ಸಾಗರ ಮಾಲಿನ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಾಗರ ಮಾಲಿನ್ಯವು ವ್ಯಕ್ತವಾದದ್ದಾಗಿರಬಹುದಾದರೂ, ಮೇಲೆ ಕಾಣಿಸುವ ಸಾಗರ ಸಂಬಂಧಿ ಹುಡಿಯರಾಶಿಗಳ ಸಂದರ್ಭದಲ್ಲಿ, ಅನೇಕವೇಳೆ ವ್ಯಕ್ತವಾಗದ ಮಾಲಿನ್ಯಕಾರಕಗಳೇ ಬಹುಪಾಲು ಹೆಚ್ಚು ಅಪಾಯಕಾರಿಯಾಗಿರುತ್ತವೆ.

ಸಾಗರ ಮಾಲಿನ್ಯ ವು ರಾಸಾಯನಿಕಗಳು, ಕಣಗಳು, ಕೈಗಾರಿಕಾ, ಕೃಷಿಸಂಬಂಧಿ ಹಾಗೂ ಗೃಹಸಂಬಂಧಿ ತ್ಯಾಜ್ಯ, ಗದ್ದಲ ಅಥವಾ ಹರಡುವ ಆಕ್ರಮಣಶೀಲ ಜೀವಿಗಳ ಸಾಗರ ಪ್ರವೇಶದಿಂದಾಗುವ ಹಾನಿಕಾರಕ ಪರಿಣಾಮಗಳು, ಅಥವಾ ಸಂಭಾವ್ಯ ಹಾನಿಕಾರಕ ಪರಿಣಾಮಗಳಿಂದಾಗಿ ಉಂಟಾಗುತ್ತದೆ. ಸಾಗರ ಮಾಲಿನ್ಯದ ಬಹುತೇಕ ಮೂಲಗಳು ಭೂಮಿಮೂಲದ್ದಾಗಿವೆ. ಮಾಲಿನ್ಯವು ಅನೇಕವೇಳೆ ವ್ಯಾವಸಾಯಿಕ ಮೇಲ್ಮೈ ಹರಿವು ಹಾಗೂ ಗಾಳಿಯಿಂದ ಹಾರಿಬಂದ ಹುಡಿಯರಾಶಿಗಳಂತಹಾ ಕೇಂದ್ರೀಕೃತವಲ್ಲದ ಮೂಲಗಳಿಂದಲೂ ಉಂಟಾಗುತ್ತದೆ.

ಅನೇಕ ಸಂಭಾವ್ಯ ವಿಷಕಾರಿ ರಾಸಾಯನಿಕಗಳು ಪುಟ್ಟ ಕಣಗಳಿಗೆ ಅಂಟಿಕೊಳ್ಳುತ್ತವಲ್ಲದೇ ಅವುಗಳನ್ನು ನಂತರ ಪ್ಲವಕ ಹಾಗೂ ಜಲತಳ ಜೀವಿಗಳು ಸೇವಿಸುತ್ತವೆ, ಇವುಗಳಲ್ಲಿ ಬಹಳಷ್ಟು ಪ್ರಾಣಿಗಳು ಸಂಚಯಿತ ಅಥವಾ ಸೋಸುಕ ಆಹಾರಸೇವನೆಯವು. ಈ ರೀತಿಯಾಗಿ, ಜೀವಾಣು ವಿಷಗಳು ಸಾಗರ ಆಹಾರ ಸರಪಣಿಗಳೊಳಗೆ ಊರ್ಧ್ವಮುಖವಾಗಿ ಸಂಗ್ರಹಗೊಳ್ಳುತ್ತಾ ಹೋಗುತ್ತವೆ. ಅನೇಕ ಕಣಗಳು ಆಮ್ಲಜನಕವನ್ನು ಬರಿದುಮಾಡುವಂತಹಾ ರೀತಿಯಲ್ಲಿ ರಾಸಾಯನಿಕವಾಗಿ ಸಂಯೋಗಗೊಳ್ಳುವುದರಿಂದ ಅಳಿವೆಗಳನ್ನು ಆಮ್ಲಜನಕರಹಿತವನ್ನಾಗಿಸುತ್ತವೆ.

ಸಾಗರ ಸಂಬಂಧಿ ಪರಿಸರ ವ್ಯವಸ್ಥೆಗಳಲ್ಲಿ ಒಮ್ಮೆ ಕ್ರಿಮಿನಾಶಕಗಳು ಸಂಯೋಜಿತವಾದವೆಂದರೆ, ಅವು ತ್ವರಿತವಾಗಿ ಸಾಗರ ಸಂಬಂಧಿ ಆಹಾರ ಜಾಲಗಳಿಂದ ಹೀರಲ್ಪಡುತ್ತವೆ. ಆಹಾರ ಜಾಲಗಳಲ್ಲಿ ಹೀಗೆ ಸೇರಿಕೊಂಡ, ಈ ಕ್ರಿಮಿನಾಶಕಗಳು ನವವಿಕೃತಿಗಳನ್ನು, ಹಾಗೆಯೇ ಕೇವಲ ಮನುಷ್ಯರಿಗೆ ಮಾತ್ರವಲ್ಲ ಇಡೀ ಆಹಾರ ಜಾಲಕ್ಕೆ ಹಾನಿಕಾರಕವಾಗಬಲ್ಲ ರೋಗಗಳನ್ನು ಉಂಟು ಮಾಡಬಲ್ಲವು.

ವಿಷಕಾರಿ ಲೋಹಗಳೂ ಕೂಡಾ ಸಾಗರ ಸಂಬಂಧಿ ಆಹಾರ ಜಾಲಗಳೊಳಗೆ ಸೇರಬಲ್ಲವು. ಜೀವದ್ರವ್ಯ, ಜೀವರಾಸಾಯನಿಕವ್ಯವಸ್ಥೆ, ವರ್ತನೆ, ಸಂತಾನೋತ್ಪತ್ತಿಗಳಲ್ಲಿ ಬದಲಾವಣೆ ತಂದು ಸಾಗರ ಸಂಬಂಧಿ ಜೀವವೈವಿಧ್ಯದಲ್ಲಿ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ. ಅನೇಕ ಪ್ರಾಣಿಗಳ ಆಹಾರ ಸೇವನೆಯಲ್ಲಿ ಹೆಚ್ಚಿನ ಪ್ರಮಾಣದ ಮೀನುಗಳು ಅಥವಾ ಮೀನುಗಳ ಹೈಡ್ರೋಲೈಸೇಟ್‌ ಅಂಶಗಳ ಅಗತ್ಯವಿರುತ್ತದೆ. ಈ ಪ್ರಕಾರವಾಗಿ, ಸಾಗರ ಸಂಬಂಧಿ ಜೀವಾಣು ವಿಷಗಳು ಭೂವಾಸಿ ಪ್ರಾಣಿಗಳಿಗೆ ಸ್ಥಳಾಂತರಗೊಂಡು ನಂತರ ಮಾಂಸ ಹಾಗೂ ಕ್ಷೀರೋತ್ಪನ್ನಗಳಲ್ಲಿ ಕಾಣಿಸಿಕೊಳ್ಳಬಲ್ಲವು.

ಇತಿಹಾಸ[ಬದಲಾಯಿಸಿ]

ಸಾಗರ ಮಾಲಿನ್ಯದ ಮೇಲಿನ MARPOL 73/78 ಒಪ್ಪಂದದ/ಕನ್ವೆನ್ಷನ್‌ ಸಹಭಾಗಿಗಳು

ಸಾಗರ ಮಾಲಿನ್ಯವು ದೀರ್ಘಕಾಲೀನ ಇತಿಹಾಸವನ್ನು ಹೊಂದಿದ್ದಾಗ್ಯೂ, ಅದನ್ನು ಎದುರಿಸಲು ಗಮನಾರ್ಹ ಅಂತರರಾಷ್ಟ್ರೀಯ ಕಾನೂನುಗಳನ್ನು ಜಾರಿಗೆ ತರಲಾಗಿದ್ದು ಇಪ್ಪತ್ತನೆಯ ಶತಮಾನದಲ್ಲಿ ಮಾತ್ರವೇ. 1950ರ ದಶಕದಿಂದ ಆರಂಭಗೊಂಡು ಅನೇಕ ಸಂಯುಕ್ತ ರಾಷ್ಟ್ರ ಸಂಘ ಸಮ್ಮೇಳನಗಳು/ಗಳಲ್ಲಿ ನಡೆಯುತ್ತಿದ್ದ ಸಮುದ್ರ ಕಾನೂನು/ಲಾ ಆಫ್‌ ಸೀ ಕುರಿತಾದ ಚರ್ಚೆಗಳಲ್ಲಿ ಸಾಗರ ಮಾಲಿನ್ಯವು ಆತಂಕ ತರುವ ವಿಷಯವಾಗಿದೆ. ಬಹುತೇಕ ವಿಜ್ಞಾನಿಗಳು ಸಾಗರಗಳು ಎಷ್ಟು ವಿಶಾಲವಾಗಿರುತ್ತವೆಂದರೆ ಅವುಗಳು ಅಪರಿಮಿತವಾದ, ಮಾಲಿನ್ಯವನ್ನು ದುರ್ಬಲಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು ಅದನ್ನು ಅನಪಾಯಕಾರಿಗೊಳಿಸಬಲ್ಲವು ಎಂದೇ ನಂಬಿದ್ದರು.. 1950ರ ದಶಕದ ಕೊನೆ ಹಾಗೂ 1960ರ ದಶಕದ ಆದಿಯಲ್ಲಿ, ಅಟಾಮಿಕ್‌ ಎನರ್ಜಿ ಕಮಿಷನ್‌ ಸಂಸ್ಥೆಯಿಂದ ಪರವಾನಗಿ ಪಡೆದ ಕಂಪೆನಿಗಳು ಯುನೈಟೆಡ್‌ ಸ್ಟೇಟ್ಸ್‌ನ ದೂರ ತೀರಗಳಲ್ಲಿ, ವಿಂಡ್‌ಸ್ಕೇಲ್‌ನಲ್ಲಿನ ಬ್ರಿಟಿಷ್‌‌ ಮರುಸಂಸ್ಕರಣ ಕೇಂದ್ರಗಳು ಐರಿಷ್‌ ಸಮುದ್ರದಲ್ಲಿ‌, ಫ್ರೆಂಚ್‌ ಸಂಸ್ಥೆಯಾದ ಕಮೀಷರಿಯೆಟ್‌ ಅ ಲ'ಎನರ್ಜೀ ಅಟಾಮಿಕೇಯು ಮೆಡಿಟರೇನಿಯನ್‌‌ ಸಮುದ್ರದಲ್ಲಿ ವಿಕಿರಣಯುಕ್ತ ತ್ಯಾಜ್ಯಗಳನ್ನು ರಾಶಿ ಹಾಕುವುದರ ವಿರುದ್ಧ ಅನೇಕ ವಿವಾದಗಳೆದ್ದವು. ಮೆಡಿಟರೇನಿಯನ್‌‌ ಸಮುದ್ರ ವಿವಾದದ ನಂತರ ಉದಾಹರಣೆಗೆ, ಜಾಕ್ವೆಸ್‌ ಕೌಸ್ಟಿಯು ಸಾಗರ ಮಾಲಿನ್ಯವನ್ನು ತಡೆಯುವ ಅಭಿಯಾನದ ಮೂಲಕ ವಿಶ್ವವ್ಯಾಪಿ ಪ್ರಾಮುಖ್ಯತೆಯ ವ್ಯಕ್ತಿಯಾಗಿಬಿಟ್ಟರು. 1967ರಲ್ಲಿ ನಡೆದ ತೈಲ ಟ್ಯಾಂಕರ್‌ ಟಾರ್ರೆ ಕ್ಯಾನ್ಯನ್‌ನ ಅಪಘಾತ/ಘರ್ಷಣೆಯ ಹಾಗೂ 1969ರಲ್ಲಿ ಕ್ಯಾಲಿಫೋರ್ನಿಯಾದ ದೂರತೀರದಲ್ಲಿ ಸಾಂಟಾ ಬಾರ್ಬರಾ ತೈಲ ಸೋರಿಕೆಗಳ ನಂತರ, ಸಾಗರ ಸಂಬಂಧಿ ಮಾಲಿನ್ಯವು ಮತ್ತಷ್ಟು ಅಂತರರಾಷ್ಟ್ರೀಯ ಶೀರ್ಷಿಕೆಗಳಲ್ಲಿ ಕಾಣಿಸಿಕೊಂಡಿತು. ಸ್ಟಾಕ್‌ಹೋಮ್‌ನಲ್ಲಿ ಆಯೋಜಿಸಲಾಗಿದ್ದ ಮಾನವ ಪರಿಸರದ ಮೇಲಿನ 1972ರ ಸಂಯುಕ್ತ ರಾಷ್ಟ್ರ ಸಂಘ ಸಮ್ಮೇಳನದಲ್ಲಿ ಸಾಗರ ಮಾಲಿನ್ಯವು ಪ್ರಮುಖ ಚರ್ಚೆಯ ವಿಷಯವಾಗಿತ್ತು. ಅದೇ ವರ್ಷ ಲಂಡನ್‌ ಒಪ್ಪಂದ/ಕನ್ವೆನ್ಷನ್‌ ಎಂದು ಕೆಲವೊಮ್ಮೆ ಕರೆಯಲಾಗುವ ತ್ಯಾಜ್ಯಗಳು ಹಾಗೂ ಇತರೆ ವಸ್ತುಗಳ ರಾಶಿಹಾಕುವಿಕೆಯಿಂದಾಗುವ, ಸಾಗರ ಮಾಲಿನ್ಯ ತಡೆಯುವ ಒಪ್ಪಂದವೊಂದಕ್ಕೆ ಸಹಿ ಹಾಕುವ ಪ್ರಕ್ರಿಯೆಯು ನಡೆಯಿತು. ಲಂಡನ್‌ ಒಪ್ಪಂದ/ಕನ್ವೆನ್ಷನ್‌ವು ಸಾಗರ ಮಾಲಿನ್ಯವನ್ನು ನಿಷೇಧಿಸಲಿಲ್ಲ, ಬದಲಿಗೆ, ಕಪ್ಪು ಹಾಗೂ ಬೂದು ಬಣ್ಣದ ನಿಷೇಧಿಸಲ್ಪಡುವ(ಕಪ್ಪು) ಅಥವಾ ರಾಷ್ಟ್ರೀಯ ಪ್ರಾಧಿಕಾರಗಳಿಂದ ನಿಯಂತ್ರಿಸಲ್ಪಡುವ(ಬೂದು) ವಸ್ತುಗಳ ಪಟ್ಟಿಯನ್ನು ಮಾಡಿದೆ. ಸೈಯನೈಡ್‌ ಹಾಗೂ ಹೆಚ್ಚಿನ-ಮಟ್ಟದ ವಿಕಿರಣಯುಕ್ತ ತ್ಯಾಜ್ಯಗಳನ್ನು, ಉದಾಹರಣೆಗೆ ಕಪ್ಪು ಪಟ್ಟಿಗೆ ಸೇರಿಸಲಾಯಿತು. ಲಂಡನ್‌ ಒಪ್ಪಂದವು/ಕನ್ವೆನ್ಷನ್‌ ಹಡಗುಗಳಿಂದ ಚೆಲ್ಲಲಾಗುವ ತ್ಯಾಜ್ಯಗಳಿಗೆ ಮಾತ್ರವೇ ಅನ್ವಯವಾಗಿದ್ದರಿಂದ ಒಳಚರಂಡಿನಾಲೆಗಳಿಂದ ಹೊರಹಾಕಲಾಗುವ ದ್ರವಗಳಂತಹಾ ತ್ಯಾಜ್ಯಗಳನ್ನು ನಿಯಂತ್ರಿಸಲು ಯಾವುದೇ ನಿರ್ದೇಶವನ್ನುಹೊಂದಿಲ್ಲ.[೧]

ಮಾಲಿನ್ಯದ ಹಾದಿಗಳು[ಬದಲಾಯಿಸಿ]

ಸೆಪ್ಟಿಕ್‌ ನದಿ.

ನಮ್ಮ ಸಾಗರ ಸಂಬಂಧಿ ಪರಿಸರ ವ್ಯವಸ್ಥೆಗಳಿಗೆ ಮಾಲಿನ್ಯದ ಆದಾನಗಳನ್ನು ವರ್ಗೀಕರಿಸುವ ಹಾಗೂ ಪರೀಕ್ಷಿಸುವ ಅನೇಕ ಬೇರೆ ಬೇರೆ ವಿಧಾನಗಳಿವೆ. ಪಟಿನ್‌‌ (n.d.) ಸಾಧಾರಣವಾಗಿ ಸಾಗರದ ಮಾಲಿನ್ಯಕ್ಕೆ ಕಾರಣವಾಗುವ ಆದಾನಗಳನ್ನು ಮೂರು ಪ್ರಮುಖ ವಿಧಗಳಾಗಿ ವಿಂಗಡಿಸಬಹುದು : ನೇರವಾಗಿ ತ್ಯಾಜ್ಯಗಳನ್ನು ಸಾಗರಗಳಿಗೆ ತಂದು ಸುರಿಯುವಿಕೆ, ಮಳೆಯಿಂದಾಗಿ ನೀರಿನಲ್ಲಿ ಸೇರಿಕೊಂಡು ಹರಿದುಹೋಗುವುದು, ಹಾಗೂ ವಾತಾವರಣದಿಂದ ಬಿಡುಗಡೆಯಾಗುವ ಮಾಲಿನ್ಯಕಾರಕಗಳ ಸೇರ್ಪಡೆ.

ಸಮುದ್ರದೊಳಗೆ ಕಲ್ಮಶಗಳ ಪ್ರವೇಶಕ್ಕೆ ಪ್ರಧಾನ ದಾರಿಯೆಂದರೆ ನದಿಗಳು. ಸಾಗರಗಳಿಂದ ನೀರಿನ ಆವಿಯಾಗುವಿಕೆಯು ಅವಕ್ಷೇಪನದ ಪ್ರಮಾಣಕ್ಕಿಂತ ಹೆಚ್ಚಿನದಾಗಿರುವುದು. ಬಾಕಿ ಉಳಿದಿದ್ದು ಖಂಡಗಳಲ್ಲಿ ಸುರಿಯುವ ಮಳೆಗಳ ಮೂಲಕ ನದಿಗಳನ್ನು ಪ್ರವೇಶಿಸುವ ನೀರು ತನ್ಮೂಲಕ ಸಾಗರಕ್ಕೆ ಮರಳುವುದು. ಸ್ಟೇಟೆನ್‌ ದ್ವೀಪದ ಉತ್ತರ ಹಾಗೂ ದಕ್ಷಿಣ ತುದಿಗಳಲ್ಲಿ ಸಮುದ್ರ ಸೇರುವ ನ್ಯೂಯಾರ್ಕ್‌ ರಾಜ್ಯಹಡ್ಸನ್‌ ಹಾಗೂ ನ್ಯೂಜೆರ್ಸಿರಾರಿಟಾನ್‌ ನದಿಗಳು, ತೇಲುವ ಜೀವರಾಶಿಗಳು (ಕೋಪೆಪಾಡ್‌ಗಳು) ಮುಕ್ತ ಸಾಗರದಲ್ಲಿ ಪಾದರಸದಿಂದ ಕಲುಷಿತಗೊಳ್ಳುವಿಕೆ ಮೂಲ ಸ್ರೋತಗಳಾಗಿವೆ. ತೀರಕ್ಕೆ ಹತ್ತಿರವಾಗಿ ನೀರು ಹರಿಯುವುದರಿಂದ ಸೋಸುಗ-ಸೇವಕಗಳ (ಕೋಪೆಪಾಡ್‌ಗಳು) ಅತಿ ಹೆಚ್ಚಿನ ಸಂಗ್ರಹವು ಈ ನದಿಗಳ ಮುಖಗಳಲ್ಲಿರದೇ ದಕ್ಷಿಣಕ್ಕೆ 70 ಮೈಲಿಗಳಷ್ಟು ದೂರದಲ್ಲಿ, ಅಟ್ಲಾಂಟಿಕ್‌ ನಗರಕ್ಕೆ ಹತ್ತಿರವಾಗಿದೆ. ಪ್ಲವಕಗಳು[೨] ಜೀವಾಣು ವಿಷಗಳನ್ನು ಹೀರುವುದಕ್ಕೆ ಕೆಲದಿನಗಳ ಸಮಯ ತೆಗೆದುಕೊಳ್ಳುತ್ತದೆ.

ಮಾಲಿನ್ಯವನ್ನು ಅನೇಕವೇಳೆ ಪ್ರಧಾನಮೂಲ ಅಥವಾ ಅಪ್ರಧಾನ ಮೂಲ ಮಾಲಿನ್ಯವೆಂದು ವರ್ಗೀಕರಿಸಲಾಗುತ್ತದೆ. ಒಂದು ಗುರುತಿಸಬಹುದಾದ, ಹಾಗೂ ಸೀಮಿತಗೊಳಿಸಬಹುದಾದ ಸ್ರೋತವನ್ನು ಹೊಂದಿದ್ದರೆ ಆ ಮಾಲಿನ್ಯವನ್ನು ಪ್ರಧಾನ ಮೂಲ ಮಾಲಿನ್ಯವೆನ್ನಲಾಗುತ್ತದೆ. ಒಂದು ಉದಾಹರಣೆ ಎಂದರೆ ಚರಂಡಿನೀರು ಹಾಗೂ ಕೈಗಾರಿಕಾ ತ್ಯಾಜ್ಯಗಳನ್ನು ನೇರವಾಗಿ ಸಾಗರದೊಳಗೆ ವಿಸರ್ಜಿಸುವುದು. ಇಂತಹಾ ಮಾಲಿನ್ಯವು ನಿರ್ದಿಷ್ಟವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ನಡೆಯುತ್ತದೆ. ಕೆಟ್ಟ-ನಿರ್ವಹಣೆಯ ಹಾಗೂ ವಿಕೇಂದ್ರಿತ ಮೂಲಗಳಿಂದ ಮಾಲಿನ್ಯವು ಉಂಟಾದಾಗ ಅದನ್ನು ಅಪ್ರಧಾನ ಮೂಲ ಮಾಲಿನ್ಯವೆನ್ನಲಾಗುತ್ತದೆ. ಇವುಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿರುತ್ತದೆ. ವ್ಯಾವಸಾಯಿಕ ಮೇಲ್ಮೈ ಹರಿವು ಹಾಗೂ ಗಾಳಿಯಿಂದ ಹಾರಿಬಂದ ಹುಡಿಯರಾಶಿಗಳಂತಹವು ಇದಕ್ಕೆ ಪ್ರಮುಖ ಉದಾಹರಣೆಗಳಾಗಿವೆ.

ನೇರ ವಿಸರ್ಜನೆ[ಬದಲಾಯಿಸಿ]

ರಿಯೋ ಟಿಂಟೋ ನದಿಯಲ್ಲಿರುವ ಆಮ್ಲ ಗಣಿ ಒಳಚರಂಡಿ.

ಮಾಲಿನ್ಯಕಾರಕಗಳು ನದಿಗಳನ್ನು ಹಾಗೂ ಸಮುದ್ರವನ್ನೂ ನೇರವಾಗಿ ನಗರಗಳ ಚರಂಡಿವ್ಯವಸ್ಥೆಯ ಮೂಲಕ ಹಾಗೂ ಕೈಗಾರಿಕಾ ತ್ಯಾಜ್ಯ ವಿಸರ್ಜನೆಗಳ ಮೂಲಕ, ಕೆಲವೊಮ್ಮೆ ಅಪಾಯಕಾರಿ ಹಾಗೂ ವಿಷಕಾರಿ ತ್ಯಾಜ್ಯಗಳ ರೂಪದಲ್ಲಿ ಪ್ರವೇಶಿಸುತ್ತವೆ.

ತಾಮ್ರ, ಚಿನ್ನ. etc.,ಗಳ ಒಳನಾಡಿನ ಗಣಿಗಾರಿಕೆ ಮತ್ತೊಂದು ಸಾಗರ ಮಾಲಿನ್ಯದ ಮೂಲವಾಗಿದೆ. ಮಾಲಿನ್ಯದ ಬಹಳಷ್ಟು ಕೇವಲ ಮಣ್ಣಾಗಿದ್ದು ಸಮುದ್ರವನ್ನು ತಲುಪುವ ನದಿಗಳಲ್ಲಿ ಸೇರಿಹೋಗುತ್ತವೆ. ಆದಾಗ್ಯೂ, ಹವಳದ ಹುಳುಗಳ ಜೀವನ ಇತಿಹಾಸ ಹಾಗೂ ಬೆಳವಣಿಗೆಗಳಲ್ಲಿ ಹಸ್ತಕ್ಷೇಪ ಮಾಡಬಲ್ಲಂತಹಾ ಪ್ರಮುಖ ಕೈಗಾರಿಕಾ ಮಾಲಿನ್ಯಕಾರಕವಾದ ತಾಮ್ರದಂತಹಾ ಗಣಿಗಾರಿಕೆಯ ಪ್ರಕ್ರಿಯೆಯಲ್ಲಿ ವಿಸರ್ಜಿತವಾಗುವ ಕೆಲ ಖನಿಜಗಳು ಸಮಸ್ಯೆಯನ್ನು ಉಂಟುಮಾಡಬಲ್ಲವು.[೨] ಗಣಿಗಾರಿಕೆಯು ಪರಿಸರ ಪೂರಕವಾಗದಿರುವಿಕೆಯ ಅಗ್ಗಳಿಕೆಯನ್ನು ಹೊಂದಿದೆ. ಉದಾಹರಣೆಗೆ ಯುನೈಟೆಡ್‌ ಸ್ಟೇಟ್ಸ್‌ನ ಪರಿಸರ ಸಂರಕ್ಷಣಾ ಸಂಸ್ಥೆಯ ಪ್ರಕಾರ ಗಣಿಗಾರಿಕೆಯು USನ ಪಶ್ಚಿಮ ಖಂಡಾಂತರ ಪ್ರದೇಶದ 40%ಗೂ ಮೀರಿದ ಜಲಾನಯನ ಪ್ರದೇಶಗಳ ಮೂಲ ತೊರೆಗಳನ್ನು ಭಾಗಶಃ ಮಲಿನಗೊಳಿಸಿದೆ.[೩] ಈ ಮಾಲಿನ್ಯದ ಬಹುಪಾಲು ಸಮುದ್ರದಲ್ಲಿ ಸೇರುತ್ತದೆ.

ಭೂಪ್ರದೇಶದಲ್ಲಿ ಮೇಲ್ಮೈ ಹರಿವು[ಬದಲಾಯಿಸಿ]

ಕೃಷಿಯಿಂದುಂಟಾಗುವ ಮೇಲ್ಮೈ ಹರಿವು, ಹಾಗೂ ನಗರಪ್ರದೇಶಗಳಲ್ಲಿನ ಮೇಲ್ಮೈ ಹರಿವು ಹಾಗೂ ರಸ್ತೆನಿರ್ಮಾಣ, ಕಟ್ಟಡಗಳು, ಮಹಾದ್ವಾರಗಳು, ಕಾಲುವೆಗಳು ಹಾಗೂ ಬಂದರುಗಳ ನಿರ್ಮಾಣದಿಂದಾಗುವಂತಹಾ ಮೇಲ್ಮೈ ಹರಿವುಗಳು, ಮಣ್ಣು ಹಾಗೂ ಇಂಗಾಲ, ಸಾರಜನಕ, ರಂಜಕ ಹಾಗೂ ಖನಿಜಪೂರಿತ ಕಣಗಳನ್ನು ಹೊತ್ತೊಯ್ಯಬಲ್ಲವು. ಈ ಖನಿಜ-ಪೂರಿತ ನೀರು ತೆಳು ತಿರುಳಿನ ಪಾಚಿ/ಶೈವಲಗಳು ಹಾಗೂ ಸಸ್ಯಪ್ಲವಕಗಳನ್ನು ಕರಾವಳಿಯಲ್ಲಿ ವೃದ್ಧಿಗೊಳಿಸಿ ಶೈವಲ ಉಚ್ಛ್ರಾಯ/ಆಲ್ಗಲ್‌ ಬ್ಲೂಮ್ಸ್‌ ಎಂದು ಕರೆಯಲ್ಪಡುವ, ಲಭ್ಯವಿರುವ ಎಲ್ಲಾ ಆಮ್ಲಜನಕವನ್ನು ಬಳಸಿಕೊಂಡು ಆಮ್ಲಜನಕ ರಾಹಿತ್ಯವನ್ನುಂಟು ಮಾಡುವ ಪರಿಸ್ಥಿತಿಯನ್ನುಂಟು ಮಾಡಬಲ್ಲದು.

ರಸ್ತೆಗಳು ಹಾಗೂ ಹೆದ್ದಾರಿಗಳಿಂದ ಉಂಟಾಗುವ ಮೇಲ್ಮೈ ಹರಿವು ಕರಾವಳಿ ಪ್ರದೇಶಗಳಲ್ಲಿ ಜಲ ಮಾಲಿನ್ಯದ ಪ್ರಧಾನ ಮೂಲವಾಗಿರುವ ಸಾಧ್ಯತೆ ಇರುತ್ತದೆ. ಪಗೆಟ್‌ ಜಲಸಂಧಿಯೊಳಕ್ಕೆ ಹರಿಯುವ ಸುಮಾರು ಪ್ರತಿಶತ 75ರಷ್ಟು ವಿಷಕಾರಿ ರಾಸಾಯನಿಕಗಳನ್ನು ಕಲ್ಲುಹಾಸಿರುವ ರಸ್ತೆಗಳು ಹಾಗೂ ಡ್ರೈವ್‌ವೇಗಳು, ಮೇಲ್ಛಾವಣಿಗಳು, ಅಂಗಳಗಳು ಹಾಗೂ ಇನ್ನಿತರ ಅಭಿವೃದ್ಧಿಪಡಿಸಿದ ಪ್ರದೇಶಗಳಲ್ಲಿ ಕೊಚ್ಚಿಹೋಗುವ ರಭಸದ ನೀರು ಕರೆದೊಯ್ಯುತ್ತದೆ.[೪]

ಹಡಗು ಮಾಲಿನ್ಯ[ಬದಲಾಯಿಸಿ]

ಸರಕು ಸಾಗಣೆ ಹಡಗೊಂದು ನಿಲುಭಾರ ನೀರನ್ನು ಪಕ್ಕಕ್ಕೆ ಚೆಲ್ಲುತ್ತಿದೆ.

ಹಡಗುಗಳು ಜಲಮಾರ್ಗಗಳನ್ನು ಹಾಗೂ ಸಾಗರಗಳನ್ನು ಅನೇಕ ರೀತಿಗಳಲ್ಲಿ ಕಲುಷಿತಗೊಳಿಸಬಹುದು. ತೈಲ ಸೋರಿಕೆಗಳು ವಿಧ್ವಂಸಕ ಪರಿಣಾಮಗಳನ್ನು ಬೀರುವ ಸಾಧ್ಯತೆ ಇರುತ್ತದೆ. ಸಾಗರ ಸಂಬಂಧಿ ಜೀವ ವೈವಿಧ್ಯಕ್ಕೆ ವಿಷಕಾರಿಯಾಗುವುದರೊಂದಿಗೆ, ಕಚ್ಚಾತೈಲದ ಘಟಕಗಳಾದ ಪಾಲಿಸೈಕ್ಲಿಕ್‌ ಅರೋಮ್ಯಾಟಿಕ್‌ ಹೈಡ್ರೋಕಾರ್ಬನ್ಸ್‌ (PAHಗಳು), ಶುದ್ಧೀಕರಣವನ್ನು ಕಷ್ಟಸಾಧ್ಯಗೊಳಿಸುವುದರ ಜೊತೆಗೆ ಮಡ್ಡಿಯ ರೂಪದಲ್ಲಿ ಸಂಗ್ರಹಗೊಂಡು ಸಾಗರ ಸಂಬಂಧಿ ಪರಿಸರದಲ್ಲಿ ವರ್ಷಗಳ ಕಾಲ ಉಳಿದುಕೊಂಡೇ ಇರುತ್ತದೆ.[೫]

ಬೃಹತ್‌ ಸಾಗಣೆಹಡಗುಗಳ ಸರಕುಸಾಗಣೆ ಅವಶೇಷಗಳ ವಿಸರ್ಜನೆಯು ಬಂದರುಗಳನ್ನು, ಜಲಮಾರ್ಗಗಳನ್ನು ಹಾಗೂ ಸಾಗರಗಳನ್ನೂ ಕಲುಷಿತಗೊಳಿಸಬಲ್ಲದು. ಅನೇಕ ವೇಳೆ ಹಡಗುಗಳು ಉದ್ದೇಶಪೂರ್ವಕವಾಗಿ ವಿದೇಶೀ ಹಾಗೂ ದೇಶೀಯ ನಿಯಂತ್ರಣಗಳು ಅಂತಹುದನ್ನು ಪ್ರತಿಬಂಧಿಸಿದ್ದಾಗ್ಯೂ ಕಾನೂನುಬಾಹಿರ ತ್ಯಾಜ್ಯಗಳನ್ನು ವಿಸರ್ಜಿಸುತ್ತವೆ. ಒಂದು ಅಂದಾಜಿನ ಪ್ರಕಾರ ಧಾರಕ ಹಡಗುಗಳು 10,000ಕ್ಕೂ ಹೆಚ್ಚಿನ ಧಾರಕಗಳನ್ನು ಸಮುದ್ರದಲ್ಲಿ ಪ್ರತಿ ವರ್ಷವೂ ಕಳೆದುಕೊಳ್ಳುತ್ತವೆ (ಸಾಧಾರಣವಾಗಿ ಚಂಡಮಾರುತದ ಸಮಯದಲ್ಲಿ).[೬] ಹಡಗುಗಳು ಶಬ್ದ ಮಾಲಿನ್ಯದ ಮೂಲಕ ನೈಸರ್ಗಿಕ ಜಲವನ್ಯಜೀವಿಗಳ ಕ್ಷೋಭೆಗೊಳಿಸಬಲ್ಲವಷ್ಟೇ ಅಲ್ಲದೇ ನಿಲುಭಾರ ತೊಟ್ಟಿಗಳಲ್ಲಿನ ನೀರು ಹಾನಿಕಾರಕ ಪಾಚಿ/ಶೈವಲಗಳು ಹಾಗೂ ಇನ್ನಿತರ ಆಕ್ರಮಣಕಾರಿ ಜೀವಜಾತಿಗಳನ್ನು ಹರಡಬಲ್ಲವು.[೭]

ಸಮುದ್ರದಿಂದ ಪಡೆದುಕೊಂಡ ಹಾಗೂ ಬಂದರಿನಲ್ಲಿ ವಿಸರ್ಜಿಸಲಾಗುವ ನಿಲುಭಾರ ನೀರು ಬೇಡದ ವೈವಿಧ್ಯಮಯ ಸಾಗರ ಸಂಬಂಧಿ ಜೀವಜಾತಿಗಳಿಗೆ ಪ್ರಮುಖ ಮೂಲವಾಗಿದೆ. ಕಪ್ಪು, ಕ್ಯಾಸ್ಪಿಯನ್‌ ಹಾಗೂ ಅಜೋವ್‌ ಸಮುದ್ರಗಳಲ್ಲಿ ಸ್ಥಳೀಯವಾಗಿರುವ ಆಕ್ರಮಣಕಾರಿ ಶುದ್ಧಜಲವಾಸಿ ಜೀಬ್ರಾ ಪಟ್ಟೆಗಳ ಚಿಪ್ಪುಜೀವಿಗಳು ಶ್ರೇಷ್ಠ ಸರೋವರಗಳಿಗೆ ನಿಲುಭಾರ ನೀರಿನ ಮೂಲಕವೇ ಸಾಗರಾಂತರ ಸಂಚಾರಿ ಹಡಗುಗಳಿಂದ ಬಹುಶಃ ಸ್ಥಳಾಂತರಗೊಂಡಿವೆ.[೮] ಮೇಯ್ನೆಜ್‌ರವರ ಭಾವನೆಯ ಪ್ರಕಾರ ಒಂದೇ ಆಕ್ರಮಣಕಾರಿ ಜೀವಿಯ ಮೂಲಕ ಪರಿಸರ ವ್ಯವಸ್ಥೆಗೆ ಹಾನಿಯಾಗುತ್ತಿರುವ ದುರದೃಷ್ಟ ಪ್ರಕರಣಗಳಲ್ಲಿ ಒಂದೆಂದರೆ ನಿರಪಾಯಕಾರಿ ಎಂಬಂತೆ ತೋರುವ ಲೋಳೆಮೀನು. ಶಿಖೆಯುಳ್ಳ ಲೋಳೆಮೀನಿನ ತಳಿಯಾದ ನೆಮಿಯೋಪ್ಸಿಸ್‌ ಲ್ಯೇಡ್ಯೈ , ಈಗ ಎಷ್ಟರಮಟ್ಟಿಗೆ ವ್ಯಾಪಿಸಿದೆಯೆಂದರೆ ವಿಶ್ವದ ಅನೇಕ ಭಾಗಗಳಲ್ಲಿನ ಅಳಿವೆಗಳಲ್ಲಿ ವಾಸ್ತವ್ಯಗಳನ್ನು ಹೂಡಿವೆ. ಇದು ಮೊದಲಿಗೆ 1982ರಲ್ಲಿ ಗುರುತಿಸಲ್ಪಟ್ಟಿತು, ಹಾಗೂ ಹಡಗೊಂದರ ನಿಲುಭಾರ ನೀರಿನ ಮೂಲಕ ಕಪ್ಪು ಸಮುದ್ರಕ್ಕೆ ಸ್ಥಾನಾಂತರಗೊಂಡಿದೆ ಎಂದು ಭಾವಿಸಲಾಗಿದೆ. ಲೋಳೆಮೀನಿನ ಪ್ರಮಾಣವು ತ್ವರಿತವಾಗಿ ಹೆಚ್ಚಿದ್ದಲ್ಲದೇ 1988ರ ಹೊತ್ತಿಗೆ, ಸ್ಥಳೀಯ ಮತ್ಸ್ಯೋದ್ಯಮದ ಮೇಲೆ ವಿಧ್ವಂಸಕ ಪ್ರಭಾವವನ್ನು ಬೀರಿತು. “ಆಂಚೊವಿ ಮೀನಿನ ಪ್ರಮಾಣವು 1984ರ 204,000 ಟನ್‌ಗಳಿಂದ 1993ರಲ್ಲಿ 200 ಟನ್‌ಗಳಿಗೆ ಇಳಿದಿದ್ದರೆ ; ಸ್ಪ್ರಾಟ್‌ ಮೀನಿನ ಪ್ರಮಾಣವು 1984ರಲ್ಲಿನ 24,600 ಟನ್‌ಗಳಿಂದ 1993ರಲ್ಲಿ 12,000 ಟನ್‌ಗಳಿಗೆ; ಕುದುರೆ ಬಂಗಡೆಮೀನು 1984ರಲ್ಲಿನ 4,000 ಟನ್‌ಗಳಿಂದ 1993ರಲ್ಲಿನ ಶೂನ್ಯ ಪ್ರಮಾಣಕ್ಕಿಳಿಯಿತು.”[೭] ಲೋಳೆಮೀನುಗಳು ಮೀನು ಲಾರ್ವಾಗಳು ಸೇರಿದಂತೆ ತೇಲುವ ಜೀವರಾಶಿಗಳನ್ನು ನಿಶ್ಶೇಷಗೊಳಿಸಿರುವುದರಿಂದ ಅವುಗಳ ಸಂಖ್ಯೆಯೂ ಹಠಾತ್‌ ಕುಸಿತ ಕಂಡಿರುವುದಾದರೂ, ಅವು ಪರಿಸರ ವ್ಯವಸ್ಥೆಯ ಮೇಲಿನ ತಮ್ಮ ಬಿಗಿಹಿಡಿತವನ್ನು ಇನ್ನೂ ಸಡಿಲಿಸಿಲ್ಲ.

ಆಕ್ರಮಣಕಾರಿ ತಳಿಗಳು ಒಮ್ಮೆ ಆಕ್ರಮಿತ ಪ್ರದೇಶಗಳನ್ನು ಆವರಿಸಿಕೊಂಡ ನಂತರ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವವಲ್ಲದೇ ಹೊಸ ರೋಗರುಜಿನಗಳನ್ನೂ ಹರಡುವಿಕೆ, ಹೊಸದಾದ ವಂಶವಾಹಿ ಘಟಕಗಳನ್ನು ಪರಿಚಯಿಸುವುದು, ನೀರಿನೊಳಗಿನ ಸಮುದ್ರ ಪ್ರದೇಶಗಳನ್ನು ಬದಲಿಸುವುದಲ್ಲದೇ ಅಲ್ಲಿನ ಸ್ಥಳೀಯ ತಳಿಗಳನ್ನು ಆಹಾರವನ್ನು ಪಡೆಯಲಾಗದಂತಹಾ ಅಪಾಯಕಾರಿ ಪರಿಸ್ಥಿತಿಗೆ ತಳ್ಳುತ್ತಿವೆ. ಈ ಆಕ್ರಮಣಕಾರಿ ತಳಿಗಳೇ US ಒಂದರಲ್ಲೇ ವಾರ್ಷಿಕವಾಗಿ ಸುಮಾರು $138 ಶತಕೋಟಿಯಷ್ಟು ಆದಾಯನಷ್ಟ ಹಾಗೂ ನಿರ್ವಹಣಾ ವೆಚ್ಚಗಳಿಗೆ ಕಾರಣೀಭೂತವಾಗಿವೆ.[೯]

ವಾತಾವರಣದ ಮಾಲಿನ್ಯ[ಬದಲಾಯಿಸಿ]

ವಾತಾವರಣದಲ್ಲಿನ ಧೂಳನ್ನು ಕೆರಿಬಿಯನ್‌ ಸಮುದ್ರ ಹಾಗೂ ಫ್ಲಾರಿಡಾದ ಸುತ್ತಮುತ್ತ ಅನೇಕ ಹವಳಗಳ ಸಾವಿಗೆ ಕಾರಣವೆಂದು ಸೂಚಿಸುವ ಗ್ರಾಫ್‌ [೧೦]

ಮಾಲಿನ್ಯ ಉಂಟಾಗುವ ಮತ್ತೊಂದು ದಾರಿಯೆಂದರೆ ವಾತಾವರಣ. ಭೂಭರ್ತಿ ಹೂತಿದ್ದ ಸ್ಥಳ ಹಾಗೂ ಇನ್ನಿತರ ಪ್ರದೇಶಗಳಿಂದ ಪ್ಲಾಸ್ಟಿಕ್‌ ಚೀಲಗಳೂ ಸೇರಿದಂತೆ, ಗಾಳಿಯಿಂದ ಹರಡುವ ಧೂಳು ಹಾಗೂ ಹುಡಿಯರಾಶಿಗಳು ಸಮುದ್ರದೆಡೆ ಗಾಳಿಯಿಂದ ಹರಡುವಿಕೆ. ಸಹಾರದಿಂದ ಏಳುವ ಧೂಳು ಉಪೋಷ್ಣವಲಯ ಪರ್ವತಶ್ರೇಣಿ/ಇಳಿಮೇಡು/ಸಾಲುಬ್ಬುಗಳ ದಕ್ಷಿಣವಲಯದ ಮೂಲಕ ಕೆರಿಬಿಯನ್‌ ಹಾಗೂ ಫ್ಲಾರಿಡಾದೆಡೆಗೆ ಬೇಸಿಗೆಯಲ್ಲಿ ಪರ್ವತಶ್ರೇಣಿ/ಇಳಿಮೇಡು/ಸಾಲುಬ್ಬುಗಳು ಏರಿಕೆ ಕಂಡಂತೆ ಹೋಗುತ್ತದೆ, ಹಾಗೂ ಉಪೋಷ್ಣವಲಯ ಅಟ್ಲಾಂಟಿಕ್‌ ಮೂಲಕ ಉತ್ತರದ ಕಡೆ ಹೋಗುತ್ತದೆ. ಗೋಭಿ ಹಾಗೂ ಟಕ್ಲಮಕನ್‌ ಮರಳುಗಾಡುಗಳಿಂದ ಕೊರಿಯಾ, ಜಪಾನ್‌ ಹಾಗೂ ಉತ್ತರ ಪೆಸಿಫಿಕ್‌ಗಳಿಂದ ಹವಾಯ್‌ ದ್ವೀಪಗಳೆಡೆ ಜಾಗತಿಕ ಸ್ಥಾನಾಂತರವನ್ನೂ ಧೂಳಿನ ಹರಡುವಿಕೆಗೆ ಕಾರಣವೆನ್ನಬಹುದು.[೧೧] 1970ರಿಂದ, ಆಫ್ರಿಕಾದಲ್ಲಿನ ಬರಗಾಲದ ಅವಧಿಯಿಂದಾಗಿ ಧೂಳಿನ ಅಬ್ಬರವು ಮಿತಿಮೀರುತ್ತಲಿದೆ. ವರ್ಷದಿಂದ ವರ್ಷಕ್ಕೆ ಕೆರಿಬಿಯನ್‌ ಹಾಗೂ ಫ್ಲಾರಿಡಾಗಳಿಗೆ ಸ್ಥಾನಾಂತರಗೊಳ್ಳುವ ಧೂಳಿನ ಪ್ರಮಾಣವು ಹೆಚ್ಚುತ್ತಲಿದೆ;[೧೨] ಆದಾಗ್ಯೂ, ಉತ್ತರ ಅಟ್ಲಾಂಟಿಕ್‌ ಆಂದೋಲನದ ಧನಾತ್ಮಕ ಹಂತಗಳ ಸಮಯದಲ್ಲಿ ಹರಿವು ಹೆಚ್ಚಿರುತ್ತದೆ.[೧೩] ಪ್ರಮುಖವಾಗಿ 1970ರ ದಶಕದಿಂದ ಕೆರಿಬಿಯನ್‌ ಹಾಗೂ ಫ್ಲಾರಿಡಾಗಳ ಸುತ್ತಮುತ್ತಲಿರುವ ಹವಳದ ದಿಬ್ಬಗಳ ಸ್ವಾಸ್ಥ್ಯದಲ್ಲಿನ ಇಳಿಕೆಗೆ ಧೂಳು ಪ್ರಮುಖ ಕಾರಣ ಎಂದು USGS ಅವೆರಡಕ್ಕೂ ಸಂಬಂಧ ಕಲ್ಪಿಸಿದೆ.[೧೪]

ಹವಾಮಾನ ಬದಲಾವಣೆಯು ಸಾಗರ ತಾಪಮಾನ ಏರಿಕೆಗೆ [30] ಹಾಗೂ ಇಂಗಾಲದ ಡೈಆಕ್ಸೈಡ್‌ ಪ್ರಮಾಣದ ಏರಿಕೆಗೆ ಕಾರಣವಾಗಿದೆ. ಇಂಗಾಲದ ಡೈಆಕ್ಸೈಡ್‌ನ ಈ ಏರಿದ ಮಟ್ಟಗಳು ಸಾಗರಗಳನ್ನು ಆಮ್ಲೀಕರಿಸುತ್ತಲಿದೆ.[೧೫] ಇದರ ಪರಿಣಾಮವಾಗಿ ಜಲ ಪರಿಸರ ವ್ಯವಸ್ಥೆಗಳಲ್ಲಿ ಬದಲಾವಣೆಯುಂಟಾಗಿ ಮೀನುಗಳ ಚದುರಿಕೆಯು,[೧೬] ಬದಲಾಗಿ ಮೀನುಗಾರಿಕೆಯ ಉಳಿವು ಹಾಗೂ ಜೀವನಕ್ಕೆ ಅದನ್ನೇ ಆಧರಿಸಿರುವ ಸಮುದಾಯಗಳ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತಲಿದೆ. ಆರೋಗ್ಯಕರ ಸಾಗರ ಪರಿಸರ ವ್ಯವಸ್ಥೆಗಳೂ ವ್ಯತಿರಿಕ್ತ ಹವಾಮಾನ ಬದಲಾವಣೆಗಳ ಇಳಿಕೆಗೆ ಪ್ರಮುಖ ಅಗತ್ಯವಾಗಿದೆ.[೧೭]

ಆಳ ಸಮುದ್ರದ ಗಣಿಗಾರಿಕೆ[ಬದಲಾಯಿಸಿ]

ಆಳ ಸಮುದ್ರದ ಗಣಿಗಾರಿಕೆಯು ಸಾಗರ ತಳದಲ್ಲಿ ನಡೆಯುವ ಸಾಪೇಕ್ಷವಾಗಿ ನವೀನವಾದ ಖನಿಜ ಪಡೆಯುವಿಕೆಯ ಪ್ರಕ್ರಿಯೆಯಾಗಿದೆ. ಸಾಗರ ಗಣಿಗಾರಿಕೆ ಪ್ರದೇಶಗಳು ಸಾಗರ’ದ ಮೇಲ್ಮೈನಿಂದ 1,400 - 3,700 ಮೀಟರ್‌ಗಳಷ್ಟು ಕೆಳಗೆ ಬಹುಲೋಹೀಯ ಸಣ್ಣ ಗುಂಡುಗಳು ಅಥವಾ ಸಕ್ರಿಯ ಹಾಗೂ ನಿರ್ನಾಮವಾದ ಜಲೋಷ್ಣೀಯ ದ್ವಾರಗಳ ಸುತ್ತಲಿನ ವಿಶಾಲ ಪ್ರದೇಶಗಳಲ್ಲಿವೆ.[೧೮] ಈ ಕಂಡಿಗಳು ಬೆಳ್ಳಿ, ಚಿನ್ನ, ತಾಮ್ರ, ಮ್ಯಾಂಗನೀಸ್‌, ಕೋಬಾಲ್ಟ್‌ ಹಾಗೂ ಸತುವುಗಳಂತಹಾ ಬೆಲೆಬಾಳುವ ಲೋಹಗಳನ್ನು ಹೊಂದಿರುವಂತಹಾ ಸಲ್ಫೈಡ್‌ ನಿಕ್ಷೇಪಗಳನ್ನು ನಿರ್ಮಿಸುತ್ತವೆ.[೧೯][೨೦] ಈ ನಿಕ್ಷೇಪಗಳನ್ನು ಜಲಚಾಲಿತ ಪಂಪ್‌ಗಳು ಅಥವಾ ಬಕೆಟ್‌ ವ್ಯವಸ್ಥೆಗಳ ಮೂಲಕ ಅದಿರುಗಳನ್ನು ಮೇಲ್ಮೈಗೆ ತೆಗೆದುಕೊಂಡು ಪ್ರಕ್ರಿಯೆಗಳಿಗೊಳಪಡಿಸಲಾಗುತ್ತದೆ. ಇತರೆ ಎಲ್ಲಾ ಗಣಿಗಾರಿಕೆ ಪ್ರಕ್ರಿಯೆಗಳ ಹಾಗೆ, ಆಳ ಸಮುದ್ರದ ಗಣಿಗಾರಿಕೆಯು ಕೂಡಾ ಸುತ್ತಮುತ್ತಲಿನ ವಾತಾವರಣಕ್ಕಾಗುವ ಹಾನಿಯ ಬಗ್ಗೆ ಪ್ರಶ್ನೆಗಳಿಗೆ ಕಾರಣವಾಗುತ್ತದೆ

ಆಳ ಸಮುದ್ರದ ಗಣಿಗಾರಿಕೆಯು ಸಾಪೇಕ್ಷವಾಗಿ ಹೊಸ ಕ್ಷೇತ್ರವಾದ ಕಾರಣ, ಪೂರ್ಣ ಮಟ್ಟದ ಗಣಿಗಾರಿಕೆ ಕಾರ್ಯಾಚರಣೆಗಳ ಸಂಪೂರ್ಣ ಪರಿಣಾಮಗಳು ತಿಳಿದುಬಂದಿಲ್ಲ. ಆದಾಗ್ಯೂ, ತಜ್ಞರು ಸಮುದ್ರ ತಳದ ಕೆಲಭಾಗದ ಅಗೆಯುವಿಕೆಯು ಜಲತಳ ಜೀವಿಗಳ ಸಂಕುಲದಲ್ಲಿ ಕೋಲಾಹಲವನ್ನುಂಟು ಮಾಡಿ ದಪ್ಪಮರಳಿನಿಂದ ಕೂಡಿದ ಗರಿಗಳ ಸಂಚಯ ಹಾಗೂ ಜಲಸ್ತಂಭಗಳ ವಿಷಪೂರಿತತ್ವವನ್ನು ಹೆಚ್ಚಿಸುತ್ತದೆ ಎಂಬ ಖಚಿತ ಅಭಿಪ್ರಾಯವನ್ನು ಹೊಂದಿದ್ದಾರೆ.[೨೧] ಸಮುದ್ರ ತಳದ ಕೆಲಭಾಗದ ಅಗೆಯುವಿಕೆಯು ಜಲತಳ ಜೀವಿಗಳ ಸಂಕುಲದ ವಾಸಸ್ಥಾನಗಳನ್ನು ಹಾಳುಗೆಡುವುದಲ್ಲದೇ ಬಹುಶಃ ಗಣಿಗಾರಿಕೆಯ ವಿಧ ಹಾಗೂ ಸ್ಥಳವನ್ನವಲಂಬಿಸಿ, ಶಾಶ್ವತ ಕೋಲಾಹಲವನ್ನುಂಟುಮಾಡುವ ಸಾಧ್ಯತೆ ಇರುತ್ತದೆ.[೧೮] ಗಣಿಗಾರಿಕೆಯ ನೇರ ಪರಿಣಾಮದ ಹೊರತಾಗಿ ಪ್ರದೇಶದಲ್ಲಿನ ಸೋರಿಕೆ, ಚೆಲ್ಲುವಿಕೆ ಹಾಗೂ ಸವೆತಗಳು ಗಣಿಗಾರಿಕೆ ಪ್ರದೇಶದ ರಾಸಾಯನಿಕ ವ್ಯವಸ್ಥೆಯನ್ನೇ ಬದಲಿಸಬಲ್ಲದು.

ಆಳ ಸಮುದ್ರದ ಗಣಿಗಾರಿಕೆಯಿಂದಾಗುವ ಪರಿಣಾಮಗಳಲ್ಲಿ, ಮೇಲ್ಮುಖ ಹರಿವು ಭೀಕರ ಪರಿಣಾಮವನ್ನು ಹೊಂದಬಲ್ಲದು. ಗಣಿಗಾರಿಕೆಯಲ್ಲಿ (ಸಾಧಾರಣವಾಗಿ ಸಣ್ಣ ಕಣಗಳು) ಹೊರಬಂದ ದಪ್ಪಮರಳನ್ನು ಮತ್ತೆ ಸಾಗರಕ್ಕೆ ಮರಳಿ ಚೆಲ್ಲುವುದರಿಂದ ನೀರಿನಲ್ಲಿ ತೇಲುತ್ತಿರುವ ಕಣಗಳ ಮೋಡವುಂಟಾಗಿ ನಂತರ ಈ ಮೇಲ್ಮುಖ ಹರಿವುಂಟಾಗುತ್ತದೆ. ಎರಡು ಮಾದರಿಯ ಮೇಲ್ಮುಖ ಹರಿವುಗಳುಂಟಾಗಬಲ್ಲವು : ತಳಸನಿಹದ ಮೇಲ್ಮುಖ ಹರಿವು ಹಾಗೂ ಮೇಲ್ಮೈನ ಮೇಲ್ಮುಖ ಹರಿವುಗಳು.[೧೮] ಗಣಿಗಾರಿಕೆಯ ಪ್ರದೇಶದ ಮೇಲೆ ದಪ್ಪಮರಳನ್ನು ಮರಳಿ ಚೆಲ್ಲಿದಾಗ ತಳಸನಿಹದ ಮೇಲ್ಮುಖ ಹರಿವುಗಳುಂಟಾಗುತ್ತವೆ. ತೇಲುವ ವಸ್ತುಗಳು ನೀರಿನ ಪ್ರಕ್ಷುಬ್ಧತೆಯನ್ನು ಅಥವಾ ರಾಡಿಯನ್ನು ಹೆಚ್ಚಿಸುತ್ತವಲ್ಲದೇ ಜಲತಳದ ಜೀವಸಂಕುಲಗಳು ಬಳಸುವ ಸೋಸಿ-ಸೇವಿಸುವ ಆಹಾರ ವ್ಯವಸ್ಥೆಗೆ ಅಡಚಣೆಯನ್ನುಂಟು ಮಾಡುತ್ತದೆ.[೨೨] ಮೇಲ್ಮೈನ ಮೇಲ್ಮುಖದ ಹರಿವುಗಳು ಮತ್ತಷ್ಟು ಗಂಭೀರ ಪರಿಣಾಮಗಳನ್ನುಂಟು ಮಾಡಬಲ್ಲವು. ಕಣಗಳ ಹಾಗೂ ನೀರಿನ ಹರಿವಿನ/ಪ್ರವಾಹದ ಗಾತ್ರಕ್ಕನುಗುಣವಾಗಿ ವ್ಯಾಪಕವಾದ ಪ್ರದೇಶಗಳಲ್ಲಿ ಹರಡಬಲ್ಲದು.[೧೮][೨೩] ಗರಿಗಳು ತೇಲುವ ಜೀವರಾಶಿಗಳು ಹಾಗೂ ಬೆಳಕಿನ ತೂರುವಿಕೆಯ ಮೇಲೆ ಪರಿಣಾಮ ಬೀರುವುದರಿಂದ, ಆ ಪ್ರದೇಶದಲ್ಲಿನ ಆಹಾರಜಾಲವನ್ನು ಹದಗೆಡಿಸುತ್ತವೆ.[೧೮][೨೪]

ಆಮ್ಲತೆಯ ಹೆಚ್ಚಳ[ಬದಲಾಯಿಸಿ]

ಮಾಲ್ಟೀವ್ಸ್‌ನಲ್ಲಿನ ತೀರದ ಅಂಚಾಗಿರುವ ಹವಳದ ದಿಬ್ಬಗಳು. ಹವಳದ ದಿಬ್ಬಗಳು ವಿಶ್ವದಾದ್ಯಂತ ಸಾಯುತ್ತಿವೆ.[೨೫]

ಸಾಗರಗಳು ಸಾಮಾನ್ಯವಾಗಿ ನೈಸರ್ಗಿಕವಾದ ಇಂಗಾಲ ಹೀರುತೊಟ್ಟಿಯಾಗಿದ್ದು, ವಾತಾವರಣದಿಂದ ಇಂಗಾಲದ ಡೈಆಕ್ಸೈಡ್‌ಅನ್ನು ಹೀರಿಕೊಳ್ಳುತ್ತವೆ. ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್‌ ಪ್ರಮಾಣವು ಹೆಚ್ಚುತ್ತಿರುವುದರಿಂದ ಸಾಗರಗಳು ಹೆಚ್ಚುಹೆಚ್ಚು ಆಮ್ಲೀಕರಣಗೊಳ್ಳುತ್ತಿವೆ.[೨೬][೨೭] ಸಾಗರ ಆಮ್ಲೀಕರಣದ ಸಂಭಾವ್ಯ ಪರಿಣಾಮಗಳು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಕ್ಯಾಲ್ಷಿಯಂ ಕಾರ್ಬೋನೇಟ್‌ನಿಂದಾದ ರಚನೆಗಳು ಕರಗುವಿಕೆಗೆ ಪಕ್ಕಾಗಿ ಹವಳಗಳ ಮೇಲೆ ಹಾಗೂ ಚಿಪ್ಪುಮೀನುಗಳ ಚಿಪ್ಪನ್ನು ಮೂಡಿಸುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.[೨೮].

ಸಾಗರಗಳು ಹಾಗೂ ಕರಾವಳೀಯ ಪರಿಸರ ವ್ಯವಸ್ಥೆಗಳು ಜಾಗತಿಕ ಇಂಗಾಲ ಆವರ್ತದ ಪ್ರಮುಖ ಪಾತ್ರ ವಹಿಸುವುದಲ್ಲದೇ 2000ರಿಂದ 2007ರ ನಡುವಿನ ಅವಧಿಯಲ್ಲಿ ಮಾನವ ಚಟುವಟಿಕೆಗಳಿಂದ ಹೊರಹೊಮ್ಮಿದ ಸುಮಾರು 25%ರಷ್ಟು ಇಂಗಾಲದ ಡೈಆಕ್ಸೈಡ್‌ ಹಾಗೂ ಸುಮಾರು ಅರ್ಧದಷ್ಟು ಕೈಗಾರಿಕಾ ಕ್ರಾಂತಿಯ ಆರಂಭದಿಂದ ಬಿಡುಗಡೆಯಾದ ಮಾನವಜನ್ಯ CO2ವನ್ನು ನಾಶಪಡಿಸಿದೆ. ಸಾಗರ ತಾಪಮಾನದ ಏರಿಕೆ ಹಾಗೂ ಸಾಗರದ ಆಮ್ಲೀಕರಣವೆಂದರೆ ಸಾಗರದ ಇಂಗಾಲ ಹೀರುವಿಕೆಯ ಸಾಮರ್ಥ್ಯ ಸಾವಕಾಶವಾಗಿ ದುರ್ಬಲವಾಗುತ್ತಿದ್ದು,[೨೯] ಮೊನಾಕೋ[೩೦] ಹಾಗೂ ಮನಡೋ[೩೧]

ಘೋಷಣೆಗಳಲ್ಲಿ ವ್ಯಕ್ತವಾದ ಜಾಗತಿಕ ಸಮಸ್ಯೆಗಳ ಏರಿಕೆಗೆ ಕಾರಣವಾಗುತ್ತಿದೆ.

ಸೈನ್ಸ್‌ ಎಂಬ ವೈಜ್ಞಾನಿಕ ಪತ್ರಿಕೆಯ ಮೇ 2008ರ ಸಂಚಿಕೆಯಲ್ಲಿ ಪ್ರಕಟವಾದ NOAA ವಿಜ್ಞಾನಿಗಳ ವರದಿಯ ಪ್ರಕಾರ ಸಾಪೇಕ್ಷವಾಗಿ ಆಮ್ಲೀಕೃತವಾದ ನೀರು ಉತ್ತರ ಅಮೇರಿಕಾದ ಖಂಡದಂಚಿನ ಪೆಸಿಫಿಕ್‌ ಸಮುದ್ರ ತಳದ ನಾಲ್ಕು ಮೈಲುಗಳೊಳಗಿನ ಪ್ರದೇಶಕ್ಕೆ ಏರುತ್ತಿದೆ. ಈ ಪ್ರದೇಶದಲ್ಲಿಯೇ ಬಹುತೇಕ ಸ್ಥಳೀಯ ಸಾಗರ ಸಂಬಂಧಿ ಜೀವಿಗಳು ವಾಸಿಸುವುದು ಇಲ್ಲವೇ ಜನಿಸುವುದಾದ್ದರಿಂದ ಇದು ಪ್ರಮುಖ ವಲಯವಾಗಿದೆ. ಆ ಲೇಖನವು ಕೇವಲ ವ್ಯಾಂಕೂವರ್‌ನಿಂದ ಉತ್ತರ ಕ್ಯಾಲಿಫೋರ್ನಿಯಾದವರೆಗಿನ ಪ್ರದೇಶವನ್ನು ಮಾತ್ರವೇ ಹೆಸರಿಸಿದ್ದರೂ, ಇತರೆ ಖಂಡದಂಚಿನ ಸಮುದ್ರತಳ ಪ್ರದೇಶಗಳೂ ಇದೇ ಸಮಸ್ಯೆಯನ್ನೆದುರಿಸುತ್ತಿರಬಹುದು.[೩೨]

ಸಂಬಂಧಿತ ಮತ್ತೊಂದು ಸಮಸ್ಯೆಯೆಂದರೆ ಸಾಗರ ತಳಗಳಲ್ಲಿನ ಸಂಚಯಗಳಲ್ಲಿ ಪತ್ತೆಯಾಗುವ ಮೀಥೇನ್‌ ಜಾಲರಿ ಶೇಖರಣೆಗಳು. ಇವು ಹಸಿರುಮನೆ ಅನಿಲವಾದ ಮೀಥೇನ್‌ಅನ್ನು ಅಪಾರ ಪ್ರಮಾಣದಲ್ಲಿ ಹಿಡಿದಿಟ್ಟುಕೊಂಡಿದ್ದು, ಸಾಗರ ತಾಪಮಾನ ಏರಿಕೆಯು ಇದನ್ನು ಹೊರಹೊಮ್ಮಿಸುವ ಸಂಭಾವ್ಯತೆ ಇರುತ್ತದೆ. 2004ರಲ್ಲಿ ಸಾಗರದಲ್ಲಿನ ಮೀಥೇನ್‌ ಜಾಲರಿಗಳ ಜಾಗತಿಕ ದಾಸ್ತಾನು ಒಂದರಿಂದ ಐದು ದಶಲಕ್ಷ ಘನ ಕಿಲೋಮೀಟರ್‌ಗಳ ನಡುವೆ ವ್ಯಾಪಿಸಿರಬಹುದು ಎಂದು ಅಂದಾಜಿಸಲಾಗಿತ್ತು.[೩೩] ಈ ಎಲ್ಲಾ ಜಾಲರಿಗಳನ್ನು ಸಮಾನ ಪ್ರಮಾಣದಲ್ಲಿ ಸಾಗರ ತಳದಾದ್ಯಂತ ಹರಡಿದ್ದರೆ ಅದು ಮೂರರಿಂದ ಹದಿನಾಲ್ಕು ಮೀಟರ್‌ಗಳಷ್ಟು ದಪ್ಪದ್ದಾಗಿರುತ್ತಿತ್ತು.[೩೪] ಈ ಅಂದಾಜು 500-2500 ಗಿಗಾಟನ್‌ಗಳಷ್ಟು ಇಂಗಾಲಕ್ಕೆ (Gt C), ಸಂಬಂಧಿಸಿದ್ದು ಇತರೆ ಎಲ್ಲಾ ಜೀವ್ಯವಶೇಷ ಇಂಧನ ಶೇಖರಣೆಗಳ 5000 Gt Cನಷ್ಟು ಪ್ರಮಾಣಕ್ಕೆ ಇದನ್ನು ಹೋಲಿಸಬಹುದಾಗಿದೆ.[೩೩][೩೫]

ವಿಪರೀತ ಫಲವತ್ತತೆ[ಬದಲಾಯಿಸಿ]

ಕಲುಷಿತಗೊಂಡ ತಗ್ಗಾದ ಮರಳು ದಿಂಡೆ.
ಸಾಗರ ಸಂಬಂಧಿ ಜಲತಳ ಜೀವಿಗಳ ಮೇಲೆ ವಿಪರೀತ ಫಲವತ್ತತೆಯ ಪರಿಣಾಮ

ವಿಪರೀತ ಫಲವತ್ತತೆ ಎಂದರೆ ರಾಸಾಯನಿಕ ಪೌಷ್ಟಿಕಾಂಶಗಳಲ್ಲಿನ ಎಂದರೆ ಸಾಮಾನ್ಯವಾಗಿ ಸಾರಜನಕ ಅಥವಾ ರಂಜಕಗಳನ್ನು ಹೊಂದಿರುವ ಸಂಯುಕ್ತಗಳ ಪ್ರಮಾಣದ ಪರಿಸರ ವ್ಯವಸ್ಥೆಯೊಂದರಲ್ಲಿನ ಏರಿಕೆ. ಇದರ ಪರಿಣಾಮವಾಗಿ ಪರಿಸರ ವ್ಯವಸ್ಥೆ'ಯ ಪ್ರಾಥಮಿಕ ಉತ್ಪತ್ತಿಯು ಹೆಚ್ಚಾದರೂ (ಹೆಚ್ಚುವರಿ ಸಸ್ಯ ಬೆಳವಣಿಗೆ ಹಾಗೂ ಕೊಳೆಯುವಿಕೆ), ನಂತರದ ಪರಿಣಾಮಗಳಾಗಿ ಆಮ್ಲಜನಕ ರಾಹಿತ್ಯ ಹಾಗೂ ನೀರಿನ ಗುಣಮಟ್ಟದಲ್ಲಿ, ಮೀನು, ಹಾಗೂ ಇತರ ಪ್ರಾಣಿಗಳ ಸಂಖ್ಯೆಯಲ್ಲಿ ತೀವ್ರ ಇಳಿಕೆ ಕಂಡುಬರುತ್ತದೆ.

ಇದರ ಪ್ರಮುಖ ದೋಷಿಯೆಂದರೆ ಸಾಗರದೊಳಗೆ ಲೀನವಾಗುವ ನದಿಗಳು, ಕೃಷಿಯಲ್ಲಿ ಬಳಸಿದ ಕೃತಕ ರಸಗೊಬ್ಬರಗಳು ಹಾಗೂ ಜಾನುವಾರುಗಳು ಹಾಗೂ ಮನುಷ್ಯರ ತ್ಯಾಜ್ಯಗಳಲ್ಲಿನ ಅನೇಕ ರಾಸಾಯನಿಕಗಳು ಹರಿದುಬರುತ್ತವೆ. ನೀರಿನಲ್ಲಿನ ಆಮ್ಲಜನಕ ನಾಶಕ ರಾಸಾಯನಿಕಗಳ ಹೆಚ್ಚಳವು ಆಮ್ಲಜನಕ ರಾಹಿತ್ಯತೆಗೆ ತನ್ಮೂಲಕ ಜಡ/ಮೃತ ವಲಯದ ರಚನೆಗೆ ದಾರಿ ಮಾಡುತ್ತದೆ.[೩೬]

ಮಿತಿಯಿರುವ ವಾಹಿನಿಗಳಲ್ಲಿ ಮೇಲ್ಮೈ ಹರಿವು ಸಾಗರ ಸಂಬಂಧಿ ಪರಿಸರಕ್ಕೆ ಪ್ರವೇಶಿಸುವ ಕಾರಣ ಭೂ-ಜನ್ಯ ಪೌಷ್ಟಿಕಾಂಶಗಳು ಅಲ್ಲಿ ಸಂಗ್ರಹಗೊಳ್ಳುವುದರಿಂದ ಅಳಿವೆಗಳು ಸಾಧಾರಣವಾಗಿ ವಿಪರೀತ ಫಲವತ್ತತೆಯನ್ನು ಹೊಂದಿರುತ್ತವೆ. ವಿಶ್ವ ಸಂಪನ್ಮೂಲಗಳ ಸಂಸ್ಥೆಯು ವಿಶ್ವದಾದ್ಯಂತ 375 ಆಮ್ಲಜನಕ ರಾಹಿತ್ಯ ಕರಾವಳೀಯ ವಲಯಗಳನ್ನು ಗುರುತಿಸಿದ್ದು, ಇವು ಪಶ್ಚಿಮ ಯೂರೋಪ್‌, USನ ಪೂರ್ವ ಹಾಗೂ ದಕ್ಷಿಣ ಕರಾವಳಿಗಳು ಹಾಗೂ ಪೂರ್ವ ಏಷ್ಯಾದಲ್ಲಿ ನಿರ್ದಿಷ್ಟವಾಗಿ ಜಪಾನ್‌ನ ಕರಾವಳೀಯ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿವೆ.[೩೭] ಸಾಗರದಲ್ಲಿ ಪದೇ ಪದೇ ವಿಕಸಿಸುವ [೩೮] ಕೆಂಪು ಭರತದ ಪಾಚಿ/ಶೈವಲಗಳಿದ್ದು ಅವು ಮೀನು ಹಾಗೂ ಸಾಗರ ಸಂಬಂಧಿ ಸಸ್ತನಿಗಳು ಮರಣವನ್ನಪ್ಪುವಂತೆ ಮಾಡಿ ವಿಕಸನವು ತೀರಕ್ಕೆ ತಲುಪುವ ಕೆಲವು ಸಂದರ್ಭಗಳಲ್ಲಿ ಮಾನವರಲ್ಲಿ ಹಾಗೂ ಪಳಗಿಸಿದ ಪ್ರಾಣಿಗಳಲ್ಲಿ ಕೆಲ ಉಸಿರಾಟದ ತೊಂದರೆಗಳನ್ನು ಉಂಟುಮಾಡಬಲ್ಲದು.

ಭೂಮೇಲ್ಮೈನ ಹರಿವಲ್ಲದೇ, ವಾತಾವರಣದಲ್ಲಿ ಮಾನವಜನ್ಯ ಸ್ಥಿರ ಸಾರಜನಕವೂ ಕೂಡಾ ಮುಕ್ತ ಸಾಗರವನ್ನು ಪ್ರವೇಶಿಸಬಲ್ಲದು. 2008ರ ಅಧ್ಯಯನವೊಂದು ಇದು ಸಾಗರ’ದ ಬಾಹ್ಯ (ಮರುಬಳಕೆಯದಲ್ಲದ) ಸಾರಜನಕ ಸಂಗ್ರಹದ/ಪೂರೈಕೆಯ ಸುಮಾರು ಮೂರನೇ ಒಂದರಷ್ಟು ಹಾಗೂ ವಾರ್ಷಿಕ ಸಾಗರ ಸಂಬಂಧಿ ನವೀನ ಜೈವಿಕ ಉತ್ಪಾದನೆಯ ಪ್ರತಿಶತ ಮೂರರಷ್ಟು ಆಗುತ್ತದೆ ಎಂದು ತಿಳಿಸಿದೆ.[೩೯] ಪರಿಸರದಲ್ಲಿ ಪ್ರತಿಕ್ರಿಯಾಶೀಲ ಸಾರಜನಕದ ಸಂಗ್ರಹಣೆಯು ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ಅನ್ನು ತೂರುವಷ್ಟು ಗಂಭೀರ ಪರಿಣಾಮಗಳನ್ನುಂಟು ಮಾಡಬಹುದು ಎಂಬ ಭಾವನೆ ವ್ಯಕ್ತವಾಗಿದೆ.[೪೦]

ಪ್ಲಾಸ್ಟಿಕ್‌ ಹುಡಿಯರಾಶಿ[ಬದಲಾಯಿಸಿ]

ಮೂಕ/ಮ್ಯೂಟ್‌ ಹಂಸವು ಪ್ಲಾಸ್ಟಿಕ್‌ ತ್ಯಾಜ್ಯದಿಂದ ಗೂಡನ್ನು ನಿರ್ಮಿಸಿಕೊಳ್ಳುತ್ತಿದೆ.

ಸಾಗರ ಸಂಬಂಧಿ ಹುಡಿಯರಾಶಿಯು ಪ್ರಮುಖವಾಗಿ ಸಾಗರದಲ್ಲಿ ತೇಲುವ ಅಥವಾ ಅದರಲ್ಲಿ ಇಳಿಬಿಟ್ಟ ಬಿಸಾಡಲ್ಪಟ್ಟ/ತ್ಯಜಿಸಲ್ಪಟ್ಟ ಮಾನವ ತ್ಯಾಜ್ಯ. ಸಾಗರ ಸಂಬಂಧಿ ಹುಡಿಯರಾಶಿಯಲ್ಲಿ ಎಂಬತ್ತು ಪ್ರತಿಶತ ಪ್ಲಾಸ್ಟಿಕ್‌ ಆಗಿದೆ- ಇದು ವಿಶ್ವ ಸಮರ IIರ ಅಂತ್ಯದ ನಂತರ ತ್ವರಿತವಾಗಿ ಸಂಗ್ರಹಿತಗೊಳ್ಳುತ್ತಿರುವ ಘಟಕವಾಗಿದೆ.[೪೧] ಸಾಗರಗಳಲ್ಲಿರುವ ಪ್ಲಾಸ್ಟಿಕ್‌ ರಾಶಿಯು ಒಂದು ನೂರು ದಶಲಕ್ಷ ಮೆಟ್ರಿಕ್‌ ಟನ್‌ಗಳಷ್ಟು ಅಗಾಧವಿರಬಹುದು.[೪೨]

ವರ್ಜಿಸಿದ ಪ್ಲಾಸ್ಟಿಕ್‌ ಚೀಲಗಳು, ಸಿಕ್ಸ್‌ ಪ್ಯಾಕ್‌ ರಿಂಗ್‌ಗಳು ಹಾಗೂ ಸಾಗರದಲ್ಲಿ ಎಸೆಯಲಾಗುವ ಪ್ಲಾಸ್ಟಿಕ್‌ ತ್ಯಾಜ್ಯದ ಇತರ ರೂಪಗಳು ಜೀವರಾಶಿ ಹಾಗೂ ಮೀನುಗಾರಿಕೆಗೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ.[೪೩] ಬಲೆಗೆ ಸಿಕ್ಕುವಿಕೆ, ಉಸಿರುಗಟ್ಟುವಿಕೆ, ಹಾಗೂ ಸೇವನೆಗಳ ಮೂಲಕ ಜಲಸಂಬಂಧಿ ಜೀವಿಗಳು ಅಪಾಯಕ್ಕೊಳಪಡಬಲ್ಲವು.[೪೪][೪೫][೪೬] ಸಾಧಾರಣವಾಗಿ ಪ್ಲಾಸ್ಟಿಕ್‌ನಿಂದ ತಯಾರಿಸಲ್ಪಟ್ಟ ಮೀನಿನ ಬಲೆಗಳನ್ನು ಮೀನುಗಾರರು ಸಾಗರದಲ್ಲೇ ಬಿಡುವುದು ಅಥವಾ ಕಳೆದುಕೊಳ್ಳುವುದು ನಡೆಯುತ್ತಿರುತ್ತದೆ. ದೆವ್ವದ ಬಲೆಗಳು ಎಂದು ಕರೆಯಲಾಗುವ ಇವು, ಮೀನುಗಳು, ಡಾಲ್ಫಿನ್‌ಗಳು, ಸಮುದ್ರ ಆಮೆಗಳು, ಷಾರ್ಕ್‌ಗಳು, ಡಗಾಂಗ್‌ಗಳು, ಮೊಸಳೆಗಳು, ಕಡಲಹಕ್ಕಿಗಳು, ಏಡಿಗಳು, ಹಾಗೂ ಇತರೆ ಜೀವಿಗಳನ್ನು ಸಿಕ್ಕಿಹಾಕಿಸಿಕೊಂಡು ಚಲನೆ ನಿಯಂತ್ರಿಸಿ, ಉಪವಾಸ ಕೆಡವಿ, ಸೀಳುವಿಕೆಗಳು ಹಾಗೂ ಸೋಂಕುಗಳನ್ನುಂಟು ಮಾಡುವುದಲ್ಲದೇ, ಉಸಿರಾಡಲು ಮೇಲ್ಮೈಗೆ ಮರಳಬೇಕಾಗಿರುವ ಜೀವಿಗಳಿಗೆ ಉಸಿರುಕಟ್ಟುವಿಕೆಯನ್ನುಂಟು ಮಾಡುತ್ತವೆ.[೪೭]

ಪ್ಲಾಸ್ಟಿಕ್‌ ಚೂರುಗಳನ್ನು ಸೇವಿಸಿದ್ದ ಕಡಲಕೋಳಿಗಳ ಉಳಿಕೆಗಳು

ಸಮುದ್ರ ಮೇಲ್ಮೈನಲ್ಲಿ ಅಥವಾ ಒಳಗೆ ವಾಸಿಸುವ ಅನೇಕ ಪ್ರಾಣಿಗಳು ತಮ್ಮ ನೈಸರ್ಗಿಕ ಬೇಟೆಯಂತೆ ಕಾಣಿಸುವ ಚೂರುಪಾರುಗಳನ್ನು ತಪ್ಪಾಗಿ ಗ್ರಹಿಸಿ ಸೇವಿಸುತ್ತವೆ.[೪೮] ಪ್ಲಾಸ್ಟಿಕ್‌ ಹುಡಿಯರಾಶಿ, ಹೆಚ್ಚಿನ ಪ್ರಮಾಣದಲ್ಲಿರುವಾಗ ಅಥವಾ ಸಿಕ್ಕಿಕೊಂಡಿರುವಾಗ ಹಾದುಹೋಗಲು ಸಾಧ್ಯವಾಗದೇ ಈ ಪ್ರಾಣಿಗಳ ಜೀರ್ಣಾಂಗ ಪ್ರದೇಶಗಳಲ್ಲಿ ಸಿಕ್ಕಿಹಾಕಿಕೊಂಡು, ಆಹಾರದ ಹರಿವಿಗೆ ಅಡ್ಡವಾಗಿ ಹಸಿವಿನಿಂದ ಅಥವಾ ಸೋಂಕಿನಿಂದ ಸಾವನ್ನಪ್ಪಲು ಕಾರಣವಾಗಿರುತ್ತದೆ.[೪೯][೫೦]

ಪ್ಲಾಸ್ಟಿಕ್‌ಗಳು ಸಂಗ್ರಹಗೊಳ್ಳಲು ಇನ್ನಿತರ ಅನೇಕ ವಸ್ತುಗಳ ಹಾಗೆ ಜೈವಿಕವಾಗಿ ಕ್ಷಯಿಸದೇ ಇರುವುದೇ ಕಾರಣವಾಗಿದೆ. ಅವು ಸೂರ್ಯನ ಬೆಳಕಿಗೆ ಒಡ್ಡಿಕೊಂಡಿದ್ದರೆ ದ್ಯುತಿಕ್ಷಯಿಸುವಿಕೆಗೆ ಒಳಗಾಗುತ್ತವೆ, ಆದರೆ ಹೀಗಾಗುವುದು ಸೂಕ್ತ ಒಣ ಪರಿಸರದಲ್ಲಿ ಅಲ್ಲದೇ ನೀರು ಇದಕ್ಕೆ ಅಡ್ಡಿಪಡಿಸುತ್ತದೆ.[೫೧] ಸಾಗರ ಸಂಬಂಧಿ ಪರಿಸರಗಳಲ್ಲಿ, ದ್ಯುತಿ ಕ್ಷಯಿಸುವಿಕೆಗೆ ಒಳಗಾದ ಪ್ಲಾಸ್ಟಿಕ್‌ ತುಂಬ ಕಿರಿದಾದ ಗಾತ್ರದಲ್ಲಿದ್ದರೂ ಕಣಗಳ ಮಟ್ಟದಲ್ಲಿಯೂ ಪಾಲಿಮರ್‌ ಆಗಿಯೇ ಉಳಿಯುತ್ತದೆ. ತೇಲುವ ಪ್ಲಾಸ್ಟಿಕ್‌ ಕಣಗಳು ತೇಲುವ ಜೀವರಾಶಿಗಳ ಗಾತ್ರಕ್ಕೆ ದ್ಯುತಿಕ್ಷಯಿಸುವಿಕೆಯಿಂದ ಇಳಿದಾಗ, ಲೋಳೆಮೀನುಗಳು ಅದನ್ನು ನುಂಗಲು ಯತ್ನಿಸುತ್ತವೆ, ಹಾಗೂ ಈ ಮೂಲಕ ಪ್ಲಾಸ್ಟಿಕ್‌ ಸಾಗರ ಆಹಾರ ಸರಪಣಿಯನ್ನು ಪ್ರವೇಶಿಸುತ್ತದೆ. [೫೨] [೫೩] ಈ ದೀರ್ಘಕಾಲ ಉಳಿಯುವ ತುಂಡುಗಳು ಕಡಲ ಆಮೆಗಳು ಹಾಗೂ ಕಪ್ಪು ಪಾದದ ಕಡಲಕೋಳಿಗಳೂ ಸೇರಿದಂತೆ ಸಾಗರ ಸಂಬಂಧಿ ಪ್ರಾಣಿಗಳು,[೫೪] ಹಾಗೂ ಪಕ್ಷಿಗಳ ಉದರದೊಳಗೆ ಸೇರಿಕೊಳ್ಳುತ್ತವೆ.[೫೫]

thumb|left|ಹವಾಯ್‌ನ ಕಾಂಇಲೋ ತೀರದಲ್ಲಿನ ಸಾಗರ ಸಂಬಂಧಿ ಹುಡಿಯರಾಶಿಗಳು, ಬೃಹತ್‌ ಪೆಸಿಫಿಕ್‌ ತ್ಯಾಜ್ಯ ಪಟ್ಟಿಯಿಂದ ತೇಲಿಕೊಂಡು ಬಂದದ್ದು

ಪ್ಲಾಸ್ಟಿಕ್‌ ಹುಡಿಯರಾಶಿಯು ಸಾಗರ ವಲಯವೃತ್ತಗಳ/ಸುಳಿಗಳ ಕೇಂದ್ರದಲ್ಲಿ ಸಂಗ್ರಹಿತವಾಗುತ್ತಿರುತ್ತದೆ. ನಿರ್ದಿಷ್ಟವಾಗಿ, ಬೃಹತ್‌ ಪೆಸಿಫಿಕ್‌ ಅನುಪಯುಕ್ತ ವಸ್ತು/ತ್ಯಾಜ್ಯ ಪಟ್ಟಿಯು ಮೇಲ್ಭಾಗದ ಜಲಸ್ತಂಭದಲ್ಲಿ ಸ್ಥಗಿತಗೊಂಡ ದೊಡ್ಡ ಪ್ರಮಾಣದ ಪ್ಲಾಸ್ಟಿಕ್‌ ಕಣಗಳನ್ನು ಹೊಂದಿದೆ. 1999ರಲ್ಲಿ ಪಡೆದ ಮಾದರಿಗಳಲ್ಲಿ, ಪ್ಲಾಸ್ಟಿಕ್‌ನ ರಾಶಿಯ ಪ್ರಮಾಣವು ತೇಲುವ ಜೀವರಾಶಿಗಳ (ಆ ಪ್ರದೇಶದಲ್ಲಿ ಪ್ರಧಾನ ಪ್ರಾಣಿಕುಲವಾದ) ಪ್ರಮಾಣದ ಆರು ಪಟ್ಟಿನಷ್ಟು ಇದೆ.[೪೧][೫೬] ಮಿಡ್‌ವೇ ಅಟಾಲ್‌/ಅಡಲು, ಎಲ್ಲಾ ಹವಾಯ್‌ನ ದ್ವೀಪಗಳೊಂದಿಗೆ ಸಮಾನವಾಗಿ ತ್ಯಾಜ್ಯಪಟ್ಟಿಯಿಂದ ಗಮನಾರ್ಹ ಪ್ರಮಾಣದ ಹುಡಿಯರಾಶಿಯನ್ನು ಪಡೆಯುತ್ತದೆ. ಪ್ರತಿಶತ ತೊಂಬತ್ತರಷ್ಟು ಪ್ಲಾಸ್ಟಿಕ್‌ ಹೊಂದಿರುವ ಈ ಹುಡಿಯರಾಶಿಯು ಮಿಡ್‌ವೇಯ ತೀರದಲ್ಲಿ ಸಂಗ್ರಹಗೊಂಡು ಆ ದ್ವೀಪದ ಪಕ್ಷಿ ಸಮೂಹಕ್ಕೆ ಅಪಾಯಕಾರಿ ಎನಿಸಿದೆ. ಮಿಡ್‌ವೇ ಅಟಾಲ್‌/ಅಡಲು ಜಾಗತಿಕ ಸಂತತಿಪ್ರಮಾಣದ ಮೂರನೇ ಎರಡರಷ್ಟು (1.5 ದಶಲಕ್ಷ) ಲೇಸನ್‌ ಕಡಲಕೋಳಿಗಳ ವಾಸಸ್ಥಾನವಾಗಿದೆ.[೫೭] ಈ ಕಡಲಕೋಳಿಗಳಲ್ಲಿ ಬಹುಮಟ್ಟಿಗೆ ಎಲ್ಲವೂ ತಮ್ಮ ಜೀರ್ಣ ವ್ಯವಸ್ಥೆಯೊಳಗೆ[೫೮] ಪ್ಲಾಸ್ಟಿಕ್‌ಅನ್ನು ಹೊಂದಿದ್ದು ಅವುಗಳ ಮೂರನೇ ಎರಡರಷ್ಟು ಮರಿಗಳು ಸಾವನ್ನಪ್ಪುತ್ತವೆ.[೫೯]

ಪ್ಲಾಸ್ಟಿಕ್‌ ವಸ್ತುಗಳ ನಿರ್ಮಾಣದಲ್ಲಿ ಬಳಸುವ ವಿಷಕಾರಿ ಸೇರ್ಪಡೆಗಳು ನೀರಿನಲ್ಲಿ ಬೆರೆತಾಗ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಬಹುದಾಗಿವೆ. ಜಲಮೂಲದ ಸುಲಭವಾಗಿ ಒದ್ದೆಮಾಡಲಾಗದ ಮಾಲಿನ್ಯಕಾರಕಗಳು ಪ್ಲಾಸ್ಟಿಕ್‌ ಹುಡಿಯರಾಶಿಯ ಮೇಲ್ಮೈಯಲ್ಲಿ ಸಂಗ್ರಹಗೊಂಡು ವರ್ಧಿಸುವುದರಿಂದ,[೪೨] ಪ್ಲಾಸ್ಟಿಕ್‌ಅನ್ನು ಭೂಪ್ರದೇಶಕ್ಕಿಂತ ಸಾಗರದಲ್ಲಿಯೇ ಹೆಚ್ಚು ಗಂಡಾಂತರಕಾರಿಯನ್ನಾಗಿಸಿದೆ.[೪೧] ಸುಲಭವಾಗಿ ನೀರಲ್ಲಿ ಒದ್ದೆಮಾಡಲಾಗದ ಕಲ್ಮಶಕಾರಕಗಳು ಸಂಪುಷ್ಟವಾಗಿರುವ ಅಂಗಾಂಶಗಳಲ್ಲಿ ಜೈವಿಕಸಂಗ್ರಹಣೆಯಾಗಿ ಆಹಾರ ಸರಪಣಿಯ ಮೂಲಕ ಜೈವಿಕವಾಗಿ ವರ್ಧಿಸಿ ಪರಭಕ್ಷಕ ಜೀವಿಗಳ ಉನ್ನತ ಸ್ತರದ ಪ್ರಾಣಿಗಳ ಮೇಲೆ ಒತ್ತಡವಾಗಿ ಪರಿಣಮಿಸುತ್ತವೆ. ಕೆಲ ಪ್ಲಾಸ್ಟಿಕ್‌ ಸೇರ್ಪಡಿಕೆಗಳು ಸೇವಿಸಿದಾಗ ಅಂತಃಸ್ರಾವಕ ಗ್ರಂಥಿವ್ಯವಸ್ಥೆಯನ್ನೇ ಹಾಳುಗೆಡವಬಲ್ಲದೆಂಬುದು ಈಗಾಗಲೇ ತಿಳಿದುಬಂದಿದ್ದರೆ, ಉಳಿದವು ರೋಗನಿರೋಧಕ ಶಕ್ತಿಯನ್ನು ತಡೆಹಿಡಿಯುವಿಕೆ ಅಥವಾ ಸಂತಾನೋತ್ಪತ್ತಿ ದರವನ್ನು ಇಳಿಕೆಗೊಳಿಸುವ ಸಾಧ್ಯತೆಯನ್ನು ಹೊಂದಿವೆ.[೫೬] ತೇಲುವ ಹುಡಿಯರಾಶಿಯು ಸಮುದ್ರ ನೀರಿನಿಂದ PCBಗಳು, DDT ಹಾಗೂ PAHಗಳೂ ಸೇರಿದಂತೆ ಶಾಶ್ವತ ಸಾವಯವ ಮಾಲಿನ್ಯಕಾರಕಗಳನ್ನು ಹೀರಿಕೊಳ್ಳಬಲ್ಲದು.[೬೦] ವಿಷಕಾರಿ ಪರಿಣಾಮಗಳಲ್ಲದೇ,[೬೧] ಇವುಗಳಲ್ಲಿ ಕೆಲವನ್ನು ಸೇವಿಸಿದಾಗ ಪ್ರಾಣಿಗಳ ಮೆದುಳು ಅದನ್ನು ಎಸ್ಟ್ರಾಡಯಾಲ್‌ ಎಂದು ತಪ್ಪಾಗಿ ಭಾವಿಸಿ ಪೀಡಿತ ಪ್ರಾಣಿಸಂಕುಲಗಳಲ್ಲಿ ಹಾರ್ಮೋನ್‌ ಅವ್ಯವಸ್ಥೆಗಳಿಗೆ ಕೂಡಾ ಕಾರಣವಾಗುತ್ತದೆ.[೫೫]

ಜೀವಾಣು ವಿಷಗಳು[ಬದಲಾಯಿಸಿ]

ಪ್ಲಾಸ್ಟಿಕ್‌ಗಳು ಮಾತ್ರವಲ್ಲದೇ, ಸಾಗರ ಸಂಬಂಧಿ ಪರಿಸರದಲ್ಲಿ ತ್ವರಿತವಾಗಿ ವಿಘಟಿತವಾಗದ ಇತರೆ ಜೀವಾಣು ವಿಷಗಳಿಂದ ನಿರ್ದಿಷ್ಟ ಸಮಸ್ಯೆಗಳಿವೆ. ಮರುಕಳಿಸುವ ಜೀವಾಣು ವಿಷಗಳಿಗೆ ಉದಾಹರಣೆಗಳೆಂದರೆ PCBಗಳು, DDT, ಕ್ರಿಮಿನಾಶಕಗಳು, ಫ್ಯೂರನ್‌ಗಳು, ಡಯಾಕ್ಸಿನ್‌ಗಳು, ಫಿನಾಲ್‌ಗಳು ಹಾಗೂ ವಿಕಿರಣಯುಕ್ತ ತ್ಯಾಜ್ಯ. ಸಾಪೇಕ್ಷವಾಗಿ ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ಹಾಗೂ ತೂಕದ ಲೋಹಗಳೆಂದರೆ ಅಲ್ಪ ಸಾರತೆಯಲ್ಲಿರುವಾಗ ವಿಷಕಾರಿ ಅಥವಾ ನಂಜಾಗುವಂತಹಾ ಲೋಹಯುಕ್ತ ರಾಸಾಯನಿಕ ವಸ್ತುಗಳು. ಉದಾಹರಣೆಗಳಲ್ಲಿ ಪಾದರಸ, ಸೀಸ, ನಿಕೆಲ್‌, ಆರ್ಸೆನಿಕ್‌ ಹಾಗೂ ಕ್ಯಾಡ್ಮಿಯಮ್‌ ಸೇರಿವೆ. ಅಂತಹಾ ಜೀವಾಣು ವಿಷಗಳು ಜಲಜೀವ ಸಂಕುಲದ ಅನೇಕ ತಳಿಗಳ ಅಂಗಾಂಶಗಳಲ್ಲಿ ಜೈವಿಕಸಂಗ್ರಹಣೆ ಎಂಬ ಪ್ರಕ್ರಿಯೆಯ ಮೂಲಕ ಸಂಗ್ರಹಗೊಳ್ಳುತ್ತವೆ. ಅಳಿವೆಗಳು ಹಾಗೂ ಕೊಲ್ಲಿಗಳ ಹಸಿಮಣ್ಣಿನಂತಹಾ ಜಲತಳ ಜೀವಿಗಳ ಪರಿಸರಗಳಲ್ಲಿ ಸಂಗ್ರಹಗೊಳ್ಳುತ್ತವೆಂಬುದು ಕಳೆದ ಶತಮಾನದ ಮಾನವ ಚಟುವಟಿಕೆಗಳ ಭೂವೈಜ್ಞಾನಿಕ ದಾಖಲೆಗಳಿಂದ ತಿಳಿದುಬಂದಿದೆ.

ನಿರ್ದಿಷ್ಟ ಉದಾಹರಣೆಗಳು
  • ಫಿನಾಲ್‌ಗಳು ಹಾಗೂ ಭಾರಲೋಹಗಳಂತಹಾ ಅಮುರ್‌ ನದಿಯಲ್ಲಿನ ಚೀನೀ ಹಾಗೂ ರಷ್ಯನ್‌ ಕೈಗಾರಿಕಾ ಮಾಲಿನ್ಯತೆಯು ಮೀನಿನ ಸಂತತಿಗಳನ್ನು ನಾಶಗೊಳಿಸಿ ಅಲ್ಲಿನ ಅಳಿವೆಗಳಲ್ಲಿನ ತೈಲವನ್ನು ನಷ್ಟಗೊಳಿಸಿವೆ.[೬೨]
  • ಆ ಪ್ರದೇಶದಲ್ಲಿನ ಅತ್ಯುತ್ತಮ ಸರೋವರದ ಮೀನು/ಶ್ವೇತಮೀನು ಸರೋವರವಾಗಿದ್ದ ಕೆನಡಾಆಲ್ಬರ್ಟಾದಲ್ಲಿನ ವಾಬಾಮುನ್‌ ಸರೋವರವು, ಈಗ, ಸಂಚಯ/ಸಂಚಿತ ಮಣ್ಣು ಹಾಗೂ ಮೀನುಗಳಲ್ಲಿ ಅಸ್ವೀಕಾರಾರ್ಹ ಮಟ್ಟದ ಭಾರಲೋಹಗಳನ್ನು ಹೊಂದಿದೆ.
  • ತೀವ್ರ ಹಾಗೂ ದೀರ್ಘಕಾಲೀನ ಮಾಲಿನ್ಯ ಚಟುವಟಿಕೆಗಳು ದಕ್ಷಿಣ ಕ್ಯಾಲಿಫೋರ್ನಿಯಾದ ಕೆಲ್ಪ್‌ ಅರಣ್ಯಗಳ ಮೇಲೆ ಪ್ರಭಾವ ಬೀರಿದ್ದು, ಪ್ರಭಾವದ ತೀಕ್ಷ್ಣತೆಯು ಕಲ್ಮಶಗಳ ಗುಣಗಳು ಹಾಗೂ ಒಡ್ಡಣೆಯ ಕಾಲಗಳೆರಡರ ಮೇಲೂ ಆಧಾರಿತವಾಗಿದೆ.[೬೩][೬೪][೬೫][೬೬][೬೭]
  • ಆಹಾರ ಸರಪಣಿಯಲ್ಲಿನ ತಮ್ಮ ಮೇಲಿನ ಸ್ಥಾನ ಹಾಗೂ ತತ್ಸಂಬಂಧಿ ಆಹಾರದ ಮೂಲಕ ಪಡೆಯುವ ಭಾರಲೋಹಗಳ ಶೇಖರಣೆಯಿಂದಾಗಿ ಬ್ಲೂಫಿನ್‌ ಹಾಗೂ ಅಲ್ಬಕೋರ್‌ ಮೀನುಗಳಂತಹಾ ದೊಡ್ಡ ತಳಿಗಳಲ್ಲಿ ಪಾದರಸದ ಮಟ್ಟವು ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮವಾಗಿ, 2004ರ ಮಾರ್ಚ್‌ನಲ್ಲಿ ಯುನೈಟೆಡ್‌ ಸ್ಟೇಟ್ಸ್‌FDA ಸಂಸ್ಥೆಯು ಗರ್ಭಿಣಿ ಮಹಿಳೆಯರು, ಬಾಣಂತಿಯರು ಹಾಗೂ ಮಕ್ಕಳು ಟ್ಯೂನ ಮೀನು ಹಾಗೂ ಇನ್ನಿತರ ವಿಧಗಳ ಪರಭಕ್ಷಕ ಮೀನುಗಳ ಸೇವನೆಯನ್ನು ನಿಯಂತ್ರಣ ಶಿಫಾರಸನ್ನು ಒಳಗೊಂಡ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿತು.[೬೮]
  • ಕೆಲ ಚಿಪ್ಪುಮೀನು ಹಾಗೂ ಏಡಿಗಳು ತಮ್ಮ ಅಂಗಾಂಶಗಳಲ್ಲಿ ಭಾರಲೋಹಗಳು ಅಥವಾ ಜೀವಾಣು ವಿಷಗಳನ್ನು ಇಟ್ಟುಕೊಂಡೂ ಕಲುಷಿತ ಪರಿಸರದಲ್ಲಿ ಬದುಕಿರಬಲ್ಲವು. ಉದಾಹರಣೆಗೆ, ತ್ಯಾಜ್ಯ ಏಡಿಗಳು ಕಲುಷಿತಗೊಂಡ ನೀರೂ ಸೇರಿದಂತೆ ಬಹಳವೇ ಬದಲಿಸಿದ ಜಲ ವಾಸಸ್ಥಾನಗಳಲ್ಲಿ ಬದುಕುಳಿವ ಅಸಾಧಾರಣ ಸಾಮರ್ಥ್ಯ ಹೊಂದಿವೆ.[೬೯] ಅವುಗಳನ್ನು ಆಹಾರವನ್ನಾಗಿ ಬಳಸಬೇಕೆಂದರೆ ಅಂತಹಾ ತಳಿಗಳ ಸಾಕಾಣಿಕೆ ಹಾಗೂ ಕೃಷಿಯಲ್ಲಿ ಕಟ್ಟೆಚ್ಚರ ವಹಿಸಬೇಕಿರುತ್ತದೆ.[೭೦][೭೧]
  • ಕ್ರಿಮಿನಾಶಕಗಳ ಕೊಚ್ಚಿಹೋಗುವಿಕೆಯು ಮೀನಿನ ತಳಿಗಳ ಲಿಂಗವನ್ನು ತಳಿಮೂಲದಲ್ಲಿಯೇ ಗಂಡು ಮೀನನ್ನು ಹೆಣ್ಣನ್ನಾಗಿ ಪರಿವರ್ತಿಸಬಲ್ಲದು.[೭೨]
  • ಭಾರಲೋಹಗಳು ಪರಿಸರವನ್ನು ಗಲಿಷಿಯನ್‌ ಕರಾವಳಿಯಲ್ಲಿನ ಪ್ರೆಸ್ಟೀಜ್‌ ತೈಲ ಸೋರಿಕೆಯಂತಹಾ ತೈಲ ಸೋರಿಕೆಗಳ ಮೂಲಕ ಅಥವಾ ಇತರೆ ನೈಸರ್ಗಿಕ ಅಥವಾ ಮಾನವಜನ್ಯ ಮೂಲಗಳಿಂದ ಪ್ರವೇಶಿಸುತ್ತವೆ.[೭೩]
  • 2005ರಲ್ಲಿ, ಇಟಾಲಿಯನ್‌ ಮಾಫಿಯಾ ಸಂಸ್ಥೆಯಾದ 'ಎನ್‌ಡ್ರನ್‌ಘೆಟಾ, ವಿಷಕಾರಿ ತ್ಯಾಜ್ಯಗಳನ್ನು ತುಂಬಿದ್ದ, ಬಹುತೇಕ ವಿಕಿರಣಯುಕ್ತವಾಗಿದ್ದ ಕನಿಷ್ಠ 30 ಹಡಗುಗಳನ್ನು ಮುಳುಗಿಸಿದ ಆರೋಪ ಹೊತ್ತಿದೆ. ಇದು ವಿಕಿರಣಯುಕ್ತ ತ್ಯಾಜ್ಯ ಹೊರಹಾಕುವಿಕೆಯ ದಂಧೆಗಳ ಮೇಲೆ ವ್ಯಾಪಕ ತನಿಖೆಗಳು ನಡೆಯಲು ಕಾರಣವಾಯಿತು.[೭೪]
  • ವಿಶ್ವ ಸಮರ IIರ ಕೊನೆಯಿಂದ, ಸೋವಿಯೆತ್‌ ಒಕ್ಕೂಟ, ಯುನೈಟೆಡ್‌ ಕಿಂಗ್‌ಡಮ್‌, ಯುನೈಟೆಡ್‌ ಸ್ಟೇಟ್ಸ್‌, ಹಾಗೂ ಜರ್ಮನಿಗಳೂ ಸೇರಿದಂತೆ ಅನೇಕ ರಾಷ್ಟ್ರಗಳು, ಪರಿಸರ ಮಾಲಿನ್ಯದ ಆತಂಕವನ್ನು ಹೆಚ್ಚಿಸುವಂತೆ ಬಾಲ್ಟಿಕ್‌ ಸಮುದ್ರದಲ್ಲಿ ರಾಸಾಯನಿಕ ಅಸ್ತ್ರಗಳನ್ನು ವಿಲೇವಾರಿ ಮಾಡಿವೆ.[೭೫][೭೬]

ಸದ್ದು/ಗದ್ದಲ ಮಾಲಿನ್ಯ[ಬದಲಾಯಿಸಿ]

ಸಾಗರ ಸಂಬಂಧಿ ಜೀವಿಗಳು ಚಲಿಸುವ ಹಡಗುಗಳು, ತೈಲ ಹೊರತೆಗೆಯುವಿಕೆ, ಭೂಕಂಪ ಸಮೀಕ್ಷೆ ಹಾಗೂ ನೌಕಾದಳೀಯ ಸಕ್ರಿಯ ಜಲಾಂತರ ಶಬ್ದಶೋಧಕದಂತಹಾ ಮೂಲಗಳಿಂದ ಸದ್ದು/ಗದ್ದಲ ಅಥವಾ ಶಬ್ದ ಮಾಲಿನ್ಯಕ್ಕೆ ಈಡಾಗಬಹುದು. ವಾತಾವರಣಕ್ಕಿಂತ ಸಮುದ್ರದಲ್ಲಿ ಹೆಚ್ಚು ವೇಗವಾಗಿ ಹಾಗೂ ಹೆಚ್ಚು ದೂರದವರೆಗೆ ಶಬ್ದವು ಚಲಿಸಬಲ್ಲದು. ತಿಮಿವರ್ಗದ ಪ್ರಾಣಿಗಳಂತಹಾ ಸಾಗರ ಸಂಬಂಧಿ ಪ್ರಾಣಿಗಳು, ಅನೇಕ ವೇಳೆ ದುರ್ಬಲ ದೃಷ್ಟಿಯನ್ನು ಹೊಂದಿದ್ದು ಬಹುಪಾಲು ಶ್ರವಣಾಧಾರಿತ ಮಾಹಿತಿ ನಿರೂಪಿತ ವಿಶ್ವದಲ್ಲಿ ಜೀವಿಸುತ್ತವೆ. ಕತ್ತಲ ಪ್ರಪಂಚದಲ್ಲಿ ವಾಸಿಸುವ ಅನೇಕ ಆಳಸಮುದ್ರದ ಮೀನುಗಳಿಗೂ ಇದು ಅನ್ವಯಿಸುತ್ತದೆ.[೭೭] 1950ರಿಂದ 1975ರ ನಡುವೆ, ಸಾಗರದಲ್ಲಿನ ಪರಿವೇಷ್ಠಿತ ಸದ್ದು/ಗದ್ದಲವು ಸುಮಾರು ಹತ್ತು ಡೆಸಿಬೆಲ್‌ಗಳಷ್ಟು ಹೆಚ್ಚಿದೆ (ಅಂದರೆ ಹತ್ತುಪಟ್ಟು ಹೆಚ್ಚಳ).[೭೮]

ಸದ್ದು/ಗದ್ದಲವು ತಳಿಗಳು ಲಾಂಬಾರ್ಡ್‌ ಶಾಬ್ದಿಕ ಪ್ರತಿಕ್ರಿಯೆ ಎಂದು ಕರೆಯಲಾಗುವ ಏರುದನಿಯಲ್ಲಿ ಸಂವಹನ ನಡೆಸುವಂತೆ ಕೂಡಾ ಮಾಡುತ್ತದೆ.[೭೯] ವೇಲ್‌ಗಳ ಗಾಯನಗಳು ಜಲಾಂತರ್ಗಾಮಿ-ಪ್ರೇಷಕಗಳು ಚಾಲನೆಯಲ್ಲಿದ್ದಾಗ ದೀರ್ಘವಾಗಿರುತ್ತವೆ.[೮೦] ಜೀವಿಗಳು ಸಾಕಷ್ಟು ಏರುದನಿಯಲ್ಲಿ "ಮಾತಾಡದಿದ್ದರೆ" ಮಾನವಜನ್ಯ ಶಬ್ದಗಳು ಅವುಗಳ ದನಿಯನ್ನು ಮರೆಸಬಲ್ಲವು. ಈ ಕೇಳದ ಶಬ್ದಗಳು ಬೇಟೆ ಪತ್ತೆಯಾದ ಅಥವಾ ಬಲೆ-ಗುಳ್ಳೆಗಳೇಳುವಿಕೆಯ ತಯಾರಿಕೆಯ ಎಚ್ಚರಿಕೆಗಳಿರಬಹುದು. ಒಂದು ತಳಿಯು ಏರುದನಿಯಲ್ಲಿ ಮಾತಾಡತೊಡಗಿದಾಗ ಇತರೆ ತಳಿಗಳ ದನಿಗಳನ್ನು ಅಡಗಿಸುವುದರಿಂದ, ಅಂತಿಮವಾಗಿ ಇಡೀ ಪರಿಸರ ವ್ಯವಸ್ಥೆಯು ಏರುದನಿಯಲ್ಲಿ ಮಾತಾಡುವಂತೆ ಆಗುತ್ತದೆ.[೮೧]

ಸಾಗರಶಾಸ್ತ್ರಜ್ಞೆ ಸಿಲ್ವಿಯಾ ಅರ್ಲೇಯವರ ಪ್ರಕಾರ, "ಸಮುದ್ರದೊಳಗಿನ ಸದ್ದು/ಗದ್ದಲ ಮಾಲಿನ್ಯವು ಸಾವಿರ ಪ್ರಾಣಿಗಳ ಹಿಂಡಿನ ಸಾವಿನಂತೆ. ಯಾವುದೇ ಶಬ್ದವು ತನ್ನಿಂತಾನೇ ಆತಂಕಿತಗೊಳಿಸುವಂತಹುದಲ್ಲ, ಆದರೆ ಒಟ್ಟಾರೆಯಾಗಿ ಗಮನಿಸಿದಾಗ ಹಡಗುಗಳ ಸಮೂಹದ, ಭೂಕಂಪನ ಸಮೀಕ್ಷೆಗಳ, ಹಾಗೂ ಸೇನಾ ಚಟುವಟಿಕೆಗಳ ಸದ್ದು/ಗದ್ದಲಗಳು ಕೇವಲ 50 ವರ್ಷಗಳ ಹಿಂದೆ ಇದ್ದ ಪರಿಸರಕ್ಕಿಂತ ವಿಭಿನ್ನವಾದದನ್ನು ರಚಿಸುತ್ತಿದೆ. ಅಷ್ಟು ಹೆಚ್ಚಿನ ಮಟ್ಟದ ಸದ್ದು/ಗದ್ದಲ ಸಮುದ್ರದಲ್ಲಿನ ಜೀವಸಂಕುಲದ ಮೇಲೆ ವ್ಯಾಪಕವಾದ ದುರ್ಭರ ಪ್ರಭಾವಗಳನ್ನುಂಟು ಮಾಡುವುದು ನಿಶ್ಚಿತ."[೮೨]

ಹೊಂದಿಕೊಳ್ಳುವಿಕೆ ಹಾಗೂ ಶಮನ[ಬದಲಾಯಿಸಿ]

ತೀರವನ್ನು ಕಲುಷಿತಗೊಳಿಸುತ್ತಿರುವ ವಾಯುದ್ರವ/ಏರೋಸಾಲ್‌ ಕ್ಯಾನ್‌‌.

ಬಹುತೇಕ ಮಾನವಜನ್ಯ ಮಾಲಿನ್ಯತೆಯು ಸಾಗರಗಳಿಗೆ ಸೇರುತ್ತದೆ. ಜಾರ್ನ್‌ ಜೆನ್‌ಸೆನ್‌ (2003) ತನ್ನ ಲೇಖನದಲ್ಲಿ ಸೂಚಿಸಿದಂತೆ, “ಮಾನವಜನ್ಯ ಮಾಲಿನ್ಯವು ಜೀವವೈವಿಧ್ಯತೆ ಹಾಗೂ ಸಾಗರ ಸಂಬಂಧಿ ಪರಿಸರ ವ್ಯವಸ್ಥೆಗಳ ಉತ್ಪಾದಕತೆಯನ್ನು ಕಡಿಮೆಗೊಳಿಸಿ, ಮಾನವನಿಗೆ ಬೇಕಾದ ಸಾಗರ ಸಂಬಂಧಿ ಆಹಾರ ಸಂಪನ್ಮೂಲಗಳ ಇಳಿಕೆ ಹಾಗೂ ನಾಶಕ್ಕೆ ಕಾರಣವಾಗಬಹುದು” (p. A198). ಈ ಮಾಲಿನ್ಯದ ಒಟ್ಟಾರೆ ಮಟ್ಟವನ್ನು ಮಿತಿಗೊಳಿಸಲು ಎರಡು ದಾರಿಗಳಿವೆ : ಒಂದು ಜನಸಂಖ್ಯೆಯನ್ನು ಕಡಿಮೆಗೊಳಿಸುವುದು ಅಥವಾ ಸಾಧಾರಣ ಮಾನವ ಮೂಡಿಸುವ ಪರಿಸರದ ಮೇಲಿನ ಹೆಜ್ಜೆಗುರುತುಗಳನ್ನು ಕಡಿಮೆಗೊಳಿಸಲು ದಾರಿ ಕಂಡುಹಿಡಿಯುವುದು. ಎರಡನೇ ದಾರಿಯನ್ನು ಅಳವಡಿಸಿಕೊಳ್ಳದೇ ಹೋದರೆ ಮೊದಲ ದಾರಿಯನ್ನು ವಿಶ್ವದ, ಪರಿಸರ ವ್ಯವಸ್ಥೆಗಳ ಮುಗ್ಗರಿಸುವಿಕೆ ಎಂಬಂತೆ ಅನುಭವಿಸಬೇಕಾಗಬಹುದು.

ಮಾನವನಿಗೆ ಇರುವ ಎರಡನೇ ದಾರಿಯೆಂದರೆ, ವ್ಯಕ್ತಿಗತವಾಗಿ ಕಡಿಮೆ ಮಾಲಿನ್ಯ ಮಾಡುವುದು. ಹಾಗೆ ಮಾಡಲು ಸಾಮಾಜಿಕ ಹಾಗೂ ರಾಜಕೀಯ ಇಚ್ಛಾಶಕ್ತಿಗಳು ಅಗತ್ಯವಿದ್ದು, ಹೆಚ್ಚು ಹೆಚ್ಚು ಜನಗಳು ಪರಿಸರವನ್ನು ಗೌರವಿಸಿ ಅದರ ದುರ್ಬಳಕೆ ಆಗದಿರುವಂತೆ ತ್ಯಾಜ್ಯವನ್ನು ಕಡಿಮೆ ಮಾಡುವಂತಹಾ ಅರಿವಿನ ಬದಲಾವಣೆಯು ಅಗತ್ಯವಿದೆ. ಕಾರ್ಯಾಚರಣೆಯ ಮಟ್ಟದಲ್ಲಿ ನಿಯಂತ್ರಣಗಳು ಹಾಗೂ ಅಂತರರಾಷ್ಟ್ರೀಯ ಸರ್ಕಾರಗಳ ಪಾಲ್ಗೊಳ್ಳುವಿಕೆಯು ಅಗತ್ಯವಾಗಿದೆ. ಮಾಲಿನ್ಯವು ಅಂತರರಾಷ್ಟ್ರೀಯ ಮಿತಿಗಳನ್ನು ಮೀರಿ ಹರಡುವುದರಿಂದ ನಿಯಂತ್ರಣಗಳನ್ನು ರಚಿಸಲು ಹಾಗೂ ವಿಧಿಸಲು ಕಷ್ಟದಾಯಕವಾದ್ದರಿಂದ ಸಾಗರ ಮಾಲಿನ್ಯವನ್ನು ಅನೇಕವೇಳೆ ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತದೆ.

ಸಾಗರ ಮಾಲಿನ್ಯವನ್ನು ಕಡಿಮೆ ಮಾಡಲು ಬಹುಶಃ ಅತ್ಯಂತ ಪ್ರಮುಖ ಯುಕ್ತಿಯೆಂದರೆ ಶಿಕ್ಷಣ/ಅರಿವು ಮೂಡಿಸುವಿಕೆ. ಬಹಳಷ್ಟು ಜನರಿಗೆ ಸಾಗರ ಮಾಲಿನ್ಯದ ಮೂಲಗಳು ಹಾಗೂ ಅದರ ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವಿಲ್ಲ ಹಾಗಾಗಿ ಅದನ್ನು ಬಗೆಹರಿಸಲು ಅಲ್ಪ ಪ್ರಯತ್ನಗಳಷ್ಟೇ ಸಾಗಿವೆ. ಜನಬಾಹುಳ್ಯಕ್ಕೆ ಎಲ್ಲಾ ವಿಚಾರಗಳ ಬಗ್ಗೆ ಅರಿವು ಮೂಡಿಸಬೇಕೆಂದರೆ ಸಮಸ್ಯೆಯ ಸಂಪೂರ್ಣ ವಿವರಗಳನ್ನು ತಿಳಿಯುವ ಸಂಶೋಧನೆಗಳು ನಡೆಯಬೇಕು. ನಂತರ ಈ ಮಾಹಿತಿಯನ್ನು ಬಹಿರಂಗಗೊಳಿಸಬೇಕು.

ಡಾವೋಜಿ ಹಾಗೂ ಡಾಗ್‌'ರ ಸಂಶೋಧನೆಯಲ್ಲಿ ವ್ಯಕ್ತಪಡಿಸಿದ ಹಾಗೆ,[೮೩] ಚೀನಿಯರಲ್ಲಿ ಪರಿಸರ ವಿವೇಚನೆ ಇಲ್ಲದಿರುವುದಕ್ಕೆ ಪ್ರಮುಖ ಕಾರಣವೆಂದರೆ ಸಾರ್ವಜನಿಕ ಅರಿವು ಇಲ್ಲದಿರುವುದು ಹಾಗಾಗಿಯೇ ಅದನ್ನು ಮೊದಲು ಮೂಡಿಸಬೇಕಾಗಿದೆ. ಅದೇ ತರಹ, ಆಳವಾದ ಸಂಶೋಧನೆಗಳ ಮೇಲೆ ಆಧಾರಿತವಾಗಿ ನಿಯಂತ್ರಣಗಳನ್ನು ರೂಪಿಸಿ ಪಾಲಿಸಬೇಕು. ಕ್ಯಾಲಿಫೋರ್ನಿಯಾದಲ್ಲಿ, ಅಂತಹಾ ನಿಯಂತ್ರಣಗಳನ್ನು ಈಗಾಗಲೇ ಕೃಷಿಯ ಕೊಚ್ಚಿಹೋಗುವಿಕೆಯಿಂದ ಕ್ಯಾಲಿಫೋರ್ನಿಯಾದ ಕರಾವಳಿ ನೀರನ್ನು ರಕ್ಷಿಸಲು ನಿಗದಿಪಡಿಸಲಾಗಿದೆ. ಅನೇಕ ಐಚ್ಛಿಕ/ಸ್ವಯಂಪ್ರೇರಿತ ಯೋಜನೆಗಳು ಹಾಗೂ ಕ್ಯಾಲಿಫೋರ್ನಿಯಾ ಜಲ ಸಂಹಿತೆಯೂ ಇದರಲ್ಲಿ ಒಳಗೊಂಡಿದೆ. ಅದೇ ರೀತಿ ಭಾರತದಲ್ಲಿ, ಸಾಗರ ಮಾಲಿನ್ಯವನ್ನು ಕಡಿಮೆಗೊಳಿಸಲು ಸಹಾಯವಾಗುವಂತೆ ಅನೇಕ ತಂತ್ರಗಳು ಬಳಕೆಯಲ್ಲಿದ್ದರೂ, ಅವು ಗಮನಾರ್ಹವಾಗಿ ಇದನ್ನು ಗುರಿಯಾಗಿ ಹೊಂದಿಲ್ಲ. ಭಾರತದ ಚೆನ್ನೈ ನಗರದಲ್ಲಿ ಒಳಚರಂಡಿ ನೀರನ್ನು ಮತ್ತಷ್ಟು ಮುಕ್ತ ಹರಿವಿನ ನೀರಿಗೆ ಹರಿಬಿಡಲಾಗುತ್ತಿದೆ. ಸಂಗ್ರಹವಾದ ತ್ಯಾಜ್ಯದ ಬೃಹತ್‌ ರಾಶಿಯ ಕಾರಣದಿಂದಾಗಿ, ಅದನ್ನು ತಿಳಿಗೊಳಿಸಲು ಸಾಗರ ಸಂಬಂಧಿ ಪರಿಸರ ವ್ಯವಸ್ಥೆಗಳಿಗೆ ಕಡಿಮೆ ಹಾನಿಕಾರಕವಿರುವಂತೆ ಮಾಲಿನ್ಯಕಾರಕಗಳನ್ನು ಚೆದುರಿಸುವಂತೆ ಮುಕ್ತ -ಸಾಗರವೇ ಅತ್ಯಂತ ಸೂಕ್ತವಾಗಿದೆ.

ನೋಡಿ[ಬದಲಾಯಿಸಿ]

ಇವನ್ನೂ ಗಮನಿಸಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

  1. ಹ್ಯಾಂಬ್ಲಿನ್‌‌, ಜಾಕೋಬ್‌‌ ಡಾರ್ವಿನ್‌ (2008) ಪಾಯ್ಸನ್‌‌ ಇನ್‌‌ ದ ವೆಲ್‌ : ರೇಡಿಯೋಆಕ್ಟೀವ್‌‌ ವೇಸ್ಟ್‌‌‌ಸ್‌‌ ಇನ್‌‌ ದ ಓಷನ್ಸ್‌‌‌ ಅಟ್‌‌ ದ ಡಾನ್‌‌ ಆಫ್‌‌ ದ ನ್ಯೂಕ್ಲಿಯರ್‌‌ ಏಜ್‌‌. ರುಟ್‌‌ಗರ್ಸ್‌‌‌‌ ವಿಶ್ವವಿದ್ಯಾಲಯ ಮುದ್ರಣಾಲಯ. ISBN 978-0-8135-4220-1
  2. Emma Young (2003). "Copper decimates coral reef spawning". Retrieved 26 August 2006.
  3. Environmental Protection Agency. "Liquid Assets 2000: Americans Pay for Dirty Water". Retrieved 2007-01-23.
  4. ವಾಷಿಂಗ್ಟನ್‌‌ ಪರಿಸರ ವಿಜ್ಞಾನ ಇಲಾಖೆ. “ಕಂಟ್ರೋಲ್‌ ಆಫ್‌‌ ಟಾಕ್ಸಿಕ್‌ ಕೆಮಿಕಲ್ಸ್‌‌ ಇನ್‌ ಪಡ್ಗೆಟ್‌ ಸೌಂಡ್‌, ಫೇಸ್‌ 2: ಡೆವೆಲಪ್‌ಮೆಂಟ್‌ ಆಫ್‌ ಸಿಂಪಲ್‌ ನ್ಯೂಮರಿಕಲ್‌ ಮಾಡೆಲ್ಸ್‌" Archived 2017-03-02 ವೇಬ್ಯಾಕ್ ಮೆಷಿನ್ ನಲ್ಲಿ., 2008
  5. ಪನೆಟ್ಟಾ, LE (ಅಧ್ಯಕ್ಷ) (2003) ಅಮೇರಿಕಾಸ್‌'‌ ಲಿವಿಂಗ್‌ ಓಷನ್ಸ್‌‌: ಚಾರ್ಟಿಂಗ್‌ ಎ ಕೋರ್ಸ್‌ ಫಾರ್‌ ಸೀ ಚೇಂಜ್‌ [ವಿದ್ಯುನ್ಮಾನ ಆವೃತ್ತಿ, CD] ಫ್ಯೂ ಸಾಗರಗಳ ಸಮಿತಿ.
  6. Janice Podsada (19 June 2001). "Lost Sea Cargo: Beach Bounty or Junk?". National Geographic News. Retrieved 2008-04-08.
  7. ೭.೦ ೭.೧ ಮೇಯ್ನೆಜ್‌, A. (2003) ಡೀಪ್‌ ಸೀ ಇನ್‌ವೇಷನ್‌‌: ದ ಇಂಪಾಕ್ಟ್‌ ಆಫ್‌‌ ಇನ್‌ವ್ಯಾಸಿವ್‌ ಸ್ಪೀಷಿಸ್‌ PBS: NOVA. ಪಡೆದಿದ್ದು ನವೆಂಬರ್‌ 26, 2009
  8. ಆಕ್ವಾಟಿಕ್‌ ಇನ್‌ವ್ಯಾಸಿವ್‌ ಸ್ಪೀಷಿಸ್‌. ಎ ಗೈಡ್‌ ಟು ಲೀಸ್ಟ್‌‌-ವಾಂಟೆಡ್‌ ಆಕ್ವಾಟಿಕ್‌ ಆರ್ಗ್ಯಾನಿಸಮ್ಸ್‌‌ ಆಫ್‌ ದ ಪೆಸಿಫಿಕ್‌ ನಾರ್ತ್‌ವೆಸ್ಟ್‌‌. 2001. ವಾಷಿಂಗ್ಟನ್‌ ವಿಶ್ವವಿದ್ಯಾಲಯ [೧] Archived 2008-07-25 ವೇಬ್ಯಾಕ್ ಮೆಷಿನ್ ನಲ್ಲಿ.
  9. Pimentel, D. (2005). "Update on the environmental and economic costs associated with alien-invasive species in the United States". Ecological Economics. 52: 273–288. {{cite journal}}: Unknown parameter |coauthors= ignored (|author= suggested) (help)
  10. ಹವಳದ ಅಳಿವಿಗೆ ಹಾಗೂ ಆಫ್ರಿಕಾದ ಧೂಳು: ಬಾರ್ಬಡೋಸ್‌‌ ಡಸ್ಟ್‌ ರೆಕಾರ್ಡ್‌ : 1965-1996 US ಭೂವೈಜ್ಞಾನಿಕ ಸಮೀಕ್ಷೆ. ಪಡೆದಿದ್ದು 10 ಡಿಸೆಂಬರ್‌ 2009.
  11. ಡ್ಯೂಸ್‌, R.A., ಉನ್ನಿ, C.K., ರೇ, B.J., ಪ್ರಾಸ್ಪೆರೋ, J.M., ಮೆರ್ರಿಲ್, J.T. 1980. ಲಾಂಗ್‌-ರೇಂಜ್‌‌ ಅಟ್ಮಾಸ್‌ಫಿಯರಿಕ್‌ ಟ್ರಾನ್ಸ್‌ಪೋರ್ಟ್‌‌ ಆಫ್‌ ಸಾಯಿಲ್‌ ಡಸ್ಟ್‌‌ ಫ್ರಂ ಏಷ್ಯಾ ಟು ದ ಟ್ರಾಪಿಕಲ್‌ ನಾರ್ತ್‌ ಪೆಸಿಫಿಕ್‌ :ಟೆಂಪೋರಲ್‌ ವೇರಿಯೆಬಲಿಟಿ. ಸೈನ್ಸ್‌ 209:1522–1524.
  12. Usinfo.state.gov. ಅಧ್ಯಯನದ ಪ್ರಕಾರ ಆಫ್ರಿಕಾದ ಧೂಳು U.S.ನ ವಾತಾವರಣವನ್ನು ಬಾಧಿಸುತ್ತಿದೆ, ಕೆರಿಬಿಯನ್‌. Archived 2007-06-20 ವೇಬ್ಯಾಕ್ ಮೆಷಿನ್ ನಲ್ಲಿ. ಪಡೆದಿದ್ದು 10 ಜೂನ್ 2007ರಂದು.
  13. ಪ್ರಾಸ್ಪೆರೋ, J.M., ನೀಸ್‌‌, R.T. 1986. ಇಂಪ್ಯಾಕ್ಟ್‌ ಆಫ್‌ ದ ನಾರ್ತ್‌ ಆಫ್ರಿಕನ್‌ ಡ್ರಾಟ್‌ ಅಂಡ್‌ ಎಲ್‌ನಿನೋ ಆನ್‌ ಮಿನರಲ್‌ ಡಸ್ಟ್‌‌ ಇನ್‌ ದ ಬಾರ್ಬಡೋಸ್‌ ಟ್ರೇಡ್‌‌ ವಿಂಡ್ಸ್. ನೇಚರ್‌ 320:735–738.
  14. U. S. ಭೂವೈಜ್ಞಾನಿಕ ಸಮೀಕ್ಷೆ. ಹವಳದ ನಷ್ಟ ಪ್ರಮಾಣ ಹಾಗೂ ಆಫ್ರಿಕಾದ ಧೂಳು. Archived 2012-05-02 ವೇಬ್ಯಾಕ್ ಮೆಷಿನ್ ನಲ್ಲಿ. ಪಡೆದಿದ್ದು 10 ಜೂನ್ 2007ರಂದು.
  15. ಡಾನಿ, S. C. (2006) "ದ ಡೇಂಜರ್ಸ್‌ ಆಫ್‌ ಓಷನ್‌ ಆಸಿಡಿಫಿಕೇಷನ್‌" ಸೈಂಟಿಫಿಕ್‌ ಅಮೇರಿಕನ್‌ , ಮಾರ್ಚ್‌ 2006.
  16. ಚೀಯುಂಗ್‌, W.W.L., et al. (2009) "ರೀಡಿಸ್ಟ್ರಿಬ್ಯೂಷನ್‌ ಆಫ್‌‌ ಫಿಶ್‌‌ ಕ್ಯಾಚ್‌ ಬೈ ಕ್ಲೈಮೇಟ್‌ ಚೇಂಜ್‌‌. Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ.ಎ ಸಮ್ಮರಿ ಆಫ್‌ ನ್ಯೂ ಸೈಂಟಿಫಿಕ್‌ ಅನಾಲಿಸಿಸ್‌‌ Archived 2011-07-26 ವೇಬ್ಯಾಕ್ ಮೆಷಿನ್ ನಲ್ಲಿ." ಫ್ಯೂ ಓಷನ್‌ ಸೈನ್ಸ್‌‌ ಸರಣಿ. Oct 2009.
  17. PACFA Archived 2009-12-15 ವೇಬ್ಯಾಕ್ ಮೆಷಿನ್ ನಲ್ಲಿ. (2009) ಬದಲಾಗುತ್ತಿರುವ ಹವಾಮಾನದಲ್ಲಿ ಮೀನುಗಾರಿಕೆ ಹಾಗೂ ಜಲಚರ ಸಾಕಣೆ
  18. ೧೮.೦ ೧೮.೧ ೧೮.೨ ೧೮.೩ ೧೮.೪ ಆಹ್ನರ್ಟ್‌, A., & ಬಾರೋಸ್ಕಿ, C. (2000). ಎನ್‌ವಿರಾನ್‌ಮೆಂಟಲ್‌ ರಿಸ್ಕ್‌ ಆಸೆಸ್‌ಮೆಂಟ್‌ ಆಫ್‌ ಆಂಥ್ರೋಪೋಜೆನಿಕ್‌ ಆಕ್ಟಿವಿಟಿ ಇನ್‌ ದ ಡೀಪ್‌ ಸೀ. ಜರ್ನಲ್‌ ಆಫ್‌ ಆಕ್ವಾಟಿಕ್‌ ಇಕೋಸಿಸ್ಟಂ ಸ್ಟ್ರೆಸ್‌‌ & ರಿಕವರಿ, 7(4), 299. ಅಕಾಡೆಮಿಕ್‌ ಸರ್ಚ್‌‌ ಕಂಪ್ಲೀಟ್‌ ದತ್ತಸಂಚಯದಿಂದ ಪಡೆದಿದ್ದು . http://web.ebscohost.com/ehost/pdf?vid=5&hid=2&sid=4b3a30cd-c7ec-4838-ba3c-48ce12f26813%40sessionmgr12
  19. ಹಾಲ್ಫರ್‌, ಜಾಚೆನ್‌ ಹಾಗೂ ರಾಡ್ನಿ M. ಫ್ಯುಜಿತಾ. 2007. "ಡೇಂಜರ್‌ ಆಫ್‌ ಡೀಪ್‌-ಸೀ ಮೈನಿಂಗ್‌." ಸೈನ್ಸ್‌ 316, no. 5827: 987. ಅಕಾಡೆಮಿಕ್‌ ಸರ್ಚ್‌‌ ಕಂಪ್ಲೀಟ್‌ , EBSCOhost (ಪಡೆದಿದ್ದು ಜನವರಿ 19, 2010) <http://www.sciencemag.org/cgi/content/full/316/5827/987>
  20. ಗ್ಲಾಸ್‌ಬಿ, G P. "ಲೆಸನ್ಸ್‌‌ ಲರ್ನ್‌ಡ್‌‌ ಫ್ರಂ ಡೀಪ್‌-ಸೀ ಮೈನಿಂಗ್‌." ಸೈನ್ಸ್‌‌ ನಿಯತಕಾಲಿಕೆ 28 ಜುಲೈ 2000: 551-53. ಜಾಲ. 20 Jan. 2010. <http://www.sciencemag.org/cgi/content/full/289/5479/551#ref3>
  21. ಹಾಲ್ಫರ್‌, ಜಾಚೆನ್‌ ಹಾಗೂ ರಾಡ್ನಿ M. ಫ್ಯುಜಿತಾ. 2007. "ಡೇಂಜರ್‌ ಆಫ್‌ ಡೀಪ್‌-ಸೀ ಮೈನಿಂಗ್‌." ಸೈನ್ಸ್‌ 316, no. 5827: 987. ಅಕಾಡೆಮಿಕ್‌ ಸರ್ಚ್‌‌ ಕಂಪ್ಲೀಟ್‌ , EBSCOhost (ಪಡೆದಿದ್ದು ಜನವರಿ 19, 2010) <http://www.sciencemag.org/cgi/content/full/316/5827/987>
  22. ಶರ್ಮಾ, R. (2005). ಡೀಪ್‌-ಸೀ ಇಂಪ್ಯಾಕ್ಟ್‌ ಎಕ್ಸ್‌ಪೆರಿಮೆಂಟ್ಸ್‌ ಅಂಡ್‌ ದೇಯ್ರ್‌/ದೇರ್‌ ಫ್ಯೂಚರ್‌ ರಿಕ್ವೈರ್‌ಮೆಂಟ್ಸ್‌. ಮೆರೀನ್‌ ಜಿಯೋರಿಸೋರ್ಸಸ್‌ & ಜಿಯೋಟೆಕ್ನಾಲಜಿ, 23(4), 331-338. doi:10.1080/10641190500446698. <http://web.ebscohost.com/ehost/pdf?vid=7&hid=13&sid=cd55f6a4-c7f2-45e4-a1da-60c85c9b866e%40sessionmgr10>
  23. ನಾಥ್‌, B., & ಶರ್ಮಾ, R. (2000). ಎನ್‌ವಿರಾನ್‌ಮೆಂಟ್‌ ಅಂಡ್‌ ಡೀಪ್‌-ಸೀ ಮೈನಿಂಗ್‌‌ : ಎ ಪರ್ಸ್‌ಪೆಕ್ಟಿವ್‌. ಮೆರೀನ್‌ ಜಿಯೋರಿಸೋರ್ಸಸ್‌ & ಜಿಯೋಟೆಕ್ನಾಲಜಿ, 18(3), 285-294. doi:10.1080/10641190051092993. http://web.ebscohost.com/ehost/detail?vid=5&hid=2&sid=13877386-132b-4b8c-a81d-787869ad02cc%40sessionmgr12&bdata=JnNpdGU9ZWhvc3QtbGl2ZQ%3d%3d#db=a9h&AN=4394513
  24. ನಾಥ್‌, B., & ಶರ್ಮಾ, R. (2000). ಎನ್‌ವಿರಾನ್‌ಮೆಂಟ್‌ ಅಂಡ್‌ ಡೀಪ್‌-ಸೀ ಮೈನಿಂಗ್‌‌ : ಎ ಪರ್ಸ್‌ಪೆಕ್ಟಿವ್‌. ಸಾಗರ ಸಂಬಂಧಿ ಮೆರೀನ್‌ ಜಿಯೋರಿಸೋರ್ಸಸ್‌ & ಜಿಯೋಟೆಕ್ನಾಲಜಿ, 18(3), 285-294. doi:10.1080/10641190051092993. http://web.ebscohost.com/ehost/detail?vid=5&hid=2&sid=13877386-132b-4b8c-a81d-787869ad02cc%40sessionmgr12&bdata=JnNpdGU9ZWhvc3QtbGl2ZQ%3d%3d#db=a9h&AN=4394513
  25. ವಿಶ್ವದಾದ್ಯಂತ ಹವಳದ ದಿಬ್ಬಗಳು Guardian.co.uk, 2 ಸೆಪ್ಟೆಂಬರ್‌ 2009.
  26. Orr, James C. (2005). "Anthropogenic ocean acidification over the twenty-first century and its impact on calcifying organisms" (PDF). Nature. 437 (7059): 681–686. doi:10.1038/nature04095. ISSN 0028-0836. Archived from the original (PDF) on 2008-06-25. Retrieved 2010-05-26. {{cite journal}}: Unknown parameter |coauthors= ignored (|author= suggested) (help)
  27. Key, R.M. (2004). "A global ocean carbon climatology: Results from GLODAP". Global Biogeochemical Cycles. 18: GB4031. doi:10.1029/2004GB002247. ISSN 0886-6236. {{cite journal}}: Unknown parameter |coauthors= ignored (|author= suggested) (help)
  28. ರೇವನ್, J. A. et al. (2005) ಓಷನ್‌ ಆಸಿಡಿಫಿಕೇಷನ್‌ ಡ್ಯೂ ಟು ಇನ್‌ಕ್ರೀಸಿಂಗ್‌ ಅಟ್‌ಮಾಸ್ಫಿಯರಿಕ್‌ ಕಾರ್ಬನ್‌‌ ಡೈಆಕ್ಸೈಡ್. Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. ರಾಯಲ್‌ ಸೊಸೈಟಿ, ಲಂಡನ್‌‌, UK.
  29. UNEP, FAO, IOC (2009) ಬ್ಲ್ಯೂ ಕಾರ್ಬನ್. Archived 2011-09-05 ವೇಬ್ಯಾಕ್ ಮೆಷಿನ್ ನಲ್ಲಿ.ದ ರೋಲ್‌ ಆಫ್‌ ಹೆಲ್ತಿ ಓಷನ್ಸ್‌ ಇನ್‌ ಬೈಂಡಿಂಗ್‌ ಕಾರ್ಬನ್‌ Archived 2011-09-05 ವೇಬ್ಯಾಕ್ ಮೆಷಿನ್ ನಲ್ಲಿ.
  30. ಮೊನಾಕೋ ಡಿಕ್ಲರೇಷನ್‌ Archived 2009-02-06 ವೇಬ್ಯಾಕ್ ಮೆಷಿನ್ ನಲ್ಲಿ. ಅಂಡ್‌ ಓಷನ್‌ ಆಸಿಡಿಫಿಕೇಷನ್‌ Archived 2010-09-23 ವೇಬ್ಯಾಕ್ ಮೆಷಿನ್ ನಲ್ಲಿ. A ಸಮ್ಮರಿ ಫಾರ್‌ ಪಾಲಿಸಿಮೇಕರ್ಸ್‌ ಫ್ರಂ ದ ಸೆಕೆಂಡ್‌ ಸಿಂಪೋಸಿಯಂ ಆನ್‌ ದ ಓಷನ್‌ ಇನ್‌ ಎ ಹೈ-CO2 ವರ್ಲ್ಡ್‌.] ಇಂಟರ್‌ಗವರ್ನಮೆಂಟಲ್‌ ಓಷನೋಗ್ರಫಿಕ್‌ ಕಮಿಷನ್‌ ಆಫ್‌ UNESCO, ಇಂಟರ್‌ನ್ಯಾಷನಲ್‌ ಜಿಯೋಸ್ಫಿಯರ್‌-ಬಯೋಸ್ಫಿಯರ್‌‌ ಪ್ರೋಗ್ರಾಮ್‌, ಮೆರೀನ್‌ ಎನ್‌ವಿರಾನ್‌ಮೆಂಟ್‌ ಲ್ಯಾಬೊರೇಟರೀಸ್‌ (MEL) ಆಫ್‌ ದ ಇಂಟರ್‌ನ್ಯಾಷನಲ್‌ ಅಟಾಮಿಕ್‌ ಎನರ್ಜಿ ಏಜೆನ್ಸಿ, ಸೈಂಟಿಫಿಕ್‌ ಕಮಿಟಿ ಆನ್‌ ಓಷನಿಕ್‌ ರಿಸರ್ಚ್‌. 2008.
  31. ಮನಾಡೋ ಓಷನ್‌ ಡಿಕ್ಲರೇಷನ್‌ Archived 2013-11-03 ವೇಬ್ಯಾಕ್ ಮೆಷಿನ್ ನಲ್ಲಿ. ವರ್ಲ್ಡ್‌ ಓಷನ್‌ ಕಾನ್‌ಫರೆನ್ಸ್‌‌ ಮಿನಿಸ್ಟೀರಿಯಲ್‌/ಹೈ ಲೆವೆಲ್‌ ಮೀಟಿಂಗ್‌. ಮನಾಡೋ , ಇಂಡೋನೇಷ್ಯಾ, 11-14 ಮೇ 2009.
  32. Feely, Richard (2008). "Evidence for Upwelling of Corrosive "Acidified" Seawater onto the Continental Shelf". Science. 10. {{cite journal}}: Unknown parameter |coauthors= ignored (|author= suggested) (help)
  33. ೩೩.೦ ೩೩.೧ Milkov, AV (2004). "Global estimates of hydrate-bound gas in marine sediments: how much is really out there?". Earth-Sci Rev. 66 (3–4): 183–197. doi:10.1016/j.earscirev.2003.11.002.
  34. ಸಾಗರಗಳು 361 ದಶಲಕ್ಷ sq kmಗಳನ್ನು ಆಕ್ರಮಿಸಿವೆ
  35. USGS ವರ್ಲ್ಡ್‌ ಎನರ್ಜಿ ಆಸೆಸ್‌ಮೆಂಟ್‌ ಟೀಂ, 2000. US ಜಿಯೋಲಾಜಿಕಲ್‌ ಸರ್ವೇ ವರ್ಲ್ಡ್‌ ಪೆಟ್ರೋಲಿಯಂ ಆಸೆಸ್‌ಮೆಂಟ್‌ 2000––ಡಿಸ್ಕ್ರಿಪ್ಷನ್‌ ಅಂಡ್‌ ರಿಸಲ್ಟ್ಸ್‌. USGS ಡಿಜಿಟಲ್‌ ಡಾಟಾ ಸೀರೀಸ್‌ DDS-60.
  36. ಗೆ/ಜೆರ್ಲ್ಯಾಚ್‌: ಓಷನ್‌ ಪೊಲ್ಯೂಷನ್‌, ಸ್ಪ್ರಿಂಗರ್‌, ಬರ್ಲಿನ್‌ (1975)
  37. ಸೆಲ್ಮನ್‌‌, ಮಿಂಡಿ (2007) ಯುಟ್ರೋಫಿಕೇಷನ್‌‌: ಆನ್‌ ಓವರ್‌ವ್ಯೂ ಆಫ್‌ ಸ್ಟೇಟಸ್‌‌, ಟ್ರೆಂಡ್ಸ್‌‌, ಪಾಲಿಸೀಸ್‌‌, ಅಂಡ್‌ ಸ್ಟ್ರಾಟೆಜೀಸ್. ವರ್ಲ್ಡ್‌ ರಿಸೋರ್ಸಸ್‌ ಇನ್‌ಸ್ಟಿಟ್ಯೂಟ್‌‌.
  38. "The Gulf of Mexico Dead Zone and Red Tides". Retrieved 2006-12-27.
  39. ಡ್ಯೂಸ್‌, R A ಹಾಗೂ 29 ಮಂದಿ ಇತರರು (2008) ಇಂಪ್ಯಾಕ್ಟ್ಸ್‌‌‌ ಆಫ್‌ ಅಟ್‌ಮಾಸ್ಫಿಯರಿಕ್‌ ಆಂಥ್ರೋಪೋಜೆನಿಕ್‌ ನೈಟ್ರೋಜೆನ್‌ ಆನ್‌ ದ ಓಪನ್‌ ಓಷನ್‌ ಸೈನ್ಸ್‌. Vol 320, pp 893–89
  40. ಸಾರಜನಕ ಸರಣಿಕ್ರಮದ ನಿರ್ವಹಣೆ ಯುರೇಕ ಎಚ್ಚರಿಕೆ, 2008.
  41. ೪೧.೦ ೪೧.೧ ೪೧.೨ Alan Weisman (2007). The World Without Us. St. Martin's Thomas Dunne Books. ISBN 0312347294.
  42. ೪೨.೦ ೪೨.೧ "Plastic Debris: from Rivers to Sea" (PDF). Algalita Marine Research Foundation. Archived from the original (PDF) on 2008-08-19. Retrieved 2008-05-29.
  43. "ರೀಸರ್ಚ್‌ | AMRF/ORV ಅಲ್‌ಗುಯಿಟಾ ರೀಸರ್ಚ್‌ ಪ್ರಾಜೆಕ್ಟ್ಸ್‌‌" Archived 2017-03-13 ವೇಬ್ಯಾಕ್ ಮೆಷಿನ್ ನಲ್ಲಿ. ಅಲ್‌ಗಲಿಟಾ ಮೆರೀನ್‌ ರೀಸರ್ಚ್‌ ಫೌಂಡೇಷನ್‌. ಮೆಕ್‌ಡೊನಾಲ್ಡ್‌ ಡಿಸೈನ್. ಪಡೆದಿದ್ದು 19 ಮೇ 2009
  44. UNEP (2005) ಮೆರೀನ್‌ ಲಿಟ್ಟರ್‌‌: ಆನ್‌ ಅನಾಲಿಟಿಕಲ್‌ ಓವರ್‌ವ್ಯೂ Archived 2007-07-17 at the Library of Congress
  45. "ಸಿಕ್ಸ್‌‌ ಪ್ಯಾಕ್‌ ರಿಂಗ್‌ಗಳು ಜೀವಸಂಕುಲಕ್ಕೆ ಅಪಾಯಕಾರಿ". Archived from the original on 2016-10-13. Retrieved 2010-05-26.
  46. ಲೂಸಿಯಾನಾ ಮೀನುಗಾರಿಕೆ - ದತ್ತಾಂಶ ವಿವರಗಳು
  47. "'Ghost fishing' killing seabirds". BBC News. 28 June 2007. Retrieved 2008-04-01.
  48. Kenneth R. Weiss (2 August 2006). "Plague of Plastic Chokes the Seas". Los Angeles Times. Retrieved 2008-04-01.
  49. Charles Moore (2003). "Across the Pacific Ocean, plastics, plastics, everywhere". Natural History. Archived from the original on 2005-12-30. Retrieved 2008-04-05. {{cite web}}: Unknown parameter |month= ignored (help)
  50. ಷೆವ್ಲಿ & ರೆಜಿಸ್ಟರ್‌‌, 2007, p. 3.
  51. Alan Weisman (Summer 2007). "Polymers Are Forever". Orion magazine. Archived from the original on 2014-11-02. Retrieved 2008-07-01.
  52. Thompson, Richard C. (7 May 2004), "Lost at Sea: Where Is All the Plastic?", Science, 304 (5672): 843, doi:10.1126/science.1094559, retrieved 2008-07-19 {{citation}}: More than one of |periodical= and |journal= specified (help)
  53. Moore, Charles; Moore, S. L.; Leecaster, M. K.; Weisberg, S. B. (4), "A Comparison of Plastic and Plankton in the North Pacific Central Gyre" (PDF), Marine Pollution Bulletin (published 2001-12-01), 42 (12): 1297–1300, doi:10.1016/S0025-326X(01)00114-X, archived from the original (PDF) on 2008-12-19 {{citation}}: Check date values in: |date= and |year= / |date= mismatch (help); More than one of |periodical= and |journal= specified (help)
  54. Moore, Charles (November 2003). "Across the Pacific Ocean, plastics, plastics, everywhere". Natural History Magazine. Archived from the original on 2005-12-30. Retrieved 2010-05-26.
  55. ೫೫.೦ ೫೫.೧ Moore, Charles (2002-10-02). "Great Pacific Garbage Patch". Santa Barbara News-Press. Archived from the original on 2015-09-12. Retrieved 2010-05-26. ಉಲ್ಲೇಖ ದೋಷ: Invalid <ref> tag; name "mindfully" defined multiple times with different content
  56. ೫೬.೦ ೫೬.೧ "Plastics and Marine Debris". Algalita Marine Research Foundation. 2006. Retrieved 2008-07-01.
  57. http://the.honoluluadvertiser.com/article/2005/Jan/17/ln/ln23p.html
  58. Chris Jordan (November 11, 2009). "Midway: Message from the Gyre". Retrieved 2009-11-13.
  59. http://news.bbc.co.uk/2/hi/talking_point/7318837.stm
  60. Rios, L.M. (2007). "Persistent organic pollutants carried by Synthetic polymers in the ocean environment". Marine Pollution Bulletin. 54: 1230–1237. doi:10.1016/j.marpolbul.2007.03.022. {{cite journal}}: Unknown parameter |coauthors= ignored (|author= suggested) (help)
  61. Tanabe, S. (2004). "PCDDs, PCDFs, and coplanar PCBs in albatross from the North Pacific and Southern Oceans: Levels, patterns, and toxicological implications". Environmental Science & Technology. 38: 403–413. doi:10.1021/es034966x. {{cite journal}}: Unknown parameter |coauthors= ignored (|author= suggested) (help)
  62. "ಇಂಡಿಜೀನಿಯಸ್‌ ಪೀಪಲ್ಸ್‌ ಆಫ್‌ ದ ರಷ್ಯನ್‌ ನಾರ್ತ್‌‌, ಸೈಬೀರಿಯಾ ಅಂಡ್‌ ಫಾರ್‌ ಈಸ್ಟ್‌‌‌ : ನಿವ್ಖ್" ರಷ್ಯನ್‌ ಶೀತವಲಯದ ಸ್ಥಳೀಯ ಜನರ ಬೆಂಬಲಕ್ಕೆ ಶೀತವಲಯದ ಜಾಲ ಇವರಿಂದ
  63. ಗ್ರಿಗ್‌‌, R.W. ಹಾಗೂ R.S. ಕಿವಾಲಾ. 1970. ಸಮ್‌ ಇಕೋಲಾಜಿಕಲ್‌ ಎಫೆಕ್ಟ್‌ಸ್‌ ಆಫ್‌‌ ಡಿಸ್‌ಚಾರ್ಜ್‌ಡ್‌ ವೇಸ್ಟ್‌ಸ್‌ ಮೆರೀನ್‌ ಲೈಫ್‌. ಕ್ಯಾಲಿಫೋರ್ನಿಯಾ ಡಿಪಾರ್ಟ್‌ಮೆಂಟ್‌ ಆಫ್‌ ಫಿಶ್‌‌ ಅಂಡ್‌ ಗೇಮ್‌ 56: 145-155.
  64. ಸ್ಟಲ್, J.K. 1989. ಕಂಟ್ಯಾಮಿನ್ಯಾಂಟ್ಸ್‌‌ ಇನ್‌ ಸೆಡಿಮೆಂಟ್ಸ್‌ ನಿಯರ್‌ ಎ ಮೇಜರ್‌ ಮೆರೀನ್‌ ಔಟ್‌ಫಾಲ್‌ : ಹಿಸ್ಟರಿ , ಎಫೆಕ್ಟ್ಸ್‌‌ ಅಂಡ್‌ ಫ್ಯೂಚರ್‌. OCEANS ’89 ಪ್ರೊಸೀಡಿಂಗ್ಸ್‌ 2: 481-484.
  65. ನಾರ್ತ್‌, W.J., D.E. ಜೇಮ್ಸ್‌‌ ಅಂಡ್‌‌ L.G. ಜೋನ್ಸ್. 1993. ಹಿಸ್ಟರಿ ಆಫ್‌ ಕೆಲ್ಪ್‌ ಬೆಡ್ಸ್‌ (ಮ್ಯಾಕ್ರೋಸಿಸ್ಟಿಸ್‌ ) ಇನ್‌ ಆರೇಂಜ್‌ ಅಂಡ್‌ ಸ್ಯಾನ್‌ ಡಿಯಾಗೋ ಕೌಂಟೀಸ್‌‌, ಕ್ಯಾಲಿಫೋರ್ನಿಯಾ. ಹೈಡ್ರೋಬಯಾಲಾಜಿಯಾ 260/261: 277-283.
  66. ಟೆಗ್ನರ್‌, M.J., P.K. ಡೇಟನ್‌, P.B. ಎಟ್‌ವರ್ಡ್ಸ್‌, K.L. ರೈಸರ್‌‌, D.B. ಚಾಡ್ವಿಕ್‌‌, T.A. ಡೀನ್‌‌ ಅಂಡ್‌ L. ಡೇಷರ್. 1995). ಎಫೆಕ್ಟ್ಸ್‌‌ ಆಫ್‌ ಎ ಲಾರ್ಜ್‌ ಸ್ಯೂಯೇಜ್‌ ಸ್ಪಿಲ್‌ ಆನ್‌ ಎ ಕೆಲ್ಪ್‌ ಫಾರೆಸ್ಟ್‌ ಕಮ್ಯುನಿಟಿ : ಕ್ಯಾಟಸ್ಟ್ರೊಫೆ ಆರ್‌ ಡಿಸ್ಟರ್ಬೆನ್ಸ್‌? ಮೆರೀನ್‌ ಎನ್‌ವಿರಾನ್‌ಮೆಂಟಲ್‌ ರೀಸರ್ಚ್‌ 40: 181-224.
  67. ಕಾರ್ಪೆಂಟರ್‌, S.R., R.F. ಕರಾಕೋ, D.F. ಕಾರ್ನೆಲ್‌‌, R.W. ಹೋವರ್ಥ್‌, A.N. ಷಾರ್ಪ್ಲೆ ಹಾಗೂ V.N. ಸ್ಮಿತ್‌‌. 1998. ನಾನ್‌ಪಾಯಿಂಟ್‌‌ ಪೊಲ್ಯೂಷನ್‌ ಆಫ್‌ ಸರ್ಫೇಸ್‌ ವಾಟರ್ಸ್‌ ವಿತ್‌‌ ಫಾಸ್ಫರಸ್‌ ಅಂಡ್‌ ನೈಟ್ರೋಜೆನ್‌. ಇಕಲಾಜಿಕಲ್ ಅಪ್ಲಿಕೇಷನ್ಸ್ 8:559-568.
  68. "What You Need to Know About Mercury in Fish and Shellfish". 2004-03. Retrieved 2007-05-19. {{cite web}}: Check date values in: |date= (help)
  69. Stephen Gollasch (2006-03-03). "Ecology of Eriocheir sinensis". Archived from the original on 2016-03-13. Retrieved 2010-05-26.
  70. Hui, Clifford A.; et al. (2005). "Mercury burdens in Chinese mitten crabs (Eriocheir sinensis) in three tributaries of southern San Francisco Bay, California, USA". Environmental Pollution. Elsevier. 133 (3): 481–487. doi:10.1016/j.envpol.2004.06.019. {{cite journal}}: |access-date= requires |url= (help); Cite has empty unknown parameter: |coauthors= (help); Explicit use of et al. in: |first= (help)
  71. Silvestre, F.; et al. (2004). "Uptake of cadmium through isolated perfused gills of the Chinese mitten crab, Eriocheir sinensis". Comparative Biochemistry and Physiology - Part A: Molecular & Integrative Physiology. Elsevier. 137 (1): 189–196. doi:10.1016/S1095-6433(03)00290-3. {{cite journal}}: |access-date= requires |url= (help); Check date values in: |accessdate= (help); Cite has empty unknown parameter: |coauthors= (help); Explicit use of et al. in: |first= (help)
  72. ಸೈನ್ಸ್‌‌ ನ್ಯೂಸ್‌‌. "DDT ಟ್ರೀಟ್‌ಮೆಂಟ್‌ ಟರ್ನ್ಸ್‌ ಮೇಲ್‌ ಫಿಷ್‌ ಇನ್‌ಟು ಮದರ್ಸ್‌." Archived 2012-09-26 ವೇಬ್ಯಾಕ್ ಮೆಷಿನ್ ನಲ್ಲಿ. 2000-02-05. (ಚಂದಾ ಮೂಲಕ ಮಾತ್ರ.)
  73. ಪೆರೆಜ್‌ -ಲೋಪೆಜ್‌ et al. (2006).
  74. (Italian) Parla un boss: Così lo Stato pagava la 'ndrangheta per smaltire i rifiuti tossici, ರಿಕಾರ್ಡೋ ಬೊಕ್ಕಾರಿಂದ, L’Eಸ್ಪ್ರೆಸ್ಸೋ, ಆಗಸ್ಟ್‌ 5, 2005
  75. ಕೆಮಿಕಲ್‌ ವೆಪನ್‌ ಟೈಂ ಬಾಂಬ್‌ ಟಿಕ್ಸ್‌ ಇನ್‌ ದ ಬಾಲ್ಟಿಕ್‌ ಸೀ ಡ್ಯೂಟ್ಸ್‌ಚೆ ವೆಲ್ಲೆ/ಡಚ್‌ ವೆಲ್ , 1 ಫೆಬ್ರವರಿ 2008.
  76. ಆಕ್ಟಿವಿಟೀಸ್‌ 2006: ಓವರ್‌ವ್ಯೂ ಬಾಲ್ಟಿಕ್‌ ಸೀ ಎನ್‌ವಿರಾನ್‌ಮೆಂಟ್‌ ಪ್ರೊಸೀಡಿಂಗ್ಸ್‌ No. 112. ಹೆಲ್ಸಿಂಕಿ ಸಮಿತಿ.
  77. ಸದ್ದು/ಗದ್ದಲ ಮಾಲಿನ್ಯ Archived 2016-12-07 ವೇಬ್ಯಾಕ್ ಮೆಷಿನ್ ನಲ್ಲಿ. Sea.org . ಪಡೆದದ್ದು 24 ಅಕ್ಟೋಬರ್‌ 2009.
  78. ರಾಸ್, (1993) ಆನ್‌ ಓಷನ್‌ ಅಂಡರ್‌ವಾಟರ್‌ ಆಂಬಿಯೆಂಟ್‌ ನಾಯ್ಸ್‌. ಇನ್‌ಸ್ಟಿಟ್ಯೂಟ್‌ ಆಫ್‌ ಅಕೌಸ್ಟಿಕ್ಸ್‌ ಬುಲೆಟಿನ್‌, St ಆಲ್ಬನ್ಸ್‌, ಹರ್ಟ್ಸ್‌‌‌, UK: ಇನ್‌ಸ್ಟಿಟ್ಯೂಟ್‌ ಆಫ್‌ ಅಕೌಸ್ಟಿಕ್ಸ್‌, 18.
  79. ಪದಕೋಶ Archived 2017-06-29 ವೇಬ್ಯಾಕ್ ಮೆಷಿನ್ ನಲ್ಲಿ. ಡಿಸ್ಕವರಿ ಆಫ್‌ ಸೌಂಡ್ಸ್‌‌ ಇನ್‌ ದ ಸೀ . ಪಡೆದದ್ದು 23 ಡಿಸೆಂಬರ್‌ 2009ರಂದು.
  80. ಫ್ರಿಸ್ಟ್ರಪ್‌ KM, ಹ್ಯಾಚ್‌ LT ಹಾಗೂ ಕ್ಲಾರ್ಕ್‌ CW (2003) ವೇರಿಯೇಷನ್‌ ಇನ್‌ ಹಂಪ್‌ಬ್ಯಾಕ್‌ ವೇಲ್‌ (ಮೆಗಾಪ್ಟೆರಾ ನೊವೇಂಗ್ಲಿಯೇ ) ಸಾಂಗ್‌ ಲೆಂತ್‌ ಇನ್‌ ರಿಲೇಷನ್‌ ಟು ಲೋ-ಫ್ರೀಕ್ವೆನ್ಸಿ ಸೌಂಡ್‌ ಬ್ರಾಡ್‌ಕಾಸ್ಟ್ಸ್‌ ಅಕೌಸ್ಟಿಕಲ್‌ ಸೊಸೈಟಿ ಆಫ್‌ ಅಮೇರಿಕಾ ಜರ್ನಲ್‌ , 113 (6) 3411-3424.
  81. ಎಫೆಕ್ಟ್ಸ್‌ ಆಫ್‌ ಸೌಂಡ್‌ ಆನ್‌ ಮೆರೀನ್‌ ಅನಿಮಲ್ಸ್‌ Archived 2010-01-13 ವೇಬ್ಯಾಕ್ ಮೆಷಿನ್ ನಲ್ಲಿ. ಡಿಸ್ಕವರಿ ಆಫ್‌ ಸೌಂಡ್ಸ್‌ ಇನ್‌ ದ ಸೀ . ಪಡೆದಿದ್ದು 23 ಡಿಸೆಂಬರ್‌ 2009ರಂದು.
  82. ನ್ಯಾಚುರಲ್‌ ರಿಸೋರ್ಸಸ್‌ ಡಿಫೆನ್ಸ್‌ ಕೌನ್ಸಿಲ್‌ ಪತ್ರಿಕಾ ಪ್ರಕಟಣೆ (1999) ಆಳದಲ್ಲಿ ಗದ್ದಲವುಂಟು ಮಾಡುವಿಕೆ: ಸೂಪರ್‌ಟ್ಯಾಂಕರ್‌ಗಳು, ಜಲಾಂತರ ಶಬ್ದಶೋಧಕ, ಹಾಗೂ ಸಾಗರತಳದ ಗದ್ದಲಗಳ ಏರಿಕೆ, ಕಾರ್ಯಕಾರಿ ಸಂಗ್ರಹವರದಿ. ನ್ಯೂಯಾರ್ಕ್‌, N.Y.: www.nrdc.org.
  83. ಡಾವೊಜಿ & ಡಾಗ್‌ (2004)

ಆಕರಗಳು[ಬದಲಾಯಿಸಿ]

  • ಆಹನ್‌, YH; ಹಾಂಗ್‌‌, GH; ನೀಲಮಣಿ, S; ಫಿಲಿಪ್‌, L ಹಾಗೂ ಷಣ್ಮುಗಂ, P (2006) ಆಸೆಸ್‌ಮೆಂಟ್‌ ಆಫ್‌ ಲೆವೆಲ್ಸ್‌‌ ಆಫ್‌‌ ಕೋಸ್ಟಲ್‌ ಮೆರೀನ್‌ ಪೊಲ್ಯೂಷನ್‌ ಆಫ್‌ ಚೆನ್ನೈ ಸಿಟಿ, ಸದರ್ನ್‌ ಇಂಡಿಯಾ. ವಾಟರ್‌ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌, 21(7), 1187-1206.
  • ಡಾವೊಜಿ, L ಹಾಗೂ ಡಾಗ್‌, D (2004) ಓಷನ್‌ ಪೊಲ್ಯೂಷನ್‌ ಫ್ರಂ ಲ್ಯಾಂಡ್‌-ಬೇಸ್‌ಡ್‌‌ ಸೋರ್ಸಸ್‌‌: ಈಸ್ಟ್‌‌ ಚೈನ್‌ ಸೀ. AMBIO – A ಜರ್ನಲ್‌ ಆಫ್‌ ದ ಹ್ಯೂಮನ್‌ ಎನ್‌ವಿರಾನ್‌ಮೆಂಟ್‌, 33(1/2), 107-113.
  • ಡೌರ್ಡ್‌, BM; ಪ್ರೆಸ್‌, D ಹಾಗೂ ಲಾಸ್‌ ಹ್ಯೂಯೆರ್ಟಸ್‌‌, M (2008) ಅಗ್ರಿಕಲ್ಚರಲ್‌ ನಾನ್‌-ಪಾಯಿಂಟ್‌ ಸೋರ್ಸಸ್‌ : ವಾಟರ್‌‌ ಪೊಲ್ಯೂಷನ್‌ ಪಾಲಿಸಿ : ದ ಕೇಸ್‌ ಆಫ್‌ ಕ್ಯಾಲಿಫೋರ್ನಿಯಾ’ಸ್‌‌ ಸೆಂಟ್ರಲ್‌ ಕೋಸ್ಟ್‌‌. ಅಗ್ರಿಕಲ್ಚರ್‌, ಇಕೋಸಿಸ್ಟಂಸ್‌‌ & ಎನ್‌ವಿರಾನ್‌ಮೆಂಟ್ , 128(3), 151-161.
  • ಲಾಸ್‌‌, ಎಡ್ವರ್ಡ್‌ A (2000) ಆಕ್ವಾಟಿಕ್‌ ಪೊಲ್ಯೂಷನ್‌ ಜಾನ್‌ ವಿಲೇ ಅಂಡ್‌ ಸನ್ಸ್‌‌. ISBN 1-58648-683-7
  • ಷೀವ್ಲಿ, SB ಹಾಗೂ ರೆಜಿಸ್ಟರ್, KM (2007) ಮೆರೀನ್‌ ಡೆಬ್ರಿಸ್‌ ಅಂಡ್‌‌ ಪ್ಲಾಸ್ಟಿಕ್ಸ್‌‌: ಎನ್‌ವಿರಾನ್‌ಮೆಂಟಲ್‌ ಕಾನ್ಸರ್ನ್ಸ್‌, ಸೋರ್ಸಸ್‌, ಇಂಪ್ಯಾಕ್ಟ್ಸ್‌‌ ಅಂಡ್‌ ಸೊಲ್ಯೂಷನ್ಸ್‌‌. ಜರ್ನಲ್‌ ಆಫ್‌ ಪಾಲಿಮರ್ಸ್‌ & ದ ಎನ್‌ವಿರಾನ್‌ಮೆಂಟ್, 15(4), 301-305.
  • ಸ್ಲೇಟರ್, D (2007) ಅಫ್ಲ್ಯೂಯೆನ್ಸ್‌ ಅಂಡ್‌ ಎಫ್ಲ್ಯೂಯೆಂಟ್ಸ್‌. ಸಿಯೆರ್ರಾ 92(6), 27
  • UNEP (2007) ಲ್ಯಾಂಡ್‌-ಬೇಸ್‌ಡ್‌ ಪೊಲ್ಯೂಷನ್‌ ಇನ್‌ ದ ಸೌತ್‌ ಚೀನಾ ಸೀ . UNEP/GEF/SCS ತಾಂತ್ರಿಕ ಪ್ರಕಟಣೆ No 10.

ಬಾಹ್ಯ ಕೊಂಡಿಗಳು[ಬದಲಾಯಿಸಿ]