ಶಿವಮೂರ್ತಿ ಶರಣರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿತ್ರದುರ್ಗಮುರುಘಾ ಮಠಶಿವಮೂರ್ತಿ ಶರಣರು ವಿಚಾರ ಕ್ರಾಂತಿಗೆ ಹೆಸರು ಮಾಡಿದವರು. ಗೊಡ್ಡು ಸಂಪ್ರದಾಯಗಳ ವಿರುದ್ಧ, ಸಾಮಾಜಿಕ ಅನಿಷ್ಟಗಳ ವಿರುದ್ಧ, ಅಸ್ಪೃಶ್ಯತೆಯಂಥ ಸಾಮಾಜಿಕ ಪಿಡುಗಿನ ವಿರುದ್ಧ ಸಮರವನ್ನೇ ಸಾರಿದ್ದಾರೆ. ಜನರಲ್ಲಿ ವೈಜ್ಞಾನಿಕ ತಿಳುವಳಿಕೆಗಳ ಬಗ್ಗೆ ಅರಿವು ತರಲು ಶ್ರಮಿಸುತ್ತಿದ್ದಾರೆ.

ಶಿವಮೂರ್ತಿ ಶರಣರು ಮಾಡುತ್ತಿರುವ ಮತ್ತೊಂದು ಕ್ರಾಂತಿ ಎಂದರೆ, ಜಾತಿಗೊಬ್ಬ ಸ್ವಾಮೀಜಿ ನೇಮಿಸುವುದು. ಈ ಪ್ರಕ್ರಿಯೆ ಶ್ಲಾಘನೆಗೆ ವೈಚಾರಿಕವಾಗಿ ಒಳಪಟ್ಟರೂ ಸಮಾಜದ ವಿಘಟನೆಗೆ ಕಾರಣೀಭೂತವಾಗುತ್ತದೆಂದು ವಿವಾದಗ್ರಸ್ತವಾಗಿದೆ. ಜೊತೆಗೆ ಜಾತಿಗೊಂದು ಮಠ ಮಾಡುವುದರಿಂದ ನಿರ್ವಹಣೆ ಆಗುವ ಆರ್ಥಿಕ ಸಂಕಷ್ಟಗಳೂ ಈ ಕಾರಣಗಳಲ್ಲಿ ಸೇರಿವೆ.

ಎಸ್.ಕೆ.ಬಸವರಾಜನ್‌ರವರು ಮಠದ ಆಡಳಿತಾಧಿಕಾರಿಯಾಗಿ ಹದಿನೈದಕ್ಕೂ ಹೆಚ್ಚು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಶ್ರೀ ಮಠದ ಹಣವನ್ನು ದುರುಪಯೋಗಮಾಡಿಕೊಂಡ ಆರೋಪಗಳೂ ಇವರ ಮೇಲಿವೆ. ಈ ಎಲ್ಲಾ ಕಾರಣಗಳಿಂದಾಗಿ ಶಿವಮೂರ್ತಿ ಶರಣರು ೨೦೦೮ರಲ್ಲಿ ಇವರನ್ನು ಮಠದ ಉಸ್ತುವಾರಿಯ ಕಾರ್ಯ ಕಲಾಪಗಳಿಂದ ಮುಕ್ತಗೊಳಿಸಿದ್ದಾರೆ.