ಶಿವಯೋಗಮಂದಿರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಂದ 1909 ರಲ್ಲಿ ಸ್ಥಾಪನೆಗೊಂಡ ಶಿವಯೋಗಮಂದಿರ ಬದಾಮಿ ಯಿಂದ ಸುಮಾರು ೧೪ ಕಿ. ಮೀ .ದೂರದಲ್ಲಿದೆ. ಪ್ರಶಾಂತ ವಾತಾವರಣ ಹಾಗು ಮಲಪ್ರಭಾ ನದಿಯ ತೀರ ದಲ್ಲಿರುವದರಿಂದ ಸುಂದರವಾಗಿಯೂ ಅಲ್ಲದೆ ಆಧ್ಯಾತ್ಮಿಕ ಕೇಂದ್ರವೂ ಆಗಿದೆ.ಶಿವಯೋಗಮಂದಿರ ಧ್ಯಾನಾಸ್ಥ ಕರ ಕೇಂದ್ರ ಬಿಂದು ಕೂಡ. ಕಳೆದ ವರ್ಷ ಶಿವಯೋಗ ಮಂದಿರ ಶತಮಾನೋತ್ಸ್ವವನ್ನು ಆಚರಿಸಿತು. ಶಿವಯೋಗ ಮಂದಿರದಲ್ಲಿ ವೀರಶೈವ ವಿದ್ಯಾರ್ಥಿ ಗಳಿಗೆ ತರಬೇತಿ ಮತ್ತು ವಟುಗಳಿಗೆ ದೀಕ್ಷೆ ಕೊಟ್ಟು ಸನ್ಯಾಸಿ ಜೀವನಕ್ಕೆ ತಯಾರಿ ಮಾಡುತ್ತಾರೆ.ಇಲ್ಲಿ ಸುಮಾರು ೩೦೦ ವಿದ್ಯಾರ್ಥಿಗಳಿಗೆ ಸುಸಜ್ಜಿತ ವಿದ್ಯಾರ್ಥಿನಿಲಯ ಹಾಗು ವಾಚನಾಲಯ ವಿದೆ. ವಿದ್ಯಾರ್ಥಿಗಳಿಗೆ ಕಠಿಣ ವಿದ್ಯಾಭ್ಯಾಸ ಅಂದರೆ ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ಯೋಗ, ವ್ಯಾಯಾಮ, ಪ್ರಾರ್ಥನೆ. ಸಿದ್ಧ ಸಾಧಕ ಸ್ವಾಮೀಜಿ ಗಳಿಂದ ಪ್ರವಚನ, ಪಾಠ ಗಳು ನಡೆಯುತ್ತವೆ. ಇಲ್ಲಿ ವಿದ್ಯಾಭ್ಯಾಸ ಮುಗಿದ ನಂತರ ಮಠ ಗಳಿಗೆ ಮಠಾಧಿಪತಿಗಳಾಗುತ್ತಾರೆ.

ಇಲ್ಲಿ ಗೋವು ಗಳನ್ನು ಸಾಕಿರುವದರಿಂದ ಗೋವಿನ ಸಗಣಿ ಯಿಂದ ವಿಭೂತಿ ತಯಾರಿಸಲು ವಿಭೂತಿ ತಯಾರಿಕ ಘಟಕವಿದೆ. ಶ್ರಧ್ಧೆ ಯಿಂದ ಹಾಗು ಭಕ್ತಿ ಯಿಂದ ವಿಭೂತಿ ಯನ್ನು ಕೊಳ್ಳುತ್ತಾರೆ. ಇದನ್ನು ಕಂಡಾಗ ಗೋವಿನ ಹಾಡು ನೆನಪಾಗದೆ ಇರಲಾರದು. ಇಟ್ಟರೆ ಸಗಣಿ ಯಾದೆ, ತಟ್ಟಿದರೆ ಕುರುಳಾದೆ. ಸುಟ್ಟರೆ ನೊಸಲಿಗೆ ವಿಭೂತಿಯಾದೆ ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ, ನೀನಾರಿಗಾದೆಯೊ ಎಲೆ ಮಾನವ, ಹರಿ ಹರಿ ಗೋವು ನಾನು.

ಆಧಾರ[ಬದಲಾಯಿಸಿ]

  1. www.youtube.com/watch?v=-PHZllOyCUg‎
  2. www.hindu.com/2010/04/08/stories/2010040852350300.htm‎