಗೆ ಇದು ವಿವಿಧ ರುಚಿಹೊಂದುವಂತೆ ಮಾಡಲಾಗುವುದು. ಇದನ್ನು ಹಂದಿಮಾಂಸದ ಹೊರ ಕವಚಕ್ಕಿಂತಲೂ, ಕುರಿಮರಿಯ ಮಾಂಸದ ಕವಚ ಹೊಂದುವಂತೆ ಮಾಡಲಾಗುತ್ತದೆ. ಇದನ್ನು ಸಾಂಪ್ರದಾಯಿಕವಾಗಿ ಬೇಕಾದಾಗಲೇ ತಾಜಾವಾಗಿ ತಯಾರಿಸಲಾಗುತ್ತದೆ ಮತ್ತು ಜಾಲರಿಯಲ್ಲಿ ಸುಟ್ಟು ಸೇವಿಸಲಾಗುತ್ತದೆ ಅಥವಾ couscous ದೊಂದಿಗೆ ಸೇವಿಸಲಾಗುತ್ತದೆ. ಸೂರ್ಯನ ಶಾಖಕ್ಕೆ ಒಣಗಿಸಿದ merguezನ್ನು ಟಾಗಿನೆಸ್‌ಗೆ ಪ್ರರಿಮಳವನ್ನು ಸೇರಿಸಲು ಉಪಯೋಗಿಸಲಾಗುತ್ತದೆ. ಇದನ್ನು ಸ್ಯಾಂಡ್‌ವಿಚ್‌ನಲ್ಲು ಸಹ ಸೇವಿಸಲಾಗುತ್ತದೆ.

ದಕ್ಷಿಣ ಆಫ್ರಿಕಾ[ಬದಲಾಯಿಸಿ]

ದಕ್ಷಿಣ ಆಫ್ರಿಕಾದಲ್ಲಿ, ಸಾಂಪ್ರದಾಯಿಕ ಸಾಸೇಜ್‌ಗಳನ್ನು boerewors ಅಥವಾ ಪಾರ್ಮರ್'ಸ್ ಸಾಸೇಜ್ ಎಂದು ಸೂಚಿಸಲಾಗುತ್ತದೆ. ಇದರ ಇನ್‌ಗ್ರೇಡಿಯೇಂಟ್ಸ್ ಬೇಟೆ ಮತ್ತು ಗೋಮಾಂಸವನ್ನು ಒಳಗೊಂಡಿರುತ್ತವೆ, ಸಾಮಾನ್ಯವಾಗಿ ಹಂದಿಮಾಂಸ ಅಥವಾ ಕುರಿಮರಿ ಮಾಂಸದೊಂದಿಗೆ ಮತ್ತು ಹೆಚ್ಚಿನ ಪ್ರಮಾಣದ ಕೊಬ್ಬಿನೊಂದಿಗೆ ಮಿಶ್ರಣಗೊಂಡಿರುತ್ತದೆ. ಅನೇಕ ವಿಭಿನ್ನತೆಗಳು ಇದ್ದರೂ, ದನಿಯ ಮತ್ತು ವೆನಿಗರ್‌ಗಳು ಒಗ್ಗರಣೆಯ ಅತೀ ಸಾಧಾರಣದ ಎರಡು ಮುಖ್ಯ ಒಳಾಂಶಗಳು. ಮಿನ್ಸ್‌ಮೀಟ್‌ (ಸಣ್ಣಗೆ ಕೊಚ್ಚಿದ ಮಾಂಸ)ದ ನುಣ್ಣಗೆ ರುಬ್ಬದ ಗುಣವು ಹಾಗು ಸಾಸೇಜ್‌ನ ಉದ್ದನೆಯ ಮುಂದುವರೆದ ಸುರುಳಿ ಸುತ್ತು, ಇವೆರಡು ಇದರ ಕಂಡುಹಿಡಿಯಬಹುದಾದ ಗುಣಗಳಾಗಿವೆ. Boereworsನ್ನು ಸಾಂಪ್ರದಾಯಿಕವಾಗಿ ಬ್ರಾಯ್ (ಮಾಂಸ ಸುಡುವ ಜಾಲರಿ)ನಲ್ಲಿ ಬೇಯಿಸಲಾಗುತ್ತದೆ.

ಬಿಲ್ಟೊಂಗ್‌ಗಳ ಮಾದರಿಯಲ್ಲಿ Boereworಗಳನ್ನು ಒಣಗಿಸಿ ಸಂರಕ್ಷಿಸುವ ಪ್ರಕ್ರಿಯೆಯಲ್ಲಿ ಒಣಗಿಸಬಹುದು, ಈ ರೀತಿಯ ಪ್ರಕ್ರಿಯೆಗೊಳಗಾದವನ್ನು droë wors ಎಂದು ಕರೆಯಲಾಗುತ್ತದೆ.

ಓಸಿಯಾನಿಯ[ಬದಲಾಯಿಸಿ]

ಆಸ್ಟ್ರೇಲಿಯಾ[ಬದಲಾಯಿಸಿ]

ಆಸ್ಟ್ರೇಲಿಯನ್ "ಸ್ನ್ಯಾಗ್ಸ್" ಕ್ಯಾಂಪ್‌ಫೈರ್‌ನಲ್ಲಿ ಬೇಯಿಸುತ್ತಿರುವುದು

ಒಡನುಡಿಯಾಗಿ "ಸ್ನಾಗ್ಸ್" ಎಂದು ಗುರುತಿಸುವ, ಇಂಗ್ಲಿಷ್ ಶೈಲಿಯ ಸಾಸೇಜ್‌ಗಳು, ಬಾರ್ಬೆಕ್ಯುಗಳಲ್ಲಿ ಪ್ರಸಿದ್ಧವಾಗಿವೆ ಮತ್ತು ಇವನ್ನು ಗೋಮಾಂಸ, ಹಂದಿಮಾಂಸ ಮತ್ತು ಕೋಳಿಮಾಂಸದಂತಹ ಸಾಂಪ್ರದಾಯಿಕ ಮಾಂಸಗಳನ್ನು ಉಪಯೋಗಿಸಿ ಆಸ್ಟ್ರೇಲಿಯಾದಲ್ಲಿ ಮಾಡಲಾಗುತ್ತದೆ. ಯುರೋಪಿಯನ್ ಶೈಲಿಯಲ್ಲಿ ಹೊಗೆಯಾಡಿಸಿ ಒಣಗಿಸಿದ ಕಾಂಗರೋ ಮಾಂಸದಿಂದ ಮಾಡಿದ ಸಾಸೇಜ್‌ಗಳು ಸಹ ಇತ್ತೀಚಿನ ದಿನಗಳಲ್ಲಿ ಲಭ್ಯವಾಗುತ್ತಿವೆ. ಆಸ್ಟ್ರೇಲಿಯಾದಲ್ಲಿ ಬೇಟಿಯಾಡಿದ ಪ್ರಾಣಿಗಳ ಮಾಂಸದಿಂದ ಸಾಸೇಜ್‌ಗಳು, ಅದೇ ಮಾದರಿಯಲ್ಲಿ ಗೋಮಾಂಸ ಅಥವಾ ಹಂದಿ ಮಾಂಸದಿಂದ ಮಾಡಿದ ಸಾಸೇಜ್‌ಗಳಿಗಿಂತಲೂ ಕಡಿಮೆ ಪ್ರಮಾಣದ ಕೊಬ್ಬಿನಂಶವನ್ನು ಹೊಂದಿರುತ್ತವೆ.

ಡೆವನ್ ಅನ್ನುವುದು ಬೊಲೊಗ್ನ ಸಾಸೇಜ್ ಮತ್ತು ಗಲ್ಬ್‌ವರ್ಸ್ಟ್‌ಗಳ ಮಾದರಿಯ ಒಂದು ಹಂದಿಮಾಂಸದ ಖಾರವಾದ ಸಾಸೇಜ್. ಇದನ್ನು ಹೆಚ್ಚಿನ ಅಡ್ಡಗಲ ಹೊಂದಿರುವಂತೆ ಮಾಡಲಾಗುತ್ತದೆ, ಮತ್ತು ಆಗಾಗ್ಗೆ ತೆಳ್ಳಗೆ ಕತ್ತರಿಸಿ ಸ್ಯಾಂಡ್‌ವಿಚ್‌ಗಳೊಂದಿಗೆ ತಣ್ಣಗೆ ಸೇವಿಸಲಾಗುವುದು.

ಮೆಟ್‌ವರ್ಸ್ಟ್ ಮತ್ತು ಇತರ ಜರ್ಮನ್ ಶೈಲಿಯ ಸಾಸೇಜ್‌ಗಳು ದಕ್ಷಿಣ ಆಸ್ಟ್ರೇಲಿಯಾದಲ್ಲಿ ಅತ್ಯಂತ ಜನಪ್ರಿಯವಾಗಿವೆ, ಇದನ್ನು ಹೆಚ್ಚಾಗಿಹಾಹ್ನ್‌ಡೋರ್ಪ್ ಮತ್ತು ಟನುನ್‌ಡಗಳಂತಹ ನಗರಗಳಲ್ಲಿ ಮಾಡಲಾಗುತ್ತದೆ, ರಾಜ್ಯದ ವಾಸಸ್ಥಾನದ ಆರಂಭದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಜರ್ಮನಿ ವಲಸೆಗಾರರು ಇಲ್ಲಿಗೆ ಬಂದು ನೆಲಸಿರುವುದೆ ಇದಕ್ಕೆ ಕಾರಣ. ಸಾಮಾನ್ಯವಾಗಿ ಮೆಟ್‌ವರ್ಸ್ಟ್‌ನ್ನು ಚಿಕ್ಕ ಚಿಕ್ಕ ಬಿಲ್ಲೆಗಳಂತೆ ಕತ್ತರಿಸಿ ಸ್ಯಾಂಡ್‌ವಿಚ್‌ನೊಂದಿಗೆ ತಣ್ಣಗೆ ಸೇವಿಸಲಾಗುವುದು ಅಥವಾ ಹಾಗೆಯೇ ತಿಂಡಿಯಂತೆ ಸೇವಿಸಲಾಗುವುದು.

IIನೆಯ ಪ್ರಪಂಚದ ಯುದ್ಧದ ನಂತರ ಇಟಲಿಯ ವಲಸೆರಾರರಿಂದ ತಮ್ಮ ಪ್ರಾಂತದಲ್ಲಿ ಕತ್ತರಿಸಿದ ಮಾಂಸದಿಂದ, ಕಬನೊಸ್ಸಿಯ ಮೇಲೆ ಮಾಡಿದ ಸ್ಥಳೀಯ ಮಾರ್ಪಾಡು, ಔತಣಗಳಲ್ಲಿ ಪ್ರಸಿದ್ದವಾದ ತಿಂಡಿಯಾಗಿದೆ.

ನ್ಯೂಜಿಲೆಂಡ್‌[ಬದಲಾಯಿಸಿ]

ಸವಲೋಯ್‌ಗಳು, ಚೀರಿಯಸ್, ಮತ್ತು ಸ್ಥಳೀಯವಾಗಿ ತಯಾರಿಸಿದ ಕಬಾನೊಸ್ಸಿಗಳ ಹಾಗೆ, ಸಾಸೇಜ್ ರೋಲ್‌ಗಳು ಪ್ರಸಿದ್ಧ ತಿಂಡಿ ಮತ್ತು ಔತಣದ ಆಹಾರವಾಗಿವೆ. ಇಂಗ್ಲಿಷ್ ಬಾಂಗೆರ್ಸ್‌ಗೆ ಸಮನಾದ ಸಾಂಪ್ರದಾಯಿಕ ಸಾಸೇಜ್‌ಗಳನ್ನು ದೇಶದಾದ್ಯಂತ ಸೇವಿಸಲಾಗುತ್ತದೆ; ಇವನ್ನು ಸಾಮಾನ್ಯವಾಗಿ ರುಬ್ಬಿದ ಗೋಮಾಂಸ/ಕುರಿ ಮಾಂಸ[೧೩] ಮತ್ತು ಬ್ರೆಡ್‌ಕ್ರಂಬ್ಸ್‌ಗಳೊಂದಿಗೆ, ಅತೀ ಅಲ್ಪ ಖಾರವಾಗಿರುವಂತೆ, ಕುರಿಯ ಕವಚದಲ್ಲಿ ತುಂಬಿಸಿ, ಕರಿದಾಗ ಗರಿಗರಿಯಾಗಿರುವಂತೆ ಮತ್ತು ಸೀಳುವಂತೆ ತಯಾರಿಸಲಾಗುತ್ತದೆ. ಇವನ್ನು ಬ್ರೆಕ್‌ಫಾಸ್ಟ್‌ಗಾಗಿ, ಮಧ್ಯಾಹ್ನದ ಊಟಕ್ಕಾಗಿ ಅಥವಾ ರಾತ್ರಿ ಭೋಜನಕ್ಕಾಗಿ ಸೇವಿಸಬಹುದು. ಇತ್ತೀಚಿನ ವರ್ಶಗಳಲ್ಲಿ, ಬಹುತೇಕ ಅಂತರರಾಷ್ಟ್ರೀಯ ಮತ್ತು ಪರದೇಶದ ಸಾಸೇಜ್‌ಗಳು ಸಹ NZನಲ್ಲಿ ವ್ಯಾಪಕವಾಗಿ ಲಭಿಸುತ್ತಿವೆ.[೧೪]

ಇತರ ಮಾರ್ಪಾಡುಗಳು[ಬದಲಾಯಿಸಿ]

ಕಬೊಸಿ, ಶೆಲ್ಸ್, ಮತ್ತು ಚೀಸ್

ಸಾಸೇಜ್‌ಗಳನ್ನು hors d'œuvreಗಳಂತೆ, ಸ್ಯಾಂಡ್‌ವಿಚ್‌ಗಳಲ್ಲಿ, ಬ್ರೆಡ್ ರೋಲ್‌ಗಳಲ್ಲಿ, ಟೊರ್ಟಿಲ್ಲದಲ್ಲಿ ಸಿತ್ತಿದ ಹಾಟ್ ಡಾಗ್‌ಗಳಂತೆ ಉಪಯೋಗಿಸಬಹುದಾಗಿದೆ, ಅಥವಾ ಸ್ಟೆವ್‌ಗಳು ಮತ್ತು ಕ್ಯಾಸ್‌ರೋಲ್‌ಗಳಂತಹ ಅಡುಗೆಗಳಲ್ಲಿ ಒಳಾಂಶಗಳಾಗಿಯು ಉಪಯೋಗಿಸಬಹುದಾಗಿದೆ. ಇದನ್ನು ಕಡ್ಡಿಯಮೇಲೆ (ಕಾರ್ನ್ ಡಾಗ್‌ನಂತೆ) ಅಥವಾ ಮೂಳೆಯಮೇಲೆ ಕೂರಿಸಿ ಬಡಿಸಲಾಗುತ್ತದೆ. ಹೊರಕವಚವಿಲ್ಲದ ಸಾಸೇಜ್‌ನ್ನು ಸಾಸೇಜ್ ಮಾಂಸ ಎಂದು ಕರೆಯಲಾಗುವುದು ಮತ್ತು ಇದನ್ನು ಕರಿಯಬಹುದು ಅಥವಾ ಕೋಳಿಮಾಂಸದ ತುಂಬು ಪದಾರ್ಥವಾಗಿ, ಅಥವಾ ಸ್ಕೋಟ್ಚ್ ಎಗ್‌ಗಳಂತಹ ಸುತ್ತುವ ಆಹಾರಗಳಲ್ಲಿಯೂ ಉಪಯೋಗಿಸಬಹುದಾಗಿದೆ. ಅದೆರೀತಿಯಾಗಿ, ಉಬ್ಬುವ ಕಣಕದ ಕವಚಹೊಂದಿದ ಸಾಸೇಜ್ ಮಾಂಸವನ್ನು ಸಾಸೇಜ್ ರೋಲ್‌ಎಂದು ಕರೆಯಲಾಗುತ್ತದೆ.

ಸಾಸೇಜ್‌ಗಳನ್ನು ಸ್ಥಳೀಯ ಇನ್‌ಗ್ರೇಡಿಯಂಟ್ಸ್‌ಗಳನ್ನು ಉಪಯೋಗಿಸಲು ಬೇಕಾದಹಾಗೆ ಮಾರ್ಪಡಿಸಬಹುದಾಗಿದೆ. ಮೆಕ್ಸಿಕಾನ್ ಶೈಲಿಗಳು ಸ್ಪಾನಿಷ್‌ ಚೊರಿಜೊಗೆ add ಒರೆಗಾನೊ ಮತ್ತು "ಗ್ವಜಿಲ್ಲೊಗಳನ್ನು" ಸೇರಿಸಿ ಇನ್ನೂ ಖಾರವಾಗಿ ಮಸಾಲೆಭರಿತವಾಗಿ ಮಾಡುತ್ತವೆ.

ವಿಶಿಷ್ಟ ಸಾಸೇಜ್‌ಗಳು ಚೀಸ್ ಮತ್ತು ಸೇಬು ಹಣ್ಣುಗಳಂತಹ ಇನ್‌ಗ್ರೇಡಿಯಂಟ್ಸ್‌ನ್ನು; ಅಥವಾ ವಿವಿಧ ತರಕಾರಿಗಳನ್ನು ಒಳಗೊಂಡಿರುತ್ತವೆ.

ಸಸ್ಯಹಾರಿ ಸಾಸೇಜ್[ಬದಲಾಯಿಸಿ]

ಸಸ್ಯಹಾರಿ ಮತ್ತು ವೇಗನ್ ಸಾಸೇಜ್‌ಗಳು ಸಹ ಕೆಲ ದೇಶಗಳಲ್ಲಿ ಲಭ್ಯವಿವೆ. ಟೊಫು, ಸೀಟನ್, ನಟ್ಸ್, ಪಲ್ಸಸ್, ಮೈಕೊಪ್ರೋಟೀನ್, ಸೋಯಾ ಪ್ರೋಟೀನ್, ತರಕಾರಿಗಳು ಅಥವಾ ಆ ತರಹದ ಪದಾಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಈ ಸಾಸೇಜ್‌ಗಳು, ಎಲ್ಲಾ ಮಾಂಸದ-ಬದಲಿ ಉತ್ಪನ್ನಗಳಂತೆ ಇರುತ್ತವೆ, ಸಾಮಾನ್ಯವಾಗಿ ಎರಡು ವಿಧದಲ್ಲಿರುತ್ತವೆ: ಒಂದೇ ಆಕಾರ, ಬಣ್ಣ, ಪರಿಮಳ ಇತ್ಯಾದಿ. ಮಾಂಸದ ರುಚಿ ಮತ್ತು ವಿನ್ಯಾಸಗಳೆರಡನ್ನೂ ಸಾಧ್ಯವಿದ್ದಷ್ಟು ಮಟ್ಟಿಗೆ ಹೋಲಿಕೆ ನೀಡಿ ತಯಾರಿಸಲಾಗುತ್ತದೆ; ಇತರೆಯವಾದ ಗ್ಲಮಾರ್ಗನ್ ಸಾಸೇಜ್ ಮಸಾಲೆ ಮತ್ತು ತರಕಾರಿಗಳ ರುಚಿಯನ್ನು ಸ್ವಾಭಾವಿಕವಾಗಿ ಬಳಸಿಕೊಂಡು ತಯಾರಿಸಲಾಗುತ್ತದೆ, ಇವನ್ನು ಮಾಂಸವನ್ನು ಹೋಲುವ ರೀತಿಯಲ್ಲಿ ತಯಾರಿಸಲಾಗುವುದಿಲ್ಲ.

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portal

  • ಕರ್ರಿ ವುರ್ಸ್ಟ್
  • ಕಿಶ್ಕಾ (ಆಹಾರ)
  • ಕ್ರಾನ್‌ಸ್ಕಿ
  • Linguiça
  • ಲೌಕನಿಂಕೊ
  • ಲುಕಾಂಕ
  • Pølsevogn
  • ಸಾಸೇಜ್ ರೇಸ್
  • ಟಸ್ಸೊ ಹ್ಯಾಮ್
  • ತರಿಂಗೇನಿಯನ್ ಸಾಸೇಜ್
  • ಯೂಸಿಂಗರ್ಸ್
  • ವೈಟ್ ಪುಡಿಂಗ್

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ (Polish) Eleonora Trojan, Julian Piotrowski, Tradycyjne wędzenie AA ಪಬ್ಲಿಷಿಂಗ್. 96 ಪುಟಗಳು. ISBN 0791067726
  2. ಟೂರಿಂಗ್ ಕ್ಲಬ್ ಇಟಾಲಿಯನೊ Le città dell'olio , 2001, Touring Editore pag. [131] ^ ISBN 1402516274
  3. "USDA Standards of Identity; see Subparts E, F & G". Archived from the original on 2007-12-19.
  4. ಜಾಯ್ ಆಫ್ ಕುಕಿಂಗ್ , ರಾಂಬಾರ್ & ಬೆಕರ್; ದಿ ಫೈನ್ ಆರ್ಟ್ ಆಫ್ ಇಟಾಲಿಯನ್ ಕುಕಿಂಗ್ , ಬುಗಿಯಾಲಿ
  5. ಸಾಸೇಜ್‌ಲಿಂಕ್ಸ್ - ಹೆಲ್ತ್ & ಲೀಗಲ್ ಇಶ್ಯೂಸ್ ಆನ್ ಸಾಸೇಜ್‌ಗಳು
  6. "The secret life of the sausage: A great British institution". The Independent. London. 2006-10-30. Retrieved 2010-05-23.
  7. "ಪ್ರೊಟೆಕ್ಟ್ ದಿ ಲಿಂಕನ್‌ಶೈರ್ ಸಾಸೇಜ್". Archived from the original on 2012-01-11. Retrieved 2010-08-24.
  8. Sausagefans.com ಪ್ರಕಾರ
  9. ಅಸಾಡೊ ಅರ್ಜೆಂಟಿನಾ » ಸಾಸೇಜ್-ಖೊರಿಝೊ
  10. "ಅರ್ಜೆಂಟಿನಾ - ದಿ ಗ್ಯಾಸ್ಟ್ರೊನಮಿ ಇನ್ ದಿ ವರ್ಲ್ಡ್". Archived from the original on 2012-03-23. Retrieved 2010-08-24.
  11. "La salchicha de viena cumple 200 años". Archived from the original on 2009-03-12. Retrieved 2010-08-24.
  12. "La inmigración". Archived from the original on 2010-07-21. Retrieved 2010-08-24.
  13. "Hellers' Family Range of Sausages". hellers.co.nz. Archived from the original on 2010-05-13. Retrieved 2010-01-18.
  14. "Apple, onion and sausage casserole". radionz.co.nz. Retrieved 2010-01-18.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಸಾಸೇಜ್&oldid=1181741" ಇಂದ ಪಡೆಯಲ್ಪಟ್ಟಿದೆ