ಸದಸ್ಯ:ಅರ್ಚನ ಹೂಡೆ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                       == ಡಾ. ಸೇಡಿಯಾಪು ಕೃಷ್ಣ ಭಟ್ಟರು ==

ಡಾ.ಸೇಡಿಯಾಪು ಕೃಷ್ಣ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಸೇಡಿಯಾಪು ಎಂಬ ಐತೆಹಾಸಿಕ ಗ್ರಾಮದಲ್ಲಿ ೮-೬-೧೯೦೨ ರಂದು ಜನಿಸಿದರು. ಇವರು ಪಂಡಿತರು, ಕವಿಗಳು, ಪತ್ರಿಕಾ ಮಾಧ್ಯಮಿ, ವೈದ್ಯಕೀಯ ಪ್ರವೀಣರೂ ಆಗಿ ನೂರಾರು ಮಂದಿಗೆ ಜ್ಞಾನ ನಿಧಿಯಾಗಿದ್ದರು. ಇವರು ವೀರಕಂಭ ಶಾಲೆಯಲ್ಲಿ ಉಪಾಧ್ಯಾಯರಾಗಿ ಸೇವೆಸಲ್ಲಿಸಿದ್ದರು. 'ರಾಷ್ಟ್ರ ಬಂಧು' ಎಂಬ ಪತ್ರಿಕೆಯ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.ಇವರಿಗೆ ವಂಶಪಾರಂಪರ್ಯವಾಗಿ ಬಂದ ವೈಧ್ಯಕೀಯ ವೃತ್ತಿಯ ಬಗ್ಗೆ ಆಸಕ್ತಿ ಇರಲಿಲ್ಲ, ಸಾಹಿತ್ಯ ಕೃಷಿಯನ್ನು ಅವಲಂಭಿಸಿದ್ದರು. ಇವರು ಮದ್ರಾಸ್ ವಿಶ್ವ ವಿದ್ಯಾನಿಲಯದಿಂದ ಬಿ.ವಿದ್ವಾನ್ ಪದವಿಯನ್ನೂ ಪಡೆದರು. ಸೇಡಿಯಾಪು ಕೃಷ್ಣ ಭಟ್ಟರ ಸಾಹಿತ್ಯ ರಚನೆ ಆರಂಭವಾದದ್ದು ಅವರ ಹದಿನಾಲ್ಕನೇ ವಯಸ್ಸಿನಲ್ಲಿ. ಅವರು ರಚಿಸಿದ್ದ ಮೊದಲನೆಯ ಕೃತಿ 'ಪಳಮೆಗಳು'. ೧೯೪೬ರಲ್ಲಿ 'ಚಂದ್ರಖಂಡ' ಎಂಬ ಕವನ ಸಂಕಲನವನ್ನು ರಚಿಸಿದ್ದಾರೆ. ಅಲ್ಲದೇ ಕೆಲವು ಸಣ್ಣ ಕಥೆಗಳು, ಕನ್ನಡ ವರ್ಣಗಳು, ತಥ್ಯದರ್ಶನ, ವಿಚಾರಪ್ರಬಂಧ, ಹೀಗೆ ಹಲವಾರು ಸಾಹಿತ್ಯವನ್ನು ರಚಿಸಿದ್ದಾರೆ. ಇವರ ಕೃತಿಗಳಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ೧೯೪೮ ರಲ್ಲಿ 'ಪಳಮೆಗಳು' ಮತ್ತು ೧೯೫೨ ರಲ್ಲಿ 'ಕನ್ನಡ ವರ್ಣಗಳು' ವಿಗೆ ಮದ್ರಾಸ ಸರ್ಕಾರ ಪ್ರಶಸ್ತಿ, ೧೯೭೧ರಲ್ಲಿ 'ಚಂದ್ರಖಂಡ' ಸಾಹಿತ್ಯಕ್ಕೆ ಹಾಗು ೧೯೮೫ ರಲ್ಲಿ 'ಛಂದೋಗತಿ' ಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೯೧ ರಲ್ಲಿ ವರ್ಧಮಾನ ಪ್ರಶಸ್ತಿ, ೧೯೯೪ ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು ಅತ್ಯುತಮ ಪಂಪ ಪ್ರಶಸ್ತಿ, ಅಲ್ಲದೇ ಚಿದಾನಂದ ಪ್ರಶಸ್ತಿ ಲಭಿಸಿವೆ. ಇವರು ೧೯೯೬ ಜೂನ್ ೮ ರಂದು ನಿಧನರಾದರು.