ಸಾಮ್ರಾಜ್ಯ ಸರಣಿ ಕಾದಂಬರಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಮ್ರಾಜ್ಯ ಸರಣಿ ಕಾದಂಬರಿಗಳು ಐಸಾಕ್ ಅಸಿಮೋವ್ ರವರ ಕ್ಷೀರಪಥವ್ಯಾಪಿ ಸಾಮ್ರಾಜ್ಯ ವಿಷಯಕ ಕಾದಂಬರಿಗಳು.

ಸರಣಿ[ಬದಲಾಯಿಸಿ]

ಈ ಸರಣಿಯಲ್ಲಿ ಮೂರು ಕಾದಂಬರಿಗಳೂ, ಒಂದು ಸಣ್ಣ ಕಥೆಯೂ ಸೇರಿದೆ. ಅವುಗಳೆಂದರೆ:

  • ತಾರೆಗಳು, ಧೂಳಿನಂತೆ (The Stars, Like Dust) (೧೯೫೧)
  • ವ್ಯೋಮದ ಹೊನಲುಗಳು (The currents of Space) (೧೯೫೨)
  • ಆಕಾಶದಲ್ಲಿನ ಕಣಗಲ್ಲು (Pebble in the Sky) (೧೯೫೦) - ಅವರ ಪ್ರಥಮ ಕಾದಂಬರಿ
  • ಕುರುಡುಗಲ್ಲಿ (Blind Alley) (೧೯೪೫)- ಸಣ್ಣ ಕಥೆ

ಇವುಗಳು ೧೯೪೨ರಲ್ಲಿ ಪ್ರಾರಂಭಿಸಿದ ಅವರ ಪ್ರತಿಷ್ಠಾನ ಸರಣಿಯ ಕಾಲದ ಭವಿಷ್ಯ ಯುಗದಲ್ಲಿ ನೆಡಲಾಗಿರುವುದು. ಇವುಗಳೆಲ್ಲವೂ ಅಷ್ಟೇನೂ ನಿಕಟವಲ್ಲದ ಕಥಾನಕದಲ್ಲಿ ಹೊಸೆದು ಕೊಂಡಿವೆ, ಹಾಗಿದ್ದರೂ, ಪ್ರತಿ ಕಾದಂಬರಿಯನ್ನೂ ಸ್ವತಂತ್ರವಾಗಿಯೇ ಓದಿಕೊಳ್ಳಬಹುದು. ಅವುಗಳ ಸಾಮಾನ್ಯ ವಿಷಯಗಳೆಂದರೆ, ಭವಿಷ್ಯದ ಕ್ಷೀರಪಥವ್ಯಾಪಿ ಸಾಮ್ರಾಜ್ಯ, ಕೆಲವು ತಾಂತ್ರಿಕ ಕೋನಗಳು (ಹೈಪರ್ ಡ್ರೈವ್, ಬ್ಲಾಸ್ಟರ್ ಬಂದೂಕಗಳು, ಇತ್ಯಾದಿ).