ಶಾಂತಾದೇವಿ ಮಾಳವಾಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಶಾಂತಾದೇವಿ ಮಾಳವಾಡ ಇವರು ೧೯೨೨ ಡಿಶಂಬರ ೧೦ ರಂದು ಬೆಳಗಾವಿ ಯಲ್ಲಿ ಜನಿಸಿದರು. ತಾಯಿ ಜಯವಂತಿದೇವಿ; ತಂದೆ ಕರ್ಜಗಿ ಮುರಿಗೆಪ್ಪ ಶೆಟ್ಟರು. ತವರು ಮನೆ ಹೆಸರು ದಾನಮ್ಮ. ಎರಡು ವರ್ಷದವಳಿದ್ದಾಗ ತಂದೆಯನ್ನು ಹಾಗು ಹತ್ತು ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡ ದಾನಮ್ಮ ಅಜ್ಜಿಯ ಮಡಿಲಲ್ಲಿ ಬೆಳೆದಳು. ವನಿತಾ ವಿದ್ಯಾಲಯದಲ್ಲಿ ಹೈಸ್ಕೂಲ ಎರಡನೆಯ ತರಗತಿಯವರೆಗೆ ಕಲಿತು, ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು.

ಪರಿವಿಡಿ

[ಬದಲಾಯಿಸಿ] ವಿವಾಹ

೧೯೩೭ನೆಯ ಇಸವಿಯಲ್ಲಿ ಇವರ ಮದುವೆ ಪ್ರೊ. ಸ.ಸ. ಮಾಳವಾಡರ ಜೊತೆ ಆಯಿತು. ತಮ್ಮ ಪತಿಯ ಒತ್ತಾಸೆಯಿಂದಾಗಿ ಶಾಂತಾದೇವಿಯವರು ಮನೆಯಲ್ಲಿಯೆ ಇಂಗ್ಲೀಷ್,ಹಿಂದಿ, ಪ್ರಾಚೀನ ಕನ್ನಡ ಸಾಹಿತ್ಯ ಹಾಗು ವಚನ ಸಾಹಿತ್ಯದ ಅಧ್ಯಯನ ಮಾಡಿದರು. ೧೯೪೦ರಲ್ಲಿ ಕನ್ನಡ ಜಾಣ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪತಿಯ ಪ್ರೋತ್ಸಾಹದಿಂದ ೧೯೩೮ರಲ್ಲಿ ಅಕ್ಕನ ಬಳಗ ವೆಂಬ ಮಹಿಳಾ ಸಂಘಟನೆಯನ್ನು ಪ್ರಾರಂಭಿಸಿದರು.

[ಬದಲಾಯಿಸಿ] ಸಾಮಾಜಿಕ

[ಬದಲಾಯಿಸಿ] ಸಾಹಿತ್ಯರಚನೆ

  • ಮೊಗ್ಗೆಯ ಮಾಲೆ
  • ಕುಂಕುಮ ಬಲ
  • ಕನ್ನಡ ತಾಯಿ
  • ಮಹಿಳೆಯರ ಆತ್ಮಶ್ರೀ
  • ಹರಿಹರನ ಪ್ರಾರ್ಥನೆಗಳು (ಸಂಕಲನ)
  • ಮಹಿಳೆಯರ ಅಲಂಕಾರ
  • ಸೊಬಗಿನ ಮನೆ
  • ಧಾರವಾಡ ಜಿಲ್ಲೆ
  • ಬಸವಪ್ರಕಾಶ
  • ನಂದಾದೀಪ (ಸಂಪಾದನೆ)
  • ದಾಂಪತ್ಯಯೋಗ
  • ಅಕ್ಕನ ಭಾವಸೌರಬ
  • ಕೆಳದಿಯ ಚೆನ್ನಮ್ಮ
  • ಅಕ್ಕ ನಾಗಲಾಂಬಿಕೆ
  • ಶ್ರೀಗಿರಿಯಿಂದ ಹಿಮಗಿರಿಗೆ
  • ಮಹಿಳಾ ಚೇತನ
  • ವಧುವಿಗೆ ಉಡುಗೊರೆ
  • ರಸಪಾಕ
  • ಕುಟುಂಬ
  • ಜಯದೇವ (ಅನುವಾದ)
  • ಸರದಾರ ವೀರನಗೌಡರು
  • ನೀಲಾಂಬಿಕೆ
  • ಬೆಳವಡಿ ಮಲ್ಲಮ್ಮ
  • ಬಸವಯುಗದ ಶಿವಶರಣೆಯರು
  • ಭಾರತದ ಮಾನಸಪುತ್ರಿಯರು
  • ಗಂಗಾಂಬಿಕೆ
  • ಸಮುಚ್ಚಯ
  • ಶಿವಯೋಗಿಣಿ
  • ಎಣ್ಣೆ ಹೊಳೆಯ ನಂದಾದೀಪ
  • ಸಾರ್ವಜನಿಕ ರಂಗದಲ್ಲಿ ಮಹಿಳೆ
  • ಪುರಾತನ ಶರಣರು
  • ದಾನದಾಸೋಹಿ ದಾನಮ್ಮ
  • ಜನನೀ ಜನ್ಮಭೂಮಿಶ್ಚ

[ಬದಲಾಯಿಸಿ] ಪುರಸ್ಕಾರ

  • ಜ.ಚ.ನಿ. ಪೀಠಾರೋಹಣ ಬೆಳ್ಳಿಹಬ್ಬ ' ಸಾಹಿತ್ಯಸುಮ ' ಬಂಗಾರದ ಪದಕ
  • ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೬)
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೨)
  • ಸಾವಿತ್ರಮ್ಮ ದೇ.ಜ.ಗೌ. ಪ್ರಶಸ್ತಿ (೧೯೯೧)
  • ಷಷ್ಟ್ಯಬ್ದಿ ಸಮಾರಂಭ (' ಪ್ರಶಾಂತ' ಆಭಿನಂದನ ಗ್ರಂಥ ಸಮರ್ಪಣೆ:೧೯೮೨)
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ