ಶ್ರೀಪಾದರಾಜರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶ್ರೀಪಾದರಾಯರು ಇಂದ ಪುನರ್ನಿರ್ದೇಶಿತ)

ಶ್ರೀಪಾದರಾಜರು (೧೩೮೯ - ೧೪೮೭) ಕನ್ನಡ ಹರಿದಾಸ ಸಾಹಿತ್ಯದ ಪಿತಾಮಹರು ಶ್ರೀಪಾದರಾಜರು. ಸರಳ ಕನ್ನಡ ಭಾಷೆಯಲ್ಲಿ ಧರ್ಮಗ್ರಂಥಗಳನ್ನು ಪರಿವರ್ತಿಸಬೇಕೆಂಬ ಅಭಿಲಾಷೆ ಇವರಲ್ಲಿ ಉಂಟಾದದು ಅಂದಿನ ಪರಿಸ್ಥಿತಿಯಲ್ಲಿ ಕ್ರಾಂತಿಕಾರಕವೇ ಆಗಿತ್ತು. ಇದಕ್ಕಾಗಿ ಭಾಗವತ ತಂಡವೊಂದನ್ನು ಏರ್ಪಡಿಸಿ ಪೂಜಾಕಾಲದಲ್ಲಿ ವೇದ ಪಾರಾಯಣ ಮಾಡಿದಂತೆ ಭಾಗವತರ ಮೂಲಕ ಕನ್ನಡ ದೇವರನಾಮಗಳನ್ನು ಹಾಡಿಸಿದರು. ಹೀಗೆ ಕನ್ನಡ ಗೀತೆಗಳಿಗೆ ಆಧ್ಯಾತ್ಮಿಕ ತತ್ವಗಳ ಸ್ಥಾನಮಾನವನ್ನು ಕಲ್ಪಸಿದರ ಜೊತೆಗೆ ಅವುಗಳ ಮೂಲಕ ದ್ವೈತ ವೇದಾಂತ ತತ್ವವನ್ನು ಅಚ್ಚಕನ್ನಡದಲ್ಲಿ ಜನ ಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವಂತೆ ಮಾಡಿದರು.

ಜೀವನ[ಬದಲಾಯಿಸಿ]

ಶ್ರೀಪಾದರಾಜರ ಜನ್ಮ ಸ್ಥಳ ಚನ್ನಪಟ್ಟಣ ತಾಲೂಕಿನಲ್ಲಿ ಅಬ್ಬೂರು. ಮೂಲ ಹೆಸರು ಲಕ್ಷ್ಮೀನಾರಾಯಣ. ತಂದೆಯ ಹೆಸರು ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ. ಗುರು ಸ್ವರ್ಣವರ್ಣತಿರ್ಥರು.

ಇವರನ್ನು ಶಿಷ್ಯನಾದ ವ್ಯಾಸರಾಯರನು ಆದಿಶೇಷನ ಪೋಲ್ವ ಮುನಿ ಎಂದೂ , ಪುರಂದರದಾಸನ ಮಗ ಮಧ್ವಹರಿದಾಸ ವರುಧ್ರುವನ ಅವತಾರ ಎಂದೂ ಸಂಭಾವಿಸಿರುವುದು ಸಾರ್ಥಕವಾಗಿದೆ. ಇವರ ಪ್ರಮುಖ ಶಿಷ್ಯರು ವ್ಯಾಸತೀರ್ಥರು.

ಬೃಂದಾವನ[ಬದಲಾಯಿಸಿ]

ಶ್ರೀಪಾದರಾಜರು ಕರ್ನಾಟಕಕೋಲಾರ ಜಿಲ್ಲೆಯ ಮುಳಬಾಗಿಲು ಎನ್ನುವ ಗ್ರಾಮದಲ್ಲಿ ವಿದ್ಯಾ ಕೇಂದ್ರವನ್ನು ಸ್ಥಾಪಿಸಿದರು. ಇಲ್ಲಿ ಮಠ ಮತ್ತು ಬೃಂದಾವನವಿದೆ.

ಸಾಹಿತ್ಯ ಕೃತಿಗಳು[ಬದಲಾಯಿಸಿ]

ಕನ್ನಡ ಭಾಷೆಯಲ್ಲಿ ಹರಿಭಕ್ತಿಯ ಹಿರಿಮೆ ಹಾಗೂ ಉತ್ತಮ ಜೀವನ ಮಾಲ್ಯಗಳನ್ನು ಬಿತ್ತರಿಸುವ ನೂರಾರು- ಉಗಾಭೋಗ, ಸುಳಾದಿ, ಕೀರ್ತನೆ, ದಂಡಕ, ವೃತ್ತನಾಮಾದಿ- ಕೃತಿಗಳನ್ನು ರಚಿಸಿ ದೇವರ ಪೂಜೆಯ ಸಮಯದಲ್ಲಿ ಹಾಡಿದರು.
೧. ಭ್ರಮರಗೀತೆ
೨. ವೇಣುಗೀತೆ
೩. ಗೋಪಿಗೀತೆ

ಕೀರ್ತನೆಗಳು[ಬದಲಾಯಿಸಿ]

ರಂಗವಿಠಲ ಎಂಬ ಅಂಕಿತ ನಾಮದಲ್ಲಿ ಅನೇಕ ದೇವರನಾಮಗಳು, ಕೀರ್ತನೆಗಳನ್ನು ರಚಿಸಿದ್ದಾರೆ. ಇವರ ಜನಪ್ರಿಯವಾಗಿರುವ ಕೀರ್ತನೆಗಳು:-

೧.ನಾ ನಿನಗೇನು ಬೇಡುವುದಿಲ್ಲ-ಎನ್ನ.        ಹೃದಯ ಕಮಲದೊಳು ನೆಲಸಿರು ಹರಿಯೇ||ಪ||
೨.ಯಾರಿಗೆ ಯಾರುಂಟು ಗುರುವಿನ ಸಂಸಾರ.  ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ||ಪಲ್ಲವಿ||
೩.ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ||ಪ||
೪.ಭೂಷಣಕೆ ಭೂಷಣ ಇದು ಭೂಷಣ.    ಶೇಷಗಿರಿವಾಸ ಶ್ರೀ  ವೆಂಕಟೇಶ್ವರ||ಪ||
೫.ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ.                          ಸೃಷ್ಟಿವಂದಿತ ಪಾದಪದುಮ ಶ್ರೀ ಹರಿಯೇ||ಅ.ಪ|| 
                               
೬.ಕಾಡ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ||ಪ||.

ಮಹಿಮೆ ಸಾಲದೆ[ಬದಲಾಯಿಸಿ]

ಮಹಿಮೆ ಸಾಲದೆ ಇಷ್ಱೆ ಮಹಿಮೆ ಸಾಲದೆ ||ಪ||

ಅಹಿ‌ಶಯನನ ಒಲುಮೆಯಿಂದ ಮಹಿಳೊಮ್ಮೆ ಶ್ರೀಪಾದರಾಯರ ||ಅ.ಪ||

ಮುತ್ತಿನ ಕವಚ ಮೇಲ ತುರಾಯಿ ರತ್ನ ಕೆತ್ತಿದ ಕರ್ಣ ಕುಂಡಲ ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೇರದು ಬರಲು ||೧||

ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಖಂಗಳನ್ನ ಭುಂಜಿಸಿ ನರರು ನಗಲು ಶ್ರೀ ಕೃಷ್ಣನ ಪರಮದಿಂದ ಹುಸಿಯಮಾಡಿದ ||೨||

ವಿಪ್ರಗೆ ಬ್ರಹ್ಮತ್ಯೆ ದೋಷ ಬರಲು ಕ್ಷಿಪ್ತ ಶಂಖೊದಕದಿ ಕಳೆದು ಅಪ್ರ ಬುದ್ಧರು ದೊಷಿಸೆ ಗೇರೆಣ್ಣೆ ಕಪ್ಪು ಹಸನ ಶುಭ್ರ ಮಾಡಿದ ||೩||

ಹೊರಗಿನ ಸಂಪರ್ಕಗಳು[ಬದಲಾಯಿಸಿ]