ಸಂಕಲನ
ವಿಕಿಪೀಡಿಯ ಇಂದ
ಸೇಬಿನ ಹಣ್ಣುಗಳ ಸಂಬಂಧವಾಗಿ ೩ + ೨ = ೫, ಪಠ್ಯಪುಸ್ತಕಗಳಲ್ಲಿ ಒಂದು ಜನಪ್ರಿಯ ಆಯ್ಕೆ
ಸಂಕಲನವು ವಸ್ತುಗಳನ್ನು ಒಟ್ಟಿಗೆ ಸೇರಿಸುವ ಗಣಿತದ ಪ್ರಕ್ರಿಯೆ. ಸಂಕಲನ ಚಿಹ್ನೆ "+" ಸಂಖ್ಯೆಗಳನ್ನು ಒಟ್ಟಾಗಿ ಕೂಡಿಸಲಾಗುತ್ತದೆಂದು ಸೂಚಿಸುತ್ತದೆ. ಉದಾಹರಣೆಗೆ, ಬಲಗಡೆಯ ಚಿತ್ರದಲ್ಲಿ, ೩ + ೨ ಸೇಬಿನ ಹಣ್ಣುಗಳಿವೆ—ಅಂದರೆ ಮೂರು ಸೇಬಿನ ಹಣ್ಣುಗಳು ಮತ್ತು ಬೇರೆ ಎರಡು ಸೇಬಿನ ಹಣ್ಣುಗಳು—ಐದು ಸೇಬಿನ ಹಣ್ಣುಗಳು ಇವೆಯೆಂದು ಹೇಳುವುದೂ ಒಂದೇ, ಏಕೆಂದರೆ ೩ + ೨ = ೫. ಹಣ್ಣಿನ ಎಣಿಕೆಯ ಜೊತೆಗೆ, ಸಂಕಲನವು ಬೇರೆ ವಿಧದ ಸಂಖ್ಯೆಗಳನ್ನು ಬಳಸಿ ಇತರ ಭೌತಿಕ ಮತ್ತು ಅಮೂರ್ತ ಪರಿಮಾಣಗಳನ್ನು ಸೇರಿಸುವುದನ್ನು ಕೂಡ ಪ್ರತಿನಿಧಿಸಬಹುದು: ಋಣ ಸಂಖ್ಯೆಗಳು, ಭಿನ್ನಾಂಕಗಳು, ಅಭಾಗಲಬ್ಧ ಸಂಖ್ಯೆಗಳು, ವೆಕ್ಟರ್ ಗಳು,ಮತ್ತು ಇತರ.
|
|
|||||
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |