ಶಿವನೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶಿವನೆಮರ
[[image: ]]
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
ವಿಭಾಗ: ಹೂ ಬಿಡುವ ಸಸ್ಯ
ತರಗತಿ: Magnoliopsida
ವರ್ಗ: Lamiales
ಕುಟುಂಬ: ವರ್ಬೆನಾಸಿ
ಪ್ರಜಾತಿ: Gmelina
ಜಾತಿ: G. arborea
ದ್ವಿಪದಿ ನಾಮ
Gmelina arborea
Roxb.

ಶಿವನೆ(ಗಮಾರಿ)ಮದ್ಯಮ ಪ್ರಮಾಣದ ಮರ.ಇದು ಭಾರತದಾದ್ಯಂತ ಬೆಳೆಯುತ್ತದೆ.ದಕ್ಷಿಣ ಎಷಿಯಾದ ಹೆಚ್ಚಿನ ಎಲ್ಲಾ ದೇಶಗಳಲ್ಲಿ ಕಂಡುಬರುತ್ತದೆ.


ಪರಿವಿಡಿ

[ಬದಲಾಯಿಸಿ] ಸಸ್ಯ ಶಾಸ್ತ್ರೀಯ ವರ್ಗೀಕರಣ

ಇದು ವರ್ಬೆನಾಸಿ ಕುಟುಂಬಕ್ಕೆ ಸೇರಿದ್ದು Gmelina arborea ಗ್ಮೆಲಿನ ಅರ್ಬೊರಿಯ ಎಂದು ಸಸ್ಯಶಾಸ್ತ್ರೀಯ ಹೆಸರು.

ಎಲೆಗಳು (ಕಲ್ಕತ್ತಾ).
ಹೂವು (ಕಲ್ಕತ್ತಾ).


[ಬದಲಾಯಿಸಿ] ಸಸ್ಯದ ಗುಣಲಕ್ಷಣಗಳು

ಇದು ಬಹಳ ವೇಗವಾಗಿ ಬೆಳೆಯುವ ಮರ.ಹೃದಯಾಕಾರದ ಎಲೆಗಳು (ಚಿತ್ರ ನೋಡಿ)ತೊಗಟೆ ಎಳೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ.ಹೊಪ್ಪಳಿಕೆ ಕಳಚುತ್ತದೆ.ದಾರುವು ಹಳದಿ ಛಾಯೆ ಹೊಂದಿದ್ದು,ಮೃದುವಾಗಿರುತ್ತದೆ.ಹಗುರವಾದರೂ ಸಮಾನ ಕಣ ರಚನೆ ಹೊಂದಿರುತ್ತದೆ.ಬಲಯುತವಾಗಿದ್ದು ಸೀಳಿಕೆ,ಸುರುಟುವಿಕೆ ಇರುವುದಿಲ್ಲ.

[ಬದಲಾಯಿಸಿ] ಉಪಯೋಗಗಳು

ಇದು ಉತ್ತಮ ಜಾತಿಯ ಮರವಾಗಿದ್ದು ಹಲವಾರು ಉಪಯೋಗಗಳನ್ನು ಹೊಂದಿದೆ.ಹಲಗೆ,ಪಿಠೋಪಕರಣ,ಪೆಟ್ಟಿಗೆ,ಬಾಚಣಿಗೆ ಮುಂತಾದ ಮರ ಕೆಲಸಗಳಿಗೆ ಯೋಗ್ಯ ಮರವಾಗಿದೆ.ಕೃತಕ ಅವಯವಗಳ ತಯಾರಿಕೆಯಲ್ಲಿ ಬಳಕೆಯಲ್ಲಿದೆ.ಪದರಹಲಗೆಗಳ ತಯಾರಿಕೆಯಲ್ಲಿ ಉಪಯುಕ್ತ.

[ಬದಲಾಯಿಸಿ] ಅಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

"http://kn.wikipedia.org/w/index.php?title=ಶಿವನೆ&oldid=244042" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು