ವಿಶ್ವೇಶ್ವರ ಭಟ್
ಪರಿವಿಡಿ |
[ಬದಲಾಯಿಸಿ] ಜನನ, ವಿದ್ಯಾಭ್ಯಾಸ, ವೃತ್ತಿ-ಜೀವನ
ವಿಶ್ವೇಶ್ವರ ಭಟ್ ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಮೂರೂರಿನವರು. ಪ್ರಸ್ತುತ ೦೭.೦೨.೨೦೧೧ ರಂದು ಕನ್ನಡಪ್ರಭದಲ್ಲಿ ಪ್ರಧಾನ ಸಂಪಾದಕರಾಗಿ ಅಧಿಕಾರ ಸ್ವೀಕರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.ಜೊತೆಗೆ ಸುವರ್ಣನ್ಯೂಸ್ 24 x 7 ಸುದ್ದಿ ಚಾನೆಲ್ ನ ಪ್ರಧಾನ ಸಂಪಾದಕರಾಗಿಯೂ ೧೫-೦೭-೦೨೦೧೧ರಿಂದ ಅಧಿಕಾರ ಸ್ವೀಕರಿಸಿದ್ದಾರೆ..ಇವರು ಈ ಹಿಂದೆಯೂ ನಾಲ್ಕು ವರ್ಷ "ಕನ್ನಡ ಪ್ರಭ" ದಲ್ಲಿ ಉಪ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದರು.(ಇವರು ವಿಜಯ ಕರ್ನಾಟಕ ದಿನಪತ್ರಿಕೆಯ ಮಾಜಿ ಪ್ರಧಾನ ಸಂಪಾದಕರಾಗಿದ್ದರು. 'ಬಿ.ಎಸ್ಸಿ' ಮಾಡಿ, ಭೂಗರ್ಭಶಾಸ್ತ್ರದಲ್ಲಿ 'ಎಂ.ಎಸ್ಸಿ' ಮಾಡಿ, ಪತ್ರಿಕೋದ್ಯಮದಲ್ಲಿ (4 ಚಿನ್ನದ ಪದಕದೊಂದಿಗೆ) ಎಂಎ ಮಾಡಿದರು. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ.
- ಏಷಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ 'ಅಸಿಸ್ಟೆಂಟ್ ಪ್ರೊಫೆಸರ್' ಆಗಿ ಕೆಲಸ ಮಾಡಿದ್ದಾರೆ.
- ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ.
[ಬದಲಾಯಿಸಿ] ಪತ್ರಿಕಾಕರ್ತರಾಗಿ
- ಪತ್ರಕರ್ತರಾಗಿ ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳಲ್ಲಿ ಮೊದಲು ಕೆಲಸ ಮಾಡಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 'ಸುದ್ದೀಶ,' ಹೆಸರಿನಲ್ಲಿ ಬರೆಯುವ 'ಸುದ್ದಿಮನೆ ಕತೆ' ಅಂಕಣದಿಂದ 'ವಿಜಯ ಕರ್ನಾಟಕ' ಓದುಗರಿಗೆ ಪತ್ರಿಕೊದ್ಯಮದ ಒಳಹೊರಗುಗಳನ್ನು ಪರಿಚಯಿಸಿದ್ದಾರೆ.
- 'ನೂರೆಂಟು ಮಾತು',
- 'ಸ್ವಾಮಿ ಅನಾಮಧೇಯ ಪೂರ್ಣ' ರೆಂಬ ಹೆಸರಿನಲ್ಲಿ ಬರೆಯುತ್ತಿದ್ದರು.
- 'ಬತ್ತದ ತೆನೆ',
- 'ಬಾಲ್ಕನಿಯಿಂದ' ,
- 'ವಕ್ರತುಂಡೋಕ್ತಿ',
- '+ve ಥಿಂಕಿಗ್' ಎಂಬ ಅಂಕಣವನ್ನು 'ಸಹನೆ' ಎಂಬ ಹೆಸರಲ್ಲಿ ಬರೆಯುತ್ತಿದ್ದರು. ಇವರು 'ವಿಜಯ ಕರ್ನಾಟಕ ಪತ್ರಿಕೆ'ಯನ್ನು ಹನ್ನೊಂದು ವರ್ಷಗಳಿಂದ ಕಟ್ಟಿ ಬೆಳೆಸಿದ ರೀತಿ ವಿಶೇಷವಾಗಿದೆ. ಸಮರ್ಥವಾದ ಒಂದು ಸಂಪಾದಕೀಯ ತಂಡವನ್ನು ಕಟ್ಟುವುದು ಮತ್ತು ಸಹೋದ್ಯೋಗಿಗಳಿಗೆ ನಿತ್ಯ ಮಾರ್ಗದರ್ಶನ ಮಾಡುವುದು ಅವರ ವೃತ್ತಿಕೌಶಲ್ಯದ ಒಂದು ಪ್ರಮುಖ ಅಂಗವಾಗಿತ್ತು.
ಉನ್ನತ ವ್ಯಾಸಂಗ ಕೈಗೊಳ್ಳುವ ಉದ್ದೇಶದಿಂದ ವಿಶ್ವೇಶ್ವರ ಭಟ್ ಅವರು ೨೦೧೦ರ ಡಿಸೆಂಬರ್ ೮ರಂದು ಬುಧವಾರ ಸಂಜೆ, ವಿಜಯ ಕರ್ನಾಟಕ ಪತ್ರಿಕೆ ಗೆ, ಕ್ಕೆ ರಾಜೀನಾಮೆ ಸಲ್ಲಿಸಿದರು.
[ಬದಲಾಯಿಸಿ] ಸಾಧನೆಗಳು
ವಿಶ್ವೇಶ್ವರ ಭಟ್ ಕನ್ನಡದಲ್ಲಿ ಸುಮಾರು ೪೮ ಪುಸ್ತಕಗಳನ್ನು ಬರೆದು/ಅನುವಾದಿಸಿ ಪ್ರಕಟಿಸಿದ್ದಾರೆ.ಇವರು ಆಡ್ವಾಣಿಯವರ ಜೀವನ ಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಜೊತೆ ಹದಿನಾಲ್ಕು ದಿನ ರಷ್ಯಾ, ಆಸ್ಟ್ರೇಲಿಯಾ, ಯುಕ್ರೇನ್, ಐಸ್ ಲ್ಯಾಂಡ್ನಲ್ಲಿ ಪ್ರವಾಸ ಮಾಡಿದ ಅನುಭವ ಇವರದು. "ದೇಶ ಸುತ್ತು, ಕೋಶ ಓದು" ಎನ್ನುವುದನ್ನು ಅಕ್ಷರಶಃ ಪಾಲಿಸುತ್ತಾ ಇಪ್ಪತ್ತಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದಾರೆ. ಇವರು ತಮ್ಮ ಸ್ವಂತ ವೆಬ್ ಸೈಟ್ ಹೊಂದಿದ್ದಾರೆ.
[ಬದಲಾಯಿಸಿ] ಪ್ರಶಸ್ತಿಗಳು
- 'ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ೨೦೦೫ ಇವರಿಗೆ ದೊರೆತಿದೆ.
- 'ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ಕೆ ಶಾಮರಾವ್ ಪ್ರಶಸ್ತಿ' ದೊರೆತಿದೆ.