ಶಿವಕೋಟಿ ಆಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಈತನ ಕಾಲ ಹತ್ತನೇ ಶತಮಾನ ಎಂದು ಸಂಶೋಧಕರು ಗುರುತಿಸಿದ್ದರೆ. ಈತನ ಸ್ಥಳ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಕೋಗಳಿ ನಾಡಿನವನು. ಈತನ ಬಗ್ಗೆ ಇವನು ಜೈನ ಮತಾವಲಂಬಿ ಎಂಬುದನ್ನು ಬಿಟ್ಟರೆ ಬೇರೆ ಯಾವುದೇ ಮಾಹಿತಿ ಲಭ್ಯವಿಲ್ಲ. ಈತನು ರಚಿಸಿದ "ವಡ್ಡಾರಾಧನೆ"ಹಳೆಗನ್ನಡದ ಅತ್ಯಂತ ಪ್ರಾಚೀನ ಕೃತಿ. ಹರಿಶೇಣನ ಬೃಹತ್ಕಥಾಕೋಶ ಎಂಬ ಸಂಸ್ಕೃತ ಕೃತಿಯ ೧೯ ಕಥೆಗಳ ಸಂಗ್ರಹ ಈ ಕೃತಿ. "ವಡ್ಡಾರಾಧನೆ" ಎಂದರೆ ವೃದ್ಧರ ಆರಾಧನೆ ಎಂದರ್ಥ.