ಸಲಿಂಗ ಕಾಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಈ ಲೋಕದ ಪ್ರತಿ ಜೀವಿಯೂ ಒಂದಲ್ಲ ಒಂದು ರೀತಿಯಲ್ಲಿ ಕಾಮವನ್ನು ವ್ಯಕ್ತ ಪಡಿಸುವುದನ್ನು ಕಾಣುತ್ತೇವೆ. ಕಾಮದ ಪರಿಮಾಣ ಹೆಚ್ಚು ಕಡಿಮೆ ಇರಬಹುದೇ ಹೊರತೂ ಅದು ಇಲ್ಲವೇ ಇಲ್ಲ ಎಂದು ಹೇಳಲಾಗದು. ಜೀವಿಗಳ ವಂಶೋದ್ದಾರಕ್ಕೆ ಕಾಮ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾರಂಭದಲ್ಲಿ ಕಾಮದ ಪ್ರಕೃತಿದತ್ತವಾಗಿ ಶುರುವಾಗಿದ್ದೇ ವಂಶೋದ್ದಾರಕ್ಕಾಗಿ. ಮಾನವ ನಾಗರಿಕತೆಗೆ ಕಾಲಿಟ್ಟ ನಂತರ ಹೆಚ್ಚು ಹೆಚ್ಚು ಸುಖಗಳನ್ನು ಅರಸತೊಡಗಿದ. ಅವುಗಳಲ್ಲಿ ಸುಲಭಕ್ಕೆ ಸಿಕ್ಕಿದ್ದೇ ಕಾಮ. ಏಕೆಂದರೆ ಇದನ್ನು ಹುಡುಕಿಕೊಂಡು ಬೇರೆಲ್ಲೋ ಕಾಡು ಮೇಡು ಅಲೆಯುವ ಅಗತ್ಯ ಇರಲೇ ಇಲ್ಲವಲ್ಲ ?! ತನ್ನೊಳಗೇ ಹುಟ್ಟಿಕೊಳ್ಳುತ್ತಿದ್ದ ಈ ಕಾಮಕ್ಕೆ ಸೊಪ್ಪು ನೀರು ಹಾಕಿ ಬೆಳೆಸತೊಡಗಿದ. ಹೀಗೆ ಕಾಮವನ್ನು ಮನುಷ್ಯ ಹೆಚ್ಚು ಹೆಚ್ಚಾಗಿ ಬಳಸುತ್ತಾ ಬಂದ ಕಾರಣಕ್ಕೋ, ಅಥವಾ ನಾಗರಿಕತೆ ಬೆಳೆದಂತೆ ಕಾಮವನ್ನು ತಣಿಸಿಕೊಳ್ಳಲಿಕ್ಕೆ ಮೇಲಿಂದ ಮೇಲೆ ಕಟ್ಟುಪಾಡುಗಳನ್ನು ಹೇರುತ್ತಾ ಬಂದುದಕ್ಕೋ ಏನೋ, ಒಟ್ಟಿನಲ್ಲಿ ಮನುಷ್ಯನ ಕಾಮದ ಪ್ರಮಾಣ ಹೆಚ್ಚು ಹೆಚ್ಚಾಗುತ್ತಾ ಸಾಗಿತು.

ಹೀಗೆ ಹೆಚ್ಚಾದ ಕಾಮವನ್ನು ತಣಿಸಿಕೊಳ್ಳಲು ಮನುಷ್ಯ ಬೇರೆ ಬೇರೆ ದಾರಿ ಹುಡುಕತೊಡಗಿದ. ಅವುಗಳಲ್ಲಿ ಮೊದಲನೆಯದು ವಿರುದ್ದ ಲಿಂಗಿಯ ಜೊತೆಗಿನ ಕಾಮ. ಆದರೆ ಅನೆಕ ಸಂದರ್ಭಗಳಲ್ಲಿ ವಿರುದ್ದ ಲಿಂಗಿ ಸಿಗದೇ ಹೋಗುತ್ತದೆ. ಅದೂ ಸಹ ನಾಗರಿಕತೆ ಬೆಳೆದಂತೆ ಮದುವೆ ಮುಂತಾದ ಕಟ್ಟುಪಾಡುಗಳು ಬಂದ ನಂತರ ವಿರುದ್ದ ಲಿಂಗಿಗಳು ಸಿಗುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಹೀಗಾಗಿ ಅನ್ಯ ಮಾರ್ಗಗಳನ್ನು ಹುಡುಕತೊಡಗಿದ. ಈ ಹುಡುಕಾಟದ ಕಾರಣಕ್ಕೇ ಹುಟ್ಟಿಕೊಂಡಂತವುಗಳು.. ವೇಶ್ಯಾವಾಟಿಕೆ, ಅನೈತಿಕ ಸಂಬಂಧ ಹಾಗೂ ಹಸ್ತ ಮೈಥುನದಂತಹ ಪದ್ದತಿಗಳು! ಇವುಗಳಲ್ಲಿ ವೇಶ್ಯಾವಾಟಿಕೆ, ಅನೈತಿಕ ಸಂಬಂಧಗಳಿಂದ ಅಪಾಯವೇ ಹೆಚ್ಚು. ಹಸ್ತ ಮೈಥುನದಿಂದ ಏನೇನೂ ಅಪಾಯವಿಲ್ಲವಾದರೂ ದ್ವಿಲಿಂಗಿಯೊಡನೆ ನಡೆಸುವ ಕಾಮಕ್ರೀಡೆಯಷ್ಟು ಸುಖ ನೀಡಲಾರದು. ಹಾಗಾಗಿ ಇವೆರಡನ್ನೂ ಹೊರತಾದ ಇನ್ನೊಂದು ದಾರಿಯನ್ನೂ ಮನುಷ್ಯ ಕಂಡು ಕೊಂಡ, ಅದುವೇ ‘ಸಲಿಂಗ ಕಾಮ!‘ ಅಂದರೆ ತನ್ನದೇ ಲಿಂಗದ ಇನ್ನೊಬ್ಬ ವ್ಯಕ್ತಿಯೊಡನೆ ಬೆಳೆಸುವ ಸಲುಗೆ, ಸಲ್ಲಾಪ!

"http://kn.wikipedia.org/w/index.php?title=ಸಲಿಂಗ_ಕಾಮ&oldid=487435" ಇಂದ ಪಡೆಯಲ್ಪಟ್ಟಿದೆ