ಸಂಯುಕ್ತ ಸಂಸ್ಥಾನದ ಸೈನ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
United States Army

United States Army Seal
ಸಕ್ರಿಯ 14 June 1775 – present
ದೇಶ United States
Type Army
ಗಾತ್ರ 549,015 Active personnel
563,688 Reserve and National Guard personnel
Part of Department of War
(1789-1947)
Department of the Army
(1947-present)
ಧ್ಯೇಯವಾಕ್ಯ "This We'll Defend"
ಕದನಗಳು Revolutionary War
Indian Wars
War of 1812
Mexican-American War
Utah War
American Civil War
Spanish-American War
Philippine-American War
Banana Wars
Boxer Rebellion
World War I
World War II
Korean War
Vietnam War
Gulf War
Somali Civil War
Kosovo War
War In Afghanistan
Iraq War
ದಂಡನಾಯಕರು
Chief of Staff GEN George W. Casey, Jr.
Vice Chief of Staff GEN Peter W. Chiarelli
Sergeant Major of the Army SMA Kenneth O. Preston
ಲಾಂಛನಗಳು
Recruiting Logo "Army Strong"

ಸಂಯುಕ್ತ ಸಂಸ್ಥಾನದ ಸೈನ್ಯ ವು ಸಂಯುಕ್ತ ಸಂಸ್ಥಾನದ ಸಶಸ್ತ್ರ ಪಡೆ ಗಳ ಒಂದು ಶಾಖೆಯಾಗಿದ್ದು, ಭೂ-ನೆಲೆಯ ಸೇನಾ ಕಾರ್ಯಾಚರಣೆಗಳಿಗೆ ಜವಾಬ್ದಾರವಾಗಿದೆ. ಇದು ಅಮೆರಿಕ ಸೈನ್ಯದ ಅತ್ಯಂತ ದೊಡ್ಡ ಮತ್ತು ಹಳೆಯ ಸ್ಥಾಪಿತ ಶಾಖೆಯಾಗಿದೆ ಮತ್ತು ಏಳು ಅಮೆರಿಕದ ಸಮವಸ್ತ್ರಸಹಿತ ಸೇವೆ (ಯುನಿಫಾರ್ಮ್‌ಡ್ ಸರ್ವಿಸಸ್‌)ಗಳಲ್ಲಿ ಒಂದಾಗಿದೆ. ಆಧುನಿಕ ಸೈನ್ಯವು ಭೂಖಂಡ (ಕಾಂಟಿನೆಂಟಲ್) ಸೈನ್ಯ ಯಲ್ಲಿ ತನ್ನ ಬೇರುಗಳನ್ನು ಹೊಂದಿದ್ದು, ೧೭೭೫ರ ಜೂನ್ ೧೪ರಂದು ರೂಪುಗೊಂಡಿತು[೧]. ಸಂಯುಕ್ತ ಸಂಸ್ಥಾನವು ಸ್ಥಾಪನೆಯಾಗುವ ಮೊದಲೇ ಅಮೆರಿಕದ ಕ್ರಾಂತಿಕಾರಕ ಯುದ್ಧಗಳ ಬೇಡಿಕೆಗಳನ್ನು ಸರಿಗಟ್ಟಲು ಈ ಸೈನ್ಯವನ್ನು ಸ್ಥಾಪಿಸಲಾಯಿತು. ಒಕ್ಕೂಟದ ಕಾಂಗ್ರೆಸ್ ಕ್ರಾಂತಿಕಾರಕ ಯುದ್ಧದ ನಂತರ ಭೂಖಂಡ ಸೈನ್ಯವನ್ನು ತೆಗೆದುಹಾಕಿ, ಸಂಯುಕ್ತ ಸಂಸ್ಥಾನದ ಸೈನ್ಯವನ್ನು ೩ ಜೂನ್, ೧೭೮೪ರಲ್ಲಿ ಅಧಿಕೃತವಾಗಿ ಹುಟ್ಟುಹಾಕಿತು.[೨][೩] ಸೈನ್ಯವು ತಾನು ಭೂಖಂಡ ಸೈನ್ಯದಿಂದ ರೂಪುಗೊಂಡಿರುವುದಾಗಿ ಪರಿಗಣಿಸುತ್ತಿದ್ದು, ತನ್ನ ಆರಂಭದ ದಿನವನ್ನು ಆ ಪಡೆಯ ಮೂಲದಲ್ಲಿ ಗುರುತಿಸುತ್ತದೆ.[೧]

ಸೈನ್ಯದ ಪ್ರಾಥಮಿಕ ಧ್ಯೇಯ(ಮಿಶನ್) ಎಂದರೆ "ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ನೀತಿಗೆ ಬೆಂಬಲವಾಗಿ, ಅಗತ್ಯವಿರುವಷ್ಟು ಸೇನಾಬಲವನ್ನು ಒದಗಿಸುವುದು..."[೪] ಆರ್ಮಿ ಇಲಾಖೆಯಲ್ಲಿ ಭೂಸೈನ್ಯವು (ಆರ್ಮಿ) ಒಂದು ಸೇನ್ಯ ಸೇವೆಯಾಗಿದ್ದು, ರಕ್ಷಣಾ ಇಲಾಖೆ ಯ ಮೂರು ಸೈನ್ಯದ ಇಲಾಖೆಗಳಲ್ಲಿ ಒಂದಾಗಿದೆ. ಸೈನ್ಯಕ್ಕೆ ಸೇನಾ ಕಾರ್ಯದರ್ಶಿ/ಸಚಿವರು ಮುಖ್ಯಸ್ಥರಾಗಿರುತ್ತಾರೆ. ಸೇನಾ ಇಲಾಖೆಯಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥರು (ಚೀಫ್ ಆಫ್ ದಿ ಆರ್ಮಿ) ಅತ್ಯುನ್ನತ ಶ್ರೇಣಿಯ ಸೈನ್ಯದ ಅಧಿಕಾರಿಯಾಗಿರುತ್ತಾರೆ. ೨೦೦೯ರ ಹಣಕಾಸು ವರ್ಷ ದಲ್ಲಿ, ನಿಯಮಿತ ಸೈನ್ಯವು ೫೪೯,೦೧೫ ಜನ ಸೈನಿಕ ಶಕ್ತಿಯನ್ನು ಹೊಂದಿರುವುದಾಗಿ ವರದಿಯಾಗಿತ್ತು; ರಾಷ್ಟ್ರೀಯ ಗಾರ್ಡ್‌ ಸೈನ್ಯ(ಆರ್ಮಿ ನ್ಯಾಶನಲ್ ಗಾರ್ಡ್) (ARNG) ೩೫೮,೩೯೧ ಜನ ಸೈನಿಕರು ಮತ್ತು ಸಂಯುಕ್ತ ಸಂಸ್ಥಾನದ ಮೀಸಲು ಸೈನ್ಯ (USAR) ವು ೨೦೫,೨೯೭ ಜನ ಸೈನಿಕರನ್ನು ಹೊಂದಿದ್ದು, ಎರಡೂ ಸೇರಿ ಒಟ್ಟು ಸೇನಾ ಬಲ ೧,೧೧೨,೭೦೩ ಸೈನಿಕರು ಇದ್ದಾರೆ ಎನ್ನಲಾಗಿದೆ.[೫]

ಧ್ಯೇಯ (ಮಿಶನ್)[ಬದಲಾಯಿಸಿ]

ಸಂಯುಕ್ತ ಸಂಸ್ಥಾನದ ಸೈನ್ಯವು ಅಮೆರಿಕಾ ಸೈನ್ಯದ ಭೂ-ಆಧಾರಿತ ಶಾಖೆಯಾಗಿ ಸೇವೆ ಸಲ್ಲಿಸುತ್ತದೆ. US ಕೋಡ್ §3062ನ ಶೀರ್ಷಿಕೆ 10 (§3062 of Title 10 US Code ಸೈನ್ಯದ ಉದ್ದೇಶವನ್ನು ಹೀಗೆ ವ್ಯಾಖ್ಯಾನಿಸುತ್ತದೆ.[೬]

  • ಸಂಯುಕ್ತ ಸಂಸ್ಥಾನ, ಕಾಮನ್‌ವೆಲ್ತ್‌ ಮತ್ತು ಪ್ರತ್ಯಕ್ಷಸ್ವಾಮ್ಯ ಹಾಗೂ ಸಂಯುಕ್ತ ಸಂಸ್ಥಾನವು ಆಕ್ರಮಿಸಿರುವ ಯಾವುದೇ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವುದು ಮತ್ತು ರಕ್ಷಣೆಯನ್ನು ಒದಗಿಸುವುದು.
  • ರಾಷ್ಟ್ರೀಯ ನೀತಿಗಳನ್ನು ಬೆಂಬಲಿಸುವುದು
  • ರಾಷ್ಟ್ರೀಯ ಧ್ಯೇಯಗಳನ್ನು ಕಾರ್ಯಗತಗೊಳಿಸುವುದು
  • ಸಂಯುಕ್ತ ಸಂಸ್ಥಾನಗಳ ಶಾಂತಿ ಮತ್ತು ಭದ್ರತೆಗೆ ಗಂಡಾಂತರವೊಡ್ಡುವ ಆಕ್ರಮಣಶೀಲ ಕೆಲಸಗಳಿಗೆ ಕಾರಣವಾಗುವ ಯಾವುದೇ ದೇಶಗಳನ್ನು ಗೆಲ್ಲುವುದು

ಮೌಲ್ಯಗಳು[ಬದಲಾಯಿಸಿ]

೧೯೯೦ರ ಮಧ್ಯಭಾಗದಿಂದ ಕೊನೆಯಭಾಗದವರೆಗೆ, ಸೈನ್ಯವು "೭ ಬಹುಮುಖ್ಯ ಸೇನಾ ಮೌಲ್ಯಗಳು (ದಿ ೭ ಆರ್ಮಿ ಕೋರ್ ವ್ಯಾಲ್ಯೂಸ್) ." ಅನ್ನು ಅಧಿಕೃತವಾಗಿ ಅಳವಡಿಸಿಕೊಂತ್ತು. ಸೈನ್ಯವು ಈ ಮೌಲ್ಯಗಳನ್ನು ಯೋಧರ ಮೂಲಭೂತ ವಿಶೇಷಲಕ್ಷಣಗಳು ಎಂದು ಬೋಧಿಸಲಾರಂಭಿಸಿತು. ಏಳು ಬಹುಮುಖ್ಯ ಸೇನಾ ಮೌಲ್ಯಗಳು ಈ ರೀತಿಯಾಗಿವೆ :

  1. ನಿಷ್ಠೆ – ಸಂಯುಕ್ತಸಂಸ್ಥಾನದ ಸಂವಿಧಾನಕ್ಕೆ, ನಿಮ್ಮ ಯೂನಿಟ್‌ಗೆ ಮತ್ತು ಸಹ ಸೈನಿಕರಿಗೆ ನೈಜ ವಿಶ್ವಾಸ ಮತ್ತು ಸ್ವಾಮಿನಿಷ್ಠೆಯನ್ನು ಹೊಂದಿರುವುದು.
  2. ಕರ್ತವ್ಯ – ನಿಮ್ಮ ಬಾಧ್ಯತೆಗಳನ್ನು ಪೂರ್ಣಗೊಳಿಸುವುದು
  3. ಗೌರವಿಸು – ಬೇರೆಯವರನ್ನು ಹೇಗೆ ಕಾಣಬೇಕೋ ಹಾಗೆ ಕಾಣುವುದು
  4. ನಿಸ್ವಾರ್ಥ ಸೇವೆ – ನಿಮ್ಮ ಸ್ವಂತಕ್ಕಿಂತ ಮೊದಲು ದೇಶ, ಸೈನ್ಯ ಮತ್ತು ನಿಮ್ಮ ಅಧೀನ ಅಧಿಕಾರಿಗಳ ಒಳಿತನ್ನು ಮುಂದಿಟ್ಟುಕೊಳ್ಳಿ.
  5. ಘನತೆ – ಸೈನ್ಯದ ಮೌಲ್ಯಗಳಂತೆ ಬದುಕುವುದು
  6. ಸಮಗ್ರತೆ – ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ಯಾವುದು ಸರಿಯಿದೆಯೋ ಅದನ್ನು ಮಾಡುವುದು.
  7. ವೈಯಕ್ತಿಕ ಧೈರ್ಯ – ದೈಹಿಕವಾಗಿ ಮತ್ತು ನೈತಿಕವಾಗಿ ಭಯ, ಅಪಾಯ ಅಥವಾ ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವುದು

ಈ ಮೌಲ್ಯಗಳನ್ನು ಪ್ರಥಮಾಕ್ಷರಿ ರೂಪದಲ್ಲಿ ಹೀಗೆ LDRSHIP ( leadership - ನಾಯಕತ್ವ)ಜೋಡಿಸಲಾಗಿದೆ.[೭]

ಇತಿಹಾಸ[ಬದಲಾಯಿಸಿ]

ಹುಟ್ಟು[ಬದಲಾಯಿಸಿ]

ಯಾರ್ಕ್‌ಟೌನ್ ಮುತ್ತಿಗೆ ಸಮಯದಲ್ಲಿ ರೆಡೌಟ್‌ #10ನ ಮಳೆಗರೆಯುತ್ತಿರುವುದು

ಭೂಖಂಡದ ಸೈನ್ಯ ವನ್ನು ಕಾಂಟಿನೆಂಟಲ್ ಕಾಂಗ್ರೆಸ್‌ ನಿಂದ ೧೭೭೫ರ ಜೂನ್ ೧೪ರಂದು ಹುಟ್ಟುಹಾಕಲಾಯಿತು. ಬ್ರಿಟನ್,ಜೊತೆ ಯುದ್ಧ ಮಾಡಲು ಏಕೀಕೃತ ಸೈನ್ಯದ ಹಾಗೆ ಇದನ್ನು ಹುಟ್ಟುಹಾಕಿದ್ದು, ಆಗ ಜಾರ್ಜ್‌ ವಾಷಿಂಗ್ಟನ್ ಇದರ ಕಮಾಂಡರ್ ಆಗಿ ನೇಮಕಗೊಂಡಿದ್ದರು.[೧] ಆರಂಭದಲ್ಲಿ ಬ್ರಿಟಿಶ್ ಸೈನ್ಯದಲ್ಲಿ ಸೇವೆಲ್ಲಿಸಿದ ಅಥವಾ ವಸಾಹತು ಸಹಾಯಕ ಸೈನ್ಯದಲ್ಲಿ ಸೇವೆ ಸಲ್ಲಿಸಿದವರು ಸೈನ್ಯದ ನೇತೃತ್ವ ವಹಿಸಿದ್ದರು. ಹೀಗಾಗಿ ಬ್ರಿಟಿಶ್ ಸೈನ್ಯದ ಪರಂಪರೆಯನ್ನು ಅವರು ತಮ್ಮೊಂದಿಗೆ ತಂದಿದ್ದರು. ಕ್ರಾಂತಿಕಾರಕ ಯುದ್ಧ ಮುಂದುವರೆದಂತೆ, ಫ್ರೆಂಚ್ ಸಹಾಯ, ಸಂಪನ್ಮೂಲ ಮತ್ತು ಸೈನ್ಯದ ಚಿಂತನೆಯು ಹೊಸ ಸೈನ್ಯವನ್ನು ಪ್ರಭಾವಿಸಿತು. ಇದೇ ವೇಳೆ ಪರ್ಷಿಯನ್ ಸಹಾಯ ಮತ್ತು ಫ್ರೆಡ್ರಿಕ್ ವಿಲ್ಹೆಮ್ ವಾನ್ ಸ್ಟ್ಯುಬೆನ್ ರಂತಹ ಬೋಧಕರೂ ಗಾಢವಾದ ಪ್ರಭಾವ ಬೀರಿದರು.

ಜಾರ್ಜ್‌ ವಾಷಿಂಗ್ಟನ್ ಅವರು ಫೇಬಿಯನ್ ಕಾರ್ಯತಂತ್ರ ವನ್ನು ಬಳಸಿದರು ಮತ್ತು ಹೊಡೆದು-ಓಡಿ ಹೋಗುವ (ಹಿಟ್ ಆಂಡ್ ರನ್) ತಂತ್ರ ಗಳನ್ನು ಬಳಸಿದರು. ಶತ್ರು ದುರ್ಬಲನಾಗಿರುವ ಕಡೆ ಹೊಡೆತ ನೀಡುವ ಈ ತಂತ್ರವನ್ನು ಬ್ರಿಟಿಶ್ ಪಡೆಗಳನ್ನು ಮತ್ತು ಅವರ ಹಣದಾಸೆಯ ಹೆಸಿಯನ್ (ಜರ್ಮನಿಯ ಹೆಸ್ ಪ್ರಾಂತ್ಯದವರು) ಮಿತ್ರರನ್ನು ದಮನ ಮಾಡಲು ಬಳಸಿದರು. ಟ್ರೆಂಟನ್ ಮತ್ತು ಪ್ರಿನ್ಸ್‌ಟನ್ ಗಳಲ್ಲಿ ವಾಷಿಂಗ್ಟನ್ ಜಯ ಗಳಿಸಿದರು ಮತ್ತು ನಂತರ ದಕ್ಷಿಣದತ್ತ ತಿರುಗಿದರು. ಯಾರ್ಕ್‌ಟೌನ್‌ನಲ್ಲಿ ನಿರ್ಣಾಯಕ ವಿಜಯ ಗಳಿಸಿದ ನಂತರ, ಫ್ರೆಂಚ್ , ಸ್ಪಾನಿಷರು ಮತ್ತು ಡಚ್‌ರ ಸಹಾಯದಿಂದ, ಭೂಖಂಡ ಸೈನ್ಯವು ಬ್ರಿಟನ್ ವಿರುದ್ಧ ಮೇಲುಗೈ ಸಾಧಿಸಿತು. ಆಗ ಪ್ಯಾರಿಸ್ ಒಪ್ಪಂದ ವಾಗಿ, ನಂತರ ಸಂಯುಕ್ತ ಸಂಸ್ಥಾನ ಸ್ವಂತಂತ್ರಗೊಂಡಿತೆಂದು ಒಪ್ಪಿಕೊಳ್ಳಲಾಯಿತು.

ಯುದ್ದಾನಂತರ,ಭೂಖಂಡ ಸೈನ್ಯವನ್ನು ಅಮೆರಿಕಾದ ಸ್ಥಾಯಿ ಸೈನ್ಯಗಳ ಅವಿಶ್ವಾಸ ಮತ್ತು ಅನಿಯಮಿತ ರಾಜ್ಯ ಸಹಾಯಕ ಸೈನ್ಯದ ಒಂದು ಭಾಗವಾಗಿ ಎಂದು ಕೂಡಲೇ ವಿಸರ್ಜಿಲಾಯಿತು. ನಂತರ ಪಶ್ಚಿಮದ ಗಡಿಗಳನ್ನು ಕಾಯಲು ಒಂದು ರೆಜಿಮೆಂಟ್ ಮತ್ತು ವೆಸ್ಟ್ ಪಾಯಿಂಟ್'ನ ಶಸ್ತ್ರಾಸ್ತ್ರಕೋಠಿಯನ್ನು ಕಾಯಲು ಫಿರಂಗಿದಳದ ಒಂದು ತುಕಡಿಯನ್ನು ಹೊರತುಪಡಿಸಿ, ಇದು ಹೊಸ ದೇಶದ ಏಕೈಕ ಭೂ ಸೈನ್ಯವಾಯಿತು. ಆದರೆ, ಅಮೆರಿಕದ ಮೂಲನಿವಾಸಿಗಳೊಂದಿಗೆ ಮುಂದುವರಿದ ಸಂಘರ್ಷದಿಂದಾಗಿ, ತರಬೇತಿ ಹೊಂದಿದ ಒಂದು ಸ್ಥಾಯಿ ಸೈನ್ಯವನ್ನು ನಿರ್ವಹಣೆ ಮಾಡುವುದು ಅಗತ್ಯವಿದೆ ಎಂದು ಅರಿಯಲಾಯಿತು. ಇವುಗಳಲ್ಲಿ ಮೊದಲನೆಯದೇ, ಸಂಯುಕ್ತ ಸಂಸ್ಥಾನದ ಲೀಜನ್ (ಲೀಜನ್ ಆಫ್ ದಿ ಯುನೈಟೆಡ್ ಸ್ಟೇಟ್ಸ್) , ಇದನ್ನು ೧೭೯೧ರಲ್ಲಿ ಹುಟ್ಟುಹಾಕಲಾಯಿತು.

೧೯ನೇ ಶತಮಾನ[ಬದಲಾಯಿಸಿ]

೧೮೧೨ರ ಯುದ್ಧ ವು, ಬ್ರಿಟಿಶರ ವಿರುದ್ಧ ಅಮೆರಿಕಾದ ಎರಡನೇ ಮತ್ತು ಕೊನೆಯ ಯುದ್ಧವಾಗಿದ್ದು, ಕ್ರಾಂತಿಯಾಗಿದ್ದಕ್ಕಿಂತ ಕಡಿಮೆ ಯಶಸ್ವಿಯಾಗಿತ್ತು. ಕೆನಡಾದ ಮೇಲಿನ ಆಕ್ರಮಣ ವಿಫಲವಾಯಿತು. ಸಂಯುಕ್ತ ಸಂಸ್ಥಾನದ ಪಡೆಗಳು ಬ್ರಿಟಿಶರು ಹೊಸ ರಾಜಧಾನಿ ವಾಷಿಂಗ್ಟನ್‌ ಡಿಸಿಯನ್ನು ಸುಟ್ಟುಹಾಕುವುದನ್ನು ತಡೆಗಟ್ಟಲು ವಿಫಲವಾದವು. ಆದರೆ, ನಿಯಮಿತ ಸೈನ್ಯವು, ವಿನ್‌ಫೀಲ್ಡ್ ಸ್ಕಾಟ್ ಮತ್ತು ಜಾಕೋಬ್ ಬ್ರೌನ್ರಂತಹ ಜನರಲ್‌ ಅವರ ಕೈಕೆಳಗೆ ೧೮೧೪ರ ನಯಾಗರಾ ಆಂದೋಲನದಲ್ಲಿ ತಾವು ವೃತ್ತಿಪರರು ಮತ್ತು ಬ್ರಿಟಿಶ್ ಸೈನ್ಯವನ್ನು ಸೋಲಿಸುವ ಸಾಮರ್ಥ್ಯವುಳ್ಳವರು ಎಂದು ಸಾಬೀತು ಪಡಿಸಿದರು. ಒಪ್ಪಂದವೊಂದನ್ನು ಸಹಿ ಹಾಕಿದ ಎರಡು ವಾರಗಳ ತರುವಾಯವೂ, ಆಂಡ್ರ್ಯೂ ಜಾಕ್‌ಸನ್ ನ್ಯೂ ಆರ್ಲಿಯನ್ಸ್ ಮೇಲೆ ಬ್ರಿಟಿಶರು ಮಾಡಿದ ಆಕ್ರಮಣ ವನ್ನು ಹತ್ತಿಕ್ಕಿದನು. ಆದರೆ ಇದು ಬಹಳ ಕಡಿಮೆ ಪರಿಣಾಮ ಹೊಂದಿತ್ತು ; ಒಪ್ಪಂದದ ಪ್ರಕಾರ ಎರಡೂ ಕಡೆಯವರು ಯಥಾಸ್ಥಿತಿ ಕಾಯ್ದುಕೊಳ್ಳಲು ಮರಳಬೇಕಿತ್ತು.

೧೮೧೫ ಮತ್ತು ೧೮೬೦ರ ಮಧ್ಯೆ, ಮ್ಯಾನಿಫೆಸ್ಟ್ ಡೆಸ್ಟಿನಿ ಅಂದರೆ ದಕ್ಷಿಣ ಅಮೆರಿಕ ಖಂಡದಲ್ಲಿ ಎಲ್ಲೆಡೆ ವಿಸ್ತರಿಸುವ ದೈವನಿಯತಿ ತಮಗಿದೆ ಎಂಬ ನಂಬಿಕೆ ಯ ಶಕ್ತಿಯು ಸಂಯುಕ್ತ ಸಂಸ್ಥಾನದಲ್ಲಿ ಸಾಮಾನ್ಯವಾಗಿತ್ತು. ವಸಾಹತುಗಾರರು ಪಶ್ಚಿಮದತ್ತ ಹೋದಂತೆ, ವಸಾಹತುಗಾರರು ಎತ್ತಂಗಡಿ ಮಾಡಿದ ಅಮೆರಿಕಾದ ಮೂಲನಿವಾಸಿಗಳೊಡನೆ ಮುಂಗಾವಲು ಪಡೆಯ ಹೋರಾಟ ಮತ್ತು ಯುದ್ಧಗಳ ಸುಧೀರ್ಘ ಸರಣಿಯಲ್ಲಿ ಯುಎಸ್ ಸೈನ್ಯವು ತೊಡಗಿಸಿಕೊಂಡಿತ್ತು. ಯುಎಸ್ ಸೈನ್ಯವು ಮೆಕ್ಸಿಕಾ-ಅಮೆರಿಕಾ ಯುದ್ಧವನ್ನು ಗೆದ್ದುಕೊಂಡಿತು ಮತ್ತು ಅದು ಎರಡೂ ದೇಶಗಳಿಗೆ ಒಂದು ನಿರ್ಣಾಯಕ ಘಟನೆಯಾಗಿತ್ತು.[೮] ಯುಎಸ್ ವಿಜಯವು ಹಲವಾರು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಕಾರಣವಾಯಿತು. ಅವು ನಂತರದಲ್ಲಿ ಕ್ಯಾಲಿಫೋರ್ನಿಯಾ, ನೆವಡಾ, ಉಟಾಹ್, ಕೊಲರೊಡೊ, ಅರಿಜೋನ, ವ್ಯೋಮಿಂಗ್ ಮತ್ತು ನ್ಯೂ ಮೆಕ್ಸಿಕೋಗಳ ಭಾಗಗಳಾದವು ಅಥವಾ ರಾಜ್ಯಗಳಾದವು.

ಗೆಟಿಸ್‌ಬರ್ಗ್‌ ಯುದ್ಧ, ಅಮೆರಿಕಾ ಅಂತರ್ಯುದ್ಧದ ಮಹತ್ವದ ತಿರುವು

ಯು.ಎಸ್‌.ಗೆ ಅಂತರ್ಯುದ್ಧ ವು ಸಾವುನೋವಿನ ಅರ್ಥದಲ್ಲಿ ನೋಡಿದರೆ ಬಹಳ ದುಬಾರಿಯಾಗಿತ್ತು. ದಕ್ಷಿಣದ ಅನೇಕ ರಾಜ್ಯಗಳು ಪ್ರತ್ಯೇಕಗೊಂಡು ಅಮೆರಿಕದ ಒಕ್ಕೂಟ ರಾಜ್ಯಗಳು ಆಗಿ ರೂಪುಗೊಂಡ ನಂತರ, CSA ಪಡೆಗಳು ದಕ್ಷಿಣ ಕರೊಲಿನಾದ ಚಾರ್ಲ್ಸ್ ಟನ್ ನಲ್ಲಿ ಯೂನಿಯನ್ ಹಿಡಿತದಲ್ಲಿದ್ದ ಫೋರ್ಟ್‌ ಸ್ಮಟರ್ ಮೇಲೆ ದಾಳಿ ನಡೆಸಿ, ಯುದ್ಧ ಆರಂಭಿಸಿದವು. ಮೊದಲ ಎರಡು ವರ್ಷಗಳವರೆಗೆ ಒಕ್ಕೂಟದ ಪಡೆಗಳು ಯುಎಸ್ ಸೈನ್ಯವನ್ನು ಚೆನ್ನಾಗಿ ಸೋಲಿಸಿದವು. ಆದರೆ ಪೂರ್ವದಲ್ಲಿ ಗೆಟಿಸ್‌ಬರ್ಗ್‌ ನಲ್ಲಿ ಮತ್ತು ಪಶ್ಚಿಮದಲ್ಲಿ ವಿಕ್ಸ್‌ಬರ್ಗ್‌ನಲ್ಲಿ ನಡೆದ ನಿರ್ಣಾಯಕ ಯುದ್ಧದ ನಂತರ ಅತ್ಯುತ್ತಮ ಕೈಗಾರಿಕಾ ಬಲ ಹಾಗೂ ಸಂಖ್ಯೆಯಿಂದಾಗಿ ಯುನಿಯನ್ ಪಡೆಗಳು ಒಕ್ಕೂಟದ ಪ್ರಾಂತ್ಯಗಳ ಮೇಲೆ ಕ್ರೂರ ದಾಳಿ ನಡೆಸಿತು. ಅಪ್ಪೊಮಟಾಕ್ಸ್ ಕೋರ್ಟ್‌ಹೌಸ್‌ ನಲ್ಲಿ ೧೮೬೫ರ ಏಪ್ರಿಲ್‌ನಲ್ಲಿ ಒಕ್ಕೂಟಗಳು ಶರಣಾಗುವುದರೊಂದಿಗೆ ಯುದ್ಧವು ಕೊನೆಗೊಂಡಿತು. ೧೮೬೦ರ ಗಣತಿಯ ಅಂಕಿಅಂಶದ ಆಧಾರದ ಮೇಲೆ, ಉತ್ತರದಲ್ಲಿ ಶೇ. ೬ರಷ್ಟು ಮತ್ತು ದಕ್ಷಿಣದಲ್ಲಿ ಶೇ. ೧೫ರಷ್ಟು ಸೇರಿದಂತೆ, ಶೇ ೮%ರಷ್ಟು ೧೩ ರಿಂದ ೪೩ರ ವಯೋಮಾನದ ಎಲ್ಲ ಬಿಳಿಯ ಗಂಡಸರು ಯುದ್ಧದಲ್ಲಿ ಸತ್ತರು.[೯]

ಅಂತರ್ಯುದ್ಧದ ತರುವಾಯ, ಯುಎಸ್ ಸೈನ್ಯವು ಅಮೆರಿಕದ ಮೂಲನಿವಾಸಿಗಳೊಡನೆ ಸುದೀರ್ಘ ಯುದ್ಧವನ್ನು ಮಾಡಿತು. ಮೂಲನಿವಾಸಿಗಳು ಅಮೆರಿಕಾ ಖಂಡದ ಮಧ್ಯ ಭಾಗಕ್ಕೆ ಯುಎಸ್‌ ವಿಸ್ತರಣೆಯನ್ನು ಬಲವಾಗಿ ಪ್ರತಿರೋಧಿಸಿದರು. ೧೮೯೦ರ ಸುಮಾರಿಗೆ, ಯು.ಎಸ್‌. ತಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮರ್ಥ ದೇಶ ಎಂದು ಗುರುತಿಸಿಕೊಂಡಿತು. ಸ್ಪ್ಯಾನಿಶ್ - ಅಮೆರಿಕನ್ ಯುದ್ಧ ದಲ್ಲಿ ಯು.ಎಸ್‌.ನ ವಿಜಯ ಮತ್ತು ಹೆಚ್ಚು ಪರಿಚಿತವಲ್ಲದ, ವಿವಾದಾತ್ಮಕ ಪಿಲಿಫ್ಪಿನ್-ಅಮೆರಿಕನ್ ಯುದ್ಧ , ಜೊತೆಗೆ , ಲ್ಯಾಟಿನ್ ಅಮೆರಿಕದ ಮತ್ತು ಬಾಕ್ಸರ್ ರೆಬೆಲಿಯನ್ ಹೋರಾಟಗಳಲ್ಲಿ ಯುಎಸ್ ಮಧ್ಯಸ್ತಿಕೆಯಿಂದಾಗಿ, ಅಮೆರಿಕವು ಮತ್ತಷ್ಟು ಭೂಮಿಯನ್ನು ಗಳಿಸಿತು.

೨೦ನೇ ಶತಮಾನ[ಬದಲಾಯಿಸಿ]

ಯು.ಎಸ್‌. ಸೈನ್ಯದ 89ನೇ ಕಾಲಾಳುಪಡೆ ವಿಭಾಗದ ಸೈನಿಕರು ದಾಳಿ ಮಾಡುವ ದೋಣಿಗಳಲ್ಲಿ ರೈನ್ ನದಿ ದಾಟುತ್ತಿರುವುದು, 1945.

೧೯೧೦ರ ಆರಂಭದಿಂದ, ಸೈನ್ಯವು ಫಿಕ್ಸ್‌ಡ್ ವಿಂಗ್ ವಿಮಾನಗಳನ್ನು ಪಡೆದುಕೊಳ್ಳಲು ಆರಂಭಿಸಿತು.[೧೦] ಸಂಯುಕ್ತ ಸಂಸ್ಥಾನವು ಬ್ರಿಟನ್, ಫ್ರಾನ್ಸ್, ರಷ್ಯಾ ಮತ್ತು ಇನ್ನಿತರ ಮೈತ್ರಿಕೂಟಗಳ ಕಡೆಯಿಂದ ೧೯೧೭ರಲ್ಲಿವಿಶ್ವ ಸಮರ I ಅನ್ನು ಸೇರಿಕೊಂಡಿತು. ಯುಎಸ್ ಪಡೆಗಳನ್ನು ಯುದ್ಧರಂಗದ ಮುಂಚೂಣಿಗೆ ಕಳುಹಿಸಲಾಯಿತು ಮತ್ತು ಜರ್ಮನ್‌ ಗಡಿಗಳ ಮೂಲಕ ಮುನ್ನುಗ್ಗುವುದರಲ್ಲಿ ಯುಎಸ್ ಪಡೆಗಳು ಸೇರಿತ್ತು. ನವೆಂಬರ್ ೧೯೧೮ರಲ್ಲಿ ಕದನ ವಿರಾಮವಾದ ನಂತರ, ಸೈನ್ಯವು ತನ್ನ ಪಡೆಯ ಬಲವನ್ನು ಪುನಾ ಕಡಿಮೆಗೊಳಿಸಿತು.

ಜಪಾನೀಯರು ಪರ್ಲ್‌ ಹಾರ್ಬರ್ ಮೇಲೆ ದಾಳಿ ನಡೆಸಿದ ನಂತರ ಯು.ಎಸ್‌. ವಿಶ್ವ ಸಮರ IIಅನ್ನು ಸೇರಿಕೊಂಡಿತು. ಐರೋಪ್ಯ ಕದನರಂಗದಲ್ಲಿ, ಉತ್ತರ ಆಫ್ರಿಕಾ ಮತ್ತು ಸಿಲಿಸಿಯನ್ನು ವಶಪಡಿಸಿಕೊಂಡ ಪಡೆಗಳಲ್ಲಿ ಯುಎಸ್ ಪಡೆಗಳು ಮಹತ್ವದ ಸೇನಾಬಲವಾಗಿತ್ತು. D-ದಿನ ದಂದು ಮತ್ತು ತದನಂತರದ ಯೂರೋಪನ್‌ನ ವಿಮೋಚನೆಯಯಲ್ಲಿ ಮತ್ತು ನಾಜಿ ಜರ್ಮನಿಯ ಸೋಲಿನಲ್ಲಿ, ಲಕ್ಷಾಂತರ ಯುಎಸ್ ಸೇನಾ ಪಡೆಗಳು ಕೇಂದ್ರ ಪಾತ್ರವನ್ನು ವಹಿಸಿದ್ದವು. ಪೆಸಿಫಿಕ್ ನಲ್ಲಿ, ಸೈನ್ಯದ ಸೈನಿಕರು ಯು.ಎಸ್‌. ನೌಕಾದಳ (ಮರೀನ್ಸ್) ದ ಜೊತೆಗೆ ಸೇರಿ ಜಪಾನೀಯರ ನಿಯಂತ್ರಣದಲ್ಲಿದ್ದ ಪೆಸಿಫಿಕ್ ದ್ವೀಪಗಳನ್ನು ವಶಪಡಿಸಿಕೊಳ್ಳುವಲ್ಲಿ ಭಾಗವಹಿಸಿದರು. ೧೯೪೫ರ ಮೇನಲ್ಲಿ (ಜರ್ಮನಿ) ಮತ್ತು ಆಗಸ್ಟ್‌ನಲ್ಲಿ (ಜಪಾನ್)ಆಕ್ಸಿಸ್‌ (ಜರ್ಮನಿ, ಜಪಾನ್, ಇಟಲಿ, ಹಂಗೆರಿ ಇನ್ನಿತರ ದೇಶಗಳ ಮೈತ್ರಿಕೂಟಕ್ಕೆ ಆಕ್ಸಿಸ್ ಎನ್ನುತ್ತಾರೆ)ದೇಶಗಳ ಶರಣಾಗತಿಯ ನಂತರ, ಸೋತ ಎರಡು ದೇಶಗಳಾದ ಜಪಾನ್ ಮತ್ತು ಜರ್ಮನಿಯನ್ನು ಆಕ್ರಮಿಸಲು ಸೇನಾ ಪಡೆಗಳನ್ನು ನಿಯೋಜಿಸಲಾಯಿತು. ವಿಶ್ವ ಸಮರ II ಮುಗಿದ ಎರಡು ವರ್ಷಗಳ ನಂತರ, ಸೇನಾ ವಾಯುದಳ ವನ್ನು ಸೈನ್ಯದಿಂದ ಪ್ರತ್ಯೇಕಿಸಿ, ಸಂಯುಕ್ತ ಸಂಸ್ಥಾನದ ವಾಯುದಳ ವನ್ನಾಗಿ ರೂಪಿಸಲಾಯಿತು. ಎರಡು ದಶಕಗಳಿಂದ ಪ್ರತ್ಯೇಕಿಸಲು ಪ್ರಯತ್ನಗಳನ್ನು ಮಾಡಿದ್ದರೂ, ಇದು ಪ್ರತ್ಯೇಕಗೊಂಡಿದ್ದು ೧೯೪೭ರ ಸೆಪ್ಟೆಂಬರ್‌ನಲ್ಲಿ. ಜೊತೆಗೆ ೧೯೪೮ರಲ್ಲಿ ಸೈನ್ಯದಲ್ಲಿ ವರ್ಣಭೇದ ನೀತಿಯನ್ನು ತೊಡೆದುಹಾಕಲಾಯಿತು.

ಆದಾಗ್ಯೂ, ವಿಶ್ವ ಸಮರ IIದ ಅಂತ್ಯವು ಪೂರ್ವ-ಪಶ್ಚಿಮದ ಮಧ್ಯೆ ಶೀತಲ-ಯುದ್ಧ ವೆಂದು ಹೆಸರಾದ ಸಂಘರ್ಷಕ್ಕೆ ವೇದಿಕೆಯನ್ನು ಸಜ್ಜುಗೊಳಿಸಿತು. ಕೊರಿಯಾ ಯುದ್ಧ ದ ಆರಂಭದೊಂದಿಗೆ, ಪಶ್ಚಿಮ ಯೂರೋಪ್‌ನ ರಕ್ಷಣೆ ಕುರಿತ ಹಿತಾಸಕ್ತಿಗಳು ಹುಟ್ಟಿಕೊಂಡವು. ಸಂಯುಕ್ತ ಸಂಸ್ಥಾನದ ಏಳನೇ ಸೈನ್ಯದಡಿಯಲ್ಲಿ, V ಮತ್ತು VII, ಎರಡು ಪಡೆಗಳನ್ನು ೧೯೫೦ರಲ್ಲಿ ಪುನಾಕ್ರಿಯಾಶೀಲಗೊಳಿಸಲಾಯಿತು. ಇದರೊಂದಿಗೆ ಯುರೋಪ್‌ನಲ್ಲಿ ಅಮೆರಿಕಾ ಬಲವು ಒಂದು ವಿಭಾಗದಿಂದ ನಾಲ್ಕಕ್ಕೇರಿತು. ಸಂಭಾವ್ಯ ಸೋವಿಯೆತ್ ದಾಳಿಯ ಊಹೆಯಿಂದ ೧೯೯೦ರವರೆಗೂ ಪಶ್ಚಿಮ ಜರ್ಮನಿಯಲ್ಲಿ ಸಾವಿರಾರು ಯು.ಎಸ್‌. ಪಡೆಗಳು ಮತ್ತು ಇನ್ನು ಕೆಲವು ಪಡೆಗಳು ಬೆಲ್ಜಿಯಂ, ನೆದರ್‌ಲ್ಯಾಂಡ್ಸ್ ಮತ್ತು ಬ್ರಿಟನ್ನಿನಲ್ಲಿ ಬೀಡುಬಿಟ್ಟಿದ್ದವು.

2ನೇ ಕಾಲಾಳುಪಡೆ ವಿಭಾಗದ ಸೈನಿಕರು; ಕೊರಿಯನ್ ಯುದ್ಧದ ಸಮಯದಲ್ಲಿ ಒಬ್ಬ ಮನುಷ್ಯನಿಗೆ ಒಂದು ಮಶಿನ್ ಗನ್

ಶೀತಲ ಯುದ್ಧದ ಸಮಯದಲ್ಲಿ, ಅಮೆರಿಕಾದ ಪಡೆಗಳು ಮತ್ತು ಅವರ ಮಿತ್ರಪಡೆಗಳು ಕೊರಿಯಾ ಮತ್ತು ವಿಯೆಟ್ನಾಂನಲ್ಲಿ ಕಮ್ಯುನಿಸ್ಟ್ ಪಡೆಗಳೊಂದಿಗೆ ಹೋರಾಡಿದವು. ಸೋವಿಯೆತ್‌ ಒಕ್ಕೂಟವು ವಿಶ್ವಸಂಸ್ಥೆಯ ಭದ್ರತಾ ಸಭೆಯಲ್ಲಿ ಅವರ ಸಂಭಾವ್ಯ ವಿಟೋವನ್ನು ತೆಗೆದುಹಾಕಿ ಹೊರನಡೆದಾಗ, ಕೊರಿಯಾ ಯುದ್ಧವು ೧೯೫೦ರಲ್ಲಿ ಆರಂಭವಾಯಿತು. ವಿಶ್ವ ಸಂಸ್ಥೆಯ ಆಶ್ರಯದಡಿಯಲ್ಲಿ, ಸಾವಿರಾರು ಯುಎಸ್ ಪಡೆಗಳು ಉತ್ತರ ಕೊರಿಯಾವು ದಕ್ಷಿಣಾ ಕೊರಿಯಾವನ್ನು ವಶಪಡಿಸಿಕೊಳ್ಳುವುದನ್ನು ತಡೆಯಲು ಮತ್ತು ನಂತರ ಉತ್ತರ ದೇಶದ ಮೇಲೆ ದಾಳಿ ಮಾಡಲು ಹೋರಡಿದವು. ಎರಡೂ ಕಡೆಯಿಂದ ಮುನ್ನುಗ್ಗುವಿಕೆ ಮತ್ತು ಹಿಮ್ಮೆಟ್ಟುವಿಕೆಯು ಬಹಳ ಸಲ ಪುನರಾವರ್ತನೆಗೊಂಡ ನಂತರ ಮತ್ತು ಯುದ್ಧದಲ್ಲಿ ಚೀನಾ ದೇಶದದ ಪ್ರವೇಶದ ನಂತರ ಕದನ-ವಿರಾಮವು ಘೋಷಣೆಗೊಂಡು, ಉಪಖಂಡವು ೧೯೫೩ರಲ್ಲಿ ಯಥಾಸ್ಥಿತಿಗೆ ಮರಳಿತು.

ಒಂದು ಕಾಲಾಳುಪಡೆ ಗಸ್ತುದಳವು ದಕ್ಷಿಣ ವಿಯೆಟ್ನಾಂನ ಡಕ್ ಟೊನಲ್ಲಿ ಕೊನೆಯ ವಿಯೆಟ್ ಕಾಂಗ್‌ ಸ್ಥಾನದಲ್ಲಿ ದಾಳಿಮಾಡಲು ಹೋಗುತ್ತಿರುವುದು, ಹಾಥ್ರೋನ್ ಕಾರ್ಯಾಚರಣೆ ಸಮಯದಲ್ಲಿ ವಿಯೆಟ್ ಕಾಂಗ್ ಆರ್ಟಿಲರಿ ಪೊಸಿಶನ್ ಅನ್ನು ಧ್ವಂಸ ಮಾಡಲು ಪ್ರಯತ್ನಿಸಿದ ನಂತರ ಇದು ನಡೆಯಿತು.

ವಿಯೆಟ್ನಾಂ ಯುದ್ಧವು ಸೈನ್ಯದ ದಾಖಲೆಯಲ್ಲಿ ಕೀಳುಮಟ್ಟದ್ದು ಎಂದು ಪರಿಗಣಿತವಾಗಿದೆ. ಕಡ್ಡಾಯವಾಗಿ ಸೈನ್ಯಕ್ಕೆ ಸೇರಿಸಿದ ಸಿಬ್ಬಂದಿಗಳ ಬಳಕೆ, ಅಮೆರಿಕದ ಸಾರ್ವಜನಿಕರಲ್ಲಿಯೂ ಯುದ್ಧದ ಅಪಖ್ಯಾತಿ ಮತ್ತು ಅಮೆರಿಕದ ರಾಜಕೀಯ ನಾಯಕರು ಸೈನ್ಯದ ಮೇಲೆ ಹೇರಿದ ಜುಗುಪ್ಸೆ ಹುಟ್ಟಿಸಿದ ನಿರ್ಬಂಧಗಳು, ಈ ಎಲ್ಲ ಕಾರಣದಿಂದಾಗಿ ವಿಯೆಟ್ನಾಂ ಯುದ್ಧಕ್ಕೆ ಕೆಟ್ಟಹೆಸರು ಬಂದಿತು. ವಿಯೆಟ್ನಾಂ ಗಣರಾಜ್ಯದಲ್ಲಿ ೧೯೫೯ರಿಂದಲೇ ಅಮೆರಿಕದ ಪಡೆಗಳು ಬೀಡುಬಿಟ್ಟಿದ್ದವು. ಆದರೆ ಬೇಹುಗಾರಿಕೆ ಮತ್ತು ಸಲಹಾ/ತರಬೇತಿ ಕಾರ್ಯಗಳಿಗೆ ೧೯೬೫ರವರೆಗೂ, ಅಂದರೆ ಗಲ್ಫ್‌ ಆಫ್‌ ಟೋಂಕಿನ್ ಘಟನೆ ನಡೆಯುವವರೆಗೂ ಅಪಾರ ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿರಲಿಲ್ಲ. ಅಮೆರಿಕದ ಪಡೆಗಳು "ಸಾಂಪ್ರದಾಯಿಕ" ಯುದ್ಧರಂಗವನ್ನು ಪರಿಣಾಮಕಾರಿಯಾಗಿ ಹುಟ್ಟುಹಾಕಿದವು ಮತ್ತು ನಿಯಂತ್ರಣವನ್ನು ಕಾಯ್ದುಕೊಂಡವು. ಆದರೆ ಅವರು ಕಮ್ಯುನಿಸ್ಟ್ ವಿಯೆಟ್ ಕಾಂಗ್ ಮತ್ತು ಉತ್ತರ ವಿಯೆಟ್ನಾಂನ ಸೈನ್ಯ ಯ ಗೆರಿಲ್ಲಾ ಮಾದರಿಯ ಹೊಡೆದು, ಓಡುವ ಅಂದರೆ ಹಿಟ್‌ ಆಂಡ್ ರನ್ ಯುದ್ಧತಂತ್ರವನ್ನು ಎದುರಿಸಲು ಸಾಕಷ್ಟು ಶ್ರಮಪಟ್ಟರು.[೧೧]

ವಿಯೆಟ್ನಾಂ ಯುದ್ಧದ ತರುವಾಯ ಸೇನಾ ಜನರಲ್‌ರ ಸಿಬ್ಬಂದಿಗಳ ಮುಖ್ಯಸ್ಥರಾದ ಕ್ರೈಗ್‌‌ಟನ್ ಅಬ್ರಾಮ್ಸ್ ಅವರು ದಿ ಟೋಟಲ್ ಫೋರ್ಸ್‌ ಪಾಲಿಸಿಯನ್ನು ಅಂಗೀಕರಿಸಿದರು. ಇದು ನಿಯಮಿತ ಸೈನ್ಯ, ರಾಷ್ಟ್ರೀಯ ಗಾರ್ಡ್‌ ಸೈನ್ಯ ಮತ್ತು ಮೀಸಲು ಸೈನ್ಯ , ಸೈನ್ಯದ ಈ ಮೂರು ಘಟಕಗಳನ್ನು ಒಂದೇ ಪಡೆಯನ್ನಾಗಿ ನೋಡುವುದನ್ನು ಒಳಗೊಂಡಿದೆ.[೧೨] ಯಾವ ಯು.ಎಸ್‌. ಅಧ್ಯಕ್ಷರೂ ಸಂಯುಕ್ತ ಸಂಸ್ಥಾನವನ್ನು (ಮತ್ತು ಹೆಚ್ಚು ಗಮನಾರ್ಹವಾಗಿ ಯುಎಸ್ ಸೈನ್ಯ) ಅಮೆರಿಕಾದ ಜನತೆಯ ಬೆಂಬಲವಿಲ್ಲದೇ ಯುದ್ಧಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎನ್ನುವುದರಲ್ಲಿ ವಿಶ್ವಾಸವಿರಿಸಿ, ಜನರಲ್ ಅಬ್ರಾಮ್ಸ್ ಅವರು ಸೈನ್ಯದ ಮೂರು ಘಟಕಗಳ ಸಂರಚನೆಯನ್ನು ಹೆಣೆದಿದ್ದಾರೆ. ಅದು ಹೇಗಿದೆ ಎಂದರೆ ರಾಷ್ಟ್ರೀಯ ಸೇನಾ ಗಾರ್ಡ್‌ ಮತ್ತು ಮೀಸಲು ಸೈನ್ಯ , ಈ ಎರಡೂ ಘಟಕಗಳ ಒಳಗೊಳ್ಳುವಿಕೆ ಇಲ್ಲದೇ ವಿಸ್ತರಿತ ಕಾರ್ಯಾಚರಣೆಗಳು ಅಸಾಧ್ಯವಾಗುವ ಹಾಗೆ ಮಾಡಿದ್ದಾರೆ.[೧೩]

೧೯೮೦ರ ಸಮಯವು ಹೆಚ್ಚಿನದಾಗಿ ಪುನಾಸಂಘಟನೆಯ ದಶಕವಾಗಿದೆ. ತರಬೇತಿ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಸೈನ್ಯವು ಸರ್ವ-ಸ್ವಯಂಸೇವಕತನದ ಪಡೆಯಾಗಿ ಪರಿವರ್ತಿತಗೊಂಡಿತು. ೧೯೮೬ರ ಗೋಲ್ಡ್‌ ವಾಟರ್ -ನಿಕೋಲ್ಸ್ ಕಾಯಿದೆ ಯು ಏಕೀಕೃತ ಕಾದಾಳು ತುಕಡಿ ( ಯುನಿಫೈಡ್ ಕಂಬಟಂಟ್ ಕಮಾಂಡ್) ಯನ್ನು ಹುಟ್ಟುಹಾಕಿತು. ಇದು ಸೈನ್ಯವನ್ನು ಇನ್ನೂ ನಾಲ್ಕು ಬೇರೆ ಸೈನ್ಯ ದೊಂದಿಗೆ ಏಕೀಕೃತ, ಭೌಗೋಳಿಕವಾಗಿ ಸಂಘಟಿಸಿದ ತುಕಡಿ ಸಂರಚನೆಗಳೊಂದಿಗೆ ಒಂದುಗೂಡಿಸಿತು. ೧೯೮೩ರಲ್ಲಿ ಗ್ರೆನಡಾ ದ ಮೇಲೆ ನಡೆಸಿದ ದಾಳಿ (ಆಪರೇಶನ್ ಅರ್ಜೆಂಟ್ ಫರಿ ) ಮತ್ತು ೧೯೮೯ರಲ್ಲಿ ಪನಾಮ ಮೇಲೆ ನಡೆಸಿದ ದಾಳಿ (ಆಪರೇಶನ್ ಜಸ್ಟ್ ಕಾಸ್ , ಇವುಗಳಲ್ಲಿ ಸೈನ್ಯವು ಪಾತ್ರವನ್ನು ವಹಿಸಿತ್ತು.

೧೯೮೯ರ ಸುಮಾರಿಗೆ ಜರ್ಮನಿಯ ಪುನರೇಕೀಕರಣ ಹತ್ತಿರವಾಗಿತ್ತು ಮತ್ತು ಶೀತಲ ಯುದ್ಧವು ನಿಲುಗಡೆಗೆ ಬರುತ್ತಿತ್ತು. ಸೈನ್ಯದ ನಾಯಕತ್ವವು ಆಗ ಸಂಖ್ಯಾಬಲವನ್ನು ಕಡಿಮೆಗೊಳಿಸುವ ಯೋಜನೆಯೊಂದಿಗೆ ಇದಕ್ಕೆ ಪ್ರತಿಕ್ರಿಯಿಸಿತು. ನವೆಂಬರ್ ೧೯೮೯ರ ಸುಮಾರಿಗೆ ಪೆಂಟಗಾನ್ ಅಧಿಕಾರಿಗಳು ಸೈನ್ಯದ ಬಲವನ್ನು ಶೇ. ೨೩ರಷ್ಟು ಕಡಿಮೆ ಮಾಡಲು, ೭೫೦,೦೦೦ರಿಂದ ೫೮೦,೦೦೦ಗೆ ಇಳಿಸಲು ಯೋಜನೆಗಳನ್ನು ರೂಪಿಸಿದರು.[೧೪] ಪೂರ್ವಭಾವಿ ನಿವೃತ್ತಿಯಂತಹ ಹಲವಾರು ಉತ್ತೇಜಕಗಳನ್ನು ಬಳಸಿಕೊಳ್ಳಲಾಯಿತು. ೧೯೯೦ರಲ್ಲಿ ಇರಾಕ್ ತನ್ನ ಚಿಕ್ಕ ನೆರೆಯ ದೇಶ ಕುವೈತ್ ಮೇಲೆ ದಾಳಿ ನಡೆಸಿತು ಮತ್ತು ಯುಎಸ್ ಭೂಪಡೆಗಳನ್ನು ವಾಯುಯಾನ ದಳದವರು ಅಲ್ಲಿಗೆ ಕರೆದೊಯ್ದು, ಸೌದಿ ಅರೇಬಿಯಾ ಗೆ ರಕ್ಷಣೆ ಒದಗಿಸಲು ತ್ವರಿತವಾಗಿ ನಿಯೋಜಿಸಿದರು. ಜನವರಿ ೧೯೯೧ರಲ್ಲಿ ಡೆಸರ್ಟ್‌ ಸ್ಟಾರ್ಮ್‌ ಕಾರ್ಯಾಚರಣೆ ಯನ್ನು ಆರಂಭಿಸಲಾಯಿತು. ಯುಎಸ್ ನೇತೃತ್ವದ ಮೈತ್ರಿಕೂಟವು ಸುಮಾರು ೫೦೦,೦೦೦ ಪಡೆಗಳನ್ನು ನೇಮಿಸಿತು. ಇರಾಕಿ ಪಡೆಗಳನ್ನು ಹೊರಹಾಕಲು ನೇಮಿಸಲಾದ ಮೈತ್ರಿಕೂಟದಲ್ಲಿ ಅಮೆರಿಕದ ಪಡೆಯೇ ದೊಡ್ಡದಿತ್ತು. ಯುದ್ಧವು ಸೈನ್ಯದ ವಿಜಯದೊಂದಿಗೆ ಅಂತ್ಯಗೊಂಡಿತು, ಪಾಶ್ಚಾತ್ಯ ಮೈತ್ರಿಕೂಟ ಪಡೆಗಳು ಸೋವಿಯೆತ್ ಗಡಿಗಳ ಉದ್ದಕ್ಕೆ ಇದ್ದ ಇರಾಕಿ ಸೈನ್ಯವನ್ನು ಕೇವಲ ೧೦೦ ಗಂಟೆಗಳ ಅವಧಿಯಲ್ಲಿ ಸದೆಬಡಿದವು.

ಡೆಸರ್ಟ್‌ ಸ್ಟಾರ್ಮ್‌ , ನಂತರ, ಸೈನ್ಯವು ೧೯೯೦ರ ಇನ್ನುಳಿದ ಅವಧಿಯಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿಲ್ಲ. ಆದರೆ ಹಲವಾರು ಶಾಂತಿಸ್ಥಾಪನಾ ಚಟುವಟಕೆಗಳಲ್ಲಿ ಭಾಗಿಯಾಯಿತು. ೧೯೯೦ರಲ್ಲಿ ರಕ್ಷಣಾ ಇಲಾಖೆಯು ಟೋಟಲ್ ಫೋರ್ಸ್‌ ನೀತಿಯನ್ನು ಪುನರ್ವಿಮರ್ಶೆ ಮಾಡಿದ ನಂತರ "ಮರುಸಮತೋಲನ"ದ ಮಾರ್ಗದರ್ಶನವನ್ನು ಜಾರಿಗೊಳಿಸಿತು.[೧೫] ಆದರೆ ೨೦೦೪ರಲ್ಲಿ ಏರ್ ವಾರ್ ಕಾಲೇಜ್ ನ ತಜ್ಞರು ಮಾರ್ಗದರ್ಶನವು "ಸೈನ್ಯ ಬಲದ ಯಶಸ್ವೀ ಅನ್ವಯಿಕತೆಗೆ ಅತ್ಯಗತ್ಯ ಘಟಕ"ವಾಗಿರುವ ಟೋಟಲ್ ಫೋರ್ಸ್‌ ನೀತಿಯನ್ನು ತಿರುವುಮುರುವಾಗಿಸುತ್ತದೆ ಎಂದು ನಿರ್ಣಯಿಸಿದರು.[೧೬]

೨೧ನೇ ಶತಮಾನ[ಬದಲಾಯಿಸಿ]

ಯುಎಸ್ ಮತ್ತು ಇರಾಕಿ ಸೈನಿಕರು ಇರಾಕ್‌ನ ಗಡಿಗಳಲ್ಲಿ ಗಸ್ತು ಕಾಯುತ್ತಿರುವುದು

ಸೆಪ್ಟೆಂಬರ್ ೧೧ರ ದಾಳಿಗಳ ನಂತರ, ಮತ್ತು ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರ ದ ಭಾಗವಾಗಿ, ಯುಎಸ್ ಮತ್ತು ನ್ಯಾಟೋ ಏಕೀಕೃತ ಪಡೆಗಳು (ಅಂದರೆ ಸೈನ್ಯ, ನೌಕಾದಳ, ವಾಯುಪಡೆ, ಕಡಲುಪಡೆ, ವಿಶೇಷ ಕಾರ್ಯಾಚರಣೆ ಪಡೆಗಳು) ಒಂದಾಗಿ ೨೦೦೧ರಲ್ಲಿ ಆಫ್ಘಾನಿಸ್ತಾನದ ಮೇಲೆ ದಾಳಿ ಮಾಡಿ ತಾಲಿಬಾನ್ ಸರ್ಕಾರವನ್ನು ಕಿತ್ತೆಸೆಯಿತು.

ಸೈನ್ಯವು ೨೦೦೧ರಲ್ಲಿ ಆಫ್ಘಾನಿಸ್ತಾನದ ಆಕ್ರಮಣ ಮತ್ತು ೨೦೦೩ರಲ್ಲಿ ಇರಾಕ್ ಮೇಲಿನ ಆಕ್ರಮಣದಲ್ಲಿ ಯುಎಸ್ ಮತ್ತು ಮಿತ್ರಕೂಟವನ್ನು ಒಟ್ಟಾಗಿ ಮುನ್ನಡೆಸಿತು. ನಂತರದ ವರ್ಷಗಳಲ್ಲಿ ಸೈನ್ಯದ ಧ್ಯೇಯವು ನಿಯಮಿತ ಸೇನಾಕಾರ್ಯಾಚರಣೆಯ ಸಂಘರ್ಷದಿಂದ ದಂಗೆಯನ್ನು ಎದುರಿಸುವ ನಿಟ್ಟಿನಲ್ಲಿ ಬದಲಾಯಿತು. ಅತ್ಯಧಿಕ ಸಂಖ್ಯೆಯ ಆತ್ಮಹತ್ಯಾ ದಾಳಿಯಿಂದಾಗಿ ಸುಮಾರು ೪,೦೦೦ಕ್ಕೂ ಹೆಚ್ಚು ಅಮೆರಿಕದ ಸೇನಾ ಸಿಬ್ಬಂದಿಯು ಸತ್ತರು (ಮಾರ್ಚ್‌ ೨೦೦೮ರ ಪ್ರಕಾರ) ಮತ್ತು ಸಾವಿರಾರು ಜನರು ಗಾಯಗೊಂಡರು.[೧೭] ಕಾರ್ಯಾಚರಣೆಯ ರಂಗದಲ್ಲಿ ಸ್ಥಿರತೆಯ ಕೊರತೆಯಿಂದಾಗಿ ನಿಯಮಿತ ಸೈನ್ಯ ಮತ್ತು ಮೀಸಲು, ಗಾರ್ಡ್‌ ಪಡೆಗಳನ್ನು ದೀರ್ಘ ಕಾಲ ನಿಯೋಜಿಸಲಾಯಿತು.

ಸೈನ್ಯದ ಮುಖ್ಯವಾದ ಆಧುನೀಕರಣದ ಯೋಜನೆ ಎಂದರೆ FCS ಕಾರ್ಯಕ್ರಮ ಆಗಿತ್ತು. ಇದರಡಿಯಲ್ಲಿ ಅನೇಕ ವ್ಯವಸ್ಥೆಗಳನ್ನು ರದ್ದುಪಡಿಸಲಾಯಿತು ಮತ್ತು ಇನ್ನುಳಿದವುಗಳನ್ನು ಬಿಸಿಟಿ ಆಧುನೀಕರಣದ ಕಾರ್ಯಕ್ರಮ ದಲ್ಲಿ ರದ್ದುಪಡಿಸಲಾಯಿತು.

ಸಂಸ್ಥೆ[ಬದಲಾಯಿಸಿ]

ಆರ್ಗನೈಸೇಶನ್ ಚಾರ್ಟ್‌ <ಉಲ್ಲೇಖ>DA Pam 10-1 ಆರ್ಗನೈಸೇಶನ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಆರ್ಮಿ; ರೇಖಾಚಿತ್ರ 1-1. ಸೈನ್ಯ ಆರ್ಗನೈಸೇಶನ್ಸ್‌ಗಳು ನಿರ್ದಿಷ್ಟ ಕಾರ್ಯ ನಿರ್ವಹಣೆ ಮತ್ತು ವಹಿಸಲಾದ ಮಿಶನ್‌ಗಳನ್ನು ಕಾರ್ಯಗತ ಮಾಡುತ್ತವೆ </ಉಲ್ಲೇಖ>

ಸೇನಾ ಘಟಕಗಳು[ಬದಲಾಯಿಸಿ]

ಯು.ಎಸ್‌. ಜನರಲ್'ಸ್, ವಿಶ್ವ ಸಮರ II, ಯೂರೋಪ್ : ಹಿಂಬದಿ ಸಾಲು (ಎಡದಿಂದ ಬಲಕ್ಕೆ): ಸ್ಟಿಯರ್ಲಿ, ವ್ಯಾಂಡರ್‌ಬರ್ಗ್‌, ಸ್ಮಿತ್, ವೇಲ್ಯಾಂಡ್. ನ್ಯುಜೆಂಟ್; ಮುಂದಿನ ಸಾಲು : ಐಸೆನ್‌ಹೊವರ್, ಬ್ರಾಡ್ಲಿ, ಹಾಡ್ಜ್ಸ್, ಜೆರೊವ್.

ಯುಎಸ್ ಸೈನ್ಯವನ್ನು ಸಂಘಟಿಸುವ ಕೆಲಸವು ೧೭೭೫ರಿಂದ ಆರಂಭಗೊಂಡಿತು.[೧೮] ವಿಶ್ವ ಸಮರ I, ರ ಸಮಯದಲ್ಲಿ, "ರಾಷ್ಟ್ರೀಯ ಸೈನ್ಯ "ವು ಯುದ್ಧದಲ್ಲಿ ಕಾದಾಡುವಂತೆ ಸಂಘಟಿತಗೊಂಡಿತ್ತು.[೧೯] ವಿಶ್ವ ಸಮರ Iರ ಕೊನೆಯಲ್ಲಿ ಅದನ್ನು ನಿಸ್ಯೈನೀಕರಣಗೊಳಿಸಲಾಯಿತು ಮತ್ತು ಬದಲಿಗೆ ನಿಯಮಿತ ಸೈನ್ಯ, ಮೀಸಲು ಪಡೆಗಳು ಮತ್ತು ರಾಜ್ಯಸಹಾಯಕ ಸೈನ್ಯವನ್ನು ಇಟ್ಟುಕೊಳ್ಳಲಾಯಿತು. ೧೯೨೦ ಮತ್ತು ೧೯೩೦ರ ಸುಮಾರಿಗೆ "ವೃತ್ತಿ" ಸೈನಿಕರನ್ನು "ನಿಯಮಿತ ಸೈನ್ಯ" ಎಂದು ಕರೆಯಲಾಗುತ್ತಿತ್ತು ಮತ್ತು ಅಗತ್ಯ ಬಿದ್ದಾಗ "ಪಟ್ಟಿ ಮಾಡಲಾದ ಮೀಸಲು ಪಡೆಗಳನ್ನು" ಮತ್ತು "ಮೀಸಲು ಪಡೆಗಳ ಅಧಿಕಾರಿಗಳನ್ನು" ಖಾಲಿಹುದ್ದೆ ತುಂಬಲು ಬಳಸಿಕೊಳ್ಳಲಾಯಿತು.[೨೦]

೧೯೪೧ರಲ್ಲಿ, "ಸಂಯುಕ್ತ ಸಂಸ್ಥಾನದ ಸೈನ್ಯ"ವನ್ನು ವಿಶ್ವ ಸಮರ IIರಲ್ಲಿ ಹೋರಾಡಲು ಬಳಸಿಕೊಳ್ಳಲಾಯಿತು. ನಿಯಮಿತ ಸೈನ್ಯ, ಸಂಯುಕ್ತ ಸಂಸ್ಥಾನದ ಸೈನ್ಯ, ರಾಷ್ಟ್ರೀಯ ಗಾರ್ಡ್‌ ಮತ್ತು ಅಧಿಕಾರಿ/ಪಟ್ಟಿ ಮಾಡಲಾದ ಮೀಸಲು ಸೈನಿಕರು (ಒಆರ್‌ಸಿ ಮತ್ತು ಇಆರ್‌ಸಿ), ಈ ಪಡೆಗಳೂ ಕೂಡ ಇದೇ ವೇಳೆಯಲ್ಲಿ ಅಸ್ತಿತ್ವದಲ್ಲಿದ್ದವು. ವಿಶ್ವ ಸಮರ IIರ ನಂತರ, ಒಆರ್‌ಸಿ ಮತ್ತು ಇಆರ್‌ಸಿಗಳನ್ನು ಸೇರಿಸಿ ಸಂಯುಕ್ತ ಸಂಸ್ಥಾನದ ಮೀಸಲು ಸೈನ್ಯವನ್ನಾಗಿ ರೂಪಿಸಲಾಯಿತು. ಸಂಯುಕ್ತ ಸಂಸ್ಥಾನದ ಸೈನ್ಯವನ್ನು ಕೊರಿಯಾ ಯುದ್ಧ ಮತ್ತು ವಿಯೆಟ್ನಾಂ ಯುದ್ಧ ದ ಸಮಯದಲ್ಲಿ ಪುನಾಸಂಘಟಿಸಲಾಯಿತು ಮತ್ತು ನಂತರ ಡ್ರಾಫ್ಟ್ ಅಂದರೆ ಕಡ್ಡಾಯ ಸೇನಾ ಸೇವೆಯ ವಿಸರ್ಜನೆಯೊಂದಿಗೆ ನಿಸ್ಯೈನೀಕರಣಗೊಳಿಸಲಾಯಿತು.[೨೦]

ಪ್ರಸ್ತುತದಲ್ಲಿ, ಸೈನ್ಯವನ್ನು ನಿಯಮಿತ ಸೈನ್ಯ, ಮೀಸಲು ಸೈನ್ಯ ಮತ್ತು ರಾಷ್ಟ್ರೀಯ ಗಾರ್ಡ್‌ ಸೈನ್ಯ ಎಂದು ವಿಭಜಿಸಲಾಗಿದೆ.[೧೯] ಸೈನ್ಯವನ್ನು ವಾಯು ರಕ್ಷಣೆ ಫಿರಂಗಿಪಡೆ (ಏರ್ ಡಿಫೆನ್ಸ್ ಆರ್ಟಿಲರಿ), ಕಾಲಾಳು ಪಡೆ, ಏವಿಯೇಶನ್, ಸಿಗ್ನಲ್ ಪಡೆ, ಇಂಜಿಯರ್‌ಗಳ ಪಡೆ ಮತ್ತು ಆರ್ಮರ್ ಎಂಬ ಪ್ರಮುಖ ಶಾಖೆಗಳನ್ನೂ ಹೊಂದಿದೆ. ೧೯೦೩ಕ್ಕೆ ಮೊದಲು ರಾಷ್ಟ್ರೀಯ ಗಾರ್ಡ್‌ನ ಸದಸ್ಯರನ್ನು ಅಧ್ಯಕ್ಷರಿಂದ ಒಕ್ಕೂಟಗೊಳಿಸದಿದ್ದಾಗ ರಾಜ್ಯದ ಸೈನಿಕರೆಂದು ಪರಿಗಣಿಸಲಾಗಿತ್ತು. ೧೯೦೩ರ ಸಹಾಯಕ ಸೈನ್ಯ ಕಾಯಿದೆಯ ನಂತರ ಎಲ್ಲ ರಾಷ್ಟ್ರೀಯ ಗಾರ್ಡ್‌ ಸೈನಿಕರಿಗೆ ಎರಡು ಸ್ಥಾನಮಾನಗಳಿವೆ : ತಮ್ಮ ರಾಜ್ಯದ ಗವರ್ನರ್ ಅಡಿಯಲ್ಲಿ ರಾಷ್ಟ್ರೀಯ ಗಾರ್ಡ್‌ವ್ಯಕ್ತಿಗಳ ಹಾಗೆ ಮತ್ತು ಅಧ್ಯಕ್ಷರ ಅಧಿಕಾರದಡಿಯಲ್ಲಿ ಯು.ಎಸ್‌. ಸೈನ್ಯದ ಮೀಸಲು ಹಾಗೆ, ಎರಡು ಸ್ಥಾನಮಾನಗಳನ್ನು ಹೊಂದಿದ್ದಾರೆ.

ವಿಯೆಟ್ನಾಂ ಯುದ್ಧಾನಂತರ, ಟೋಟಲ್ ಫೋರ್ಸ್‌ ನೀತಿಯನ್ನು ಅಳವಡಿಸಿಕೊಂಡಾಗಿನಿಂದ, ಮೀಸಲು ಘಟಕದ ಸೈನಿಕರು ಯು.ಎಸ್‌. ಸೇನಾ ಕಾರ್ಯಾಚರಣೆಗಳಲ್ಲಿ ಬಹಳ ಕ್ರಿಯಾಶೀಲ ಪಾತ್ರ ವಹಿಸಿದ್ದಾರೆ. ಮೀಸಲು ಮತ್ತು ಗಾರ್ಡ್‌ ಘಟಕಗಳು ಗಲ್ಫ್‌ ಯುದ್ಧದಲ್ಲಿ, ಕೊಸೊವೋದಲ್ಲಿ ಶಾಂತಿಸ್ಥಾಪನಾ ಕಾರ್ಯದಲ್ಲಿ ಮತ್ತು ೨೦೦೩ರಲ್ಲಿ ಇರಾಕ್‌ ಮೇಲಿನ ದಾಳಿಯಲ್ಲಿ ಪಾಲ್ಗೊಂಡಿದ್ದವು.

ವಿವಿಧ ರಾಜ್ಯ ರಕ್ಷಣಾ ಪಡೆಗಳು ಕೂಡ ಅಸ್ತಿತ್ವದಲ್ಲಿದ್ದವು, ಇವನ್ನು ಕೆಲವೊಮ್ಮೆ ರಾಜ್ಯ ಸಹಾಯಕ ಪಡೆ ಎಂದು ಕರೆಯಲಾಗುತ್ತದೆ. ಇವನ್ನು ಆಯಾ ರಾಜ್ಯ ಸರ್ಕಾರಗಳು ಪ್ರಾಯೋಜಿಸುತ್ತವೆ ಮತ್ತು ರಾಷ್ಟ್ರೀಯ ಗಾರ್ಡ್ ಪಡೆಗೆ ನೆರವು ಅಥವಾ ಸಹಾಯಕ ದಳವಾಗಿಯೂ ಕಾರ್ಯನಿರ್ವಹಿಸುತ್ತದೆ. ಪ್ರಮುಖ ಭೂಭಾಗದ ಮೇಲಿನ ದಾಳಿಯಂತಹ ಗಂಭೀರ ರಾಷ್ಟ್ರೀಯ ತುರ್ತುಸ್ಥಿತಿಯ ಸಮಯವನ್ನು ಹೊರತುಪಡಿಸಿದರೆ, ರಾಜ್ಯ ಸಹಾಯಕ ದಳವು ಯು.ಎಸ್‌. ಸೈನ್ಯದಿಂದ ಪ್ರತ್ಯೇಕವಾಗಿ ಕಾರ್ಯಾಚರಣೆ ಮಾಡುತ್ತದೆ. ಇವನ್ನು ಸೈನ್ಯದ ಒಂದು ಘಟಕದ ಬದಲಿಗೆ ರಾಜ್ಯ ಸರ್ಕಾರಗಳ ಒಂದು ಏಜೆನ್ಸಿಯ ಹಾಗೆ ನೋಡಲಾಗುತ್ತದೆ.

ಪ್ರಸ್ತುತವಿರುವ ಸೈನ್ಯವು ಸ್ವ-ಇಚ್ಛೆಯಿಂದ ಸೈನ್ಯ ಸೇರಿದವರಿಂದ ಕೂಡಿದ್ದು, ಮೀಸಲು ಮತ್ತು ರಾಷ್ಟ್ರೀಯ ಗಾರ್ಡ್‌ ದಳ ಇದಕ್ಕೆ ಸೇರಿದೆ. ಆದರೂ ಅಮೆರಿಕಾದ ವಿರುದ್ಧ ಬೃಹತ್ ಪ್ರಮಾಣದ ದಾಳಿ ಅಥವಾ ಪ್ರಮುಖ ಜಾಗತಿಕ ಯುದ್ಧ , ಇತ್ಯಾದಿ ಅನಾಹುತಕಾರಿ ಘಟನೆಯ ಸಂದರ್ಭಗಳಲ್ಲಿ ತುರ್ತು ವಿಸ್ತರಣೆಯ ಕ್ರಮಗಳು ಇದ್ದೇ ಇವೆ.

ಸೇನಾ ಒಗ್ಗೂಡುಸುವಿಕೆಯ ಅಂತಿಮ ಹಂತವನ್ನು, "ಅಸಂಘಟಿತ ಸಹಾಯಕ ಸೈನ್ಯವನ್ನು ಕ್ರಿಯಾಶೀಲಗೊಳಿಸುವುದು" ಎಂದು ಕರೆಯಲಾಗುತ್ತದೆ. ಇದು ಎಲ್ಲ ಸಮರ್ಥ ಪುರುಷರನ್ನು ಯುಎಸ್ ಸೈನ್ಯದ ಸೇವೆಯಲ್ಲಿ ಪರಿಣಾಮಕಾರಿ ರೀತಿಯಲ್ಲಿ ಸೇರಿಸುತ್ತದೆ. ಅಮೆರಿಕಾದ ಅಂತರ್ಯುದ್ಧದ ಸಮಯದಲ್ಲಿ ಸರಿಸುಮಾರು ಇದೇ ರೀತಿಯಲ್ಲಿ ಮಾಡಲಾಗಿತ್ತು. ಆಗ ಅಮೆರಿಕಾದ ಒಕ್ಕೂಟದ ರಾಜ್ಯಗಳು ೧೮೬೫ರಲ್ಲಿ "ಹೋಂ ಗಾರ್ಡ್‌" ಅನ್ನು ಕ್ರಿಯಾಶೀಲಗೊಳಿಸಿತು. ಆ ಸಮಯದಲ್ಲಿ ವಯಸ್ಸು ಅಥವಾ ಆರೋಗ್ಯವನ್ನು ಲೆಕ್ಕಿಸದೇ ಎಲ್ಲ ಪರುಷರನ್ನು ಒಕ್ಕೂಟ ಸೈನ್ಯಕ್ಕೆ ಸೇರಿಸಲಾಗಿತ್ತು.

ಸೈನ್ಯದ ದಳ/ತುಕಡಿಗಳು ಮತ್ತು ಸೇನಾ ಸೇವಾ ಘಟಕ ದಳ/ತುಕಡಿಗಳು (ಆರ್ಮಿ ಕಮಾಂಡ್ಸ್ ಮತ್ತು ಆರ್ಮಿ ಸರ್ವಿಸ್ ಕಾಂಪೊನೆಂಟ್ ಕಮಾಂಡ್ಸ್)[ಬದಲಾಯಿಸಿ]

ಸೈನ್ಯದ ದಳ/ತುಕಡಿಗಳು ಸದ್ಯದ ಕಮಾಂಡರ್ ಕೇಂದ್ರಸ್ಥಳ (ಹೆಡ್‌ಕ್ವಾರ್ಟರ್‌)
ಸಂಯುಕ್ತ ಸಂಸ್ಥಾನದ ಸೈನ್ಯ ಪಡೆಗಳ ದಳ (ಯುನೈಟೆಡ್ ಸ್ಟೇಟ್ಸ್ ಫೋರ್ಸ್‌ಸ್ ಕಮಾಂಡ್) (FORSCOM) ಜನರಲ್ ಜೇಮ್ಸ್‌ ಡಿ ಥರ್ಮನ್ ಫೋರ್ಟ್‌ ಬ್ರಾಗ್ , ದಕ್ಷಿಣ ಕರೊಲಿನಾ
ಸಂಯುಕ್ತ ಸಂಸ್ಥಾನದ ಸೈನ್ಯ ತರಬೇತಿ ಮತ್ತು ಡಾಕ್ಟ್ರಿನ್ ದಳ (TRADOC) ಜನರಲ್ ಮಾರ್ಟಿನ್ ಡೆಂಪ್ಸೆ ಫೋರ್ಟ್‌ ಮೊನ್ರೋ, , ವರ್ಜಿನಿಯಾ
ಸಂಯುಕ್ತ ಸಂಸ್ಥಾನದ ಸೈನ್ಯ ಸಾಮಗ್ರಿ ದಳ (ಯುಎಸ್ ಆರ್ಮಿ ಮಟಿರಿಯಲ್ ಕಮಾಂಡ್) (AMC) ಜನರಲ್ ಆನ್ ಇ. ಡನ್‌ವುಡಿ ಫೋರ್ಟ್‌ ಬೆಲ್ವೊಯಿರ್ , ವರ್ಜಿನಿಯಾ
ಸೈನ್ಯ ಸೇವಾ ಘಟಕ ದಳ ಸದ್ಯದ ಕಮಾಂಡರ್ ಕೇಂದ್ರಸ್ಥಳ (ಹೆಡ್‌ಕ್ವಾರ್ಟರ್ಸ್)
ಸಂಯುಕ್ತ ಸಂಸ್ಥಾನದ ಸೈನ್ಯ ಆಫ್ರಿಕಾ (USARAF) ಮೇ.ಜ.(ಎಂಜಿ) ವಿಲಿಯಂ ಬಿ. ಗರೆಟ್‌ III ವಿಸೆಂಜಾ, ಇಟಲಿ
ಸಂಯುಕ್ತ ಸಂಸ್ಥಾನದ ಕೇಂದ್ರೀಯ ಸೈನ್ಯ (USARCENT) ಲೆ. ಜನರಲ್ ವಿಲಿಯಂ ಜಿ. ವೆಬ್‌ಸ್ಟರ್ [೨೧] ಫೋರ್ಟ್‌ ಮೆಕ್‌ಪೆರ್ಸನ್, ಜಾರ್ಜಿಯಾ,
ಸಂಯುಕ್ತ ಸಂಸ್ಥಾನದ ದಕ್ಷಿಣದ ಸೈನ್ಯ (USANORTH) ಲೆ. ಜನರಲ್ ಥಾಮಸ್ ಆರ್ ಟರ್ನರ್ II ಫೋರ್ಟ್‌ ಸ್ಯಾಮ್ ಹೂಸ್ಟನ್ , ಟೆಕ್ಸಾಸ್
ಸಂಯುಕ್ತ ಸಂಸ್ಥಾನದ ಉತ್ತರದ ಸೈನ್ಯ (USARSO) ಮೇ.ಜ. ಕೀತ್ ಎಂ ಹ್ಯುಬರ್ ಫೋರ್ಟ್‌ ಸ್ಯಾಮ್ ಹೂಸ್ಟನ್ , ಟೆಕ್ಸಾಸ್
ಸಂಯುಕ್ತ ಸಂಸ್ಥಾನದ ಸೈನ್ಯ ಯೂರೋಪ್ (USAREUR) ಜನರಲ್ ಕಾರ್ಟರ್ ಎಫ್. ಹ್ಯಾಮ್ [೨೨] ಕ್ಯಾಂಪ್‌ಬೆಲ್ ಬ್ಯಾರಕ್ಸ್ , ಹೈಡಲ್‌ಬರ್ಗ್‌, , ಜರ್ಮನಿ
ಸಂಯುಕ್ತ ಸಂಸ್ಥಾನದ ಸೈನ್ಯ ಪೆಸಿಫಿಕ್ (USARPAC) ಲ. ಜನರಲ್ ಬೆಂಜಮಿನ್ ಆರ್. ಮಿಕ್ಸನ್ [೨೩] ಫೋರ್ಟ್‌ ಶಾಫ್ಟರ್, ಹವಾಯ್
ಸಂಯುಕ್ತ ಸಂಸ್ಥಾನದ ಸೈನ್ಯ ವಿಶೇಷ ಕಾರ್ಯಾಚರಣೆಗಳ ದಳ (USASOC) ಲೆ. ಜನರಲ್ ಜಾನ್ ಎಫ್ ಮುಲ್ಹೊಲ್ಲಂಡ್ ಜೂನಿಯರ್ ಫೋರ್ಟ್‌ ಬ್ರ್ಯಾಗ್ . ಉತ್ತರ ಕ್ಯಾರೊಲಿನ
ಭೂಪ್ರದೇಶ ನಿಯೋಜನೆ ಮತ್ತು ವಿತರಣೆ ದಳ (SDDC) ಬ್ರಿಗೆಡಿಯರ್ ಜೇಮ್ಸ್ ಎಲ್ ಹಾಡ್ಜ್ [೨೪] ಸ್ಕಾಟ್ AFB, ಇಲಿನಾಯ್ಸ್
ಸಂಯುಕ್ತ ಸಂಸ್ಥಾನದ ಸೈನ್ಯ ಬಾಹ್ಯಾಕಾಶ ಮತ್ತು ಕ್ಷಿಪಣಿ ರಕ್ಷಣಾ ದಳ /ಸಂಯುಕ್ತ ಸಂಸ್ಥಾನದ ಸೈನ್ಯ ರಕ್ಷಣಾನೀತಿ (USASMDC/ARSTRAT) ಲೆ. ಜನರಲ್ ಕೆವಿನ್ ಟಿ. ಕ್ಯಾಂಪ್‌ಬೆಲ್ ರೆಡ್‌‌ಸ್ಟೋನ್ ಅರ್ಸೆನಲ್ , ಅಲಬಾಮಾ
ಫೀಲ್ಡ್‌‌ ಆರ್ಮಿ ಹೆಡ್‌ಕ್ವಾರ್ಟರ್ಸ್‌ ಸದ್ಯದ ಕಮಾಂಡರ್ ಕೇಂದ್ರಸ್ಥಳ (ಹೆಡ್‌ಕ್ವಾರ್ಟರ್ಸ್)
ಸಂಯುಕ್ತ ಸಂಸ್ಥಾನದ ಎಂಟನೇ ಸೈನ್ಯ (EUSA) ಲೆ. ಜನರಲ್ ಜೋಸೆಫ್ ಜೋಸೆಫ್ ಎಫ್ ಫಿಲ್ ಜ್ಯೂನಿಯರ್. ಯಂಗ್‌ಸಾನ್ ಗ್ಯಾರಿಸನ್ , ಸಿಯೋಲ್
ನೇರ ವರದಿಯ ಘಟಕಗಳು ಸದ್ಯದ ಕಮಾಂಡರ್ ಕೇಂದ್ರಸ್ಥಳ (ಹೆಡ್‌ಕ್ವಾರ್ಟರ್ಸ್)
ನೆಟ್‌ವರ್ಕ್‌ ಎಂಟರ್‌ಪ್ರೈಸ್ ಟೆಕ್ನಾಲಜಿ ಕಮಾಂಡ್ / ೯ನೇ ಸಿಗ್ನಲ್ ಕಮಾಂಡ್ (ಆರ್ಮಿ) (NETCOM/೯thSC(A)) ಮೇ.ಜ. ಸೂಸಾನ್‌ ಲಾರೆನ್ಸ್ ಫೋರ್ಟ್‌ ಹ್ಯುಚುವಾ , ಅರಿಜೋನಾ
ಸಂಯುಕ್ತ ಸಂಸ್ಥಾನದ ಸೈನ್ಯ ವೈದ್ಯಕೀಯ ಕಮಾಂಡ್ (MEDCOM) ಲೆ. ಜನರಲ್ ಎರಿಕ್ ಶೂಮ್ಯಾಕರ್ ಫೋರ್ಟ್‌ ಸ್ಯಾಮ್ ಹೂಸ್ಟನ್, ಟೆಕ್ಸಾಸ್
ಸಂಯುಕ್ತ ಸಂಸ್ಥಾನದ ಸೈನ್ಯ ಬೇಹುಗಾರಿಕೆ ಮತ್ತು ಭದ್ರತಾ ಕಮಾಂಡ್ (INSCOM) ಮೆ.ಜ. ಡೇವಿಡ್ ಬಿ ಲಾಕ್‌ಮೆಂಟ್ ಫೋರ್ಟ್‌ ಬೆಲ್ವೊಯಿರ್ , ವರ್ಜಿನಿಯಾ
ಸಂಯುಕ್ತ ಸಂಸ್ಥಾನದ ಸೈನ್ಯ ಕ್ರಿಮಿನಲ್ ತನಿಖೆ ಕಮಾಂಡ್ (USACIDC) ಬ್ರಿಗೇಡಿಯರ್ ಜನರಲ್ ಕೊಲೀನ್ ಎಲ್ ಮೆಕ್‌ಗೈರ್ ಫೋರ್ಟ್‌ ಬೆಲ್ವೊಯಿರ್, ವರ್ಜಿನಿಯಾ
ಸಂಯುಕ್ತ ಸಂಸ್ಥಾನದ ಸೈನ್ಯ ಕಾರ್ಪ್ಸ್ ಆಫ್ ಇಂಜಿನಿಯರ್ಸ್ (USACE) ಲೆ. ಜನರಲ್ ರಾಬರ್ಟ್ ವ್ಯಾನ್ ಆಂಟ್‌ವರ್ಪ್‌ ಜ್ಯೂನಿಯರ್ ವಾಷಿಂಗ್ಟನ್‌, ಡಿ.ಸಿ.
ಸಂಯುಕ್ತ ಸಂಸ್ಥಾನದ ಸೈನ್ಯ ವಾಷಿಂಗ್ಟನ್ ಮಿಲಿಟರಿ ಜಿಲ್ಲೆ (MDW) ಮೆ.ಜ. ಕಾರ್ಲ್‌ ಹರ್ಸ್ಟ್ ಫೋರ್ಟ್‌ ಮೆಕ್‌ನೈರ್ , ವಾಷಿಂಗ್ಟನ್, ಡಿ.ಸಿ..
ಯು.ಎಸ್. ಸೈನ್ಯ ಪರೀಕ್ಷೆ ಮತ್ತು ಮೌಲ್ಯಾಂಕನ ದಳ (ATEC) ಮೆ.ಜ.ರೋಜರ್ ನಡ್ಯು ಅಲೆಕ್ಸಾಂಡ್ರಿಯಾ, , ವರ್ಜಿನಿಯಾ
ಸಂಯುಕ್ತ ಸಂಸ್ಥಾನದ ಮಿಲಿಟರಿ ಅಕಾಡಮಿ (USMA) ಲೆ. ಜನರಲ್ ಡೇವಿಡ್ ಎಚ್. ಹಂಟೂನ್ ವೆಸ್ಟ್ ಫ್ರಂಟ್ , ನ್ಯೂಯಾರ್ಕ್‌
ಸಂಯುಕ್ತ ಸಂಸ್ಥಾನದ ಮೀಸಲು ಸೈನ್ಯ ದಳ (USARC) ಲೆ. ಜನರಲ್ ಜಾಕ್ ಸಿ. ಸ್ಟಲ್ಜ್ ಫೋರ್ಟ್ ಮೆಕ್‌ಫೆರ್ಸನ್ , ಜಾರ್ಜಿಯಾ
ಸಂಯುಕ್ತ ಸಂಸ್ಥಾನದ ಸೈನ್ಯ ಇನ್‌ಸ್ಟಲೇಶನ್ ಮ್ಯಾನೇಜ್‌ಮೆಂಟ್ ಕಮಾಂಡ್ (IMCOM) ಲೆ. ಜನರಲ್ ರಿಕ್ ಲಿಂಚ್ ಆರ್ಲಿಂಗ್ಟನ್‌,ವರ್ಜಿನಿಯಾ
IMCOM ಸಬಾರ್ಡಿನೇಟ್  : ಸಂಯುಕ್ತ ಸಂಸ್ಥಾನದ ಸೈನ್ಯ ಕುಟುಂಬ ಮತ್ತು ನೈತಿಕತೆ, ಕಲ್ಯಾಣ ಮತ್ತು ಮನೋರಂಜನೆ ದಳ (FMWRC)[೨೫] ಮೆ.ಜ. ರುಬೆನ್ ಡಿ. ಜೋನ್ಸ್ ಅಲೆಕ್ಸಾಂಡ್ರಿಯಾ, ವರ್ಜೀನಿಯಾ

ಮೂಲ : ಯು.ಎಸ್‌. ಸೈನ್ಯ ಸಂಘಟನೆ [೨೬]

ರಚನೆ[ಬದಲಾಯಿಸಿ]

ಸಂಯುಕ್ತ ಸಂಸ್ಥಾನದ ಸೈನ್ಯವು ಮೂರು ಘಟಕಗಳಿಂದ ಕೂಡಿದೆ : ಕ್ರಿಯಾಶೀಲ ಘಟಕ, ನಿಯಮಿತ ಸೈನ್ಯ; ಮತ್ತು ಎರಡು ಮೀಸಲು ಸೈನ್ಯ, ನ್ಯಾಶನಲ್ ಗಾರ್ಡ್‌ ಸೈನ್ಯ ಮತ್ತು ಮೀಸಲು ಸೈನ್ಯ ಎರಡೂ ಮೀಸಲು ಘಟಕಗಳು ಪ್ರಾಥಮಿಕವಾಗಿ ಅರೆಕಾಲಿಕ ಸೈನಿಕರಿಂದ ಕೂಡಿರುತ್ತದೆ, ಇವರಿಗೆ ತಿಂಗಳಿಗೊಮ್ಮೆ ತರಬೇತಿ ನೀಡಲಾಗುತ್ತದೆ, ತರಬೇತಿಯನ್ನು ಬ್ಯಾಟಲ್ ಅಸೆಂಬ್ಲಿ ಅಥವಾ ಯೂನಿಟ್ ಟ್ರೈನಿಂಗ್ ಅಸೆಂಬ್ಲೀಸ್ (UTAs) ನೀಡುತ್ತವೆ ಮತ್ತು ಪ್ರತಿ ವರ್ಷ ಎರಡರಿಂದ ಮೂರು ವಾರಗಳ ವಾರ್ಷಿಕ ತರಬೇತಿ ನೀಡಲಾಗುತ್ತದೆ. ನಿಯಮಿತ ಸೈನ್ಯ ಮತ್ತು ಮೀಸಲು ಸೈನ್ಯವನ್ನು ಸಂಯುಕ್ತ ಸಂಸ್ಥಾನದ ಸಂಹಿತೆ (ಯುನೈಟೆಡ್ ಸ್ಟೇಟ್ಸ್ ಕೋಡ್) ನ ಟೈಟಲ್ ೧೦ರ ಅಡಿಯಲ್ಲಿ ಸಂಘಟಿಸಲಾಗಿದೆ. ರಾಷ್ಟ್ರೀಯ ಗಾರ್ಡ್‌ಅನ್ನು ಟೈಟಲ್ ೩೨ರ ಅಡಿಯಲ್ಲಿ ಸಂಘಟಿಸಲಾಗಿದೆ. ರಾಷ್ಟ್ರೀಯ ಗಾರ್ಡ್‌ ಸೈನ್ಯವನ್ನು ಯುಎಸ್ ಸೈನ್ಯದ ಒಂದು ಘಟಕದ ಹಾಗೆ ಸಂಘಟಿಸಿ, ತರಬೇತಿ ನೀಡಿ, ಸಜ್ಜುಗೊಳಿಸಲಾಗಿರುತ್ತದೆ. ಅದು ಒಕ್ಕೂಟದ ಸೇವೆಯಲ್ಲಿ ಇಲ್ಲದಿದ್ದಾಗ, ಅದು ಆಯಾ ರಾಜ್ಯದ ದಳದ ಅಡಿಯಲ್ಲಿ ಮತ್ತು ಪ್ರಾದೇಶೀಕ ಗವರ್ನರ್‌ ಅಡಿಯಲ್ಲಿ ಹಾಗೂ ಕೊಲಂಬಿಯಾ ಜಿಲ್ಲಾ ಮೇಯರ್ ಅವರಡಿಯಲ್ಲಿ ಇರುತ್ತದೆ. ಆದರೆ ರಾಷ್ಟ್ರೀಯ ಗಾರ್ಡ್‌ ಅನ್ನು ಗವರ್ನರ್ ಅವರ ಇಷ್ಟಕ್ಕೆ ವಿರುದ್ಧವಾಗಿಯೂ ಅಧ್ಯಕ್ಷೀಯ ಆದೇಶದ ಮೇರೆಗೆ ಸಂಯುಕ್ತ ಒಕ್ಕೂಟಕ್ಕೆ ಸೇರಿಸಬಹುದು.[೨೭]

ಗ್ರಾಫಿಕ್ ಲೆಜೆಂಡ್ ಆಫ್ ದಿ ಆರ್ಮಿ ಟ್ರಾನ್ಸ್‌ಫಾಮೇರ್ಶನ್

ಸೈನ್ಯವನ್ನು ಒಬ್ಬರು ನಾಗರಿಕ ಸೈನ್ಯದ ಕಾರ್ಯದರ್ಶಿ ನೇತೃತ್ವ ವಹಿಸುತ್ತಾರೆ. ಅವರು ರಕ್ಷಣಾ ಕಾರ್ಯದರ್ಶಿ/ಸಚಿವರ ನಿರ್ದೇಶನ ಮತ್ತು ನಿಯಂತ್ರಣದ ಮೇರೆಗೆ ಸೈನ್ಯದ ಎಲ್ಲ ವ್ಯವಹಾರಗಳನ್ನು ನಡೆಸಲು ಶಾಸನೋಕ್ತ ಅಧಿಕಾರವುಳ್ಳ ವ್ಯಕ್ತಿಯಾಗಿರುತ್ತಾರೆ.[೨೮] ಸೈನ್ಯದ ಸಿಬ್ಬಂದಿಯ ಮುಖ್ಯಸ್ಥರು (ಚೀಫ್‌ ಆಫ್ ದಿ ಸ್ಟಾಫ್ ಆಫ್ ದಿ ಆರ್ಮಿ ಅತ್ಯುನ್ನತ ಶ್ರೇಣಿಯ ಸೇನಾಧಿಕಾರಿಯಾಗರುತ್ತಾರೆ, ಅವರಿಗೆ ಎರಡು ಪಾತ್ರಗಳಿರುತ್ತವೆ; ಒಂದು ಪ್ರಧಾನ ಸೇನಾ ಸಲಹಾಗಾರರಾಗಿ ಮತ್ತು ಸೈನ್ಯದ ಕಾರ್ಯದರ್ಶಿಯ ಕಾರ್ಯಕಾರಿ ಏಜೆಂಟ್ ಆಗಿ, ಅಂದರೆ ಅದರ ಸೇವಾ ಮುಖ್ಯಸ್ಥರಾಗಿ (ಸರ್ವಿಸ್ ಚೀಫ್‌ ಆಗಿ); ಇನ್ನೊಂದು ಪಾತ್ರವೆಂದರೆ ಸಿಬ್ಬಂದಿಗಳ ಜಂಟಿ ಮುಖ್ಯಸ್ಥರ (ಜಾಯಿಂಟ್ ಚೀಫ್ಸ್ ಆಫ್ ದಿ ಸ್ಟಾಫ್) ನ ಒಬ್ಬರು ಸದಸ್ಯರ ಹಾಗೆ,ಇದು ಎಲ್ಲ ನಾಲ್ಕೂ ಸೇನಾ ಸೇವೆಗಳ ಸೇವಾ ಮುಖ್ಯಸ್ಥರನ್ನು ಒಳಗೊಂಡ ಒಂದು ಘಟಕವಾಗಿರುತ್ತದೆ ಮತ್ತು ಇದು ರಕ್ಷಣಾ ಇಲಾಖೆಗೆ ಸೇರಿರುತ್ತದೆ. ಇವರು ಛೇರ್‌ಮನ್ ಮತ್ತು ಸಿಬ್ಬಂದಿಗಳ ಜಂಟಿ ಮುಖ್ಯಸ್ಥರ(ಜಾಯಿಂಟ್ ಚೀಫ್ಸ್ ಆಫ್ ದಿ ಸ್ಟಾಫ್) ಛೇರ್‌ಮನ್ ರ ಮಾರ್ಗದರ್ಶನದಲ್ಲಿ, ಸಂಯುಕ್ತ ಸಂಸ್ಥಾನದ ಅಧ್ಯಕ್ಷರಿಗೆ , ರಕ್ಷಣಾ ಕಾರ್ಯದರ್ಶಿಯವರಿಗೆ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಗೆ ಕಾರ್ಯಕಾರಿ ಸೇನಾ ವಿಚಾರಗಳ ಕುರಿತು, ಸಲಹೆ ನೀಡುತ್ತಾರೆ. .[೨೯][೩೦] ೧೯೮೬ರಲ್ಲಿ, ಗೋಲ್ಡ್‌ವಾಟರ್ - ನಿಕೋಲಸ್ ಕಾಯಿದೆ ಯು ಸೇವೆಗಳ ಕಾರ್ಯಕಾರಿ ನಿಯಂತ್ರಣವು ಅದೇಶಗಳ ಒಂದು ಸರಣಿಯನ್ನು ಪಾಲಿಸಬೇಕೆಂದು ಕಡ್ಡಾಯಗೊಳಿಸಿದೆ. ಆ ಸರಣಿ ಹೀಗಿದೆ, ಅಧ್ಯಕ್ಷರಿಂದ ರಕ್ಷಣಾ ಕಾರ್ಯದರ್ಶಿಗೆ ನೇರವಾಗಿ ತಮ್ಮ ಭೌಗೋಳಿಕ ಅಥವಾ ಜವಾಬ್ದಾರಿಯ ಕಾರ್ಯಕ್ಷೇತ್ರದಲ್ಲಿ ಎಲ್ಲ ಸಶಸ್ತ್ರ ಪಡೆಗಳ ಮೇಲೆ ನಿಯಂತ್ರಣ ಹೊಂದಿರುವ ಯೂನಿಫೈಡ್ ಕಂಬಟಂಟ್ ಕಮಾಂಡರ್‌ಗಳಿಗೆ ಆದೇಶ ಬರುತ್ತದೆ. ಹೀಗೆ, ಸೇನಾ ಇಲಾಖೆಗಳ ಕಾರ್ಯದರ್ಶಿಗಳು (ಮತ್ತು ಅವರ ಕೆಳಗಿನ ಸಂಬಂಧಿತ ಸೇವಾ ಮುಖ್ಯಸ್ಥರು) ತಮ್ಮ ಸೇವಾ ಘಟಕಗಳನ್ನು ಸಂಘಟಿಸಲು, ತರಬೇತಿ ನೀಡಲು ಮತ್ತು ಸಜ್ಜುಗೊಳಿಸಲು ಜವಾಬ್ದಾರರಾಗಿರುತ್ತಾರೆ. ಸೈನ್ಯವು ತರಬೇತಿ ಹೊಂದಿದ ಪಡೆಗಳನ್ನು ಕಂಬಟಂಟ್ ಕಮಾಂಡರ್‌ಗಳಿಗೆ ರಕ್ಷಣಾ ಕಾರ್ಯದರ್ಶಿಯವರ ನಿರ್ದೇಶನದ ಮೇರೆಗೆ ಬಳಸಲು ನೀಡುತ್ತದೆ.[೩೧]

೨೦೧೩ರ ನಂತರ, ಸೈನ್ಯವು ಆರು ಭೌಗೋಳಿಕ ದಳಗಳಿಗೆ ಬದಲಾಗಲಿದ್ದು, ಅವು ಆರು ಭೌಗೋಳಿಕ ಯೂನಿಫೈಡ್ ಕಂಬಟಂಟ್ ಕಮಾಂಡ್‌‌ಗಳ (COCOM)ಸಾಲಿಗೆ ಸೇರುತ್ತವೆ :

  • ಸಂಯುಕ್ತ ಸಂಸ್ಥಾನದ ಕೇಂದ್ರೀಯ ಸೈನ್ಯವು ಜಾರ್ಜಿಯಾದ ಫೋರ್ಟ್‌ ಮೆಕ್‌ಪೆರ್ಸನ್‌ನಲ್ಲಿ ಕೇಂದ್ರ ಕಾರ್ಯಾಲಯ ಹೊಂದಿದೆ.
  • ಸಂಯುಕ್ತ ಸಂಸ್ಥಾನದ ಸೈನ್ಯ ಉತ್ತರ ವು ಟೆಕ್ಸಾಸ್‌ನ ಫೊರ್ಟ್‌ ಸ್ಯಾಮ್ ಹೂಸ್ಟನ್‌ನಲ್ಲಿ ಕೇಂದ್ರ ಕಾರ್ಯಾಲಯ ಹೊಂದಿದೆ.
  • ಸಂಯುಕ್ತ ಸಂಸ್ಥಾನದ ಸೈನ್ಯ ದಕ್ಷಿಣವು ಟೆಕ್ಸಾಸ್‌ನ ಫೊರ್ಟ್‌ ಸ್ಯಾಮ್ ಹೂಸ್ಟನ್‌ನಲ್ಲಿ ಕೇಂದ್ರ ಕಾರ್ಯಾಲಯ ಹೊಂದಿದೆ.
  • ಸಂಯುಕ್ತ ಸಂಸ್ಥಾನದ ಸೈನ್ಯ ಯೂರೋಪ್‌ ಜರ್ಮನಿಯ ಹೈಡೆಲ್‌ಬರ್ಗ್‌ ನಲ್ಲಿ ಕೇಂದ್ರ ಕಾರ್ಯಾಲಯ ಹೊಂದಿದೆ.
  • ಸಂಯುಕ್ತ ಸಂಸ್ಥಾನದ ಸೈನ್ಯ ಪೆಸಿಫಿಕ್ ಹವಾಯ್‌ನ ಫೋರ್ಟ್‌ ಶಾಫ್ಟರ್ನಲ್ಲಿ, ಕೇಂದ್ರ ಕಾರ್ಯಾಲಯ ಹೊಂದಿದೆ ಮತ್ತು (ಏಯ್ತ್‌ ಆರ್ಮಿಯೊಂದಿಗೆ ಒಂದುಗೂಡಿದೆ).
  • ಸಂಯುಕ್ತ ಸಂಸ್ಥಾನದ ಸೈನ್ಯ ಆಫ್ರಿಕಾವು ಇಟಲಿಯ ವಿಸೆಂಜಾದಲ್ಲಿ ಕೇಂದ್ರ ಕಾರ್ಯಾಲಯ ಹೊಂದಿದೆ.

ಪ್ರತಿ ದಳವೂ ಒಂದು ಸಂಖ್ಯೆಇರುವ ಸೈನ್ಯವನ್ನು ಕಾರ್ಯಕಾರಿ ದಳವಾಗಿ ಪಡೆದುಕೊಳ್ಳುತ್ತದೆ. ಯು.ಎಸ್‌. ಪೆಸಿಫಿಕ್ ಸೈನ್ಯಕ್ಕೆ ಮಾತ್ರ ಇದು ಅನ್ವಯಿಸುವುದಿಲ್ಲ, ಅದು ಕೊರಿಯಾ ಗಣರಾಜ್ಯದಲ್ಲಿ ಯು.ಎಸ್‌. ಸೈನ್ಯ ಪಡೆಯ ನಂಬರ್‌ಡ್ ಸೈನ್ಯವಾಗಿರುತ್ತದೆ.

ಸೈನ್ಯವು ತನ್ನ ಘಟಕ ನೆಲೆಯನ್ನು ಡಿವಿಶನ್ ಗಳಿಂದ ಬ್ರಿಗೇಡ್ ಗಳಿಗೆ ಬದಲಿಸಿಕೊಳ್ಳುತ್ತಿರುತ್ತದೆ. ಇದು ಕೊನೆಗೊಂಡಾಗ, ಕ್ರಿಯಶೀಲ ಸೈನ್ಯವು ತನ್ನ ಯುದ್ಧ ಬ್ರಿಗೇಡ್‌ ಗಳನ್ನು ೩೩ರಿಂದ ೪೮ಕ್ಕೆ ಏರಿಸಿಕೊಂಡಿರುತ್ತದೆ ಮತ್ತು ರಾಷ್ಟ್ರೀಯ ಗಾರ್ಡ್‌ ಮತ್ತು ಮೀಸಲು ಪಡೆಗಳೂ ಇದೇ ರೀತಿಯಾಗಿ ಹೆಚ್ಚಿಸಿಕೊಂಡಿರುತ್ತವೆ. ಡಿವಿಶನ್ ಲೀನಿಯೇಜ್‌ಯನ್ನು ಉಳಿಸಿಕೊಳ್ಳಲಾಗುತ್ತದೆ, ಆದರೆ ವಿಭಾಗೀಯ ಕೇಂದ್ರ ಕಾರ್ಯಾಲಯಗಳು ಆ ವಿಭಾಗೀಯ ಲೀನಿಯೇಜ್ ಹೊಂದಿರುವ ಬ್ರಿಗೇಡ್‌ಗಳು ಮಾತ್ರವಲ್ಲದೇ ಯಾವುದೇ ಬ್ರಿಗೇಡ್‌ಗೆ ಆದೇಶ ನೀಡಲು ಸಮರ್ಥವಾಗಿರುತ್ತವೆ. ಈ ಯೋಜನೆಯ ಕೇಂದ್ರ ಭಾಗವೆಂದರೆ ಪ್ರತಿ ಬ್ರಿಗೇಡ್‌ ಮಾಡ್ಯಲರ್ ಆಗಿರಬೇಕು, ಅಂದರೆ ಒಂದೇ ಬಗೆಯ ಎಲ್ಲ ಬ್ರಿಗೇಡ್‌ಗಳು ಏಕರೂಪವಾಗಿರಬೇಕು ಮತ್ತು ಯಾವುದೇ ಬ್ರಿಗೇಡ್‌ಗೂ ಯಾವುದೇ ಡಿವಿಶನ್ ಆದೇಶ ಕೊಡಬಹುದು. ಮೂರು ಪ್ರಧಾನ ರೀತಿಯ ಭೂ ಯುದ್ಧ ಬ್ರಿಗೇಡ್‌ಗಳಿವೆ :

  • ಹೆವಿ ಬ್ರಿಗೇಡ್‌ಗಳು ಸುಮಾರು ಸುಮಾರು ೩,೭೦೦ ಪಡೆಗಳನ್ನು ಹೊಂದಿದ್ದು, ಇದು ಒಂದು ಯಾಂತ್ರೀಕೃತ ಕಾಲಾಳುಪಡೆ (ಮಶೀನೈಸ್ಡ್ ಇನ್‌ಫಂಟ್ರಿ) ಅಥವಾ ಟ್ಯಾಂಕ್ ಬ್ರಿಗೇಡ್‌ಗೆ ಸಮನಾಗಿರುತ್ತದೆ.
  • ಸ್ಟ್ರೈಕರ್ ಬ್ರಿಗೇಡ್‌ಗಳು ಸುಮಾರು ೩,೯೦೦ ಪಡೆಗಳನ್ನು ಹೊಂದಿರುತ್ತವೆ ಮತ್ತು ಸ್ಟ್ರೈಕರ್ ರೀತಿಯ ವಾಹನಗಳ ಮೇಲೆ ನೆಲೆಗೊಂಡಿರುತ್ತದೆ./
  • ಕಾಲಾಳುಪಡೆ(ಇನ್‌ಫಂಟ್ರಿ) ಬ್ರಿಗೇಡ್‌ಗಳು ಸುಮಾರು ೩,೩೦೦ ಪಡೆಗಳನ್ನು ಹೊಂದಿದ್ದು, ಒಂದು ಹಗುರು ಇನ್‌ಫಂಟ್ರಿ ಅಥವಾ ವಾಯು ಬ್ರಿಗೇಡ್‌ಗೆ ಸಮನಾಗಿರುತ್ತದೆ.

ಇದರೊಂದಿಗೆ, ಯುದ್ಧ ಬೆಂಬಲ ಮತ್ತು ಸೇವಾ ಬೆಂಬಲ ಮಾಡ್ಯುಲರ್ ಬ್ರಿಗೇಡ್‌ಗಳಿರುತ್ತವೆ. ಯುದ್ಧ ಬೆಂಬಲ ಬ್ರಿಗೇಡ್‌ಗಳು ವಾಯುಪಡೆ ಬ್ರಿಗೇಡ್‌ಗಳನ್ನು ಹೊಂದಿದ್ದು, ಇವು ಹೆವಿ ಮತ್ತು ಲೈಟ್‌ ಮಾದರಿಯಲ್ಲಿ, ಫೈರ್ಸ್ (ಅರ್ಟಿಲರಿ) ಬ್ರಿಗೇಡ್‌ಗಳು ಮತ್ತು ಯುದ್ಧರಂಗ ಸರ್ವಿಲನ್ಸ್ ಬ್ರಿಗೇಡ್‌ಗಳ ಹಾಗೆ ಇರುತ್ತವೆ. ಯುದ್ಧ ಸೇವೆ ಬೆಂಬಲ ಬ್ರಿಗೇಡ್‌ಗಳು ಸುಸ್ಥಿರ (ಸಸ್ಟೈನ್‌ಮೆಂಟ್) ಬ್ರಿಗೇಡ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಸೈನ್ಯದಲ್ಲಿ ಒಂದು ಗುಣಮಟ್ಟದ ಬೆಂಬಲದ ಪಾತ್ರವನ್ನು ಒದಗಿಸುತ್ತವೆ.

ನಿಯಮಿತ ಯುದ್ಧ ಕುಶಲ ಕಾರ್ಯಾಚರಣೆ ಸಂಸ್ಥೆಗಳು (ರೆಗ್ಯುಲರ್ ಕಂಬಟ್ ಮನ್ಯೂವರ್ ಆರ್ಗನೈಸೇಶನ್ಸ್)[ಬದಲಾಯಿಸಿ]

2007ರ ರೋಸ್‌ ಪರೇಡ್‌‌ನಲ್ಲಿ 1ನೇ ಕ್ಯಾವಲ್ರಿ ವಿಭಾಗ ಫೋರ್ಟ್‌ ಹುಡ್, TX
ಚಿತ್ರ:3ACRPatrol(OIF3).jpg
ಇರಾಕ್‌ನಲ್ಲಿ ಗಸ್ತು ತಿರುಗುತ್ತಿರುವ 3ನೇ ಆರ್ಮರ್ಡ್ ಕ್ಯಾವಲ್ರಿ ರೆಜಿಮೆಂಟ್ ಸೈನಿಕರು

ಯುಎಸ್ ಸೈನ್ಯವು ಪ್ರಸ್ತುತ ೧೦ ಕ್ರಿಯಾಶೀಲ ವಿಭಾಗಗಳನ್ನು ಮತ್ತು ಹಲವಾರು ಸ್ವತಂತ್ರ ಘಟಕಗಳನ್ನು ಹೊಂದಿದೆ. ಸೇನಾಬಲವು ಬೆಳವಣಿಗೆ ಪ್ರಕ್ರಿಯೆಯಲ್ಲಿದೆ, ನಾಲ್ಕು ಹೆಚ್ಚುವರಿ ಬ್ರಿಗೇಡ್‌ಗಳು ೨೦೧೩ರ ವೇಳೆಗೆ ಚಾಲನೆಗೊಳ್ಳಲಿವೆ. ೨೦೦೭ ಜನವರಿಯಿಂದ ಒಟ್ಟು ೭೪,೨೦೦ ಸೈನಿಕರ ಹೆಚ್ಚಳವಾಗಿದೆ. ಪ್ರತಿ ವಿಭಾಗವೂ ನಾಲ್ಕು ಭೂನೆಲೆಯ ಕುಶಲ ಕಾರ್ಯಾಚರಣೆ ಬ್ರಿಗೇಡ್‌ಗಳನ್ನು ಹೊಂದಿರುವುದು ಮತ್ತು ಒಂದು ವಾಯುಯಾನ ಬ್ರಿಗೇಡ್‌ ಮತ್ತು ಫೈರ್‌ ಬ್ರಿಗೇಡ್‌ ಮತ್ತು ಸೇವಾ ಬೆಂಬಲ ಬ್ರಿಗೇಡ್‌ಅನ್ನು ಹೊಂದಲಾಗುವುದು. ಹೆಚ್ಚುವರಿ ಬ್ರಿಗೇಡ್‌ಗಳನ್ನು ಅವುಗಳ ಧ್ಯೇಯದ ಆಧಾರದ ಮೇಲೆ ಒಂದು ವಿಭಾಗ ಕೇಂದ್ರ ಕಾರ್ಯಾಲಯಕ್ಕೆ ವಹಿಸಲಾಗುವುದು ಅಥವಾ ಜೋಡಿಸಲಾಗುವುದು.

ರಾಷ್ಟ್ರೀಯ ಗಾರ್ಡ್‌ ಸೈನ್ಯದ ಮತ್ತು ಮೀಸಲು ಸೈನ್ಯದ ಒಳಗೆ ಪುನಾ ಎಂಟು ವಿಭಾಗಗಳಿವೆ, ಸುಮಾರು ಹದಿನೈದು ಕುಶಲ ಕಾರ್ಯಾಚರಣೆ ಬ್ರಿಗೇಡ್‌ಗಳು, ಯುದ್ಧ ಸೇವೆ ಬೆಂಬಲ ಬ್ರಿಗೇಡ್‌ಗಳು ಮತ್ತು ಸ್ವತಂತ್ರ ಮೋಟಾರುವಾಹನ ಪಡೆ (ಕ್ಯಾವಲ್ರಿ), ಕಾಲಾಳುಪಡೆ (ಇನ್‌ಫಂಟ್ರಿ), ಫಿರಂಗಿದಳ(ಆರ್ಟಿಲರಿ), ವಾಯುದಳ, ಇಂಜಿನಿಯರ್ಗಳು ಮತ್ತು ಬೆಂಬಲ ಬೆಟಾಲಿಯನ್‌ಗಳಿರುತ್ತವೆ. ಮೀಸಲು ಸೈನ್ಯವು ವಿಶೇಷವಾಗಿ ವಸ್ತುತಃ ಎಲ್ಲ ಮಾನಸಿಕ ಕಾರ್ಯಾಚರಣೆಗಳನ್ನು ಮತ್ತು ನಾಗರಿಕ ವ್ಯವಹಾರ ಘಟಕಗಳನ್ನು ಒದಗಿಸುತ್ತದೆ.

ಹೆಸರು ಕೇಂದ್ರ ಕಾರ್ಯಾಲಯ ಉಪವಿಭಾಗಳು
1ನೇ ಸಶಸ್ತ್ರ ವಿಭಾಗ ವೈಸ್‌ಬಾಡನ್ ಸೈನ್ಯ ಏರ್‌ಫೀಲ್ಡ್ , ಜರ್ಮನಿ ಫೋರ್ಟ್ ಬ್ಲಿಸ್ ನಲ್ಲಿರುವ 2ನೇ, 4ನೇ ಹೆವಿ ಬ್ರಿಗೇಡ್‌ ಯುದ್ಧ ತಂಡಗಳು, 1ನೇ ಸ್ಟ್ರೈಕರ್ ಬ್ರಿಗೇಡ್‌ ಯುದ್ಧ ತಂಡ ಮತ್ತು 3ನೇ ಕಾಲಾಳುಪಡೆ ಬ್ರಿಗೇಡ್‌ ಯುದ್ಧ ತಂಡ.1ನೇ ಸಶಸ್ತ್ರ ವಿಭಾಗ ಯುದ್ಧ ವಾಯುದಳ ಬ್ರಿಗೇಡ್‌ ಫೋರ್ಟ್‌ ಬ್ಲಿಸ್‌ನ ಬಿಗ್ಸ್ ಆರ್ಮೀ ಏರ್‌ಫೀಲ್ಡ್‌ ಗೆ 2011ರ ಸುಮಾರಿಗೆ ತಲುಪುತ್ತದೆ. ವಿಭಾಗೀಯ ಕೇಂದ್ರ ಕಾರ್ಯಾಲಯವು 2011ರ ಸುಮಾರಿಗೆ ಫೋಟ್‌ ಬ್ಲಿಸ್‌ನತ್ತ ಸಾಗುವುದನ್ನು ಪೂರ್ಣಗೊಳಿಸುತ್ತದೆ.
1ನೇ ಮೋಟಾರುವಾಹನ ಪಡೆ (ಕ್ಯಾವಲ್ರಿ) ವಿಭಾಗ ಫೋರ್ಟ್‌ ಹುಡ್ ಟೆಕ್ಸಾಸ್ ಫೋರ್ಟ್‌ ಹುಡ್‌ ನಲ್ಲಿ 1ನೇ, 2ನೇ, 3ನೇ, 4ನೇ ಹೆವಿ ಬ್ರಿಗೇಡ್‌ ಯುದ್ಧ ತಂಡಗಳು ಯುದ್ಧ ವಾಯುದಳ ಬ್ರಿಗೇಡ್‌.
ನೇ ಕಾಲಾಳುಪಡೆ ವಿಭಾಗ ಫೋರ್ಟ್‌ ರಿಲೆ, ಕಾನ್ಸಾಸ್‌ ಫೋರ್ಟ್‌ ರಿಲೆಯಲ್ಲಿ 1ನೇ, 2ನೇ ಹೆವಿ ಬ್ರಿಗೇಡ್‌ ಯುದ್ಧ ತಂಡಗಳು , 4ನೇ ಕಾಲಾಳುಪಡೆ ಬ್ರಿಗೇಡ್‌ ಯುದ್ಧ ತಂಡ ಮತ್ತು ಯುದ್ಧ ವಾಯುದಳ ಬ್ರಿಗೇಡ್‌, ಫೋರ್ಟ್‌ ನಾಕ್ಸ್‌ ಕೆಂಟುಕಿ ಯಲ್ಲಿ ಬ್ರಿಗೇಡ್‌ ಯುದ್ಧ ತಂಡ.
2ನೇ ಕಾಲಾಳುಪಡೆ ವಿಭಾಗ ಕ್ಯಾಂಪ್ ರೆಡ್ ಕ್ಲೌಡ್ , ದಕ್ಷಿಣ ಕೊರಿಯಾ ಕ್ಯಾಂಪ್ ಹಂಫ್ರಿಸ್‌ ನಲ್ಲಿ 1ನೇ ಹೆವಿ ಬ್ರಿಗೇಡ್‌ ಯುದ್ಧ ತಂಡ ಮತ್ತು ಯುದ್ಧ ವಾಯುದಳ ಬ್ರಿಗೇಡ್‌ ಮತ್ತು ಕ್ಯಾಂಪ್ ಕ್ಯಾಸೇ , ದಕ್ಷಿಣ ಕೊರಿಯಾ, ಮತ್ತು 2ನೇ, 3ನೇ ಮತ್ತು 4ನೇ ಮತ್ತು ಸ್ಟ್ರೈಕರ್ r ಬ್ರಿಗೇಡ್‌ ಯುದ್ಧ ತಂಡಗಳು (SBCTs) ಫೋರ್ಟ್‌ ಲೆವಿಸ್, ವಾಷಿಂಗ್ಟನ್ .
ನೇ ಕಾಲಾಳುಪಡೆ ವಿಭಾಗ ಫೋರ್ಟ್‌ ಸ್ಟಿವರ್ಟ್‌, , ಜಾರ್ಜಿಯಾ ಫೋರ್ಟ್‌ ಸ್ಟ್ಯೂವರ್ಟ್‌, ಜಾರ್ಜಿಯಾದಲ್ಲಿ1ನೇ , 2ನೇ ಹೆವಿ ಬ್ರಿಗೇಡ್‌ ಯುದ್ಧ ತಂಡಗಳು ಮತ್ತು 4ನೇ ಕಾಲಾಳುಪಡೆ ಬ್ರಿಗೇಡ್‌ ಯುದ್ಧ ತಂಡ, ಫೋರ್ಟ್‌ ಬೆನ್ನಿಂಗ್, ಜಾರ್ಜಿಯಾದಲ್ಲಿ 3ನೇ ಹೆವಿ ಬ್ರಿಗೇಡ್‌ ಯುದ್ಧ ತಂಡ, ಮತ್ತು ಜಾರ್ಜಿಯಾದ ಹಂಟರ್ ಆರ್ಮಿ ಏರ್‌ಫೀಲ್ಡ್‌ನಲ್ಲಿ ಯುದ್ಧ ವಾಯುದಳ ಬ್ರಿಗೇಡ್‌.
4ನೇ ಕಾಲಾಳುಪಡೆ ವಿಭಾಗ ಫೋರ್ಟ್‌ ಕ್ಯಾರ್‌ಸನ್, ಕೊಲೊರಡೋ ಕೊಲೊರಡೊದ ಫೋರ್ಟ್‌ ಕ್ಯಾರ್ಸನ್ ನಲ್ಲಿ 1ನೇ, 2ನೇ, 3ನೇ ಹೆವಿ ಬ್ರಿಗೇಡ್‌ ಯುದ್ಧ ತಂಡಗಳು ಮತ್ತು 4ನೇ ಕಾಲಾಳು ಬ್ರಿಗೇಡ್‌ ಯುದ್ಧ ತಂಡ. ಫೋರ್ಟ್‌ ಹುಡ್, ಟೆಕ್ಸಾಸ್ ನಲ್ಲಿ 2011ವರೆಗೆ ಯುದ್ಧ ವಾಯುದಳ ಬ್ರಿಗೇಡ್‌.
10ನೇ ಪರ್ವತ ವಿಭಾಗ ಫೋರ್ಟ್‌ ಡ್ರಮ್, ನ್ಯೂಯಾರ್ಕ್‌ ಫೋರ್ಟ್‌ ಡ್ರಮ್‌ನಲ್ಲಿ 1ನೇ , 2ನೇ, 3ನೇ ಕಾಲಾಳು ಪಡೆ ಬ್ರಿಗೇಡ್‌ ಯುದ್ಧ ತಂಡಗಳು ಮತ್ತು ಯುದ್ಧ ವಾಯುದಳ ಬ್ರಿಗೇಡ್‌ ಮತ್ತು ಫೋರ್ಟ್‌ ಪೋಕ್ ಸೂಸಿಯಾನ ದಲ್ಲಿ 4ನೇ ಕಾಲಾಳು ಪಡೆ ಕಾಲಾಳುಪಡೆ ಬ್ರಿಗೇಡ್‌ ಯುದ್ಧ ತಂಡ.
25ನೇ ಕಾಲಾಳುಪಡೆ ವಿಭಾಗ ಸ್ಕೊಫೀಲ್ಡ್ ಬ್ಯಾರಕ್ಸ್, ಹವಾಯ್ ಸ್ಕೊಫೀಲ್ಡ್ ಬ್ಯಾರಕ್ಸ್‌ನಲ್ಲಿ, 3ನೇ ಕಾಲಾಳುಪಡೆ ಬ್ರಿಗೇಡ್‌ ಯುದ್ಧ ತಂಡ ಮತ್ತು 2ನೇ ಸ್ಟ್ರೈಕರ್ ಬ್ರಿಗೇಡ್‌ ಯುದ್ಧ ತಂಡ, ವೀಲರ್ ಆರ್ಮಿ ಏರ್‌ಫೀಲ್ಡ್‌ನಲ್ಲಿ ಯುದ್ಧ ವಾಯುದಳ ಬ್ರಿಗೇಡ್‌, ಫೋರ್ಟ್‌ ವೈನ್‌ರೈಟ್, ಅಲಾಸ್ಕಾದಲ್ಲಿ 1ನೇ ಸ್ಟ್ರೈಕರ್ ಬ್ರಿಗೇಡ್‌ ಯುದ್ಧ ತಂಡ, ಮತ್ತು ಫೋರ್ಟ್‌ ರಿಚರ್ಡ್‌ಸನ್, ಅಲಾಸ್ಕಾದಲ್ಲಿ 4ನೇ ವಾಯು(ಏರ್‌ಬೋರ್ನ್‌) ಕಾಲಾಳುಪಡೆ ಬ್ರಿಗೇಡ್‌ ಯುದ್ಧ ತಂಡ.
822ನೇ ಏರ್‌‌ಬೋರ್ನ್‌ ವಿಭಾಗ ಫೋರ್ಟ್‌ ಬ್ರ್ಯಾಗ್, ಉತ್ತರ ಕರೊಲಿನಾ ಬ್ರಿಗೇಡ್‌ ಫೋರ್ಟ್‌ ಬ್ರ್ಯಾಗ್‌ನಲ್ಲಿ 1ನೇ, 2ನೇ, 3ನೇ, 4ನೇ ಏರ್‌ಬೋರ್ನ್‌ ಕಾಲಾಳುಪಡೆ ಬ್ರಿಗೇಡ್‌ ಯುದ್ಧ ತಂಡಗಳು ಮತ್ತು ಯುದ್ಧ ವಾಯುದಳ.
1011ನೇ ಏರ್‌ಬೋರ್ನ್‌ ವಿಭಾಗ ಫೋರ್ಟ್‌ ಕ್ಯಾಂಪ್‌ಬೆಲ್‌, ಕೆಂಟುಕಿ ಫೋರ್ಟ್‌ ಕ್ಯಾಂಪ್‌ಬೆಲ್‌ನಲ್ಲಿ 1ನೇ , 2ನೇ , 3ನೇ, 4ನೇ ಕಾಲಾಳುಪಡೆ ಬ್ರಿಗೇಡ್‌ ಯುದ್ಧ ತಂಡಗಳು (ವಾಯು ಆಕ್ರಮಣ), 101ನೇ ಮತ್ತು 159ನೇ ಯುದ್ಧ ವಾಯುದಳ ಬ್ರಿಗೇಡ್‌ಗಳು.
170ನೇ ಕಾಲಾಳುಪಡೆ ಬ್ರಿಗೇಡ್ ಬಾಮ್‌ಹೋಲ್ಡರ್, ಜರ್ಮನಿ ಎರಡು ಯಾಂತ್ರೀಕೃತ ಕಾಲಾಳುಪಡೆ ಬೆಟಾಲಿಯನ್‌ಗಳು, ಒಂದುM1A1 ಅಬ್ರಾಮ್ಸ್ ಬೆಟಾಲಿಯನ್, ಒಂದು ಸೆಲ್ಫ್‌-ಪ್ರೊಫೆಲ್ಡ್‌ 155ಎಂಎಂ ಫೀಲ್ಡ್ ಆರ್ಟಿಲರಿ ಬೆಟಾಲಿಯನ್, ಒಂದು ಯುದ್ಧ ಎಂಜಿನಿಯರ್ ಬೆಟಾಲಿಯನ್.
1722ನೇ ಕಾಲಾಳುಪಡೆ ಬ್ರಿಗೇಡ್ ಗ್ರಾಫೆನ್‌ವ್ಹೊರ್, ಜರ್ಮನಿ ಎರಡು ಯಾಂತ್ರೀಕೃತ ಕಾಲಾಳುಪಡೆ ಬೆಟಾಲಿಯನ್‌ಗಳು, ಒಂದು M1A1ಅಬ್ರಾಮ್ಸ್ ಬೆಟಾಲಿಯನ್‌, ಒಂದು ಸೆಲ್ಫ್‌-ಪ್ರೊಫೆಲ್ಡ್ 155ಎಂಎಂ ಫೀಲ್ಡ್ ಆರ್ಟಿಲರಿ ಬೆಟಾಲಿಯನ್, ಒಂದು ಯುದ್ಧ ಇಂಜಿನಿಯರ್ ಬೆಟಾಲಿಯನ್.
173ನೇ ಏರ್‌ಬೋರ್ನ್‌ ಬ್ರಿಗೇಡ್‌ ಯುದ್ಧ ತಂಡ ವಿಸಿಂಜಾ, ಇಟಲಿ ಎರಡು ಏರ್‌ಬೋರ್ನ್‌ ಕಾಲಾಳುಪಡೆ ಬೆಟಾಲಿಯನ್‌‌ಗಳು, ಒಂದು ಮೋಟಾರುವಾಹನ (ಕ್ಯಾವಲ್ರಿ) ಸ್ಕ್ವಾಡ್ರನ್, ಒಂದು ಏರ್‌ಬೋರ್ನ್‌ ಫೀಲ್ಡ್ ಆರ್ಟಿಲರಿ ಬೆಟಾಲಿಯನ್, ಒಂದು ವಿಶೇಷ ತಂಡಗಳ ಬೆಟಾಲಿಯನ್, ಮತ್ತು ಒಂದು ಬೆಂಬಲ ಬೆಟಾಲಿಯನ್.
22ನೇ ಮೋಟಾರುವಾಹನಗಳ ರೆಜಿಮೆಂಟ್ ವಿಲ್‌ಸೆಕ್ , ಜರ್ಮನಿ 6 ಸಬಾರ್ಡಿನೇಟ್ ಸ್ಕ್ವಾಡ್ರನ್ಸ್ : 1ನೇ (ಸ್ಟ್ರೈಕರ್ ಕಾಲಾಳುಪಡೆ ), 2ನೇ (ಸ್ಟ್ರೈಕರ್ ಕಾಲಾಳುಪಡೆ ), 3ನೇ (ಸ್ಟ್ರೈಕರ್ ಕಾಲಾಳುಪಡೆ ), 4ನೇ (ರೆಕನ್‌, ಸರ್ವಿಲೆನ್ಸ್, ಟಾರ್ಗೆಟ್ ಅಕ್ವಿಸಿಶನ್), ಫೈರ್ಸ್ (6x3 155ಎಂಎಂ ಟೋಡ್‌ ಆರ್ಟಿ & RSS (ಲಾಜಿಸ್ಟಿಕಲ್ ಬೆಂಬಲ್‌ ); 5 ಪ್ರತ್ಯೇಕ ತಂಡಗಳು/ಕಂಪನಿಗಳು :ರೆಜಿಮೆಂಟ್‌ ಕೇಂದ್ರ ಕಾರ್ಯಾಲಯ ತಂಡ, ಸೇನಾ ಬೇಹುಗಾರಿಕಾ ತಂಡ, ಸಿಗ್ನಲ್ ತಂಡ, ಇಂಜಿನಿಯರ್ ತಂಡ ಮತ್ತು ಆಂಟಿ-ಆರ್ಮರ್ ತಂಡ.
3ನೇ ಆರ್ಮರ್‌ಡ್‌ ಮೋಟಾರುವಾಹನಗಳ ಪಡೆ (ಕ್ಯಾವಲ್ರಿ) ರೆಜಿಮೆಂಟ್ ಫೋರ್ಟ್‌ ಹುಡ್, ಟೆಕ್ಸಾಸ್ ಮೂರು ಆರ್ಮರ್‌ಡ್ ಕ್ಯಾವಲ್ರಿ ಸ್ಕ್ವಾಡ್ರನ್ಸ್, ಒಂದು ವಾಯುದಳ ಸ್ಕ್ವಾಡ್ರನ್, ಮತ್ತು ಒಂದು ಬೆಂಬಲ ಸ್ಕ್ವಾಡ್ರನ್ ಸ್ಟ್ರೈಕರ್ ಬ್ರಿಗೇಡ್‌ ಯುದ್ಧ ತಂಡಕ್ಕೆ ಪರಿವರ್ತನೆ .
11ನೇ ಅರ್ಮರ್‌ಡ್ ಕ್ಯಾವಲ್ರಿ ರೆಜಿಮೆಂಟ್ ಫೋರ್ಟ್‌ ಇರ್ವಿನ್, ಕ್ಯಾಲಿಫೊರ್ನಿಯಾ ರಾಷ್ಟ್ರೀಯ ತರಬೇತಿ ಕೇಂದ್ರ (NTC)ದಲ್ಲಿಆಪೋಸಿಂಗ್ ಫೋರ್ಸ್‌ ಹಾಗೆ ಕೆಲಸ ಮಾಡುತ್ತದೆ (OPFOR). ಮಲ್ಟಿ-ಕಾಂಪೊ ಜೆನರೇಟಿಂಗ್ ಫೋರ್ಸ್‌ HBCT.

ವಿಶೇಷ ಕಾರ್ಯಾಚರಣೆ ಪಡೆಗಳು[ಬದಲಾಯಿಸಿ]

ಯುಎಸ್ ಸೈನ್ಯದ ವಿಶೇಷ ಕಾರ್ಯಾಚರಣೆ ಕಮಾಂಡ್ (ವಾಯುದಳ):

ಹೆಸರು ಕೇಂದ್ರ ಕಾರ್ಯಾಲಯ ಸಂರಚನೆ ಮತ್ತು ಉದ್ದೇಶ
ವಿಶೇಷ ಪಡೆಗಳು (ಗ್ರೀನ್ ಬೆರೆಟ್ಸ್ ) ಫೋರ್ಟ್‌ ಬ್ರ್ಯಾಗ್, ಕೆರೊಲಿನಾ ಅಸಾಂಪ್ರದಾಯಿಕ ಯುದ್ಧರಂಗದ ಸಾಮರ್ಥ್ಯ ಹೊಂದಿರುವ ಏಳು ಗುಂಪುಗಳು , ವಿದೇಶಿ ಆಂತರಿಕ ರಕ್ಷಣೆ, ವಿಶೇಷ ಸ್ಥಳಾನ್ವೇಷಣೆ, ನೇರ ಕಾರ್ಯಾಚರಣೆ ಮತ್ತು ಭಯೋತ್ಪಾದನೆ-ವಿರುದ್ಧ.
75ನೇ ರೇಂಜರ್ ರೆಜಿಮೆಂಟ್ (ರೇಂಜರ್ಸ್) ಫೋರ್ಟ್‌ ಬೆನ್ನಿಂಗ್, ಜಾರ್ಜಿಯಾ ಮೇಲ್ದರ್ಜೆಯ ಏರ್‌ಬೋರ್ನ್‌ ಕಾಲಾಳುಪಡೆಯ ಮೂರು ಬೆಟಾಲಿಯನ್ ಗಳು .
160ನೇ ವಿಶೇಷ ಕಾರ್ಯಾಚರಣೆಗಳ ವಾಯುದಳ ರೆಜಿಮೆಂಟ್ ( ಬೇಟೆಗರರು- ನೈಟ್ ಸ್ಟಾಕರ್ಸ್) ಫೋರ್ಟ್‌ ಕ್ಯಾಂಪ್‌ಬೆಲ್ , ಕೆಂಟುಕಿ ನಾಲ್ಕು ಬೆಟಾಲಿಯನ್‌ಗಳು, ಸಾಮಾನ್ಯ ಉದ್ದೇಶದ ಪಡೆಗಳಿಗೆ ಹೆಲಿಕಾಪ್ಟರ್ ವಾಯುದಳ ಬೆಂಬಲ ಮತ್ತು ವಿಶೇಷ ಕಾರ್ಯಾಚರಣೆ ಪಡೆಗಳು.
44ನೇ ಮಾನಸಿಕ ಕಾರ್ಯಾಚರಣೆಗಳ ಗುಂಪು ಫೋರ್ಟ್‌ ಬ್ರ್ಯಾಗ್, ದಕ್ಷಿಣ ಕರೋಲಿನಾ ಮಾನಸಿಕ ಕಾರ್ಯಾಚರಣೆಗಳ ಘಟಕ, ಆರು ಬೆಟಾಲಿಯನ್‌‌ಗಳು.
95ನೇ ನಾಗರಿಕ ವ್ಯವಹಾರಗಳ ಬ್ರಿಗೇಡ್ ಫೋರ್ಟ್‌ ಬ್ರ್ಯಾಗ್, ದಕ್ಷಿಣ ಕರೋಲಿನಾ ನಾಗರಿಕ ವ್ಯವಹಾರಗಳ ಬ್ರಿಗೇಡ್‌.
528ನೇ ಸಸ್ಟೈನ್‌ಮೆಂಟ್ Bಬ್ರಿಗೇಡ್‌(ವಿಶೇಷ ಕಾರ್ಯಾಚರಣೆ) (ಏರ್‌ಬೋರ್ನ್‌) ಫೋರ್ಟ್‌ ಬ್ರ್ಯಾಗ್, ದಕ್ಷಿಣ ಕರೋಲಿನಾ
11ನೇ SFOD-D (ಟೆಲ್ಟಾ ಪಡೆ) ಫೋರ್ಟ್‌ ಬ್ರ್ಯಾಗ್, ದಕ್ಷಿಣ ಕರೋಲಿನಾ ಮೇಲ್ದರ್ಜೆ ವಿಶೇಷ ಕಾರ್ಯಾಚರಣೆಗಳು ಮತ್ತು ಭಯೋತ್ಪಾದನಾ ವಿರೋಧಿ ಘಟಕ. ಇದರ ಕಾರ್ಯಾಚರಣೆಗಳನ್ನು ಪ್ರಾಥಮಿಕವಾಗಿ ವಿಶೇಷ ಪಡೆಗಳ ಗುಂಪುಗಳು ಮತ್ತು ರೇಂಜರ್ ರೆಜಿಮೆಂಟ್ ಆಯ್ಕೆಮಾಡುತ್ತವೆ, ಕೆಲವು USASOC-ಅಲ್ಲದ ಘಟಕಗಳಿಂದಲೂ ಇರುತ್ತದೆ.

ಸಿಬ್ಬಂದಿಗಳು[ಬದಲಾಯಿಸಿ]

ಇವು ಇಂದು ಬಳಕೆಯಲ್ಲಿರುವ ಯು.ಎಸ್‌. ಸೈನ್ಯದ ಶ್ರೇಣಿಗಳು ಮತ್ತು ಅವುಗಳ ಸಮಾನ ನ್ಯಾಟೋ ನೇಮಕಾತಿ/ಹುದ್ದೆಗಳಾಗಿವೆ.

ನಿಯೋಜಿತ ಅಧಿಕಾರಿಗಳು (ಕಮಿಶನ್ಡ್ ಆಫೀಸರ್ಸ್)  :[೩೨]

There are several paths to becoming a commissioned officer including Army ROTC, the United States Military Academy at West Point or the United States Merchant Marine Academy at Kings Point, and Officer Candidate School. Certain professionals, physicians, nurses, lawyers, and chaplains are commissioned directly into the Army. But no matter what road an officer takes, the insignia are the same.

Address all personnel with the rank of general as "General (last name)" regardless of the number of stars. Likewise, address both colonels and lieutenant colonels as "Colonel (last name)" and first and second lieutenants as "Lieutenant (last name)."

O-1 O-2 O-3 O-4 O-5 O-6 O-7 O-8 O-9 O-10
ಲಾಂಛನಗಳು
ಶೀರ್ಷಿಕೆ ಎರಡನೇ ಲೆಫ್ಟಿನೆಂಟ್ ಮೊದಲನೇ ಲೆಫ್ಟಿನೆಂಟ್ ಕ್ಯಾಪ್ಟನ್‌ ಮೇಜರ್ ಲೆಫ್ಟಿನೆಂಟ್ ಕರ್ನಲ್ ಕರ್ನಲ್ ಬ್ರಿಗೇಡಿಯರ್ ಜನರಲ್ ಮೇಜರ್ ಜನರಲ್ ಲೆಫ್ಟಿನೆಂಟ್ ಜನರಲ್ ಜನರಲ್
ಸಂಕ್ಷೇಪಣ 2LT 1LT CPT MAJ LTC COL BG MG LTG GEN
NATO ಕೋಡ್ OF-1 OF-2 OF-3 OF-4 OF-5 OF-6 OF-7 OF-8 OF-9
colspan="12"

ವಾರಂಟ್ ಅಧಿಕಾರಿಗಳು  :[೩೨]

Warrant Officers are single track, specialty officers with subject matter expertise in a particular area. They are initially appointed as warrant officers (in the rank of WO1) by the Secretary of the Army, but receive their commission upon promotion to Chief Warrant Officer Two (CW2).

Technically, warrant officers are to be addressed as "Mr. (last name)" or "Ms. (last name)." However, many personnel do not use those terms, but instead say "Sir", "Ma'am", or most commonly, "Chief".

W-1 W-2 W-3 W-4 W-5
ಲಾಂಛನಗಳು
ಶೀರ್ಷಿಕೆ ವಾರಂಟ್ ಅಧಿಕಾರಿ 1 ಮುಖ್ಯ ವಾರಂಟ್ ಅಧಿಕಾರಿ 2 ಮುಖ್ಯ ವಾರಂಟ್ ಅಧಿಕಾರಿ 3 ಮುಖ್ಯ ವಾರಂಟ್ ಅಧಿಕಾರಿ 4 ಮುಖ್ಯ ವಾರಂಟ್ ಅಧಿಕಾರಿ 5
ಸಂಕ್ಷೇಪಣ WO1 CW2 CW3 CW4 CW5
NATO ಕೋಡ್ WO-1 WO-2 WO-3 WO-4 WO-5

ಸೈನಿಕ ಸೇವೆಯ ಸಿಬ್ಬಂದಿಗಳು  :[೩೨][೩೩]

Sergeants are referred to as NCOs, short for non-commissioned officers. Corporals are also non-commisioned officers, and serve as the base of the non-commissioned Officer (NCO) ranks. Corporals are also called "hard stripes", in recognition of their leadership position. This distinguishes them from specialists who might have the same pay grade, but not the leadership responsibilities.

Address privates (E1 and E2) and privates first class (E3) as "Private (last name)." Address specialists as "Specialist (last name)." Address sergeants, staff sergeants, and sergeants first class as "Sergeant (last name)." Address higher ranking sergeants by their full ranks in conjunction with their names.

E-1 E-2 E-3 E-4 E-5 E-6 E-7 E-8 E-9
ಲಾಂಛನಗಳು ಲಾಂಛನಗಳಿಲ್ಲ
ಶೀರ್ಷಿಕೆ ಖಾಸಗಿ ಖಾಸಗಿ ಖಾಸಗಿ
ಮೊದಲ ದರ್ಜೆ
ತಜ್ಞರು ಸಾರ್ಜಂಟ್ ಕೆಳಗಿನ ಶ್ರೇಣಿಯ ಸೈನ್ಯಾಧಿಕಾರಿ (ಕಾರ್ಪೊರಲ್) ಸಾರ್ಜಂಟ್ ಸಿಬ್ಬಂದಿ
ಸಾರ್ಜಂಟ್
ಸಾರ್ಜಂಟ್
ಮೊದಲ ದರ್ಜೆ
ಮಾಸ್ಟರ್
ಸಾರ್ಜಂಟ್
ಮೊದಲ
ಸಾರ್ಜಂಟ್
ಸಾರ್ಜಂಟ್ ಮೇಜರ್
ಮೇಜರ್
ಕಮಾಂಡ್
ಸಾರ್ಜಂಟ್ ಮೇಜರ್
ಸೈನ್ಯದ
ಸಾರ್ಜಂಟ್ ಮೇಜರ್
ಸಂಕ್ಷೇಪಣ PVT ¹ PV2 ¹ PFC SPC ² CPL SGT SSG SFC MSG 1SG SGM CSM SMA
NATO ಕೋಡ್ OR-1 OR-2 OR-3 OR-4 OR-4 OR-5 OR-6 OR-7 OR-8 OR-8 OR-9 OR-9 OR-9
¹ PVT ಯನ್ನು ವೇತನ ಶ್ರೇಣಿಯನ್ನು ಭಿನ್ನವಾಗಿ ತೋರಿಸುವ ಅಗತ್ಯವಿಲ್ಲದಿದ್ದಾಗ ಎರಡೂ ಖಾಸಗಿ ಶ್ರೇಣಿಗಳಿಗೆ ಬಳಸಲಾಗುತ್ತದೆ
² SP4 ಯನ್ನು ಕೆಲವು ಬಾರಿ SPC ತಜ್ಞರಿಗೆ ಪ್ರತಿಯಾಗಿ ಬಳಸಲಾಗುತ್ತದೆ. ಅಧಿಕ ವೇತನ ಶ್ರೇಣಿಯ ಹೆಚ್ಚುವರಿ ತಜ್ಞರ ರ್ಯಾಂಕ್‌ಗಳು ಇದ್ದಾಗ ಇದನ್ನು ಮುಂದಕ್ಕೆ ಹಾಕಲಾಗುತ್ತದೆ.

ತರಬೇತಿ[ಬದಲಾಯಿಸಿ]

ಸಾಮಾನ್ಯವಾಗಿ ಸಂಯುಕ್ತ ಸಂಸ್ಥಾನದ ಸೈನ್ಯದಲ್ಲಿ ತರಬೇತಿಯನ್ನು ಎರಡು ವರ್ಗಗಳಲ್ಲಿ ವಿಭಜಿಸಲಾಗಿದೆ - ವ್ಯಕ್ತಿಗತ ಮತ್ತು ಸಾಮೂಹಿಕ.

ಮೂಲಭೂತ ತರಬೇತಿ ಯು ಹೆಚ್ಚಿನ ನೇಮಕಾತಿಗಳಿಗೆ ೧೦ ವಾರಗಳಾಗಿರುತ್ತವೆ, ಜೊತೆಗೆ AIT (ಅಡ್ವಾನ್ಸಡ್ ವ್ಯಕ್ತಿಗತ ತರಬೇತಿ) ಇರುತ್ತದೆ. ಅದರಲ್ಲಿ ಅವರರು ತಮ್ಮ MOS (ಸೇನಾ ವೃತ್ತಿ ತಜ್ಞರು)ಗಳಿಂದ MOSಗಳ ಪ್ರಕಾರ ಬದಲಾಗುವ AIT ಸ್ಕೂಲ್‌ಗೆ ಸಮನಾದ ತರಬೇತಿಯನ್ನು ಪಡೆಯುತ್ತಾರೆ. ಕೆಲವು ವ್ಯಕ್ತಿಗತ MOSಗಳು ೧೪ರಿಂದ ೨೦ ವಾರದವರೆಗೆ ಒಂದು ಸ್ಟೇಶನ್ ಘಟಕ ತರಬೇತಿ, (OSUT) ಪಡೆಯುತ್ತಾರೆ. ಇದನ್ನು ಮೂಲಭೂತ(ಬೇಸಿಕ್) ಮತ್ತು AIT ಎಂದು ಪಪರಿಗಣಿಸಲಾಗುತ್ತದೆ. ಬೆಂಬಲ ಮತ್ತು ಬೇರೆ ಮೋಸ್ ಹೋಪ್‌ಫುಲ್‌ಗಳು ೯ರಿಂದ ೧೧ ವಾರಗಳ ಮೂಲಭೂತ(ಬೇಸಿಕ್)ಯುದ್ಧ ತರಬೇತಿಯನ್ನು ಪಡೆಯುತ್ತಾರೆ. ಇದಾದನಂತರ ಅವರು ಅಡ್ವಾನ್ಸಡ್ ವ್ಯಕ್ತಿಗತ ತರಬೇತಿಯನ್ನು ಪಡೆಯುತ್ತಾರೆ. ಇದನ್ನು ಅವರು ತಮ್ಮ ಪ್ರಾಥಮಿಕ (MOS)ದಲ್ಲಿ ದೇಶಾದ್ಯಂತ ಇರುವ ಹಲವಾರು MOS ತರಬೇತಿ ಸೌಲಭ್ಯಗಳಲ್ಲಿ ಯಾವುದೇ ಕಡೆ ಪಡೆಯಬಹುದು. AIT ಯಲ್ಲಿ ತರಬೇತಿಯ ಕಾಲಾವಧಿಯು MOSನ ಸೈನಿಕರನ್ನು ಅವಲಂಬಿಸಿರುತ್ತದೆ. (ಉದಾ: ೨೫B- IT ತಜ್ಞತೆ MOS ೨೪ ವಾರಗಳವರೆಗೆ ಇರುತ್ತದೆ, , ೧೧B- ಕಾಲಾಳುಪಡೆ ೧೫–೧೭ ವಾರಗಳು)ಸೈನ್ಯದ ಅಗತ್ಯಗಳನ್ನು ಅವಲಂಬಿಸಿ, BCTಯನ್ನು ಹಲವಾರು ಸ್ಥಳಗಳಲ್ಲಿ ನಡೆಸಲಾಗುತ್ತದೆ. ಆದರೆ ಎರಡು ದೀರ್ಘಾವಧಿಯಿಂದ ನಡೆಯುತ್ತಿರುವ ಆರ್ಮರ್ ಸ್ಕೂಲ್‌ಗಳೆಂದರೆ ಫೋರ್ಟ್‌ ನಾಕ್ಸ್, ಕೆಂಟುಕಿ ಮತ್ತು ಜಾರ್ಜಿಯಾದ ಫೋರ್ಟ್‌ ಬೆನ್ನಿಂಗ್ನಲ್ಲಿರುವ ಕಾಲಾಳುಪಡೆ ಸ್ಕೂಲ್. ಅಧಿಕಾರಿಗಳಿಗೆ ಈ ತರಬೇತಿಯು ಪೂರ್ವ-ನಿಯೋಜನೆ ತರಬೇತಿಯನ್ನು ಒಳಗೊಂಡಿದ್ದು, ಇದು USMA , ROTCನಲ್ಲಿ ಅಥವಾ OCSನಲ್ಲಿ ಇರುತ್ತದೆ. ನಿಯೋಜನೆಯಾದ ನಂತರ, ಅಧಿಕಾರಿಗಳು ಶಾಖೆಗೆ ನಿರ್ದಿಷ್ಟವಾದ ತರಬೇತಿಯನ್ನು ಬೇಸಿಕ್ ಆಫೀಸರ್ಸ್ ಲೀಡರ್ಸ್ ಕೋರ್ಸ್‌ನಲ್ಲಿ ತೆಗೆದುಕೊಳ್ಳುತ್ತಾರೆ (ಮೊದಲು ಇದನ್ನು ಆಫೀಸರ್ ಬೇಸಿಕ್ ಕೋರ್ಸ್‌ ಎಂದು ಕರೆಯಲಾಗುತ್ತಿತ್ತು). ಇದರ ಸಮಯ ಮತ್ತು ಸ್ಥಳವು ಅವರು ಭವಿಷ್ಯದಲ್ಲಿ ಹೋಗಲಿರುವ ಕೆಲಸಕ್ಕೆ ಅನುಗುಣವಾಗಿ ಬದಲಾಗುತ್ತದೆ.

ಸಾಮೂಹಿಕ ತರಬೇತಿಯನ್ನು ಘಟಕಗಳಿಗೆ ವಹಿಸಲಾದ ನೆಲೆಯಲ್ಲಿ ನೀಡಲಾಗುತ್ತದೆ. ಆದರೆ ಹೆಚ್ಚು ತೀವ್ರವಾದ ಸಾಮೂಹಿಕ ತರಬೇತಿಯನ್ನು ಮೂರು ಯುದ್ಧ ತರಬೇತಿ ಕೇಂದ್ರಗಳಲ್ಲಿ (CTC) ; ಕ್ಯಾಲಿಫೋರ್ನಿಯಾದ ಫೋರ್ಟ್‌ ಇರ್ವಿನ್ ನಲ್ಲಿರುವ ರಾಷ್ಟ್ರೀಯ ತರಬೇತಿ ಕೇಂದ್ರ (NTC) , ಜಾಯಿಂಟ್ ರೆಡಿನೆಸ್ ತರಬೇತಿ ಕೇಂದ್ರ (JRTC) ಲೂಸಿಯಾನದ ಫೋರ್ಟ್‌ ಪೋಕ್ , ಮತ್ತು ಜಂಟಿ ಬಹುರಾಷ್ಟ್ರೀಯ ತರಬೇತಿ ಕೇಂದ್ರ (JMRC) ಜರ್ಮನಿಯ ಹೊಹೆನ್‌ಫೀಲ್ಸ್‌‌ನಲ್ಲಿರುವ ಹೊಹೆನ್‌ಫೀಲ್ಸ್ ತರಬೇತಿ ಪ್ರದೇಶ Archived 26 March 2018[Date mismatch] ವೇಬ್ಯಾಕ್ ಮೆಷಿನ್ ನಲ್ಲಿ..

ಸಾಧನ ಸಾಮಗ್ರಿಗಳು[ಬದಲಾಯಿಸಿ]

ಆಯುಧಗಳು/ಶಸ್ತ್ರಗಳು[ಬದಲಾಯಿಸಿ]

ಒಂದು M16, ಒಂದು AR-10 ಮತ್ತು ಒಮದು ಸೆಮಿ-ಆಟೋಮ್ಯಾಟಿಕ್ AR-15 "ಸ್ಪೋರ್ಟರ್", ಇನ್ನಿತರ ವಿಯೆಟ್ನಾಂ ಯುದ್ಧ ಕಾಲದ ರೈಫಲ್‌ಗಳೊಂದಿಗೆ.

ಸೈನ್ಯವು ಅಲ್ಪವ್ಯಾಪ್ತಿಯಲ್ಲಿ ಹಗುರು ಫೈರ್‌ಪವರ್ ಒದಗಿಸಲು ವಿವಿಧ ರೀತಿಯ ವ್ಯಕ್ತಿಗತ ಶಸ್ತ್ರಗಳನ್ನು ಬಳಸುತ್ತದೆ. ಸೈನ್ಯವು ಬಳಸುವ ಅತ್ಯಂತ ಸಾಮಾನ್ಯ ಶಸ್ತ್ರಗಳು ಎಂದರೆ M೧೬ ಸೀರೀಸ್‌ನ ಅಸಾಲ್ಟ್ ರೈಫಲ್ಸ್ [೩೪] ಮತ್ತು ಅದರ ಕಾಂಪಾಕ್ಟ್‌ ವೇರಿಯಂಟ್ ಆದ M೪ ಕಾರ್ಬೈನ್ [೩೫]. ಇದನ್ನು ಈಗ ಕೆಲವು ಘಟಕಗಳಲ್ಲಿ ನಿಧಾನವಾಗಿ M೧೬ ಸರಣಿಯ ರೈಫಲ್‌‌ಗಳಿಂದ ಬದಲಿಸಲಾಗುತ್ತಿದೆ ಮತ್ತು ಪ್ರಾಥಮಿಕವಾಗಿ ಇದನ್ನು ಕಾಲಾಳುಪಡೆ , ರೇಂಜರ್, ಮತ್ತು ವಿಶೇಷ ಕಾರ್ಯಾಚರಣೆ ಪಡೆಗಳು ಬಳಸುತ್ತಿವೆ..[೩೬] ಹೆಚ್ಚು ಕಾಂಪಾಕ್ಟ್ ಶಸ್ತ್ರದ ಅಗತ್ಯವಿರುವ ಕರ್ತವ್ಯದ ಸೈನಿಕರು, ಯುದ್ಧ ವಾಹನಗಳ ಚಾಲಕಸಿಬ್ಬಂದಿ ಸದಸ್ಯರು , ಸಿಬ್ಬಂದಿ ಅಧಿಕಾರಿಗಳು ಮತ್ತು ಸೇನಾ ಪೊಲೀಸರಿಗೆ ಕೂಡ M೪ಅನ್ನು ನೀಡಲಾಗುತ್ತದೆ. ಯುಎಸ್ ಸೈನದಲ್ಲಿ ಅತ್ಯಂತ ಸಾಮಾನ್ಯ ಸೈಡ್‌ಆರ್ಮ್‌ ಎಂದರೆ ೯ ಎಂಎಂ M೯ ಪಿಸ್ತೂಲ್[೩೭], ಇದನ್ನು ಬಹುತೇಕ ಯುದ್ಧ ಮತ್ತು ಬೆಂಬಲ ಘಟಕಗಳಿಗೆ ನೀಡಲಾಗಿದೆ.

ಅನೇಕ ಯುದ್ಧ ಘಟಕಗಳ ಶಸ್ತ್ರಾಗಾರಗಳಲ್ಲಿ ವಿವಿಧ ರೀತಿಯ ವಿಶೇಷಬಗೆಯ ಶಸ್ತ್ರಗಳನ್ನು ಇಟ್ಟಿರಲಾಗುತ್ತದೆ. ಇವುಗಳಲ್ಲಿ M೨೪೯ SAW (ಸ್ಕ್ವಾಡ್‌ ಅಟೋಮ್ಯಾಟಿಕ್ ವೆಪನ್), ಕೂಡ ಇದ್ದು, ಇದು ಫೈರ್‌-ತಂಡದ ಹಂತದಲ್ಲಿ ದಮನಕಾರಿ ಫೈರ್‌ ಒದಗಿಸುತ್ತದೆ[೩೮]. M೧೦೧೪ ಜಂಟಿ ಸೇವೆ ಯುದ್ಧ ಶಾಟ್‌ಗನ್ ಅಥವಾ ಮಾಸ್‌ಬರ್ಗ್‌ ಶಾಟ್‌ಗನ್ ೫೯೦ ಶಾಟ್‌ಗನ್ ಅನ್ನು ಡೋರ್‌ ಬ್ರೀಚಿಂಗ್‌ ಗೆ ಮತ್ತು ಕ್ಲೋಸ್‌-ಕ್ವಾರ್ಟರ್ಸ್ ಯುದ್ಧದಲ್ಲಿ ಬಳಸುತ್ತಾರೆ, M೧೪EBR ಅನ್ನು ದೀರ್ಘ-ವ್ಯಾಪ್ತಿಯ ಮಾಕ್ಸ್‌ಮನ್‌ಗಳು, ಮತ್ತುM೧೦೭ ದೀರ್ಘ-ವ್ಯಾಪ್ತಿಯ ಸ್ನೈಪರ್ ರೈಫಲ್ , M೨೪ ಸ್ನೈಪರ್ ವೆಪನ್ ಸಿಸ್ಟಮ್ , ಅಥವಾ M೧೧೦ ಸೆಮಿ-ಆಟೋಮ್ಯಾಟಿಕ್ ಸ್ನೈಪರ್ ರೈಪಲ್ ಗಳನ್ನು ಸ್ನೈಪರ್‌ಗಳು ಬಳಸುತ್ತಾರೆ. M೬೭ ಫ್ರಾಗ್ಮಂಟೇಶನ್ ಗ್ರನೇಡ್‌ ಮತ್ತು M೧೮ ಸ್ಮೋಕ್ ಗ್ರನೇಡ್‌ ಗಳಂತಹ ಹ್ಯಾಂಡ್ ಗ್ರನೇಡ್‌ ಗಳನ್ನು ಕೂಡ ಯುದ್ಧ ಪಡೆಗಳು ಬಳಸುತ್ತವೆ.

ಸೈನ್ಯವು ವ್ಯಕ್ತಿಗತ ಶಸ್ತ್ರಗಳ ವ್ಯಾಪ್ತಿಯನ್ನು ಮೀರಿದ ಹೆವಿ ಫೈರ್‌ಪವರ್ ಒದಗಿಸಲು ವಿವಿಧ ಕ್ರ್ಯೂ-ಸರ್ವಡ್ ಶಸ್ತ್ರಗಳನ್ನು ಬಳಸುತ್ತದೆ.

M೨೪೯ ಸೈನ್ಯದ ಸ್ಟ್ಯಾಂಡರ್ಡ್‌ ಹಗುರು ಮಶಿನ್‌ಗನ್ ಆಗಿದೆ. M೨೪೦ ಸೈನ್ಯದ ಸ್ಟ್ಯಾಂಡರ್ಡ್‌ ಮಧ್ಯಮವೇಗದ ಮಶಿನ್‌ಗನ್ ಆಗಿದೆ.[೩೯] .೫೦ Cal.BMG.M೨ ಹೆವಿ ಮಶಿನ್ ಗನ್ ಗಳನ್ನು ಆಂಟಿ-ಮಟಿರಿಯಲ್ ಮತ್ತು ಆಂಟಿ-ಪರ್ಸೊನೆಲ್ ಮಶಿನ್ ಗನ್ಆಗಿ ಬಳಸಲಾಗುತ್ತದೆ. M೨ ಕೂಡ ಬಹಳಷ್ಟು ಸ್ಟ್ರೈಕರ್ ಮಾರ್ಪಾಡುಗಳಲ್ಲಿ ಪ್ರಾಥಮಿಕ ಶಸ್ತ್ರವಾಗಿದೆ ಮತ್ತು M೧ ಅಬ್ರಾಮ್ಸ್‌ಗಳ ಸೆಕೆಂಡರಿ ಶಸ್ತ್ರ ವ್ಯವಸ್ಥೆಯಾಗಿದೆ. ೪೦ ಎಂಎಂ ಎಂಕೆ ೧೯ ಗ್ರನೇಡ್ ಮಶಿನ್ ಗನ್ ಗಳನ್ನು ಮುಖ್ಯವಾಗಿ ಮೋಟರೈಸ್ಡ್ ಘಟಕಗಳಲ್ಲಿ ಬಳಸಲಾಗುತ್ತದೆ.[೪೦] ಅದನ್ನು ಸಾಮಾನ್ಯವಾಗಿ M೨ಗೆ ಪೂರಕ ರೀತಿಯಲ್ಲಿ ಬಳಸಲಾಗುತ್ತದೆ.

ಸೈನ್ಯವು ಹೆವಿಯರ್ ಆರ್ಟಿಲರಿಗಳು ಲಭ್ಯವಿಲ್ಲದಿದ್ದಾಗ ಅಥವಾ ಸಮರ್ಪಕವಾಗಿಲ್ಲದಿದ್ದಾಗ ಮೂರು ಬಗೆಯ ಮಾರ್ಟರ್‌ ಗಳನ್ನು ಪರೋಕ್ಷ ಫೈರ್ ಬೆಂಬಲಕ್ಕಾಗಿ ಬಳಸುತ್ತದೆ. ಇವುಗಳಲ್ಲಿ ಅತ್ಯಂತ ಚಿಕ್ಕದು ಎಂದರೆ ೬೦ ಎಂಎಂ M೨೨೪, ಸಾಮಾನ್ಯವಾಗಿ ಕಾಲಾಳುಪಡೆ ಕಂಪನಿ ಹಂತದಲ್ಲಿ ವಹಿಸಲಾಗುತ್ತದೆ.[೪೧] ಮುಂದಿನ ಉನ್ನತ ಅಧಿಕಾರವರ್ಗ, ಕಾಲಾಳುಪಡೆ ಬೆಟಾಲಿಯನ್‌ಗಳು ಪ್ರಾತಿನಿಧಿಕವಾಗಿ ೮೧ ಎಂಎಂ M೨೫೨ ಮಾರ್ಟರ್‌ಗಳ ಒಂದು ವಿಭಾಗದಿಂದ ಬೆಂಬಲ ಪಡೆಯುತ್ತಾರೆ.[೪೨] ಸೈನ್ಯದ ತಪಶೀಲುಪಟ್ಟಿಯಲ್ಲಿ ಅತಿದೊಡ್ಡ ಮಾರ್ಟರ್ ಎಂದರೆ ೧೨೦ mm M೧೨೦/M೧೨೧, ಇದನ್ನು ಸಾಮಾನ್ಯವಾಗಿ ಯಾಂತ್ರೀಕೃತ ಬೆಟಾಲಿಯನ್‌ಗಳು, ಸ್ಟ್ರೈಕರ್ ಘಟಕಗಳು, ಮತ್ತು ಕ್ಯಾವಲ್ರಿ ದಳಗಳು ಬಳಸುತ್ತವೆ. ಇವುಗಳ ದೊಡ್ಡ ಗಾತ್ರ ಮತ್ತು ತೂಕದಿಂದಾಗಿ ಇವುಗಳನ್ನು ಟ್ರ್ಯಾಕ್‌ಡ್ ವಾಹನ ಅಥವಾ ಟ್ರಕ್‌ ಹಿಂದೆ ಜೋಡಿಸಿ ರವಾನಿಸಲಾಗುತ್ತದೆ.[೪೩]

ಹಗುರು ಕಾಲಾಳುಪಡೆ ಘಟಕಗಳಿಗೆ ಫೈರ್‌ ಬೆಂಬಲವನ್ನು ಟೋಡ್‌ ಹೊವಿಟ್ಜರ್‌ಗಳಿಂದ ನೀಡಲಾಗುತ್ತದೆ. ಇವು ೧೦೫ ಎಂಎಂM೧೧೯A೧[೪೪] ಮತ್ತು ೧೫೫ ಎಂಎಂ M೭೭೭ ಅನ್ನೂ ಒಳಗೊಂಡಿರುತ್ತವೆ (ಇವು M೧೯೮)ಗೆ ಬದಲಿಯಾಗಿರುತ್ತವೆ.[೪೫]

ಸೈನ್ಯವು ಕಾಲಾಳುಪಡೆಗೆ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಆಂಟಿ-ಆರ್ಮರ್ ಸಾಮರ್ಥ್ಯವನ್ನು ನೀಡಲು ವಿವಿಧ ಬಗೆಯ ನೇರ-ಫೈರ್‌ರಾಕೆಟ್‌ಗಳನ್ನು ಮತ್ತು ಕ್ಷಿಪಣಿಗಳನ್ನು ಬಳಸುತ್ತದೆ. SMAW ಮತ್ತು AT೪ ಮಾರ್ಗದರ್ಶನರಹಿತ ರಾಕೆಟ್‌ಗಳು ಆರ್ಮರ್‌ಗಳನ್ನು ಮತ್ತು ನಿಗದಿತ ರಕ್ಷಣೆಗಳನ್ನು (ಉದಾ: ಬಂಕರ್‌ಗಳು) ೫೦೦ ಮೀಟರ್‌ ವ್ಯಾಪ್ತಿಯವರೆಗೆ ನಾಶ ಮಾಡುತ್ತವೆ. FGM-೧೪೮ ಜಾವೆಲಿನ್ ಮತ್ತು BGM-೭೧ TOW ಆಂಟಿ-ಟ್ಯಾಂಕ್ ಗೈಡೆಡ್‌ ಕ್ಷಿಪಣಿಗಳು. ಜಾವೆಲಿನ್ ಹೆವಿ ಮುಖಾಮುಖಿ ಆರ್ಮರ್ಅನ್ನು ತಪ್ಪಿಸಲು ಮೇಲಿನಿಂದ ಆಕ್ರಮಣ ಮಾಡುತ್ತದೆ ಜಾವೆಲಿನ್ ಮತ್ತು TOW ತುಂಬ ಭಾರದ ಕ್ಷಿಪಣಿಗಳಾಗಿದ್ದು, ೨,೦೦೦ ಮೀಟರ್‌ವರೆಗೆ ಪರಿಣಾಮಕಾರಿಯಾಗಿರುತ್ತವೆ, ಇವು ಕಾಲಾಳುಪಡೆಗೆ ಆರ್ಮರ್ ವಿರುದ್ಧ ಆಕ್ರಮಣಕಾರಿ ಸಾಮರ್ಥ್ಯವನ್ನು ನೀಡುತ್ತವೆ.

ವಾಹನಗಳು[ಬದಲಾಯಿಸಿ]

HMMWV

ಯು.ಎಸ್‌. ಸೈನ್ಯವು ತನ್ನ ಸೇನಾ ಆಯವ್ಯಯದ ಸಾಕಷ್ಟು ಪ್ರಮಾಣವನ್ನು ವಿವಿಧ ರೀತಿಯ ವಾಹನಗಳ ನಿರ್ವಹಣೆಗೆ ಖರ್ಚು ಮಾಡುತ್ತದೆ.

ಸೈನ್ಯದ ಅತ್ಯಂತ ಸಾಮಾನ್ಯ ವಾಹನ ಎಂದರೆ ಹೈ ಮೊಬಿಲಿಟಿ ಮಲ್ಟಿಪರ್ಪಸ್ ವೀಲ್ಡ್ ವೆಹಿಕಲ್ (HMMWV), ಇದು ಕಾರ್ಗೋ/ಟ್ರೂಪ್‌ಗಳನ್ನು ರವಾನಿಸಲು, ಶಸ್ತ್ರಾಸ್ತ್ರಗಳ ಪ್ಲಾಟ್‌ಫಾರ್ರ್ಮ್ ಆಗಿ ಮತ್ತು ಅಂಬ್ಯುಲೆನ್ಸ್ ಆಗಿ, ಹೀಗೆ ವಿವಿಧ ಪಾತ್ರಗಳನ್ನು ವಹಿಸುತ್ತದೆ.[೪೬] ಸೈನ್ಯವು ವಿವಿಧ ರೀತಿಯ ಯುದ್ಧ ಬೆಂಬಲ ವಾಹನಗಳನ್ನು ಬಳಸುತ್ತಿದ್ದು, ಅವುಗಳಲ್ಲಿ ಸಾಮಾನ್ಯ ರೀತಿಯದು ಎಂದರೆ HEMTT ವಾಹನಗಳ ಕುಟುಂಬಕ್ಕೆ ಸೇರಿದೆ. M೧A೨ ಅಬ್ರಾಮ್ಸ್ ಸೈನ್ಯದ ಪ್ರಮುಖ ಯುದ್ಧ ಟ್ಯಾಂಕ್ ಆಗಿದೆ.[೪೭] M೨A೩ ಬ್ರಾಡ್ಲಿ ಯು ಸ್ಟಾಂಡರ್ಡ್‌ ಕಾಲಾಳುಪಡೆ ಹೋರಾಟದ ವಾಹನ ವಾಗಿದೆ.[೪೮] ಬೇರೆ ವಾಹನಗಳು ಎಂದರೆM೩A೩ ಕ್ಯಾವಲ್ರಿ ಹೋರಾಟದ ವಾಹನ , ಸ್ಟ್ರೈಕರ್ ,[೪೯] ಮತ್ತು M೧೧೩ ಆರ್ಮರ್‌ಡ್ ಸಿಬ್ಭಂದಿ ವಾಹನ ,[೫೦] ಮತ್ತು ಬಹುರೀತಿಯಮೈನ್ ರೆಸಿಸ್ಟಂಟ್ ಅಂಬುಶ್ ಪ್ರೊಟೆಕ್ಟೆಡ್ (MRAP) ವಾಹನಗಳು.

ಯು.ಎಸ್‌. ಸೈನ್ಯದ ಪ್ರಧಾನ ಆರ್ಟಿಲರಿ ಶಸ್ತ್ರಗಳು ಎಂದರೆ M೧೦೯A೬ ಪಲಡಿನ್ ಸೆಲ್ಫ್-ಪ್ರೊಫೆಲ್ಡ್ ಹೊವಿಟ್ಜರ್ [೫೧] ಮತ್ತು M೨೭೦ ಮಲ್ಟಿಪಲ್ ಲಾಂಚ್ ರಾಕೆಟ್ ವ್ಯವಸ್ಥೆ (MLRS),[೫೨] ಈ ಎರಡನ್ನೂ ಟ್ರ್ಯಾಕ್ಡ್‌ ವೇದಿಕೆ ಮೇಲೆ ಇಟ್ಟಿರಲಾಗುತ್ತದೆ ಮತ್ತು ಇವನ್ನು ಮತ್ತು ಹೆವಿ ಯಾಂತ್ರೀಕೃತ ಘಟಕಗಳಿಗೆ ವಹಿಸಲಾಗುತ್ತದೆ.

ಯುಎಸ್ ಸೈನ್ಯವು ಕೆಲವು ನಿಗದಿತ-ವಿಂಗ್ ವಿಮಾನಗಳನ್ನು ಬಳಸುತ್ತಿದ್ದು, ಇವು ಮುಖ್ಯವಾಗಿ ಅನೇಕ ರೀತಿಯ ರೋಟರಿ- ವಿಂಗ್ ವಿಮಾನಗಳನ್ನು ಒಳಗೊಂಡಿರುತ್ತದೆ. ಅವು ಹೀಗಿವೆ AH-೬೪ ಅಪೇಕ್ ದಾಳಿ ಹೆಲಿಕಾಪ್ಟರ್ ,[೫೩] OH-೫೮D ಕಿಯೊವ ವಾರಿಯರ್ ಆರ್ಮ್‌ಡ್-ಸ್ಥಳಾನ್ವೇಷಣೆ/ಹಗುರು ದಾಳಿಯ ಹೆಲಿಕಾಪ್ಟರ್,[೫೪] UH-೬೦ ಬ್ಲ್ಯಾಕ್ ಹಾಕ್ ಯುಟಿಲಿಟಿ ಟ್ರಾನ್ಸ್‌ಪೋರ್ಟ್‌ ಹೆಲಿಕಾಪ್ಟರ್,[೫೫] ಮತ್ತು CH-೪೭ ಚಿನೂಕ್ ಹೆವಿ -ಲಿಫ್ಟ್ ಟ್ರಾನ್ಸ್‌ಪೋರ್ಟ್‌ ಹೆಲಿಕಾಪ್ಟರ್.[೫೬]

ಸಮವಸ್ತ್ರಗಳು[ಬದಲಾಯಿಸಿ]

ACU- ಧರಿಸಿರುವ ಇಬ್ಬರು ಸೈನಿಕರು, ಜೊತೆಗೆ ACU- ವಿನ್ಯಾಸದ ಪೆಟ್ರೊಲ್ ಕ್ಯಾಪ್ (ಎಡ)ಮತ್ತು ಬೂನೀ ಹ್ಯಾಟ್ (ಬಲ.

ಸೇನಾ ಯುದ್ಧ ಸಮವಸ್ತ್ರ (ACU)ವು ಡಿಜಿಟಲ್ ಛದ್ಮವೇಶದ ವಿನ್ಯಾಸಗಳನ್ನು ಹೊಂದಿದೆ ಮತ್ತು ಕಾಡು, ಮರುಭೂಮಿ ಹಾಗೂ ನಗರ ಪರಿಸರದಲ್ಲಿ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಆಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಸೈನಿಕರಿಗೆ ಸದ್ಯದಲ್ಲಿಯೇ ಹೆಚ್ಚು ಸೂಕ್ತ "ಮಲ್ಟಿಕಾಮ್ " ವಿನ್ಯಾಸಗಳಿರುವ ಅಗ್ನಿನಿರೋಧಕ ACUಗಳನ್ನು ನೀಡಲಾಗುವುದು.[೫೭]

ಸ್ಟ್ಯಾಂಡರ್ಡ್‌ ಗ್ಯಾರಿಸನ್ ಸೇವಾ ಸಮವಸ್ತ್ರವನ್ನು ಆರ್ಮಿ ಗ್ರೀನ್ಸ್ ಅಥವಾ ಕ್ಲಾಸ್-As ಎಂದೂ ಕರೆಯಲಾಗುತ್ತದೆ ಮತ್ತು ಎಲ್ಲ ಅಧಿಕಾರಿಗಳೂ ಧರಿಸುತ್ತಾರೆ ಮತ್ತು ಎನ್‌ಲಿಸ್ಟ್ ಆದ ಅಂದರೆ ಸೈನ್ಯಕ್ಕೆ ಸೇರಿಸಲಾದ ಸಿಬ್ಬಂದಿಗಳು ಧರಿಸುತ್ತಾರೆ. ಅದನ್ನು ೧೯೫೬ರಲ್ಲಿ ಆಲಿವ್ ಡ್ರಾಬ್(OD)ಸಮವಸ್ತ್ರದ ಬದಲಿಗೆ ಆರಂಭಿಸಿಲಾಯಿತು ಮತ್ತು ಕಾಕಿ (ಮತ್ತು ಟ್ಯಾನ್ ವರ್ಸೆಸ್ಟ್ ಅಥವಾ TW) ಸಮವಸ್ತ್ರಗಳನ್ನು ೧೯೫೦ರಿಂದ ೧೯೮೫ರ ನಡುವೆ ಧರಿಸಲಾಗುತ್ತಿತ್ತು. ಆರ್ಮಿ ಬ್ಲ್ಯೂ ಸಮವಸ್ತ್ರವು ೧೯ನೇ ಶತಮಾನದ ಮಧ್ಯಭಾಗದಿಂದ ಆರಂಭಗೊಂಡಿತು. ಈಗ ಅದು ಸೈನ್ಯದ ಫಾರ್ಮಲ್ ಡ್ರೆಸ್ ಸಮವಸ್ತ್ರವಾಗಿದೆ. ಆದರೆ ೨೦೧೪ರಲ್ಲಿ ಇದರ ಬದಲಿಗೆ ಆರ್ಮಿ ಗ್ರೀನ್ ಮತ್ತು ಆರ್ಮಿ ವೈಟ್ (ಆರ್ಮಿ ಗ್ರೀನ್ ಸಮವಸ್ತ್ರದ ಹಾಗೆಯೇ ಇರುತ್ತದೆ, ಆದರೆ ಉಷ್ಣವಲಯಕ್ಕೆ ಪೋಸ್ಟಿಂಗ್ ಆದಾಗ ಧರಿಸಲಾಗುವುದು) ಸಮವಸ್ತ್ರಗಳನ್ನು ಬಳಸಲಾಗುವುದು ಇವು ಹೊಸ ಸೈನ್ಯ ಸೇವಾ ಸಮವಸ್ತ್ರವಗಲಿವೆ. ಇವು ಗ್ಯಾರಿಸನ್ ಸಮವಸ್ತ್ರ (ಬಿಳಿಯ ಅಂಗಿ ಮತ್ತು ಟೈ ಜೊತೆ ಹಾಕಿಕೊಂಡಾಗ)ವಾಗಿ ಮತ್ತು ಒಂದು ಡ್ರೆಸ್ ಸಮವಸ್ತ್ರವಾಗಿ ((ಬಿಳಿಯ ಅಂಗಿ ಮತ್ತು ಪರೇಡ್‌ಗಾಗಿ ನೆಕ್‌ ಟೈ ಜೊತೆ ಅಥವಾ ಆರು ಗಂಟೆ ನಂತರ ಬೋ ಟೈ ಜೊತೆ ಅಥವಾ ಬ್ಯಾಕ್ ಟೈ ಕಾರ್ಯಕ್ರಮಗಳಿಗೆ ಹಾಕಿಕೊಂಡಾಗ), ಎರಡೂ ರೀತಿಯಲ್ಲಿ ಬಳಸಬಹುದಾಗಿದೆ. ಚಪ್ಪಟೆದುಂಡು ಟೋಪಿ ಅಥವಾ ಬೆರೆಟ್‌ ಅನ್ನು ಹೊಸ ACU ಗ್ಯಾರಿಸನ್ ಕರ್ತವ್ಯಕ್ಕೆ ಮತ್ತು ನಾನ್‌-ಸೆರಮೋನಿಯಲ್ ಕಾರ್ಯಕ್ರಮಗಳಿಗೆ ಆರ್ಮಿ ಸೇವಾ ಸಮವಸ್ತ್ರದೊಂದಿಗೆ ಧರಿಸುವುದನ್ನು ಮುಂದುವರೆಸಲಾಗುವುದು. ಆರ್ಮಿ ಬ್ಲ್ಯೂ ಸರ್ವಿಸ್ ಕ್ಯಾಪ್ ಅನ್ನು ಮೊದಲು ಎಲ್ಲ ಎನ್‌ಲಿಸ್ಟೆಡ್ ಸಿಬ್ಬಂದಿಗಳಿಗೂ ಧರಿಸಲು ಆಸ್ಪದ ನೀಡಲಾಗಿತ್ತು. ಈಗ CPL ಶ್ರೇಣಿಯ ಅಥವಾ ಅದಕ್ಕಿಂತ ಅಧಿಕ ಶ್ರೇಣಿಯ ಸೈನಿಕರಿಗೆ ಮಾತ್ರ ಕಮಾಂಡರ್ ಅವರ ವಿವೇಚನೆ ಮೇರೆಗೆ ಧರಿಸಲು ಆಸ್ಪದವಿದೆ.

ಹೆಚ್ಚಿನ ಘಟಕಗಳಲ್ಲಿ ವೈಯಕ್ತಿಕ ರಕ್ಷಾಕವಚ (ಆರ್ಮರ್)ವು ಸುಧಾರಿತ ಔಟರ್ ಟ್ಯಾಕ್ಟಿಕಲ್ ವೆಸ್ಟ್ ಮತ್ತು MICH TC-೨೦೦೦ ಯುದ್ಧ ಹೆಲ್ಮೆಟ್ ಆಗಿದೆ.

ಡೇರೆಗಳು (ಟೆಂಟ್‌ಗಳು)[ಬದಲಾಯಿಸಿ]

ಚಿತ್ರ:DRASH Maintenance Facility in Iraq.jpg
ಇರಾಕ್‌ನಲ್ಲಿ ಒಂದು DRASH ನಿರ್ವಹಣಾ ವ್ಯವಸ್ಥೆ.

ಸೈನ್ಯವು ನಿಯೋಜನೆಯ ಮೇಲೆ ಇದ್ದಾಗ ಅವರಿಗೆ ಅಗತ್ಯವಿರುವ ಅನೇಕ ಸೌಲಭ್ಯಗಳನ್ನು ಕಲ್ಪಿಸಲು ಅತ್ಯಧಿಕವಾಗಿ ಡೇರೆಗಳನ್ನು ಅವಲಂಬಿಸಿದೆ. ಯುಎಸ್ ರಕ್ಷಣಾ ಇಲಾಖೆಯು ಡೇರೆಗಳ ಗುಣಮಟ್ಟ ಮತ್ತು ಡೇರೆ ನಿರ್ದಿಷ್ಟತೆಗಳ ಕುರಿತು ಕಟ್ಟುನಿಟ್ಟಾದ ನಿಯಮಗಳನ್ನು ಹೊಂದಿದೆ. ಸೈನ್ಯದಲ್ಲಿ ಬಳಸುವ ಅತ್ಯಂತ ಸಾಮಾನ್ಯ ಡೇರೆ ಎಂದರೆ ತಾತ್ಕಾಲಿಕ ಬ್ಯಾರಕ್‌ಗಳು (ಮಲಗುವ ಕ್ವಾರ್ಟ್‌ರ್ಸ್), DFAC ಕಟ್ಟಡಗಳು (ಊಟಮಾಡುವ ವ್ಯವಸ್ಥೆಗಳು), ಮುಂದಿನ ಕಾರ್ಯಾಚರಣೆಯ ನೆಲೆಗಳು (FOBs), ಆಫ್ಟರ್ ಆಕ್ಞನ್ ರಿವ್ಯೂ (AAR), ಕುಶಲ ಕಾರ್ಯಾಚರಣೆಯ ಕೇಂದ್ರಗಳು (TOC), ನೈತಿಕತೆ, ಕಲ್ಯಾಣ ಮತ್ತು ಮನೋರಂಜನಾ (MWR) ಸೌಲಭ್ಯಗಳು ಮತ್ತು ಭದ್ರತಾ ಚೆಕ್‌ಪಾಯಿಂಟ್‌ಗಳು. ಜೊತೆಗೆ, ಹೆಚ್ಚಿನ ಈ ಡೇರೆಗಳನ್ನು ನಾಟಿಕ್ ಸೋಲ್ಜರ್ ಸಿಸ್ಟಮ್ಸ್ ಸೆಂಟರ್ ನ ಬೆಂಬಲದೊಂದಿಗೆ ಸಜ್ಜುಗೊಳಿಸಿ, ನಿರ್ವಹಣೆ ಮಾಡಲಾಗುವುದು. ಯುಎಸ್ DoDಯು ಪ್ರಸ್ತುತ ಕ್ಷೇತ್ರದಲ್ಲಿ ಬಳಸುತ್ತಿರುವ ಅತ್ಯಂತ ಪ್ರಚಲಿತ ಸೇನಾ ವಿನ್ಯಾಸವೆಂದರೆ TEMPER ಡೇರೆ. TEMPER ಇದು ಟೆಂಟ್ ಎಕ್ಸ್‌ಪಾಂಡೇಬಲ್ ಮಾಡ್ಯುಲರ್ ಪೆರ್ಸೊನೆಲ್ (Tent Expandable Modular PERsonnel)ನ ಸಂಕ್ಷಿಪ್ತರೂಪ.

ಯುಎಸ್ ಸೈನ್ಯವು ಹೆಚ್ಚು ಆಧುನಿಕ ಡೇರೆ, ಡಿಪ್ಲಾಯಬಲ್ ರ್ಯಾಪಿಡ್ ಅಸೆಂಬ್ಲಿ ಶಲ್ಟರ್ ಅಥವಾ DRASH ಎಂದು ಕರೆಯಲಾಗುವ ಬೇಗನೆ ಜೋಡಿಸಬಲ್ಲ ಡೇರೆಗಳನ್ನು ಬಳಸಲಾರಂಭಿಸಿದೆ. ೨೦೦೮ರಲ್ಲಿ, DRASH ಸೈನ್ಯದ ಸ್ಟ್ಯಾಂಡರ್ಡ್‌ ಇಂಟಗ್ರೇಟೆಡ್ ಕಮಾಂಡ್ ಪೋಸ್ಟ್ ಸಿಸ್ಟಮ್‌ನ ಒಂದು ಭಾಗವಾಯಿತು.[೫೮]

ಶಾಖೆ ಸ್ಥಾಪನೆ[ಬದಲಾಯಿಸಿ]

ಯುಎಸ್ ಸೈನ್ಯವನ್ನು ಅಧಿಕೃತವಾಗಿ ೧೭೭೫, ಜೂನ್‌ ೧೪ರಲ್ಲಿ ಸ್ಥಾಪಿಸಲಾಯಿತು. ಆಗ ಕಾಂಟಿನೆಂಟಲ್ ಕಾಂಗ್ರೆಸ್ ಸಂಯುಕ್ತ ಕಾಲನಿಗಳಲ್ಲಿ ಒಂದು ವರ್ಷ ಸೇವೆ ಸಲ್ಲಿಸಲಿಕ್ಕೆ ರೈಫಲ್‌ಮನ್‌‌ಗಳನ್ನು ಸೇರಿಸಿಕೊಳ್ಲುವುದನ್ನು ಅಧಿಕೃತಗೊಳಿಸಿತು.

ಮೂಲ ಶಾಖೆಗಳು[ಬದಲಾಯಿಸಿ]

  • ಕಾಲಾಳುಪಡೆ , ೧೪ ಜೂನ್, ೧೭೭೫

ರೈಫಲ್‌ಮನ್‌ಗಳ ಹತ್ತು ಕಂಪನಿಗಳನ್ನು ಕಾಂಟಿನೆಂಟಲ್ ಕಾಂಗ್ರೆಸ್ ಒಂದು ನಿರ್ಣಯದ ಮೂಲಕ ೧೪ ಜೂನ್ ೧೭೭೫ರಲ್ಲಿ ಅಧಿಕೃತಗೊಳಿಸಿತು. ಅತ್ಯಂತ ಹಳೆಯ ನಿಯಮಿತ ಸೈನ್ಯ ಕಾಲಾಳುಪಡೆ ರೆಜಿಮೆಂಟ್, ೩ನೇ ಕಾಲಾಳುಪಡೆ ರೆಜಿಮೆಂಟ್, ಅಮೆರಿಕಾದ ಮೊದಲ ರೆಜಿಮೆಂಟ್ ಆಗಿ ೩ ಜೂನ್ ೧೭೮೪ರಲ್ಲಿ ರಚನೆಯಾಯಿತು.

  • ಅಡ್ಜಟಂಟ್ ಜನರಲ್'ರ ಕಾರ್ಪ್ಸ್, ೧೬ ಜೂನ್ ೧೭೭೫

ಅಡ್ಜಟಂಟ್ ಜನರಲ್ ಅವರ ಹುದ್ದೆಯನ್ನು ೧೬ ಜೂನ್ ೧೭೭೫ರಲ್ಲಿ ಹುಟ್ಟುಹಾಕಲಾಯಿತು ಮತ್ತು ಆಗಿನಿಂದಲೂ ನಿರಂತರವಾಗಿ ಅದು ಕಾರ್ಯನಿರ್ವಹಣೆಯಲ್ಲಿದೆ. ಅಡ್ಜಟಂಟ್ ಜನರಲ್ ಅವರ ಇಲಾಖೆಯು ಆ ಹೆಸರಿನಿಂದ ೩ ಮಾರ್ಚ್‌ ೧೮೧೨ರ ಕಾಯಿದೆಯಿಂದ ಸ್ಥಾಪನೆಯಾಯಿತು ಮತ್ತು ೧೯೫೦ರಲ್ಲಿ ಅಡ್ಜಟಂಟ್ ಜನರಲ್'ರ ಕಾರ್ಪ್ಸ್ ಎಂದು ಮರುವಿನ್ಯಾಸ ಮಾಡಲಾಯಿತು.

  • ಇಂಜಿನಿಯರ್‌‌‌ಗಳ ಕಾರ್ಪ್ಸ್ ( ಕಾರ್ಪ್ಸ್ ಆಫ್ ಇಂಜಿನಿಯರ್ಸ್), ೧೬ ಜೂನ್ ೧೭೭೫

ಕಾಂಟಿನೆಂಟಲ್ ಕಾಂಗ್ರೆಸ್ ೧೬ ಜೂನ್ ೧೭೭೫ರಲ್ಲಿ ಒಬ್ಬರು" ಸೈನ್ಯದ ಮುಖ್ಯ ಇಂಜಿನಿಯರ್"ಗೆ ಅಧಿಕಾರ ನೀಡಿದೆ. ಸಂಯುಕ್ತ ಸಂಸ್ಥಾನದ ಇಂಜಿನಿಯರ್‌‌‌ಗಳ ಕಾರ್ಪ್ಸ್ ಅನ್ನು ಕಾಂಗ್ರೆಸ್ ೧೧ ಮಾರ್ಚ್‌ ೧೭೮೯ರಲ್ಲಿ ಅಧಿಕೃತಗೊಳಿಸಿದೆ. ಇಂದು ಕರೆಯಲಾಗುವ ೧೬ ಮಾರ್ಚ್‌ ೧೮೦೨ರಂದು ಅಸ್ತಿತ್ವಕ್ಕೆ ಬಂದಿದೆ. ಆಗ ಅದ್ಯಕ್ಷರಿಗೆ, " ಇಂಜಿನಿಯರ್‌ಗಳ ಕಾರ್ಪ್ಸ್ ಅನ್ನು ಸಂಘಟಿಸಲು ಮತ್ತು ಸ್ಥಾಪಿಸಲು... ಆ ಕಾರ್ಪ್ಸ್ … ನ್ಯೂಯಾರ್ಕ್‌ನ ವೆಸ್ಟ್ ಪಾಯಿಂಟ್‌ನಲ್ಲಿ ನೆಲೆಗೊಳ್ಳುತ್ತಾರೆ ಮತ್ತು ಒಂದು ಸೇನಾ ಅಕಾಡೆಮಿಯನ್ನು ರಚಿಸುತ್ತಾರೆ" ಎಂದು ಅಧಿಕಾರ ನೀಡಲಾಯಿತು." ಭೌಗೋಳಿಕ ಇಂಜಿನಿಯರ್‌ಗಲಳ ಕಾರ್ಪ್ಸ್ ಅನ್ನು, ೪ ಜುಲೈ ೧೮೩೮ರಲ್ಲಿ ಅಧಿಕೃತಗೊಳಿಸಲಾಯಿತು. ನಂತರ ಇಂಜಿನಿಯರ್‌ಗಳ ಕಾರ್ಪ್ಸ್ ಜೊತೆ ಮಾರ್ಚ್‌ ೧೮೬೩ರಲ್ಲಿ ವಿಲೀನಗೊಳಿಸಲಾಯಿತು.

  • ಹಣಕಾಸು ಕಾರ್ಪ್ಸ್ (ಫೈನಾನ್ಸ್ ಕಾರ್ಪ್ಸ್ ), ೧೬ ಜೂನ್ ೧೭೭೫ .

ಜೂನ್ ೧೭೭೫ರಲ್ಲಿ ಸ್ಥಾಪಿತವಾಗಿದ್ದ ಮೊದಲಿನ ಹಳೆಯ ವೇತನ ಇಲಾಖೆಯ ನಂತರ ಹಣಕಾಸು ಕಾರ್ಪ್ಸ್ ಅನ್ನು ರಚಿಸಲಾಗಿದೆ. ಹಣಕಾಸು ಇಲಾಖೆಯನ್ನು ಜುಲೈ ೧೯೨೦ರ ಕಾಯಿದೆಯ ಪ್ರಕಾರ ಸ್ಥಾಪಿಸಲಾಗಿದೆ. ಅದು ೧೯೫೦ರಲ್ಲಿ ಹಣಕಾಸು ಕಾರ್ಪ್ಸ್ ಆಯಿತು.

  • ಕ್ವಾರ್ಟರ್‌ಮಾಸ್ಟರ್ ಕಾರ್ಪ್ಸ್, ೧೬ ಜೂನ್ ೧೭೭೫

ಕ್ವಾರ್ಟರ್‌ಮಾಸ್ಟರ್ ಕಾರ್ಪ್ಸ್, ಮೂಲತಃ ಕ್ವಾರ್ಟರ್‌ಮಾಸ್ಟರ್ ಇಲಾಖೆ ಎಂದು ರಚಿತಗೊಂಡಿದ್ದು, ಅದನ್ನು ೧೬ ಜೂನ್ ೧೭೭೫ರಲ್ಲಿ ಸ್ಥಾಪಿಸಲಾಗಿತ್ತು. ಅನೇಕ ರೀತಿಯ ಸೇರಿಸುವಿಕೆ, ತೆಗೆದುಹಾಕುವಿಕೆ ಮತ್ತು ಬದಲಾವಣೆಗಳು ನಡೆದು, ಅದರ ಮೂಲ ಪೂರೈಕೆ ಮತ್ತು ಸೇವಾ ಬೆಂಬಲ ಕಾರ್ಯಗಳು ಹಾಗೆಯೇ ಮುಂದುವರೆದಿವೆ.

  • ಫೀಲ್ಡ್ ಆರ್ಟಿಲರಿ, ೧೭ ನವೆಂಬರ್ ೧೭೭೫

ಕಾಂಟಿನೆಂಟಲ್ ಕಾಂಗ್ರೆಸ್ ಹೆನ್ರಿ ನಾಕ್ಸ್ ಅವರನ್ನು "ರೆಜಿಮೆಂಟ್ ಆರ್ಟಿಲರಿಯ ಕರ್ನಲ್ " ಎಂದು ೧೭ ನವೆಂಬರ್ ೧೭೭೫ರಲ್ಲಿ ಸರ್ವಾನುಮತದಿಂದ ಚುನಾಯಿಸಿತು. ರೆಜಿಮೆಂಟ್ ಜನವರಿ ೧, ೧೭೭೬ರಲ್ಲಿ ಸೇವೆಗೆ ಔಪಚಾರಿಕವಾಗಿ ಪ್ರವೇಶಿಸಿತು.

  • ಆರ್ಮರ್, ೧೨ ಜೂನ್ ೧೭೭೬

ಆರ್ಮರ್ ಶಾಖೆಯ ಹುಟ್ಟು ಕ್ಯಾವಲ್ರಿ (ಮೋಟಾರುವಾಹನಗಳ ಪಡೆ)ಯಲ್ಲಿದೆ. ಕಾಂಟಿನೆಂಟಲ್ ಕಾಂಗ್ರೆಸ್ ೧೨ ಡಿಸೆಂಬರ್ ೧೭೭೬ರ ನಿರ್ಣಯದ ಪ್ರಕಾರ ಒಂದು ಕ್ಯಾವಲ್ರಿ ರೆಜಿಮೆಂಟಿಗೆ ಅನುಮೋದನೆ ನೀಡಿತು. ನಿರ್ಣಯದ ನಂತರ ಹಲವಾರು ಬಾರಿ ಮೌಂಟೆಡ್ ಘಟಕಗಳನ್ನು ಹುಟ್ಟುಹಾಕಲಾಯಿತಾದರೂ, ಮೊದಲಿನಿಂದ ನಿರಂತರ ಸೇವೆಯಲ್ಲಿರುವುದು ಎಂದರೆ ೧೮೮೩ರಲ್ಲಿ ಸ್ಥಾಪಿಸಲಾದ ಸಂಯುಕ್ತ ಸಂಸ್ಥಾನದ ಡ್ರಾಗೂನ್ಸ್ ರೆಜಿಮೆಂಟ್. ಟ್ಯಾಂಕ್ ಸೇವೆಯನ್ನು ೫ ಮಾರ್ಚ್‌ ೧೯೧೮ರಂದು ರಚಿಸಲಾಯಿತು. ಆರ್ಮರ್ಡ್ ಪಡೆಯನ್ನು ೧೦ ಜುಲೈ ೧೯೪೦ರಂದು ರಚಿಸಲಾಗಿದೆ. ಆರ್ಮರ್ ೧೯೫೦ರಲ್ಲಿ ಸೈನ್ಯದ ಶಾಶ್ವತ ಶಾಖೆಯಾಯಿತು.

  • ಸೈನಿಕ ಸಾಮಗ್ರಿಗಳ ಶಸ್ತ್ರಗಳ ಖಾತೆ (ಆರ್ಡನನ್ಸ್ ಕಾರ್ಪ್ಸ್), ೧೪ ಮೇ ೧೮೧೨

ಆರ್ಡನನ್ಸ್ ಇಲಾಖೆಯನ್ನು ಕಾಂಗ್ರೆಸ್‌ನ ೧೪ ಮೇ ೧೮೧೨ರ ಕಾಯಿದೆ ಪ್ರಕಾರ ಸ್ಥಾಪಿಸಲಾಗಿದೆ. ಕ್ರಾಂತಿಕಾರಿ ಯುದ್ಧದ ಸಮಯದಲ್ಲಿ, ಸೈನಿಕ ಶಸ್ತ್ರ ಸಾಮಗ್ರಿಗಳು ಯುದ್ಧದ ಮಂಡಳಿ ಮತ್ತು ಆರ್ಡನನ್ಸ್ನ ಮೇಲ್ವಿಚಾರಣೆಯಲ್ಲಿತ್ತು. ಆರ್ಡನನ್ಸ್ ಕಾರ್ಪ್ಸನಲ್ಲಿ ವಸಾಹತುಶಾಹಿ ಸಮಯದಿಂದಲೂ ಕರ್ತವ್ಯದಲ್ಲಿ ಹಲವಾರು ಪಾಳಿಗಳು ಮತ್ತು ಜವಾಬ್ದಾರಿಗಳನ್ನು ಜಾರಿಗೊಳಿಸಲಾಗಿದೆ. ಈಗಿನ ಅದರ ಹುದ್ದೆಯನ್ನು ೧೯೫೦ರಲ್ಲಿ ಪಡೆದುಕೊಂಡಿದೆ. ಅರ್ಡನನ್ಸ್ ಸೈನಿಕರು ಮತ್ತು ಅಧಿಕಾರಿಗಳು ನಿರ್ವಹಣೆ ಮತ್ತು ಯುದ್ಧಸಾಮಗ್ರಿ ಬೆಂಬಲವನ್ನು ಒದಗಿಸುತ್ತಾರೆ.

  • ಸಿಗ್ನಲ್ ಕಾರ್ಪ್ಸ್, ೨೧ ಜೂನ್ ೧೮೬೦

ಸಿಗ್ನಲ್ ಕಾರ್ಪ್ಸ್ ಅನ್ನು ಕಾಂಗ್ರೆಸ್‌ನ ೩ ಮಾರ್ಚ್‌, ೧೮೬೩ರ ಕಾಯಿದೆ ಪ್ರಕಾರ ಸೈನ್ಯದ ಪ್ರತ್ಯೇಕ ಶಾಖೆಯಾಗಿ ಅನುಮೋದಿಸಲಾಯಿತು. ಸಿಗ್ನಲ್ ಕಾರ್ಪ್ಸ್ ೨೧ ಜೂನ್ ೧೮೬೦ರಿಂದಲೇ ಅಸ್ತಿತ್ವದಲ್ಲಿತ್ತು. ಆಗ ಕಾಂಗ್ರೆಸ್ ಸೈನ್ಯದಲ್ಲಿ ಒಬ್ಬರು ಸಿಗ್ನಲ್ ಅಧಿಕಾರಿಯ ನೇಮಕಾತಿಗೆ ಅನುಮೋದನೆ ನೀಡಿತ್ತು.ಯುದ್ಧ ಇಲಾಖೆ ಆದೇಶವೊಂದು ಕೆಳಗಿನಂತೆ ನಿರ್ದೇಶ ನೀಡಿತ್ತು : "ಸಿಗ್ನಲ್ ಇಲಾಖೆ-ಸಹಾಯಕ ಸರ್ಜನ್ ಆಲ್ಬರ್ಟ್‌ ಜೆ ಮಿಯರ್ ಅವರು ಮೂಲ ಖಾಲಿಹುದ್ದೆಯನ್ನು ತುಂಬಲು ಸಿಗ್ನಲ್ ಅಧಿಕಾರಿಯಾಗುತ್ತಾರೆ, ಅವರ ಶ್ರೇಣಿಯು ಮೇಜರ್‌ ಶ್ರೇಣಿಯಾಗಿರುತ್ತದೆ, ೨೭ ಜೂನ್ ೧೮೬೦]"

  • ರಾಸಾಯನಿಕಗಳ (ಕೆಮಿಕಲ್) ಕಾರ್ಪ್ಸ್, ೨೮ ಜೂನ್ ೧೯೧೮

ರಾಸಾಯನಿಕಗಳ ಯುದ್ಧರಂಗ ಸೇವೆಯನ್ನು ೨೮ ಜೂನ್ ೧೯೧೮ರಲ್ಲಿ ಆರಂಭಿಸಲಾಯಿತು. ಆಗಿನವರೆಗೆ ಐದು ಪ್ರತ್ಯೇಕ ಸರ್ಕಾರಿ ಏಜೆನ್ಸಿಗಳಲ್ಲಿ ಹಂಚಿಹೋಗಿದ್ದ ಚಟುವಟಿಕೆಗಳನ್ನು ಒಗ್ಗೂಡಿಸಿ, ಇದನ್ನು ಸ್ಥಾಪಿಸಲಾಯಿತು. ಅದನ್ನು ೧೯೨೦ರ ರಾಷ್ಟ್ರೀಯ ರಕ್ಷಣಾ ಕಾಯಿದೆ ಪ್ರಕಾರ ನಿಯಮಿತ ಸೈನ್ಯದ ಶಾಶ್ವತ ಶಾಖೆಯಾಗಿ ಮಾಡಲಾಯಿತು. ೧೯೪೫ರಲ್ಲಿ, ಅದನ್ನು ರಾಸಾಯನಿಕಗಳ ಕಾರ್ಪ್ಸ್ ಎಂದು ಮರುವಿನ್ಯಾಸಗೊಳಿಸಲಾಯಿತು.

  • ಸೇನಾ ಪೊಲೀಸ್ ಕಾರ್ಪ್ಸ್, ೨೬ ಸೆಪ್ಟೆಂಬರ್ ೧೯೪೧

ಒಂದು ಪ್ರೊವೊಸ್ಟ್ ಮಾರ್ಷಲ್ l ಜನರಲ್ 'ರ ಕಚೇರಿ ಮತ್ತು ಸೇನಾ ಪೊಲೀಸ್ ಕಾರ್ಪ್ಸ್ ಅನ್ನು ೧೯೪೧ರಲ್ಲಿ ಸ್ಥಾಪಿಸಲಾಯಿತು. ಅದಕ್ಕಿಂತ ಮೊದಲು, ನಾಗರಿಕ/ಅಂತರ್ಯುದ್ಧದ ಸಮಯ ಮತ್ತು ವಿಶ್ವ ಸಮರ I ಅನ್ನು ಹೊರತುಪಡಿಸಿ, ಪ್ರೊವೊಸ್ಟ್ ಮಾರ್ಷಲ್ ಜನರಲ್ ಎಂದು ನಿಯಮಿತ ನೇಮಕಾತಿ ಇರಲಿಲ್ಲ ಅಥವಾ ನಿಯಮಿತವಾಗಿ ರಚನೆಯಾದ ಸೇನಾ ಪೊಲೀಸ್ ಕಾರ್ಪ್ಸ್ ಇರಲಿಲ್ಲ, ಆದರೆ "ಪ್ರೊವೊಸ್ಟ್ ಮಾರ್ಷಲ್" ಜನವರಿ ೧೭೭೬ರ ಸುಮಾರಿಗೆ ಅಸ್ತಿತ್ವದಲ್ಲಿ ಇದ್ದುದ್ದನ್ನು ಕಾಣಬಹುದು, ಮತ್ತು "ಪ್ರೊವೊಸ್ಟ್ ಕಾರ್ಪ್ಸ್" ೧೭೭೮ರ ಸುಮಾರಿಗೇ ಇತ್ತು.

  • ಸಾರಿಗೆ ಕಾರ್ಪ್ಸ್, ೩೧ ಜುಲೈ ೧೯೪೨

ಸಾರಿಗೆ ಕಾರ್ಪ್ಸ್ ನ ಐತಿಹಾಸಿಕ ಹಿನ್ನೆಲೆ ವಿಶ್ವ ಸಮರ I ರೊಂದಿಗೆ ಆರಂಭವಾಗುತ್ತದೆ. ಅದಕ್ಕಿಂತ ಮೊದಲು, ಸಾರಿಗೆ ಕಾರ್ಯಾಚರಣೆಗಳು ಮುಖ್ಯವಾಗಿ ಕ್ವಾರ್ಟರ್‌ಮಾಸ್ಟರ್ ಜನರಲ್ ಅವರ ಜವಾಬ್ದಾರಿಯಾಗಿದ್ದಿತು. ಸಾರಿಗೆ ಕಾರ್ಪ್ಸ್, ಅದರ ಇಂದಿನ ಸ್ವರೂಪದಲ್ಲಿ ಸ್ಥಾಪನೆಯಾಗಿದ್ದು ೩೧ ಜುಲೈ ೧೯೪೨ರಂದು. ಸಾರಿಗೆ ಕಾರ್ಪ್ಸ್ ಕೇಂದ್ರ ಕಾರ್ಯಾಲಯವು ಫೋರ್ಟ್‌ ಯುಸ್ಟಿಸ್‌, ವಿಎ,ಯಲ್ಲಿ "ಸೂಪರ್‌ಹೆಡ್ ಆಫ್ ಲಾಜಿಸ್ಟಿಕ್ಸ್" ಅಡಿಯಲ್ಲಿ ಮತ್ತು ಬ್ರಿಗೇಡಿಯರ್ ಜನರಲ್ ಬ್ರೈನ್ ಆರ್ ಲೇಯರ್ ಅವರ ಕಮಾಂಡ್‌ನಲ್ಲಿದೆ.

  • ಸೇನಾ ಬೇಹುಗಾರಿಕೆ ಕಾರ್ಪ್ಸ್, ೧ ಜುಲೈ, ೧೯೬೨

ಬೇಹುಗಾರಿಕೆಯು ಯುದ್ಧದ ಹಾಗೂ ಶಾಂತಿಯ ಸಮಯದಲ್ಲಿ ಸೈನ್ಯದ ಕಾರ್ಯಾಚರಣೆಗಳ ಅತ್ಯಗತ್ಯ ಅಂಶವಾಗಿದೆ. ಮೊದಲು, ಸೇನಾ ಬೇಹುಗಾರಿಕೆ ಮತ್ತು ರಕ್ಷಣಾ ಮೀಸಲು ಸೈನ್ಯ ಶಾಖೆಗಳ ಸಿಬ್ಬಂದಿಗಳಿಂದ ಅಗತ್ಯಗಳನ್ನು ಪೂರೈಸಿಕೊಳ್ಳಲಾಗುತ್ತಿತ್ತು. ವಿವಿಧ ಶಾಖೆಗಳಲ್ಲಿ ಎರಡು ವರ್ಷ ಬಾದ್ಯತೆ ಇರುವ ಟೂರ್‌ ಆಫಿಸರ್‌ಗಳು, ಒಬ್ಬರು ಟೂರ್-ಲೆವಿ ಮತ್ತು ತಜ್ಞತೆ ಕಾರ್ಯಕ್ರಮದಲ್ಲಿರುವ ನಿಯಮಿತ ಸೇನಾ ಅಧಿಕಾರಿಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ರಾಷ್ಟ್ರೀಯ ಮತ್ತು ಕುಶಲ ಬೇಹುಗಾರಿಕೆಯ ಸೈನ್ಯದ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು, ಒಂದು ಬೇಹುಗಾರಿಕೆ ಮತ್ತು ರಕ್ಷಣಾ ಶಾಖೆಗಳನ್ನು ಸೈನ್ಯದಲ್ಲಿ ಸಾಮಾನ್ಯ ಆದೇಶ ಸಂಖ್ಯೆ ೩೮, ೩ ಜುಲೈ ೧೯೬೨ರ ಪ್ರಕಾರ ಜುಲೈ ೧೯೬೨ರಿಂದ ಜಾರಿಯಾಗುವಂತೆ ಸ್ಥಾಪಿಸಲಾಯಿತು. ಜುಲೈ ೧, ೧೯೬೭ರಲ್ಲಿ ಈ ಶಾಖೆಯನ್ನು ಸೇನಾ ಬೇಹುಗಾರಿಕೆ ಎಂದು ಪುನಾರೂಪಿಸಲಾಯಿತು.

  • ವಾಯು ರಕ್ಷಣಾ ಆರ್ಟಿಲರಿ, ೨೦ ಜೂನ್ ೧೯೬೮.

ಫೀಲ್ಡ್ ಆರ್ಟಿಲರಿಯಿಂದ ಪ್ರತ್ಯೇಕಿಸಿ ಮತ್ತು ಒಂದು ಮೂಲಭೂತ ಶಾಖೆಯ ಹಾಗೆ ಸಾಮಾನ್ಯ ಆದೇಶ ೨೫, ೧೪ ಜೂನ್ ೧೯೬೮ರ ಪ್ರಕಾರ ೨೦ ಜೂನ್ ೧೯೬೮ರಂದು ಸ್ಥಾಪಿಸಲಾಗಿದೆ.

  • ವಾಯುದಳ , ೧೨ ಏಪ್ರಿಲ್ ೧೯೮೩

ಯುಎಸ್ ವಾಯುಪಡೆಯನ್ನು ೧೯೪೭ರಲ್ಲಿ ಪ್ರತ್ಯೇಕ ಸೇವೆಯನ್ನಾಗಿ ಸ್ಥಾಪಿಸಿದ ನಂತರ, ಸೈನ್ಯ ಅಂದೆ ಭೂಸೈನ್ಯವು ಸ್ವಂತ ವಾಯುದಳ ಆಸ್ತಿಗಳನ್ನು (ಹಗುರು ವಿಮಾನಗಳು ಮತ್ತು ರೋಟರಿ ವಿಂಗ್ ವಿಮಾನಗಳನ್ನು) ಭೂ ಕಾರ್ಯಾಚರಣೆಗಳಿಗೆ ಬೆಂಬಲವಾಗಿ ಅಭಿವೃದ್ಧಿಪಡಿಸ ತೊಡಗಿತು. ಕೊರಿಯಾ ಯುದ್ಧವು ಈ ಚಾಲನೆಗೆ ಇನ್ನಷ್ಟು ಪ್ರಚೋದನೆ ನೀಡಿತು, ಮತ್ತು ವಿಯೆಟ್ನಾಂ ಯುದ್ಧದಲ್ಲಿ ಇದು ಫಲಸಾಧನೆ ಕಂಡಿತು. ಆಗ ಸೈನ್ಯ ವಾಯುದಳ ಘಟಕಗಳು ವಿವಿಧ ರೀತಿಯ ಮಿಶನ್‌ಗಳನ್ನು ಸ್ಥಳಾನ್ವೇಷಣೆ, ಸಾರಿಗೆ ಮತ್ತು ಫೈರ್ ಬೆಂಬಲವನ್ನೂ ಒಳಗೊಂಡಂತೆ ಹಲವು ರೀತಿಯ ಕಾರ್ಯಾಚರಣೆಗಳನ್ನು ನಡೆಸಿದವು. ವಿಯೆಟ್ನಾಂನಲ್ಲಿ ಯುದ್ಧದ ನಂತರ, ಟ್ಯಾಂಕ್‌ ವಿನಾಶಕಗಳ ಹಾಗೆ ಸಶಸ್ತ್ರ ಹೆಲಿಕಾಪ್ಟರ್‌ಗಳ ಪಾತ್ರಕ್ಕೆ ಹೆಚ್ಚು ಒತ್ತು ನೀಡಲಾಯಿತು. ಸೈನ್ಯ ನೀತಿ ಮತ್ತು ಕಾರ್ಯಾಚರಣೆಗಳಲ್ಲಿ ವಾಯುದಳದ ಹೆಚ್ಚುತ್ತಿರುವ ಮಹತ್ವವನ್ನು ಗುರುತಿಸಲು, ವಾಯುದಳವು ೧೨ ಏಪ್ರಿಲ್, ೧೯೮೩ರಲ್ಲಿ ಪ್ರತ್ಯೇಕ ಶಾಖೆಯಾಗಿ ಮಾಡಲಾಯಿತು, ಮತ್ತು ಸೈನ್ಯದ ಸಂಯೋಜಿತ ಶಸ್ತ್ರಾಸ್ತ್ರಗಳ ತಂಡದ ಪೂರ್ಣಪ್ರಮಾಣದ ಸದಸ್ಯವಾಗಿಸಲಾಯಿತು.

  • ವಿಶೇಷ ಪಡೆಗಳು, ೯ ಏಪ್ರಿಲ್ ೧೯೮೭

ಸೈನ್ಯದಲ್ಲಿ ಮೊದಲ ವಿಶೇಷ ಪಡೆಗಳ ಘಟಕವನ್ನು ೧೧ ಜೂನ್ ೧೯೫೨ರಲ್ಲಿ ಆರಂಭಿಸಲಾಯಿತು. ಆಗ ೧೦ನೇ ವಿಶೇಷ ಪಡೆಗಳ ಗುಂಪನ್ನು ದಕ್ಷಿಣ ಕರೋಲಿನಾ ದ ಫೋರ್ಟ್‌ ಬ್ರ್ಯಾಗ್ನಲ್ಲಿ ಕ್ರಿಯಾಶೀಲಗೊಳಿಸಲಾಯಿತು. ವಿಶೇಷ ಪಡೆಗಳ ಪ್ರಮುಖ ವಿಸ್ತರಣೆಯನ್ನು ೧೯೬೦ರಲ್ಲಿ ಕೈಗೊಳ್ಳಲಾಯಿತು. ಆಗ ನಿಯಮಿತ ಸೈನ್ಯ, ಮೀಸಲು ಸೈನ್ಯ, ಮತ್ತು ರಾಷ್ಟ್ರೀಯ ಗಾರ್ಡ್ ಸೈನ್ಯದಲ್ಲಿ ಒಟ್ಟು ಹದಿನೆಂಟು ಗುಪುಗಳನ್ನು ಸಂಘಟಿಸಲಾಯಿತು. ೧೯೮೦ರಲ್ಲಿ ವಿಶೇಷ ಕಾರ್ಯಾಚರಣೆಗಳ ಮೇಲೆ ಹೊಸದಾಗಿ ಒತ್ತು ನೀಡಿದ್ದರಿಂದ, ವಿಶೇಷ ಪಡೆಗಳ ಶಾಖೆಯನ್ನು ಸೈನ್ಯದ ಮೂಲ ಶಾಖೆಯಾಗಿ ಸಾಮಾನ್ಯ ಆದೇಶಗಳು ಸಂಖ್ಯೆ ೩೫, ೧೯ ಜೂನ್ ೧೯೮೭ರ ಪ್ರಕಾರ ೯ ಏಪ್ರಿಲ್ ೧೯೮೭ರಿಂದ ಜಾರಿಯಾಗುವಂತೆ ಮಾಡಲಾಯಿತು.

  • ನಾಗರಿಕ ವ್ಯವಹಾರಗಳ ಕಾರ್ಪ್ಸ್, ೧೭ ಆಗಸ್ಟ್ ೧೯೫೫ (ವಿಶೇಷ ಶಾಖೆ); ೧೬ ಅಕ್ಟೋಬರ್ ೨೦೦೬ (ಮೂಲ ಶಾಖೆ )

ಸೈನ್ಯ ಮೀಸಲು ಶಾಖೆಯಲ್ಲಿ ನಾಗರಿಕ ವ್ಯವಹಾರಗಳ /ಸೇನ ಸರ್ಕಾರಿ ಶಾಖೆಯನ್ನು ೧೭ ಆಗಸ್ಟ್ ೧೯೫೫ರಲ್ಲಿ ಸ್ಥಾಪಿಸಲಾಯಿತು. ನಾಗರಿಕ ವ್ಯವಹಾರಗಳ ಶಾಖೆಯನ್ನು ೨ ಅಕ್ಟೋಬರ್ ೧೯೫೫ರಲ್ಲಿ ಮರುವಿನ್ಯಾಸಗೊಳಿಸಲಾಯಿತು. ನಂತರ ಅದು ಕಮಾಂಡರ್‌ಗಳಿಗೆ ಮಾರ್ಗದರ್ಶನ ನೀಡುವ ತನ್ನ ಮಿಶನ್‌ ಅನ್ನು ವಿಶಾಲ ಶ್ರೇಣಿಯ ಚಟುವಟಿಕೆಗಳಲ್ಲಿ ಮುಂದುವರೆಸಿತು. ಇವು ಅತಿಥಿ-ಆತಿಥೇಯ ಸಂಬಂಧಗಳಿಂದ ಹಿಡಿದು ಆಕ್ರಮಿತ ಅಥವಾ ಬಿಡುಗಡೆಗೊಂಡ ಪ್ರದೇಶಗಳಲ್ಲಿ ಕಾರ್ಯಕಾರಿ, ಶಾಸನಾತ್ಮಕ, ಮತ್ತು ನ್ಯಾಯಾಂಗದ ಪ್ರಕ್ರಿಯೆಗಳ ವಿಚಾರಗಳವರೆಗೆ ಅನೇಕ ಚಟುವಟಿಕೆಗಳನ್ನು ಒಳಗೊಂಡಿತ್ತು. ೧೨ ಜನವರಿ ೨೦೦೭ರ ಸಾಮಾನ್ಯ ಆದೇಶ ೨೯ದ ಪ್ರಕಾರ ಇದನ್ನು ಮೂಲ ಶಾಖೆ ಮಾಡಲಾಯಿತು.

  • ಮಾನಸಿಕ ಕಾರ್ಯಾಚರಣೆಗಳು, ೧೬ ಅಕ್ಟೋಬರ್ ೨೦೦೬

ಇದೊಂದು ಮೂಲ ಶಾಖೆಯಾಗಿ ೧೨ ಜನವರಿ ೨೦೦೭ರ ಸಾಮಾನ್ಯ ಆದೇಶ ೩೦ರ ಪ್ರಕಾರ ಸ್ಥಾಪನೆಯಾಯಿತು. ಒಂದು TBD ದಿನಾಂಕದಲ್ಲಿ ಇದರ ಹೆಸರನ್ನು ಸೇನಾ ಮಾಹಿತಿ ಬೆಂಬಲ ಕಾರ್ಯಾಚರಣೆಗಳು ಎಂದು ಬದಲಿಸಲಾಗುವುದು.

  • ಲಾಜಿಸ್ಟಿಕ್ಸ್, ೧ ಜನವರಿ ೨೦೦೮

೨೭ ನವೆಂಬರ್ ೨೦೦೭ರ ಸಾಮಾನ್ಯ ಆದೇಶದ ೬ ಪ್ರಕಾರ ಸ್ಥಾಪನೆಯಾಯಿತು. ಇದು ಬಹುಮುಖಿ-ಕಾರ್ಯನಿರ್ವಹಣೆ ಲಾಜಿಸ್ಟಿಕ್ಸ್ ಅಧಿಕಾರಿಗಳನ್ನು ಕ್ಯಾಪ್ಟನ್ ಮತ್ತು ಮೇಲಿನ ಶ್ರೇಣಿಯಲ್ಲಿ ಒಳಗೊಂಡಿರುತ್ತದೆ. ಇದನ್ನು ಆರ್ಡನನ್ಸ್, ಕ್ವಾರ್ಟರ್‌ಮಾಸ್ಟರ್ ಮತ್ತು ಸಾರಿಗೆ ಕಾರ್ಪ್ಸ್ ನಿಂದ ರೂಪಿಸಲಾಗುತ್ತದೆ.

ವಿಶೇಷ ಶಾಖೆಗಳು[ಬದಲಾಯಿಸಿ]

  • ಸೈನ್ಯ ವೈದ್ಯಕೀಯ ಇಲಾಖೆ, ೨೭ ಜುಲೈ ೧೭೭೫

ವೈದ್ಯಕೀಯ ಇಲಾಖೆ ಮತ್ತು ವೈದ್ಯಕೀಯ ಕಾಪ್ರ್ಸ್‌ನ ಸ್ಥಾಪನೆಯು ೨೭ ಜುಲೈ ೧೭೭೫ರಲ್ಲಿ ಆಗಿದೆ. ಆಗ ಕಾಂಟಿನೆಂಟಲ್ ಕಾಂಗ್ರೆಸ್ ಸೇನಾ ಆಸ್ಪತ್ರೆಯನ್ನು "ಸಾಮಾನ್ಯ ನಿರ್ದೇಶಕರು (ಡೈರೆಕ್ಟರ್ ಜನರಲ್) ಮತ್ತು ಮುಖ್ಯ ವೈದ್ಯ"ರ ನೇತೃತ್ವದಲ್ಲಿ ಸ್ಥಾಪಿಸಿತ್ತು. ಕಾಂಗ್ರೆಸ್ ೧೮೧೮ರವರೆಗೆ ಸೈನ್ಯದ ವೈದ್ಯಕೀಯ ಸಂಘಟನೆಯೊಂದನ್ನು ಕೇವಲ ಯುದ್ಧ ಅಥವಾ ತುರ್ತುಸ್ಥಿತಿ ಸಮಯದಲ್ಲಿ ಮಾತ್ರವೇ ಒದಗಿಸಿತ್ತು. ೧೮೧೮ರಲ್ಲಿ ಒಂದು ಶಾಶ್ವತ ಮತ್ತು ನಿರಂತರ ವೈದ್ಯಕೀಯ ಇಲಾಖೆಯನ್ನು ಆರಂಭಿಸಲಾಯಿತು. ೧೯೫೦ರ ಸೇನಾ ಸಂಘಟನೆ ಕಾಯಿದೆಯು ವೈದ್ಯಕೀಯ ಇಲಾಖೆಯನ್ನು ಸೇನಾ ವೈದ್ಯಕೀಯ ಸೇವೆ ಎಂದು ಮರುನಾಮಕರಣ ಮಾಡಿತು. ಜೂನ್ ೧೯೬೮ರಲ್ಲಿ, ಸೇನಾ ವೈದ್ಯಕೀಯ ಸೇವೆಯನ್ನು ಸೇನಾ ವೈದ್ಯಕೀಯ ಇಲಾಖೆಯಾಗಿ ಮರುವಿನ್ಯಾಸಗೊಳಿಸಲಾಯಿತು. ವೈದ್ಯಕೀಯ ಇಲಾಖೆಯು ಕೆಳಗಿನ ಶಾಖೆಗಳನ್ನು ಹೊಂದಿದೆ:

  • ವೈದ್ಯಕೀಯ ಕಾರ್ಪ್ಸ್, ೨೭ ಜುಲೈ ೧೭೭೫
  • ಸೇನಾ ಕಾರ್ಪ್ಸ್, ೨ ಫೆಬ್ರವರಿ ೧೯೦೧
  • ದಂತವೈದ್ಯ ಕಾರ್ಪ್ಸ್, ೩ ಮಾರ್ಚ್‌ ೧೯೧೧
  • ಪಶುವಯದ್ಯಕೀಯ ಕಾರ್ಪ್ಸ್, ೩ ಜೂನ್ ೧೯೧೬
  • ವೈದ್ಯಕೀಯ ಸೇವ ಕಾರ್ಪ್ಸ್, ೩೦ ಜೂನ್ ೧೯೧೭
  • ಸೇನಾ ವೈದ್ಯಕೀಯ ತಜ್ಞತೆ ಕಾರ್ಪ್ಸ್, ೧೬ ಏಪ್ರಿಲ್ ೧೯೪೭
  • ಚ್ಯಾಪ್ಲಿನ್ ಕಾರ್ಪ್ಸ್, ೨೯ ಜುಲೈ ೧೭೭೫

ಚ್ಯಾಪ್ಲಿನ್ ಕಾರ್ಪ್ಸ್ ನ ಕಾನೂನಾತ್ಮಕ ಹುಟ್ಟು ಕಾಂಟಿನೆಂಟಲ್ ಕಾಂಗ್ರೆಸ್ , ೨೯ ಜುಲೈ ೧೭೭೫ರಂದು ತೆಗೆದುಕೊಂಡ ನಿರ್ಣಯದಲ್ಲಿದೆ. , ಅದು ಚ್ಯಾಪ್ಲಿನ್ ಗಳಿಗೆ ವೇತನದ ಸೌಲಭ್ಯ ಒದಗಿಸಿತು. ಚ್ಯಾಪ್ಲಿನ್‌ಗಳ ಮುಖ್ಯಸ್ಥರ ಕಚೇರಿಯನ್ನು ೧೯೨೦ರ ರಾಷ್ಟ್ರೀಯ ರಕ್ಷಣಾ ಕಾಯಿದೆಯಿಂದ ಹುಟ್ಟುಹಾಖಲಾಗಿದೆ.

  • ನ್ಯಾಯಾಧೀಶ ವಕೀಲ ಜನರಲ್'ರ ಕಾರ್ಪ್ಸ್, (ಜಜ್‌ ಅಡ್ವೊಕೇಟ್ ಜನರಲ್ಸ್ ಕಾರ್ಪ್ಸ್) ೨೯ ಜುಲೈ ೧೭೭೫

ಸೈನ್ಯದ ನ್ಯಾಯಾಧೀಶ ವಕೀಲ ಜನರಲ್'ರ ಕಾರ್ಪ್ಸ್ ಕಚೇರಿಯನ್ನು ೨೯ ಜುಲೈ ೧೭೭೫ರಲ್ಲಿ ಸ್ಥಾಪಿಸಲಾಯಿತು ಮತ್ತು ಅದು ಸಾಮಾನ್ಯವಾಗಿ ಅಮೆರಿಕಾದ ಸೇನಾ ನ್ಯಾಯಾಲಯ ವ್ಯವಸ್ಥೆಯ ಹುಟ್ಟು ಮತ್ತು ಬೆಳವಣಿಗೆಗೆ ಸಮಾಂತರವಾಗಿದೆ. ನ್ಯಾಯಾಧೀಶ ವಕೀಲ ಜನರಲ್'ರ ಇಲಾಖೆಯನ್ನು ಅದೇ ಹೆಸರಿನಿಂದ ೧೮೮೪ರಲ್ಲಿ ಸ್ಥಾಪಿಸಲಾಯಿತು. ಅದರ ಸದ್ಯದ ಕಾರ್ಪ್ಸ್ ಎಂಬ ಹುದ್ದೆಯು ೧೯೪೮ರಿಂದ ಜಾರಿಗೊಂಡಿದೆ.

ಇವನ್ನೂ ಗಮನಿಸಿ[ಬದಲಾಯಿಸಿ]

ಟೆಂಪ್ಲೇಟು:Portal box

  • ಅಮೆರಿಕಾದ ಸೈನ್ಯ ನೇಮಕಾತಿಗೆ(ವಿಡಿಯೋ ಗೇಮ್ ಗಳು)
  • ತುಲನಾತ್ಮಕ ಸೇನಾ ಶ್ರೇಣಿಗಳು/ರ್ಯಾಂಕ್‌ಗಳು
  • JROTC
  • ಸಂಯುಕ್ತ ಸಂಸ್ಥಾನಗಳ ಸೇನಾ ಇತಿಹಾಸ ಘಟನೆಗಳ ಪಟ್ಟಿ
  • ಸೇನಾ ಸಂಘಟನೆಗಳು
  • ROTC
  • ವಿಶೇಷ ಕಾರ್ಯಾಚರಣೆ ಪಡೆಗಳು
  • ಸಂಯುಕ್ತ ಸಂಸ್ಥಾನದ ಸೈನ್ಯದ ಪರಿವರ್ತನೆ
  • ಯು.ಎಸ್‌. ಸೈನ್ಯ ವಾಯು ರಕ್ಷಣೆ
  • ಯು.ಎಸ್‌. ಸೈನ್ಯ ಮೂಲ ತರಬೇತಿ
  • ಯು.ಎಸ್‌. ಸೈನ್ಯ ಶಾಖಾ ಲಾಂಛನಗಳು
  • ಯು.ಎಸ್‌. ಸೈನ್ಯ ಜಜ್‌ ಅಡ್ವೊಕೇಟ್ ಜನರಲ್'ಸ್ ಕಾರ್ಪ್ಸ್
  • ಯು.ಎಸ್‌. ಸೈನ್ಯ ಚ್ಯಾಪ್ಲಿನ್ ಕಾರ್ಪ್ಸ್
  • ಸೇನ ಇತಿಹಾಸದ ಸಂಯುಕ್ತ ಸಂಸ್ಥಾನದ ಸೈನ್ಯ ಕೇಂದ್ರ (ಯುನೈಟೆಡ್ ಸ್ಟೇಟ್ಸ್ ಆರ್ಮಿ ಸೆಂಟರ್ ಆಫ್ ಮಿಲಿಟರಿ ಹಿಸ್ಟರಿ)
  • ಯು.ಎಸ್‌. ಸೇನಾ ವೈದ್ಯಕೀಯ ಇಲಾಖೆ
  • ಯು.ಎಸ್‌. ಸೈನ್ಯ ಸೈನಿಕರ ಸಿದ್ಧಾಂತ
  • ಯು.ಎಸ್‌. ವಿಶೇಷ ಕಾರ್ಯಾಚರಣೆ ಪಡೆಗಳು
  • ವೆಹಿಕಲ್ ಮಾರ್ಕಿಂಗ್ಸ್ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಮಿಲಿಟರಿ

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ "14 June: The Birthday of the U.S. Army". United States Army Center of Military History. Archived from the original on 1 ಅಕ್ಟೋಬರ್ 2018. Retrieved 25 ಅಕ್ಟೋಬರ್ 2010. ರಾಬರ್ಟ್‌ ರೈಟ್ ಅವರಿಂದ ಉದ್ಧೃತ, ದಿ ಕಾಂಟಿನೆಂಟಲ್ ಆರ್ಮಿ
  2. ಲೈಬ್ರರಿ ಆಫ್ ಕಾಂಗ್ರೆಸ್ , ಜರ್ನಲ್ಸ್ ಆಫ್ ದಿ ಕಾಂಟಿನೆಂಟಲ್ ಕಾಂಗ್ರೆಸ್ , ಸಂಚಿಕೆ 27
  3. ಆರ್ಮಿ ಬರ್ತ್‌ಡೇಸ್ Archived 20 April 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. history.army.mil
  4. 2005 ಪೋಸ್ಚರ್ ಸ್ಟೇಟ್‌ಮೆಂಟ್ Archived 9 July 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. ಯು.ಎಸ್‌. ಸೈನ್ಯ, ೬ ಫೆಬ್ರವರಿ ೨೦೦೫
  5. ಸೈನ್ಯ FY2009 ಡೆಮೋಗ್ರಾಫಿಕ್ಸ್ ಬ್ರೋಶರ್ Archived 3 December 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. (ಯುಎಸ್ ಸೈನ್ಯ)
  6. DA ಪಾಂಪ್ಲೆಟ್ ೧೦-೧ ಸಂಯುಕ್ತ ಸಂಸ್ಥಾನದ ಸೈನ್ಯಸಂಘಟನೆ ; ರೇಖಾಚಿತ್ರ ೧.೨ ಸೇನಾ ಕಾರ್ಯಾಚರಣೆಗಳು .
  7. "The 7 Army Values". The Corps of Discovery, The United States Army. United States Army Center of Military History. Archived from the original on 23 ಸೆಪ್ಟೆಂಬರ್ 2020. Retrieved 5 ಜನವರಿ 2007.
  8. "ಯುಎಸ್‌-ಮೆಕ್ಟಿಕನ್ ವಾರ್ (1846-1848)" PBS.org
  9. "ದಿ ಡೆಡ್‌ಲಿಸ್ಟ್ ವಾರ್". Archived from the original on 27 ಸೆಪ್ಟೆಂಬರ್ 2007. Retrieved 25 ಅಕ್ಟೋಬರ್ 2010.
  10. ಕ್ರ್ಯಾಗ್, ಪು.೨೭೨.
  11. ವುಡ್‌ರಫ್ ಮಾರ್ಕ್‌. ಅನ್‌ಹೆರಾಲ್ಡೆಡ್‌ ವಿಕ್ಟರಿ : ದಿ ಡಿಫೀಟ್ ಆಫ್ ದಿ ವಿಯೆಟ್ ಕಾಂಗ್ ಆಂಡ್ ನಾರ್ತ್‌ ವಿಯೆಟ್ನಾಮೀಸ್ ಆರ್ಮಿ ೧೯೬೧-೧೯೭೩ (ಅಲಿಂಗ್ಟನ್, VA: ವ್ಯಾಂಡಮರ್ ಪ್ರೆಸ್, ೧೯೯೯).
  12. "ರಾಷ್ಟ್ರೀಯ ಗಾರ್ಡ್‌ ಸೈನ್ಯ ಸಂವಿಧಾನ". Archived from the original on 21 ಮೇ 2013. Retrieved 25 ಅಕ್ಟೋಬರ್ 2010.
  13. ಕ್ಯಾರಫನೊ, ಜೇಮ್ಸ್, ಟೋಟಲ್ ಫೋರ್ಸ್‌ ಪಾಲಿಸಿ ಆಂಡ್ ದಿ ಅಬ್ರಾಮ್ಸ್ ಡಾಕ್ಟ್ರಿನ್ : ಅನ್‌ಫುಲ್‌ಫಿಲ್ಡ್ ಪ್ರಾಮಿಸ್, ಅನ್‌ಸರ್ಟೈನ್ ಫ್ಯೂಚರ್ Archived 10 April 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ವಿದೇಶಾಂಗ ನೀತಿ ಸಂಶೋಧನಾ ಸಂಸ್ಥೆ, ೩ ಫೆಬ್ರವರಿ ೨೦೦೫.
  14. ಆನ್ ಆರ್ಮಿ ಅಟ್ ವಾರ್ : ಚೇಂಜ್ ಇನ್ ದಿ ಮಿಡ್ಸ್‌ಟ್ ಆಫ್ ದಿ ಕಾನ್‌ಫ್ಲಿಕ್ಟ್ , ಪು.೫೧೫, ಗೂಗಲ್ ಬುಕ್ಸ್ಮೂಲಕ
  15. ವಿಭಾಗ 1101, ಆರ್ಥಿಕ ವರ್ಷ 1990 ಮತ್ತು 1991ಕ್ಕೆ ರಾಷ್ಟ್ರೀಯ ರಕ್ಷಣಾ ಅನುಮೋದನಾ ಕಾಯಿದೆ, Archived 3 March 2016[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಕಾಂಗ್ರೆಸ್‌ಗೆ ರಕ್ಷಣಾ ಇಲಾಖೆಯ ಮಧ್ಯಂತರ ವರದಿ, ಸೆಪ್ಟೆಂಬರ್ ೧೯೯೦. (ನೋಡಿ : ಹಣಕಾಸುವಿನಲ್ಲಿ ಬಳಸಿದಂತೆ "ಮರುಸಮತೋಲನ (ರಿಬ್ಯಾಲೆನ್ಸಿಂಗ್)".)
  16. ಡೌನಿ, ಕ್ರಿಸ್, ದಿ ಟೋಟಲ್ ಫೋರ್ಸ್‌ ಪಾಲಿಸಿ ಆಂಡ್ ಇಫೆಕ್ಟಿವ್ ಫೋರ್ಸ್‌ Archived 29 April 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಏರ್‌ ವಾರ್‌ ಕಾಲೇಜ್ , ೧೯ ಮಾರ್ಚ್‌ ೨೦೦೪.
  17. ಯು.ಎಸ್‌. ಕ್ಯಾಶುವಲ್ಟೀಸ್ ಇನ್ ಇರಾಕ್
  18. ಸಂಯುಕ್ತ ಸಂಸ್ಥಾನದ ಸೈನ್ಯ ಸಂಘಟನೆ: ಅಮೆರಿಕಾದ ಸೈನ್ಯ 1775 - 1995, DA PAM 10–1. ಕೇಂದ್ರ ಕಾರ್ಯಾಲಯ, ಸೈನ್ಯದ ಇಲಾಖೆ, ವಾಷಿಂಗ್ಟನ್ , ೧೪ ಜೂನ್ ೧೯೯೪
  19. ೧೯.೦ ೧೯.೧ "History.army.mil". Archived from the original on 30 ಆಗಸ್ಟ್ 2009. Retrieved 25 ಅಕ್ಟೋಬರ್ 2010.
  20. ೨೦.೦ ೨೦.೧ "ಅರ್ಮಿ ರಿಸರ್ವ್‌ ಮಾಕ್ಸ್‌ ಫರ್ಸ್ಟ್ 100 ಈಯರ್ಸ್  : ಲ್ಯಾಂಡ್ ಫೋರ್ಸ್‌ಸ್ : ಡಿಫೆನ್ಸ್ ನ್ಯೂಸ್ ಏರ್‌ ಫೋರ್ಸ್‌". Archived from the original on 24 ಏಪ್ರಿಲ್ 2008. Retrieved 25 ಅಕ್ಟೋಬರ್ 2010.
  21. "United States Army Central, CG's Bio". United States Army Central. 11 ಫೆಬ್ರವರಿ 2008. Archived from the original on 23 ಅಕ್ಟೋಬರ್ 2008. Retrieved 4 ಜುಲೈ 2008.
  22. "United States Army, Seventh Army, Leaders". United States Army, Seventh Army. 25 ಜೂನ್ 2008. Archived from the original on 4 ಜುಲೈ 2008. Retrieved 4 ಜುಲೈ 2008.
  23. "Commanding General". United States Army, Pacific. 23 ಏಪ್ರಿಲ್ 2008. Archived from the original on 17 ಮೇ 2008. Retrieved 4 ಜುಲೈ 2008.
  24. "Commanding General". United States Army, Surface Deployment and Distribution Command. 30 ಜೂನ್ 2008. Archived from the original on 14 ಸೆಪ್ಟೆಂಬರ್ 2008. Retrieved 4 ಜುಲೈ 2008.
  25. ಆರ್ಗನೈಸೇಶನ್ Archived 11 November 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಇನ್‌ಸ್ಟಲೇಶನ್ ಮ್ಯಾನೇಜ್‌ಮೆಂಟ್ ಕಮಾಂಡ್
  26. ಆರ್ಗನೈಸೇಶನ್ Archived 14 February 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಸಂಯುಕ್ತ ಸಂಸ್ಥಾನದ ಸೈನ್ಯ
  27. ಪರ್‌ಪಿಕ್ ವಿ. ರಕ್ಷಣಾ ಇಲಾಖೆ, ೪೯೬ ಯು.ಎಸ್‌. ೩೩೪ (೧೯೯೦)
  28. 10 ಯು.ಎಸ್‌.ಸಿ. 3013
  29. 10 ಯು.ಎಸ್‌.ಸಿ. 3033
  30. 10 ಯು.ಎಸ್‌.ಸಿ. 151
  31. 10 ಯು.ಎಸ್‌.ಸಿ. 162
  32. ೩೨.೦ ೩೨.೧ ೩೨.೨ ಫ್ಯೂಚರ್ ಸೋಲ್ಜರ್ಸ್ ಅಂತರ್ಜಾಲದಿಂದ
  33. ಎನ್‌ಲಿಸ್ಟೆಡ್ ಸೋಲ್ಜರ್ಸ್ ಡಿಸ್ಕ್ರಿಪ್ಷನ್ಸ್ ಅಂತರ್ಜಾಲದಿಂದ
  34. M16 ರೈಫಲ್. ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್.
  35. M4. ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  36. ಆರ್ಮಿ ಪೊಸಿಶನ್: M4 ಕಾರ್ಬೈನ್ ಈಸ್ ಸೋಲ್ಜರ್ಸ್ ಬ್ಯಾಟಲ್‌ಫೀಲ್ಡ್ ವೆಪನ್ ಆಫ್ ಚಾಯ್ಸ್ Archived 26 September 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., www.army.mil
  37. M9 ಪಿಸ್ತೂಲ್, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  38. M249, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  39. M240, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  40. MK 19, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  41. M224, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  42. M252, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  43. M120, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  44. M119, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  45. M777 ಹಗುರುತೂಕದ 155 ಎಂಎಂ ಹೊವಿಟ್ಜರ್ (LW155)
  46. HMMWV, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  47. ಅಬ್ರಾಮ್ಸ್, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  48. ಬ್ರಾಡ್ಲಿ , ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  49. ಸ್ಟ್ರೈಕರ್ , ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  50. M113, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  51. ಪಲಡಿನ್ , Army.mil
  52. MLRS, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  53. ಅಪಚೆ, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  54. ಕಿಯೊವ, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  55. ಬ್ಲಾಕ್‌ಹಾಕ್, ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  56. ಚಿನೂಕ್ , ಯು.ಎಸ್‌. ಸೈನ್ಯ ಫ್ಯಾಕ್ಟ್ ಫೈಲ್ಸ್
  57. Lopez, C. (20 ಫೆಬ್ರವರಿ 2010). "Soldiers to get new cammo pattern for wear in Afghanistan". US Army. US Army. Retrieved 22 ಫೆಬ್ರವರಿ 2010.
  58. NG, DHS ಟೆಕ್ನಾಲಜೀಸ್ ಟು ಸಪೋರ್ಟ್‌ SICPS/TMSS ಯುನೈಟೆಡ್ ಪ್ರೆಸ್‌ ಇಂಟರ್‌ನ್ಯಾಶನಲ್

ಬಾಹ್ಯ ಕೊಂಡಿಗಳು[ಬದಲಾಯಿಸಿ]

Public Domain This article incorporates public domain material from the United States Army Center of Military History document: "Army Birthdays".