ಶಿವರಾಜ್‍ಕುಮಾರ್
ವಿಕಿಪೀಡಿಯ ಇಂದ
(ಶಿವರಾಜಕುಮಾರ್ ಇಂದ ಪುನರ್ನಿರ್ದೇಶಿತ)
ಶಿವರಾಜ್‍ಕುಮಾರ್ ಕನ್ನಡದ ಪ್ರಸಿದ್ಧ ಚಿತ್ರನಟ. ಕನ್ನಡ ಚಿತ್ರಗಂಗದ ಮೇರುನಟ ಡಾ. ರಾಜ್‍ಕುಮಾರ್ ಅವರ ಮಗ. ೧೯೮೬ನೇ ಇಸವಿಯಲ್ಲಿ ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ.
ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದಿಗೂ, ಅತ್ಯುತ್ತಮ ನೃತ್ಯಗಾರ ಎಂಬ ವಿಮರ್ಶಕರ ಅಭಿಪ್ರಾಯದ ಮೇರೆಗೆ 'ನಾಟ್ಯಸಾರ್ವಭೌಮ' ಎಂಬ ಬಿರುದಿಗೂ ಪಾತ್ರರಾಗಿರುವರು. ಇವರು ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ, ಅಂಡಮಾನ್, ಸಾರ್ವಭೌಮ ಮುಂತಾದ ಹಲವಾರು ಚಿತ್ರಗಳಲ್ಲಿ ಹಿನ್ನೆಲೆಗಾಯನ ಕೂಡ ಮಾಡಿದ್ದಾರೆ.
ಜನ್ಮದಿನ - ಜುಲೈ ೧೪
ಶಿವರಾಜ್‍ಕುಮಾರ್ ಅವರ ಪತ್ನಿಯ ಹೆಸರು ಗೀತಾ ಶಿವರಾಜ್‍ಕುಮಾರ್. ಇವರ ಪುತ್ರಿಯ ಹೆಸರು ನಿವೇದಿತಾ. ಈಕೆ, ಅಂಡಮಾನ್ ಚಿತ್ರದಲ್ಲಿ ನಟಿಸಿದ್ದಾಳೆ.
ಇವರ ಕಿರಿಯ ಸಹೋದರರಾದ ರಾಘವೇಂದ್ರ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಕೂಡ ಕನ್ನಡ ಚಿತ್ರಂಗದ ನಾಯಕನಟರುಗಳು.
ಪರಿವಿಡಿ |
ಪ್ರಶಸ್ತಿಗಳು [ಬದಲಾಯಿಸಿ]
ರಾಜ್ಯ ಪ್ರಶಸ್ತಿಗಳು [ಬದಲಾಯಿಸಿ]
- ಓಂ- ೧೯೯೫ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
- ಹೃದಯ ಹೃದಯ - ೧೯೯೯ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
- ಚಿಗುರಿದ ಕನಸು - ೨೦೦೩ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
- ಜೋಗಿ - ೨೦೦೬ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
ಉಜ್ವಲ ಪ್ರಶಸ್ತಿ [ಬದಲಾಯಿಸಿ]
- ಆನಂದ್ - ೧೯೮೬
- ಭೂಮಿತಾಯಿಯ ಚೊಚ್ಚಲ ಮಗ - ೧೯೯೮
ಚಿತ್ರ ರಸಿಕರ ಸಂಘ ಪ್ರಶಸ್ತಿ [ಬದಲಾಯಿಸಿ]
- ಮಿಡಿದ ಶ್ರುತಿ - ೧೯೯೨
- ಜನುಮದ ಜೋಡಿ - ೧೯೯೬
- ಎ.ಕೆ.೪೭ - ೧೯೯೯
ಫಿಲಮ್‍ಫೇರ್ ಪ್ರಶಸ್ತಿ [ಬದಲಾಯಿಸಿ]
- ಓಂ- ೧೯೯೫
- ನಮ್ಮೊರ ಮಂದಾರ ಹೂವೆ - ೧೯೯೬
- ಎ.ಕೆ.೪೭ - ೧೯೯೯
- ತಮಸ್ಸು - ೨೦೧೦
ಹೀರೋಹೋಂಡ ಎಕ್ಸ್ಪ್ರೆಸ್ ಪ್ರಶಸ್ತಿ [ಬದಲಾಯಿಸಿ]
- ಓಂ - ೧೯೯೫
- ಜನುಮದ ಜೋಡಿ - ೧೯೯೬
- ಎ.ಕೆ.೪೭ - ೧೯೯೯
ಆರ್ಯಭಟ ಪ್ರಶಸ್ತಿ [ಬದಲಾಯಿಸಿ]
- ಜನುಮದ ಜೋಡಿ - ೧೯೯೬
ಸ್ಕ್ರೀನ್ ಅವಾರ್ಡ್ಸ್ [ಬದಲಾಯಿಸಿ]
- ನಮ್ಮೊರ ಮಂದಾರ ಹೂವೆ - ೧೯೯೬
ಎಸ್.ಐ.ಸಿ.ಎ. ವಿಶೇಷ ಜ್ಯೂರಿ ಪ್ರಶಸ್ತಿ [ಬದಲಾಯಿಸಿ]
- ತವರಿಗೆ ಬಾ ತಂಗಿ - ೨೦೦೨
- ಚಿಗುರಿದ ಕನಸು - ೨೦೦೪
ಹಲೋ ಗಾಂಧಿನಗರ ಪ್ರಶಸ್ತಿ [ಬದಲಾಯಿಸಿ]
- ಚಿಗುರಿದ ಕನಸು - ೨೦೦೪
ಈ ಟಿವಿ ವಾಟಿಕಾ ಪ್ರಸಸ್ತಿ [ಬದಲಾಯಿಸಿ]
- ಜೋಗಿ - ೨೦೦೫
ಮೈಲಿಗಲ್ಲುಗಳು [ಬದಲಾಯಿಸಿ]
- ೧ನೇ ಚಿತ್ರ: ಆನಂದ್ (೧೯೮೬)
- ೨೫ನೇ ಚಿತ್ರ: ಮನಮಿಡಿಯಿತು (೧೯೯೫)
- ೫೦ನೇ ಚಿತ್ರ: ಏ.ಕೆ. ೪೭ (೧೯೯೯)
- ೭೫ನೇ ಚಿತ್ರ: ಶ್ರೀರಾಮ್ (೨೦೦೩)
- ೧೦೦ನೇ ಚಿತ್ರ: ಜೋಗಯ್ಯ (೨೦೧೧)
ಅಭಿನಯಿಸಿದ ಚಲನಚಿತ್ರಗಳು [ಬದಲಾಯಿಸಿ]
ಈ ಹೃದಯ ನಿನಗಾಗಿ ಚಿತ್ರದಲ್ಲಿ ಒಂದು ಹಾಡಿನಲ್ಲಿ ನಟಿಸಿದ್ದಾರೆ
|
|||||||
