ವಿವಿಧ ದೇಶಗಳ ಹಿಂದಿನ ಒಟ್ಟು ಆರ್ಥಿಕ ಉತ್ಪನ್ನಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಲ್ಲಿ ವಿವಿಧ ದೇಶಗಳ ಹಿಂದಿನ ಒಟ್ಟು ಆರ್ಥಿಕ ಉತ್ಪನ್ನಗಳ (ಜಿಡಿಪಿ) (ಕೊಳ್ಳುವ ಸಾಮರ್ಥ್ಯದ ಸಮತೆ (ಪಿಪಿಪಿ)'ಯ - ನಿಬಂಧನೆಗಳ ಪ್ರಕಾರ) ಅಂದಾಜನ್ನು, ಇಂದಿನ ಅಮೆರಿಕನ್ ಡಾಲರ್ ದರಕ್ಕೆ ಸರಿಹೊಂದುವಂತೆ ಪಟ್ಟಿ ಮಾಡಲಾಗಿದೆ.

ಇಲ್ಲಿ ಕೆಲವು ಪಟ್ಟಿಯಲ್ಲಿ ದೇಶಗಳ ಹೆಸರಿನ ಜಾಗದಲ್ಲಿ ಕೆಲವು ಭೌಗೋಳಿಕ ಪ್ರದೇಶಗಳ ಹೆಸರನ್ನು ಸೇರಿಸಲಾಗಿದೆ. ಇಲ್ಲಿ ಪಟ್ಟಿ ಮಾಡಿರುವ ಬಹುತೇಕ ಮಾಹಿತಿಗಳು ಬ್ರಿಟನ್ ಆರ್ಥಿಕ-ಇತಿಹಾಸ ತಜ್ಞ ಅಂಗುಸ್ ಮಾಡಿಸನ್ Angus Maddison ಅವರ ಅಂದಾಜಿನ ಅವಲಂಬಿತವಾಗಿದೆ. ಅಂಗುಸ್ ಮಾಡಿಸನ್ ಅವರು ಐರೋಪ್ಯ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ (Organisation for Economic Co-operation and Development - OECD) , ಆರ್ಥಿಕ ಅಭಿವೃದ್ಧಿ ಘಟಕದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ಅವರು "ದಿ ವರ್ಲ್ಡ್ ಯೆಕನಾಮಿ : ಹಿಸ್ಟಾರಿಕಲ್ ಸ್ಟಾಟಿಸ್ಟಿಕ್ಸ್" The World Economy: Historical Statistics ಎಂಬ ತಮ್ಮ ಗ್ರಂಥದಲ್ಲಿ ಈ ಅಂದಾಜನ್ನು ಮಾಡಿದ್ದಾರೆ. ಅವರ ಅಂದಾಜು 1'ನೆ ಶತಮಾನದಿಂದ 1998'ರ ವರಗೆ ಇದೆ. ಇಲ್ಲಿ ವಿವಿಧ ದೇಶಗಳ ಆರ್ಥಿಕ ಉತ್ಪನ್ನಗಳು ಅಮೆರಿಕನ್ ಡಾಲರ್'ನಲ್ಲಿ ಒಟ್ಟೂ ಮೌಲ್ಯ ಮತ್ತೂ ವಿಶ್ವದಲ್ಲಿ ಒಟ್ಟೂ ಉತ್ಪನ್ನಗಳಲ್ಲಿ ಆ ದೇಶದ ಭಾಗವನ್ನು ಪಟ್ಟಿಮಾಡಿದೆ.

1ನೆ ಶತಮಾನ[ಬದಲಾಯಿಸಿ]

Region / Country ಜಿಡಿಪಿ (ಪಿಪಿಪಿ) GDP PPP
ದಶಲಕ್ಷ ಡಾಲರ್
ಜಿಡಿಪಿ ಭಾಗ GDP share
ಪ್ರತಿಶತ (%)
ವಿಶ್ವ 102 536 100
ಭಾರತ 33 750 [೧] 32.9
ಚೀನಾ 26 820 26.2
ರೋಮನ್ ಸಾಮ್ರಾಜ್ಯ 22 000 [೨] 21.5
ಪಶ್ಚಿಮ ಯುರೋಪ್ 11 115 10.8
ಪಶ್ಚಿಮ ಏಷ್ಯಾ 10 120 [೩] 9.9
ಆಫ್ರಿಕಾ 8 030 [೩] 7.8
ಫಾರ್ ಈಸ್ಟ್ (ಚೀನಾ , ಭಾರತ , ಜಪಾನ್, ರಷ್ಯಾ ಗಳನ್ನೂ ಹೊರತುಪಡಿಸಿ) 6 970 6.8
ದಕ್ಷಿಣ ಅಮೇರಿಕ 2 240 2.2
ಪೂರ್ವ ಯುರೋಪ್ (ರಷಿಯಾ ಹೊರತುಪಡಿಸಿ) 1 900 1.9
ರಷ್ಯಾ and ಮಧ್ಯ ಏಷ್ಯಾ 1 560 [೪] 1.5
ಜಪಾನ್ 1 200 1.2
ಉತ್ತರ ಅಮೇರಿಕ ಮತ್ತು ಆಸ್ಟ್ರೇಲಿಯಾ 468 0.5
  1. ಈ ಅಂದಾಜುಗಳು ಇಂದಿನ ಭಾರತ , ಪಾಕಿಸ್ತಾನ, ಬಾಂಗ್ಲಾದೇಶ ದೇಶಗಳನ್ನು ಒಳಗೊಂಡಿದೆ .
  2. Goldsmith (p. 263, 267).
  3. ೩.೦ ೩.೧ Maddison (2003)
  4. These estimates refer to the combined economy of the various states located in the region corresponding to the former Russian Empire.