ಸಂಯುಕ್ತ ಜನತಾ ದಳ
ವಿಕಿಪೀಡಿಯ ಇಂದ
ಸಂಯುಕ್ತ ಜನತಾ ದಳವು ಮುಖ್ಯವಾಗಿ ಬಿಹಾರ ಮತ್ತು ಕರ್ನಾಟಕಗಳಲ್ಲಿ ರಾಜಕೀಯ ಇರುವಿಕೆ ಹೊಂದಿರುವ ಭಾರತದ ಒಂದು ರಾಜಕೀಯ ಪಕ್ಷ. ನಿತೀಶ್ ಕುಮಾರ್ ಇದರ ನಾಯಕರಾಗಿದ್ದಾರೆ. ಈಗಿನ ಪಕ್ಷವನ್ನು ಹಿಂದಿನ ಸಂಯುಕ್ತ ಜನತಾ ದಳ ಮತ್ತು ಸಮತಾ ಪಕ್ಷದ ಒಟ್ಟುಗೂಡುವಿಕೆಯಿಂದ ಅಕ್ಟೋಬರ್ ೩೦, ೨೦೦೩ರಂದು ರಚಿಸಲಾಯಿತು. ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳಕ್ಕೆ, ವಿಶೇಷವಾಗಿ ಆರ್‌ಜೆಡಿ ಪಕ್ಷ ಸಮತಾ ಪಕ್ಷದ ಬಂಡಾಯವೆದ್ದ ರಘುನಾಥ್ ಝಾ ಮತ್ತು ಬ್ರಹ್ಮಾನಂದ್ ಮಂಡಲ್‌ರಂತಹ ನಾಯಕರನ್ನು ತಮ್ಮ ಪಕ್ಷಕ್ಕೆ ಸ್ವಾಗತಿಸಿದ ನಂತರ ಉಂಟಾದ, ಸಮಾನವಾದ ವಿರೋಧವು ಇದರ ಒಗ್ಗಟ್ಟಿನ ಶಕ್ತಿಯೆಂದು ನಂಬಲಾಗಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |