ಶ್ರೀ ಅರವಿಂದ
Wikipedia ಇಂದ
ಶ್ರೀ ಅರವಿಂದ (শ্রী অরবিন্দ : ಶ್ರೀ ಒರೊಬಿಂದೋ) (ಆಗಸ್ಟ್ ೧೫, ೧೮೭೨ - ಡಿಸೆಂಬರ್ ೫, ೧೯೫೦) ಭಾರತದ ಸ್ವಾತಂತ್ರ್ಯ ಚಳುವಳಿಯ ಹೋರಾಟಗಾರ, ತತ್ವಜ್ಞಾನಿ, ಹಾಗು ಯೋಗಿಯಾಗಿದ್ದವರು.
ಕಲಕತ್ತೆಯಲ್ಲಿ "ಒರೊಬಿಂದೋ ಎಕ್ರಾಯ್ಡ್ ಘೋಷ್" ಎಂದು ಜನಿಸಿದ ಇವರನ್ನು ಚಿಕ್ಕವರಿದ್ದಾಗಲೇ ಅವರ ತಂದೆ ಇಂಗ್ಲೆಂಡ್ಗೆ ವಿದ್ಯಾಭ್ಯಾಸಕ್ಕೆ ಕಳುಹಿಸಿದರು. ಹಿಂದಿರುಗಿದ ನಂತರ ೧೮೯೩ ರಲ್ಲಿ ಬರೋಡಾದಲ್ಲಿ ಕೆಲಸಕ್ಕೆ ಸೇರಿದರು.ಅವರ ಹರಿತವಾದ ಲೇಖನಗಳಿಂದ, ಭಾಷಣಗಳಿಂದ ಸಹಸ್ರಾರು ಜನರು ಪ್ರಭಾವಿತರಾದರು. ಪಂಡಿತ ಮದನ ಮೋಹನ ಮೌಲವೀಯ, ಸುಭಾಸಚಂದ್ರ ಭೋಸ್, ರವೀಂದ್ರ ನಾಥ್ ಠಾಕೂರ್ ಇತ್ತ್ಯಾದಿ ಮಹಾನ್ ವ್ಯಕ್ತಿಗಳು ಶ್ರೀ ಅರವಿಂದರ ಪ್ರಭಾವಕ್ಕೆ ಒಳಗಾದರು. ದ.ರಾ.ಬೇಂದ್ರೆ, ಕುವೆಂಪು, ಮಧುರ ಚೆನ್ನರು, ಶಂ.ಬಾ.ಜೋಶಿ, ಸ.ಸ,ಮಾಳವಾಡ, ಶಾಂತಾದೇವಿ ಮಾಳವಾಡ, ಮುಂತಾದ ಮಹಾನ್ ಕನ್ನಡಿಗರೂ ಕೂಡ ಇವರ ಕೃತಿಗಳಿಂದ ಪ್ರಭಾವಿತರಾದರು.
