ಸರೀಸೃಪ
ವಿಕಿಪೀಡಿಯ ಇಂದ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಸರೀಸೃಪ ಅಥವಾ ಉರಗಗಳು ಬೆನ್ನೆಲುಬುಳ್ಳ ಜೀವಿಗಳ ಐದು ಮುಖ್ಯ ತರಗತಿಗಳಲ್ಲೊಂದು. ರೆಪ್ಟೀಲಿಯಾ ಎಂದು ಕರೆಯಲ್ಪಡುವ ಈ ತರಗತಿಯಲ್ಲಿ ಐದು ವರ್ಗಗಳಿವೆ. ಈ ವರ್ಗಗಳೆಂದರೆ ಕೀಲೋನಿಯಾ, ಕ್ರೊಕೊಡೈಲಿಯಾ, ಒಫಿಡಿಯಾ, ರಿಂಕೋಸಿಫಾಲಿಯಾ ಮತ್ತು ಲೇಸರ್ ಟೇಲಿಯಾ. ಕೀಲೋನಿಯಾದಲ್ಲಿ ಎಲ್ಲಾ ಆಮೆಗಳು, ಕಡಲಾಮೆಗಳು ಮತ್ತು ಕಲ್ಲಾಮೆಗಳು ಬರುತ್ತವೆ. ಕ್ರೊಕೊಡೈಲಿಯಾದಲ್ಲಿ ಮೊಸಳೆಗಳು ಬರುತ್ತವೆ. ಕೇಮ್ಯಾನ್, ಮಗ್ಗರ್, ಆ್ಯಲಿಗೇಟರ್, ಘರಿಯಲ್, ಇತ್ಯಾದಿ ಇಪ್ಪತ್ಮೂರು ಜಾತಿಯ ಮೊಸಳೆಗಳನ್ನು ಇಂದು ಗುರುತಿಸಲಾಗಿದೆ.