ಸರಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:ImageMundraGUjarat.jpg
ಭಾರತದ ಗುಜರಾತಿನ ಮುಂದ್ರಾ ಬಂದರಿನಲ್ಲಿ ಒಂದು ಹಡಗಿಗೆ ಸರಕನ್ನು ತುಂಬುತ್ತಿರುವುದು.

ಸರಕು (ಅಥವಾ ಸಾಮಾನು-ಸರಂಜಾಮು ) ಎಂದರೆ ಸಾಗಾವಣೆ ಸಾಮಾಗ್ರಿ ಅಥವಾ ಸಾಮಾನ್ಯವಾಗಿ ವಾಣಿಜ್ಯ ಲಾಭಕ್ಕಾಗಿ ಹಡಗು, ವಿಮಾನ, ರೈಲು, ವ್ಯಾನ್ ಅಥವಾ ಲಾರಿಗಳ ಮೂಲಕ ಸಾಗಿಸುವ ಉತ್ಪನ್ನ. ಆಧುನಿಕ ದಿನಗಳಲ್ಲಿ, ಹೆಚ್ಚಿನ ಮಧ್ಯಸ್ಥಿಕೆಯ ದೀರ್ಘ-ದೂರ ಸಾಗಿಸುವ ಸರಕಿನ ಸಾಗಣೆಯಲ್ಲಿ ಧಾರಕಗಳನ್ನು ಬಳಸಲಾಗುತ್ತಿದೆ.

ಸಾಗಣೆ ಪ್ರಕಾರಗಳು[ಬದಲಾಯಿಸಿ]

ಜಲಸಾರಿಗೆ[ಬದಲಾಯಿಸಿ]

ಫಿನ್‌ಲ್ಯಾಂಡ್ ಹೆಲ್ಸಿಂಕಿ ಬಂದರಿನಲ್ಲಿ ನಿಂತಿರುವ ಧಾರಕ ಹಡಗು.

ಒಂದು ವ್ಯಾಪಕ ವ್ಯಾಪ್ತಿಯ ನೌಕಾ ಸರಕುಗಳನ್ನು ಸಮುದ್ರ ಬಂದರಿನಲ್ಲಿ ನಿರ್ವಹಿಸಲಾಗುತ್ತದೆ.

  • ಅನೇಕ ಬಂದರುಗಳಲ್ಲಿ ಮೋಟಾರು ಗಾಡಿಗಳನ್ನು ನಿರ್ವಹಿಸಲಾಗುತ್ತದೆ ಮತ್ತು ಅವುಗಳನ್ನು ಸಾಮಾನ್ಯವಾಗಿ ಒಳಕ್ಕೆ ಮತ್ತು ಹೊರಕ್ಕೆ ನಡೆಸಿಕೊಂಡು ಹೋಗುವ ವಿಶಿಷ್ಟ ಹಡಗುಗಳಲ್ಲಿ ಒಯ್ಯಲಾಗುತ್ತದೆ.
  • ಬ್ರೇಕ್ ಬಲ್ಕ್ ಸರಕು ಹಲಗೆಗಳ ಮೇಲೆ ಹೇರುವ ಸಾಮಾಗ್ರಿಯಾಗಿದೆ, ಇದನ್ನು ಕ್ರೇನುಗಳಿಂದ ಹಡಗಿನ ಹಿಡಿಕೆಯ ಒಳಗೆ ಮತ್ತು ಹೊರಕ್ಕೆ ಎತ್ತರಿಸಿ ಹಡಗಿನಿಂದ ಇಳಿಸಲಾಗುತ್ತದೆ ಅಥವಾ ಹಡಗಿನೊಳಕ್ಕೆ ಸಾಗಿಸಲಾಗುತ್ತದೆ. ಧಾರಕಗಳಲ್ಲಿ ತುಂಬುವ ಕ್ರಿಯೆಯು ಬೆಳೆಯುತ್ತಿರುವುದರಿಂದ ಪ್ರಪಂಚದಾದ್ಯಂತ ಬ್ರೇಕ್ ಬಲ್ಕ್ ಸರಕಿನ ಗಾತ್ರವು ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ಡನ್ನೇಜ್ ಬ್ಯಾಗುಗಳನ್ನು ಬಳಸುವುದರಿಂದ ಧಾರಕಗಳಲ್ಲಿ ಬ್ರೇಕ್ ಬಲ್ಕ್ ಮತ್ತು ಸಾಮಾನು-ಸರಂಜಾಮುಗಳನ್ನು ಸುರಕ್ಷಿತವಾಗಿ ಕಾಪಾಡಬಹುದು.
  • ಉಪ್ಪು, ಎಣ್ಣೆ, ಜಿಡ್ಡು ಪದಾರ್ಥ ಮತ್ತು ಲೋಹದ ಚೂರುಪಾರು ಮೊದಲಾದ ಬಲ್ಕ್ ಸರಕನ್ನು ಸಾಮಾನ್ಯವಾಗಿ ವ್ಯಾಪಾರದ ದಿನಸಿ-ಪದಾರ್ಥಗಳೆಂದು ಹೇಳಲಾಗುತ್ತದೆ, ಅವನ್ನು ಹಲಗೆಗಳ ಮೇಲೆ ಅಥವಾ ಧಾರಕಗಳಲ್ಲಿ ಸಾಗಿಸಲಾಗುವುದಿಲ್ಲ. ಬಲ್ಕ್ ಸರಕುಗಳನ್ನು ಭಾರಿ-ತೂಕದ ಮತ್ತು ಪ್ರಕ್ಷೇಪಿಸುವ ಸರಕುಗಳ ರೀತಿಯಲ್ಲಿ ಪ್ರತಿಯೊಂದು ವಸ್ತುಗಳಂತೆ ನಿರ್ವಹಿಸಲಾಗುವುದಿಲ್ಲ. ಅಲ್ಯೂಮಿನಿಯಂ, ಧಾನ್ಯ, ಜಿಪ್ಸಮ್, ದಿಮ್ಮಿ ಮತ್ತು ಮರದ ಚಕ್ಕೆಗಳು ಬಲ್ಕ್ ಸರಕುಗಳಾಗಿವೆ.
  • ಧಾರಕಗಳು ಪ್ರಪಂಚದಾದ್ಯಂತ ಹೆಚ್ಚಿನ ಭಾಗಗಳಲ್ಲಿ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಸರಕು ವರ್ಗವಾಗಿದೆ. ಧಾರಕಗಳಲ್ಲಿ ತುಂಬಿದ ಸರಕು ಮೋಟಾರು ವಾಹನಗಳ ಭಾಗಗಳು, ಯಂತ್ರಗಳು ಮತ್ತು ತಯಾರಿಕಾ ಅಂಶಗಳಿಂದ ಹಿಡಿದು ಶೂಗಳು, ಗೊಂಬೆಗಳು ಹಾಗೂ ಶೈತ್ಯೀಕರಿಸಿದ ಮಾಂಸ ಮತ್ತು ಸಮುದ್ರ-ಆಹಾರ-ಪದಾರ್ಥಗಳವರೆಗೆ ಎಲ್ಲವನ್ನೂ ಒಳಗೊಳ್ಳುತ್ತದೆ.
  • ಪ್ರಕ್ಷೇಪಿಸುವ ಸರಕು ಮತ್ತು ಭಾರೀ ತೂಕದ ಸರಕುಗಳೆಂದರೆ - ತಯಾರಿಕಾ ಸಾಧನಗಳು, ಹವಾ ನಿಯಂತ್ರಣಗಳು, ಕಾರ್ಖಾನೆಯ ಸಲಕರಣೆಗಳು, ಜನರೇಟರುಗಳು, ಅನಿಲ ಚಕ್ರಗಳು, ಮಿಲಿಟರಿ ಸಾಧನಗಳು ಮತ್ತು ಧಾರಕದಲ್ಲಿ ಸರಿಹೊಂದಲು ತುಂಬಾ ದೊಡ್ಡದಾದ ಅಥವಾ ಭಾರವಾದ ವಿಪರೀತ ಗಾತ್ರದ ಅಥವಾ ತೂಕದ ಯಾವುದೇ ಇತರ ಸರಕು.

ವಾಯುಸಾರಿಗೆ[ಬದಲಾಯಿಸಿ]

ಸರಕು ತುಂಬುವ ಮುಂಭಾಗವು ತೆರೆದಿರುವ ಕಾರ್ಗೊಲಕ್ಸ್ ಬೋಯಿಂಗ್ 747-400F.

ಸಾಮಾನ್ಯಾಗಿ ವಿಮಾನ-ಹೇರು ಎಂದು ಕರೆಯುವ ವಿಮಾನ-ಸರಕನ್ನು ವ್ಯವಹಾರ ಸಂಸ್ಥೆಗಳು ಭೂ, ಜಲ, ವಾಯುಮಾರ್ಗವಾಗಿ ಸರಕುಗಳನ್ನು ಸಾಗಿಸುವ ಕಂಪನಿಗಳಿಂದ ಸಂಗ್ರಹಿಸಿ, ಗ್ರಾಹಕರಿಗೆ ತಲುಪಿಸುತ್ತವೆ. ವಿಮಾನವನ್ನು ೧೯೧೧ರಲ್ಲಿ ಮೊದಲು ಅಂಚೆಯನ್ನು ಸರಕಾಗಿ ಒಯ್ಯಲು ಬಳಸಲಾಗುತ್ತಿತ್ತು. ಅಂತಿಮವಾಗಿ ತಯಾರಕರು ಇತರ ಪ್ರಕಾರದ ಸಾಮಾನು ಸರಂಜಾಮುಗಳನ್ನೂ ಸಹ ಒಯ್ಯುವುದಕ್ಕಾಗಿ ವಿಮಾನವನ್ನು ವಿನ್ಯಾಸಗೊಳಿಸಲು ಆರಂಭಿಸಿದರು.

ಸರಕನ್ನು ಒಯ್ಯಲು ಸೂಕ್ತವಾದ ಹಲವಾರು ವಾಣಿಜ್ಯ ವಿಮಾನಗಳಿವೆ, ಉದಾ, ಬೋಯಿಂಗ್ ೭೪೭ ಮತ್ತು ದೊಡ್ಡ An-೧೨೪, ಇವನ್ನು ಸರಕು-ವಿಮಾನವಾಗಿ ಸುಲಭದಲ್ಲಿ ಪರಿವರ್ತಿಸುವ ಉದ್ದೇಶಕ್ಕಾಗಿ ನಿರ್ಮಿಸಿಲಾಗಿತ್ತು. ಅಂತಹ ದೊಡ್ಡ ವಿಮಾನಗಳು ಧಾರಕಗಳಲ್ಲಿ ತುಂಬಿದ ಸರಕು ಹಡಗುಗಳಂತೆ ಯುನಿಟ್ ಲೋಡ್ ಡಿವೈಸ್ (ULD)ಗಳೆಂದು ಕರೆಯುವ ವೇಗವಾಗಿ ಲೋಡ್ ಮಾಡುವ ಧಾರಕಗಳನ್ನು ಬಳಸುತ್ತವೆ. ULD ಗಳು ವಿಮಾನದ ಮುಂದಿನ ಭಾಗದಲ್ಲಿರುತ್ತವೆ.

ಹೆಚ್ಚಿನ ರಾಷ್ಟ್ರಗಳು ವಿಮಾನ-ಸಾಗಣೆ ವ್ಯವಸ್ಥಾಪನ ತಂತ್ರದ ಅವಶ್ಯಕತೆಗಳಿಗಾಗಿ C-೧೭ ಗ್ಲೋಬ್‌ಮಾಸ್ಟರ್ IIIನಂತಹ ಹೆಚ್ಚಿನ ಸಂಖ್ಯೆಯ ಸರಕು ವಿಮಾನಗಳನ್ನು ಹೊಂದಿವೆ ಮತ್ತು ಬಳಸಿಕೊಳ್ಳುತ್ತವೆ.

ರೈಲು[ಬದಲಾಯಿಸಿ]

2001ರಲ್ಲಿ ಬ್ಯಾನ್ಬರಿ ನಿಲ್ದಾಣದಲ್ಲಿದ್ದ P&O ನೆಡ್ಲಾಯ್ಡ್ ಇಂಟರ್-ಮೋಡಲ್ ಫ್ರೈಟ್ ವೆಲ್ ಕಾರ್‌ನ ಚಿತ್ರ.

ರೈಲುಗಳು ಹಡಗು ಬಂದರುಗಳಿಂದ ಬರುವ ಭಾರಿ ಸಂಖ್ಯೆಯ ಧಾರಕಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ರೈಲುಗಳನ್ನು ಉಕ್ಕು, ಮರ ಮತ್ತು ಕಲ್ಲಿದ್ದಲು ಮೊದಲಾದವುಗಳನ್ನೂ ಸಾಗಿಸಲು ಬಳಸಲಾಗುತ್ತದೆ. ರೈಲುಗಳು ಹೆಚ್ಚಿನ ಪ್ರಮಾಣದ ಸರಕನ್ನು ಸಾಗಿಸಬಲ್ಲವು ಮತ್ತು ಸಾಮಾನ್ಯವಾಗಿ ಉದ್ದೇಶಿತ ಸ್ಥಾನಕ್ಕೆ ನೇರ ಮಾರ್ಗವನ್ನು ಹೊಂದಿರುತ್ತವೆ, ಆದ್ದರಿಂದ ಅವನ್ನು ಈ ಕಾರ್ಯಕ್ಕೆ ಉಪಯೋಗಿಸಲಾಗುತ್ತದೆ. ಸೂಕ್ತ ಸಂದರ್ಭಗಳಲ್ಲಿ, ವಿಶೇಷವಾಗಿ ಭಾರೀ ಪ್ರಮಾಣದ ಸರಕನ್ನು ಅಥವಾ ಹೆಚ್ಚು ದೂರಕ್ಕೆ ಸಾಗಿಸುವಾಗ ರಸ್ತೆಗಿಂತ ರೈಲಿನಲ್ಲಿ ಸಾಗಿಸುವುದು ಹೆಚ್ಚು ಲಾಭದಾಯಕವಾಗಿರುತ್ತದೆ ಮತ್ತು ಕಾರ್ಯಾಚರಣೆಯು ಪರಿಣಾಮಕಾರಿಯಾಗಿರುತ್ತದೆ.

ರೈಲು ಸರಕಿನ ಮುಖ್ಯ ಅನಾನುಕೂಲತೆಯೆಂದರೆ ಅದರ ನಮ್ಯತೆಯ ಕೊರತೆ. ಈ ಕಾರಣಕ್ಕಾಗಿ, ರಸ್ತೆಯ ಮೂಲಕ ಸಾಗಿಸುವುದು ಉತ್ತಮವಾಗಿರುವುದರಿಂದ ರೈಲು ಹೆಚ್ಚಿನ ಸರಕು ವ್ಯವಹಾರವನ್ನು ಕಳೆದುಕೊಂಡಿದೆ. ರೈಲು-ಸರಕು ಹೆಚ್ಚಾಗಿ ವಾಹನಾಂತರಣ ಖರ್ಚುಗಳನ್ನು ಒಳಗೊಳ್ಳುತ್ತದೆ, ಏಕೆಂದರೆ ಇದನ್ನು ಒಂದು ರೀತಿಯ ಸಾಗಣೆ ವ್ಯವಸ್ಥೆಯಿಂದ ಮತ್ತೊಂದು ರೀತಿಯ ಸಾಗಣೆಗೆ ವರ್ಗಾಯಿಸಬೇಕಿರುತ್ತದೆ. ಧಾರಣಗಳಲ್ಲಿ ತುಂಬುವಂತಹ ಪ್ರಕ್ರಿಯೆಗಳು ಈ ಖರ್ಚುಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ.

ಹೆಚ್ಚಿನ ಸರ್ಕಾರಗಳು ಪ್ರಸ್ತುತ ಪರಿಸರೀಯ ಪ್ರಯೋಜನಗಳಿಂದಾಗಿ ರೈಲುಗಳನ್ನು ಹೆಚ್ಚಾಗಿ ಬಳಸುವಂತೆ ಸರಕುಗಳನ್ನು ಸಾಗಿಸುವ ವ್ಯಾಪಾರಿಗಳನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿವೆ.

ರಸ್ತೆ ಸಾರಿಗೆ[ಬದಲಾಯಿಸಿ]

ಪಾರ್ಸೆಲ್‌ಫೋರ್ಸ್, ಫೆಡ್‌ಎಕ್ಸ್ ಮತ್ತು ಯು-ಹಾಲ್ ಮೊದಲಾದ ಹಲವಾರು ಸಂಸ್ಥೆಗಳು ಎಲ್ಲಾ ಪ್ರಕಾರದ ಸರಕುಗಳನ್ನು ರಸ್ತೆಯ ಮೂಲಕ ಸಾಗಿಸುತ್ತವೆ. ಮನೆಗಳಿಗೆ ಪತ್ರಗಳನ್ನು ತಲುಪಿಸುವುದರಿಂದ ಹಿಡಿದು ಸರಕು-ಧಾರಕಗಳವರೆಗೆ ಎಲ್ಲದನ್ನೂ ಈ ಸಂಸ್ಥೆಗಳು ವೇಗವಾಗಿ ಕೆಲವೊಮ್ಮೆ ಅದೇ ದಿನ ತಲುಪಿಸುತ್ತವೆ.

ರಸ್ತೆ-ಸರಕಿಗೆ ಒಂದು ಉತ್ತಮ ಉದಾಹರಣೆಯೆಂದರೆ ಆಹಾರ, ಏಕೆಂದರೆ ಸೂಪರ್‌ಮಾರ್ಕೆಟ್‌ಗಳಿಗೆ ಅವುಗಳ ಬಡುಗಳನ್ನು ಸಾಮಾನುಗಳಿಂದ ತುಂಬಿಡಲು ದಿನನಿತ್ಯದ ವಿತರಣೆಗಳು ಬೇಕಾಗುತ್ತದೆ. ಎಲ್ಲಾ ರೀತಿಯ ಚಿಲ್ಲರೆ ವ್ಯಾಪಾರಿಗಳು ವಿತರಣೆ ಲಾರಿಗಳು, ಸಂಪೂರ್ಣ ಗಾತ್ರದ ಅರೆ ಲಾರಿಗಳು ಅಥವಾ ಸಣ್ಣ ವಿತರಣೆ ವ್ಯಾನುಗಳನ್ನು ಅವಲಂಬಿಸಿರುತ್ತಾರೆ.

ಸಾಗಣೆ ವರ್ಗಗಳು[ಬದಲಾಯಿಸಿ]

ಸಾಮಾನು ಸರಂಜಾಮುಗಳನ್ನು ಸಾಮಾನ್ಯವಾಗಿ ಸಾಗಿಸುವುದಕ್ಕಿಂತ ಮೊದಲು ವಿವಿಧ ಸಾಗಣೆ ವರ್ಗಗಳಾಗಿ ವಿಂಡಿಸಲಾಗುತ್ತದೆ. ವಸ್ತುವೊಂದರ ವರ್ಗವನ್ನು ಈ ಕೆಳಗಿನವುಗಳ ಆಧಾರದಲ್ಲಿ ಕಂಡುಹಿಡಿಯಲಾಗುತ್ತದೆ:

  • ಸಾಗಿಸುವ ವಸ್ತುವಿನ ಪ್ರಕಾರ. ಉದಾಹರಣೆಗಾಗಿ, ಒಂದು ಕೆಟಲು 'ಮನೆಯ ಸಾಮಾಗ್ರಿಗಳ' ವರ್ಗಕ್ಕೆ ಸರಿಹೊಂದುತ್ತದೆ.
  • ವಸ್ತುವಿನ ಗಾತ್ರ ಮತ್ತು ಪ್ರಮಾಣಗಳೆರಡರ ಆಧಾರದಲ್ಲಿ, ಸಾಗಣೆಯು ಎಷ್ಟು ದೊಡ್ಡದಾಗಿರುತ್ತದೆ.
  • ವಸ್ತುವನ್ನು ಸಾಗಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ.

ಸಾಗಣೆಗಳನ್ನು ವಿಶಿಷ್ಟವಾಗಿ ಮನೆಯ ಸಾಮಾಗ್ರಿಗಳು, ವೇಗದ, ಪಾರ್ಸೆಲ್ ಮತ್ತು ಸಾಮಾನು-ಸರಂಜಾಮು ಸಾಗಣೆಗಳಾಗಿ ವರ್ಗೀಕರಿಸಲಾಗುತ್ತದೆ:

  • ಮನೆಯ ಸಾಮಾಗ್ರಿಗಳು (HHG) ಪೀಠೋಪಕರಣಗಳು, ಕಲಾಕೃತಿಗಳು ಮತ್ತು ಅಂತಹುದೇ ವಸ್ತುಗಳು ಮೊದಲಾದವನ್ನು ಒಳಗೊಳ್ಳುತ್ತವೆ.
  • ಪತ್ರದ ಲಕೋಟೆಗಳಂತಹ ವೈಯಕ್ತಿಕ ವಸ್ತುಗಳು ಅಥವಾ ತುಂಬಾ ಸಣ್ಣ ವ್ಯವಹಾರವನ್ನು ಒಂದೇ ರಾತ್ರಿಯ ವೇಗವಾದ ಅಥವಾ ತುರ್ತು ಪತ್ರಗಳ ಸಾಗಣೆ ಗಳೆಂದು ಪರಿಗಣಿಸಲಾಗುತ್ತದೆ. ಈ ಸಾಗಣೆಗಳು ವಿರಳವಾಗಿ ಕೆಲವು ಕಿಲೋಗ್ರಾಂಗಳಷ್ಟು ಅಥವಾ ಪೌಂಡುಗಳಷ್ಟು ತೂಕವಿರುತ್ತವೆ ಮತ್ತು ಹೆಚ್ಚುಕಡಿಮೆ ಯಾವಾಗಲೂ ವಾಹಕಗಳ ಸ್ವಂತ ಪ್ಯಾಕಿಂಗುಗಳಲ್ಲಿ ಸಾಗುತ್ತವೆ. ವೇಗದ ಸಾಗಣೆಗಳು ಹೆಚ್ಚುಕಡಿಮೆ ಯಾವಾಗಲೂ ಸ್ವಲ್ಪ ದೂರವನ್ನು ವಿಮಾನದಲ್ಲಿ ಸಾಗುತ್ತವೆ. ಪತ್ರದ ಲಕೋಟೆಯೊಂದು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಒಂದೇ ರಾತ್ರಿಯಲ್ಲಿ ಒಂದು ಕರಾವಳಿಯಿಂದ ಮತ್ತೊಂದು ಕರಾವಳಿಗೆ ಸಾಗಬಹುದು ಅಥವಾ ಕೆಲವು ದಿನಗಳನ್ನು ತೆಗೆದುಕೊಳ್ಳಬಹುದು, ಇದು ಸರಕುಗಳನ್ನು ಸಾಗಿಸುವ ಕಂಪನಿಗಳು ಯಾ ವ್ಯಾಪಾರಿಗಳು ಆರಿಸುವ ಸೇವೆಯ ಆಯ್ಕೆಗಳು ಮತ್ತು ದರಗಳನ್ನು ಆಧರಿಸಿರುತ್ತದೆ.
  • ಸಣ್ಣ ಪೆಟ್ಟಿಗೆಗಳಂತಹ ದೊಡ್ಡ ವಸ್ತುಗಳನ್ನು ಪಾರ್ಸೆಲ್ ‌ಗಳು ಅಥವಾ ಗ್ರೌಂಡ್ ಸಾಗಣೆ ಗಳೆಂದು ಪರಿಗಣಿಸಲಾಗುತ್ತದೆ. ಈ ಸಾಗಣೆಗಳು ವಿರಳವಾಗಿ ಸುಮಾರು 50 kg (110 lb) ನಷ್ಟು ತೂಕವಿರುತ್ತವೆ, ಯಾವುದೇ ಸರಕಿನ ಒಂದು ಭಾಗವು ಸುಮಾರು 70 kg (154 lb) ಗಿಂತ ಹೆಚ್ಚು ಭಾರವಿರುವುದಿಲ್ಲ. ಪಾರ್ಸೆಲ್ ಸಾಗಣೆಗಳು ಯಾವಾಗಲೂ ಪೆಟ್ಟಿಗೆಗಳಲ್ಲಿರುತ್ತವೆ, ಕೆಲವೊಮ್ಮೆ ಸರಕುಗಳನ್ನು ಸಾಗಿಸುವ ಕಂಪನಿಗಳ ಪ್ಯಾಕಿಂಗುಗಳಲ್ಲಿ ಮತ್ತು ಕೆಲವೊಮ್ಮೆ ವಾಹಕ-ಒದಗಿಸಿದ ಪ್ಯಾಕಿಂಗುಗಳಲ್ಲಿ ಇರುತ್ತವೆ. ಸೇವೆಯ ಮಟ್ಟವು ವ್ಯತ್ಯಾಸಗೊಳ್ಳುತ್ತಿರುತ್ತದೆ, ಆದರೆ ಹೆಚ್ಚಿನ ಗ್ರೌಂಡ್ ಸಾಗಣೆಗಳು ಪ್ರತಿ ದಿನಕ್ಕೆ ಸುಮಾರು 800 to 1,100 kilometres (497 to 684 mi)* ನಷ್ಟು ದೂರಕ್ಕೆ ಚಲಿಸುತ್ತವೆ. ಪ್ಯಾಕಿಂಗಿನ ಮೂಲ ಸ್ಥಾನದ ಆಧಾರದಲ್ಲಿ, ಇದು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸುಮಾರು ನಾಲ್ಕು ದಿನಗಳೊಳಗೆ ಒಂದು ಕರಾವಳಿಯಿಂದ ಮತ್ತೊಂದು ಕರಾವಳಿಗೆ ಸಾಗಬಹುದು. ಪಾರ್ಸೆಲ್ ಸಾಗಣೆಗಳು ವಿರಳವಾಗಿ ವಿಮಾನದಲ್ಲಿ ಸಾಗುತ್ತವೆ ಹಾಗೂ ವಿಶಿಷ್ಟವಾಗಿ ರಸ್ತೆ ಮತ್ತು ರೈಲಿನ ಮೂಲಕ ಚಲಿಸುತ್ತವೆ. ಪಾರ್ಸೆಲ್‌ಗಳು ಹೆಚ್ಚಾಗಿ ವ್ಯವಹಾರದಿಂದ ಗ್ರಾಹಕರ (B೨C) ಸಾಗಣೆಗಳನ್ನು ಸೂಚಿಸುತ್ತವೆ.
  • HHG, ವೇಗವಾದ ಮತ್ತು ಪಾರ್ಸೆಲ್ ಸಾಗಣೆಗಳನ್ನು ಹೊರತುಪಡಿಸಿದ ರವಾನೆಗಳನ್ನು ಸಾಮಾನು-ಸರಂಜಾಮು ಸಾಗಣೆ ಗಳೆಂದು ಸೂಚಿಸಲಾಗುತ್ತದೆ.

ಟ್ರಕ್‌ಲೋಡ್‌ಗಿಂತ ಕಡಿಮೆಯಿರುವ ಸಾಮಾನು-ಸರಂಜಾಮು[ಬದಲಾಯಿಸಿ]

ಟ್ರಕ್‌ಲೋಡ್‌ಗಿಂತ ಕಡಿಮೆಯಿರುವ (LTL) ಸರಕು ಸಾಮಾನು-ಸರಂಜಾಮು ಸಾಗಣೆಯ ಮೊದಲ ವರ್ಗವಾಗಿದೆ, ಇದು ಹೆಚ್ಚಿನ ಸಾಮಾನು-ಸರಂಜಾಮು ಸಾಗಣೆಗಳು ಮತ್ತು ವ್ಯವಹಾರದಿಂದ-ವ್ಯವಹಾರದ (B೨B) ಸಾಗಣೆಗಳನ್ನು ಸೂಚಿಸುತ್ತದೆ. LTL ಸಾಗಣೆಗಳನ್ನು ಹೆಚ್ಚಾಗಿ ಮೋಟಾರ್ ಫ್ರೈಟ್ ಎಂದು ಕರೆಯಲಾಗುತ್ತದೆ ಮತ್ತು ಅದರಲ್ಲಿ ಭಾಗವಹಿಸುವ ವಾಹಕಗಳನ್ನು ಮೋಟಾರು ವಾಹಕ ಗಳೆಂದು ಕರೆಯಲಾಗುತ್ತದೆ.

LTL ಸಾಗಣೆಗಳು 50 to 7,000 kg (110 to 15,430 lb) ನಷ್ಟು ತೂಕವನ್ನು ಹೊಂದಿರುತ್ತವೆ, ಹೆಚ್ಚಿನ ಸಂದರ್ಭಗಳಲ್ಲಿ 2.5 to 8.5 m (8 ft 2.4 in to 27 ft 10.6 in) ಗಿಂತ ಕಡಿಮೆ ಇರುತ್ತವೆ. LTL ಸಾಮಾನಿನ ಸರಾಸರಿ ಒಂದು ಭಾಗವು 600 kg (1,323 lb) ಭಾರವಿರುತ್ತದೆ ಮತ್ತು ಒಂದು ಪ್ರಮಾಣಿತ ಹಲಗೆಯ ಗಾತ್ರದಲ್ಲಿರುತ್ತದೆ. ಉದ್ದದ ಸರಕು ಮತ್ತು/ಅಥವಾ ದೊಡ್ಡ ಸರಕುಗಳು ಹೆಚ್ಚುವರಿ ಉದ್ದ ಮತ್ತು ಘನ ಸಾಮರ್ಥ್ಯದ ಅಧಿಕ ದರಗಳಿಗೆ ಒಳಪಡುತ್ತವೆ.

LTL ನಲ್ಲಿ ಬಳಸುವ ಟ್ರೇಲರ್‌ಗಳು 28 to 53 ft (8.53 to 16.15 m) ಉದ್ದವಿರುತ್ತವೆ. ನಗರ ವಿತರಣೆಗಳ ಪ್ರಮಾಣಿತ ಉದ್ದವು ಸಾಮಾನ್ಯವಾಗಿ 48 ft (14.63 m) ನಷ್ಟಿರುತ್ತದೆ. ಜನನಿಬಿಡ ಮತ್ತು ನಿವಾಸಗಳಿರುವ ಪರಿಸರಗಳಲ್ಲಿ 28 ft (8.53 m) ಉದ್ದದ ಟ್ರೇಲರ್‌ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಮಿಶ್ರ-ಸಾಮಾನಿನ ಸಂದರ್ಭದಲ್ಲಿ ಸಾಗಣೆಗಳನ್ನು ಸಾಮಾನ್ಯವಾಗಿ ಹಲಗೆಯಲ್ಲಿ, ಬಿಗಿಯಾದ ಸಂಕೋಚನ ಪಟ್ಟಿಯಿಂದ ಸುತ್ತಿ ಮತ್ತು ಪ್ಯಾಕಿಂಗ್ ಮಾಡಿ ಸಾಗಿಸಲಾಗುತ್ತದೆ. ವೇಗವಾದ ಅಥವಾ ಪಾರ್ಸೆಲ್‌ಗೆ ಭಿನ್ನವಾಗಿ, LTL ಸಾಗಣೆದಾರರು ಅವರ ಸ್ವಂತ ಪ್ಯಾಕಿಂಗ್ಅನ್ನು ಒದಗಿಸಬೇಕು, ಏಕೆಂದರೆ ವಾಹಕಗಳು ಯಾವುದೇ ಪ್ಯಾಕಿಂಗ್ ಪೂರೈಕೆಗಳು ಅಥವಾ ನೆರವನ್ನು ಒದಗಿಸುವುದಿಲ್ಲ. ಆದರೆ, ಸಂದರ್ಭಕ್ಕೆ ತಕ್ಕಂತೆ ಕ್ರೇಟಿನಲ್ಲಿ ಪ್ಯಾಕ್ ಮಾಡುವ ಅಥವಾ ಇತರ ಗಮನಾರ್ಹ ಪ್ಯಾಕಿಂಗ್‌ಗಳು ಬೇಕಾಗಬಹುದು.

ವಿಮಾನ-ಸರಕು[ಬದಲಾಯಿಸಿ]

ವಿಮಾನ ಸರಕು ಸಾಗಣೆಗಳು ಗಾತ್ರ ಮತ್ತು ಪ್ಯಾಕಿಂಗ್ ಅವಶ್ಯಕತೆಗಳ ವಿಷಯದಲ್ಲಿ LTL ಸಾಗಣೆಗಳಂತೆಯೇ ಇರುತ್ತವೆ. ಆದರೆ, ವಿಮಾನ ಸಾಮಾನು-ಸರಂಜಾಮು ಅಥವಾ ವಿಮಾನ-ಸರಕು ಸಾಗಣೆಗಳು ವಿಶಿಷ್ಟವಾಗಿ ಪ್ರತಿ ದಿನಕ್ಕೆ 800 km or 497 mi ಗಿಂತಲೂ ಹೆಚ್ಚು ವೇಗವಾಗಿ ಚಲಿಸಬೇಕಾಗುತ್ತದೆ. ವಿಮಾನ-ಸಾಗಣೆಗಳನ್ನು ದಳ್ಳಾಳಿಗಳು ಅಥವಾ ಆನ್‌ಲೈನ್ ವ್ಯಾಪಾರ ಸೇವೆಗಳ ಮೂಲಕ ವಾಹಕಗಳೊಂದಿಗೆ ನೇರವಾಗಿ ನಿಗದಿ ಪಡಿಸಬಹುದು. ಪ್ರಮಾಣಿತ LTL ಗಿಂತ ಹೆಚ್ಚು ವೇಗವಾಗಿ ಚಲಿಸಿದರೂ ವಿಮಾನ-ಸಾಗಣೆಗಳು ಯಾವಾಗಲೂ ವಿಮಾನದಿಂದ ಚಲಿಸುವುದಿಲ್ಲ.

ಟ್ರಕ್‌ಲೋಡ್‌ ಸಾಮಾನು[ಬದಲಾಯಿಸಿ]

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಸುಮಾರು 7,000 kg (15,432 lb)ಗಿಂತ ದೊಡ್ಡ ಸಾಗಣೆಗಳನ್ನು ವಿಶಿಷ್ಟವಾಗಿ ಟ್ರಕ್‌ಲೋಡ್ (TL) ಸಾಮಾನು ಎಂದು ವರ್ಗೀಕರಿಸಲಾಗುತ್ತದೆ. ಏಕೆಂದರೆ ಅಧಿಕ ಪ್ರಮಾಣದ ಸಾಗಣೆಗೆ ಸಣ್ಣ LTL ಟ್ರೇಲರ್‌ಗಿಂತ ದೊಡ್ಡ ಟ್ರೇಲರ್‌ಗಳ ಬಳಕೆಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಲಾಭದಾಯಕವಾಗಿರುತ್ತದೆ.

ತುಂಬಿನ ಲಾರಿಯ (ಟ್ರ್ಯಾಕ್ಟರ್ ಮತ್ತು ಟ್ರೇಲರ್, ೫-ಆಕ್ಸಲ್ ರಿಗ್) ಒಟ್ಟು ಭಾರವು ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ 36,000 kg (79,366 lb) ನಷ್ಟನ್ನು ಮೀರಬಾರದು. ಸಾಮಾನ್ಯ ಸಂದರ್ಭಗಳಲ್ಲಿ, ಹೆಚ್ಚು ದೂರ ಸಾಗುವ ಸಾಧನವು ಸುಮಾರು 15,000 kg (33,069 lb) ನಷ್ಟು ಭಾರವಿರುತ್ತದೆ, ಸಾಮಾನು-ಸರಂಜಾಮಿನ ಭಾರವು 20,000 kg (44,092 lb) ನಷ್ಟಿರುತ್ತದೆ. ಅದೇ ರೀತಿ ಭಾರವೊಂದು ಸಾಮಾನ್ಯವಾಗಿ 48 ft (14.63 m) ಅಥವಾ 53 ft (16.15 m) ಉದ್ದ, 2.6 m (102.4 in) ಅಗಲ, 2.7 m (8 ft 10.3 in) ಎತ್ತರ ಮತ್ತು 13 ft 6 in (4.11 m)* ನಷ್ಟು ಒಟ್ಟು ಎತ್ತರವಿರುವ ಟ್ರೇಲರ್‌ನಲ್ಲಿ ಲಭ್ಯಯಿರುವ ಸ್ಥಳಾವಕಾಶಕ್ಕೆ ಸೀಮಿತವಾಗಿರುತ್ತದೆ.

ವೇಗವಾದ, ಪಾರ್ಸೆಲ್ ಮತ್ತು LTL ಸಾಗಣೆಗಳು ಯಾವಾಗಲೂ ಇತರ ಸಾಗಣೆಗಳೊಂದಿಗೆ ಒಂದು ಸಾಧನದಲ್ಲಿ ಬೆರೆಯುತ್ತವೆ ಹಾಗೂ ಅವು ವಿಶಿಷ್ಟವಾಗಿ ಅವುಗಳ ಸಾಗಣೆಯ ಸಂದರ್ಭದಲ್ಲಿ ಬಹು ಸಾಧನಗಳಾದ್ಯಂತ ಪುನಃಲೋಡ್ ಆಗುತ್ತವೆ, TL ಸಾಗಣೆಗಳು ಸಾಮಾನ್ಯವಾಗಿ ಟ್ರೇಲರ್‌ನಲ್ಲಿ ಏಕೈಕ ಸಾಗಣೆಯಾಗಿ ಸಾಗುತ್ತವೆ. ವಾಸ್ತವವಾಗಿ, TL ಸಾಗಣೆಗಳು ಅವನ್ನು ಪಡೆದುಕೊಂಡಂತಹುದೇ ಟ್ರೇಲರ್‌ನಲ್ಲಿ ಸಾಗುತ್ತವೆ.

ಸಾಗಣೆ ದರಗಳು[ಬದಲಾಯಿಸಿ]

LTL ಸಾಗಣೆದಾರರು ಸಾಗಣೆ ಕಂಪನಿಗಳನ್ನು ನೇರವಾಗಿ ಸಂಪರ್ಕಿಸುವ ಬದಲು ಸರಕು ದಳ್ಳಾಳಿ, ಆನ್‌ಲೈನ್ ವ್ಯಾಪಾರ-ಸ್ಥಾನ ಅಥವಾ ಇತರ ಮಧ್ಯವರ್ತಿಗಳನ್ನು ಬಳಸಿಕೊಳ್ಳುವ ಮೂಲಕ ಲಾಭವನ್ನು ಪಡೆಯುಬಹುದು. ದಳ್ಳಾಳಿಗಳು ವ್ಯಾಪಾರ-ಸ್ಥಾನದ ಬಗ್ಗೆ ಮಾಹಿತಿ ನೀಡಬಹುದು ಮತ್ತು ಹೆಚ್ಚಿನ ಸಣ್ಣ ಸಾಗಣೆದಾರರು ನೇರವಾಗಿ ಪಡೆಯುವುದಕ್ಕಿಂತ ಕಡಿಮೆ ದರಗಳನ್ನು ಪಡೆಯಬಹುದು. LTL ವ್ಯಾಪಾರ-ಸ್ಥಾನದಲ್ಲಿ, ಮಧ್ಯವರ್ತಿಗಳು ಪ್ರಕಟಿತ ದರಗಳಿಂದ ೫೦% ರಿಂದ ೮೦% ನಷ್ಟು ರಿಯಾಯಿತಿಗಳನ್ನು ಪಡೆಯುತ್ತಾರೆ. ಅದೇ ಸಣ್ಣ ಸಾಗಣೆದಾರರು ವಾಹಕ-ಸಂಸ್ಥೆಗಳು ಯಾ ವ್ಯಕ್ತಿಗಳಿಂದ ಕೇವಲ ೫% ರಿಂದ ೩೦% ನಷ್ಟು ರಿಯಾಯಿತಿಯನ್ನು ಮಾತ್ರ ಪಡೆಯುತ್ತಾರೆ. ಮಧ್ಯವರ್ತಿಗಳು DOTನಿಂದ ಪರವಾನಗಿಯನ್ನು ಪಡೆದಿರುತ್ತಾರೆ ಮತ್ತು ವಿಮಾ ರಕ್ಷಣೆಯನ್ನು ಒದಗಿಸುವ ಅವಶ್ಯಕತೆಗಳನ್ನು ಹೊಂದಿರುತ್ತಾರೆ.

ಟ್ರಕ್‌ಲೋಡ್ (TL) ವಾಹಕ-ಸಂಸ್ಥೆಗಳು ಸಾಮಾನ್ಯವಾಗಿ ಪ್ರತಿ ಕಿಲೋಮೀಟರ್ ಅಥವಾ ಮೈಲ್‌ಗೆ ದರವನ್ನು ವಿಧಿಸುತ್ತವೆ. ಈ ದರವು ದೂರ, ತಲುಪಿಸುವ ಭೌಗೋಳಿಕ ಪ್ರದೇಶ, ಸಾಗಿಸುವ ವಸ್ತುಗಳು, ಬೇಕಾಗುವ ಸಾಧನದ ಪ್ರಕಾರ ಮತ್ತು ಅವಶ್ಯಕ ಸೇವಾ ಸಮಯ ಮೊದಲಾದವನ್ನು ಆಧರಿಸಿ ವ್ಯತ್ಯಾಸಗೊಳ್ಳುತ್ತದೆ. ಮೇಲೆ LTL ಸಾಗಣೆಗಳಿಗೆ ವಿವರಿಸಿದಂತೆ TL ಸಾಗಣೆಗಳೂ ಸಹ ವಿವಿಧ ರೀತಿಯ ದರಗಳನ್ನು ಪಡೆಯುತ್ತವೆ. TL ಮಾರುಕಟ್ಟೆಯಲ್ಲಿ, LTL ಮಾರುಕಟ್ಟೆಯಲ್ಲಿರುವುದಕ್ಕಿಂತ ಸಾವಿರದಷ್ಟು ಹೆಚ್ಚು ಸಣ್ಣ ವಾಹಕಗಳಿರುತ್ತವೆ. ಆದ್ದರಿಂದ, ಸಾಗಣೆ ಮಧ್ಯವರ್ತಿಗಳು ಅಥವಾ ದಳ್ಳಾಳಿಗಳ ಬಳಕೆಯು ಸಾಮಾನ್ಯವಾಗಿರುತ್ತದೆ.

ಮತ್ತೊಂದು ಖರ್ಚು-ಉಳಿಸುವ ವಿಧಾನವೆಂದರೆ ವಾಹಕಗಳ ತಾಣದಲ್ಲೇ ಸರಕುಗಳನ್ನು ಪಡೆದುಕೊಳ್ಳುವುದು ಅಥವಾ ತಲುಪಿಸುವುದು. ಇದನ್ನು ಮಾಡುವುದರಿಂದ ಸಾಗಣೆದಾರರು ಎತ್ತಲು, ಮನೆಗಳಿಗೆ ತಲುಪಿಸುವಿಕೆ/ಪಡೆದುಕೊಳ್ಳುವಿಕೆ, ಒಳಗಿನ ತಲುಪಿಸುವಿಕೆ/ಪಡೆದುಕೊಳ್ಳುವಿಕೆ ಅಥವಾ ಪ್ರಕಟಣೆ/ಗೊತ್ತು ಮಾಡುವಿಕೆ ಮೊದಲಾದವುಗಳಿಗೆ ತಗಲುವ ಯಾವುದೇ ಅನಗತ್ಯ ಖರ್ಚುಗಳನ್ನು ತಪ್ಪಿಸಬಹುದು. ವಾಹಕ-ಸಂಸ್ಥೆಗಳು ಅಥವಾ ಮಧ್ಯವರ್ತಿಗಳು ಸಾಗಣೆದಾರರಿಗೆ ಮೂಲ ಮತ್ತು/ಅಥವಾ ಉದ್ದೇಶಿತ ಸ್ಥಳಕ್ಕೆ ಹತ್ತಿರವಾದ ಸಾಗಣೆ ಕೇಂದ್ರಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ನೀಡಬಹುದು.

ಸಾಗಣೆ ಪರಿಣಿತರು ಅನೇಕ ವಾಹಕ-ಸಂಸ್ಥೆಗಳು, ದಳ್ಳಾಳಿಗಳು ಮತ್ತು ಆನ್‌ಲೈನ್ ವ್ಯಾಪಾರ-ಸ್ಥಾನಗಳಿಂದ ಮಾದರಿ ದರಗಳನ್ನು ನೀಡುವ ಮೂಲಕ ಅವರ ಸೇವೆ ಮತ್ತು ದರಗಳನ್ನು ಅತ್ಯುತ್ತಮವಾಗಿಸುತ್ತಾರೆ. ವಿವಿಧ ಪೂರೈಕೆದಾರರಿಂದ ದರಗಳನ್ನು ಪಡೆಯುವಾಗ, ಸಾಗಣೆದಾರರು ಒದಗಿಸಿದ ದರದಲ್ಲಿ ವ್ಯಾಪಕ ವ್ಯತ್ಯಾಸವನ್ನು ಗಮನಿಸಬಹುದು. ಸಾಗಣೆದಾರರು ದಳ್ಳಾಳಿ, ಸರಕು ರವಾನಿಸುವವರು ಅಥವಾ ಇತರ ಸಾಗಣೆ ಮಧ್ಯವರ್ತಿಗಳನ್ನು ಬಳಸಿದರೆ, ಅವರು ವಾಹಕ-ಸಂಸ್ಥೆಗಳ ಯಾ ವ್ಯಕ್ತಿಗಳ ಫೆಡರಲ್ ಆಪರೇಟಿಂಗ್ ಅಥೋರಿಟಿಯ ಪ್ರತಿಯೊಂದನ್ನು ಪಡೆಯುವುದು ಸಾಮಾನ್ಯವಾಗಿರುತ್ತದೆ. ಸರಕು ದಳ್ಳಾಳಿಗಳು ಮತ್ತು ಮಧ್ಯವರ್ತಿಗಳಿಗೂ ಸಹ ಫೆಡರಲ್ ಕಾನೂನು ಫೆಡರಲ್ ಹೈವೇ ಅಡ್ಮಿನಿಸ್ಟ್ರೇಶನ್‌ನಿಂದ ಪರವಾನಗಿ ಪಡೆದಿರುವುದು ಅಗತ್ಯವಾಗಿರುತ್ತದೆ. ಅನುಭವಿ ಸಾಗಣೆದಾರರು ಪರವಾನಗಿಯಿಲ್ಲದ ದಳ್ಳಾಳಿಗಳು ಮತ್ತು ಸರಕು ರವಾನಿಸುವವರನ್ನು ಬಳಸಿಕೊಳ್ಳುವುದಿಲ್ಲ ಏಕೆಂದರೆ ದಳ್ಳಾಳಿಗಳು ಫೆಡರಲ್ ಆಪರೇಟಿಂಗ್ ಪರವಾನಗಿಯನ್ನು ಪಡೆಯದೇ ಇರುವ ಮೂಲಕ ಕಾನೂನಿನಿಂದ ಹೊರಗೆ ಕೆಲಸ ಮಾಡುತ್ತಿದ್ದರೆ ಸಾಗಣೆದಾರರಿಗೆ ಸಮಸ್ಯೆ ಎದುರಾದಾಗ ಯಾವುದೇ ರಕ್ಷಣೆ ಇರುವುದಿಲ್ಲ. ಅಲ್ಲದೆ, ಸಾಗಣೆದಾರರು ಸಾಮಾನ್ಯವಾಗಿ ದಳ್ಳಾಳಿಗಳ ವಿಮಾ ದೃಢೀಕರಣ ಪತ್ರದ ಮತ್ತು ಸಾಗಣೆಗೆ ಬಳಸುವ ಯಾವುದೇ ವಿಶೇಷ ವಿಮೆಯ ಒಂದು ನಕಲನ್ನು ಕೇಳುತ್ತಾರೆ.

ಭದ್ರತಾ ಸಮಸ್ಯೆಗಳು[ಬದಲಾಯಿಸಿ]

ಸರ್ಕಾರಗಳು ಸರಕು ಸಾಗಣೆಯ ಬಗ್ಗೆ ಹೆಚ್ಚು ಜಾಗೃತೆ ವಹಿಸುತ್ತವೆ ಏಕೆಂದರೆ ಅದು ರಾಷ್ಟ್ರಕ್ಕೆ ಭದ್ರತಾ ಅಪಾಯಗಳನ್ನು ತಂದೊಡ್ಡಬಹುದು. ಆದ್ದರಿಂದ, ಹೆಚ್ಚಿನ ಸರ್ಕಾರಗಳು ಸರಕನ್ನು ನಿರ್ವಹಿಸುವಾಗ ಕಂಡುಬರಬಹುದಾದ ಭಯೋತ್ಪಾದನೆ ಮತ್ತು ಇತರ ಅಪರಾಧದ ಅಪಾಯಗಳನ್ನು ಕಡಿಮೆ ಮಾಡಲು ಸುಂಕದ ಖಾತೆಯ ಏಜೆನ್ಸಿಯಿಂದ ನಿರ್ವಹಿಸಲ್ಪಡುವ ನಿಯಮಗಳು ಮತ್ತು ನಿಬಂಧನೆಗಳನ್ನು ವಿಧಿಸಿವೆ. ಸರಕು ರಾಷ್ಟ್ರದ ಗಡಿಪ್ರದೇಶಗಳಿಂದ ಪ್ರವೇಶಿಸುವುದು ಒಂದು ಹೆಚ್ಚು ಕಳವಳದ ಸಂಗತಿಯಾಗಿದೆ.

ಅಮೇರಿಕಾ ಸಂಯುಕ್ತ ಸಂಸ್ಥಾನವು ಸರಕುಗಳಿಗೆ ಭದ್ರತೆ ನೀಡುವ ಮುಖಂಡ ರಾಷ್ಟ್ರಗಳಲ್ಲಿ ಒಂದಾಗಿದೆ. ಅವು ಸರಕನ್ನು ರಾಷ್ಟ್ರೀಯ ಭದ್ರತೆಗೆ ಇರುವ ಒಂದು ಸಮಸ್ಯೆಯೆಂದು ತಿಳಿಯುತ್ತವೆ. ಸೆಪ್ಟೆಂಬರ್ ೧೧ರಂದು ನಡೆದ ಭಯೋತ್ಪಾದಕರ ದಾಳಿಯ ನಂತರ, ಈ ಭಾರಿ ಪ್ರಮಾಣದ ಸರಕಿನ ಭದ್ರತೆಯು ಪ್ರತಿ ವರ್ಷ ಅಮೇರಿಕಾ ಸಂಯುಕ್ತ ಸಂಸ್ಥಾನದ ಬಂದರುಗಳನ್ನು ಪ್ರವೇಶಿಸುವ ಸುಮಾರು ೬ ದಶಲಕ್ಷ ಸರಕು-ಧಾರಕಗಳ ಮೇಲೆ ಹೆಚ್ಚು ಗಮನ ಹರಿಸಲು ಆರಂಭಿಸಿದೆ.[೧] ಈ ಅಪಾಯಕ್ಕೆ ಇತ್ತೀಚಿನ US ಸರ್ಕಾರದ ಪ್ರತಿಕ್ರಿಯೆಯೆಂದರೆ CSI: ಕಂಟೈನರ್ ಸೆಕ್ಯೂರಿಟಿ ಇನಿಶಿಯೇಟಿವ್. CSI ಎಂಬುದು ಪ್ರಪಂಚದಾದ್ಯಂತದಿಂದ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ಸಾಗಿಸಲ್ಪಡುವ ಧಾರಕಗಳಲ್ಲಿ ತುಂಬಿನ ಸರಕಿಗೆ ಭದ್ರತೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದ ಒಂದು ಯೋಜನೆಯಾಗಿದೆ.[೨]

ಸ್ಥಿರೀಕರಣ[ಬದಲಾಯಿಸಿ]

ವಿವಿಧ ಪ್ರಕಾರದ ಸಾಗಣೆಯಲ್ಲಿ ಸರಕನ್ನು ಸ್ಥಿರಗೊಳಿಸಲು ಮತ್ತು ಭದ್ರತೆ ಒದಗಿಸಲು ಹಲವಾರು ವಿವಿಧ ಮಾರ್ಗಗಳು ಮತ್ತು ಸಾಮಾಗ್ರಿಗಳು ಲಭ್ಯಯಿವೆ. ಉಕ್ಕಿನಿಂದ ಬಿಗಿಯಾಗಿ ಭದ್ರಪಡಿಸುವುದು ಹಾಗೂ ಮರದಿಂದ ಆಧಾರಕೊಡುವುದು ಮತ್ತು ಬಲಪಡಿಸುವಂತಹ ಸಾಂಪ್ರದಾಯಿಕ ಸರಕು ಭದ್ರತೆ ವಿಧಾನಗಳನ್ನು ಮತ್ತು ಸಾಮಾಗ್ರಿಗಳನ್ನು ಹಲವಾರು ದಶಕಗಳ ಕಾಲ ಬಳಸಲಾಗುತ್ತಿತ್ತು ಮತ್ತು ಅವನ್ನು ಈಗಲೂ ವ್ಯಾಪಕವಾಗಿ ಉಪಯೋಗಿಸಲಾಗುತ್ತಿದೆ. ಈಗಿನ ಸರಕು ಭದ್ರತೆ ವಿಧಾನಗಳು ಅನೇಕ ಇತರ ಆಯ್ಕೆಗಳನ್ನು ಒದಗಿಸುತ್ತವೆ, ಅವುಗಳೆಂದರೆ ಪಾಲಿಸ್ಟರ್‌ನಿಂದ ಬಿಗಿಯುವುದು ಮತ್ತು ಕಟ್ಟುವುದು, ಕೃತಕ ಗಟ್ಟಿಪಟ್ಟಿಗಳು ಮತ್ತು ಡನೇಜ್ ಬ್ಯಾಗುಗಳು, ಇವನ್ನು ಏರ್ ಬ್ಯಾಗುಗಳು(ಗಾಳಿ ಚೀಲಗಳು) ಅಥವಾ ಇನ್‌ಫ್ಲಟೇಬಲ್(ಊದಿ ಉಬ್ಬಿಸಬಹುದಾದ) ಬ್ಯಾಗುಗಳೆಂದೂ ಕರೆಯುತ್ತಾರೆ.

ಇವನ್ನೂ ಗಮನಿಸಿ‌[ಬದಲಾಯಿಸಿ]

  • ಸರಕು ವಾಯುಯಾನ ಸಂಸ್ಥೆಗಳು
  • ಕಾರ್ಗೊ ಕಲ್ಟ್
  • ಸರಕು ಗುಣಪರೀಕ್ಷೆ ಮಾಡುವುದು
  • ಸರಕು ಸ್ಕ್ಯಾನ್ ಮಾಡುವುದು
  • ಮೊಮೆಂಟಮ್ ಟ್ರಾನ್ಸ್‌ಪೋರ್ಟ್
  • ಕೌಂಟರ್-ಟು-ಕೌಂಟರ್ ಪ್ಯಾಕಿಂಗ್
  • ಡಯಲ್-ಎ-ಟ್ರಕ್ (DAT)
  • ಸಾಮಾನು-ಸರಂಜಾಮು ಕಂಪನಿ
  • ಸರಕು ಸಾಗಣೆ ಸಂಸ್ಥೆ
  • ಸಾಮಾಗ್ರಿಗಳು
  • ಸರಕು ಸಾಗಣೆ ರೈಲು
  • IATA ಇ-ಫ್ರೈಟ್
  • ಓನರ್-ಆಪರೇಟರ್ ಇಂಡಿಪೆಂಡೆಂಟ್ ಡ್ರೈವರ್ಸ್ ಅಸೋಸಿಯೇಶನ್
  • ಉತ್ಪನ್ನಗಳು
  • ಸ್ಟ್ಯಾಂಡರ್ಡ್ ಕ್ಯಾರಿಯರ್ ಆಲ್ಫ ಕೋಡ್ಸ್
  • ಪೂರೈಕೆ ಸರಪಣಿ ನಿರ್ವಹಣೆ ಮತ್ತು ವ್ಯವಸ್ಥಾಪನ ತಂತ್ರದಲ್ಲಿನ ದಾಖಲೆ ಸ್ವಯಂಚಾಲನೆ

ಉಲ್ಲೇಖಗಳು‌‌[ಬದಲಾಯಿಸಿ]

  1. "ಮುರ್ರೆ ಅನ್‌ವೈಲ್ಸ್ ಫರ್ಸ್ಟ್-ಇನ್-ದಿ-ನೇಶನ್ ಪೋರ್ಟ್ ಸೆಕ್ಯೂರಿಟಿ ಡೆಮೋಂಸ್ಟ್ರೇಶನ್". Archived from the original on 2007-05-31. Retrieved 2011-05-06.
  2. "CSI: ಕಂಟೈನರ್ ಸೆಕ್ಯೂರಿಟಿ ಇನಿಶಿಯೇಟಿವ್". Archived from the original on 2006-10-10. Retrieved 2011-05-06.

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]

"https://kn.wikipedia.org/w/index.php?title=ಸರಕು&oldid=1127481" ಇಂದ ಪಡೆಯಲ್ಪಟ್ಟಿದೆ