ಸಂವರ್ಧಕ ಸ್ಟೀರಾಯ್ಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸಂವರ್ಧಕ ಸ್ಟೀರಾಯ್ಡ್‌ಗಳು, ಅಧಿಕೃತವಾಗಿ ಸಂವರ್ಧಕ-ಪುರುಷಲಕ್ಷಣ ಉತ್ಪಾದಕ ಸ್ಟೀರಾಯ್ಡ್‌ಗಳು (ಅನಬಾಲಿಕ್-ಆಂಡ್ರೋಜೆನಿಕ್ ಸ್ಟೀರಾಯ್ಡ್ - ಎಎಎಸ್) ಎಂದು ತಿಳಿಯಲಾಗುವ, ಪುರುಷ ಸ್ಟೀರಾಯ್ಡ್‌ಗಳಾದ ಟೆಸ್ಟಾಸ್ಟರೋನ್ ಮತ್ತು ಡೈಹೈಡ್ರೋಟೆಸ್ಟಾಸ್ಟರೋನ್‌ಗಳ ಪರಿಣಾಮಗಳನ್ನು ಅನುಕರಿಸುವ ಮದ್ದುಗಳು. ಅವು ಜೀವಕೋಶಗಳಲ್ಲಿ ಪ್ರೋಟೀನ್ ಸಂಶ್ಲೇಷಣೆಯನ್ನು ಹೆಚ್ಚಿಸುತ್ತವೆ, ಪರಿಣಾಮವಾಗಿ ಜೀವಕೋಶಅಂಗಾಂಶದ ಶೇಖರಣೆಯಾಗುತ್ತದೆ (ಸಂವರ್ಧನ ಕ್ರಿಯೆ), ವಿಶೇಷವಾಗಿ ಸ್ನಾಯುಗಳಲ್ಲಿ. ಸಂವರ್ಧಕ ಸ್ಟೀರಾಯ್ಡ್‌ಗಳು, ಧ್ವನಿತಂತುಗಳು ಮತ್ತು ಮೈರೋಮಗಳ ಬೆಳವಣಿಗೆಯಂತಹ ಪುರುಷ ಲಕ್ಷಣಗಳ ಬೆಳವಣಿಗೆ ಮತ್ತು ನಿರ್ವಹಣೆಯನ್ನು ಒಳಗೊಂಡಂತೆ, ಪುರುಷ ಹಾರ್ಮೋನಿನ ಲಕ್ಷಣಗಳು ಮತ್ತು ಪುರುಷಲಕ್ಷಣಗಳನ್ನು ಉತ್ಪಾದಿಸುವ ಗುಣಗಳನ್ನು ಸಹ ಹೊಂದಿವೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು