ವಿಷ್ಣು ಸಖಾರಾಮ್ ಖಾಂಡೇಕರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿಷ್ಣು ಸಖಾರಾಮ್ ಖಾಂಡೇಕರ್(ಜನವರಿ ೧೯,೧೮೯೮-ಸೆಪ್ಟಂಬರ್ ೨,೧೯೭೬) ಇವರು ಮರಾಠಿಯ ಅಗ್ರಗಣ್ಯ ಲೇಖಕರಲ್ಲಿ ಒಬ್ಬರು ಮತ್ತು ಜ್ಞಾನಪೀಠ ಪ್ರಶಸ್ತಿ ಪಡೆದ ಲೇಖಕರಲ್ಲಿ ಒಬ್ಬರು.

ಜೀವನ [ಬದಲಾಯಿಸಿ]

ಇವರು ಮಹಾರಾಷ್ಟ್ರಸಾಂಗಲಿಯಲ್ಲಿ ಜನಿಸಿದರು. ೧೯೨೦ ರಿಂದ ೧೯೩೮ರವರೆಗೆ ಮಹಾರಾಷ್ಟ್ರದ ಕೊಂಕಣದ ಸಿಂಧುದುರ್ಗ್ ಜಿಲ್ಲೆಯಲ್ಲಿ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು. ಇದೇ ಸಮಯದಲ್ಲಿ ಇವರು ತಮ್ಮ ಸಾಹಿತ್ಯ ಕೃಷಿಯನ್ನು ಪ್ರಾರಂಭಿಸಿದರು. ಇವರು ತಮ್ಮ ಜೀವಮಾನದಲ್ಲಿ ಒಟ್ಟು ೧೬ ಕಾದಂಬರಿಗಳು, ೬ ನಾಟಕಗಳು, ಸುಮಾರು ೨೫೦ ಸಣ್ಣ ಕಥೆಗಳು, ೧೦೦ ಪ್ರಬಂಧಗಳು ಮತ್ತು ೨೦೦ ಟೀಕೆಗಳನ್ನು ಬರೆದರು.

ಯಯಾತಿ [ಬದಲಾಯಿಸಿ]

ಇವರ ಪ್ರಮುಖ ಕಾದಂಬರಿಯಾದ ಯಯಾತಿಗೆ ಮೂರು ಪ್ರಶಸ್ತಿಗಳು ಬಂದವು, ಅವೆಂದರೆ ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ(೧೯೬೦), ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೬೧), ಜ್ಞಾನಪೀಠ ಪ್ರಶಸ್ತಿ(೧೯೭೪).

  • ೧೯೪೧ರಲ್ಲಿ ಇವರನ್ನು ಮರಾಠಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು.
  • ೧೯೬೮ರಲ್ಲಿ ಸಾಹಿತ್ಯಿಕ ಕೆಲಸಗಳಿಗಾಗಿ ಇವರಿಗೆ ಪದ್ಮಭೂಷಣ ಪ್ರಶಸ್ತಿಯು ದೊರಕಿತು.

ಬಾಹ್ಯ ಸಂಪರ್ಕ [ಬದಲಾಯಿಸಿ]

ವಿ.ಸ.ಖಾಂಡೇಕರ್ ವೆಬ್ ತಾಣ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಕನ್ನಡ: ಕುವೆಂಪು | ದ.ರಾ.ಬೇಂದ್ರೆ | ವಿ.ಕೃ.ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್ | ಚಂದ್ರಶೇಖರ ಕಂಬಾರ
ಹಿಂದಿ: ಮಹಾದೇವಿ ವರ್ಮ | ನಿರ್ಮಲಾ ವರ್ಮ | ಸುಮಿತ್ರಾ ನಂದನ್ ಪಂತ್ | ರಾಮ್‍ಧಾರಿ ಸಿಂಘ್ ದಿನಕರ್ | ಅಜ್ಞೇಯ | ನರೇಶ್ ಮೆಹ್ತಾ
ಬೆಂಗಾಲಿ: ತಾರಾಶಂಕರ ಬಂದೋಪಾಧ್ಯಾಯ | ಬಿಷ್ಣು ಡೆ | ಆಶಾಪೂರ್ಣ ದೇವಿ | ಸುಭಾಷ್ ಮುಖ್ಯೋಪಾಧ್ಯಾಯ | ಮಹಾಶ್ವೇತಾದೇವಿ
ಮಲಯಾಳಂ: ಎಂ.ಟಿ.ವಾಸುದೇವನ್ ನಾಯರ್ | ಜಿ. ಶಂಕರ ಕುರುಪ್ | ಎಸ್.ಕೆ.ಪೊಟ್ಟೆಕ್ಕಾಡ್ | ಟಿ. ಶಿವಶಂಕರ ಪಿಳ್ಳೈ
ಗುಜರಾತಿ: ಉಮಾಶಂಕರ್ ಜೋಶಿ | ಪನ್ನಾಲಾಲ್ ಪಟೇಲ್ | ರಾಜೇಂದ್ರ ಕೇಶವ್‌ಲಾಲ್ ಷಾ
ಒರಿಯಾ: ಗೋಪಿನಾಥ್ ಮೊಹಾಂತಿ | ಎಸ್. ರೌತ್ ರಾಯ್ | ಸೀತಾಕಾಂತ್ ಮಹಾಪಾತ್ರ|ಪ್ರತಿಭಾ ರೇ
ಉರ್ದು: ಫಿರಾಕ್ ಗೋರಕ್ ಪುರಿ | ಕುರ್ರಾತುಲೈನ್ ಹೈದರ್ | ಅಲಿ ಸರ್ದಾರ್ ಜಾಫ್ರಿ
ತೆಲುಗು: ವಿಶ್ವನಾಥ ಸತ್ಯನಾರಾಯಣ | ಸಿ. ನಾರಾಯಣ ರೆಡ್ಡಿ | ರವುರಿ ಭಾರದ್ವಾಜ
ತಮಿಳು: ಪಿ.ವಿ. ಅಕಿಲಾಂಡಮ್ | ಡಿ. ಜಯಕಾಂತನ್
ಪಂಜಾಬಿ: ಅಮೃತ ಪ್ರೀತಮ್ | ಗುರ್ದಿಯಲ್ ಸಿಂಘ್
ಅಸ್ಸಾಮೀಸ್ ಬಿ.ಕೆ. ಭಟ್ಟಾಚಾರ್ಯ | ಇಂದಿರಾ ಗೋಸ್ವಾಮಿ
ಮರಾಠಿ: ವಿಷ್ಣು ಸಖಾರಾಮ್ ಖಾಂಡೇಕರ್ | ವಿಂದಾ ಕರಂದೀಕರ್ | ಕುಸುಮಾಗ್ರಜ್