ಶಿಕಾರಿಪುರ ಹರಿಹರೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Shikhari (1).jpg
'ಶಿಕಾರಿಪುರ ಹರಿಹರೇಶ್ವರ'

ಜನನ[ಬದಲಾಯಿಸಿ]

'ಶಿಕಾರಿಪುರ ಹರಿಹರೇಶ್ವರರು,' ಜನಿಸಿದ್ದು, ಮಲೆನಾಡಿನ ’ಶಿಕಾರಿಪುರ’ ದಲ್ಲಿ. ಅವರು ಬೆಳೆದದ್ದು ಜಾಗತಿಕವಾಗಿ, ರಸ್ತೆ, ಸೇತುವೆಗಳ ವಿನ್ಯಾಸದಲ್ಲಿ, ಆಸಕ್ತಿಹೊಂದಿದ ವಾತಾವರಣದಲ್ಲಿ. 'ಹರಿಹರೇಶ್ವರ ರವರು' ಅಷ್ಟೇ ಮುತುವರ್ಜಿಯಿಂದ 'ಕನ್ನಡವನ್ನು ಕಟ್ಟುವ ಕೆಲಸ'ವನ್ನು ಕೈಗೆತ್ತಿಕೊಂಡಿದ್ದರು. ಬೆಂಗಳೂರಿನಲ್ಲಿ ’ಆರ್.ವಿ.ಇಂಜಿನಿಯರಿಂಗ್ ಕಾಲೇಜ್ ನಲ್ಲಿ, ವಿದ್ಯಾಭ್ಯಾಸವನ್ನು ಮುಗಿಸಿ, ಮದ್ರಾಸಿನ 'ನೈವೇಲಿ’ ಯಲ್ಲಿ ತಮ್ಮ ಪ್ರಥಮ-ನೌಕರಿಯನ್ನು ಹಿಡಿದರು. ವಾಪಸ್ ಬೆಂಗಳೂರಿಗೆ ಬಂದು, ಉಪನ್ಯಾಸಕರಾಗಿ ಕೆಲಸಮಾಡಿದರು. ಅದೇ ಸಮಯದಲ್ಲಿ, ಬೆಂಗಳೂರಿನ ’ಛಾಯಾರವಿ ಕಲಾವಿದರ’ ಜೊತೆ ಸಂಪರ್ಕ ಬೆಳೆಯಿತು. ಹರಿಯವರ ಬಾಳಗೆಳತಿ, ’ನಾಗಲಕ್ಷ್ಮಿ ಯವರ ಜತೆಯಾದದ್ದೂ ಆಗಲೇ. ಸತಿ-ಪತಿಯರಿಬ್ಬರೂ ರಂಗಭೂಮಿಯ ಬಗ್ಗೆ ವಿಶೇಷ ಕಾಳಜಿವಹಿಸಿದರು.[೧]

ಇರಾನ್ ಮತ್ತು ಅಮೆರಿಕಗಳಲ್ಲಿ ನೌಕರಿ[ಬದಲಾಯಿಸಿ]

ಚಿತ್ರ:Hari.Rajyotsava.jpg
'ಕರ್ನಾಟಕ ಪ್ರಶಸ್ತಿ'

ಹರಿಹರೇಶ್ವರರವರು ಹೆಚ್ಚಿನ ಹಣಸಂಗ್ರಹಿಸಲು ನೌಕರಿಗಾಗಿ ಇರಾನ್ ದೇಶಕ್ಕೆ ಹೋದರು. ಅಲ್ಲಿಂದ ಅಮೆರಿಕ ಸಂಯುಕ್ತ ಸಂಸ್ಥಾನ ಕ್ಕೆ ಹೊರಟರು. ಅಲ್ಲಿ ಅಕ್ಕ ಎಂಬ 'ಕನ್ನಡ ಸಮ್ಮೇಳನದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. ಅಮೆರಿಕನ್ನಡ ಪತ್ರಿಕೆ ಯನ್ನು ನಡೆಸಿದರು. ಅಮೆರಿಕನ್ನಡಿಗರು ಮತ್ತು ಮೂಲ ನೆಲದ ಕನ್ನಡಿಗರ ಮಧ್ಯೆ ಸೇತುವೆಯಂತಾದರು. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ತೊಡಗಿದ ಯಾವುದೇ ಸಂಘ ಸಂಸ್ಥೆಗಳಿಗೆ ಅವರ ಅಭಯಹಸ್ತ ಸದಾ ಇರುತ್ತಿತ್ತು. 'ಕನ್ನಡ ಭಾಷೆಯನ್ನು ಕುರಿತು ಬರೆಯುವುದು', 'ಮಾತಾಡುವುದು', ಅವರಿಗೆ ವಿಶೇಷ ಹವ್ಯಾಸಗಳಲ್ಲೊಂದಾಗಿತ್ತು.[೨]

ನಿವೃತಿ ನಂತರ 'ಮೈಸೂರಿನಲ್ಲಿ'[ಬದಲಾಯಿಸಿ]

ಅಮೆರಿಕದಿಂದ ವಾಪಸ್ಸಾದ ಮೇಲೆ ಹರಿಹರೇಶ್ವರರವರು ನೆಲೆಸಿದ್ದು, ’ಮೈಸೂರಿನ ಸರಸ್ವತಿಪುರ’ ದಲ್ಲಿ. ಪತಿಗೆ ತಕ್ಕ ಪತ್ನಿಯಾಗಿ ’ನಾಗಲಕ್ಷ್ಮಿ’ಯವರು ತಮ್ಮ ಸಹಕಾರವನ್ನು ಅನೇಕರೀತಿಯಲ್ಲಿ ಕೊಡುತ್ತಿದ್ದರು. ಗೆಳೆಯರನ್ನು ಮನೆಗೆ ಕರೆದು ರಾಜೋಪಚಾರದಿಂದ ಆಡಿಗೆ ಮಾಡಿ ಬಡಿಸುವುದು, ಸಾಹಿತ್ಯದ ಕಾರ್ಯಕ್ರಮಗಳನ್ನು ನಡೆಸುವುದು ಅವರ ಅತ್ಯಂತ ಪ್ರಿಯವಾದ ಹವ್ಯಾಸಗಳಲ್ಲೊಂದಾಗಿತ್ತು. 'ತೊಂದರೆಯಲ್ಲಿರುವ ಕನ್ನಡ ಮಕ್ಕಳಿಗೆ ಶಾಲೆಯ ಫೀಸ್ ಕೊಡುವುದು,' 'ಪುಸ್ತಕಗಳನ್ನು ಕೊಳ್ಳಲು ಹಣ ಸಹಾಯ', ಮುಂತಾದವನ್ನು ಯಾವ 'ಫಲಾಪೇಕ್ಷೆ', ಅಥವಾ 'ಪ್ರಚಾರ'ವಿಲ್ಲದೆ ಮಾಡುತ್ತಿದ್ದರು.

ಮಕ್ಕಳು[ಬದಲಾಯಿಸಿ]

ಚಿ.ನಂದಿನಿ, ಮತ್ತು 'ಚಿ.ಸುಮನಾ, 'ಹರಿಹರೇಶ್ವರ-ನಾಗಲಕ್ಷ್ಮಿ ದಂಪತಿಗಳ ಪ್ರೀತಿಯ ಪುತ್ರಿಯರು', ಅಮೆರಿಕದಲ್ಲೇ ನೆಲೆಸಿದ್ದಾರೆ.

ಮರಣ[ಬದಲಾಯಿಸಿ]

ದಿನವೆಲ್ಲಾ ಚೆನ್ನಾಗಿಯೇ ಇದ್ದ ’ಹರಿಯವರು, ರಾತ್ರಿ, ಹಾಲು-ಅನ್ನ ಊಟಮಾಡಿದರು. ಕೈತೊಳೆಯಲು ’ಸಿಂಕ್’ ಕಡೆ ನಡೆದರು. ದಾರಿಯಲ್ಲೇ ಕುಸಿದು ಬಿದ್ದವರು, ಮತ್ತೇಳಲೇ ಇಲ್ಲ. ಗುರುವಾರ, ೨೨, ಜುಲೈ, ೨೦೧೦ ರಂದು 'ತೀವ್ರವಾದ ಹೃದಯಾಘಾತದಿಂದ ಅವರು ಮರಣಿಸಿದರು. ತಕ್ಷಣವೇ ವೈದ್ಯರ ನೆರವು ದೊರೆತರೂ ಆ ಹೊತ್ತಿಗೆ ತಮ್ಮ ಕೊನೆಯುಸಿರೆಳೆದಿದ್ದರು.

ಮರಣಾನಂತರದ ವಿಧಿಯಬಗ್ಗೆ 'ವಿಲ್'[ಬದಲಾಯಿಸಿ]

ಮೊದಲೇ ಸತಿಪತಿಯರಿಬ್ಬರೂ ನಿರ್ಣಯಿಸಿದಂತೆ, ಮರಣಾನಂತರದ ತಿಥಿ, ಧಾರ್ಮಿಕ ವಿಧಿ ವಿಧಾನಗಳಿಗಾಗಿ ಹಣವನ್ನು ವ್ಯಯಿಸದೆ, ಒಬ್ಬ ಬಡ ಪ್ರತಿಭಾವಂತ ವಿದ್ಯಾರ್ಥಿಗೆ ಕಾಲೇಜ್ ಶಿಕ್ಷಣಕ್ಕೆ ಬೇಕಾಗುವ ಹಣವನ್ನು ಪೂರೈಸುವುದಕ್ಕೆ ವಿನಿಯೋಗಿಸಲು ಮಾತಾಡಿಕೊಂಡಿದ್ದರು. 'ತಮ್ಮ ಪಾರ್ಥಿವ ದೇಹವನ್ನು ವೈದ್ಯಕೀಯ ಕಾಲೇಜ್ ಗೆ ದಾನವಾಗಿ ಕೊಟ್ಟರು'. ('ಮೈಸೂರಿನ ಜೆ.ಎಸ್.ಎಸ್. ವೈದ್ಯಕೀಯ ಕಾಲೇಜ್' ಗೆ ದಾನಮಾಡಿದರು)

ತಂದೆಯವರ ಮರಣ[ಬದಲಾಯಿಸಿ]

ತಂದೆಯವರ ನಿಧನದ ನಂತರ, 'ಕ್ರಿಯಾಕರ್ಮ'ಗಳನ್ನು 'ಪ್ರಾಸಂಗಿಕವಾಗಿ ಮಾತ್ರ ಮಾಡಿಮುಗಿಸಿದರು' 'ಹರಿಹರೇಶ್ವರರ ತಂದೆಯವರ ನಿಧನ'ದ ಬಳಿಕ, ತಂದೆಯವರ ಜೊತೆ ಕೆಲಸಮಾಡಿದವರನ್ನು ಸನ್ಮಾನಿಸಿದ್ದರು 'ಹರಿಯವರ ತಂದೆ'ಯವರು,'ಕಟ್ಟಡ ನಿರ್ಮಾಣ ಕಾರ್ಯ'ದಲ್ಲಿ ತೊಡಗಿದ್ದರು. ಅವರ ನಿಧನಾ ನಂತರ, 'ಹರಿಹರೇಶ್ವರ ದಂಪತಿಗಳು','ತಿಥಿ', ಮುಂತಾದ ವಿಧಿಗಳಿಗೆ ಹೆಚ್ಚಿನ ಹಣವ್ಯಯಿಸದೆ, ತಂದೆಯವರ ಜೊತೆ ಕೆಲಸಮಾಡಿದ ಕೆಲಸಗಾರರನ್ನು ಮನೆಗೆ ಕರೆದು ಅವರನ್ನು ಸನ್ಮಾನಿಸಿದರು.

ಕನ್ನಡಪರ ಚಟುವಟಿಕೆಗಳು[ಬದಲಾಯಿಸಿ]

ಹರಿಯವರು, ಅಮೆರಿಕದಲ್ಲಿ ದುಡಿದ ಹಣದ ಬಹುಪಾಲನ್ನು ಕನ್ನಡನಾಡಿನಲ್ಲಿ, ಕನ್ನಡಪರ-ಚಟುವಟಿಕೆಗಳಿಗೆ ವ್ಯಯಿಸುತ್ತಿದ್ದರು. 'ಬದುಕಿದ್ದಷ್ಟು ದಿನವೂ ಅರ್ಥಪೂರ್ಣ ಬಾಳ್ವೆಯನ್ನು ಮಾಡಿದ ಹರಿಹರೇಶ್ವರರು', 'ಮರಣದ ಬಳಿಕವೂ ಅರ್ಥಪೂರ್ಣಬದುಕಿದೆ,' ಎನ್ನುವುದನ್ನು ಎಲ್ಲರಿಗೂ ಖಾತ್ರಿಮಾಡಿಕೊಟ್ಟವರು. ಕೆಳಗಿನ 'ವೀಡಿಯೋ' ಗಳಲ್ಲಿ ಹರಿಯವರು ಮಾತಾಡಿದ್ದಾರೆ. ಹರಿ-ನಾಗಲಕ್ಷ್ಮಿ ದಂಪತಿಗಳು "ಕರ್ಣಾಟಕ ಭಾಗವತದ ವಿಶ್ವಾರ್ಪಣ" ಸಂದರ್ಭದಲ್ಲಿ ವಿಶೇಷವಾಗಿ ವೇದಿಕೆಯಮೇಲೆ ಪಾಲ್ಗೊಂಡಿದ್ದಾರೆ.

ಪರಾಗ ಸ್ಪರ್ಶದಲ್ಲಿ[ಬದಲಾಯಿಸಿ]

'ಶ್ರೀವತ್ಸ ಜೋಶಿಯವರ' "ಪರಾಗ ಸ್ಪರ್ಶ-ಶ್ರವಣಲಹರಿ-" 'ನುಡಿನಮನ', ೨೫, ಜುಲೈ, ೨೦೧೦ ರ ಸಂಚಿಕೆಯಲ್ಲಿ, ಅಮೆರಿಕದಿಂದ ಪ್ರಕಟವಾಗುತ್ತಿರುವ, 'ದಟ್ಸ್ ಕನ್ನಡ ಇ-ಪತ್ರಿಕೆ'ಯಲ್ಲಿ 'ಅಂಕಣ'ರೂಪದಲ್ಲಿ ಬರೆದು ಪ್ರಸ್ತುತಪಡಿಸುತ್ತಿದ್ದ, 'ವಿಚಿತ್ರಾನ್ನಅಂಕಣದ ಜನಪ್ರಿಯ-ಲೇಖಕ, 'ಶ್ರೀ.ಶ್ರೀವತ್ಸ ಜೋಶಿ ಯವರು, ತಮ್ಮ 'ಪರಾಗಸ್ಪರ್ಶ ಅಂಕಣ'ಕ್ಕೆ, ಬರೆದು ಪ್ರಸ್ತುತ ಪಡಿಸಿದ, 'ಕನ್ನಡನಾವೆಯನ್ನು ಮುನ್ನಡೆಸಿದ 'ಹರಿಗೋಲು, ಎಂಬ, 'ನುಡಿನಮನ'ಇಲ್ಲಿದೆ.[೩]

ಪತ್ನಿಯವರ ನಿಧನ[ಬದಲಾಯಿಸಿ]

ಹರಿಹರೇಶ್ವರರವರ ಪತ್ನಿ, ನಾಗಲಕ್ಷ್ಮಿ ಹರಿಹರೇಶ್ವರರವರು, ಸ್ವಲ್ಪದಿನಗಳಿಂದ ಖಾಯಿಲೆಯಿಂದ ನರಳುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಗುಣವಾಗದೆ ೨೯, ಶನಿವಾರ, ಜನವರಿ, ೨೦೨೩ ರಂದು ನಿಧನರಾದರು. [೪]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]