ಸರ್ಪಗಂಧ
| ಸರ್ಪಗಂಧ | |||||||||||||||
|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| '''ರೌವೋಲ್ಫಿಯ ಸರ್ ಪೆಂಟಿನ''' (L.) Benth. ex Kurz[೧] |
|||||||||||||||
|
|
ಸರ್ಪಗಂಧ (Serpent wood)ಒಂದು ಔಷದೀಯ ಸಸ್ಯ.ಇದು ಒಂದು ಸಣ್ಣ ಸಸ್ಯ.ಉಜ್ವಲ ಹಸಿರಿನ ಹೊಳಪಿನ ಎಲೆಗಳು.ಕೆಂಪು ಪುಷ್ಪ ಪತ್ರದ ಬಿಳಿಛಾಯೆಯ ಹೂಗಳು.ಕರ್ನಾಟಕದಲ್ಲಿ ತೇವ ಪರ್ಣಪಾತಿ ಹಾಗೂ ಮಿಶ್ರಪರ್ಣಪಾತಿ ಅರಣ್ಯಭಾಗದಲ್ಲಿ ಕೆಳಭಾಗದಲ್ಲಿ ಬೆಳೆಯುವುದು.ಇದುಚೀನಾದೇಶದಲ್ಲಿ ಕೂಡಾ ಔಷದೀಯ ಸಸ್ಯವಾಗಿ ಬಳಕೆಯಲ್ಲಿದೆ.ಹಿಮಾಲಯ ಶ್ರೇಣಿ,ನೇಪಾಳ,ಶ್ರೀಲಂಕಾ,ಮ್ಯಾನ್ಮಾರ್ ಗಳಲ್ಲಿಯೂ ಕಂಡುಬರುತ್ತದೆ.
ಪರಿವಿಡಿ |
[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ
ಇದು ಅಪೊಸಿನಾಸಿಯೆ(Apocynaceae)ಕುಟುಂಬದಲ್ಲಿದೆ.ಸಸ್ಯಶಾಸ್ತ್ರೀಯ ಹೆಸರು ರೌವೋಲ್ಫಿಯ ಸರ್ ಪೆಂಟಿನ(Rauwolfia Serpentina).ತುಳು ಬಾಷೆಯಲ್ಲಿ ಗರುಡಪಾತಾಳ,ಕನ್ನಡದಲ್ಲಿ ಪಾತಾಳಗಂಧಿ,ಹಡಕಿ,ಸರ್ಪಾಕ್ಷಿ ಮುಂತಾದ ಹೆಸರೂ ಇದೆ.
[ಬದಲಾಯಿಸಿ] ಸಸ್ಯದ ಗುಣಲಕ್ಷಣಗಳು
ಇದು ಒಂದು ಸಣ್ಣ ಸಸ್ಯ.ಉಜ್ವಲ ಹಸಿರಿನ ಹೊಳಪಿನ ಎಲೆಗಳು.ಕೆಂಪು ಪುಷ್ಪ ಪತ್ರದ ಬಿಳಿಛಾಯೆಯ ಹೂಗಳು.ಇದರ ಬೇರು ಔಷದೀಯ ಗುಣಗಳನ್ನು ಹೊಂದಿದೆ.
[ಬದಲಾಯಿಸಿ] ಉಪಯೋಗಗಳು
ಇದರ ಬೇರಿನಲ್ಲಿ ರಿಸರ್ಪಿನ್ (reserpine)ಎಂಬ ಸಸ್ಯಕ್ಷಾರವಿದ್ದು,ಆಯುರ್ವೇದ ಪದ್ದತಿಯಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.ಹಾವಿನ ಕಡಿತಕ್ಕೆ ಔಷಧವಾಗಿ ಬಳಕೆಯಾಗುತ್ತದೆ.ರಕ್ತದೊತ್ತಡ,ರೋಗ ಭ್ರಾಂತಿ(Hypochondria)ಇವುಗಳ ಉಪಶಮನಕ್ಕೆ ಉತ್ತಮ ಔಷಧ.ಶಾಮಕ(Sedetive)ವಾಗಿ ಕೂಡಾ ಬಳಕೆಯಲ್ಲಿದೆ.ಇದು ಹೆಚ್ಚಿನ ಎಲ್ಲಾ ವೈದ್ಯ ಪದ್ದತಿಗಳಲ್ಲಿ ಬಳಕೆಯಲ್ಲಿರುವ ಸಸ್ಯವಾಗಿದೆ.
[ಬದಲಾಯಿಸಿ] ಆಧಾರ ಗ್ರಂಥಗಳು
೧.ವನಸಿರಿ:ಅಜ್ಜಂಪುರ ಕೃಷ್ಣಸ್ವಾಮಿ. ೨.www.organoindia.org
[ಬದಲಾಯಿಸಿ] ಬಾಹ್ಯಸಂಪರ್ಕಗಳು
- [http://www.flickr.com/search/?ss=2&ct=6&w=all&q=Rauwolfia+serpentina&m=text Rauwolfia serpentina photos
Cite error: <ref> tags exist, but no <references/> tag was found