ವಿಲಿಯಂ ಜೆಫರ್‌ಸನ್‌‌ (ಕ್ರಿಕೆಟಿಗ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
{{{name}}}
[[Image:{{{picture}}}|154px|]]
Flag of England.svg ಇಂಗ್ಲೆಂಡ್
ವೈಯುಕ್ತಿಕ ಮಾಹಿತಿ
ಬ್ಯಾಟಿಂಗ್ ಶೈಲಿ {{{batting style}}}
ಬೌಲಿಂಗ್ ಶೈಲಿ {{{bowling style}}}
ವೃತ್ತಿಜೀವನದ ಅಂಕಿಅಂಶಗಳು
ಟೆಸ್ಟುಗಳು ಏಕ ದಿನ ಅಂತರರಾಷ್ಟ್ರೀಯಗಳು
ಪಂದ್ಯಗಳು {{{tests}}} {{{ODIs}}}
ಒಟ್ಟು ರನ್ನುಗಳು {{{test runs}}} {{{ODI runs}}}
ಬ್ಯಾಟಿಂಗ್ ಸರಾಸರಿ {{{test bat avg}}} {{{ODI bat avg}}}
೧೦೦/೫೦ {{{test 100s/50s}}} {{{ODI 100s/50s}}}
ಅತೀ ಹೆಚ್ಚು ರನ್ನುಗಳು {{{test top score}}} {{{ODI top score}}}
ಓವರುಗಳು {{{test overs}}} {{{ODI overs}}}
ವಿಕೆಟ್ಗಳು {{{test wickets}}} {{{ODI wickets}}}
ಬೌಲಿಂಗ್ ಸರಾಸರಿ {{{test bowl avg}}} {{{ODI bowl avg}}}
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ {{{test 5s}}} {{{ODI 5s}}}
೧೦ ವಿಕೆಟುಗಳು ಪಂದ್ಯದಲ್ಲಿ {{{test 10s}}} n/a
ಶ್ರೇಷ್ಠ ಬೌಲಿಂಗ್ {{{test best bowling}}} {{{ODI best bowling}}}
ಕ್ಯಾಚುಗಳು /ಸ್ಟಂಪಿಂಗ್‍ಗಳು {{{test catches/stumpings}}} {{{ODI catches/stumpings}}}

ದಿನಾಂಕ March 21, 2011 ವರೆಗೆ.
ಮೂಲ: [೧]

ವಿಲಿಯಂ ಇಂಗ್ಲ್‌ಬಿ ಜೆಫರ್‌ಸನ್‌‌ (ಜನನ: 1979ರ ಅಕ್ಟೋಬರ್‌‌ 25) ಎಂಬಾತ ಓರ್ವ ವೃತ್ತಿಪರ ಕ್ರಿಕೆಟಿಗನಾಗಿದ್ದು, ಈತ ಪ್ರಸಕ್ತವಾಗಿ ಲೀಸೆಸ್ಟರ್‌ಷೈರ್‌‌ ತಂಡಕ್ಕಾಗಿ ಆಡುತ್ತಿದ್ದಾನೆ. ಈತ 2006ರವರೆಗೆ ಎಸೆಕ್ಸ್‌‌ ಕೌಂಟಿ ಕ್ರಿಕೆಟ್‌‌ ಕ್ಲಬ್‌‌ ಪರವಾಗಿಯೂ ಮತ್ತು 2009ರವರೆಗೆ ನಾಟಿಂಗ್‌ಹ್ಯಾಮ್‌ಷೈರ್‌ ಪರವಾಗಿಯೂ ಆಡಿದ್ದ ಎಂಬುದು ಗಮನಾರ್ಹ ಸಂಗತಿ. ಸುಮಾರು 6 ಅಡಿ 10 ಇಂಚುಗಳಷ್ಟು (2.08 ಮೀ) ಎತ್ತರದ[೧] ನಿಲುವನ್ನು ಹೊಂದಿರುವ ಈತ ಕೌಂಟಿ ಕ್ರಿಕೆಟ್‌‌‌‌ನಲ್ಲಿನ ಅತಿ ಎತ್ತರದ ಆಟಗಾರನಾಗಿದ್ದಾನೆ, ಮತ್ತು ಸರ್ವದಾ ಅತಿ ಎತ್ತರದ ವೃತ್ತಿಪರ ಕ್ರಿಕೆಟಿಗರ ಪೈಕಿ ಒಬ್ಬನೆನಿಸಿಕೊಂಡಿದ್ದಾನೆ.[೨]

ಜೆಫರ್‌ಸನ್‌‌ ಬಲಗೈ-ಆಟದ ಓರ್ವ ಆರಂಭಿಕ ಬ್ಯಾಟುಗಾರ ಮತ್ತು ಓರ್ವ ವಿಶ್ವಾಸಾರ್ಹ ಸ್ಲಿಪ್‌ ಕ್ಷೇತ್ರರಕ್ಷಕ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ. ಡರ್ಬಿ ಎಂಬಲ್ಲಿ ಕ್ರಿಕೆಟ್‌‌ ಆಡುವ ಕುಟುಂಬವೊಂದರಲ್ಲಿ ಅವನು ಜನಿಸಿದ; ಅವನ ತಂದೆ ರಿಚರ್ಡ್‌ ಜೆಫರ್‌ಸನ್‌‌ ಸರ್ರೆ ತಂಡಕ್ಕಾಗಿ ಪ್ರಥಮ-ದರ್ಜೆ ಕ್ರಿಕೆಟ್‌‌ ಆಟವಾಡಿದವನು ಎಂಬುದು ಗಮನಾರ್ಹ ಸಂಗತಿ. ಔಂಡಲ್‌ ಶಾಲೆ ಮತ್ತು ಡರ್ಹ್ಯಾಂ ವಿಶ್ವವಿದ್ಯಾಲಯದಲ್ಲಿರುವಾಗಲೇ ಆತ ತನ್ನ ಸಾಮರ್ಥ್ಯದ ಕುರಿತಾದ ಭರವಸೆಯನ್ನು ತೋರಿಸಿದ; 2000ರ ಅವಧಿಯಲ್ಲಿ ಕ್ರಿಕೆಟ್‌-ಪ್ರವಾಸದಲ್ಲಿ ತೊಡಗಿದ್ದ ಜಿಂಬಾಬ್ವೆಯನ್ನರ ವಿರುದ್ಧ ಆತ ಬ್ರಿಟಿಷ್‌ ವಿಶ್ವವಿದ್ಯಾಲಯಗಳ ಪರವಾಗಿ ಪ್ರಥಮ-ದರ್ಜೆ ಕ್ರಿಕೆಟ್‌ಗೆ ತನ್ನ ಪಾದಾರ್ಪಣೆಯನ್ನು ಮಾಡಿದ.

2002ರ ಅವಧಿಯಲ್ಲಿ ಆತ ಎಸೆಕ್ಸ್‌ನಲ್ಲಿ ತನ್ನ ಮೊದಲ ಸಂಪೂರ್ಣ ಕ್ರಿಕೆಟ್‌ ಋತುವನ್ನು ದಾಖಲಿಸಿದ ಹಾಗೂ ಈ ಅವಧಿಯಲ್ಲಿ ಆತ ಪ್ರಥಮ-ದರ್ಜೆ ಕ್ರಿಕೆಟ್‌ನಲ್ಲಿ 815 ಓಟಗಳನ್ನು ಪೇರಿಸಿದ; ಅಷ್ಟೇ ಅಲ್ಲ, ಸದರಿ ಋತುವಿನ[೩] ಅಂತಿಮ ಪಂದ್ಯದಲ್ಲಿ ಆತ ಔಟಾಗದೆ 165 ಓಟಗಳನ್ನು ದಾಖಲಿಸಿದ್ದು ಕೌಂಟಿ ಚಾಂಪಿಯನ್‌ಷಿಪ್‌ನ ಎರಡನೇ ವಿಭಾಗದಲ್ಲಿ ಎಸೆಕ್ಸ್‌ ತಂಡವು ಗೆಲ್ಲುವಲ್ಲಿನ ಒಂದು ಪ್ರಮುಖ ಕೊಡುಗೆಯಾಗಿ ಪರಿಣಮಿಸಿತು.

2004ರ ಅವಧಿಯಲ್ಲಿ ಅವನು ಮೆರೆದ ಸಾಧನೆಯು ಅವನ ಈವರೆಗಿನ ಅತ್ಯುತ್ತಮ ಸಾಧನೆ ಎನಿಸಿಕೊಂಡಿದೆ. ಈ ಋತುವಿನಲ್ಲಿ ಅವನು 55.53ನಷ್ಟಿದ್ದ ಒಂದು ಸರಾಸರಿಯೊಂದಿಗೆ ಪ್ರಥಮ-ದರ್ಜೆ ಕ್ರಿಕೆಟ್‌ನಲ್ಲಿನ 1555 ಓಟಗಳನ್ನು ದಾಖಲಿಸಿದ ಮತ್ತು 222 ಓಟಗಳ ಒಂದು ಉನ್ನತ ಗಳಿಕೆಯೂ ಸೇರಿದಂತೆ 6 ಶತಕಗಳನ್ನು ದಾಖಲಿಸಿದ.[೪] 2005ರಲ್ಲಿ ತನ್ನ ಆಟದ ಸ್ಥಿತಿಯಲ್ಲಿ ಕುಸಿತವನ್ನು ಕಂಡಿದ್ದರಿಂದಾಗಿ ಎಸೆಕ್ಸ್‌‌ ಸೆಕೆಂಡ್‌ XI ತಂಡಕ್ಕೆ ಅವನು ತಳ್ಳಲ್ಪಟ್ಟನಾದರೂ, MCC ಯಂಗ್‌‌ ಕ್ರಿಕೆಟರ್ಸ್‌‌[೫] ತಂಡದ ವಿರುದ್ಧ ಔಟಾಗದೆ 303 ಓಟಗಳನ್ನು ಗಳಿಸುವ ಮೂಲಕ ಪ್ರತಿಕ್ರಿಯಿಸಿದ ಆತ ಮೊದಲ ತಂಡದಲ್ಲಿನ ತನ್ನ ಸ್ಥಾನವನ್ನು ಮರುಗಳಿಸಿದ.

2006ರ ಋತುವಿನ ಆರಂಭಕ್ಕೆ ಮುಂಚಿತವಾಗಿ ಆತ ಒಂದು ಅಸಹಜವಾದ ಅಪಘಾತಕ್ಕೆ ಈಡಾಗಬೇಕಾಯಿತು; ಕಿಟಕಿಯೊಂದನ್ನು ತೆರೆಯಲು ಪ್ರಯತ್ನಿಸುವ ಸಂದರ್ಭದಲ್ಲಿ ಅವನ ಎಡಗೈ ಮಣಿಕಟ್ಟು ಕತ್ತರಿಸಿತು ಹಾಗೂ ಸ್ನಾಯುರಜ್ಜುಗಳು ತುಂಡರಿಸಲ್ಪಟ್ಟವು.[೬] ಈ ಗಾಯದಿಂದ ಚೇತರಿಸಿಕೊಂಡ ನಂತರ, ಎಸೆಕ್ಸ್‌ ತಂಡದಲ್ಲಿ ಒಂದು ನಿಯತವಾದ ಸ್ಥಾನವನ್ನು ಮರುಗಳಿಸುವಲ್ಲಿ ಅವನು ವಿಫಲಗೊಂಡ, ಮತ್ತು ಪರಸ್ಪರ ಸಮ್ಮತಿಯ ಅನುಸಾರವಾಗಿ 2006ರ ಆಗಸ್ಟ್‌ನಲ್ಲಿ ಅವನು ಕೌಂಟಿಯನ್ನು ಬಿಟ್ಟ.[೭] ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ, ನಾಟಿಂಗ್‌ಹ್ಯಾಮ್‌ಷೈರ್ ಜೊತೆಗಿನ ಮೂರು-ವರ್ಷದ ಒಪ್ಪಂದವೊಂದಕ್ಕೆ ಅವನು ಸಹಿಹಾಕಿದ.[೮]

ಫೆಬ್ರುವರಿ ಮತ್ತು ಮಾರ್ಚ್‌ ತಿಂಗಳಲ್ಲಿ ಕೈಗೊಳ್ಳಬೇಕಿದ್ದ ಬಾಂಗ್ಲಾದೇಶದ ಪ್ರವಾಸಕ್ಕೆ ಮೀಸಲಾದ ಇಂಗ್ಲೆಂಡ್‌ A ತಂಡಕ್ಕಾಗಿ 2007ರ ಜನವರಿಯಲ್ಲಿ ಅವನು ಆಯ್ಕೆಯಾದ.[೯][೧೦]

ಜೆಫರ್‌ಸನ್‌ನ ಕಳಪೆ ಆಟದ ಸ್ಥಿತಿಯು ಮತ್ತೆ ಎರಡು ವರ್ಷಗಳಷ್ಟು ಹಿಗ್ಗಲಿಸಲ್ಪಟ್ಟ ಕಾರಣದಿಂದ, 2009ರ ಸೆಪ್ಟೆಂಬರ್‌ನಲ್ಲಿ ಅವನೊಂದಿಗಿನ ಒಪ್ಪಂದವನ್ನು ನಾಟಿಂಗ್‌ಹ್ಯಾಮ್‌ಷೈರ್‌ ಕೊನೆಗಾಣಿಸಿತು.

ಟಿಪ್ಪಣಿಗಳು[ಬದಲಾಯಿಸಿ]

  1. ಅವನ ಎತ್ತರಕ್ಕೆ ಸಂಬಂಧಿಸಿದಂತೆ ಮಾಹಿತಿಯ ಮೂಲಗಳು ಭಿನ್ನವಾಗುತ್ತಾ ಹೋಗುತ್ತವೆ. ಕ್ರಿಕ್‌ಇನ್ಫೋ ಅನುಸಾರ ಅವನ ಎತ್ತರವು 6 ಅಡಿ 9½ ಇಂಚುಗಳಷ್ಟಿದ್ದರೆ, ECB ಮತ್ತು ಇತರ ಅನೇಕ ಮೂಲಗಳ ಅನುಸಾರ ಅದು 6 ಅಡಿ 10 ಇಂಚುಗಳಷ್ಟಿದೆ, ಮತ್ತು ಎಸೆಕ್ಸ್‌‌ ಕೌಂಟಿ ಕ್ರಿಕೆಟ್‌‌ ಕ್ಲಬ್‌‌ ಅನುಸಾರ ಅದು 6 ಅಡಿ 10½ ಇಂಚುಗಳಷ್ಟಿದೆ. (2006ರ ಏಪ್ರಿಲ್‌ 16ರಂದು ಅಂತಿಮ ಉಲ್ಲೇಖವನ್ನು ಮರುಸಂಪಾದಿಸಲಾಯಿತು; 2006ರ ಆಗಸ್ಟ್‌ 29ರ ವೇಳೆಗೆ ಇದ್ದಂತೆ ಇದ್ದಂತೆ ದಾಖಲೆಯು ಲಭ್ಯವಿಲ್ಲ).
  2. ಸಸೆಕ್ಸ್‌ ಮತ್ತು ವಾರ್ವಿಕ್‌ಷೈರ್‌ ತಂಡಗಳನ್ನು ಪ್ರತಿನಿಧಿಸಿದ್ದ ಪಾಲ್‌ ಡಂಕೆಲ್ಸ್‌ ಕೂಡಾ 6 ಅಡಿ 10 ಇಂಚುಗಳಷ್ಟು ಎತ್ತರವಿದ್ದ ಎಂದು ಭಾವಿಸಲಾಗುತ್ತದೆ (ಕ್ರಿಕ್‌ಇನ್ಫೋ ಪ್ರೊಫೈಲ್‌). ಸರ್ರೆ ತಂಡದ ಆಂಥೊನಿ ಅಲಾಮ್‌ ಎಂಬಾತನ ಎತ್ತರವು 6 ಅಡಿ 9 ಇಂಚುಗಳು ಮತ್ತು 6 ಅಡಿ 10 ಇಂಚುಗಳ ನಡುವೆ ಇದೆ ಎಂಬಂತೆ ದಾಖಲಿಸಲ್ಪಟ್ಟಿದೆ (ಕ್ರಿಕ್‌ಇನ್ಫೋ ಪ್ರೊಫೈಲ್‌)
  3. ಕ್ರಿಕೆಟ್‌‌ ಆರ್ಕೀವ್‌‌ನಿಂದ ಪಡೆಯಲಾದ ಎಸೆಕ್ಸ್‌‌ vs ನಾಟಿಂಗ್‌ಹ್ಯಾಮ್‌ಷೈರ್‌, 18–21 ಸೆಪ್ಟೆಂಬರ್‌ 2002
  4. ಕ್ರಿಕೆಟ್‌‌ ಆರ್ಕೀವ್‌‌‌ನಿಂದ ಪಡೆಯಲಾದ ಜೆಫರ್‌ಸನ್‌‌'ಸ್‌ ಫಸ್ಟ್‌-ಕ್ಲಾಸ್‌ ಬ್ಯಾಟಿಂಗ್‌ ಆವರೇಜಸ್‌ ಬೈ ಸೀಸನ್‌
  5. ಕ್ರಿಕೆಟ್‌‌ ಆರ್ಕೀವ್‌‌‌‌ನಿಂದ ಪಡೆಯಲಾದ ಎಸೆಕ್ಸ್‌‌ ಸೆಕೆಂಡ್‌ XI v ಮೇರಿಲ್‌ಬೋನ್‌ ಕ್ರಿಕೆಟ್‌‌ ಕ್ಲಬ್‌‌ ಯಂಗ್‌‌ ಕ್ರಿಕೆಟರ್ಸ್‌‌, 10–12 ಆಗಸ್ಟ್‌‌ 2005
  6. ಕ್ರಿಕ್‌ಇನ್ಫೋದಿಂದ ಪಡೆಯಲಾದ ಜೆಫರ್‌ಸನ್‌‌ ಸಫರ್ಸ್‌ ಫ್ರೀಕ್‌ ಇಂಜುರಿ
  7. ಎಸೆಕ್ಸ್‌‌ ಕೌಂಟಿ ಕ್ರಿಕೆಟ್‌‌ ಕ್ಲಬ್‌‌ನಿಂದ ಪಡೆಯಲಾದ ಪತ್ರಿಕಾ ಪ್ರಕಟಣೆ
  8. ನಾಟಿಂಗ್‌ಹ್ಯಾಮ್‌ಷೈರ್‌ ಕೌಂಟಿ ಕ್ರಿಕೆಟ್‌‌ ಕ್ಲಬ್‌‌‌‌‌ನಿಂದ ಪಡೆಯಲಾದ ಪತ್ರಿಕಾ ಪ್ರಕಟಣೆ
  9. ECBಯಿಂದ ಪಡೆಯಲಾದ ಪತ್ರಿಕಾ ಪ್ರಕಟಣೆ
  10. ನಾಟಿಂಗ್‌ಹ್ಯಾಮ್‌ಷೈರ್‌ ಕೌಂಟಿ ಕ್ರಿಕೆಟ್‌‌ ಕ್ಲಬ್‌‌‌‌ನಿಂದ ಪಡೆಯಲಾದ ಪತ್ರಿಕಾ ಪ್ರಕಟಣೆ

ಉಲ್ಲೇಖಗಳು‌[ಬದಲಾಯಿಸಿ]