ಸದಸ್ಯ:Chithra.cbz/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                        ತೋಟಗಾರಿಕಾ ಮತ್ತು ತೋಟಗಾರಿಕೆ
 ತಾರಸಿ ಮತು ಕೈತೋಟ

ಹಲವು ದಶಕಗಳ ಹಿಂದೇ ಗ್ರಾಮೀಣ ,ಪಟ್ಟಣ ,ನಗರ ಪ್ರದೇಶಗಳ ಬಹಳ ಕುಟಂಬಗಳ ತಮ್ಮ ಬಹುತೀಕ ತರಕಾರಿ ಇವುಗಳ ಬಳಕೆಗಳನ್ನು ಕೈತೋಟಗಳ ಮೂಲಕವೆ ಪರಿಹರಿಸುತಿದ್ದರು. ಕಾಲಕ್ರಮೇಣ, ನಗರೀಕರಣ ಮತ್ತು ಆಧುನಿಕ ಜೀವನ ಶೈಲಿಯ ಪರಿಣಾಮವಾಗಿ ಕೈತೋಟಗಳು ಕಡಿಮೆಯಾಗಿ ಬಹುತೀಕ ಕುಟುಂಬಗಳು ಹಣ್ಣು -ತರಕಾರಿಗಳನ್ನು ಸಂತೆ ಮತ್ತು ಮಾರುಕಟ್ಟೆಗಳ ಮೂಲಕ ಪುರೈಸಿಕೊಳ್ಳುತ್ತಿವೆ.

ಸಮತೋಲನ ಆಹಾರವನ್ನು ದಿನ ನಿತ್ಯ ಸುಲಭವಾಗಿ ಸೇವಿಸುವುದಿಲ್ಲದೆ,ಕಡಿಮೆ ಸ್ಥಳಗಳಲ್ಲಿ ,ತ್ಯಾಜ್ಯ ವಸ್ತುಗಳ ಬಳಕೆ ,ನೀರಿನ ಬಳಕೆ ಮತ್ತು ಕಡಿಮೆ ಖರ್ಚು ಒಳಗೊಂಡ ತಾರಸಿ ಮತ್ತು ಕೈತೋಟದಲ್ಲಿ ಹಣ್ಣು ತರಕಾರಿಗಳನ್ನು ಬೆಳೆದು ಪೌ ಕ ,ಸಮತೋಲನ ಮತ್ತು ಆಹಾರ ಭದ್ರತೆಯನ್ನು ಮನೆ ಮಟ್ಟಿಗೆ ಒದಗಿಸಿಕೊಳ್ಳುವುದು ತಾರಸಿ ಮತ್ತು ಕೈತೋಟದ ಉದೇಶ ,ಅಲ್ಲದೆ ಮನಸ್ಸಿಗೆ ಉಲ್ಲಾಸ ಮತ್ತು ಮಕ್ಕಳಲ್ಲಿ ಪರಿಸರ ಸಂಸ್ಕ್ರುತಿ ಬೆಳೆಸಬಹುದಾಗಿದೆ.

ಉದೆಶಗಳು: ೧.ನಗರ ಮತ್ತು ಪಟ್ಟಣ ಪ್ರದೆಶ ನಾಗರೀಕರಿಗೆ ಸಮತೋಲನ ಆಹಾರ ಒದಗಿಸಲು ಹಣ್ಣು ಮತ್ತು ತರಕಾರಿಗಳನ್ನು ತಾರಸಿ ಮತ್ತು ಕೈತೋಟದಲ್ಲಿ ಸ್ವತಃಬೆಳಸುವುದು. ೨.ಸಾವಯವ ತ್ಯಜ್ಯಗಳನ್ನು ಬಳಸಿಕೊಂಡು ಎರೆಹುಳು ಗೋಬರ, ಕಾಂಪೋಸ್ಟ್ ಇತ್ಯದಿಗಳನ್ನು ತಯಾರಿಸಿಕೊಂಡು ಮರುಬಳಕೆ , ಮಳೆ ನೀರು ಕೊಯ್ಲು ಹಾಗೂ ಅಡಿಗೆ ಮನೆಯಲ್ಲಿ ಬಳಕೆಯಾದ ನೀರನ್ನು ಮರುಬಳಕೆ ಮಾಡಿಕೊಂಡು ತಾಜಾ ತರಕಾರಿಗಳನ್ನು ಬೆಳೆಸುವುದು. ೩.ಕುಟುಂಬದ ಸದಸ್ಯರು ಅದರಲ್ಲೂ ಮಹಿಳೆಯರು ಮತ್ತು ಮಕ್ಕಳಲ್ಲಿ ತಾರಸಿ ಮತ್ತು ಕೈತೋಟಗಳಲ್ಲಿ ಆಸಕ್ತಿ ಮೂಡಿಸಿ ,ದೈಹಿಕ/ಮಾನಸಿಕ ಆರೋಗ್ಯದ ಕಾಳಜಿವಹಿಸುವುದು. ೪.ಹೊಸ ಆವಿಷ್ಕಾರಗಳಾದ Hydroponics,Aeroponics,Soilless culture ಮತ್ತು ಜೀವಾಮೃತ ಇತ್ಯಾದಿಗಳನ್ನು ತರಕಾರಿ ಉತ್ಪಾದನೆಯಲ್ಲಿ ಅಳವಡಿಸಿಕೊಳ್ಳುವುದು.

ಈ ನಿಟ್ಟಿನಲ್ಲಿ , ರಾಷ್ಟೀಯ ಕೃಷಿವಿಕಾಸ ಯೋಜನೆಯಡಿ ಕೈತೋಟ ಮತ್ತು ತಾರಸಿ ತೋಟಗಳು ಉತೇಜನ ಕಾರ್ಯಕ್ರಮವನ್ನು ರಾಜ್ಯದ ಕೆಲವು ಜಿಲ್ಲೆಗಳಲ್ಲಿ (ಬೆಂಗಳೂರು ನಗರ  ಮೈಸೂರು , ದಕ್ಷಿಣ ಕನ್ನಡ , ಮಂಡ್ಯ , ಚಿಕ್ಕಮಗಳೂರು )ಹಮ್ಮಿಕೊಳಲಾಗಿದೆ,ಸಂಬಂದಿಸಿದಂತೆ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಕೈತೋಟ/ತಾರಸಿ ತೋಟಗಳ ಪ್ರಾತ್ಯಕ್ಷತೆ ಕೈಗೊಂಡು,ಸಾರ್ವಜನಿಕರಲ್ಲಿ ಅರಿವು,ಆಸಕ್ತಿ ಮತ್ತು ಉತ್ತೇಜನ ಮೂಡಿಸುವ ಉದ್ದೇಶವಾಗಿರುತ್ತದೆ.
                

ಕೈತೋಟ:

ಇದು ಒಂದು ಕಲೆ.ಹೊರಗಿನಿಂದ ಏನನ್ನು ಕೊಂಡು ತರದೆ ಅಡಿಗೆ ಮನೆಯ ತ್ಯಾಜ್ಯ , ಸಗಣಿ , ಗಂಜಲ ಇತ್ಯಾದಿಗಳನ್ನು ಉಪಯೋಗಿಸಿ ಅಂದವಾದ ಕೈತೋಟದಲ್ಲಿ ಹಣ್ಣು ತರಕಾರಿ ಬೆಳಸುವುದು. ಕೈತೋಟ ಮದುವುದು ಖುಷಿ ಕೊಡುವ ಹವ್ಯಾಸ ಮತ್ತು ಮನೆ ಮಂದಿಗೆ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಸಾವಯವ ಪದ್ದತಿಯಲ್ಲಿ ಬೆಳೆದು ಒದಗಿಸುವ ವಿದಾನ ,ಋತುಮಾನಕ್ಕನುಗುಣವಾಗಿ ಬೆಳೆಯ ಆಯ್ಕೆ , ಬೆಳೆ ಪರಿವರ್ತನೆ , ಏರು ಮಡಿಗಳ ನಿರ್ವಹಣೆ ಸರಿಯಾಗಿ ಮಾಡುವುದರ ಮೂಲಕ ಕೈತೋಟ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ.

ತೋಟದ ಸಾಂವಿಧಾನ (ವಿನ್ಯಸ) ಮತ್ತು ರಚನೆ: ತೋಟವೆಂದರೆ ಕೇವಲ ಸಸ್ಯಗಳ ಗುಂಪು ಅಥವಾ ಸಮೂಹವಲ್ಲ ಅದು ಉದ್ದೇಶಪೂರಿತವಾದ ಸಸ್ಯವಿನ್ಯಾಸ ,ಸಂವಿಧಾನ ತೋಟದ ಉದ್ದೇಶ ತರಕಾರಿ,ಹೂವು,ಹಣ್ಣುಗಳ ಉತ್ಪದನೆ,ತನ್ಮೂಲಕ ಲಾಭಗಳಿಕೆಯಾಗಿರಬಹುದು .ಅಥವಾ ಕೇವಲ ಅಲಂಕಾರ,ಗೄಹಜೀವನದ ವಿಸ್ತರಣ ಕ್ಷೇತ್ರವಾಗಿರಬಹುದು. ತೋಟಗಳಿಗೆ ಬೇಕಾಗಿರುವುದು ಗಟ್ಟಿಮುಟ್ಟಾದ ಬೇಲಿ,ಗಾಳಿ ತಡೆ ಮುಂತಾದವು.

ಜೈವಿಕ ತ್ಯಾಜ್ಯ ನಿರ್ವಹಣೆ :

ತಾರಸಿ/ಕೈತೋಟಗಳಲ್ಲಿನ ಸಸಿಗಿಡಗಳ ತ್ಯಾಜ್ಯ/ಅಡಿಗೆ ಮನೆ ತ್ಯಾಜ್ಯಗಳನ್ನು ಸದ್ಬಳಕೆ ಮಾಡುವುದು.ಅಂದರೆ ಎರೆಹುಳುಗೋಬ್ಬರ/ಜೀವಾಮೄತ /ಬಯೋಡೈಜಸ್ಟೆರ್ ರೂಪದಲ್ಲಿ ಪುನರ್ ಬಳಕೆ ಮಾಡಿಕೋಂಡು ತ್ಯಾಜ್ಯ ವಸ್ತುಗಳಿಂದಾಗುವ ಮಾಲಿನ್ಯ ತಡೆದು,ತ್ಯಾಜ್ಯ ಹಣ್ಣು ಮತ್ತು ತರಕಾರಿಗಳನ್ನು ಬೆಳೆಸಲು ಗೊಬ್ಬರವಾಗಿ ಬಳಸುವುದು.

ನೀರಿನ ಸದ್ಬಳಕೆ ನಿರ್ವಹಣೆ: ಹೆಚ್ಚುತ್ತಿರುವ ಜನಸಂಖ್ಯೆಗೆ ಮತ್ತು ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ,ನೀರು ಪೋಲಾಗುವುದನ್ನು ತಡೆದು,ಸದ್ಬಳಕೆ ಮಾಡುವುದು ಎಲ್ಲರ ಬಹು ಮುಖ್ಯ ಕರ್ತವ್ಯ .ಈ ನಿಟ್ಟಿನಲ್ಲಿ,ಅಡಿಗೆ ಮನೆಯಲ್ಲಿ ಬಳಕೆಯಾದ ನೀರಿನ್ನು ಪುನರ್ ಬಳಕೆ ಮಾಡುವ ವ್ಯವಸ್ಥೆಯನ್ನು ರೂಪಿಸಿಕೊಳ್ಳುವುದು ಹಾಗೂ ತಾರಸಿ ಮೇಲೆ ಬಿದ್ದ ಮಳೆ ನೀರನ್ನು ಕೊಯ್ಲು ಮಾಡಿ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಸಲು ಈ ನೀರನ್ನು ಬಳಸಬಹುದು ಹಾಗೂ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು .

ಹೈಡ್ರೋಪೋನಿಕ್ಸ್: ಮಣ್ಣಿಲ್ಲದೆ ಹಣ್ಣು ಮತ್ತು ತರಕಾರಿಗಳನ್ನು ಪೋಷಕಾಂಶವುಳ್ಳ ನೀರಿನಲ್ಲಿ ಬೆಳೆಸುವುದು.ಕೆಲವೊಮ್ಮೆ ಮರಳು/ಜಲ್ಲಿ ಕಲ್ಲುಗಳ ಆಧಾರದಲ್ಲೂ ಬೆಳೆಸಬಹುದು.ಇಲ್ಲಿ ಪೋಷಕಾಂಶಗಳ ದ್ರಾವಣವನ್ನು ಕ್ರಮೇಣವಾಗಿ ಪಂಪ್ ವ್ಯವಸ್ಥೆಯಿಂದ ಗಿಡಗಳಿಗೆ ಸರಬಾರಾಜು ಮಾಡಿ ಬೆಳೆಸುವುದು.ಗಿಡಗಳು ಬೆಳೆದಂತೆ concentration of solution ಮತ್ತು frequency of pumping ಗಳನ್ನು ಹಚ್ಚಿಸಿಕೊಳುವುದು.ಈ ವಿಧಾನದಲ್ಲಿ ಎಲೆಜಾತಿ ತರಕಾರಿಗಳನ್ನು ಉತ್ಕ್ರುಷ್ಟವಾಗಿ ಬೆಳೆಸಬಹುದಾಗಿದ್ದು, ಈ ಫಸಲು,ಭೂಮಿಯಲ್ಲಿ ಬೆಳೆದ ಬೆಳೆಗೆ ಸಮವಾಗಿರುತ್ತದೆ.ಆದರೆ ಯಂತ್ರೋಪಕರಣ ವ್ಯವಸ್ಥೆಗೆ ಹೆಚ್ಚಿನ ಹಣ ಹೂಡಿಕೆ ಅಗತ್ಯವಿರುತ್ತದೆ.ಈ ಪದ್ದತಿಯನ್ನು ನುರಿತ ವಿಜ್ಜಾನಿಗಳಿಂದ ತರಬೇತಿ ಅಥವಾ ಅನುಭವವುಳ್ಳ ವಿಷಯತಜ್ಜರ ಸಲಹೆಗಳೊಂದಿಗೆ ಪರಿಹಾರ ಗೊಳಿಸುವುದು.

ಏರೋಪೋನಿಕ್ಸ: ಗಿಡಗಳನ್ನು ಗಾಳಿ ಮತ್ತು ತೇವಾಂಶ ವಾತಾವರಣದಲ್ಲಿ ಮಣ್ಣಿಲ್ಲದೆ ಬೆಳೆಸುವ ಪದ್ಥತಿ.ಗಿಡಗಳನ್ನು ಮಣ್ಣಿಲ್ಲದೆ ಕೇವಲ ಪೋಷಕಾಂಶಗಳನ್ನು ಬೇರುಗಳಿಗ ಸಿಂಪರಂಣೆ ಮಾಡಿ ಬೆಳೆಸಬಹುದು.ಈ ಚಟುವಟಿಕೆಯನ್ನು ಒಂದು ಸೀಮಿತ ಒಳಾಂಗಣದಲ್ಲಿ(ಏರೋಪೋನಿಕ್ ಬಾಕ್ಸ್) ಕಾಂಡ ಮತ್ತು ಬೇರುಗಳಿಗೆ ಪೋಷಕಾಂಶ ಸಿಂಪರಣೆ ಮಾಡಿ ಬೇರುಗಳಿಗೆ ಯತ್ತೇಚ್ಛವಾದ ಆಮ್ಲಜನಕ ಒದಗಿಸಿ ಗಿಡಗಳನ್ನು ಬೆಳೆಸುವುದು. ಇಲ್ಲಿ ನಿಯಂತ್ರಿತ ವಾತಾವರಣ ನಿರ್ವಹಣೆ ಮುಖ್ಯವಾಗಿದ್ದು ,ಒಳೆಯ ಗಿಡ ಬೆಳವಣಿಗೆಗೆ(ಕೀಟ/ರೋಗರಹಿತ)ಸಹಾಯಕವಾಗಿರುತ್ತದೆ.

ಸಾಯಿಲ್ ಲೆಸ್ ಕಲ್ಚರ್: ಈ ತಾಂತ್ರಿಕತೆಯೂ ಸಹ ಮಣ್ಣಿಲ್ಲದೆ ಕೃತಕವಾದ ತಲಾಧಾರದಲ್ಲಿ ಪೋಷಕಾಂಶಗಳನ್ನು ಒದಗಿಸಿ ಗಿದಗಳನ್ನು ಬೆಳೆಸುವ ವಿಧಾನ,ಇತೀಚೆಗೆ ಈ ತಾಂತ್ರಿಕತೆಯಲ್ಲಿ ಕೊಕೋಪೀಟ್,ಸ್ಪಾಫ್ ನಮ್ ಪೀಟ್,ವೆರ್ಮಿಕ್ಯುಲೈಟ್,ಬಾರ್ಕ್ ಚಿಪ್ಸ್,ರೈಸ್ ಹಲ್ಸ್,ಬಗಾಸ್ಸೆ,ಸೆಡ್ಡ ಪೀಟ್ ಮತ್ತು ಸಾಡಸ್ಟಳನ್ನು ಬಳಸಿಕೊಂಡು ಗಿಡಗಳನ್ನು ಬೆಳೆಸಲಾಗುತ್ತಿದೆ.

ತಾರಸಿ ತೋಟ:

ಕೈತೋಟ ಮಾಡಲು ಸ್ಥಳ ಇಲ್ಲದೆ ಇರುವ ಪಕ್ಷದಲ್ಲಿ ಮನೆಯ ತಾರಸಿ ಮೇಲೆ ಕುಂಡಗಳಲ್ಲಿ ಸುಲಭವಾಗಿ ಸಾವಯವ ಪದ್ದತಿಯಲ್ಲಿ ತರಕಾರಿ ಬೆಳೆಯಬಹುದು, ತಾರಸಿ ತೋಟದಲ್ಲಿ ಸಾವಯವ ಗೋಬ್ಬರ ಉಪಯೋಗಿಸಿ ತರಕಾರಿ ಬೆಳೆಯುವ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.ಬೆರೆಯ ಮಾದರಿ ಮತ್ತು ವಸ್ತುಗಳಿಂದ ಮಾಡಿದ ಕುಂಡುಗಳನ್ನು ತರಕಾರಿ ಬೆಳೆಸಲು ಉಪಯೋಗಿಸಬಹುದು ಹಾಗು ಬೆಳೆಸಿದ ತರಕಾರಿಗಳು ಶುಚಿಯಾಗಿಯೂ,ರಚಿಯಾಗಿಯೂ ಇರುತದೆ.

ತೋಟದ ಸಾಂವಿಧಾನ (ವಿನ್ಯಸ) ಮತ್ತು ರಚನೆ: ತೋಟವೆಂದರೆ ಕೇವಲ ಸಸ್ಯಗಳ ಗುಂಪು ಅಥವಾ ಸಮೂಹವಲ್ಲ ಅದು ಉದ್ದೇಶಪೂರಿತವಾದ ಸಸ್ಯವಿನ್ಯಾಸ ,ಸಂವಿಧಾನ ತೋಟದ ಉದ್ದೇಶ ತರಕಾರಿ,ಹೂವು,ಹಣ್ಣುಗಳ ಉತ್ಪದನೆ,ತನ್ಮೂಲಕ ಲಾಭಗಳಿಕೆಯಾಗಿರಬಹುದು .ಅಥವಾ ಕೇವಲ ಅಲಂಕಾರ,ಗೄಹಜೀವನದ ವಿಸ್ತರಣ ಕ್ಷೇತ್ರವಾಗಿರಬಹುದು. ತೋಟಗಳಿಗೆ ಬೇಕಾಗಿರುವುದು ಗಟ್ಟಿಮುಟ್ಟಾದ ಬೇಲಿ,ಗಾಳಿ ತಡೆ ಮುಂತಾದವು.

</ref>ತೋಟಾಗಾರಿಕೆ ಬರೆದವರು ಮ.ಲ.ನರಸಿಂಹ ಅಯ್ಯಂಗಾರ್ ಮತ್ತು ಎಂ.ಆರ್. ಆನಂದರಾಮಯ್ಯ.

thumbnail thumbnail thumbnail thumbnail thumbnail