ಸತಿ ಸುಲೋಚನ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
| ಸತಿ ಸುಲೋಚನ |
|
| ಬಿಡುಗಡೆ ವರ್ಷ | ೧೯೩೪ |
| ಚಿತ್ರ ನಿರ್ಮಾಣ ಸಂಸ್ಥೆ | ಸೌತ್ ಇಂಡಿಯಾ ಮೂವಿಟೋನ್ |
| ನಾಯಕ | ಆರ್.ನಾಗೇಂದ್ರರಾಯ |
| ನಾಯಕಿ | ಲಕ್ಷ್ಮೀಬಾಯಿ |
| ಪೋಷಕ ವರ್ಗ | ಸುಬ್ಬಯ್ಯನಾಯ್ಡು, ತ್ರಿಪುರಾಂಭ, ಸಿ.ಟಿ.ಶೇಷಾಚಲಮ್ |
| ಸಂಗೀತ ನಿರ್ದೇಶನ | ಆರ್.ನಾಗೇಂದ್ರರಾಯ |
| ಕಥೆ / ಕಾದಂಬರಿ | |
| ಚಿತ್ರಕಥೆ | |
| ಸಂಭಾಷಣೆ | ಬೆಳ್ಳಾವೆ ನರಹರಿ ಶಾಸ್ತ್ರಿ |
| ಸಾಹಿತ್ಯ | |
| ಹಿನ್ನೆಲೆ ಗಾಯನ | |
| ಛಾಯಾಗ್ರಹಣ | ಸ್ಟೂಡಿಯೊ |
| ನೃತ್ಯ | |
| ಸಾಹಸ | |
| ಸಂಕಲನ | |
| ನಿರ್ದೇಶನ | ವೈ.ವಿ.ರಾವ್ |
| ನಿರ್ಮಾಪಕರು | ಎಸ್.ಚಮನ್‍ಲಾಲ್ ದುಂಗಾಜಿ |
| ಪ್ರಶಸ್ತಿಗಳು | |
| ಇತರೆ ಮಾಹಿತಿ | ಕನ್ನಡ ಚಿತ್ರರಂಗದ ಪ್ರಪ್ರಥಮ ಧ್ವನಿಮುದ್ರಿತ(ಟಾಕಿ) ಚಲನಚಿತ್ರ |
ಸತಿ ಸುಲೋಚನ - ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ.
ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ಚಲನಚಿತ್ರ (ವಾಕ್ಚಿತ್ರ). ಆರ್.ನಾಗೇಂದ್ರರಾಯರು ನಾಯಕನ ಪಾತ್ರದಲ್ಲಿ ನಟಿಸಿ, ಸಂಗೀತ ನಿರ್ದೇಶಿಸಿದ್ದ ಈ ಚಿತ್ರವನ್ನು ನಿರ್ದೇಶಿಸಿದವರು ವೈ.ವಿ.ರಾವ್.
ಈ ಚಲನಚಿತ್ರವು ೧೯೩೪ರ ಮಾರ್ಚ್ ೩ರಂದು ಬಿಡುಗಡೆಯಾಗಿ ೬ ವಾರಗಳ ಯಶಸ್ವಿ ಪ್ರದರ್ಶನ ಕಂಡಿತೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ.ಬೆಂಗಳೂರಿನ ಮೊದಲ ಚಿತ್ರಮಂದಿರ ದೊಡ್ಡಣ್ಣಹಾಲ್ (ಪ್ಯಾರಾಮೌಂಟ್) ೧೯೦೫ ರಲ್ಲಿ ಆರಂಭವಾಯಿತು. ಕನ್ನಡದ ಪ್ರಥಮ ವಾಕ್ಚಿತ್ರ ಸತಿ ಸುಲೋಚನಾ (೧೯೩೪) ಬಿಡುಗಡೆಗೊಂಡಿದ್ದು ಈ ಚಿತ್ರಮಂದಿರದಲ್ಲೇ.
ಅದರೊಳಗಿನ ಸಿಂಹ ಬರುವ ದೃಶ್ಯ ಕಂಡು ಹಲವು ಮಂದಿ ಚಿತ್ರ ಮಂದಿರದಲ್ಲೇ ಮೂರ್ಚೆ ಹೋಗಿದ್ದರಂತೆ. ಇನ್ನು ಕೆಲವರು ಸಿಂಹ ಬಂದೇ ಬಿಟ್ಟಿತೆಂದು ಹೆದರಿ ಸಿನಿಮಾ ಮಂದಿರದಿಂದ ಕಾಲ್ಕಿತ್ತಿದ್ದರಂತೆ. ನಿರ್ದೇಶನ : ಯರಗುಡಿಪಟಿ ವರದಾ ರಾವ್, ಕಥೆ : ಬೆಳ್ಳಾವೆ ನರಹರಿಶಾಸ್ತ್ರಿ, ತಾರಾಗಣ : ಆರ್. ನಾಗೇಂದ್ರರಾವ್, ಸುಬ್ಬಯ್ಯನಾಯ್ಡು, ಇಂದುಬಾಲಾ ಇತ್ಯಾದಿ, ನಿರ್ಮಾಪಕ : ಚಮನ್ ಲಾಲ್ ದೂಂಗಾಜಿ, ಸಂಗೀತ : ಆರ್. ನಾಗೇಂದ್ರರಾವ್, ನರಹರಿ ಶಾಸ್ತ್ರಿ. ೧೭೦ ನಿಮಿಷದ ಚಿತ್ರ, ೪೦ ಸಾವಿರ ವೆಚ್ಚ."ನಮನ"