ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ
ಹೆಸರು: ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ
ಪ್ರಮುಖ ದೇವತೆ: ಓಂಕಾರೇಶ್ವರ(ಶಿವ)
ಸ್ಥಳ: India

ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ ಶ್ರೀ ಓಂಕಾರೇಶ್ವರ ಮತ್ತು ಅಮರೇಶ್ವರ ಜ್ಯೋತಿರ್ಲಿಂಗ

ಸ್ಥಳ :[ಬದಲಾಯಿಸಿ]

  • ಇಂದೂರಿನಿಂದ ೭೭ ಕಿ.ಮೀ ದೂರದಲ್ಲಿ; ಉಜ್ಜಯಿನಿ ಗೆ ೧೩೩ ಕಿ.ಮೀ. ಓಂಕಾರೇಶ್ವರವಿದೆ. ಓಂಕಾರೇಶ್ವರದಿಂದ ೧೨ ಕಿ.ಮೀ. ದೂರದಲ್ಲಿ ರೈಲು ಮಾರ್ಗ ಸಿಗುವುದು.[೧]
  • ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ ದೇವಾಲಯಮಧ್ಯ ಪ್ರದೇಶ ದಲ್ಲಿನರ್ಮದಾ ನದಿ ಯ ದಡದ ಹತ್ತಿರದ ದ್ವೀಪದ ಮೇಲಿದೆ . ಇಲ್ಲಿ ನರ್ಮದಾ ನದಿಯು ತನ್ನ ಇನ್ನೊಂದು ಸಣ್ಣ ಉಪನದಿಯೊಡನೆ ಸಂಗಮವಾಗುವ ಸ್ಥಳ. ದೇವಾಲಯವು ಮಧ್ಯದಲ್ಲಿರುವ ಮಾಂಧಾತ ಅಥವಾ ಶಿವಪುರಿ ಎಂದು ಕರೆಯಲ್ಪಡುವ ದ್ವೀಪದಲ್ಲಿದೆ. ಈ ದ್ವೀಪವು ಓಂ (ಸಂಸ್ಕೃತ) ಕಾರದ ರೂಪದಲ್ಲಿರುವುದರಿಂದ ಈ ಹೆಸರು ಬಂದಿದೆ. ಓಂ ಕಾರದ ಅಧಿದೇವತೆ ಎಂದು ಅರ್ಥ. ಇದು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ನದಿಯ ಆಚೆ ದಡದಲ್ಲಿ ಮಮಲೇಶ್ವರ ಅಥವಾ ಅಮರೇಶ್ವರ ವೆಂಬ ಇನ್ನೊಂದು ಶಿವದೇವಾಲಯವಿದೆ ಅದನ್ನೂ ಜ್ಯೋತಿರ್ಲಿಂಗವೆಂದು ಹೇಳುತ್ತಾರೆ.

ಜ್ಯೋತಿರ್ ಲಿಂಗದ ಉದ್ಭವ ದ ಪುರಾಣ ಕಥೆ[ಬದಲಾಯಿಸಿ]

  • ಬ್ರಹ್ಮ , ವಿಷ್ಣು ಮಹೇಶ್ವರರಲ್ಲಿ ಹೆಚ್ಚನವರಾರೆಂಬ ಚರರ್ಚೆಯಾದಾಗ ಶಿವನು ಮೂರು ಜ್ಯೋತಿಗಳ (ಬೆಳಕಿನ) ಕಂಬಗಳನ್ನು ಸೃಷ್ಠಿಸಿದನು (ಜ್ಯೋತಿರ್ಲಿಲಿಂಗ). ವಿಷ್ಣು ಮತ್ತು ಬ್ರಹ್ಮ ರಿಗೆ ಅದರ ಮೇಲಿನ ಮತ್ತು ಕೆಳಗಿನ ತುದಿಯನ್ನು ಕಂಡುಹಿಡಿಯಲು ತಿಳಿಸಿದನು. ವಿಷ್ಣುವು ಅದರ (ಮೇಲಿನ) ತುದಿಯನ್ನು ಕಾಣದೇ ಹಿಂತುರುಗಿ ಬಂದು ತನಗೆ ಆ ಲಿಂಗದ ತುದಿ ಸಿಗದಿರುವ ವಿಷಯ ತಿಳಿಸಿದನು. ಆದರೆ ಬ್ರಹ್ಮ ನು ತಾನುನೋಡಿರುವದಾಗಿ ಹೇಳಿದನು. ಈಶ್ವರನು ಎರಡನೇ ಜ್ಯೋತಿಸ್ಥಂಬವಾಗಿದ್ದು ಬ್ರಹ್ಮನು ಸುಳ್ಳು ಹೇಳಿದನೆಂದು ತಿಳಿದು ಅವನಿಗೆ ಪೂಜೆ ಯಿಲ್ಲದಿರಲಿ ಎಂದು ಶಪಿಸಿದನು .ಅದರೆ ಸತ್ಯ ಹೇಳಿದ ವಿಷ್ಣು ವು ಪೂಜೆ ಗೆ ಅರ್ಹನೆಂದು ಹೇಳಿದನು ಆ ಆದಿ ಯಲ್ಲಿ ತೋರಿದ ಜ್ಯೋತಿರ್ಲಿಂಗವೇ ಈಗ ಇರುವ ಜ್ಯೋತಿರ್ಲಿಂಗಗಳೆಒದು ಹೇಳುತ್ತಾರೆ (ಇಂಗ್ಲಿಷ್ ವಿಕಿಪೀಡಿಯಾ -ಓಂಕಾರೇಶ್ವರ)

ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗ[ಬದಲಾಯಿಸಿ]

  • ಈ ಸ್ಥಳ ಸುಂದರ ಪ್ರಕೃತಿಯಲ್ಲಿ ನದಿಗಳ ಸಂಗಮದಲ್ಲಿದ್ದು ಮನೋಹರವಾಗಿದೆ. ಮಂದಿರ ನದಿಯ ದಡದಲ್ಲಿದೆ. ನದಿಯ ಸಂಗಮದಲ್ಲಿ ಸ್ನಾನ ಮಾಡಿ ಅನೇಕ ಮೆಟ್ಟಲುಗಳನ್ನು ಏರಿ ದೇವಾಲಯಕ್ಕೆ ಹೋಗಬೇಕು. ದೇವಾಲಯ ಭವ್ಯವಾದ ಗೋಪುರ ಹೊಂದಿದೆ. ದೇವಾಲಯ ಸದಾ ಜನರಿಂದ ತುಂಬಿರುತ್ತದೆ -ಸರತಿಯಲ್ಲಿ ಹೋಗಬೇಕು. ಅಲ್ಲೇ ಸಿಗುವ ಪೂಜಾ ಸಾಮಗ್ರಿ ಹಾಲು ನೀರಿನ ಗಿಂಡಿಗಳನ್ನು ತೆಗೆದುಕೊಂಡು ಗರ್ಭಗುಡಿ ಪ್ರವೇಶಿಸಿದರೆ ಪುಟ್ಟದಾದ ಶ್ರೀ ಓಂಕಾರೇಶ್ವರ ಜ್ಯೋತಿರ್ಲಿಂಗದ ದರ್ಶನವಾಗುತ್ತದೆ. ಗೋಲಾಕಾರದ ಸಣ್ಣಲಿಂಗ ನಿರಾಕಾರ ಈಶ್ವರನನ್ನೂ ಪ್ರಕೃತಿಯ ಮೂಲ ತತ್ವವನ್ನೂ ಪ್ರತಿನಿಧಿಸುತ್ತದೆ. ಇಲ್ಲಿಯೂ ಭಕ್ತರು ಸ್ವತಃ ಅಭಿಶೇಕ ಮಾಡಿ ಪೂಜೆಮಾಡಿ ಸಂತೋಷ ಪಡಬಹುದು. ಪೂಜಾಸಂಕಲ್ಪ ಮಾಡಿಸಲು ,ವಿಶೇಷ ಪೂಜೆ ಮಾಡಿಸಲು ತುಂಬಾಜನ ಅರ್ಚಕರಿದ್ದಾರೆ. ಮಂದಿರದ ಒಳಗಡೆ ಅನೇಕ ದೇವತೆಗಳ ಮೂರ್ತಿಗಳಿವೆ . ವಿಶೇಷವೆಂದರೆ ಇಲ್ಲಿ ಓಂಕಾರೇಶ್ವರನಿಗೆ ಬಿಲ್ವ ಪತ್ರದ ಜೊತೆ ತುಲಸೀಪತ್ರವನ್ನೂ ಅರ್ಪಿಸುತ್ತಾರೆ.

ಲಿಂಗದ ಹಿಂಭಾಗದಲ್ಲಿ ಪ್ರತ್ಯೇಕವಾಗಿ ಪಾರ್ವತಿ ಯ ಶ್ವೇತವರ್ಣದ ಮೂರ್ತಿ ಇದೆ. ರಾತ್ರಿ ಆದ ಮೇಲೆ ಪಾರ್ವತಿ ಪರಮೇಶ್ವರರಿಗಾಗಿ ಶಯನ ಸಿದ್ಧಪಡಿಸಿ, ಪಕ್ಕದಲ್ಲಿ ಪಗಡೆ ಮಣೆ ಇಟ್ಟಿರುತ್ತಾರೆ . ಪ್ರತಿ ರಾತ್ರಿ ಶಿವ ಪಾರ್ವತಿಯರು ಆಗಮಿಸಿ ವಿಶ್ರಾಂತಿ ಪಡೆದು ಪಗಡೆಯಾಡುತ್ತಾರೆ ಎಂದು ಭಕ್ತರ ನಂಬುಗೆ. ಭಕ್ತರು ಇಲ್ಲಿ ಬಂದು ಮನೋನಿವೇದನೆ ಮಾಡಿಕೊಂಡರೆ ಅವರ ಎಲ್ಲಾ ಮನೋಕಾಮನೆಗಳು ಈಡೇರುತ್ತವೆ ಎಂದು ಹೇಳುತ್ತಾರೆ. ವಿಶೇಷವೆಂದರೆ ಇಲ್ಲಿ ದೇವರಿಗೆ ಅರ್ಪಿತವಾದ ನೈವೇದ್ಯವನ್ನು ಭಕ್ತರು ಸೇವಿಸುವ ಪದ್ಧತಿ ಇಲ್ಲ.. ಕಾರ್ತಿಕ ಪೂರ್ಣಿಮೆಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿ ಅಮಾವಾಸ್ಯೆ ಮತ್ತು ಏಕಾದಶಿ ಯಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ.

ಸ್ಥಳ ಪುರಾಣ ಮತ್ತು ಕಥೆ[ಬದಲಾಯಿಸಿ]

  • ಈ ಬಗ್ಗೆ ಮೂರು ಕಥೆ ಇದೆ. .
  • ಇಕ್ಷ್ವಾಕು ವಂಶದ (ಸೂರ್ಯವಂಶ) ಚಕ್ರವರ್ತಿ ಮಾಂಧಾತನು ಇಲ್ಲಿ ತಪಸ್ಸು ಮಾಡಿದ್ದನೆಂದು ಸ್ಥಳ ಪರಾಣ ಹೇಳುತ್ತದೆ.

ಒಮ್ಮೆ ನಾರದನು ವಿಂಧ್ಯ ಪರ್ವತಕ್ಕೆ ಬಂದು ಅದರ ಅಧಿಪತಿ ವಿಂಧ್ಯನ ಹತ್ತಿರ ಮೇರು ಪರ್ವತವು ನಿನಗಿಂತ ಎತ್ತರ ಇರುವುದರಿಂದ ಮೇರುವು ನಿನಗಿಂತ ಶ್ರೇಷ್ಠನೆನಿಸಿದ್ದಾನೆ ಎಂದನಂತೆ. ಅದಕ್ಕೆ ವಿಂಧ್ಯನು ಶಿವನನ್ನು ಕುರಿತು ತಪಸ್ಸು ಮಾಡಿದನು. ಶಿವನು ತನ್ನ ಸ್ವರೂಪವನ್ನು ಎರಡುಭಾಗ ಮಾಡಿ ಒಂದು ಓಂಕಾರೇಶ್ವರ, ಇನ್ನೂಂದು ಪಾರ್ಥಿವ ರೂಪ ಅಮರೇಶ್ವರ ಎಂದು ವಿಭಾಗ ಮಾಡಿ ಪೂಜಿಸಲು ಹೇಳಿ ಅವನಿಗೆ ಬೇಕಾದ ವರ ಕೊಟ್ಟನು . ಆದರೆ ತನ್ನ ಭಕ್ತರಿಗೆ ತೊಂದರೆ ಕೊಡದಿರಲು ತಿಳಿಸಿದನು. ವಿಂದ್ಯನು ಇನ್ನೂ ಹೆಚ್ಚು ಎತ್ತರ ಬೆಳೆದು ಸೂರ್ಯ ಚಂದ್ರರ ಸಂಚಾರಕ್ಕೂ ತೊಂದರೆಯಾಯಿತು. ಆಗ ದೇವತೆಗಳೂ ಜನರೂ ಶಿವ ಭಕ್ತ ಮಹರ್ಷಿ ಅಗಸ್ತ್ಯನಿಗೆ ಸಹಾಯಮಾಡಲು ಕೋರಿದರು. ಮಹರ್ಷಿ ಅಗಸ್ತ್ಯನು ವಿಂಧ್ಯ ಪರ್ವತಕ್ಕೆ ದಕ್ಷಿಣಕ್ಕೆ ಹೋಗಲು ಬಂದನು ಆಗ ವಿಂದ್ಯನು ಅವನಿಗೆ ಬಗ್ಗಿ ನಮಸ್ಕರಿಸಿ ತನ್ನನ್ನು (ತುಳಿದು)ದಾಟಿ ಹೋಗಲು ಹೇಳಿದನು. ಮಹರ್ಷಿ ಅಗಸ್ತ್ಯನು ಹಾಗೆಯೇ ಅವನನ್ನು ದಾಟಿ ತಾನು ಹಿಂತಿರುಗಿ ಬರುವವರೆಗೂ ಹೀಗೆಯೇ ಬಗ್ಗಿರಲು ಹೇಳಿ ದಕ್ಷಿಣ ಭಾರತಕ್ಕೆ ಹೋದನು- ಆದರೆ ಅವನು ಹಿಂತಿರುಗಿ ಉತ್ತರಕ್ಕೆ ಬರಲೇ ಇಲ್ಲ. ಹಾಗಾಗಿ ವಿಂಧ್ಯನು ಬೆಳೆಯುವುದನ್ನು ನಿಲ್ಲಿಸಿ ಬಗ್ಗಿದಂತೆಯೇ ಇದ್ದಾನೆ . ಶಿವನು ಕರುಣಿಸಿಕೊಟ್ಟ ಎರಡೂ ಲಿಂಗಗಳು ಇಲ್ಲಿಯೇ ಇದ್ದು ಪೂಜೆಗೊಳ್ಳುತ್ತಿವೆ.[೧] ಮತ್ತೊಂದು ಕಥೆ ದೇವದಾನವರಿಗೆ ಯುದ್ಧವಾದಾಗ ದೇವತೆಗಳು ದಾನವರಿಗೆ ಸೋತು ದಿಕ್ಕುಕಾಣದೆ ಶಿವನಿಗೆ ಮೊರೆ ಹೋದಾಗ ಶಿವನು ಓಂಕಾರೇಶ್ವರನಾಗಿ ಬಂದು ದಾನವರನ್ನು ಸೋಲಿಸಿ ಅಲ್ಲಿಯೆ ನೆಲೆಸಿದನೆಂದು ಪ್ರತೀತಿ ಇದೆ.

ಇತರ ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

  • ಓಂಕಾರೇಶ್ವರನ ದೇವಾಲಯ ನೋಡಿದ ನಂತರ ಅಮಲೇಶ್ವರ ದೇವಾಲಯಯವನ್ನು ನೋಡಬೇಕು. ಅಲ್ಲದೆ ಇನ್ನೊಂದು ವಿಶೇಷವೆಂದರೆ ಇಲ್ಲಿ ನರ್ಮದಾನದಿಯ ಮಣ್ಣಿನಿಂದ ಸಣ್ಣ ಸಣ್ಣ ಲಿಂಗವನ್ನು ಮಾಡಿ ಪೂಜೆ ಮಾಡಿಸುತ್ತಾರೆ. ಈ ಸಣ್ಣ ಸಣ್ಣ ಶಿವಲಿಂಗ ಮಾಡಿ ಪೂಜೆ ಮಾಡಿಸುತ್ತಾರೆ . ಹೀಗೆ ಸಣ್ಣ ಲಿಂಗವನ್ನು ಪೂಜೆ ಮಾಡಿದರೆ ಮಾತ್ರ ಓಂಕಾರೇಶ್ವರನ ದರ್ಶನದ ಪುಣ್ಯ ಲಭಿಸುವುದೆಂದು ಹೇಳುತ್ತಾರೆ. ನಂತರ ಅನ್ನಪೂರ್ಣೇಶ್ವರೀ ದೇವಸ್ಥಾನ ನೋಡಲೇಬೇಕಾದ್ದು. ಇಲ್ಲಿ ಕಾಳೀ ಮತ್ತು ಸರಸ್ವತಿಯರೂ ಇದ್ದಾರೆ. ಕೊನೆಯಲ್ಲಿ ಋಣಮುಕ್ತೇಶ್ವರನ ದರ್ಶನ ಮಾಡಬೇಕು. ಇಲ್ಲಿದೇವರಿಗೆ ಕಡಲೆಬೇಳೆ ಅರ್ಪಿಸಿದರೆ ಎಲ್ಲಾಋಣಗಳಿಂದ ಮುಕ್ತಿ ದೊರೆಯುವುದೆಂದು ಹೇಳುವರು. ಹೊಸದಾದ ಗಜಾನನ ಮಹಾರಾಜ್ ದೇವಾಲಯವೂ ನೋಡುವಂತಹುದು.

ರಾತ್ರಿಯ ದೀಪೋತ್ಸವ :[ಬದಲಾಯಿಸಿ]

ಓಂಕಾರೇಶ್ವರನಿಗೆ ರಾತ್ರಿ ದೀಪಾರತಿ ನಡೆಯುವ ದೀಪಾರತಿ ನೋಡಲು ಚೆನ್ನಾಗಿರುವುದು. ಎಲೆಗಳನ್ನು ಬಟ್ಟಲಿನಂತೆ ಮಡಚಿ, ಮದ್ಯದಲ್ಲಿ ಎಣ್ಣೆ ಬತ್ತಿ ಇಟ್ಟು ದೀಪ ಹಚ್ಚಿ ನದಿಯಲ್ಲಿ ತೇಲಿಬಿಡುತ್ತಾರೆ ಸಾವಿರಾರು ಸಂಖ್ಯೆಯಲ್ಲಿ ನದಿಯಲ್ಲಿ ತೇಲುತ್ತಾ ಹೋಗುವ ದೀಪಗಳನ್ನು ನೋಡುವುದು ಒಂದು ಅವಿಸ್ಮರಣೀಯ ದೃಶ್ಯ. ಅನುಕೂಲ ವಿದ್ದವರು ರಾತ್ರಿ ಅಲ್ಲಿ ಉಳಿದು ನೋಡಬಹುದು..

ಆಧಾರ :[ಬದಲಾಯಿಸಿ]

  • ದ್ವಾದಶ ಜ್ಯೋತಿರ್ಲಿಂಗಗಳು ಕೈ ಹೊತ್ತಿಗೆ- ಪ್ರವಾಸ ಲೇಖನ ಗ್ರಂಥ_ ಬರೆದವರು ಶ್ರೀಮತಿ ಚೂಡಾಮಣಿ ರಾಮಚಂದ್ರ ಸಾಗರ ಶಿವಮೊಗ್ಗ ಜಿಲ್ಲೆ
  • https://en.wikipedia.org/wiki/Omkareshwar

ನೋಡಿ:[ಬದಲಾಯಿಸಿ]

ಬಹ್ಯಾಕೊಂಡಿಗಳು[ಬದಲಾಯಿಸಿ]

ಉಲ್ಲೆಖಣ[ಬದಲಾಯಿಸಿ]

  1. ೧.೦ ೧.೧ "ಆರ್ಕೈವ್ ನಕಲು". Archived from the original on 2013-02-08. Retrieved 2013-09-27.