ಸಂಡೂರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಂಡೂರು
India-locator-map-blank.svg
Red pog.svg
ಸಂಡೂರು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಳ್ಳಾರಿ ಜಿಲ್ಲೆ
ನಿರ್ದೇಶಾಂಕಗಳು 15.1° N 76.55° E
ವಿಸ್ತಾರ
 - ಎತ್ತರ
22.13 km²
 - 564 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
27614
 - 1247.81/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 583 119
 - +08395
 - 

'ಸಂಡೂರು,' 'ಬಳ್ಳಾರಿ' ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಉತ್ತರದಲ್ಲಿ ಹೊಸಪೇಟೆ ತಾಲ್ಲೂಕು, ಪೂರ್ವದಲ್ಲಿ ಬಳ್ಳಾರಿ ತಾಲ್ಲೂಕು ಮತ್ತು ಆಂಧ್ರ ಪ್ರದೇಶ. ಆಗ್ನೇಯದಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ನೈಋತ್ಯ ಮತ್ತು ದಕ್ಷಿಣದಲ್ಲಿ ಕೂಡ್ಲಿಗಿ, ಪಶ್ಚಿಮದಲ್ಲಿ ಹೊಸಪೇಟೆ ತಾಲ್ಲೂಕು ಸುತ್ತುವರಿದಿವೆ. ತೋರಣಗಲ್ಲು, ಸಂಡೂರು, ಚೋರನೂರು-ಇವು ಹೋಬಳಿಗಳು. ಈ ತಾಲ್ಲೂಕಿನ ಸಂಡೂರು ಬೆಟ್ಟಗಳು ಅವುಗಳ ಸುತ್ತಲಿನ ವನಸಿರಿಯಿಂದ ಕೂಡಿದ ಬೇತೋಹಾರಿ ನಿಸರ್ಗಸೌಂದರ್ಯದಿಂದ, ಹಾಗೂ ,ಖನಿಜ ಸಂಪತ್ತಿನಿಂದ ಪ್ರಸಿದ್ಧವಾಗಿವೆ,.

'ಸಂಡೂರು,' ಹಾಗೂ ಅಕ್ಕ-ಪಕ್ಕದ ಊರುಗಳು ಕೆಲವೊಮ್ಮೆ, ಮಲೆನಾಡನ್ನು ಹೋಲುತ್ತವೆ[ಬದಲಾಯಿಸಿ]

ಸಂಡೂರು ತಾಲ್ಲೂಕನ್ನು ನೀವು ಸೆಪ್ಟೇಂಬರ್ ತಿಂಗಳಲ್ಲಿ ನೊಡಿದರೆ, ಇದು 'ಉತ್ತರ ಕರ್ನಾಟಕದ ತಾಲ್ಲೂಕು ಅಲ್ಲ'ವೆಂದು ನಂಬುತ್ತಿರಿ, ಸುಂದರ ಬೆಟ್ಟಗಳಿಂದ ಕೂಡಿದ ಸುಂದರ ನಾಡು ಈ 'ಸಂಡೂರು'. ಇಲ್ಲಿನ ಬೆಟ್ಟಗಳು ಮಲೆನಾಡಿನ ಬೇಟ್ಟಗಳಿಗೆ ಹೋಲುತ್ತವೆ. ಇಲ್ಲಿ ನೋಟ ಮತ್ತು ಪರಿಸರ ಅದ್ಬುತವಾಗಿತ್ತು, ಆದರೆ ಈಗ 'ಕಬ್ಬಿಣದ ಅದೀರು' ಹೇರಳವಾಗಿ ದೋರೆಯುವುದರಿಂದ ಇದು ಅದೀರು ತೆಗೆಯಲು ಪರಿಸರ ನಾಶ ಮಾಡಿದ್ದಾರೆ ಹಾಗೂ ಇನ್ನೂ ಮಾಡುತ್ತಿದ್ದರೆ. ಇದರಲ್ಲಿ 'ಸರ್ಕಾರಿ' ಮತ್ತು 'ಖಾಸಗಿ ಸಂಸ್ಥೆಗಳ ಕೈವಾಡ'ವು ತುಂಬ ಹೇರಳವಾಗಿದೆ. ಸೊವೆನಹಳ್ಳೀ ಗ್ರಾಮದಲ್ಲಿ ಪ್ರತಿ ವರುಷ ಜನವರಿ ತಿನ್ಗಲಲ್ಲಿ ಸಾರಿ ದುರುಗಮ್ಮ ಜಾತ್ರಿ ಅದ್ದುರಿಯಗಿ ನದೆಯುತ್ತದೆ.ಹಾಗೂ ತಾಲೂಕಿನ ಸೋವೇನಹಳ್ಳಿಯಲ್ಲಿ ಸಾರಿದುರ್ಗಾಂಭ ಹಾಗೂ ಶ್ರೀ ಸಿದ್ದಲಿಂಗೇಶ್ವರ ರಥೋತ್ಸವಗಳು ವೈಭವದಿಂದ ಜರುಗುತ್ತವೆ ತಿಪ್ಪು ಸೋವೇನಹಳ್ಳಿ

'ಬೊಮ್ಮಘಟ್ಟ' ದಲ್ಲಿ ರಥೋತ್ಸವ[ಬದಲಾಯಿಸಿ]

ಇಲ್ಲಿಯ 'ಶ್ರೀ ಹುಲಿಕುಂಟೇರಾಯ ದೇವಸ್ಥಾನ'ವು ಪ್ರಸಿದ್ಧ. ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದದಶಮಿಯಂದು ರತೋತ್ಸವ ಇರುತ್ತದೆ.

'ಇತಿಹಾಸ'[ಬದಲಾಯಿಸಿ]

ಸಂಡೂರಿನ ಇತಿಹಾಸ ಮತ್ತು ವರ್ತಮಾನವನ್ನು ಅರ್ಥ ಮಾಡಿಕೊಳ್ಳಲು ಉಪಯುಕ್ತವಾಗುವ ಹೊಸತೊಂದು ಪುಸ್ತಕ, ೨೦೦೮ ರಲ್ಲಿ 'ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ'ದಿಂದ ಪ್ರಕಟವಾಗಿದೆ. ಆ ಪುಸ್ತಕದ ಹೆಸರು 'ಸೊಂಡೂರು ಭೂ ಹೋರಾಟ'. ಈ ಕೃತಿಯನ್ನು 'ಡಾ. ಅರುಣ್‌ ಜೋಳದ ಕೂಡ್ಲಿಗಿ' ಸಂಶೋಧನೆ ಮಾಡಿ ಬರೆದಿದ್ದಾರೆ. ಇದು ಕರ್ನಾಟಕದ ಸಮಾಜವಾದಿ ಹೋರಾಟಗಾರರ ಇತಿಹಾಸವನ್ನೂ ಕೂಡ ದಾಖಲಿಸುತ್ತದೆ. ಕರ್ನಾಟಕದಲ್ಲಿ ರೈತ ಹೋರಾಟ ಎಂದರೆ ಕೇವಲ ಕಾಗೋಡು ಸತ್ಯಗ್ರಹವನ್ನು ಮಾತ್ರ ಉಲ್ಲೇಖ ಮಾಡುತ್ತೇವೆ. ಆದರೆ ೧೯೭೩ ರಲ್ಲಿ 'ಸಂಡೂರಿನಲ್ಲಾದ ರೈತರ ಹೋರಾಟ' ಅಸಾಮಾನ್ಯವಾದುದು. ೧೩ ಸಾವಿರ ಎಕರೆ ಭೂಮಿಯನ್ನು ರೈತರು ಈ ಹೋರಾಟದಿಂದ ಪಡೆದರು. ಈ ಹೋರಾಟದಲ್ಲಿ ಹಿರಿಯ ಸಮಾಜವಾದಿ ನಾಯಕ, 'ಜಾರ್ಜ ಫರ್ನಾಂಡೀಸ್' ಮುಂತಾದವರು ಪಾಲ್ಗೊಂಡಿದ್ದರು. ಇದು 'ಸಂಡೂರು ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖವಾದ ಪ್ರಮುಖ ಘಟನೆಯಾಗಿದೆ'. ಈ ಸಮಗ್ರ ದಾಖಲೆಯನ್ನು 'ಅರುಣ್‌ ಜೋಳದ ಕೂಡ್ಲಿಗಿ'ಯವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.

ಲೇಖಕ, ವಸುಧೇಂದ್ರ ಸಂಡೂರಿನವರು[ಬದಲಾಯಿಸಿ]

'ಕವಿ,ವಸುಧೇಂದ್ರ'

'ವಸುಧೇಂದ್ರ', ಮೂಲತಃ ಸಂಡೂರಿನವರು. 'ವಸುಧೇಂದ್ರ' ರವರು, ಕನ್ನಡ ಸಾಹಿತ್ಯ ಲೋಕದಲ್ಲಿ ಕಥೆಗಾರರಾಗಿ, ಪ್ರಬಂಧಕಾರರಾಗಿ, ಕಾದಂಬರಿಕಾರರಾಗಿ, ಪ್ರಕಾಶಕರಾಗಿ ಗಮನಸೆಳೆಯುತ್ತಿದ್ದಾರೆ. ಅವರು ಈ ತನಕ,

'ವಸುಧೇಂದ್ರರವರ 'ಬ್ರಿಲ್' ಭಾಷೆಯಲ್ಲಿ ಬರೆದ ಪುಸ್ತಕ'ಅದೃಷ್ಯ ಕಾವ್ಯ' ಪುಸ್ತಕವನ್ನು 'ಗಿರೀಶ್ ಕಾಸರವಳ್ಳಿ'ಯವರು ಅನಾವರಣಗೊಳಿಸುತ್ತಿರುವುದು
 • 'ಮನಿಷಾ',
 • 'ಯುಗಾದಿ',
 • 'ಚೇಳು',
 • 'ಅಮ್ಮ ಅಂದ್ರೆ ನಂಗಿಷ್ಟ',
 • 'ಹಂಪಿ ಎಕ್ಸಪ್ರೆಸ್‌',
 • 'ಹರಿಚಿತ್ತ ಸತ್ಯ',

ಮುಂತಾದ ಕತೆ, ಪ್ರಬಂಧ, ಕಾದಂಬರಿಯನ್ನು ಪ್ರಕಟಿಸಿದ್ದಾರೆ. 'ಜಯಂತ ಕಾಯ್ಕಣಿ' ಇವರನ್ನು 'ಓದುಗ ಸ್ನೇಹಿ ಬರಹಗಾರ' ಎಂದು ಕರೆಯುತ್ತಾರೆ. ಇವರು 'ಕನ್ನಡದ ಒಳ್ಳೆಯ ಜನಪ್ರಿಯ ಬರಹಗಾರರು' ಎಂದು ಹೆಸರಾಗಿದ್ದಾರೆ. ಇವರ ಕಥೆಗಳಲ್ಲಿ 'ಸಂಡೂರಿಸ ಸೆಳಕುಗಳು' 'ಸಾಪ್ಟವೇರ್‌ ಲೋಕದ ಒಳತೋಟಿಗಳು' ತುಂಬಾ ಸೂಕ್ಷ್ಮವಾಗಿ ಚಿತ್ರಿತವಾಗಿವೆ. ಸಾಂಸ್ಕೃತಿಕವಾಗಿ ಮುಖ್ಯ ಎನ್ನಿಸುವಂತಹ ಬರಹಗಳು ಇನ್ನೂ 'ವಸುಧೇಂದ್ರ'ರವರಿಂದ ಸಾದ್ಯವಾಗಿಲ್ಲ. ಅಂತಹ ಬರಹಗಳನ್ನು ಅವರಿಂದ ನಿರೀಕ್ಷಿಸಬೇಕಾಗಿದೆ. ಈ ತನಕದ ಅವರ ಬರಹಕ್ಕೆ ಹೆಚ್ಚು ಪ್ರಚಾರ ಸಿಕ್ಕಿದೆ, ಮಾದ್ಯಮಗಳೂ ಅವರನ್ನು ಹೆಚ್ಚಾಗಿ ಪ್ರಚಾರ ಮಾಡಿವೆ .ಇಂತಹ ಪ್ರಚಾರದ ಆಚೆಗೂ ವಸುಧೇಂದ್ರ, ತಮ್ಮ ಜೀವಂತಿಕೆಯನ್ನು ಕಾಪಾಡಿಕೊಳ್ಳಬೇಕಿದೆ.

'ಬ್ರಿಲ್ ಭಾಷೆಯನ್ನಾಧರಿಸಿ ಬರೆದ ಪುಸ್ತಕ'-'ಅದೃಷ್ಯ ಕಾವ್ಯ'[ಬದಲಾಯಿಸಿ]

'ಅಕ್ಷರ ಪ್ರೀತಿ', ಸರಳ ಸಜ್ಜನಿಕೆ, ಸೌಜನ್ಯ ಮೂರ್ತಿಯಾದ 'ವಸುಧೇಂದ್ರರವರು' ಅದಮ್ಯ ಉತ್ಸಾಹಗಳಿಂದ ಪ್ರಕಟಿಸುತ್ತಿರುವ, 'ಛಂದ ಪುಸ್ತಕ', ದ ಕಥಾ ಸಂಕಲನಗಳು, ಹೊಸಬರಹಗಾರರನ್ನು ಗುರುತಿಸಿ, ಅವರುಗಳನ್ನು ಪ್ರಮುಖ ರಂಗಕ್ಕೆ, ಬರಮಾಡಿಕೊಳ್ಳುವ ವೇದಿಕೆಯಾಗಿ, ಅತ್ಯಂತ ಸುಂದರವಾಗಿ ತಯಾರುಗೊಂಡಿದೆ. ಹೊಸ ಸಾಹಿತಿಗಳಿಗೆ ಪ್ರಶಸ್ತಿ ಪ್ರದಾನ ಮಾಡುವಲ್ಲಿ ಛಂದ ಪುಸ್ತಕಾಲಯ, ಹಲವಾರು ವಿಧಾನಗಳನ್ನು ಅನುಸರಿಸಿದೆ. 'ಛಂದ ಪುಸ್ತಕ ಪ್ರಕಟನಾಲಯ,' ದ ವತಿಯಿಂದ, 'ಅದೃಷ್ಯಕಾವ್ಯ'ವೆಂಬ 'ಬ್ರಿಲ್ ಭಾಷೆ'ಯಲ್ಲಿ ಬರೆದ ಕಾವ್ಯವನ್ನು 'ಹರಿಯಾಣ ವಿಶ್ವವಿದ್ಯಾನಿಲಯ'ದಲ್ಲಿ, ಅಧ್ಯಯನ ನಡೆಸಿದ, 'ಮಧು ಸಿಂಘಾಲ್' ರವರು, ಅನಾವರಣಮಾಡಿದರು. ಅವರು, ಅಂಧತ್ವದ ಮಿತಿಗಳನ್ನು ಮೀರಿ, ವಿಶ್ವದ ಹಲವು ರಾಷ್ಟ್ರಗಳಲ್ಲಿ ನಡೆಸಿದ ಸಾಹಿತ್ಯ ಸಂಕಿರಣಗಳಲ್ಲಿ ಪಾಲ್ಗೊಂಡಿದ್ದಾರೆ. ಇನ್ನುಳಿದ ೩ ಕೃತಿಗಳನ್ನು, ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕರಾದ, 'ಗಿರೀಶ್ ಕಾಸರವಳ್ಳಿ'ಯವರ ಅಮೃತ ಹಸ್ತಗಳಿಂದ ಅನಾವರಣಮಾಡಲಾಯಿತು.

 • 'ಚೇಳು',
 • 'ಅಮ್ಮ ಅಂದ್ರ ನಂಗಿಷ್ಟ',
 • 'ಮನೀಷೆ',

'ಸಂಡೂರ್ ಶ್ರೀಕಾಂತ'[ಬದಲಾಯಿಸಿ]

'ಸಂಡೂರಿನವರಾದ ಶ್ರೀಕಾಂತ' ರವರು 'ಸೃಜನ್‌' ಎನ್ನುವ ಹೆಸರಲ್ಲಿ ಕಲಾಕೃತಿಗಳನ್ನು ನಿರ್ಮಿಸುತ್ತಾ ಹೆಚ್ಚು ಪ್ರಸಿದ್ದವಾದವರು. 'ನಾನ್‌ ಅಕಾಡೆಮಿಕ್‌ ಕಲಾವಿದ'ರಾದ 'ಸೃಜನ್‌' ಕಲೆಯ ಹಲವು ಸಾಂಪ್ರದಾಯಿಕ ಚೌಕಟ್ಟನ್ನು ಮುರಿದವರು. 'ಭಾವನ ಪತ್ರಿಕೆ'ಯ ಮೂಲಕ, 'ಬಣ್ಣದ ಗುಂಗಿಗೆ ಬಿದ್ದ ಸೃಜನ್‌ ರವರ ಕಲಾಕೃತಿ'ಗಳನ್ನು ಇಂದು ಕನ್ನಡದ ಬಹುಪಾಲು ಪತ್ರಿಕೆಗಳನ್ನು ತಮ್ಮ ಕಲಾಕೃತಿಗಳ ಮೂಲಕ ಆವರಿಸಿದ್ದಾರೆ. ಕನ್ನಡದ ನೂರಾರು ಪುಸ್ತಕಗಳಿಗೆ ಮುಖಪುಟಗಳನ್ನು ಬರೆದು, 'ಪುಸ್ತಕಗಳ ಚೆಂದವನ್ನು ಹೆಚ್ಚಿಸಿದವರು'. ಪುಸ್ತಕದ ಒಳಪುಟಗಳಲ್ಲೂ ಅನೇಕರ ಕಾವ್ಯಕ್ಕೆ ಸಂಗಾತಿಯಾಗಿ 'ರೇಖೆ'ಗಳನ್ನು ಹಾಕಿದವರು. 'ಸೃಜನ್‌ ಕಲೆ' ಅವರಿಗೇ ವಿಶಿಷ್ಟವಾದುದು. ಅವರ, ಕೆಲವು 'ಕಲಾ-ಕೃತಿಗಳು' ಓದುಗರಲ್ಲಿ ಒಂದು ತರಹದ ಸಂವೇದನೆಗಳನ್ನು ಹೊಮ್ಮಿಸಿವೆ.

 • 'ಎಲೆ',
 • 'ಮೊಲೆ',
 • 'ಚಂದ್ರ',
 • 'ಅರೆಮುಖದ ಹುಡುಗಿ',
 • 'ಸಮುದ್ರದ ತಟ',

ಇಂತಹ ನೂರಾರು 'ಚಿತ್ರಗಳು', ಅವರ ಸಂವೇದನೆಯನ್ನು ಭಿನ್ನವಾಗಿ ಗುರುತಿಸುತ್ತವೆ.

"http://kn.wikipedia.org/w/index.php?title=ಸಂಡೂರು&oldid=493476" ಇಂದ ಪಡೆಯಲ್ಪಟ್ಟಿದೆ