ವಿಮೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಮೆ: ಅನಿಶ್ಚಿತ ನಷ್ಟ ಎಂಬ ಗಂಡಾಂತರದ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರೂಪಿಸುವ ಒಂದು ರೀತಿಯ ಅಪಾಯ ನಿರ್ವಹಣೆಯ ಉಪಾಯವೇ ವಿಮೆ ಎಂದು ಕಾನೂನು ಮತ್ತು ಅರ್ಥಶಾಸ್ತ್ರ ಪರಿಗಣಿಸುತ್ತವೆ.ಗಡಾಂತರದಿಂದ ಸಂಭವಿಸುವ ನಷ್ಟವನ್ನು ಭರ್ತಿ ಮಾಡುವುದಕ್ಕಾಗಿ, ಪಾವತಿ ಮಾಡಿರುವ 'ಕಂತಿ'ನ ಮೊತ್ತದ ನ್ಯಾಯೋಚಿತ ವಿನಿಮಯವೇ ವಿಮೆ ಎಂದು ವಿಮೆಯನ್ನು ವಿವರಿಸಲಾಗಿದೆ.ಭಾರೀ ಪ್ರಮಾಣದ ಸಂಭವನೀಯ ವಿನಾಶಕಾರಿ ನಷ್ಟವನ್ನು ತಡೆಗಟ್ಟುವ ಉದ್ದೇಶದಿಂದ ಅನುಭವಿಸುವ ನಿಶ್ಚಿತವೂ, ಗೊತ್ತಿರುವಂಥದ್ದೂ ಆದ ಅಲ್ಪ ಪ್ರಮಾಣದ ನಷ್ಟವೆಂದೂ ಇದನ್ನು ಭಾವಿಸಬಹುದು. ವಿಮೆಗಾರ ಎಂದರೆ ವಿಮೆ ಸೇವೆಯನ್ನು ಒದಗಿಸುವ ಸಂಸ್ಥೆ. ವಿಮೆದಾರ ಅಥವಾ ಪಾಲಿಸಿದಾರ ಎಂದರೆ ವಿಮೆಯ ಸೌಲಭ್ಯವನ್ನು ಪಡೆದಿರುವ ವ್ಯಕ್ತಿ ಅಥವಾ ಘಟಕ. ಇಂತಿಷ್ಟು ಮೊತ್ತದ ವಿಮೆ ರಕ್ಷಣೆ ಪಡೆಯ ಬಯಸಿದಾಗ ಇಂತಿಷ್ಟು ಶುಲ್ಕ ತೆರಬೇಕು ಎಂದು ನಿರ್ಣಯಿಸುವ ಅಂಶವೇ ವಿಮಾ ದರ .ಇದೇ ವಿಮಾ ಪ್ರೀಮಿಯಂ (=ವಿಮಾ ಕಂತು) ಅಪಾಯ ನಿರ್ವಹಣೆಯು ಮೌಲ್ಯ ನಿರ್ಣಯ ಮತ್ತು ಅಪಾಯ ನಿಯಂತ್ರಣದ ನಡುವಿನ ಕಸರತ್ತು, ಇದು ವಿಭಿನ್ನವಾದ ಅಧ್ಯಯನ ಮತ್ತು ಪ್ರಯೋಗದ ಕ್ಷೇತ್ರವಾಗಿ ಹೊರಹೊಮ್ಮಿದೆ.


ವಿಮೆಯ ತತ್ವಗಳು[ಬದಲಾಯಿಸಿ]

ವಾಣಿಜ್ಯ ರೂಪದಲ್ಲಿ ವಿಮೆಯ ರಕ್ಷಣೆಗೆ ಒಳಗಾಗಬಲ್ಲ ಅಪಾಯಗಳು ವಿಶಿಷ್ಟವಾಗಿ ಏಳು ಸಾಮಾನ್ಯ ಗುಣಗಳನ್ನು ಹೊಂದಿವೆ:[೧]


  1. ಏಕರೂಪದ ಅಪಾಯಕ್ಕೆ ತುತ್ತಾಗುವಂಥ ಘಟಕಗಳು. ಅಧಿಕ ಸದಸ್ಯರಿರುವ ಸಂಸ್ಥೆಯಲ್ಲಿನ ವ್ಯಕ್ತಿಗಳಿಗೆ ನೀಡಲಾಗಿರುವ ವಿಮಾ ಪಾಲಿಸಿಗಳ ಸಂಖ್ಯೆಯದ್ದೇ ಸಿಂಹ ಪಾಲು. ಉದಾಹರಣೆಗೆ, 2004ರಲ್ಲಿ ಸುಮಾರು 175 ದಶಲಕ್ಷ ವಾಹನಗಳಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಾಹನ ವಿಮೆ ರಕ್ಷಣೆಯನ್ನು ಒದಗಿಸಲಾಗಿತ್ತು.[೨] ಏಕರೂಪದ ಅಪಾಯಕ್ಕೆ ತೆರೆದುಕೊಂಡಿರುವ ಘಟಕಗಳು ಹೆಚ್ಚಿದ್ದಷ್ಟೂ 'ಸಂಖ್ಯಾ ಬಲ ನಿಯಮ'ದ ಆಧಾರದ ಮೇಲೆ ದೊಡ್ಡ ಪ್ರಮಾಣದ ಕಾನೂನುವಿಮಾಗಾರರಿಗೆ ಹೆಚ್ಚು ಪ್ರಯೋಜನ. ಏಕೆಂದರೆ, ಇಂಥ ಘಟಕಗಳು ಹೆಚ್ಚಿದಾಗೆಲ್ಲ ನೈಜ ಫಲಿತಾಂಶಗಳು ಸಹ ನಿರೀಕ್ಷಿತ ಮಟ್ಟಕ್ಕೆ ಸನಿಹವಾಗುವ ಸಾಧ್ಯತೆಗಳೂ ಹೆಚ್ಚು. ಈ ಮಾನದಂಡಕ್ಕೆ ಅಪವಾದಗಳುಂಟು. ಲಾಯ್ಡ್ಸ್‌ ಆಫ್‌ ಲಂಡನ್‌ ನಟ-ನಟಿಯರ ಮತ್ತು ಕ್ರೀಡಾಪಟುಗಳ ಜೀವನ ಅಥವಾ ಆರೋಗ್ಯ ವಿಮೆ ಮಾಡುವುದರಲ್ಲಿ ಸುವಿಖ್ಯಾತ. ಉಪಗ್ರಹ ಉಡಾವಣೆ ಸಂದರ್ಭದಲ್ಲಿ ಅಪರೂಪಕ್ಕೆ ಎದುರಾಗಬಹುದಾದ ಘಟನೆಗಳ ಮೇಲೂ ವಿಮಾ ರಕ್ಷಣೆ ಒದಗಿಸುವುದುಂಟು. 'ಏಕರೂಪದ' ಅಪಾಯಕ್ಕೆ ಒಡ್ಡಿಕೊಳ್ಳದ ಘಟಕಗಳಿಲ್ಲದ ಬೃಹತ್ ವಾಣಿಜ್ಯ ಆಸ್ತಿಪಾಸ್ತಿಗಳ ಮೇಲೂ ವಿಶೇಷ ಪಾಲಿಸಿಗಳ ವಿಮೆ ಇಳಿಸಬಹುದಾಗಿದೆ. ಇಂಥ ಸನ್ನಿವೇಶ ಇರದೇ ಇದ್ದಾಗಲೂ ಈ ರೀತಿಯ ಅನೇಕ ಅಪಾಯಗಳನ್ನೂ ವಿಮಾ-ಯೋಗ್ಯವೆಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ.
  2. ನಿರ್ದಿಷ್ಟ ನಷ್ಟ . ಗೊತ್ತಾದ ಸಮಯ ಮತ್ತು ಗೊತ್ತಾದ ಸ್ಥಳದಲ್ಲಿ, ಗೊತ್ತಾದ ಮೂಲದಿಂದ, ವಿಮಾದಾರರಿಗೆ ತತ್ತ್ವತಃ, ಉಂಟಾಗುವ ಕನಿಷ್ಠ ನಷ್ಟಕ್ಕೆ ಕಾರಣವಾಗುವ ಘಟನೆಯು ಸಂಭವಿಸುವುದುಂಟು. ಜೀವ ಮಿಮೆ ಪಾಲಿಸಿದಾರನೊಬ್ಬನ ನಿಧನ ಇದಕ್ಕೊಂದು ಉತ್ತಮ ಉದಾಹರಣೆ. ಅಗ್ನಿ ಆಕಸ್ಮಿಕ,ವಾಹನ ಅಪಘಾತ, ಮತ್ತು ಕಾರ್ಮಿಕರಿಗೆ ಸಂಭವಿಸುವ ಗಾಯ - ಇವೆಲ್ಲವೂ ಈ ಮಾನದಂಡದ ಅಡಿಯೇ ಬರುತ್ತದೆ. ಇತರೆ ನಷ್ಟಗಳು ಕೇವಲ ತಾತ್ವಿಕವಾಗಿ ನಿರ್ಧಾರವಾಗುವಂಥದ್ದು. ಉದಾಹರಣೆಗೆ, ಔದ್ಯೋಗಿಕ ರೋಗಗಳು ಯಾವುದೇ ವಿಶಿಷ್ಟ ಸಮಯ, ಸ್ಥಳ ಅಥವಾ ಕಾರಣಗಳಿಂದಾಗಿ ಹೀಗಾಗಿದೆ ಎಂದು ಗುರುತಿಸಲಾಗದಂತಹ ಹಾನಿಕಾರಕ ಸ್ಥಿತಿಗಿಳಿಯಲು ದೀರ್ಘಾವಧೀ ಅಪಾಯಕ್ಕೆ ತೆರೆದುಕೊಂಡಿರುವುದೇ ಕಾರಣವಾಗಿರಬಹುದು. ಸಾಕಷ್ಟು ಮಾಹಿತಿಯನ್ನು ಹೊಂದಿರುವ ವ್ಯಕ್ತಿಯು ನಷ್ಟ ಸಂಭವಿಸಿದ ಸಮಯ, ಸ್ಥಳ ಮತ್ತು ನಷ್ಟದ ಕಾರಣವನ್ನು ಪರಿಶೀಲಿಸಬಹುದು. ಆದ್ದರಿಂದ ಈ ಮೂರೂ ಮಾಹಿತಿ ಸಾಕಷ್ಟು ಸ್ಪಷ್ಟವಾಗಿರುವುದು ಅಪೇಕ್ಷಣೀಯ.
  3. ಆಕಸ್ಮಿಕ ನಷ್ಟ . ವಿಮೆಯ ಪರಿಹಾರ ಹಣಕ್ಕೆ ಬೇಡಿಕೆ ಸಲ್ಲಿಸಿದಾಗ, ಸಂಭವಿಸಿದ ಆಕಸ್ಮಿಕ ಅನುದ್ದೇಶಿತವಾಗಿರಬೇಕು, ಅಥವಾ ಕನಿಷ್ಠ ಪಕ್ಷ ಫಲಾನುಭವಿಯ ಕೈಮೀರಿದ ಆಕಸ್ಮಿಕ ಅದಾಗಿರಬೇಕು. ನಷ್ಟವು 'ಸುಸ್ಪಷ್ಟ'ವಾಗಿರಬೇಕು, ಅರ್ಥಾತ್‌, ವೆಚ್ಚಕ್ಕೆ ಅವಕಾಶ ಇರುವಂಥ ಘಟನೆಯಿಂದ ಮಾತ್ರ ಅದು ಸಂಭವಿಸಿರಬೇಕು. ಊಹಾತ್ಮಕ ಅಂಶಗಳನ್ನು ಹೊಂದಿರುವ ಘಟನೆಗಳನ್ನು ಸಾಮಾನ್ಯವಾಗಿ ವಿಮಾ-ಯೋಗ್ಯವೆಂದು ಪರಿಗಣಿಸಲಾಗದು.ವ್ಯವಹಾರದಲ್ಲಿನ ಭಯ ಇದಕ್ಕೊಂದು ಉದಾಹರಣೆ.
  4. ಭಾರೀ ನಷ್ಟ . ನಷ್ಟದ ಗಾತ್ರ ವಿಮಾದಾರನ ದೃಷ್ಟಿಯಲ್ಲಿ ಅರ್ಥಪೂರ್ಣವಾಗಿರಬೇಕು. ನಷ್ಟದ ನಿರೀಕ್ಷಿತ ವೆಚ್ಚಗಳು ಹಾಗೂ ವಿಮೆ ಪಾಲಿಸಿ ನೀಡುವಿಕೆ ಮತ್ತು ಆಡಳಿತಾತ್ಮಕಆಡಳಿತಾತ್ಮಕ ವೆಚ್ಚ, ನಷ್ಟಗಳ ಹೊಂದಾಣಿಕೆ,ಮತ್ತು ಪರಿಹಾರ ಬೇಡಿಕೆಯನ್ನು ಈಡೇರಿಸಲು ಬೇಕಾದ ಬಂಡವಾಳ ಪೂರೈಕೆ ಹಾಗೂ ಬೇಡಿಕೆ ಬಂದಾಗ ಪರಿಹಾರವನ್ನು ಈಡೇರಿಸಲು ಸಂಸ್ಥೆಗೆ ಇರುವ ತಾಕತ್ತಿನ ಭರವಸೆ ನೀಡಿಕೆ-ಈ ಎಲ್ಲವನ್ನೂ ವಿಮೆ ಕಂತು ಒಳಗೊಂಡಿದೆ. ನಿರೀಕ್ಷಿತ ನಷ್ಟ ವೆಚ್ಚದ ಗಾತ್ರ ಮೇಲೆ ಹೇಳಲಾದ ಸಣ್ಣ ಪುಟ್ಟ ನಷ್ಟಕ್ಕಿಂತ ಬಹುಪಟ್ಟು ದೊಡ್ಡದು. ಇಂಥ ವೆಚ್ಚಗಳಿಗೆ ಹೋಲಿಸಿದಾಗ, ಒದಗಿಸಲಾದ ರಕ್ಷಣೆಯ ಮೌಲ್ಯ ಅಧಿಕವಾಗಿ ಇರದಿದ್ದಲ್ಲಿ ಈ ವೆಚ್ಚಗಳನ್ನು ಕೊಳ್ಳುಗನ ಮೇಲೆ ಹೇರುವುದರಲ್ಲಿ ಏನೂ ಅರ್ಥವಿಲ್ಲ.
  5. ವಿಮಾ ಕಂತು . ವಿಮೆ ಇಳಿಸುವ ಘಟನಾವಳಿ ಭಾರೀ ವೆಚ್ಚದ್ದಾಗಿದ್ದರೆ,ಒದಗಿಸಲಾಗುವ ರಕ್ಷಣೆ ವಿಮಾ ಕಂತಿಗಿಂತಲೂ ಅಧಿಕವಾಗಿದ್ದ ಪಕ್ಷದಲ್ಲಿ, ನೀಡಿದರೂ ಕೂಡಾ ಯಾರೂ ವಿಮಾ ಸೇವೆಯನ್ನು ಕೊಳ್ಳಲು ಮುಂದಾಗದಿರುವ ಸಂಭವವುಂಟು. ವಿಮೆಕಂತು ವಿಮೆದಾರನಿಗೆ ಗಮನಾರ್ಹವಾಗಿ ಭಾರವಾಗದಂತಿರಬೇಕು ಮತ್ತು ಯಾವ ರೀತಿಯಿಂದಲೂ ಅದು ವಿಮೆದಾರನಿಗೆ ನಷ್ಟವನ್ನುಂಟು ಮಾಡದಂತಿರಬೇಕು ಎಂಬುದನ್ನು ಹಣಕಾಸು ಲೆಕ್ಕಪತ್ರ ವೃತ್ತಿ ನಿರತರು ಮಾನ್ಯಮಾಡುತ್ತಾರೆ. ನಷ್ಟಕ್ಕೆ ಆಸ್ಪದವೇ ಇಲ್ಲದಿದ್ದಲ್ಲಿ ಇಲ್ಲಿನ ಕೊಡುಕೊಳ್ಳುವಿಕೆ ವ್ಯವಹಾರಕ್ಕೆ ವಿಮೆಯ ರೂಪ ಇರುತ್ತದೆಯೇ ಹೊರತು ಸತ್ವ ಇರುವುದಿಲ್ಲ. (U.S. ಫೈನ್ಯಾನ್ಷಿಯಲ್‌ ಅಕೌಂಟಿಂಗ್‌ ಸ್ಟ್ಯಾಂಡರ್ರ್ಡ್ಸ್‌ ಬೋರ್ಡ್‌ ಸ್ತ್ಯಾಂಡರ್ಡ್‌ ನಂಬರ್‌ 113(=ಹಣಕಾಸು ಲೆಕ್ಕಶಾಸ್ತ್ರ ಗುಣಮಟ್ಟಗಳ ಮಂಡಳಿ ಗುಣಮಟ್ಟ ಸಂಖ್ಯೆ 113 ನೋಡಿ)
  6. ಲೆಕ್ಕ ಹಾಕಬಹುದಾದ ನಷ್ಟ . ಔಪಚಾರಿಕವಾಗಿ ಲೆಕ್ಕ ಹಾಕಲು ಆಗದಿದ್ದರೂ, ಕನಿಷ್ಠ ಪಕ್ಷ ಅಂದಾಜು ಮಾಡಬೇಕಾದ ಎರಡು ಅಂಶಗಳಿವೆ:ಒಂದು ನಷ್ಟದ ಸಂಭಾವ್ಯತೆ ಮತ್ತೊಂದು ದೇಖರೇಖೆಯ ವೆಚ್ಚ. ನಷ್ಟದ ಸಂಭಾವ್ಯತೆ ಲೆಕ್ಕಾಚಾರ ಸಾಮಾನ್ಯವಾಗಿ ಒಂದು ಅನುಭವಾತ್ಮಕ ಕಸರತ್ತು. ನಷ್ಟದ ಪುನರ್ವಶ್ಯದ ಖಚಿತ ವಸ್ತುನಿಷ್ಠ ಮೌಲ್ಯಮಾಪನವನ್ನು ಮಾಡಲು ವಿಮೆ ಪಾಲಿಸಿಯ ಜೊತೆಗೆ ನಷ್ಟದ ಸಾಕ್ಷ್ಯದೊಂದಿಗೆ ಆ ವಿಮೆ ಪಾಲಿಸಿಯಡಿ ವಿಮೆ ಹಣದ ಬೇಡಿಕೆಯನ್ನು ಸಲ್ಲಿಸುವ ವ್ಯಕ್ತಿಯ ಶಕ್ಯತೆಯನ್ನು ಅವಲಂಬಿಸಿದೆ.
  1. ಅನಾಹುತಗಳಿಂದಾದ ಭಾರೀ ನಷ್ಟ ಮತ್ತು ಸೀಮಿತ ರಕ್ಷಣೆ ಗಂಡಾಂತರ ಎನ್ನುವುದು ಸಮೂಹಕ್ಕೇ ಮುತ್ತಿಗೆ ಹಾಕುವ ಅಪಾಯವಿದೆ. ಇಂಥ ಘಟನೆಯು ಒಂದೇ ವಿಮಾ ಸಂಸ್ಥೆ ನೀಡಿರುವ ವಿಮೆ ಪಾಲಿಸಿಯನ್ನು ಕೊಂಡ ಹಲವಾರು ವಿಮಾದಾರರಿಗೆ ನಷ್ಟ ಸಂಭವಿಸಿದರೆ, ಪಾಲಿಸಿಗಳನ್ನು ವಿತರಿಸಿರುವ ಆ ಸಂಸ್ಥೆಯ ಸಾಮರ್ಥ್ಯವನ್ನು ಬಿಕ್ಕಟ್ಟಿಗೆ ಸಿಲುಕಿಸುತ್ತದೆ.ವಿಮೆ ಪಡೆಯಲಾದ ವ್ಯಕ್ತಿಗೆ ಒದಗಿದ ಪರಿಸ್ಥಿತಿಗಿಂತಲೂ ಹೆಚ್ಚಾಗಿ ಇಂಥ ತೊಂದರೆಯ ಕಂದಕಕ್ಕೆ ಬಿದ್ದ ಹಲವಾರು ವ್ಯಕ್ತಿಗಳ ಒಟ್ಟು ಮೊತ್ತದ ಹೊಣೆ ಸಂಸ್ಥೆಯ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ವಿಶಿಷ್ಟವಾಗಿ, ವಿಮೆಗಾರನು ಒಂದೇ ಘಟನೆಯಿಂದ ಪರಿಣಮಿಸುವ ನಷ್ಟಕ್ಕೆ ಮಾತ್ರ ತಮ್ಮ ಜವಾಬ್ದಾರಿಯನ್ನು ವಹಿಸುತ್ತಾನೆ ಮತ್ತು ಬಂಡವಾಳದ ಸುಮಾರು 5 ಪರ್ಸೆಂಟ್‌ನಷ್ಟು ಸಣ್ಣ ಅಂಶ‌ಕ್ಕೆ ಹೊಣೆಯನ್ನು ಸೀಮಿತಗೊಳಿಸಲು ಇಚ್ಛಿಸುತ್ತಾರೆ. ನಷ್ಟವು ಉಲ್ಬಣಗೊಂಡಾಗ ಅಥವಾ ವ್ಯಕ್ತಿಯ ಪಾಲಿಸಿ ವಿಶೇಷವಾಗಿ ಭಾರಿ ವಿಮೆ ಹಣದ ಬೇಡಿಕೆಯ ಹಕ್ಕುಳ್ಳ ಪಕ್ಷದಲ್ಲಿ, ಹೆಚ್ಚುವರಿ ಪಾಲಿಸಿದಾರರನ್ನು ಹೊಂದಲು ವಿಮೆಗಾರನು ಬಂಡವಾಳದ ನಿರ್ಬಂಧಕ್ಕೆ ಈಡಾಗುತ್ತಾನೆ. ಭೂಕಂಪ ವಿಮೆಯು ಇದಕ್ಕೊಂದು ಉತ್ತಮ ಉದಾಹರಣೆ: ವಿಮೆಗಾರನು ಆಗಲೇ ವಿಮೆ ಇಳಿಸಿರುವ ಪಾಲಿಸಿಗಳ ಸಂಖ್ಯೆ ಮತ್ತು ಗಾತ್ರದ ಆಧಾರದ ಮೇಲೆ ಹೊಸ ವಿಮೆ ಪಾಲಿಸಿ ಬರೆದುಕೊಡುವ ಸಾಮರ್ಥ್ಯವು ನಿಂತಿದೆ. ಚಂಡ ಮಾರುತ ಅಪ್ಪಳಿಸುವ ಪ್ರದೇಶಗಳಲ್ಲಿ ನೀಡಲಾಗುವ 'ವಾಯು ವಿಮೆ' ಇಂಥ ಸನ್ನಿವೇಶ ನಿರ್ಮಿಸುವ ಮತ್ತೊಂದು ನಿದರ್ಶನ. ಕರಾವಳಿ ಪ್ರದೇಶಕ್ಕೆ ಇದು ವಿಶೇಷವಾಗಿ ಅನ್ವಯಿಸುತ್ತದೆ. ಹೀಗೆ ಒಟ್ಟೊಟ್ಟಾಗಿ ಒಡ್ಡುಕೊಂಡು ಬರುವ ಸಾಮೂಹಿಕ ಪ್ರಕರಣಗಳು ಉದ್ಯಮದ ಮೇಲೆ ದುಷ್ಪರಿಣಾಮ ಬೀರಬಹುದು.ಏಕೆಂದರೆ, ಇಡೀ ಸಮುದಾಯವೇ ಅಪಾಯಕ್ಕೆ ಈಡಾಗಬಹುದಾದ ವಲಯಗಳಲ್ಲಿನ ಸಂಭಾವ್ಯ ಪಾಲಿಸಿದಾರರ ಅಗತ್ಯಗಳಿಗೆ ಹೋಲಿಸಿದರೆ, ವಿಮೆಗಾರ ಮತ್ತು ನವೀಕರಿಸುವ ಸಂಸ್ಥೆಯ ಸಂಯುಕ್ತ ಬಂಡವಾಳವು ಕಡಿಮೆ ಮೊತ್ತದ್ದಾಗಿರುತ್ತದೆ. ಅಗ್ನಿ ಅನಾಹುತದಿಂದ ರಕ್ಷಣೆ ಪಡೆಯಲು ವಾಣಿಜ್ಯ ಸಂಸ್ಥೆಯೊಂದು ಇಳಿಸಿದ ಆಸ್ತಿ ಮೌಲ್ಯವು ವಿಮೆಗಾರನೊಬ್ಬನ ಒಟ್ಟಾರೆ ಬಂಡವಾಳವನ್ನು ಮೀರುವಂಥ ವಿಮೆಯಾಗಿರುವ ಸಾಧ್ಯತೆಯುಂಟು. ಅಂತಹ ಆಸ್ತಿಪಾಸ್ತಿಗಳನ್ನು ಸಾಮಾನ್ಯವಾಗಿ ಬೇರೆಬೇರೆ ವಿಮಾ ಸಂಸ್ಥೆಗಳ ಜೊತೆ ಆಂಶಿಕವಾಗಿ ವಿಮೆ ಇಳಿಸಲಾಗಿರುತ್ತೆ. ಅಥವಾ ಸಂಘಟಿತ ಮರುವಿಮೆ ಮಾರುಕಟ್ಟೆಯಲ್ಲಿ ಅಪಾಯವನ್ನು ಒಬ್ಬ ವಿಮೆಗಾರರಿಂದ ವಿಮೆ ಇಳಿಸಲಾಗುತ್ತದೆ.


ನಷ್ಟ ಪರಿಹಾರ[ಬದಲಾಯಿಸಿ]

ಆಗಿರುವ ನಷ್ಟವನ್ನು ತುಂಬಿಕೊಡುವುದು 'ನಷ್ಟ ಪರಿಹಾರ'ಎಂಬುದುರ ತಾಂತ್ರಿಕ ವಿವರಣೆ. ವಿಮೆ ಇಳಿಸುವ ಒಪ್ಪಂದದಲ್ಲಿ ಎರಡು ವಿಧಗಳಿವೆ:


  1. "ನಷ್ಟ ಪರಿಹಾರ" ಭರಿಸುವ ಪಾಲಿಸಿ ಮತ್ತು

"ಪರವಾಗಿ ಪಾವತಿ ಮಾಡುವಂಥ" ಅಥವಾ "ಪರವಾಗಿ"[೩] ಪಾಲಿಸಿ. ಲಿಖಿತ ರೂಪದಲ್ಲಿ ವ್ಯತ್ಯಾಸವು ಗಮನಾರ್ಹವಾಗಿದೆ, ಆದರೆ ಅದು ಪ್ರಯೋಗದಲ್ಲಿ ಅತಿ ವಿರಳ.


ವಿಮೆದಾರರು ತಮ್ಮ ಜೇಬಿನಿಂದ ಮೂರನೆಯ ಪಕ್ಷದವರಿಗೆ ಹಣವನ್ನು ಪಾವತಿಸುವವರೆಗೂ, 'ನಷ್ಟ ಪರಿಹಾರ' ಪಾಲಿಸಿಯು ಪರಿಹಾರವನ್ನು ಪಾವತಿ ಮಾಡುವುದಿಲ್ಲ. ಉದಾಹರಣೆಗೆ, ನಿಮ್ಮ ಮನೆಗೆ ಭೇಟಿ ನೀಡುವವರು ನಿಮ್ಮ ಮನೆಯ ಒದ್ದೆ ನೆಲದ ಮೇಲೆ ಜಾರಿಬಿದ್ದು, ನಿಮ್ಮ ವಿರುದ್ಧ $10,000 ಮೊಕದ್ದಮೆ ಹೂಡಿ, ತೀರ್ಪನ್ನು ತಮ್ಮ ಪರವಾಗಿ ಮಾಡಿಕೊಳ್ಳುತ್ತಾರೆ. ಭೇಟಿ ನೀಡಿದವರು ಜಾರಿ ಬಿದ್ದದ್ದಕ್ಕೆ 'ನಷ್ಟ ಪರಿಹಾರ' ಪಾಲಿಸಿಯಡಿ ಮನೆಯ ಮಾಲೀಕರು ಈ $10,000 ಪಾವತಿಸಿ, ತಮ್ಮ ಜೇಬಿನಿಂದ ಭರಿಸಿದ ವೆಚ್ಚಗಳಿಗಾಗಿ ($10,000) ವಿಮೆ ವಾಹಕರ ಮೂಲಕ 'ನಿರ್ಬಾಧಿತ'ರಾಗುವರು.[೪]


ಇದೇ ಪರಿಸ್ಥಿತಿಯಲ್ಲಿ, 'ಪರವಾಗಿನ ಪಾವತಿ' ಪಾಲಿಸಿಯಂತೆ, ವಿಮೆ ವಾಹಕರು ಬೇಡಿಕೆಯ ವಿಮೆ ಹಣವನ್ನು ಪಾವತಿಸಿ ವಿಮೆದಾರ (ಮನೆಯ ಮಾಲೀಕ) ಯಾವುದೇ ಕಾರಣಕ್ಕೂ ಜೇಬಿನಿಂದ ಹಣ ತೆತ್ತಬೇಕಿಲ್ಲ. ಅಧುನಿಕ ಬಾಧ್ಯತೆ ವಿಮೆಯಲ್ಲಿ ಹೆಚ್ಚಿನವು 'ಪರವಾಗಿ ಪಾವತಿ' ಆಧಾರದ ಮೇಲೆ ಬರೆಯಲಾಗಿದೆ.[೫]


'ವಿಮೆಗಾರರು' (ವಿಮೆ ನೀಡುವ ಪಂಗಡ), ವಿಮೆ 'ಪಾಲಿಸಿ' ಎಂಬ ಕರಾರಿನ ಮೂಲಕ ವಿಮ ಅಪಾಯವನ್ನು ವಹಿಸಿದೊಡನೆಯೇ, ಅಪಾಯವನ್ನು ವರ್ಗಾಯಿಸಲು ಬಯಸುತ್ತಿರುವ ಘಟಕವು (ವ್ಯಕ್ತಿ, ನಿಗಮ ಅಥವಾ ಯಾವುದೇ ತರಹದ ಒಕ್ಕೂಟ ಇತ್ಯಾದಿ) 'ವಿಮೆದಾರ'ರಾಗುತ್ತಾರೆ/ವಾಗುತ್ತದೆ. ಸಾಮಾನ್ಯವಾಗಿ, ಒಂದು ವಿಮೆ ಕರಾರು ಕನಿಷ್ಥ ಪಕ್ಷದಲ್ಲಿ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ: ಪಕ್ಷಗಳು (ವಿಮೆಗಾರ, ವಿಮೆದಾರ, ಫಲಾನುಭವಿಗಳು), ವಿಮೆ ಕಂತು, ವಿಮೆ ರಕ್ಷಣೆಯ ಅವಧಿ, ವ್ಯಾಪ್ತಿಗೆ ಸೇರಿಸಿಕೊಂಡ ವಿಶಿಷ್ಟ ನಷ್ಟ ಘಟನೆ, ರಕ್ಷಣೆಯ ಮೊತ್ತ (ನಷ್ಟ ಸಂಭವಿಸಿದಾಗ ವಿಮೆದಾರರಿಗೆ ಅಥವಾ ಫಲಾನುಭವಿಗೆ ನೀಡಬೇಕಾದ ಹಣದ ಮೊತ್ತ), ಮತ್ತು ಹೊರತುಗಳು (ವ್ಯಾಪ್ತಿಗೊಳಪಡದ ಘಟನೆಗಳು). ಹಾಗಾಗಿ, ವಿಮೆದಾರರು ಪಾಲಿಸಿಯಲ್ಲಿ ಸೇರಿಸಿಕೊಳ್ಳಲಾದ ನಷ್ಟಗಳಿಂದ ನಿರ್ಬಾಧಿತರಾಗುತ್ತಾರೆ.


ವಿಮೆದಾರ ಪಕ್ಷವು ವಿಶಿಷ್ಟ ಅಪಾಯದಲ್ಲಿ ನಷ್ಟವನ್ನು ಅನುಭವಿಸಿದಾಗ, ವಿಮೆ ಪಾಲಿಸಿಯಲ್ಲಿ ಸೂಚಿಸಿದಂತೆ ಪಾಲಿಸಿದಾರರು ವಿಮೆಗಾರರ ವಿರುದ್ಧ 'ವಿಮೆ ಪರಿಹಾರದ ಬೇಡಿಕೆ'ಯನ್ನು ಸಲ್ಲಿಸಬಹುದು. ವಿಮೆದಾರರು ಅಪಾಯವನ್ನು ವಹಿಸಿಕೊಳ್ಳುವ ವಿಮೆಗಾರರಿಗೆ ಪಾವತಿ ಮಾಡಲಾದ ಹಣದ ಮೊತ್ತಕ್ಕೆ 'ವಿಮೆ ಕಂತು' ಎನ್ನಲಾಗುತ್ತದೆ. ಹಲವಾರು ವಿಮೆದಾರರಿಂದ ಸಂದ ವಿಮೆ ಕಂತುಗಳನ್ನು ಆನಂತರದ ವಿಮೆ ಹಣ ಬೇಡಿಕೆ ಸಲ್ಲಿಸುವವವರಿಗಾಗಿ ಪಾವತಿ ಮಾಡಲೆಂದು (ಸೈದ್ಧಾಂತಿಕವಾಗಿ ತುಲನಾತ್ಮಕವಾಗಿ ಕಡಿಮೆ ವಿಮೆ ಹಣ ಬೇಡಿಕೆಯ ಸಲ್ಲಿಕೆ) ಮೀಸಲಿಟ್ಟ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಹಾಗೂ ಹೆಚ್ಚುವರಿಸಾಮಾನ್ಯ ಆಡಳಿತದ ಖರ್ಚಿಗೆ ಬಳಸಲಾಗುತ್ತದೆ. ವಿಮೆಗಾರರು ಮುಂದಾಲೋಚಿಸುವ ನಷ್ಟಗಳಿಗಾಗಿ ಸಾಕಷ್ಟು ಹಣವನ್ನು ಮೀಸಲಿಡುವವರೆಗೂ,(ಆಪದ್ಧನ) ಉಳಿದ ಮೊತ್ತವು ವಿಮೆಗಾರರ ಲಾಭವಾಗುತ್ತದೆ.



ವಿಮೆಗಾರರ ವ್ಯವಹಾರ ಮಾದರಿ[ಬದಲಾಯಿಸಿ]

ವಿಮೆ ಇಳಿಸುವಿಕೆ ಮತ್ತು ಹೂಡಿಕೆ[ಬದಲಾಯಿಸಿ]

ವ್ಯವಹಾರ ಮಾದರಿಯನ್ನು ಒಂದು ಸರಳ ಸಮೀಕರಣದ ರೂಪದಲ್ಲಿ ಸೂಚಿಸಬಹುದು: ಲಾಭ = ವಿಮೆಕಂತಿನ ಗಳಿಕೆ + ಹೂಡಿಕೆ ಆದಾಯ -ಅನುಭವಿಸಲಾದ ನಷ್ಟ - ವಿಮೆ ಇಳಿಸಲು ತಗಲುವ ವೆಚ್ಚ.


ವಿಮೆಗಾರರು ಎರಡು ರೀತಿಗಳಲ್ಲಿ ಹಣ ಗಳಿಸುತ್ತಾರೆ:

  1. ವಿಮಾ ಇಳಿಸುವಿಕೆಯ ಮೂಲಕ ವಿಮೆಗಾರರು ವಿಮೆ ಮಾಡಬೇಕಾದ ಅಪಾಯಗಳನ್ನು ಆಯ್ಕೆ ಮಾಡಿ, ಈ ಅಪಾಯಗಳ ಸ್ವೀಕೃತಿಗಾಗಿ ವಿಮಾ ಕಂತನ್ನು ನಿರ್ಣಯಿಸುವರು;
  2. ವಿಮೆ ಇಳಿಸಿ ವಿಮಾ ಕಂತುಗಳಿಂದ ಸಂಗ್ರಹಿಸಿದ ಹಣವನ್ನು ಹೂಡಿಕೆ ಮಾಡುವುದು.


ವಿಮೆ ಇಳಿಸಿ ಪಾಲಿಸಿಗಳನ್ನು ತೆರೆಯುವುದೇ ವಿಮಾಪತ್ರದ ಜವಾಬ್ದಾರಿಯ ನಿರ್ವಹಣೆ ವಿಮಾ ವ್ಯವಹಾರದ ಅತಿ ಜಟಿಲ ವಿಚಾರ. ಮಾಹಿತಿಯ ವಿಸ್ತಾರಿತ ವಿಂಗಡಿಕೆಯನ್ನು ಬಳಸಿ, ವಿಮೆಗಾರರು ತಮ್ಮ ಪಾಲಿಸಿಗಳ ಮೇಲೆ ಬರಬಹುದಾದ ವಿಮೆ ಪರಿಹಾರ ಬೇಡಿಕೆಯ ಸಂಭಾವ್ಯತೆಯನ್ನು ಮುಂದಾಲೋಚಿಸಿ ಅದರ ಆಧಾರದ ಮೇಲೆ ಕಂತಿನ ಮೊತ್ತವನ್ನು ನಿರ್ಣಯಿಸುತ್ತಾರೆ. ಇದರತ್ತ, ವಿಮೆಗಾರರು ವಹಿಸಲಿಚ್ಛಿಸುವ ಅಪಾಯಗಳನ್ನು ಪ್ರಮಾಣೀಕರಿಸಿ, ವಿಮೆ ಕಂತುಗಳನ್ನು ನಿರ್ಣಯಿಸಲು, ವಿಮಾಗಣಿತದ ವಿಜ್ಞಾನವನ್ನು ಬಳಸುತ್ತಾರೆ. ಅಪಾಯವೊಂದರ ಆಧಾರದ ಮೇಲೆ ಭವಿಷ್ಯದಲ್ಲಿ ನಿರೀಕ್ಷಿಸಬಹುದಾದ ವಿಮೆ ಪರಿಹಾರವನ್ನು ನಿಖರವಾಗಿ ಕಲ್ಪಿಸಲು ಮಾಹಿತಿಯನ್ನು ವಿಶ್ಲೇಷಿಸುತ್ತಾರೆ.ಯಾವ ಯಾವ ಅಪಾಯಗಳಿಗೆ ಇಳಿಸಲಾದ ವಿಮೆಯು ಈಡಾಗಿದೆ ಎಂಬುದನ್ನು ವಿಶ್ಲೇಷಿಸುತ್ತಾರೆ. ವಿಮಾ ಗಣಿತವು ಅಂಕಿ-ಅಂಶಗಳು ಮತ್ತು ಸಂಭಾವ್ಯತೆಯನ್ನು ಬಳಸುತ್ತದೆ. ವಿಮೆಗಾರರ ಒಟ್ಟಾರೆ ಒಡ್ಡಿಕೊಳ್ಳುವಿಕೆಯನ್ನು ನಿರ್ಣಯಿಸಲು ಈ ವೈಜ್ಞಾನಿಕ ತತ್ವಗಳನ್ನು ಬಳಸಲಾಗುತ್ತದೆ. ಪ್ರಸಕ್ತ ಪಾಲಿಸಿಯು ಅಂತ್ಯಗೊಂಡಾಗ, ಸಂಗ್ರಹಿಸಲಾದ ವಿಮೆ ಕಂತಿನ ಮೊತ್ತ ಮತ್ತು ಹೂಡಿಕೆಯ ಲಾಭದಿಂದ ವಿಮೆ ಪರಿಹಾರದಲ್ಲಿ ಹಣ ಸಂದಾಯದ ಮೊತ್ತಗಳನ್ನು ಕಳೆದಾಗ ಉಳಿದ ಹಣವನ್ನು ಆ ಪಾಲಿಸಿಯ ಮೇಲೆ ವಿಮೆಗಾರರ ವಿಮೆ ಇಳಿಸುದುದರಿಂದ ದೊರೆತ ಲಾಭ ಎಂದು ಪರಿಗಣಿಸಲಾಗುತ್ತದೆ. ಖಚಿತವಾಗಿಯೂ, ವಿಮೆಗಾರರ ದೃಷ್ಟಿಕೋನದಿಂದ, ಕೆಲವು ಪಾಲಿಸಿಗಳು 'ವಿನರ್ಸ್‌'(='ಜಯಶಾಲಿ') ಆಗಿರುತ್ತವೆ (ಅರ್ಥಾತ್‌ ವಿಮೆಗಾರರು ಪಾವತಿಸುವ ವಿಮೆ ಪರಿಹಾರದ ಹಣ ಮತ್ತು ಖರ್ಚುಗಳ ಮೊತ್ತವು ತಾವು ಪಡೆದ ವಿಮೆ ಕಂತುಗಳು ಮತ್ತು ಹೂಡಿಕೆಗಳ ಮೊತ್ತಕ್ಕಿಂತಲೂ ಕಡಿಮೆಯಿರುತ್ತದೆ); ಕೆಲವು 'ಲೂಸರ್ಸ್‌' ಆಗಿರುತ್ತವೆ ( ಅರ್ಥಾತ್‌ ವಿಮೆಗಾರರು ಪಾವತಿಸಿದ ವಿಮೆ ಪರಿಹಾರ ಹಣ ಮತ್ತು ಖರ್ಚುಗಳ ಮೊತ್ತವು ತಾವು ಪಡೆದ ವಿಮೆ ಕಂತುಗಳು ಮತ್ತು ಹೂಡಿಕೆಗಳ ಮೊತ್ತಕ್ಕಿಂತಲೂ ಹೆಚ್ಚಾಗಿರುತ್ತದೆ); ಲಾಭವನ್ನು ಉಳಿಸಿಕೊಳ್ಳುತ್ತಿರುವಾಗಲೇ, 'ಲೂಸರ್ಸ್‌'ಗೆ ಸಂದಾಯ ಮಾಡಲು ಸಾಕಷ್ಟು 'ವಿನಿಂಗ್' ಪಾಲಿಸಿಗಳನ್ನು ವಿಮೆಪತ್ರ ಖಾತರಿ ಯತ್ನಿಸಲು, ಸಂಸ್ಥೆಗಳು ಅಗತ್ಯವಾಗಿ ವಿಮಾ ಗಣಿತವನ್ನು ಬಳಸುತ್ತವೆ.


ವಿಮೆಗಾರರ ವಿಮೆ ಇಳಿಸುವುದನ್ನು ಅದರ ಸಂಯೋಜಿತ ಅನುಪಾತದಲ್ಲಿ ಅಳೆಯಲಾಗುತ್ತದೆ.ಸಂಸ್ಥೆಯ ಸಂಯೋಜಿತ ನಿಷ್ಪತ್ತಿಯನ್ನು ನಿರ್ಣಯಿಸಲು, ನಷ್ಟದ ನಿಷ್ಪತ್ತಿ ('ಅನುಭವಿಸಿದ ನಷ್ಟ' ಮತ್ತು 'ನಷ್ಟ-ಹೊಂದಾಣಿಕೆಯ ವೆಚ್ಚ'- ಈ ಮೊತ್ತವನ್ನು 'ಇಳಿಸಲಾದ ಒಟ್ಟು ವಿಮೆ'ಯಿಂದ ಭಾಗಿಸಿದಾಗ ದೊರೆಯುವ ಮೊತ್ತ)ಯನ್ನು ವೆಚ್ಚದ ನಿಷ್ಪತ್ತಿ (ವಿಮಾ ಕಂತಿನಿಂದ ಒಟ್ಟು ವಿಮೆ ಇಳಿಸುವ ವೆಚ್ಚವನ್ನು ಭಾಗಿಸಿ ದೊರೆತ ಮೊತ್ತ)ಯನ್ನು ಸೇರಿಸಿ ಕೂಡಲಾಗುತ್ತದೆ.

ಸಂಯೋಜಿತ ನಿಷ್ಪತ್ತಿಯು ವಿಮಾಗಾರ ಸಂಸ್ಥೆಯ ಒಟ್ಟಾರೆ ಲಾಭದ ಚಿತ್ರವನ್ನು ಬಿಂಬಿಸುತ್ತದೆ. 100%ಕ್ಕಿಂತಲೂ ಕಡಿಮೆಯ ಸಂಯೋಜಿತ ನಿಷ್ಪತ್ತಿಯು ವಿಮಾಗಾರಿಕೆಯ ಲಾಭದಾಯಕತೆಯನ್ನು ಸೂಚಿಸುತ್ತದೆ. 100%ಕ್ಕಿಂತಲೂ ಹೆಚ್ಚಾದಲ್ಲಿ ವಿಮಾಗಾರಿಕೆಯಲ್ಲಿ ನಷ್ಟವನ್ನು ಸೂಚಿಸುತ್ತದೆ.


ವಿಮಾ ಸಂಸ್ಥೆಗಳು 'ಫ್ಲೋಟ್‌' ಮೇಲೆ ಹೂಡಿಕೆಯ ಲಾಭವನ್ನು ಸಹ ಗಳಿಸುತ್ತವೆ. 'ಫ್ಲೋಟ್‌' ಅಥವಾ 'ಲಭ್ಯ ಲಾಭ ವೈಶಿಷ್ಟ್ಯ ಬಂಡವಾಳ' ಎಂದರೆ, ಸಂಗ್ರಹಿಸಿದ ವಿಮಾ ಕಂತಿನ ಮೊತ್ತ; ಇದನ್ನು ವಿಮೆ ಪರಿಹಾರ ನೀಡಲು ಪಾವತಿಸಿರುವುದಿಲ್ಲ; ಯಾವುದೇ ಕ್ಷಣದಲ್ಲಿಯೂ ಕೈಗೆಟಗುವ ಹಣವಿದು. ವಿಮೆಗಾರರು ವಿಮೆಕಂತುಗಳನ್ನು ಸಂಗ್ರಿಹಿಸಿದ ಕೂಡಲೇ, ಅವನ್ನು ಹೂಡಿ, ವಿಮೆ ಪರಿಹಾರ ಹಣವನ್ನು ಸಂದಾಯ ಮಾಡುವವರೆಗೂ, ಅವುಗಳ ಮೇಲೆ ಬಡ್ಡಿಯನ್ನು ಸಂಪಾದಿಸುವುದನ್ನು ಮುಂದುವರೆಯುತ್ತಾರೆ. 400 ವಿಮೆ ಸಂಸ್ಥೆಗಳು ಮತ್ತು UK ವಿಮಾ ಸೇವೆಯ 94%ರಷ್ಟು ಸೇರ್ಪಡೆ ಹೊಂದಿರುವ ಬ್ರಿಟಿಷ್ ವಿಮೆಗಾರರ ಸಂಘ ವು ಲಂಡನ್‌ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಹೆಚ್ಚುಕಡಿಮೆ 20%ರಷ್ಟು ಹೂಡಿಕೆಗಳನ್ನು ಹೊಂದಿದೆ.[೬]


ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸ್ವತ್ತಿನ ವಿಮಾಗಾರಿಕೆಯ ನಷ್ಟ ಮತ್ತು ಆಕಸ್ಮಿಕ ವಿಮೆಯ ಮೊತ್ತವು, 2003ರಲ್ಲಿ ಅಂತ್ಯದವರೆಗಿನ ಐದು ವರ್ಷಗಳ ಕಾಲದಲ್ಲಿ, $142.3 ಶತಕೋಟಿಯಾಗಿತ್ತು. ಆದರೆ, 'ಫ್ಲೋಟ್‌' ಪ್ರಕ್ರಿಯೆಯ ಪರಿಣಾಮವಾಗಿ, ಇದೇ ಅವಧಿಯ ಒಟ್ಟಾರೆ ಲಾಭ $68.4 ದಶಲಕ್ಷಗಳಾಗಿತ್ತು. ಲಾಭವನ್ನು ಸಹ ವಿಮಾಗಾರಿಕೆ ಮಾಡದೆ ಲಾಭವನ್ನು ಉಳಿಸಲು ಸಾಧ್ಯವೆಂಬುದನ್ನು ಗಮನಾರ್ಹವಾಗಿ ಹ್ಯಾಂಕ್‌ ಗ್ರೀನ್ಬರ್ಗ್‌ ಸೇರಿದಂತೆ ವಿಮೆ ಉದ್ದಿಮೆಯ ಆಂತರ್ಯಗಳನ್ನು ಬಲ್ಲ ಕೆಲವರು ನಂಬುತ್ತಿಲ್ಲ, ಆದರೂ ಈ ಅಭಿಪ್ರಾಯಕ್ಕೆ ಒಟ್ಟಾರೆ ಒಪ್ಪಿಗೆ ಸಿಕ್ಕಿದಂತಿಲ್ಲ.

ಹ್ಯಾಂಕ್‌ ಗ್ರೀನ್ಬರ್ಗ್‌ ಸೇರಿದಂತೆ ವಿಮೆ ಉದ್ದಿಮೆಯ ಆಂತರ್ಯಗಳನ್ನು ಬಲ್ಲ ಕೆಲವರ ಪ್ರಕಾರ, ವಿಮಾಗಾರಿಕೆಯ ಲಾಭವಿಲ್ಲದೆ 'ಫ್ಲೋಟ್‌'ನ ಮೂಲಕ ಲಾಭವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ; ಆದರೆ ಈ ಅಭಿಪ್ರಾಯಕ್ಕೆ ಸಾರ್ವತ್ರಿಕ ಸಮ್ಮತಿಯಿಲ್ಲ.

ಸಹಜವಾಗಿ, ಆರ್ಥಿಕ ಕುಗ್ಗಿನ ಕಾಲದಲ್ಲಿ 'ಫ್ಲೋಟ್‌' ರೀತಿಯನ್ನು ನಿರ್ವಹಿಸಲು ಕಷ್ಟಕರವಾಗಿದೆ. ಷೇರು ಬೆಲೆ ಕುಸಿತದ ಮಾರುಕಟ್ಟೆ ವಿಮೆಗಾರರನ್ನು ಹೂಡಿಕೆಯಿಂದ ದೂರವಿರುವಂತೆ ಮಾಡಿ ಅವರ ವಿಮಾಗಾರಿಕೆಯ ಗುಣಮಟ್ಟಗಳನ್ನು ಇನ್ನಷ್ಟು ಬಿಗಿಗೊಳಿಸುವಂತೆ ಮಾಡುತ್ತದೆ. ಹಾಗಾಗಿ, ಬಡ ಆರ್ಥಿಕತೆಯಲ್ಲಿ ವಿಮೆಕಂತಿನ ಮೊತ್ತ ಹೆಚ್ಚಾಗಿರುತ್ತದೆ. ಲಾಭದಾಯಕ ಮತ್ತು ಲಾಭದಾಯಕವಲ್ಲದ ಕಾಲಗಳ ನಡುವೆ ಅತ್ತಿಂದಿತ್ತ ಓಲಾಡುವುದಕ್ಕೆ ಸಾಮಾನ್ಯವಾಗಿ 'ವಿಮೆ ಇಳಿಸುವ ಚಕ್ರ' ಅಥವಾ 'ವಿಮಾ ಚಕ್ರ' ಎನ್ನಲಾಗುತ್ತದೆ.[೭]


ಆಸ್ತಿಪಾಸ್ತಿ ಮತ್ತು ಅವಘಡ ಮೇಲೆ ವಿಮೆ ಇಳಿಸುವ ವಿಮಾಗಾರ ಸಂಸ್ಥೆಯು ಸದ್ಯಕ್ಕೆ ವಾಹನ ವಿಮೆಯ ಕ್ಷೇತ್ರದ ವ್ಯವಹಾರದಲ್ಲಿ ಬಹಳಷ್ಟು ಹಣವನ್ನು ಗಳಿಸುತ್ತದೆ. ಸಾಮಾನ್ಯವಾಗಿ, ವಾಹನ ಕ್ಷೇತ್ರದಲ್ಲಿ ಇಳಿಸಲಾಗುವ ವಿಮೆಯ ಮೇಲಿನ ನಷ್ಟಗಳ ಬಗ್ಗೆ ಇನ್ನಷ್ಟು ಉತ್ತಮ ಮಾಹಿತಿಯು ಲಭ್ಯವಿದೆ. ಹಾಗಾಗಿ, ಈ ಕ್ಷೇತ್ರದಲ್ಲಿ ಸಾಲ ಮಂಜೂರಾತಿ ಮಾಡುವುದರಿಂದಲೂ ಮತ್ತು ವಿಮೆ ಇಳಿಸುವುದರಿಂದಲೂ ಸಂಸ್ಥೆಯ ಲಾಭ ಹೆಚ್ಚಾಗುತ್ತದೆ. ಇದಲ್ಲದೇ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಮುಂದಾಲೋಚನೆಗೆ ಸಿಲುಕದ ಭಾರೀ ನೈಸರ್ಗಿಕ ವಿಪತ್ತುಗಳ ಕಾರಣ ಸಂಭವಿಸಿದ ಆಸ್ತಿಪಾಸ್ತಿಯ ನಷ್ಟಗಳು ಈ ವಿದ್ಯಮಾನವನ್ನು ಇನ್ನಷ್ಟು ಉಲ್ಬಣಗೊಳಿಸಿದೆ.


ವಿಮೆ ಪರಿಹಾರ ಬೇಡಿಕೆಗಳು[ಬದಲಾಯಿಸಿ]

ವಿಮೆ ಪರಿಹಾರ ಬೇಡಿಕೆಗಳು ಮತ್ತು ನಷ್ಟ ನಿರ್ವಹಣೆಯು ವಿಮೆಯ ವಾಸ್ತವ ಉಪಯುಕ್ತತೆಯಾಗಿದೆ, ಆದರೂ ಹಣ ಸಂದಾಯ ಮಾಡಲಾದ ನೈಜ ವಸ್ತು ಅದಾಗಿದೆ. ಅದನ್ನು ಉಪಯೋಗಿಸಬಾರದೆಂಬುದು ಕೆಲವರ ಅಭಿಮತ. ವಿಮೆ ಪರಿಹಾರ ಬೇಡಿಕೆಗಳನ್ನು ವಿಮೆದಾರರು ನೇರವಾಗಿ ವಿಮೆಗಾರರೊಂದಿಗೆ ಅಥವಾ ದಲಾಲರ/ಮಧ್ಯವರ್ತಿಗಳ ಮೂಲಕವಾದರೂ ಸಲ್ಲಿಸಬಹುದು. ವಿಮೆಗಾರ ಈ ಬೇಡಿಕೆಯನ್ನು ತನ್ನದೇ ಆದ ನಿಗದಿತ ಅರ್ಜಿಯಲ್ಲಿ ಸಲ್ಲಿಸಲೆಂದು ನಿರೀಕ್ಷಿಸಬಹುದು ಅಥವಾ ACORD ರಚಿಸಿರುವ ಪ್ರಮಾಣಿತ ಉದ್ದಿಮೆಯ ನಮೂನೆಯ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಸಹ ಸ್ವೀಕರಿಸಬಹುದು.


ವಿಮೆ ಉದ್ದಿಮೆಗಳ ಪರಿಹಾರ ಬೇಡಿಕೆಯ ಇಲಾಖೆಗಳು, ದಾಖಲಾ ನಿರ್ವಹಣಾ ಸಿಬ್ಬಂದಿ ಮತ್ತು ದತ್ತಾಂಶ ಸಂಗ್ರಹಣಕಾರರನ್ನು ವಿಮೆ ಪರಿಹಾರ ಬೇಡಿಕೆಗಳ ಇತ್ಯರ್ಥಕ್ಕಾಗಿ ನೇಮಿಸಿರುತ್ತವೆ. ತೀವ್ರತೆಯ ಪ್ರಕಾರ ಒಳಬರುವ ಪರಿಹಾರ ಬೇಡಿಕೆಗಳನ್ನು ವಿಂಗಿಡಸಲಾಗಿ, ಅವುಗಳನ್ನು ಸಂಸ್ಕರಿಸಲು ಹೊಂದಿಕೆದಾರರಿಗೆ ವಹಿಸಲಾಗುತ್ತದೆ. ಇವರ ಚುಕಾವಣಾ ಅಧಿಕಾರವು ಅವರ ಜ್ಞಾನ ಮತ್ತು ಅನುಭವಗಳನ್ನು ಅವಲಂಬಿಸಿದೆ. ಸಾಮಾನ್ಯವಾಗಿ ವಿಮೆದಾರರ ಸಹಕಾರದೊಂದಿಗೆ, ಹೊಂದಿಕೆದಾರರು ಪ್ರತಿಯೊಂದು ಬೇಡಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಅದರ ನಿಖರ ಮೌಲ್ಯವನ್ನು ನಿರ್ಣಯಿಸಿ, ವಿಮಾ ಪರಿಹಾರ ಹಣದ ಸಂದಾಯವನ್ನು ಮಂಜೂರು ಮಾಡುತ್ತಾರೆ. ಹೊಣೆಗಾರಿಕೆಯ ವಿಮೆ ಪರಿಹಾರ ಬೇಡಿಕೆಗಳನ್ನು ಹೊಂದಿಸುವುದು ವಿಶೇಷವಾಗಿ ಕಷ್ಟವಾಗಿದೆ, ಏಕೆಂದರೆ ಅಲ್ಲಿ ಮೂರನೆಯ ಪಕ್ಷದವರೂ ಸೇರಿದ್ದು (ವಿಮೆದಾರರ ವಿರುದ್ಧ ಮೊಕದ್ದಮೆ ಹೂಡಿರುವ ವಾದಿ) ಅವರು ವಿಮೆಗಾರರೊಂದಿಗೆ ಸಹಕರಿಸಲು ಯಾವುದೇ ಒಪ್ಪಂದದಡಿಯಿರುವುದಿಲ್ಲ; ಜೊತೆಗೆ ಅವರು ವಿಮೆಗಾರರನ್ನು 'ಆಳ ಜೇಬು' ಎಂದೂ ಪರಿಗಣಿಸುವ ಎಲ್ಲಾ ಸಾಧ್ಯತೆಗಳಿವೆ. ಹೊಂದಿಕೆದಾರರು ('ಆಂತರಿಕ' ಸಲಹೆಗಾರರಾಗಲಿ ಬಾಹ್ಯ ಸಲಹೆಗಾರರಾಗಲಿ ಇವರ ಮೂಲಕ) ವಿಮೆದಾರರಿಗಾಗಿ ಕಾನೂನು ಸಲಹೆಯನ್ನು ಪಡೆಯಬೇಕು, ವರ್ಷಗಳ ಕಾಲ ನಡೆಯಬಹುದಾದ ಮೊಕದ್ದಮೆಗಳನ್ನು ನೋಡಿಕೊಳ್ಳಬೇಕು, ಮೊಕದ್ದಮೆಯಲ್ಲಿ ನ್ಯಾಯಾಧೀಶರ ಕೋರಿಕೆಯಂತೆ, ಖುದ್ದಾಗಿ ಅಥವಾ ದೂರವಾಣಿಯ ಮೂಲಕ ಚುಕಾವಣಾ ಸಭೆಯಲ್ಲಿ ಪಾಲ್ಗೊಳ್ಳಬೇಕಾಗಿದೆ.


ಈ ಬೇಡಿಕೆಗಳ ಸಂಸ್ಕರಣೆಯನ್ನು ನಿರ್ವಹಿಸುವುದರಲ್ಲಿ ವಿಮೆಗಾರರು ಗ್ರಾಹಕ ತೃಪ್ತಿ, ಆಡಳಿತ ವೆಚ್ಚು ನಿರ್ವಹಣೆ ಮತ್ತು ಹೆಚ್ಚುವರಿ ಸಂದಾಯ ಸ್ರವಣದ ವಿಚಾರಗಳನ್ನು ಸರಿತೂಗಿಸಲು ಇಚ್ಛಿಸುವರು. ಸರಿತೂಗಿಸುವ ಯತ್ನದ ಅಂಗವಾಗಿ, ವಿಮಾ-ಸಂಬಂಧಿತ ಮೋಸದ ಅಭ್ಯಾಸಗಳು ಅತಿ ದೊಡ್ಡ ವ್ಯಾವಹಾರಿಕ ಅಪಾಯವಾಗಿದ್ದು, ಅವುಗಳನ್ನು ನಿರ್ವಹಿಸಿ ನಿಯಂತ್ರಿಸಬೇಕಾಗಿದೆ. ವಿಮೆಗಾರರು ಮತ್ತು ವಿಮೆದಾರರ ನಡುವಿನ ತಕರಾರುಗಳು ಬೇಡಿಕೆಗಳ ನ್ಯಾಯಸಮ್ಮತತೆಯ ಅಥವಾ ಬೇಡಿಕೆಗಳ ನಿರ್ವಹಣಾ ಅಭ್ಯಾಸಗಳು ಕೆಲವೊಮ್ಮೆ ವ್ಯಾಜ್ಯಗಳಾಗಿ ಪರಿಣಮಿಸಬಹುದು; ವಿಮೆ ಅಪ್ರಾಮಾಣಿಕತೆ ನೋಡಿ.


ವಿಮೆಯ ಇತಿಹಾಸ[ಬದಲಾಯಿಸಿ]

ಮಾನವನ ಸಾಮಾಜಿಕ ಬದುಕು ಮತ್ತು ವಿಮೆಯ ಸೌಕರ್ಯ ಏಕಕಾಲದಲ್ಲಿ ಅಸ್ತಿತ್ವಕ್ಕೆ ಬಂದವೆಂದು ಒಂದರ್ಥದಲ್ಲಿ ಹೇಳಬಹುದು. ಮಾನವ ಸಮಾಜದಲ್ಲಿ ಎರಡು ರೀತಿಯ ಆರ್ಥಿಕ ವ್ಯವಸ್ಥೆ ಗೋಚರಿಸುತ್ತದೆ. ಹಣ ಸಹಿತದ್ದೊಂದು (ಮಾರುಕಟ್ಟೆ, ದುಡ್ಡು, ಹಣಕಾಸಿನ ಸಂಸ್ಥೆಗಳು, ಇತ್ಯಾದಿ) ಮತ್ತು ಹಣ ರಹಿತದ್ದು ಇನ್ನೊಂದು. (ದುಡ್ಡು, ಮಾರುಕಟ್ಟೆ, ಹಣಕಾಸಿನ ಸಾಧನ ಇತ್ಯಾದಿಗಳಿಲ್ಲದ್ದು). ನೈಸರ್ಗಿಕ ಆರ್ಥಿಕತೆ ಎಂದೂ ಕರೆಯಲಾಗುವ ಎರಡನೆಯ ವಿಧಾನ ಮೊದಲನೆಯದಕ್ಕಿಂತಲೂ ಪ್ರಾಚೀನವಾದದ್ದು. ಇಂತಹ ಆರ್ಥಿಕತೆ ಮತ್ತು ಸಮುದಾಯದಲ್ಲಿ, ಜನರು ಪರಸ್ಪರ ಸಹಾಯ ಮಾಡಿಕೊಳ್ಳುವುದಲ್ಲೇ ವಿಮೆಯ ಒಂದು ರೂಪವೆಂದು ನಾವು ಕಾಣಬಹುದು. ಉದಾಹರಣೆಗೆ, ಮನೆಯೊಂದು ಸುಟ್ಟು ಹೋದ ಸಂದರ್ಭದಲ್ಲಿ ಸಮುದಾಯದ ಸದಸ್ಯರು ಹೊಸ ಮನೆಯ ನಿರ್ಮಾಣಕ್ಕೆ ಸಹಾಯ ಮಾಡುತ್ತಿದ್ದರು. ಅಕ್ಕದ ಮನೆಯವರಿಗೆ ಇದೇ ರೀತಿಯ ಅಪಘಾತವು ಸಂಭವಿಸಿದಲ್ಲಿ ಪಕ್ಕದ ಮನೆಯವರು ಸಹಾಯ ಮಾಡಲೇ ಬೇಕಿತ್ತು. ಇಲ್ಲದಿದ್ದರೆ ಮುಂದೆಂದಾದರೂ ಇಂಥ ಕಷ್ಟಕ್ಕೆ ಸಿಲುಕಿದರೆ ನೆರೆಯವರ ಸಹಾಯ ಅವರಿಗೆ ಖಂಡಿತ ಸಿಗುತ್ತಿರಲಿಲ್ಲ. ಹಣಸಹಿತದ ಆಧುನಿಕ ಆರ್ಥಿಕತೆ ಮತ್ತು ಅದರ ಸಾಧನಗಳು ವ್ಯಾಪಕವಾಗಿರದ ಕೆಲವು ದೇಶಗಳಲ್ಲಿ ಈ ರೀತಿಯ ವಿಮೆಯು ಇಂದಿನವರೆಗೂ ಉಳಿದುಕೊಂಡಿದೆ.


ಆಧುನಿಕ ರೀತಿಯ ವಿಮೆಯಲ್ಲಿ (ಅರ್ಥಾತ್‌ ಹಣ ಸಹಿತದ ಆಧುನಿಕ ಆರ್ಥಿಕತೆ, ಇದರಲ್ಲಿ ವಿಮೆಯು ಧನ ಗೋಲದ ಒಂದು ಭಾಗವಾಗಿರುತ್ತದೆ) ಅಪಾಯದ ವರ್ಗಾವಣೆ ಅಥವಾ ಭಾಗಿಯಾಗುವಿಕೆಯನ್ನು ಚೀನೀ ಮತ್ತು ಬೇಬಿಲೊನೀಯ ವರ್ತಕರು ಕ್ರಮವಾಗಿ ಮೂರನೆಯಮತ್ತು ಎರಡನೆಯ ಸಹಸ್ರಾಬ್ದ BCಯಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದರು.[೮] ಭೀಕರ ರಭಸದಿಂದ ಹರಿಯುವ ನದಿಯ ಮಾರ್ಗಗಳಲ್ಲಿ ಪ್ರಯಾಣಿಸುತ್ತಿದ್ದ ಚೀನೀ ವರ್ತಕರು, ನೌಕೆಯೊಂದು ಮುಳುಗಿದಾಗ ಸಂಭವಿಸುವಂತಹ ನಷ್ಟ ಕನಿಷ್ಠ ಮಟ್ಟದ್ದಾಗಿರಲಿ ಎಂದು ತಮ್ಮ ಸರಕನ್ನು ಹಲವು ನೌಕೆಗಳಲ್ಲಿ ಹಂಚುತ್ತಿದ್ದರು. ಬೇಬಿಲೊನಿಯನ್ನರು ಇದಕ್ಕಾಗಿ ಸೂತ್ರವೊಂದನ್ನು ಅಭಿವೃದ್ಧಿ ಪಡಿಸಿದ ಸಂಗತಿ ಪ್ರಖ್ಯಾತ ಸುಮಾರು 1750 BCಯಹಮ್ಮುರಬಿ ಸಂಹಿತೆಯಲ್ಲಿ ದಾಖಲಾಗಿದೆ.ಆರಂಭಿಕ ಮೆಡಿಟರೆನಿಯನ್‌ ನೌಕಾಯಾನ ಮಾರ್ಗದ ವರ್ತಕರು ಈ ಪದ್ಧತಿಯ ಸೂತ್ರವನ್ನು ಪಾಲಿಸುತ್ತಿದ್ದರು. ವರ್ತಕನೊಬ್ಬನು ತನ್ನ ಸರಕು ಸಾಗಾಣಿಕೆಗಾಗಿ ಸಾಲವನ್ನು ಪಡೆದಲ್ಲಿ, ಸಾಗಾಣಿಕೆಯು ದೋಚಿಕೆಯಾದಲ್ಲಿ ಅಥವಾ ಸಮುದ್ರದಲ್ಲಿ ಕಳೆದುಹೋದಲ್ಲಿ, ಸಾಲದಾತರ ಖಾತರಿಯೊಂದಿಗೆ ವಿನಿಮಯವಾಗಿ ಅವರು ಸಾಲದಾತರಿಗೆ ಹೆಚ್ಚುವರಿ ಮೊತ್ತವನ್ನು ನೀಡುತ್ತಿದ್ದರು.

ಪ್ರಾಚೀನ ಪರ್ಷಿಯಾದ ಅಚೆಮೆನಿಯನ್‌ ದೊರೆಗಳು ತಮ್ಮ ಪ್ರಜೆಗಳಿಗೆ ವಿಮೆ ಮಾಡಿಸುವುದರಲ್ಲಿ ಮೊದಲಿಗರು. ವಿಮೆಯ ಪ್ರಕ್ರಿಯೆಯನ್ನು ಸರ್ಕಾರೀ ನೋಟರಿ ಕಛೇರಿಗಳಲ್ಲಿ ನೋಂದಾಯಿಸುವುದರ ಮೂಲಕ ಅದನ್ನು ಅಧಿಕೃತಗೊಳಿಸಿದರು. ವಿಮೆಯ ಸಂಪ್ರದಾಯವನ್ನು ಪ್ರತಿ ವರ್ಷವೂ ನೌರೊಜ್‌ (ಇರಾನ್‌ ಹೊಸ ವರ್ಷ) ದಿನದಂದು ಆಚರಿಸಲಾಗುತ್ತಿತ್ತು. ವಿವಿಧ ಜನಾಂಗದ ಮುಖಂಡರು ಮತ್ತು ಇತರರು ಭಾಗವಹಿಸಲು ಇಚ್ಛಿಸಿ, ದೊರೆಗೆ ಉಡುಗೊರೆಗಳನ್ನು ಅರ್ಪಿಸುತ್ತಿದ್ದರು. ಅತಿ ಮುಖ್ಯ ಉಡುಗೊರೆಯನ್ನು ವಿಶೇಷ ಸಮಾರಂಭವೊಂದರಲ್ಲಿ ಅರ್ಪಿಸಲಾಗುತ್ತಿತ್ತು.10,000 ಡೆರಿಕ್ (ಅಚೆಮೆನಿಯನ್‌ ಚಿನ್ನದ ನಾಣ್ಯ)ಗಳಿಗೂ ಹೆಚ್ಚು ಮೌಲ್ಯವನ್ನುಳ್ಳ ಉಡುಗೊರೆಯಾಗಿದ್ದಲ್ಲಿ ಅದನ್ನು ಒಂದು ವಿಶೇಷ ಕಾರ್ಯಾಲಯದಲ್ಲಿ ನೋಂದಾಯಿಸಲಾಗುತ್ತಿತ್ತು. ಇಂತಹ ವಿಶೇಷ ಉಡುಗೊರೆಗಳನ್ನು ಅರ್ಪಿಸುವವರಿಗೆ ಇದು ಅನುಕೂಲಕರವಾಗಿತ್ತು. ಇತರರು ಅರ್ಪಿಸುತ್ತಿದ್ದ ಉಡುಗೊರೆಯ ಮೌಲ್ಯವನ್ನು ಆಸ್ಥಾನದ ಆಪ್ತರು ನ್ಯಾಯಯುತವಾಗಿ ಅಳೆಯುತ್ತಿದ್ದರು. ಹೀಗೆ ಮಾಡಲಾದ ಅಳತೆಗಳನ್ನು ವಿಶೇಷ ಕಾರ್ಯಾಲಯಗಳಲ್ಲಿ ನೋಂದಾಯಿಸಲಾಗುತ್ತಿತ್ತು.


ಉಡುಗೊರೆಯನ್ನು ನೀಡಿ ನೋಂದಾಯಿಸಿದವರು ಎಂದಾದರೂ ಸಂಕಟದಲ್ಲಿ ಸಿಲುಕಿದಾಗ,ದೊರೆ ಮತ್ತು ಆಸ್ಥಾನದ ಆಡಳಿತ ವರ್ಗ ಇವರಿಗೆ ನೆರವಿನ ಹಸ್ತ ಚಾಚುತ್ತಿತ್ತು. ಜಹೇಜ್‌ ಎಂಬ ಇತಿಹಾಸಕಾರ ಮತ್ತು ಬರಹಗಾರ, ಪ್ರಾಚೀನ ಇರಾನ್‌ ಬಗೆಗಿನ ಹಲವು ಗ್ರಂಥಗಳಲ್ಲೊಂದರಲ್ಲಿ ಹೀಗೆ ಬರೆದಿದ್ದಾನೆ: "ಉಡುಗೊರೆ ನೀಡಿದವನು ಸಂಕಷ್ಟಕ್ಕೆ ಸಿಲುಕಿದಾಗ ಅಥವಾ ಗೃಹ ನಿರ್ಮಾಣಕ್ಕೆ ತೊಡಗಿದಾಗ, ಅಥವಾ ಒಂದು ಔತಣವನ್ನು ಏರ್ಪಡಿಸಲು, ಅಥವಾ ತಮ್ಮ ಮಕ್ಕಳ ವಿವಾಹ ಮಾಡಲು ಮುಂದಾದಾಗ ಅಥವಾ ಈ ಬಗೆಯ ಕಾರ್ಯಗಳನ್ನು ಮಾಡಲು ಇಚ್ಛಿಸಿದಾಗ, ಇದಕ್ಕೆ ಸಂಬಂಧ ಪಟ್ಟ ಆಸ್ಥಾನದ ಅಧಿಕಾರಿಯೊಬ್ಬನು ಈ ವ್ಯಕ್ತಿ ನೀಡಿದ ಉಡುಗೊರೆ ನೋಂದಣಿ ಮಾಡಲಾಗಿದೆಯಾ ಎಂಬುದನ್ನು ಪರಿಶೀಲಿಸುತ್ತಿದ್ದನು.ನೋಂದಾಯಿತ ಉಡುಗೊರೆಯ ಮೊತ್ತವು 10,000 ಡೆರಿಕ್‌ಗಳನ್ನು ಮೀರಿದ್ದಲ್ಲಿ, ಆತನು/ಆಕೆಯು ಅದರ ಎರಡರಷ್ಟು ಮೊತ್ತವನ್ನು ಪಡೆಯುಬಹುದಾಗಿತ್ತು." http://www.iran-law.com/article.php3?id_article=61 Archived 2008-04-04 ವೇಬ್ಯಾಕ್ ಮೆಷಿನ್ ನಲ್ಲಿ.


ಸಾವಿರ ವರ್ಷಗಳ ನಂತರ, ರೋಡ್ಸ್‌ನ ನಿವಾಸಿಗಳು 'ಸಾಮಾನ್ಯ ಸರಾಸರಿ'ಎಂಬೊಂದು ಕಲ್ಪನೆಯನ್ನು ರೂಪಿಸಿದರು. ಸರಕು ಸಾಗಣೆಯಲ್ಲಿ ನಿತರಾದ ವರ್ತಕರು ಸಾಮೂಹಿಕ ಸಾಗಣೆಯಲ್ಲಿ ತೊಡಗಿದಾಗ ಸೂಕ್ತ ಪ್ರಮಾಣದಲ್ಲಿ ಭಾಗಿಸಲ್ಪಟ್ಟ ವಿಮಾ ಕಂತನ್ನು ನೀಡುತ್ತಿದ್ದರು; ಯಾವುದೇ ವರ್ತಕನ ಸರಕು ಬಿರುಗಾಳಿ ಸಿಕ್ಕಿಯೋ ಅಥವಾ ಮುಳುಗಡೆಯಾಗಿಯೋ ನಷ್ಟವಾದಲ್ಲಿ ಆ ವರ್ತಕನಿಗೆ ಆದ ನಷ್ಟ ಭರಿಸಲು ಈ ವಿಮಾ ಕಂತಿನ ಮೊತ್ತವನ್ನು ಬಳಸಲಾಗುತ್ತಿತ್ತು.


ಸುಮಾರು 600 ADಯಲ್ಲಿ ಗ್ರೀಕರು ಮತ್ತು ರೋಮನ್‌ರು ಆರೋಗ್ಯ ಮತ್ತು ಜೀವ ವಿಮೆಯ ಮೊದಲು ಪರಿಚಯಿಸಿದರು. ಅವರು ಆಗ "ಬೆನೆವೆಲೆಂಟ್‌ ಸೊಸೈಟೀಸ್‌"(=ಸಹಾಯಾರ್ಥ ಸಂಘ")ಎಂಬ ಪರಸ್ಪರ ಸಹಾಯ ಸಂಘಗಳನ್ನು ಸ್ಥಾಪಿಸಿದರು. ಇದು ಕುಟುಂಬಗಳ ಯೋಗಕ್ಷೇಮವನ್ನು ವಹಿಸಿ, ಸಾವು ಸಂಭವಿಸಿದಾಗ ಸದಸ್ಯರ ಅಂತ್ಯಕ್ರಿಯೆಯ ವೆಚ್ಚಗಳನ್ನು ಸಂದಾಯ ಮಾಡುತ್ತಿದ್ದವು. ಮಧ್ಯಕಾಲೀನ ಯುಗ ಇದೇ ರೀತಿಯ ಉದ್ದೇಶವನ್ನು ಮಧ್ಯ ಯುಗೀನ ಕಾಲದಲ್ಲಿನ ಪರಸ್ಪರ ಸಹಾಯ ಸಂಘಗಳು ಹೊತ್ತಿದ್ದವು. ಸರಕುಗಳಮೇಲೆ ವಿಮೆ ಇಳಿಸುವ ಅನೇಕ ಅಂಶಗಳನ್ನು ತಾಲ್ಮಡ್‌ನಲ್ಲಿ ನಮೂದಿಸಲಾಗಿದೆ. 17ನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡ್‌ನಲ್ಲಿ ವಿಮಾ ಸಂಸ್ಥೆ ಸ್ಥಾಪನೆಯಾಗುವುದಕ್ಕೂ ಮುಂಚೆ, 'ಸ್ನೇಹ ಸಂಘಗಳು" ಅಸ್ತಿತ್ವದಲ್ಲಿ ಇದ್ದವು. ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಲೆಂಬ ಉದ್ದೇಶದಿಂದ ನಿಧಿಯೊಂದಕ್ಕೆ ಜನ ಹಣವನ್ನು ದೇಣಿಗೆಯಾಗಿ ನೀಡುತ್ತಿದ್ದರು.


14ನೆಯ ಶತಮಾನದಲ್ಲಿ ಜಿನೊವಾದಲ್ಲಿ, ಸಾಲಗಳು ಮತ್ತು ಇತರೆ ಕರಾರುಗಳೊಂದಿಗೆ ಒಗ್ಗೂಡಿಸದ ವಿಮೆ ಪಾಲಿಸಿಗಳು ಸೇರಿ, ಪ್ರತ್ಯೇಕ ವಿಮಾ ಕರಾರುಗಳನ್ನು ಸೃಷ್ಟಿಸಲಾಯಿತು. ಇದೇ ರೀತಿ ಜಮೀನು ಆಸ್ತಿಪಾಸ್ತಿಯ ಭದ್ರತೆಯ ಬೆಂಬಲವನ್ನು ಹೊಂದಿರುವಂತಹ ವಿಮಾ ಸೌಕರ್ಯವೂ ಸೃಷ್ಟಿಯಾದವು. ಈ ಹೊಸ ವಿಮಾ ಕರಾರುಗಳು ಹೂಡಿಕೆ ಮತ್ತು ವಿಮೆಯ ಪ್ರತ್ಯೇಕತೆಗೆ ಅನುವು ಮಾಡಿತು. ಈ ರೀತಿಯ ಪ್ರತ್ಯೇಕತೆ ನೌಕಾಯಾನ ವಿಮೆಯಲ್ಲಿ ಬಹಳ ಉಪಯುಕ್ತವಾಯಿತು. ನವೋದಯೋತ್ತರ ಕಾಲದಯುರೋಪ್‌ನಲ್ಲಿ ವಿಮೆಯು ಇನ್ನಷ್ಟು ಅತ್ಯಾಧುನಿಕವಾಗಿ, ವಿಶಿಷ್ಟ ವೈವಿಧ್ಯಗಳೊಂದಿಗೆ ವಿಕಸನಗೊಂಡಿತು.


ಹದಿನೇಳನೆಯ ಶತಮಾನದ ಆರಂಭಿಕ ದಶಕಗಳಲ್ಲಿ ವಿಮೆಯ ಬೇರೆಬೇರೆ ರೂಪಗಳು ಲಂಡನ್‌ನಲ್ಲಿ ಅಭಿವೃದ್ಧಿಯಾದವು. ಉದಾಹರಣೆಗೆ, ರಾಬರ್ಟ್‌ ಹೇಮನ್‌ ಎಂಬ ಇಂಗ್ಲಿಷ್‌ ವಸಾಹತುದಾರನ ಉಯಿಲಿನಲ್ಲಿ ಲಂಡನ್‌ನ ಡಯೊಸಿಸನ್‌ ಚಾನ್ಸೆಲರ್‌ ಆರ್ಥರ್‌ ಡಕ್‌ ಅವರೊಂದಿಗೆ ತೆರೆಯಲಾದ ಎರಡು 'ವಿಮೆ ಪಾಲಿಸಿ'ಗಳನ್ನು ಉಲ್ಲೇಖಿಸುತ್ತದೆ.ಪ್ರತಿಯೊಂದರ ಮೌಲ್ಯವು £100 ಆಗಿದ್ದರ ಪೈಕಿ ಒಂದು ಹೇಮನ್‌ರ ಹಡಗು ಕ್ಷೇಮವಾಗಿ ಗಯಾನಾ ತಲುಪುವುದರ ಬಗ್ಗೆ ಮತ್ತು ಇನ್ನೊಂದು 'ನನ್ನ ಜೀವನದ ಬಗ್ಗೆ ಡಾ. ಆರ್ಥರ್‌ ಡ್ಯೂಕ್‌ ನೀಡಿರುವ ಒಂದು ನೂರು ಪೌಂಡ್‌ಗಳ ಭರವಸೆ"ಗೆ ಸಂಬಂಧಿಸಿದ್ದಾಗಿದೆ.. 1628ರ ನವೆಂಬರ್‌ 17ರಂದು ಹೇಮನ್‌ ಉಯಿಲಿಗೆ ಸಹಿ ಹಾಕಿ ಮುದ್ರೆಯೊತ್ತಿದ್ದರೂ ಅದನ್ನು 1633ರ ವರೆಗೂ ಸಾಬೀತುಪಡಿಸಿರಲಿಲ್ಲ.[೯] ಹದಿನೇಳನೆಯ ಶತಮಾನದ ಅಂತ್ಯದ ಹೊತ್ತಿಗೆ, ವಾಣಿಜ್ಯೋಮ ಕೇಂದ್ರವಾಗಿ ಬೆಳೆಯುತ್ತಿದ್ದ ಲಂಡನ್‌ ನಗರದಲ್ಲಿ ನೌಕಾ ವಿಮೆಗಾಗಿ ಬೇಡಿಕೆ ಏರಿತು.1680ರ ದಶಕದ ಉತ್ತರಾರ್ಧದಲ್ಲಿ, ಎಡ್ವರ್ಡ್‌ ಲಾಯ್ಡ್‌ ಒಂದು ಕಾಫಿ ಕೇಂದ್ರವನ್ನು ಆರಂಭಿಸಿದ. ಇದು ಹಡಗಿನ ಮಾಲೀಕರು, ಹಡಗಿನ ಕ್ಯಾಪ್ಟನ್‌ಗಳು ಮತ್ತು ವರ್ತಕರು ಪದೇಪದೇ ಸುಳಿದಾಡುವ ಜನಪ್ರಿಯರು ತಾಣವಾಯಿತು. ಹಾಗಾಗಿ, ಹಡಗಿನ ಮೂಲಕ ಸರಕು ಸಾಗಾಣಿಕೆ ವಿಶ್ವಸನೀಯ ವಾರ್ತೆಗಳಿಗಾಗಿ ಈ ಸ್ಥಳವು ಒಂದು ಪ್ರಮುಖ ಮೂಲವಾಯಿತು. ಸರಕು ಮತ್ತು ಹಡಗುಗಳಿಗೆ ವಿಮೆ ಇಳಿಸಲು ಬಯಸುವವರು ಮತ್ತು ಇಂಥ ಹೊಣೆ ಹೊರಲು ತಯಾರಿರುವ ಸಂಸ್ಥೆಗಳವರಿಗೆ ಭೇಟಿಯಾಗುವ ಸ್ಥಳವಾಗಿ ಮಾರ್ಪಟ್ಟಿತು. ಈಗ, ಲಾಯ್ಡ್ಸ್‌ ಆಫ್‌ ಲಂಡನ್‌ ಎಂಬ ಸಂಸ್ಥೆ ಕಡಲ ಮತ್ತು ಇತರೆ ವಿಶಿಷ್ಟ ರೀತಿಯ ವಿಮೆಗಳ ಮಾರುಕಟ್ಟೆಗಳ ಅಗ್ರಸ್ಥಾನದಲ್ಲಿದೆ. (ಇದು ವಿಮಾ ಸಂಸ್ಥೆಯಲ್ಲ ಎಂಬುದು ಗಮನಾರ್ಹ) ಆದರೆ ಇದು ಹೆಚ್ಚಾಗಿ ಚಾಲ್ತಿಯಲ್ಲಿರುವ ವಿಮಾ ವಿಧಾನಗಳಿಗಿಂತಲೂ ವಿಭಿನ್ನ ರೀತಿಯಲ್ಲಿ ಕಾರ್ಯವಹಿಸುತ್ತದೆ.


1666ರಲ್ಲಿ 13,200 ಮನೆಗಳನ್ನು ಸಾರಾಸಗಟಾಗಿ ಸುಟ್ಟುಹಾಕಿದ, ಲಂಡನ್‌ನಲ್ಲಿ ಸಂಭವಿಸಿದ ಘೋರ ಅಗ್ನಿ ಅನಾಹುತದಲ್ಲಿ ಈಗ ನಾವು ತಿಳಿದಿರುವಂತಹ ವಿಮೆಯ ಇತಿಹಾಸದ ಹೆಜ್ಜೆಗಳನ್ನು ಕಾಣ ಬಹುದು. ಈ ದುರಂತದ ಪರಿಣಾಮವಾಗಿ, ನಿಕಾಲಸ್‌ ಬಾರ್ಬನ್‌ ಕಟ್ಟಡಗಳನ್ನು ವಿಮೆ ಮಾಡಲು ಒಂದು ಕಾರ್ಯಾಲಯವನ್ನು ಸ್ಥಾಪಿಸಿದ. ಇಟ್ಟಿಗೆ ಮತ್ತು ಮರದ ಹಂದರದ ಮನೆಗಳ ಮೇಲೆ ವಿಮೆ ಇಳಿಸಲು, 1680ರಲ್ಲಿ ಆತನು 'ದಿ ಫೈರ್‌ ಆಫೀಸ್‌' ಎಂಬ ಇಂಗ್ಲೆಂಡ್‌ನ ಮೊಟ್ಟಮೊದಲ ಅಗ್ನಿ ವಿಮಾ ಸಂಸ್ಥೆಯನ್ನು ಸ್ಥಾಪಿಸಿದ.


ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮೊಟ್ಟಮೊದಲ ವಿಮಾ ಸಂಸ್ಥೆಯು ಅಗ್ನಿ ವಿಮೆಯ ವಿಮಾ ನಿರ್ವಹಣೆಯನ್ನು ಕೈಗೊಂಡು, 1732ರಲ್ಲಿ ದಕ್ಷಿಣ ಕ್ಯಾರೊಲಿನಾದ ಚಾರ್ಲ್ಸ್‌ಟೌನ್‌ (ಇಂದಿನ ಚಾರ್ಲ್ಸ್‌ಟನ್‌)ನಲ್ಲಿ ಸ್ಥಾಪನೆಯಾಯಿತ್ತು. ವಿಮೆಯ ರೀತಿ-ನೀತಿಗಳನ್ನು, ವಿಶೇಷವಾಗಿ ಬೆಂಕಿಯ ವಿರುದ್ಧದ ವಿಮೆಯನ್ನು ಸಾರ್ವಕಾಲಿಕ ವಿಮೆಯ ರೂಪದಲ್ಲಿ ಮಾಡಿಸುವುದರ ಮೂಲಕ ಬೆಂಜಮಿನ್‌ ಫ್ರಾಂಕ್ಲಿನ್‌ ವಿಮೆಯ ಜನಪ್ರಿಯತೆಯನ್ನು ಹೆಚ್ಚಿಸಿ ಪ್ರಮಾಣಿತಗೊಳಿಸಲು ನೆರವು ನೀಡಿದ. 1752ರಲ್ಲಿ 'ಅಗ್ನಿ-ನಷ್ಟ ಗೃಹ ವಿಮಾ ದೇಣಿಗೆ ಫಿಲಡೆಲ್ಫಿಯಾ ಸಂಸ್ಥೆಫಿಲಡೆಲ್ಫಿಯಾ ಕಾಂಟ್ರಿಬ್ಯೂಷನ್‌ಷಿಪ್‌ 'ಎಂಬ ಅಗ್ನಿ ಅನಾಹುತಗಳಿಂದಾಗಿ ಮನೆಗಳಿಗೆ ಒದಗಿಬಂದ ನಷ್ಟ ಭರಿಸುವ ವಿಮಾ ಸಂಸ್ಥೆ'ಯೊಂದನ್ನು ಸ್ಥಾಪಿಸಿದ. ಫ್ರಾಂಕ್ಲಿನ್‌ರ ಸಂಸ್ಥೆ ಅಗ್ನಿ ಅನಾಹುತ ತಡೆಯಲು ದೇಣಿಗೆ ನೀಡಿದ ಮೊದಲ ಸಂಸ್ಥೆ. ಕಟ್ಟಡಗಳಲ್ಲಿ ಸಂಭವಿಸಬಹುದಾದ ನಿಶ್ಚಿತ ಅಗ್ನಿ ಆಕಸ್ಮಿಕಗಳ ಬಗ್ಗೆ ಅವರ ಸಂಸ್ಥೆ ಎಚ್ಚರಿಸಿದ್ದಷ್ಟೇ ಅಲ್ಲ, ಮರದ ಮನೆಗಳಂತಹ ಬೆಂಕಿಯ ಅಪಾಯಕ್ಕೆ ಸುಲಭವಾಗಿ ತುತ್ತಾಗಬಹುದಾದ ಕಟ್ಟಡಗಳಗೆ ವಿಮಾ ಸೌಕರ್ಯ ಒದಗಿಸಲು ಅವರ ಸಂಸ್ಥೆ ನಿರಾಕರಿಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಮಾ ಉದ್ದಿಮೆಯ ನಿಯಂತ್ರಣವು ಅತಿಯಾದವಿಭಜನೆಗೆ ಒಳಗೊಂಡಿದ್ದು, ವೈಯಕ್ತಿಕ ರಾಜ್ಯ ವಿಮಾ ಇಲಾಖೆಯು ಅದರ ಪ್ರಾಥಮಿಕ ಜವಾಬ್ದಾರಿಯನ್ನು ಹೊತ್ತಿವೆ. ವಿಮಾ ಕ್ಷೇತ್ರ ರಾಷ್ಟ್ರೀಯವಾಗಿ ಮತ್ತು ಅಂತಾರಾಷ್ಟ್ರೀಯವಾಗಿ ಕೇಂದ್ರೀಕೃತವಾಗಿದ್ದು, ರಾಜ್ಯ ವಿಮಾ ಆಯೋಗದವರು ವೈಯಕ್ತಿಕ ನಿಗಾ ನೀಡುತ್ತಾರೆ. ಕೆಲವೊಮ್ಮೆ ರಾಷ್ಟ್ರೀಯ ವಿಮಾ ಆಯೋಗದವರೊಂದಿಗೆ ಸಲಹೆ ಪಡೆದು ಕೆಲಸ ಮಾಡುವುದುಂಟು. ಇತ್ತೀಚೆಗಿನ ವರ್ಷಗಳಲ್ಲಿ, ರಾಜ್ಯ ಮತ್ತು ರಾಷ್ಟ್ರೀಯ ಬ್ಯಾಂಕ್‌ಗಳ ಉಸ್ತುವಾರಿ ಮಂಡಳಿಯ ರೀತಿಯಲ್ಲಿ, ವಿಮೆಗಾಗಿಯೂ ಸಹ ಉಭಯ ರಾಜ್ಯ ಮತ್ತು ಸಂಯುಕ್ತ ನಿಯಂತ್ರಣಾ ವ್ಯವಸ್ಥೆ (ಸಾಮಾನ್ಯವಾಗಿ ಐಚ್ಛಿಕ ಸಂಯುಕ್ತ ಸನ್ನದು (OFC)) ಸ್ಥಾಪನೆಗಾಗಿ ಕೆಲವರು ಕರೆ ನೀಡಿದ್ದಾರೆ.


ವಿಮಾ ವಿಧಗಳು[ಬದಲಾಯಿಸಿ]

ಮೊತ್ತ ಪ್ರಮಾಣವನ್ನು ಲೆಕ್ಕಹಾಕಬಹುದಾದ ಯಾವುದೇ ಸಂಭವನೀಯ ಅಪಾಯವನ್ನು ವಿಮೆ ಇಳಿಸಬಹುದಾಗಿದೆ. ವಿಮಾ ಪರಿಹಾರದ ಬೇಡಿಕೆ(=ಕ್ಲೇಮ್‌)ಗೆ ಆಸ್ಪದ ನೀಡುವಂತಹ ವಿಶಿಷ್ಟ ರೀತಿಯ ಅಪಾಯಗಳಿಗೆ 'ಆಪತ್ತುಗಳು' ಎನ್ನಲಾಗುತ್ತದೆ. ವಿಮಾ ಪಾಲಿಸಿಯೊಂದು ಯಾವ ಆಪತ್ತುಗಳು ತನ್ನ ವ್ಯಾಪ್ತಿಯೊಳಗೆ ಬರಬಹುದು, ಯಾವುದು ಬಾರದು ಎಂಬ ವಿವರಗಳನ್ನು ನೀಡುತ್ತದೆ. ಚಾಲ್ತಿಯಲ್ಲಿರುವ ಹಲವು ತೆರನಾದ ವಿಮೆಗಳ (ಸಮಗ್ರವಲ್ಲದ) ಪಟ್ಟಿಗಳು ಕೆಳಕಂಡಂತಿವೆ. ಒಂದು ಪಾಲಿಸಿಯು ಕೆಳಕಂಡಂತೆ ಒಂದು ಅಥವಾ ಹೆಚ್ಚು ಬಗೆಗಳ ಅಪಾಯಗಳನ್ನು ವ್ಯಾಪ್ತಿಯೊಳಗೆ ಸೇರಿಸಿಕೊಳ್ಳಬಹುದು. ಉದಾಹರಣೆಗೆ, ವಾಹನ ವಿಮೆಯು ಆಸ್ತಿಪಾಸ್ತಿಯ ಅಪಾಯ (ವಾಹನಕ್ಕೆ ಹಾನಿ ಅಥವಾ ವಾಹನವು ಕಳುವಾಗುವಂತಹ ಅಪಾಯ) ಮತ್ತು ಹೊಣೆಗಾರಿಕೆಯ ಅಪಾಯ (ಅಪಘಾತದಿಂದ ಸಂಭವಿಸುವ ಕಾನೂನು ಮೊಕದ್ದಮೆಗಳು) ಎರಡನ್ನೂ ತನ್ನ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳುವುದು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಗೃಹ ಮಾಲೀಕನ ವಿಮೆ ಪಾಲಿಸಿಯು ಮಾದರಿಯಾಗಿ - ಗೃಹಕ್ಕೆ ಮತ್ತು ಗೃಹ ಮಾಲೀಕನ ವಸ್ತುಗಳಿಗೆ ಹಾನಿ, ಗೃಹ ಮಾಲೀಕನ ವಿರುದ್ಧದ ಕಾನೂನು-ರೀತ್ಯಾ ಪರಿಹಾರ ಬೇಡಿಕೆಗಳನ್ನು ಒಳಗೊಂಡಿರುವ ಹೊಣೆಗಾರಿಕೆಯ ವಿಮೆ ಮತ್ತು ಮಾಲೀಕನ ಸ್ವತ್ತಿನಲ್ಲಿ ಅತಿಥಿಗಳಿಗೆ ಸಂಭವಿಸಬಹುದಾದ ಸಣ್ಣ ಅಪಘಾತಗಳಿಗೆ ವೈದ್ಯಕೀಯ ಖರ್ಚು- ಇವೆಲ್ಲವನ್ನೂ ಸಹ ಒಳಗೊಂಡಿರುವ ಆಸತಿಪಾಸ್ತಿ ವಿಮೆಯನ್ನು ಸಹ ಒಳಗೊಂದಿರುತ್ತದೆ.[೧೦]


ಅಪಾಯಗಳ ವಿರುದ್ಧ ವ್ಯವಹಾರಗಳಿಗೆ ರಕ್ಷಣೆ ನೀಡುವಂತಹ ವಿಮೆಯು ವ್ಯವಹಾರ ವಿಮೆಎನಿಸಿದೆ. ವ್ಯವಹಾರ ವಿಮೆಯ ಕೆಲವು ಪ್ರಮುಖ ಉಪವಿಧಗಳು ವೃತ್ತಿಯ ನಷ್ಟ ಪರಿಹಾರ ವಿಮೆ ಯನ್ನು {ಎ}ವೃತ್ತಿಯ ಸುಭದ್ರತಾ ವಿಮೆ ಎಂದೂ ಕರೆಯಲಾಗಿದೆ; ಈ ಶೀರ್ಷಿಕೆಯಡಿ ಮುಂದೆ ಚರ್ಚಿಸಲಾಗಿದೆ; (ಬಿ) ಉದ್ದಿಮೆಯ ಮಾಲೀಕನ ಪಾಲಿಸಿ (BOP) - ಇದರೊಳಗೆ, ಉದ್ದಿಮೆಯ ಮಾಲೀಕನಿಗೆ ಇರುವ ವಿಮಾ ಅಗತ್ಯತೆಯಿದೆ. (ಗೃಹ ಮಾಲೀಕನಿಗೆ ಅಗತ್ಯವಾದ ವಿಮಾ ರಕ್ಷಣೆಗೆ ಒಳಗೊಂಡಿರುವ ಗೃಹ ಮಾಲೀಕನ ವಿಮೆಯ ತರಹ).[೧೧]


ವಾಹನ ವಿಮೆ[ಬದಲಾಯಿಸಿ]

ಹಾಳಾದ ವಾಹನ

ನಿಮಗೆ ಅಪಘಾತ ಸಂಭವಿಸಿದಲ್ಲಿ ಹಣಕಾಸಿನ ನಷ್ಟ ವಿರುದ್ಧ ವಾಹನ ವಿಮೆಯು ನಿಮ್ಮನ್ನು ರಕ್ಷಿಸುತ್ತದೆ. ಇದು ನಿಮ್ಮ ಮತ್ತು ವಿಮಾ ಸಂಸ್ಥೆಯ ನಡುವಿನ ಒಂದು ಕರಾರು. ನೀವು ವಿಮೆಕಂತುಗಳನ್ನು ಪಾವತಿಸಲು ಒಪ್ಪಿ, ವಿಮಾ ಸಂಸ್ಥೆಯು ನಿಮ್ಮ ಪಾಲಿಸಿಯಲ್ಲಿ ವ್ಯಾಖ್ಯಾನಿಸಲಾದ ನಷ್ಟಗಳನ್ನು ಸಂದಾಯ ಮಾಡಲು ಒಪ್ಪುತ್ತದೆ. ವಾಹನ ವಿಮೆಯು ಆಸ್ತಿಪಾಸ್ತಿ, ಹೊಣೆಗಾರಿಕೆ ಮತ್ತು ವೈದ್ಯಕೀಯ ವಿಮಾ ರಕ್ಷಣೆಯನ್ನು ನೀಡುತ್ತದೆ:

  1. ನಿಮ್ಮ ವಾಹನವು ಕಳುವಾದಲ್ಲಿ ಅಥವಾ ಅದಕ್ಕೆ ಹಾನಿಯಾದಲ್ಲಿ ಆಸ್ತಿಪಾಸ್ತಿ ರಕ್ಷಣೆಯು ಇದಕ್ಕೆ ವಿಮೆ ಪರಿಹಾರ ಬೇಡಿಕೆ ಹಣವನ್ನು ಸಂದಾಯ ಮಾಡುವುದು.
  2. ಇತರರ ದೇಹಕ್ಕಾದ ಗಾಯ ಅಥವಾ ಆಸ್ತಿಪಾಸ್ತಿಗೆ ಹಾನಿ ಒದಗಿದ ಸಂದರ್ಭದಲ್ಲಿ ಕಾನೂನುಬದ್ಧವಾಗಿ ನಿರ್ವಹಿಸಬೇಕಾದ ನಿಮ್ಮ ಜವಾಬ್ದಾರಿಯನ್ನು ವಿಮೆ ಪರಿಹಾರ ನೀಡಿಕೆಯ ಮೂಲಕ ನಿಮ್ಮ ಹೊಣೆಯನ್ನು ಹೊರುತ್ತದೆ.
  3. ಗಾಯಗಳಿಗೆ ವೈದ್ಯಕೀಯ ಚಿಕಿತ್ಸೆ, ಪುನರ್ವಸತಿ ಸೌಲಭ್ಯ; ಕೆಲವೊಮ್ಮೆ ವೇತನ ನಷ್ಟವನ್ನು ಭರಿಸುತ್ತದೆ, ಜೊತೆಗೆ ಅಂತ್ಯಕ್ರಿಯೆಯ ವೆಚ್ಚವನ್ನೂ ಸಹ ಸಂದಾಯ ಮಾಡುತ್ತದೆ.


ವಾಹನ ವಿಮಾ ಪಾಲಿಸಿಯು ಆರು ವಿಧಗಳ ರಕ್ಷಾ ಕವಚವನ್ನು ಹೊಂದಿದೆ. ಬಹುಪಾಲು ದೇಶಗಳು ವಿಮೆಯ ಕೆಲವು ರಕ್ಷಣೆಗಳನ್ನು ಕೊಂಡುಕೊಳ್ಳುವಂತೆ ಸೂಚಿಸುತ್ತದೆ; ಎಲ್ಲಾ ರಕ್ಷಾ ಕವಚಗಳಿಗೂ ಜೋತುಬೀಳುವ ಅಗತ್ಯವಿಲ್ಲ. ಕಾರಿಗಾಗಿ ಸಾಲ ನೀಡುವ ಸಂಸ್ಥೆಯು ಕೆಲವು ವಿಮಾ ರಕ್ಷಣೆಗಳನ್ನು ವಾಹನದ ಮೇಲೆ ಇಳಿಸುವಂತೆ ಸೂಚಿಸುತ್ತದೆ. ವಾಹನ ಪಾಲಿಸಿಗಳಲ್ಲಿ ಬಹುಪಾಲು ವರ್ಷ ಅಥವಾ ಅರ್ಧ ವರ್ಷದ ಕಾಲಾವಧಿಗೆ ಊರ್ಜಿತವಾಗಿರುತ್ತದೆ.


ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ನಿಮ್ಮ ಪಾಲಿಸಿಯನ್ನು ನವೀಕರಿಸಲು ವಿಮೆಕಂತು ಪಾವತಿಸಬೇಕಾದ ದಿನವು ಸಮೀಪಿಸಿದಾಗ, ವಿಮಾ ಸಂಸ್ಥೆಯು ನಿಮಗೆ ಅಂಚೆಯ ಮೂಲಕ ನೆನಪೋಲೆಯನ್ನು ಕಳುಹಿಸುತ್ತದೆ.[೧೨]


ಗೃಹ ವಿಮೆ[ಬದಲಾಯಿಸಿ]

ಅನಾಹುತ ಎಂಬ ದುರ್ಘಟನೆಯಲ್ಲಿ ಹಾನಿಗೀಡಾದ ಕಟ್ಟಡಕ್ಕೆ ಪರಿಹಾರ ಒದಗಿಸುವುದು ಗೃಹ ವಿಮೆ. ಕೆಲವು ಭೌಗೋಳಿಕ ವಲಯಗಳಲ್ಲಿ, ಹೆಚ್ಚುವರಿ ವಿಮಾ ವ್ಯಾಪ್ತಿಯ ಅಗತ್ಯವಿರುವ ಪ್ರವಾಹ, ಭೂಕಂಪದಂತಹ ಆಪತ್ತುಗಳನ್ನು ಪ್ರಮಾಣಿತ ವಿಮೆಗಳು ತಮ್ಮ ವ್ಯಾಪ್ತಿಯಿಂದ ಹೊರಗಿಡುತ್ತವೆ. ನಿರ್ವಹಣಾ-ಸಂಬಂಧಿತ ಸಂಗತಿಗಳ ಹೊಣೆ ಗೃಹ ಮಾಲೀಕರದ್ದೇ. ವಿಮೆಯು ವಿವರಣಾ ಪಟ್ಟಿಯನ್ನು ಒಳಗೊಂಡಿರಬಹುದು, ಅಥವಾ (ವಿಶೇಷವಾಗಿ ಬಾಡಿಗೆಯ ಮೇಲೆ ಮನೆ ಪಡೆದಿರುವವರಿಗಾಗಿ) ಅದನ್ನು ಪ್ರತ್ಯೇಕ ಪಾಲಿಸಿಯಾಗಿ ಕೊಂಡುಕೊಳ್ಳಬಹುದು. ಸಾಕು ಪ್ರಾಣಿಗಳಿಂದಾಗಲೀ ಕುಟುಂಬದ ಸದಸ್ಯರಿಂದಾಗಲೀ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದರೆ ಅದಕ್ಕೂ ಪರಿಹಾರ ಒದಗಿಸುವಂಥ ಹೊಣೆ ಹೊರುವಂಥ ಮತ್ತು ಕಾಯಿದೆಯನುಸಾರದ ಜವಾಬ್ದಾರಿಯನ್ನೂ ನಿಭಾಯಿಸುವಂಥ ವಿಮೆಯನ್ನು ಕೆಲವು ದೇಶಗಳು ಜಾರಿಗೆ ತಂದಿವೆ.[೧೩]


ಆರೋಗ್ಯ ವಿಮೆ[ಬದಲಾಯಿಸಿ]

NHS ಸೌಕರ್ಯ

ಯುನೈಟೆಡ್ ಕಿಂಗ್‌ಡಮ್ರಾಷ್ಟ್ರೀಯ ಆರೋಗ್ಯ ಸೇವೆಯ ವಿಮಾ ಪಾಲಿಸಿಗಳು ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಜಾರಿಯಲ್ಲಿದೆ ಅಥವಾ ವೈದ್ಯಕೀಯ ಚಿಕಿತ್ಸೆಯ ವೆಚ್ಚದ ಬಹು ಪಾಲನ್ನು ಭರಿಸುವಂಥ ಇತರೆ ಸಾರ್ವಜನಿಕ-ನಿಧಿ ಬೆಂಬಲಿತ ಆರೋಗ್ಯ ಕಾರ್ಯಕ್ರಮಗಳೂ ಅಲ್ಲುಂಟು.ವೈದ್ಯಕೀಯ ವಿಮೆಯಂಥ, ದಂತ ವೈದ್ಯ ವಿಮೆಯೂ ಸಹ ದಂತ ಚಿಕಿತ್ಸೆಯ ವೆಚ್ಚಗಳ ವಿರುದ್ಧ ವ್ಯಕ್ತಿಗಳಿಗೆ ರಕ್ಷಣೆ ಒದಗಿಸುತ್ತದೆ.ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಉದ್ಯಮಿಗಳ ಅನುಕೂಲಗಳ ಪಾಕ್ಯೇಜ್‌ನಲ್ಲಿ ಆರೋಗ್ಯ ವಿಮೆಯೊಂದಿಗೆ ಆಗಾಗ್ಗೆ ದಂತ ವಿಮೆಯು ಸಹ ಸೇರಿದೆ.


ಅಪಘಾತ, ಕಾಯಿಲೆ ಮತ್ತು ನಿರುದ್ಯೋಗ ವಿಮೆ[ಬದಲಾಯಿಸಿ]

  • ಗಾಯಗಳಿಂದಲೋ ಅಥವಾ ಕಾಯಿಲೆಯಿಂದಲೋ ಆರೋಗ್ಯ ಕುಂಠಿತಗೊಂಡು ಉದ್ಯೋಗವನ್ನು ಮುಂದುವರೆಸಲು ಅಶಕ್ಯರಾದಂಥ ಸಂದರ್ಭದಲ್ಲಿ ವಿಕಲತಾ ವಿಮೆ ಧನ ಬೆಂಬಲ ನೀಡುತ್ತದೆ. ಭೋಗ್ಯ ಮತ್ತು ಕ್ರೆಡಿಟ್ ಕಾರ್ಡ್‌ಗಳಿಂದ ಉಂಟಾದ ಹೊಣೆಗಳನ್ನು ಪಾವತಿಸಲು ಈ ವಿಮೆಯು ಮಾಸಿಕ ಹಣ ಬೆಂಬಲ ಒದಗಿಸುತ್ತದೆ.
  • ಕೆಲಸ ನಿರ್ವಹಿಸಲು ಅಶಕ್ಯರಾದಾಗ ವ್ಯವಹಾರಸ್ಥರಿಗೆ ತಮ್ಮ ಆಡಳಿತ ವೆಚ್ವಗಳ ನಿರ್ವಹಣೆಗಾಗಿ ಧನ ನೆರವು ನೀಡುತ್ತದೆ.
  • ಸಂಪೂರ್ಣ ಶಾಶ್ವತ ಅಂಗವೈಫಲ್ಯ ವಿಮೆಯು ಶಾಶ್ವತವಾಗಿ ಅಂಗವೈಕಲ್ಯ ಹೊಂದಿ ತನ್ನ ಕಸುಬಿನಲ್ಲಿ ಮುಂದುವರೆಯಲು ಅಶಕ್ಯನಾ/ಳಾಗಿರುವ ವ್ಯಕ್ತಿಗೆ ಅನುಕೂಲಗಳನ್ನು ನೀಡುತ್ತದೆ. ಇದನ್ನು ಆಗಾಗ್ಗೆ ಜೀವ ವಿಮೆಗೆ ಅನುಬಂಧ ಎಂದು ಪರಿಗಣಿಸಲಾಗಿದೆ.
  • ಉದ್ಯೋಗ ನಿರತನಾಗಿದ್ದಾಗ ಉದ್ಯೋಗ ಸ್ಥಳದಲ್ಲೇ ಕಾರ್ಮಿಕನು ಆಕಸ್ಮಿಕಗಳಿಗೆ ಈಡಾಗಿ ಗಾಯಾಳುವಾದರೆ ಮತ್ತು ನಿರ್ವಹಿಸುತ್ತಿರುವ ಕೆಲಸವೇ ಇದಕ್ಕೆ ಕಾರಣವಾಗಿದ್ದ ಪಕ್ಷದಲ್ಲಿ ಕಾರ್ಮಿಕರ ಪರಿಹಾರ ವಿಮೆಯು ವೇತನದಲ್ಲಿ ಉಂಟಾದ ನಷ್ಟವನ್ನೂ ಇದರ ಬೆನ್ನಿಗಂಟಿಕೊಂಡು ಬಂದ ವೈದ್ಯಕೀಯ ವೆಚ್ಚವನ್ನೂ ಭರಿಸುತ್ತದೆ.


ಅವಘಡ ವಿಮೆ[ಬದಲಾಯಿಸಿ]

ಯಾವುದೇ ಅಪಘಾತಗಳ ವಿರುದ್ಧ ಅವಘಡ ವಿಮೆಯು ರಕ್ಷಣೆ ನೀಡುತ್ತದೆ. ಸಂಭವಿಸಬಹುದಾದ ಅಪಘಾತ ನಿರ್ದಿಷ್ಟ ಮಾನದಂಡಕ್ಕೆ ಒಳಪಟ್ಟಿರುವುದಿಲ್ಲ.

  • ಮೂರನೆಯ ಪಕ್ಷದವರಿಂದ ಆಗುವ ಅಪರಾಧೀ ಕೃತ್ಯಗಳಿಂದ ಸಂಭವಿಸುವ ನಷ್ಟಗಳನ್ನು ಭರಿಸಿಕೊಡುವುದು ಅಪರಾಧ ವಿಮೆ.ಇದು ಒಂದು ರೀತಿಯ ಆಕಸ್ಮಿಕ ವಿಮೆಯೇ. ಉದಾಹರಣೆಗೆ, ಕಳ್ಳತನ ಅಥವಾ ಹಣದ ದುರುಪಯೋಗದಿಂದ ಸಂಭವಿಸಬಹುದಾದ ನಷ್ಟಗಳನ್ನು ತುಂಬಿಕೊಡಲು ಸಂಸ್ಥೆಯೊಂದು ಅಪರಾಧ ವಿಮೆಯನ್ನು ಪಡೆಯಬಹುದು.
  • ಬೇರೆ ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆಗಳು ಆ ದೇಶಗಳಲ್ಲಿ ತಲೆ ಎತ್ತುವ ಕ್ರಾತಿ ಅಥವಾ ರಾಜಕೀಯ ಸ್ಥಿತ್ಯಂತರದಿಂದಾಗಿ ವ್ಯವಹಾರ ನಷ್ಟಕ್ಕೆ ತುತ್ತಾದ ಸಂದರ್ಭದಲ್ಲಿ ರಾಜಕೀಯ ಅಪಾಯ ವಿಮೆ ಪರಿಹಾರ ಒದಗಿಸುತ್ತದೆ.ಇದು ಅವಘಡ ವಿಮೆಯಲ್ಲಿನ ಒಂದು ಬಗೆ.


ಜೀವ ವಿಮೆ[ಬದಲಾಯಿಸಿ]

ಮೃತ ವ್ಯಕ್ತಿಯ ಕುಟುಂಬಕ್ಕೆ ಅಥವಾ ನಿಯುಕ್ತರಾದ ಇತರೆ ಫಲಾನುಭವಿಗಳಿಗೆ ಆರ್ಥಿಕ ಅನುಕೂಲಗಳನ್ನೂ, ಅಥವಾ ವಿಮೆದಾರರಿಗೆ ವಿಶಿಷ್ಟ ವರಮಾನದ ನೆರವನ್ನೂ ನೀಡುವುದು ಜೀವ ವಿಮೆ.

ಮೃತ ವ್ಯಕ್ತಿಯ ಕುಟುಂಬಕ್ಕೆ ಹೂಳುವಿಕೆ, ಅಂತ್ಯ ಕ್ರಿಯೆ ಹಾಗೂ ಇನ್ನಿತರ ವೆಚ್ಚ ಭರಿಸಲೂ ಅದು ನೆರವಾಗಬಹುದು.ಇಡಿ ಗಂಟಿನ ಪರಿಹಾರ ನೀಡಿಕೆ ಅಥವಾ ವಾರ್ಷಿಕ ಹಣ ನೀಡಿಕೆಯ ವ್ಯವಸ್ಥೆ- ಈ ಎರಡರಲ್ಲಿ ಯಾವುದು ಫಲಾನುಭವಿಗೆ ಸಿಕ್ಕುವಂತಾಗಬೇಕು ಎಂಬ ಆಯ್ಕೆಯನ್ನು ಜೀವ ವಿಮಾ ಪಾಲಿಸಿಗಳು ಪಾಲಿಸಿದಾರನ ಪಾಲಿಗೆ ಬಿಟ್ಟಿದೆ.


ವರ್ಷಾಶನಗಳು ಸಂದಾಯಗಳನ್ನು ನೀಡುತ್ತಿದ್ದು, ವಿಮಾ ಸಂಸ್ಥೆಗಳು ಇವನ್ನು ನೀಡುವ ಕಾರಣ ಸಾಮಾನ್ಯವಾಗಿ ಇವನ್ನು ವಿಮೆಯೆಂದು ವರ್ಗೀಕರಿಸಲಾಗಿದೆ. ಇದಕ್ಕೂ ಸಹ ವಿಮೆಯ ನಿಯಂತ್ರಣವಿದ್ದು, ಜೀವ ವಿಮೆಗೆ ಅಗತ್ಯವಿರುವ ಒಂದೇ ರೀತಿಯ ವಿಮಾ ಗಣಿತ ಮತ್ತು ಹೂಡಿಕೆಯ ನಿರ್ವಹಣೆಯು ಇದಕ್ಕೆ ಅಗತ್ಯವಿದೆ. ನಿವೃತ್ತರಾಗುವವರು ತಮ್ಮ ಹಣಕಾಸಿನ ಮೂಲಗಳನ್ನು ಕಳೆದುಕೊಂಡು ಬದುಕುವ ಸಾಧ್ಯತೆಯ ವಿರುದ್ಧ ವಿಮೆ ಎಂದು ಜೀವಾವಧಿಯುದ್ದಕ್ಕೂ ಅನುಕೂಲಗಳನ್ನು ಸಂದಾಯ ಮಾಡುವ ವರ್ಷಾಶನ ಮತ್ತು ನಿವೃತ್ತಿ ವೇತನಗಳನ್ನು ಕೆಲವೊಮ್ಮೆ ಪರಿಗಣಿಸಲಾಗಿದೆ. ಈ ರೀತಿಯಲ್ಲಿ ಅವು ಜೀವ ವಿಮೆಗೆ ಪೂರಕವಾಗಿದ್ದು, ವಿಮಾ ದೃಷ್ಟಿಕೋನದಿಂದ, ಜೀವ ವಿಮೆಯ ಕೈಗನ್ನಡಿಯಂತಿದೆ.


ನಗದು ಮೌಲ್ಯವನ್ನು ಸಂಚಯಿಸುತ್ತವೆ.ಈ ನಗದನ್ನು ವಿಮೆಯನ್ನು ತ್ಯಜಿಸಿಯೋ ಅಥವಾ ಅದರ ವಿರುದ್ಧ ಎರವಲು ರೂಪದಲ್ಲಿಯೋ, ವಿಮೆದಾರ ಮೊತ್ತವನ್ನು ಹಿಂಪಡೆಯುವ ಅವಕಾಶವನ್ನು ಕೆಲವು ಜೀವ ವಿಮಾ ಕರಾರುಗಳು ಒದಗಿಸುತ್ತವೆ. ವರ್ಷಾಶನಗಳು ಮತ್ತು ದತ್ತಿ ವಿಮಾ ಪಾಲಿಸಿಗಳು ಸೇರಿದಂತೆ ಕೆಲವು ಪಾಲಿಸಿಗಳು, ಸಂಪತ್ತು ಸಂಚಯಿಸಲು ಅಥವಾ ಅಗತ್ಯಬಿದ್ದಲ್ಲಿ ಅದನ್ನು ಬಳಸಲು ಒಂದು ವಿತ್ತೀಯ ಸಾಧನವಾಗಿದೆ.


U.S. ಮತ್ತು UK ಸೇರಿದಂತೆ ಹಲವು ದೇಶಗಳಲ್ಲಿ,ಈ ರೀತಿ ಸಂಚಿತವಾದ ನಗದು ಮೌಲ್ಯದ ಮೇಲಿನ ಬಡ್ಡಿಯು ಕೆಲವು ಸಂದರ್ಭಗಳಲ್ಲಿ ತೆರಿಗೆಗೆ ಒಳಪಡುವುದಿಲ್ಲ ಎಂಬ ಅವಕಾಶವನ್ನು ತೆರಿಗೆ ಕಾಯಿದೆಯಲ್ಲಿ ಕಲ್ಪಿಸಲಾಗಿದೆ.ತೆರಿಗೆಯಿಂದ ತಪ್ಪಿಸಿಕೊಳ್ಳ ಬಹುದಾದ ಉಳಿತಾಯ ಮಾರ್ಗ ಮತ್ತು ಅಕಾಲ ಮರಣಕ್ಕೆ ತುತ್ತಾಗ ಬಹುದಾದ ಸನ್ನಿವೇಶದಿಂದ ರಕ್ಷಣೆ ಪಡೆಯವ ಸಾಧ್ಯತೆ ಈ ಪಾಲಿಸಿಗಳಲ್ಲಿ ಅಡಕವಾಗಿರುವುದರಿಣದ ಇದು ವ್ಯಾಪಕ ಬಳಕೆಯಲ್ಲಿದೆ.


U.S.ನಲ್ಲಿ ಜೀವ ವಿಮೆ ಮತ್ತು ವರ್ಷಾಶನಗಳ ಬಡ್ಡಿಯ ಮೇಲಿನ ತೆರಿಗೆ ಪಾವತಿಯನ್ನು ಸಾಮಾನ್ಯವಾಗಿ ಮುಂದೂಡಲಾಗುತ್ತದೆ. ಆದರೆ, ಕೆಲವು ಪ್ರಕರಣಗಳಲ್ಲಿ, ತೆರಿಗೆ ಮುಂದೂಡಿಕೆಯಿಂದ ಪಡೆದ ಪ್ರಯೋಜನವನ್ನು ಕ್ಷೀಣಿತ ಆದಾಯಕ್ಕೆ ಸರಿದೂಗಿಸಲಾಗುತ್ತದೆ. ಇದು ವಿಮಾ ಸಂಸ್ಥೆ, ವಿಮಾ ಪಾಲಿಸಿಯ ವಿಧ ಮತ್ತು ಇತರೆ ಅಂಶಗಳನ್ನು (ಮರಣ, ಮಾರುಕಟ್ಟೆ ಆದಾಯಗಳು ಇತ್ಯಾದಿ) ಅವಲಂಬಿಸಿದೆ. ನಗದು ಮೌಲ್ಯ ಸಂಚಯನಕ್ಕೆ,ಆದಾಯ ತೆರಿಗೆ ಉಳಿತಾಯ ಮಾಡಬಲ್ಲಂಥ ವಾಹನಗಳು (ಉದಾಹರಣೆಗೆ IRAಗಳು, 401(k) ಯೋಜನೆಗಳು, ರಾಥ್‌ IRAಗಳು) ಉತ್ತಮ ಪರ್ಯಾಯಗಳಾಗಬಹುದು.


ಆಸ್ತಿಪಾಸ್ತಿ ವಿಮೆ[ಬದಲಾಯಿಸಿ]

ಈ ಇಲ್ಲಿನೋಯಿಸ್ ಮನೆಗಾದ ಟಾರ್ನೆಡೊಯಿಂದಾದ ಹಾನಿಯನ್ನು ವಿಮೆಯ ಉದ್ದೇಶಕ್ಕಾಗಿ "ದೇವರ ಕೆಲಸ" ಎಂದು ಪರಿಗಣಿಸಲಾಯಿತು.

ಆಸ್ತಿಪಾಸ್ತಿ ವಿಮೆಯು ಬೆಂಕಿ, ಕಳ್ಳತನ ಅಥವಾ ಹವಾಮಾನ ವೈಪರೀತ್ಯಗಳಿಂದ ಉಂಟಾಗಬಹುದಾದ ವಿಪತ್ತುಗಳ ವಿರುದ್ಧ ರಕ್ಷಣೆ ನೀಡುತ್ತದೆ. ಅಗ್ನಿ ಆಕಸ್ಮಿಕ ವಿಮೆ, ಪ್ರವಾಹ ಪ್ರಕೋಪ ವಿಮೆ, ಭೂಕಂಪದ ಆಪತ್ತಿನ ವಿಮೆ, ಗೃಹ ವಿಮೆ, ಒಳನಾಡ ನೌಕಾ ವಿಮೆ ಮತ್ತು ಕುದಿಪಾತ್ರೆ ವಿಮೆಯಂತಹ ವಿಶಿಷ್ಟ ರೂಪಗಳನ್ನು ಇದು ಒಳಗೊಂಡಿದೆ.

  • ವಾಹನ ವಿಮೆ: UKಯಲ್ಲಿ ಮೋಟಾರ್‌ ವಿಮೆ ಎನ್ನಲಾದ ವಾಹನ ವಿಮೆಯು ವಿಮೆಯ ಅತಿ ಸಾಮಾನ್ಯ ಸ್ವರೂಪದ್ದಾಗಿದೆ. ಇದು ಚಾಲಕನ ವಿರುದ್ಧದ ಕಾನೂನು ರೀತ್ಯದ ಹೊಣೆ ಕ್ಲೇಮ್‌; ಹಾಗೂ ವಿಮೆದಾರರ ವಾಹನಕ್ಕೇ ಸಂಭವಿಸುವ ನಷ್ಟ ಅಥವಾ ಹಾನಿ - ಎರಡನ್ನೂ ಭರಿಸಿಕೊಡುವ ವ್ಯವಸ್ಥೆಯನ್ನು ಒಳಗೊಂಡಿದೆ. , ಸಾರ್ವಜನಿಕ ರಸ್ತೆಗಳಲ್ಲಿ ಕಾನೂನು ಸಮ್ಮತವಾಗಿ ವಾಹನವನ್ನು ಚಲಾಯಿಸಲು ಅಮೆರಿಕಾ ಸಂಯುಕ್ತ ಸಂಸ್ಥಾನಅಮೆರಿಕಾ ಸಂಯುಕ್ತ ಸಂಸ್ಥಾನದಾದ್ಯಂತ ವಾಹನ ವಿಮೆ ಪಾಲಿಸಿಯ ಅಗತ್ಯವಿದೆ. ವಾಹನ ಅಪಘಾತಕ್ಕೀಡಾದವರಿಗೆ ದೈಹಿಕವಾಗಿ ಆದ ಗಾಯಕ್ಕೆ ಪರಿಹಾರ ನೀಡುವಾಗ'ನಿರ್ದೋಷಿ'ಎಂದು ಪರಿವರ್ತಿಸುವ ವ್ಯವಸ್ಥೆ ಕೆಲವು ವ್ಯಾಪ್ತಿ ಪ್ರದೇಶಗಳಲ್ಲಿ ಮಾಡಲಾಗಿದೆ. ಹಾಗಾಗಿ ಇದು ಪರಿಹಾರ ಕೋರಿ ಮೊಕದ್ದಮೆ ಹೂಡುವ ಸಾಧ್ಯತೆಯನ್ನು ರದ್ದಾಗಿಸಿದರೂ ಅಥವಾ ಕಡಿಮೆಗೊಳಿಸಿದರೂ, ಪರಿಹಾರ ಪಡೆಯುವ ಅರ್ಹತೆಯನ್ನು ನೀಡುತ್ತದೆ. ಬಾಡಿಗೆ ಕಾರ್‌ಗಳಿಗಾಗುವ ಹಾನಿಯ ವಿರುದ್ಧ ಕ್ರೆಡಿಟ್‌ ಕಾರ್ಡ್‌ ಸಂಸ್ಥೆಗಳು ವಿಮೆ ಒದಗಿಸುತ್ತವೆ.
    • ಚಾಲನಾ ತರಬೇತಿ ವಿಮೆ: ತರಬೇತಿ ಪಡೆಯುತ್ತಿರುವ ಯಾವುದೇ ಅಧಿಕೃತ ಚಾಲಕರಿಗೆ ವಿಮೆ ರಕ್ಷಣೆ ನೀಡುತ್ತದೆ. ಇತರೆ ವಾಹನ ಪಾಲಿಸಿಗಳಿಗಿಂತಲೂ ಭಿನ್ನವಾಗಿ, ಯಾವುದೇ ಪರಿಹಾರ ಬೇಡಿಕೆ ಬಂದಲ್ಲಿ ಚಾಲನಾ ತರಬೇತಿ ನೀಡುವ ಶಿಕ್ಷಕ ಮತ್ತು ಚಾಲನಾ ತರಬೇತಿ ಪಡೆಯುವ ಕಲಿಕಾ ಚಾಲಕ-ಇವರಿ ಬ್ಬರಿಗೂ ತರಬೇತುದಾರ ಹೊಣೆಗಾರಿಕೆಯಾಗುವುದರ ವಿರುದ್ಧ ಚಾಲನಾ ತರಬೇತಿ ಶಾಲೆ ವಿಮೆಯು ರಕ್ಷಣೆ ನಿಡುತ್ತದೆ.
  • ವಾಯುಯಾನ ವಿಮೆ: ಕವಚ, ಬಿಡಿಭಾಗಗಳು, ಸೇರ್ಪಡಿಕೆ ಭಾಗಗಳು, ಕವಚದ ಸವೆಯುವಿಕೆ ಮತ್ತು ಅಪಾಯದ ಹೊಣೆಯ ವಿರುದ್ಧ ವಾಯುಯಾನ ವಿಮೆಯು ರಕ್ಷಣೆ ನೀಡುತ್ತದೆ.
  • ಕುದಿಪಾತ್ರೆ ವಿಮೆ: (ಕುದಿಪಾತ್ರೆ ಮತ್ತು ಯಂತ್ರ ವಿಮೆ ಅಥವಾ ಯಂತ್ರೋಪಕರಣ ಕೆಟ್ಟು ನಿಲ್ಲುವ ವಿಮೆ ಎಂದೂ ಕರೆಯಲಾಗಿದೆ) ಯಂತ್ರಗಳಿಗೆ ಅಥವಾ ಯಂತ್ರೋಪಕರಣಗಳಿಗೆ ಯಾವುದೇ ಆಕಸ್ಮಿಕ ಭೌತಿಕ ಹಾನಿ ಸಂಭವಿಸುವುದರ ವಿರುದ್ಧ ಕುದಿಪಾತ್ರೆ ವಿಮೆಯು ರಕ್ಷಣೆ ನೀಡುತ್ತದೆ.
  • ಕಟ್ಟಡ ನಿರ್ಮಾಪಕರ ಅಪಾಯ ವಿಮೆ: ಕಟ್ಟಡ ನಿರ್ಮಾಣದ ಸಮಯದಲ್ಲಿ ಸಂಭವಿಸುವ ಯಾವುದೇ ಭೌತಿಕ ನಷ್ಟ ಅಥವಾ ಹಾನಿಯ ಅಪಾಯದ ವಿರುದ್ಧ ಕಟ್ಟಡ ನಿರ್ಮಾಪಕರ ಅಪಾಯ ವಿಮೆಯು ರಕ್ಷಣೆ ನೀಡುತ್ತದೆ. ಸ್ಪಷ್ಟವಾಗಿ ಹೊರತುಪಡಿಸದಿದ್ದಲ್ಲಿ, ವಿಮೆದಾರರ ಅಸಡ್ಡೆಯೂ ಸೇರಿದಂತೆ ಯಾವುದೇ ಕಾರಣದಿಂದಾಗುವ ಹಾನಿಯ ವಿರುದ್ಧ 'ಎಲ್ಲಾ ರೀತಿಯ ಅಪಾಯ'ಗಳ ಹೊಣೆ ಹೊತ್ತ ಆಧಾರದ ಮೇಲೆ ಕಟ್ಟಡ ನಿರ್ಮಾಪಕರ ಅಪಾಯ ವಿಮೆಯನ್ನು ಇಳಿಸಲಾಗುವುದು.
  • ಫಸಲು ವಿಮೆ: "ಬೆಳೆಯುವ ಫಸಲುಗಳ ಒಡನಿರುವ ವಿವಿಧ ಅಪಾಯಗಳನ್ನು ನಿಯಂತ್ರಿಸಲು ಅಥವಾ ಕಡಿತಗೊಳಿಸಲು ಕೃಷಿಕರು ಫಸಲು ವಿಮೆಯನ್ನು ಬಳಸುತ್ತಾರೆ. ಉದಾಹರಣೆಗೆ, ಫಸಲು ನಷ್ಟ ಅಥವಾ ಹವಾಮಾನ ವೈಪರೀತ್ಯ, ಆಲಿಕಲ್ಲು ಸುರಿತ, ಬರಗಾಲ, ಹಿಮಗಡ್ಡೆಯಿಂದಾಗುವ ಹಾನಿ, ಕ್ರಿಮಿಕೀಟ ಅಥವಾ ಸಸ್ಯ ರೋಗಗಳಿಂದ ಬೆನ್ನೇರಿ ಬರುವ ಅಪಾಯಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.
  • ಭೂಕಂಪ ವಿಮೆ: ಭೂಕಂಪ ವಿಮೆ ಒಂದು ರೀತಿಯಲ್ಲಿ ಆಸ್ತಿಪಾಸ್ತಿ ವಿಮೆಯಂತಿದೆ. ಸ್ವತ್ತಿಗೆ ಹಾನಿಯಾಗುವಷ್ಟು ತೀವ್ರತೆಯಲ್ಲಿ ಭೂಕಂಪವು ಸಂಭವಿಸಿದಲ್ಲಿ ಇದು ಪಾಲಿಸಿದಾರರಿಗೆ ಪರಿಹಾರವನ್ನು ನೀಡುತ್ತದೆ. ಅತ್ಯಂತ ಸಾಧಾರಣ ಗೃಹ ಮಾಲೀಕರ ವಿಮಾ ಪಾಲಿಸಿಗಳು ಭೂಕಂಪದಿಂದಾಗುವ ಹಾನಿಯನ್ನು ಒಳಗೊಂಡಿರುವುದಿಲ್ಲ. ಬಹುಪಾಲು ಭೂಕಂಪ ವಿಮೆ ಪಾಲಿಸಿಗಳುಕಳೆಯುವಿಕೆಯ ಗುಣವನ್ನು ಹೊಂದಿವೆ. ಭೂಕಂಪದ ಸಂಭವನೀಯತೆಯ ಸ್ಥಳ ಹಾಗೂ ಗೃಹದ ನಿರ್ಮಾಣವೈಖರಿಯನ್ನು ಗಮನಿಸಿ ದರ ನಿಗದಿ ಮಾಡಲಾಗುತ್ತದೆ.
  • ನಿಷ್ಠೆ ಕರಾರು: ನಿಷ್ಠೆ ಕರಾರು ಒಂದು ರೀತಿಯ ಆಕಸ್ಮಿಕ ವಿಮೆ. ಕೆಲವು ವ್ಯಕ್ತಿಗಳು ಎಸಗುವ ವಂಚನೆಯ ಕೃತ್ಯಗಳ ಪರಿಣಾಮವಾಗಿ ವ್ಯಕ್ತಿಗೆ ಸಂಭವಿಸುವ ನಷ್ಟವನ್ನು ಈ ವಿಮೆಯ ಪಾಲಿಸಿದಾರರು ರಕ್ಷಿಸಲ್ಪಡುತ್ತಾರೆ.ಅಪ್ರಾಮಾಣಿಕ ಉದ್ಯೋಗಿಗಳಿಂದ ಉಂಟಾಗುವ ನಷ್ಟಗಳ ವಿರುದ್ಧ ಉದ್ಯಮಕ್ಕೆ ಸಾಮಾನ್ಯವಾಗಿ ಈ ವಿಮೆ ರಕ್ಷಣೆ ನೀಡುತ್ತದೆ.
  • ಪ್ರವಾಹ ಪ್ರಕೋಪ ವಿಮೆ: ಪ್ರವಾಹದಿಂದ ಉಂಟಾಗುವ ಆಸ್ತಿಪಾಸ್ತಿ ನಷ್ಟದ ವಿರುದ್ಧ ಪ್ರವಾಹ ಪ್ರಕೋಪ ವಿಮೆಯು ರಕ್ಷಣೆ ನೀಡುತ್ತದೆ. U.S.ನಲ್ಲಿ ಹೆಚ್ಚಿನ ವಿಮೆಗಾರರು ದೇಶದ ಕೆಲವು ವಲಯಗಳಲ್ಲಿ ಪ್ರವಾಹ ವಿಮೆ ನೀಡಲು ನಿರಾಕರಿಸುತ್ತಾರೆ. ಇದಕ್ಕೆ ಪ್ರತಿಯಾಗಿ, ಸಂಯುಕ್ತ ಸರ್ಕಾರವು ರಾಷ್ಟ್ರೀಯ ಪ್ರವಾಹ ವಿಮೆ ಯೋಜನೆಯನ್ನು ಸ್ಥಾಪಿಸಿತು. 'ಅಂತಿಮೋಪಾಯ' ಸಂದರ್ಭದಲ್ಲಿ ಇದು ವಿಮೆಗಾರನಂತೆ ಪಾತ್ರವಹಿಸುತ್ತದೆ.
  • ಗೃಹ ವಿಮೆ ಅಥವಾ ಮನೆ ಮಾಲೀಕರ ವಿಮೆ: 'ಆಸ್ತಿಪಾಸ್ತಿ ವಿಮೆ' ನೋಡಿ.
  • ಮಾಲೀಕರ ವಿಮೆ: ತಮ್ಮ ಆಸ್ತಿಪಾಸ್ತಿಗಳನ್ನು ಬಾಡಿಗೆಗೆ ನೀಡುವವರಿಗಾಗಿ ವಿಶಿಷ್ಟವಾದ ಮಾಲೀಕರ ವಿಮೆಯನ್ನು ರೂಪಿಸಲಾಗಿದೆ. U.K.ನಲ್ಲಿ ಬಹಳಷ್ಟು ಗೃಹಗಳು ಬಾಡಿಗೆಗೆ ನೀಡಲಾದ ಅನೇಕ ಮನೆಗಳು ಗೃಹ ವಿಮಾ ರಕ್ಷಣೆಯು ಊರ್ಜಿತವಾಗಿರುವುದಿಲ್ಲ. ಹಾಗಾಗಿ ಮನೆಯ ಮಾಲೀಕರು ಗೃಹ ವಿಮೆಯ ಈ ವಿಶೇಷ ರೂಪವನ್ನು ಪಡೆಯಬೇಕಾಗಿದೆ.
  • ನೌಕಾ ವಿಮೆ: ನೌಕಾ ವಿಮೆ ಮತ್ತು ನೌಕೆಯಲ್ಲಿರುವ ಸರಕುಗಳ ಮೇಲಿನ ವಿಮೆ, ಸಮುದ್ರ ಮಾರ್ಗ ಅಥವಾ ಒಳನಾಡಿನ ಜಲಮಾರ್ಗದಲ್ಲಿ ನಷ್ಟ ಅಥವಾ ಹಾನಿಗೀಡಾದಲ್ಲಿ ರಕ್ಷಣೆ ಒದಗಿಸುತ್ತದೆ. ಸರಕು ಮತ್ತು ಸರಕು ವಾಹಕ ಹಡಗಿನ ಮಾಲೀಕರು ಪ್ರತ್ಯೇಕ ಸಂಸ್ಥೆಗಳಾಗಿದ್ದಲ್ಲಿ, ನೌಕಾ ಸರಕು ವಿಮೆಯು ಬೆಂಕಿ ಅನಾಹುತ, ಅಪ್ಪಳಿಸುವುದರಿಂದ ಹಡಗಿಗೆ ಒದಗುವ ಹಾನಿ ಇತ್ಯಾದಿಗಳಿಗೆ ಪರಿಹಾರವನ್ನು ಪ್ರತ್ಯೇಕವಾಗಿ ಒದಗಿಸುತ್ತದೆ. ಆದರೆ ಹಡಗಿನ ಮಾಲೀಕನಿಗೆ ದೊರೆಯಬಹುದಾದ ಪರಿಹಾರದಲ್ಲಿ ಪಾಲು ಕೇಳದಂತೆ ಸರಕಿನ ಮಾಲೀಕನನ್ನು ಪ್ರತಿಬಂಧಿಸುತ್ತದೆ. ನೌಕಾ ವಿಮೆಯ ಜವಾಬ್ದಾರಿ ಹೊತ್ತ ಸಂಸ್ಥೆ ಇಂತಹ ಪಾಲಿಸಿಗಳಲ್ಲಿ 'ಸಮಯದ ಅಂಶ'ವನ್ನು ಸೇರಿಸಿರುತ್ತಾರೆ.ವಿಳಂಬದ ಕಾರಣ ಆಗುವ ಲಾಭಾಂಶದಲ್ಲಿನ ನಷ್ಟ ಮತ್ತು ಇತರೆ ವ್ಯಾವಹಾರಿಕ ವೆಚ್ಚಗಳಿಗೆ ನಷ್ಟಭರ್ತಿ ಭರಿಸುವ ಅಂಶವನ್ನು ಇಲ್ಲಿ ಒದಗಿಸಲಾಗುತ್ತದೆ.
  • ಆಧಾರಿತ ವಿಮೆ: ಹೊಣೆಗಾರ ವಿಮೆಯು ಮೂಲ ಧನದ ಕರ್ಯತತ್ಪರತೆಯನ್ನು ಖಾತರಿ ನೀಡುವಂಥ ಮತ್ತೊಬ್ಬರ ಆಧಾರ ಪಡೆಯುವಂಥ ಒಂದು ತ್ರಿಪಕ್ಷೀಯ ವಿಮೆಯೇ ಆಧಾರಿತ ವಿಮೆ ಎನಿಸಿಕೊಂಡಿದೆ.
  • ಉಗ್ರರ ಉಪಟಳದ ವಿಮೆ: ಆತಂಕವಾದಿ ಚಟುವಟಿಕೆಗಳಿಂದ ಸಂಭವಿಸಬಹುದಾದ ನಷ್ಟ ಅಥವಾ ಹಾನಿಯ ವಿರುದ್ಧ ಉಗ್ರರ ಉಪಟಳದ ವಿಮೆ ರಕ್ಷಣೆ ನೀಡುತ್ತದೆ.
  • ಜ್ವಾಲಾಮುಖಿ ವಿಮೆ: ಹವಾಯಿ ರಾಜ್ಯದಲ್ಲಿ ಜ್ವಾಲಾಮುಖಿಯಿಂದ ಸಂಭವಿಸುವ ಹಾನಿಯ ವಿರುದ್ಧ ಜ್ವಾಲಾಮುಖಿ ವಿಮೆಯು ರಕ್ಷಣೆ ನೀಡುತ್ತದೆ.
  • ಚಂಡಮಾರುತ ವಿಮೆ: ಬಿರುಗಾಳಿ ಮತ್ತು ಉಷ್ಣವಲಯದ ಸುಂಟರಗಾಳಿಗಳಿಂದ ಸಂಭವಿಸುವ ಹಾನಿಯ ವಿರುದ್ಧ ಚಂಡಮಾರುತ ವಿಮೆ ರಕ್ಷಣೆ ನೀಡುತ್ತದೆ.


ಹೊಣೆಗಾರಿಕೆ[ಬದಲಾಯಿಸಿ]

ವಿಮೆದಾರರ ವಿರುದ್ಧದ ಕಾನೂನು ಸಮ್ಮತ ವಿಮಾ ಪರಿಹಾರ ಬೇಡಿಕೆಗಳನ್ನು ಈಡೇರಿಸುವಂತಹ ಒಂದು ವಿಸ್ತೃತ ರಕ್ಷಾ ಕವಚವಾಗಿದೆ - ಈ ವಿಮೆಯ ಹೊಣೆಗಾರಿಕೆ. ವಿಮೆಯ ಹಲವು ವಿಧಗಳು ಹೊಣೆಗಾರಿಕೆಯ ಅಂಶವನ್ನು ಸೇರಿಸಿಕೊಳ್ಳುತ್ತವೆ. ಉದಾಹರಣೆಗೆ, ಗೃಹ ಮಾಲೀಕನ ವಿಮೆ ಪಾಲಿಸಿಯು ಸಾಮಾನ್ಯವಾಗಿ ಹೊಣೆಗಾರಿಕೆಯ ಅಂಶವನ್ನು ಒಳಗೊಳ್ಳುತ್ತದೆ. ಸ್ವತ್ತಿನಲ್ಲಿ ಯಾರೋ ಜಾರಿಬಿದ್ದವರು ಪರಿಹಾರಕ್ಕಾಗಿ ದಾವೆ ಹೂಡಿದ್ದಲ್ಲಿ ವಿಮೆದಾರರಿಗೆ ಹೊಣೆಗಾರಿಕೆಯ ಅಂಶದ ರಕ್ಷಣೆಯನ್ನು ನೀಡುತ್ತದೆ. ವಾಹನ ವಿಮೆಯೂ ಸಹ ಹೊಣೆಗಾರಿಕೆಯ ವಿಮೆಯನ್ನು ನೀಡುತ್ತದೆ. ಇದು ಢಿಕ್ಕಿ ಹೊಡೆಯುವ ವಾಹನವು ಇತರರ ಜೀವಗಳಿಗೆ, ಆರೋಗ್ಯ ಅಥವಾ ಆಸ್ತಿಪಾಸ್ತಿಗಳಿಗೆ ಎಸಗುವ ಹಾನಿಯ ವಿರುದ್ಧ ನಷ್ಟ ಪರಿಹಾರದ ರಕ್ಷಣೆ ನೀಡುತ್ತದೆ. ಹೊಣೆಗಾರಿಕೆಯ ವಿಮೆ ಪಾಲಿಸಿಯು ನೀಡುವ ಸುರಕ್ಷೆಯು ದುಪ್ಪಟ್ಟಾಗಿದೆ: ಪಾಲಿಸಿದಾರರ ವಿರುದ್ಧ ಮೊಕದ್ದಮೆ ಆರಂಭವಾದಲ್ಲಿ ರಕ್ಷಣಾತ್ಮಕ ಪ್ರತಿವಾದ (ಲೀಗಲ್‌ ಡಿಫೆನ್ಸ್‌) ಮತ್ತು ಇತ್ಯರ್ಥ ಅಥವಾ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ವಿಮೆದಾರರ ಪರವಾಗಿ ಹಣ ಸಂದಾಯವನ್ನೂ (ನಷ್ಟ ತುಂಬಿಸುವಿಕೆಯನ್ನೂ) ಸಹ ಮಾಡುತ್ತದೆ. ಹೊಣೆಗಾರಿಕೆಯ ಪಾಲಿಸಿಗಳು ಕೇವಲ ವಿಮೆದಾರರ ಉಪೇಕ್ಷೆಗೆ ಮಾತ್ರ ರಕ್ಷಣೆ ನೀಡುತ್ತದೆ. ಇದು ವಿಮೆದಾರರು ಉದ್ದೇಶಪೂರ್ವಕವಾಗಿಯೇ ಎಸಗುವ ಕೃತ್ಯಗಳಿಗೆ ಅನ್ವಯಿಸುವುದಿಲ್ಲ.

  • ಸಾರ್ವಜನಿಕ ಹೊಣೆಗಾರಿಕೆ ವಿಮೆ: ಸಾರ್ವಜನಿಕರಿಗೆ ಅಥವಾ ಅವರ ಆಸ್ತಿಪಾಸ್ತಿಗೆ, ನಡೆಸುತ್ತಿರುವ ವ್ಯವಹಾರವು ಹಾನಿಯೆಸಗಿದರೆ, ಅಂಥ ಸಂದರ್ಭದಲ್ಲಿ ಉದ್ಭವಿಸುವ ಪರಿಹಾರ ಬೇಡಿಕೆ ಇತ್ಯರ್ಥವಾಗುವುದರಲ್ಲಿ ಸಾರ್ವಜನಿಕ ಹೊಣೆಗಾರಿಕೆ ವಿಮೆಯು ರಕ್ಷಣೆ ನೀಡುತ್ತದೆ.
  • ನಿರ್ದೇಶಕರ ಮತ್ತು ಅಧಿಕಾರಿಗಳ ಹೊಣೆಗಾರಿಕೆಯ ವಿಮೆ: ಸಂಸ್ಥೆಯೊಂದು (ಸಾಮಾನ್ಯವಾಗಿ ಬ್ಋಹತ್ ಉದ್ಯಮ) ನಿರ್ದೇಶಕರು ಅಥವಾ ಅಧಿಕಾರಿಗಳು ಎಸಗುವ ದುರ್ವ್ಯವಹಾರದ ಪರಿಣಾಮವಾಗಿ ಎದುರಿಸುವ ಮೊಕದ್ದಮೆಗಳಿಂದ ಮೈಮೇಲೆ ಬರುವ ವೆಚ್ಚಗಳಿಂದ ನಿರ್ದೇಶಕರ ಮತ್ತು ಅಧಿಕಾರಿಗಳ ಹೊಣೆಗಾರಿಕೆಯ ವಿಮೆಯು ರಕ್ಷಣೆ ನೀಡುತ್ತದೆ. ಈ ಉದ್ದಿಮೆಯಲ್ಲಿ ಸಂಕ್ಷಿಪ್ತವಾಗಿ ಇದನ್ನು "D&O" ಎನ್ನಲಾಗುತ್ತದೆ.
  • ಪರಿಸರ ನಿರ್ವಹಣಾ ವಿಮೆ: ಅಪ್ಪೀತಪ್ಪೀ ನುಸುಳಿ ಬರಬಹುದಾದ ಮಲಿನ ತ್ಯಾಜ್ಯ ಅಥವಾ ಬಿಡುಗಡೆ ಇಲ್ಲಾ ಹಂಚಿಕೆಯಿಂದ ಆಗುವ ಶರೀರಕ್ಕೆ ಉಂಟಾಗುವ ಗಾಯ, ಆಸ್ತಿಪಾಸ್ತಿ ನಷ್ಟಕ್ಕೆ ಪರಿಸರ ನಿರ್ವಹಣಾ ವಿಮೆ ರಕ್ಷಣೆ ಒದಗಿಸುತ್ತದೆ.
  • ಲೋಪ ಮತ್ತು ದೋಷಗಳ ವಿಮೆ: 'ಹೊಣೆಗಾರಿಕೆಯ ವಿಮೆ'ಯಡಿ 'ವೃತ್ತೀಯ ಹೊಣೆಗಾರಿಕೆಯ ವಿಮೆ' ನೋಡಿ.
  • ಪ್ರಶಸ್ತಿ ನಷ್ಟ ಪರಿಹಾರ ವಿಮೆ: ವಿಮೆದಾರರನ್ನು ನಿರ್ದಿಷ್ಟ ಸಮಾರಂಭದಲ್ಲಿ ದೊಡ್ಡ ಪ್ರಮಾಣದ ಪ್ರಶಸ್ತಿ ಪ್ರದಾನ ಮಾಡುವಾಗ ಸಂಭವಿಸಬಹುದಾದ ನಷ್ಟವನ್ನು ಈ ವಿಮೆಯು ರಕ್ಷಿಸುತ್ತದೆ. ಬ್ಯಾಸ್ಕೆಟ್‌ಬಾಲ್‌ ಅಂಕಣದ ಮಧ್ಯದಲ್ಲಿ ನಿಂತು ಚೆಂಡನ್ನು ಬುಟ್ಟಿಯಲ್ಲಿ ಗೋಲ್‌ ಹಾಕುವ ಸ್ಪರ್ಧೆಯಲ್ಲಿ ಗೆದ್ದವರಿಗೆ, ಅಥವಾ ಗಾಲ್ಫ್‌ ಸ್ಪರ್ಧೆಯಲ್ಲಿ 'ಹೋಲ್‌-ಇನ್‌-ಒನ್‌‌' ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನಗಳ ವಿತರಣೆಯನ್ನು ಉದಾಹರಣೆಯಾಗಿವೆ.
  • ವೃತ್ತೀಯ ಹೊಣೆಗಾರಿಕೆಯ ವಿಮೆ: ವೃತ್ತಿ ನಷ್ಟ ಪರಿಹಾರ ವಿಮೆ ಎಂದೂ ಹೇಳಲಾದ ವೃತ್ತೀಯ ಹೊಣೆಗಾರಿಕೆ ವಿಮೆಯು ವಾಸ್ತುಶಿಲ್ಪಿಗಳು ಮತ್ತು ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವ ವೃತ್ತೀಯ ವಿಮೆದಾರರನ್ನು, ಗ್ರಾಹಕರು/ರೋಗಿಗಳು ಹೂಡುವ ಸಂಭಾವ್ಯ ನಿರ್ಲಕ್ಷ್ಯದ ನಡವಳಿಕೆಯಂಥ ದಾವೆಯ ವಿರುದ್ಧ ರಕ್ಷಿಸುತ್ತದೆ. ವೃತ್ತೀಯ ಹೊಣೆಗಾರಿಕೆ ವಿಮೆಯು ವೃತ್ತಿಯ ಆಧಾರದ ಮೇಲೆ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಉದಾಹರಣೆಗೆ, ವೈದ್ಯಕೀಯ ವೃತ್ತಿಗೆ ಸಂಬಂಧಿತ ವೃತ್ತೀಯ ಹೊಣೆಗಾರಿಕೆಗೆ ನಿರ್ಲಕ್ಷಿತ ಶಶ್ರೂಷೆ ವಿಮೆ ಎನ್ನಲಾಗುತ್ತದೆ. ನೋಟರಿಗಳು ಸಾರ್ವಜನಿಕಲೋಪದೋಷ ವಿಮೆ (E&O) ಯನ್ನು ತೆಗೆದುಕೊಳ್ಳಬಹುದು. ಇತರೆ ಸಂಭಾವ್ಯ E&O ವಿಮೆದಾರರಲ್ಲಿ, ಸ್ಥಿರಾಸ್ತಿ ದಲಾಲರು, ವಿಮೆ ಏಜೆಂಟರು, ಆಸ್ತಿ ಅಂದಾಜುಗಾರರು ಮತ್ತು ಅಂತರ್ಜಾಲತಾಣ ವಿನ್ಯಾಸಕರು (ವೆಬ್‌ಸೈಟ್‌ ಡೆವೆಲಪರ್ಸ್‌) ಸೇರಿರುತ್ತಾರೆ.


ಸಾಲದ ಮೇಲಿನ ವಿಮೆ[ಬದಲಾಯಿಸಿ]

ನಿರುದ್ಯೋಗ, ಅಂಗವೈಕಲ್ಯ ಅಥವಾ ಸಾವಿನಂತಹ ಅವಘಡಗಳಿಗೆ ಸಾಲಗಾರರು ತುತ್ತಾದ ಸಂದರ್ಭದಲ್ಲಿ ಸಾಲವನ್ನು ಪೂರ್ಣವಾಗಿ ಅಥವಾ ಆಂಶಿಕವಾಗಿ ತೀರಿಸುವಲ್ಲಿ ಸಾಲ ವಿಮೆಯು ನೆರವಿಗೆ ಧಾವಿಸುತ್ತದೆ.

  • ಭೋಗ್ಯ ವಿಮೆಯು ಎರವಲುದಾರರು ಹಣ ಮರುಪಾವತಿಸದಿರುವುದರ ವಿರುದ್ಧ ಎರವಲು ಕೊಟ್ಟವರನ್ನು ರಕ್ಷಿಸುತ್ತದೆ. ಇತರೆ ವಿಧಗಳ ಋಣದ ಪಾಲಿಸಿಗಳನ್ನು ಉಲ್ಲೇಖಿಸಲು ಸಾಲ ವಿಮೆ ಎಂಬ ಹೆಸರನ್ನು ಆಗಾಗ್ಗೆ ಬಳಸಲಾಗುತ್ತದೆಯಾದರೂ, ಭೋಗ್ಯ ವಿಮೆಯೂ ಒಂದು ರೀತಿಯ ಸಾಲ ವಿಮೆಯೇ ಆಗಿದೆ.
  • ಕ್ರೆಡಿಟ್‌ ಕಾರ್ಡ್‌ ವಿತರಿಸುವ ಹಲವಾರು ಸಂಸ್ಥೆಗಳು ಅರ್ಪಿಸುವ ಹಣ ಸಂದಾಯ ರಕ್ಷಣಾ ಯೋಜನೆಯೂ ಸಾಲ ವಿಮೆಯ ಇನ್ನೊಂದು ರೂಪ.


ಇತರೆ ವಿಧಗಳು[ಬದಲಾಯಿಸಿ]

  • ಮೇಲಾಧಾರವನ್ನು ಪಡೆದ ರಕ್ಷಣಾ ವಿಮೆ: ಎರವಲು ನೀಡುವ ಸಂಸ್ಥೆಗಳು ಮಾಡುವ ಸಾಲಗಳ ಮೇಲೆ ಅನುಬಂಧಿಯಾಗಿ ಹಿಡಿದ ಆಸ್ತಿಪಾಸ್ತಿ (ಮುಖ್ಯವಾಗಿ ವಾಹನಗಳು)ಗಳನ್ನು ಮೇಲಾಧಾರ ರಕ್ಷಣಾ ವಿಮೆ(=ಕೊಲ್ಯಾಟೆರಲ್‌ ಪ್ರೊಟೆಕ್ಷನ್‌ ಇನ್ಸುರೆನ್ಸ್‌ ಅಥವಾ CPI) ವಿಮೆ ಮಾಡುತ್ತದೆ.
  • ರಕ್ಷಣಾ ಕಾಯಿದೆ ಆಧಾರಿತ ಕಾರ್ಮಿಕರ ಪರಿಹಾರ : U.S. ಹಾಗೂ ಕೆನಡಾ ದೇಶಗಳ ಹೊರಗೆ ಗುತ್ತಿಗೆ ಕಲೆಸ ನಿರ್ವಹಿಸಲು ಸರ್ಕಾರ ನೇಮಿಸಿದ ಪೌರ ಕಾರ್ಮಿಕರಿಗೆ ರಕ್ಷಣಾ ಕಾಯಿದೆ ಆಧಾರಿತ ಕಾರ್ಮಿಕರ ಪರಿಹಾರ ಅಥವಾ DBA ವಿಮೆಯು ರಕ್ಷಣೆ ನೀಡುತ್ತದೆ. ಎಲ್ಲಾ U.S. ನಾಗರಿಕರಿಗೆ, U.S. ನಿವಾಸಿಗಳಿಗೆ, U.S. ಗ್ರೀನ್‌ ಕಾರ್ಡ್‌ದಾರರಿಗೆ ಮತ್ತು ಸರ್ಕಾರೀ ಗುತ್ತಿಗೆಯ ಮೇಲೆ ನೇಮಿಸಲಾದ ಎಲ್ಲಾ ನೌಕರರು ಅಥವಾ ಉಪಗುತ್ತಿಗೆದಾರರಿಗೆ DBA ವಿಮೆ ಅಗತ್ಯವಿದೆ. ವಿದೇಶೀಯರೂ ಸಹ DBA ವ್ಯಾಪ್ತಿಯೊಳಗೆ ಬರತಕ್ಕದ್ದು.ಯಾವ ದೇಶದಿಂದ ಬಂದು ನೆಲೆಸಿರುವ ನಾಗರಿಕರೆಂಬುದನ್ನೂ ಇಲ್ಲಿ ಪರಿಗಣಿಸಲಾಗುತ್ತದೆ. ಈ ರೀತಿಯ ವಿಮೆಯನ್ನು ಮಾಡಿಸಿಕೊಂಡವರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ವೇತನ ನಷ್ಟ ಹಾಗೂ ಅಂಗ ವೈಕಲ್ಯ ಮತ್ತು ಮರಣ ಸಂಭವಿಸಿದಲ್ಲಿ ವಿಮಾ ಪರಿಹಾರ ದೊರೆಯುತ್ತದೆ.
  • ವಲಸಿಗರ ವಿಮೆ: ತಮ್ಮ ದೇಶ ಬಿಟ್ಟು ವಿದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ವಾಹನ, ಆಸ್ತಿಪಾಸ್ತಿ, ಆರೋಗ್ಯ, ಹೊಣೆಗಾರಿಕೆ ಮತ್ತು ವ್ಯಾವಹಾರಿಕ ಅನ್ವೇಷಣೆಗಳಿಗಾಗಿ ವಲಸಿಗರ ವಿಮೆಯು ರಕ್ಷಣೆ ನೀಡುತ್ತದೆ.
  • ಹಣಕಾಸು ನಷ್ಟ ವಿಮೆ ಅಥವಾ ವ್ಯವಹಾರ ಅಡಚಣೆ ವಿಮೆ : ವಿವಿಧ ಹಣಕಾಸಿನ ಅಪಾಯಗಳ ವಿರುದ್ಧ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ಹಣಕಾಸು ನಷ್ಟ ವಿಮೆಯು ರಕ್ಷಣೆ ಒದಗಿಸುತ್ತದೆ. ಉದಾಹರಣೆಗೆ, ಕಾರ್ಖಾನೆಯಲ್ಲಿ ಅಗ್ನಿ ಆಕಸ್ಮಿಕವು ಸಂಭವಿಸಿ ಕೆಲ ಕಾಲ ವ್ಯವಹಾರಕ್ಕೆ ಅಡ್ಡಿಯಾದ ಪರಿಣಾಮವಾಗಿ ಮಾರಾಟದಲ್ಲಿ ಸಂಭವಿಸಬಹುದಾದ ನಷ್ಟದ ವಿರುದ್ಧ ರಕ್ಷಣೆಗಾಗಿ ಉದ್ಯಮವೊಂದು ಈ ವಿಮೆಯನ್ನು ಇಳಿಸಬಹುದು.ಸಾಲ ಕೊಟ್ಟವರು ವಿಮೆದಾರರಿಗೆ ಸಂದಾಯ ಮಾಡಬೇಕಾದ ಹಣವನ್ನು ನೀಡಲು ವಿಫಲವಾದಲ್ಲಿ ಈ ವಿಮೆಯು ರಕ್ಷಣೆ ನೀಡಬಹುದು. ಈ ರೀತಿಯ ವಿಮೆಯನ್ನು 'ವ್ಯವಹಾರ ಅಡಚಣಾ ವಿಮೆ' ಎನ್ನಲಾಗುತ್ತದೆ. ಈ ವರ್ಗದಲ್ಲಿ ನಿಷ್ಠೆ ಕರಾರುಪತ್ರ ಮತ್ತು ಹೊಣೆಗಾರಿಕೆ ಕರಾರು ಪತ್ರಗಳು ಸಹ ಸೇರಿಕೊಂಡಿವೆ, ಆದರೂ, ವಿಮೆದಾರರು (ಕರಾರುಗಾರರು) ಕರಾರುದಾರರೊಂದಿಗಿನ ಒಪ್ಪಂದದಡಿ ತಮ್ಮ ಕರ್ತವ್ಯವನ್ನು ಮಾಡಲು ವಿಫಲರಾದಲ್ಲಿ, ಈ ವಿಮೆ ಮೂರನೆಯ ಪಕ್ಷದವರಿಗೆ (ಕರಾರುದಾರರಿಗೆ) ಅನುಕೂಲಗಳನ್ನು ನೀಡಬಹುದಾಗಿದೆ.
  • ಅಪಹರಣ ಮತ್ತು ವಿಮೋಚನಾ ಶುಲ್ಕ ವಿಮೆ
  • ಸುಭದ್ರ ನಿಧಿ ವಿಮೆ: ಸುಭದ್ರ ನಿಧಿ ವಿಮೆಯು ಸರ್ಕಾರಗಳು ಮತ್ತು ಬ್ಯಾಂಕ್‌ಗಳ ಸಹಯೋಗದಲ್ಲಿ ನೀಡಲಾದ,ಜನಪ್ರಿಯವಾಗಿಲ್ಲದ ಒಂದು ಸಂಕರ ವಿಮೆ ಪಾಲಿಸಿಯಾಗಿದೆ.ಸಾರ್ವಜನಿಕ ನಿಧಿಗಳನ್ನು ಅನಧಿಕೃತ ಪಕ್ಷಗಳು ದುರುಪಯೋಗ ಮಾಡದಂತೆ ತಡೆಗಟ್ಟಲು ಈ ವಿಮೆಯನ್ನು ಬಳಸಲಾಗಿದೆ. ವಿಶೇಷ ಪ್ರಕರಣಗಳಲ್ಲಿ, ದುರುಪಯೋಗಕ್ಕೆ ತುತ್ತಾಗಬಹುದಾದ ಅರೆ-ಖಾಸಗಿ ನಿಧಿಗಳನ್ನು ರಕ್ಷಿಸಲು ಸರ್ಕಾರವು ಇದರ ಬಳಕೆಯನ್ನು ಅಂಗೀಕರಿಸಬಹುದು. ಈ ರೀತಿಯ ವಿಮೆಯ ಸಾಮಾನ್ಯವಾಗಿ ಬಹಳ ಕಠಿಣ ಷರತ್ತುಗಳನ್ನು ಒಳಗೊಂಡಿರುತ್ತದೆ.ಆದ್ದರಿಂದ ನಿಧಿಗಳಿಗೆ ಗರಿಷ್ಠ ಭದ್ರತೆಯ ಅಗತ್ಯವಿರುವ ಪ್ರಕರಣಗಳಲ್ಲಿ ಮಾತ್ರ ಈ ವಿಮೆಯನ್ನು ಬಳಸಲಾಗುತ್ತದೆ.
  • ಪರಮಾಣು ದುರ್ಘಟನಾ ವಿಮೆ ಯು ವಿಕಿರಣಶೀಲ ವಸ್ತುಗಳನ್ನೊಳಗೊಂಡ ಘಟನೆಯೊಂದರಿಂದ ಪರಿಣಮಿಸುವ ಹಾನಿಗಳ ವಿರುದ್ಧ ರಕ್ಷಣೆ ನೀಡುತ್ತದೆ. ಇದನ್ನು ಸಾಮಾನ್ಯವಾಗಿ ರಾಷ್ಟ್ರೀಯ ಮಟ್ಟದಲ್ಲಿ ಯೋಜಿಸಲಾಗಿದೆ. ನೋಡಿ:ಪರಮಾಣು ದುರ್ಘಟನೆಯನ್ನು ಹೊರಗಿಡುವ ಷರತ್ತು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ಪ್ರೈಸ್‌-ಆಂಡರ್ಸನ್ ಪರಮಾಣು ಉದ್ಯಮ ನಷ್ಟಭರ್ತಿ ಕಾಯಿದೆ
  • ಸಾಕುಪ್ರಾಣಿ ವಿಮೆ:ಅಪಘಾತಗಳು ಮತ್ತು ರೋಗಗಳ ವಿರುದ್ಧ ಈ ವಿಮೆ ಸಾಕುಪ್ರಾಣಿಗಳಿಗೆ ರಕ್ಷಣೆ ಒದಗಿಸುತ್ತದೆ - ಕೆಲವು ಸಂಸ್ಥೆಗಳು ನಿಯತ/ಕ್ಷೇಮ ಶುಶ್ರೂಷೆ ಮತ್ತು ಸತ್ತ ಸಾಕುಪ್ರಾಣಿಗಳ ಅಂತ್ಯಕ್ರಿಯೆಯಲ್ಲೂ ಸಹ ನೆರವಾಗುತ್ತವೆ.
  • ಮಾಲಿನ್ಯ ವಿಮೆ: ಇದು ವಿಮೆ ಮಾಡಲಾದ ಸ್ವತ್ತಿಗೆ, ಸ್ವತ್ತಿನೊಳಗಿನ ಮೂಲಗಳಿಂದ ಅಥವಾ ಬಾಹ್ಯ ಮೂಲಗಳಿಂದ ಕಲುಷಿತವಾಗುವುದರ ವಿರುದ್ಧ ವಿಮಾ ರಕ್ಷಣೆಯನ್ನು ಮೊದಲ-ಪಕ್ಷದವರಿಗೆ ನೀಡುತ್ತದೆ. ವಿಮೆ ಇಳಿಸಲಾದ ಸ್ಥಳದಿಂದ ಹಠಾತ್ತಾಗಿ, ಆಕಸ್ಮಿಕವಾಗಿ ಬಿಡುಗಡೆಯಾದ ತ್ಯಾಜ್ಯ ಹಾಗೂ ಆಪಾಯಕಾರೀ ವಸ್ತುಗಳಿಂದ ಉಂಟಾಗುವ ಗಾಳಿ, ನೀರು ಅಥವಾ ನೆಲದ ಮಾಲಿನ್ಯಗಳ ವಿರುದ್ಧ ಮೂರನೆಯ ಪಕ್ಷದವರಿಗೆ ಪರಿಹಾರ ನೀಡುವಂಥ ಹೊಣೆ ಹೊರುವುದೂ ಉಂಟು. ಪಾಲಿಸಿಯು ಸಾಮಾನ್ಯವಾಗಿ ಶುದ್ಧತಾ ವೆಚ್ಚವನ್ನು ಭರಿಸುತ್ತದೆ. ಹರಿಬಿಡಲಾಗುವ ಭೂಗತ ತ್ಯಾಜ್ಯದಿಂದ ಸಂಭವಿಸುವ ಅವಘದಗಳನ್ನೂ ಇದು ಒಳಗೊಂಡಿರಬಹುದು. ಉದ್ದೇಶ ಪೂರ್ವಕವಾಗಿ ಮಾಡಲಾಗುವ ಇಂಥ ಕೃತ್ಯಗಳನ್ನು ವಿಮಾ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ.
  • ಖರೀದಿ ವಿಮೆ: ಜನರು ಕೊಳ್ಳುವ ವಸ್ತುಗಳ ಮೇಲೆ ವಿಮಾ ರಕ್ಷಣೆಯನ್ನು ಇದು ಒದಗಿಸುತ್ತದೆ. ಖರೀದಿ ವಿಮೆಯು ವೈಯಕ್ತಿಕ ಕೊಳ್ಳುವಿಕೆಯ ರಕ್ಷಣೆ, ಭರವಸೆಗಳು, ಖಾತರಿಗಳು, ಪಾಲನಾ ಯೋಜನೆ ಮತ್ತು ಸಂಚಾರಿ ದೂರವಾಣಿ ವಿಮೆಯನ್ನೂ ಸಹ ಒಳಗೊಳ್ಳಬಹುದಾಗಿದೆ. ಪಾಲಿಸಿಯ ವ್ಯಾಪ್ತಿಯಲ್ಲಿ ಒಳಗೊಳ್ಳುವ ಸಮಸ್ಯೆಗಳು ಇಂತಹ ವಿಮೆಯಲ್ಲಿ ಸಾಮಾನ್ಯವಾಗಿ ಬಹಳ ಸೀಮಿತ.
  • ಹಕ್ಕುಪತ್ರ ವಿಮೆ: ನೈಜ ಸ್ವತ್ತಿನ ಹಕ್ಕುಪತ್ರವು ಕೊಂಡುಕೊಳ್ಳುವವರೊಂದಿಗೆ ಮತ್ತು/ಅಥವಾ ಭೋಗ್ಯದಾರರೊಂದಿಗೆ ಇದ್ದು, ಅದಕ್ಕೆ ಯಾವುದೇ ಭೋಗ್ಯದ ಹಕ್ಕು ಅಥವಾ ಇನ್ನಾವುದೇ ಪರಭಾರೆಗೆ ಅದು ಒಳಗಾಗಿಲ್ಲ ಎಂದು ಖಾತರಿಪಡಿಸುತ್ತದೆ. ಸ್ಥಿರಾಸ್ತಿ ವ್ಯವಹಾರದ ಸಮಯದಲ್ಲಿ ಸಾರ್ವಜನಿಕ ಉಪಯೋಗಕ್ಕೆಂದು ಇರುವ ದಾಖಲೆಗಳ ಪರಿಶೀಲನೆಯಾದ ನಂತರ ಈ ಖಾತರಿಯನ್ನು ನೀಡಲಾಗುತ್ತದೆ.
  • ಪ್ರವಾಸ ವಿಮೆ:ವಿದೇಶ ಪ್ರವಾಸ ಕೈಗೊಳ್ಳುವವರು ಪಡೆಯುವ ವಿಮೆ ಇದು. ಇದರ ವ್ಯಾಪ್ತಿಯಲ್ಲಿ ವೈದ್ಯಕೀಯ ವೆಚ್ಚಗಳು, ವೈಯಕ್ತಿಕ ಆಸ್ತಿಪಾಸ್ತಿಗಳ ಕಳವು, ವಿಳಂಬಿತ ಪ್ರಯಾಣದ ನಷ್ಟ, ವೈಯಕ್ತಿಕ ಹೊಣೆಗಾರಿಕೆಯಂತಹ ನಷ್ಟಗಳು ಇತ್ಯಾಗಳನ್ನು ಒಳಗೊಂಡಿವೆ.
  • ಮಾಧ್ಯಮ ವಿಮೆ: ಚಲನಚಿತ್ರ, ವೀಡಿಯೊ ಮತ್ತು ದೂರದರ್ಶನ ಕಾರ್ಯಕ್ರಮಗಳ ನಿರ್ಮಾಣದಲ್ಲಿ ತೊಡಗಿರುವವರಿಗೆ ಮಾಧ್ಯಮ ವಿಮೆಯನ್ನು ರೂಪಿಸಲಾಗಿದೆ.
  • ಕಾನೂನು ವೆಚ್ಚ ವಿಮೆ: ಒಂದು ಸಂಸ್ಥೆ ಅಥವಾ ವ್ಯಕ್ತಿಯ ವಿರುದ್ಧದ ಮೊಕದ್ದಮೆಗೆ ಸಂಭವಿಸಬಹುದಾದ ವೆಚ್ಚಗಳ ವಿರುದ್ಧ ಈ ವಿಮೆ ರಕ್ಷಣೆ ನೀಡುತ್ತದೆ.

ವಾಹನಗಳಿಗೆ ಧನ ಬೆಂಬಲ ನೀಡುವ ವಿಮೆ:[ಬದಲಾಯಿಸಿ]

  • ಸ್ನೇಹ ಸೌಹಾರ್ದ ವಿಮೆಯು ಸ್ನೇಹ ಸೌಹಾರ್ದ ಸೌಲಭ್ಯ ಸಹಕಾರ ಸಂಘಗಳು ಅಥವಾ ಇತರೆ ಸಾಮಾಜಿಕ ಸಂಘಗಳಿಂದ ನೀಡಲಾಗುತ್ತದೆ.[೧೪]
  • ನಿರ್ದೋಷ ವಿಮೆ: ವಿಮೆಯ ಪ್ರಕಾರ, ಘಟನೆಯಲ್ಲಿ ಆಗಿರಬಹುದಾದ ದೋಷವನ್ನು ಪರಿಗಣಿಸದೇ ವಿಮೆದಾರರಿಗೆ ತಮ್ಮದೇ ಆದ ವಿಮೆಗಾರರಿಂದ ನಷ್ಟ ಪರಿಹಾರ ರಕ್ಷಣೆಯನ್ನು ಈ ಬಗೆಯ ವಿಮೆ ಒದಗಿಸುತ್ತದೆ.
  • ರಕ್ಷಿತ ಸ್ವ-ವಿಮೆಯು ಅಪಾಯದಿಂದ ರಕ್ಷಿಸಿಕೊಳ್ಳಲು ಹಣ-ಒದಗಿಸುವಿಕೆಯ ಒಂದು ಪರ್ಯಾಯ ವ್ಯವಸ್ಥೆಯಾಗಿದೆ. ಇದರಲ್ಲಿ ತನ್ನೊಳಗಿನ ಲೆಕ್ಕ ಹಾಕಲಾದ ಅಪಾಯದ ವೆಚ್ಚಗಳನ್ನು ಸಂಸ್ಥೆಯು ಉಳಿಸಿಕೊಂಡು, ವಿಶಿಷ್ಟ ಮತ್ತು ಸಮಷ್ಟಿ ಮಿತಿಗಳುಳ್ಳ ಬೃಹತ್‌ ಪ್ರಮಾಣದ ಗಂಡಾಂತರವನ್ನು ವಿಮೆಗಾರರಿಗೆ ವರ್ಗಾಯಿಸುತ್ತದೆ. ಹಾಗಾಗಿ ಈ ಯೋಜನೆಯ ವೆಚ್ಚದ ಗರಿಷ್ಠ ಮೊತ್ತ ತಿಳಿಯಬಹುದು. ಸಮರ್ಪಕವಾಗಿ ವಿನ್ಯಾಸವಾದ ಮತ್ತು ವಿಮೆ ಇಳಿಸಲಾದ ರಕ್ಷಿತ ಸ್ವ-ವಿಮೆ ಯೋಜನೆಯು ವಿಮೆಯ ವೆಚ್ಚವನ್ನು ಸ್ಥಿರಗೊಳಿಸಿ, ಅತ್ಯಮೂಲ್ಯ ಅಪಾಯ-ನಿರ್ವಹಣಾ ಮಾಹಿತಿಯನ್ನು ನೀಡುತ್ತದೆ.
  • ಪೂರ್ವಾನ್ವಯ ನಿರ್ಣಯದ ವಿಮೆ: ಅತಿ ದೊಡ್ಡ ಗಾತ್ರದ ವಾಣಿಜ್ಯ ಸಂಸ್ಥೆಗಳ ಮೇಲೆ ವಿಮೆಕಂತನ್ನು ನಿರ್ಣಯಿಸುವ ರೀತಿಗೆ ಪೂರ್ವಾನ್ವಯ ನಿರ್ಣಯದ ವಿಮೆ ಎನ್ನಲಾಗಿದೆ. ಅಂತಿಮ ವಿಮೆಕಂತು ಪಾಲಿಸಿಯ ಅವಧಿಯಲ್ಲಿ ವಿಮೆದಾರರ ನೈಜ ನಷ್ಟವನ್ನಾಧರಿಸಿದೆ. ಇದು ಕೆಲವೊಮ್ಮೆ ಕನಿಷ್ಠ ಮತ್ತು ಗರಿಷ್ಠ ವಿಮೆಕಂತುಗಳಿಗೆ ಒಳಪಟ್ಟಿರುತ್ತದೆ. ಅಂತಿಮ ಕಂತನ್ನು ಒಂದು ಸೂತ್ರದ ಮೂಲಕ ನಿರ್ಣಯಿಸಲಾಗುತ್ತದೆ. ಈ ಯೋಜನೆಯಡಿ, ಪ್ರಸಕ್ತ ವರ್ಷದ ವಿಮೆಕಂತು ಭಾಗಶಃ ಅಥವಾ ಸಂಪೂರ್ಣವಾಗಿ ಚಾಲ್ತಿ ವರ್ಷದ ನಷ್ಟಗಳನ್ನು ಆಧರಿಸಿದೆ. ಆದರೂ, ವಿಮೆಕಂತುಗಳ ಹೊಂದಿಕೆಗಳು ಪ್ರಸಕ್ತ ವರ್ಷದ ಮುಕ್ತಾಯಾವಧಿ ಕಳೆದ ನಂತರವೂ ತಿಂಗಳುಗಳ ಅಥವಾ ವರ್ಷಗಳ ಕಾಲ ಮುಂದುವರೆಯಬಹುದು. ನಿರ್ಣಯಿಸುವ ಸೂತ್ರವು ವಿಮೆಯ ಕರಾರಿನಲ್ಲಿ ಖಾತರಿಪಡಿಸಲಾಗಿದೆ. ಸೂತ್ರ: ಹಿಂದಿನ ವಿಮೆಕಂತು = ಪರಿವರ್ತಿತ ನಷ್ಟ + ಮೂಲಭೂತ ವಿಮೆಕಂತು x ತೆರಿಗೆ ಗುಣಕ. ವಿಕಸಿತಗೊಳಿಸಲಾದ ಈ ಸೂತ್ರದ ಅನೇಕ ಮಾರ್ಪಾಡುಗಳು ಈಗ ಬಳಕೆಯಲ್ಲಿವೆ.
  • ಸಾಂಪ್ರದಾಯಿಕ ಸ್ವ-ವಿಮೆ: ಒಬ್ಬ ವ್ಯಕ್ತಿಯ ಸ್ವಂತ ಹಣದಿಂದ ಸಂಭವಿಸುವ ವಿಮೆಯಾಗಬಲ್ಲ ನಷ್ಟಗಳಿಗಾಗಿ ಸಂದಾಯ ಮಾಡಲು ವಿವೇಚಿತ ನಿರ್ಧಾರವಿದು. ಇದನ್ನು ಔಪಚಾರಿಕ ಆಧಾರದ ಮೇಲೆ, ಒಂದು ಪ್ರತ್ಯೇಕ ನಿಧಿಯನ್ನು ಸ್ಥಾಪಿಸಿ, ನಿರ್ದಿಷ್ಟ ಅವಧಿಗಳಲ್ಲಿ ನಿಧಿಗಳನ್ನು ಜಮಾ ಮಾಡುವುದರ ಮೂಲಕ, ಅಥವಾ ಲಭ್ಯ ವಿಮೆಯ ಖರೀದಿಯನ್ನು ತೊರೆದು ತನ್ನ ಜೇಬಿನಿಂದಲೇ ಮೊತ್ತವನ್ನು ಪಾವತಿಸುವುದು. ಸ್ವ-ವಿಮೆಯನ್ನು ಸಾಮಾನ್ಯವಾಗಿ ಅಧಿಕ-ಆವರ್ತಕ, ಕಡಿಮೆ-ತೀವ್ರತೆಯ ನಷ್ಟಗಳಿಗೆ ಸಂದಾಯ ಮಾಡಲು ಬಳಸಲಾಗುತ್ತದೆ. ಸಾಂಪ್ರದಾಯಿಕ ವಿಮೆಯಡಿ ಇಂತಹ ನಷ್ಟಗಳನ್ನು ಒಳತಂದಲ್ಲಿ, ಸಂಸ್ಥೆಯ ಸಾಮಾನ್ಯ ವೆಚ್ಚಗಳಿಗಾಗಿ ವಿಮೆ-ಹೊರೆಯನ್ನು ಮತ್ತು ಪಾಲಿಸಿಯನ್ನು ಪುಸ್ತಕಗಳಲ್ಲಿ ದಾಖಲಿಸುವ ವೆಚ್ಚ, ಅರ್ಜನಾ ವಚ್ಚಗಳು, ವಿಮೆಕಂತು ತೆರಿಗೆಗಳು ಮತ್ತು ಅನಿಶ್ಚಯತೆ ವೆಚ್ಚಗಳನ್ನು ಒಳಗೊಳ್ಳುವ ವಿಮೆಕಂತನ್ನು ಪಾವತಿಸಬೇಕಾಗುತ್ತದೆ. ಎಲ್ಲಾ ವಿಮೆಗಳಿಗೂ ಇದು ಸರಿಯಿದ್ದರೂ, ಕಡಿಮೆ, ಆವರ್ತಿಸುವ ನಷ್ಟಗಳಿಗೆ ಈ ವ್ಯವಹಾರದ ವೆಚ್ಚವು, ವಿಮೆಯು ಸಾಮಾನ್ಯವಾಗಿ ನೀಡುವ ಚಂಚಲತೆಯ ಹ್ರಾಸನದ ಅನುಕೂಲವನ್ನೂ ಸಹ ಮೀರಿಸಬಹುದು.
  • ಪುನರ್ವಿಮೆ: ಅನಿರೀಕ್ಷಿತ ನಷ್ಟಗಳ ವಿರುದ್ಧ ರಕ್ಷಣೆ ಪಡೆಯಲು ವಿಮೆ ಸಂಸ್ಥೆಗಳು ಅಥವಾ ಸ್ವ-ವಿಮೆದಾರ ಸಂಸ್ಥೆಗಳು ಕೊಂಡುಕೊಳ್ಳುವ ವಿಮೆಯಿದು. ಹಣಕಾಸಿನ ಪುನರ್ವಿಮೆ: ವರ್ಗಾವಣಾ ವಿಮಾ ಅಪಾಯಗಳನ್ನು ವರ್ಗಾಯಿಸುವ ಬದಲಿಗೆ ವಿಮೆಯ ಬಂಡವಾಳ ನಿರ್ವಹಣೆಗಾಗಿ ಬಳಲಸಲಾದ ಪುನರ್ವಿಮೆಯಾಗಿದೆ.
  • ಸಾಮಾಜಿಕ ವಿಮೆ ಹಲವು ದೇಶಗಳಲ್ಲಿ ಹಲವು ಜನರಿಗೆ ಹಲವು ವಿಚಾರಗಳಾಗಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದು ಜೀವ ವಿಮೆ, ಅಂಗವೈಕಲ್ಯ ಆದಾಯ ವಿಮೆ, ನಿರುದ್ಯೋಗ ವಿಮೆ, ಆರೋಗ್ಯ ವಿಮೆ ಮತ್ತು ಇತರೆ ವಿಮೆಗಳ ಅಂಶಗಳನ್ನೊಳಗೊಂಡ ವಿಮೆ ವ್ಯಾಪ್ತಿಗಳ ಸಮೂಹವಾಗಿದೆ. ಇದರ ಜೊತೆಗೆ ಎಲ್ಲಾ ನಾಗರಿಕರ ಪಾಲ್ಗೊಳ್ಳುವಿಕೆಯ ಅಗತ್ಯವಿರುವ ನಿವೃತ್ತಿ ಉಳಿತಾಯಗಳು ಸಹ ಸೇರಿವೆ. ಸಮಾಜದಲ್ಲಿನ ಪ್ರತಿಯೊಬ್ಬರೂ ಪಾಲಿಸಿದಾರರಾಗಿರೆಂದು ಒತ್ತಾಯಿಸುವುದರ ಮೂಲಕ, ಅಗತ್ಯವಾದಲ್ಲಿ ಪ್ರತಿಯೊಬ್ಬರೂ ಸಹ ವಿಮೆ ಹಣ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ. ಈ ಮಾರ್ಗದಲ್ಲಿ ಈ ಅನಿವಾರ್ಯತೆಯು, ನ್ಯಾಯಾಂಗ ವ್ಯವಸ್ಥೆ ಮತ್ತು ಪ್ರಜಾಕಲ್ಯಾಣ ರಾಜ್ಯದ ಇತರೆ ಪರಿಕಲ್ಪನೆಗಳೊಂದಿಗೆ ಸಂಬಂಧಿತವಾಗುತ್ತದೆ. ಕೆಳಕಂಡ ಲೇಖನಗಳಲ್ಲಿ (ಮತ್ತು ಇತರೆಯಲ್ಲಿ) ಅಧ್ಯಯನ ನಡೆಸಬಹುದಾದ ಭಾರೀ ಚರ್ಚೆಗೆ ಆಸ್ಪದ ನೀಡುವಂತಹ ಇದು ಒಂದು ದೊಡ್ಡ, ಸಂಕೀರ್ಣವಾದ ಅಧ್ಯಾಯವಾಗಿದೆ:



ಸೀಮಿತ ಸಮುದಾಯ ಸ್ವ-ವಿಮೆ[ಬದಲಾಯಿಸಿ]

ಕೆಲವು ಸಮುದಾಯಗಳು, ಸುಸ್ಪಷ್ಟ ಸಾಂಖ್ಯಿಕ ಮೌಲ್ಯಗಳನ್ನು ಅಪಾಯಕ್ಕೆ ವಹಿಸುವ ಕರಾರಿನ ಅಪಾಯ ವರ್ಗಾವಣೆಯ ಬದಲಿಗೆ, ಇತರೆ ರೀತಿಗಳಲ್ಲಿ ತಮ್ಮೊಳಗೇ ವಸ್ತುತಃ ವಿಮೆಗಳನ್ನು ಸೃಷ್ಟಿಸಿಕೊಳ್ಳಲು ಇಚ್ಛಿಸುತ್ತವೆ. ಅಮಿಷ್‌ ಮತ್ತು ಕಲವು ಮುಸ್ಲಿಮ್‌ ಪಂಗಡಗಳು ಸೇರಿದಂತೆ ಅನೇಕ ಧಾರ್ಮಿಕ ಪಂಗಡಗಳು, ಆಪತ್ತು ಒಡ್ಡಿದಾಗ ತಮ್ಮ ಸಮುದಾಯಗಳು ನೀಡುವ ಬೆಂಬಲವನ್ನು ಅವಲಂಬಿಸುತ್ತವೆ. ಯಾವುದೇ ವ್ಯಕ್ತಿಯಿಂದ ಒಡ್ಡಲಾದ ಅಪಾಯವನ್ನು ಸಮುದಾಯದ ಮೂಲಕ ಸಾಮೂಹಿಕವಾಗಿ ವಹಿಸಲಾಗಿದ್ದು, ಒಂದು ರೀತಿಯ ನಷ್ಟದ ಕಾರಣ ಅಗತ್ಯಗಳು ಹಠಾತ್ತನೆ ಹೆಚ್ಚಾದಾಗ, ನಷ್ಟವಾದ ಸ್ವತ್ತುಗಳ ಪುನರ್ನಿರ್ಮಾಣ ಮತ್ತು ಸಂತ್ರಸ್ತರಿಗೆ ಎಲ್ಲಾ ತರಹದ ಬೆಂಬಲವನ್ನು ನೀಡುವುದು. ಇತರರು ಸಮುದಾಯ ಮುಖಂಡರನ್ನು ಅನುಸರಿಸುವಂತೆ ಒಪ್ಪಿಸುವಂತಹ ಬೆಂಬಲಿಸುವ-ಮನೋಭಾವವುಳ್ಳ ಸಮುದಾಯಗಳಲ್ಲಿ, ವಿಮೆಯ ಈ ಅನುಕ್ತ ರೀತಿಯು ಫಲಕಾರಿಯಾಗಬಹುದು. ಈ ರೀತಿಯಲ್ಲಿ ಸಮುದಾಯವು, ವಿಮೆಯ ಔಚಿತ್ಯದ ಬಗ್ಗೆ ಇರುವ ಸದಸ್ಯರ ನಡುವಿನ ತೀವ್ರ ಭಿನ್ನಾಭಿಪ್ರಾಯಗಳನ್ನು ಸಮಗೊಳಸಬಹುದು. ಸುಸ್ಪಷ್ಟ ವಿಮೆ ಕರಾರುಗಳ ನೈತಿಕ ಅಧಃಪತನವನ್ನು ಸಮರ್ಥಿಸುವ ಕೆಲವು ವಿಮಾ ಪಾಲಿಸಿಗಳನ್ನು ತಮ್ಮ ತೆಕ್ಕೆಯಲ್ಲಿಟ್ಟುಕೊಂಡಿವೆ.


ಯುನೈಟೆಡ್‌ ಕಿಂಗ್ಡಮ್‌ನಲ್ಲಿ ದೊರೆಯು (ಪ್ರಾಯೋಗಿಕ ಉದ್ದೇಶಗಳಿಗಾಗಿ, ಪೌರ ಸೇವಾ ವಿಭಾಗವನ್ನೂ ಒಳಗೊಂಡಿದೆ) ಸರ್ಕಾರೀ ಕಟ್ಟಡಗಳಂತಹ ಸ್ವತ್ತುಗಳನ್ನು ವಿಮೆ ಮಾಡಿಸಿಲ್ಲ. ಸರ್ಕಾರೀ ಕಟ್ಟಡಕ್ಕೆ ಹಾನಿಯಾದಲ್ಲಿ, ದುರಸ್ತಿ ವೆಚ್ಚವು ಸಾರ್ವಜನಿಕ ನಿಧಿಗಳಿಂದ ಭರಿಸಲಾಗುವುದು, ಏಕೆಂದರೆ, ದೀರ್ಘಾವಧಿಯಲ್ಲಿ, ವಿಮೆಕಂತುಗಳನ್ನು ಪಾವತಿಸುವುದಕ್ಕಿಂತಲೂ ಇದೇ ಕಡಿಮೆ ವೆಚ್ಚದ್ದಾಗಿತ್ತು. UKಯ ಹಲವು ಸರ್ಕಾರೀ ಕಟ್ಟಡಗಳನ್ನು ಸ್ಥಿರಾಸ್ತಿ ಸಂಸ್ಥೆಗಳಿಗೆ ಮಾರಿ ಬಾಡಿಗೆಯ ಮೇಲೆ ಪಡೆದುಕೊಳ್ಳುತ್ತಿತ್ತು. ಈ ಪದ್ಧತಿಯು ಈಗ ಅದು ಅಪರೂಪವಾಗಿದೆ ಅಥವಾ ನಿಂತುಹೋಗಿರುವ ಸಾಧ್ಯತೆಯೂ ಇರಬಹುದು.


ವಿಮಾ ಸಂಸ್ಥೆಗಳು[ಬದಲಾಯಿಸಿ]

ವಿಮಾ ಸಂಸ್ಥೆಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಬಹುದು:

  • ಜೀವ ವಿಮೆ ಸಂಸ್ಥೆಗಳು - ಇವು ಜೀವ ವಿಮೆ, ವರ್ಷಾಶನಗಳು ಮತ್ತು ನಿವೃತ್ತಿ ವೇತನ ಸೌಲಭ್ಯಗಳನ್ನು ನೀಡುತ್ತವೆ.
  • ಜೀವ-ವಿಮೆ ಹೊರತುಪಡಿಸಿ, ಸಾಮಾನ್ಯ ಅಥವಾ ಆಸ್ತಿಪಾಸ್ತಿ/ಅವಘಡ ವಿಮಾ ಸಂಸ್ಥೆಗಳು ಇತರೆ ವಿಮೆಗಳನ್ನು ಮಾರಾಟ ಮಾಡುತ್ತವೆ.


ಸಾಮಾನ್ಯ ವಿಮಾ ಸಂಸ್ಥೆಗಳನ್ನು ಕೆಳಕಂಡಂತೆ ಉಪವಿಂಗಡಣೆ ಮಾಡಬಹುದು.


  • ಪ್ರಮಾಣಿತ ಪಂಕ್ತಿಗಳು
  • ಆಧಿಕ್ಯ ಪಂಕ್ತಿಗಳು


ಹಲವು ದೇಶಗಳಲ್ಲಿ, ಜೀವ ಮತ್ತು ಜೀವವಿಮೆ-ಹೊರತುಪಡಿಸುವ ವಿಮೆಗಾರರು ವಿವಿಧ ನಿಯಂತ್ರಣಾತ್ಮಕ ಪದ್ಧತಿಗಳು ಮತ್ತು ವಿವಿಧ ತೆರಿಗೆ ಮತ್ತು ಲೆಕ್ಕಪತ್ರ ವಿಜ್ಞಾನದ ನಿಯಮಗಳಿಗೆ ಒಳಪಟ್ಟಿರುತ್ತವೆ. ಸಂಸ್ಥೆಗಳ ಎರಡೂ ವಿಧಗಳ ನಡುವಿನ ವ್ಯತ್ಯಾಸವೇನೆಂದರೆ, ಜೀವ ವಿಮೆ, ವರ್ಷಾಶನ ಮತ್ತು ನಿವೃತ್ತಿ ವೇತನ ವ್ಯವಹಾರಗಳು ಬಹಳ ದೀರ್ಘಾವಧಿಯದ್ದಾಗಿವೆ. ಜೀವ ವಿಮೆಗೆ ಅಥವಾ ನಿವೃತ್ತಿ ವೇತನವು ಹಲವು ದಶಕಗಳ ಕಾಲ ಅಪಾಯಗಳ ವಿರುದ್ಧ ರಕ್ಷಣೆ ನೀಡಬಹುದು. ಇದಕ್ಕೆ ವಿಭಿನ್ನವಾಗಿ, ಜೀವವಿಮೆ ಹೊರತುಪಡಿಸುವ ವಿಮಾ ಸಂಸ್ಥೆಗಳು ಸಾಮಾನ್ಯವಾಗಿ ಅಲ್ಪಾವಧಿಗೆ - ಉದಾಹರಣೆಗೆ ಒಂದು ವರ್ಷದ ಕಾಲಕ್ಕೆ ವಿಮೆಯನ್ನು ನೀಡುತ್ತದೆ.


ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರಮಾಣಿತ ಪಂಕ್ತಿಗಳ ವಿಮಾ ಸಂಸ್ಥೆಗಳು ಮುಖ್ಯವಾಹಿನಿಯ ವಿಮೆಗಾರರಾಗಿರುತ್ತಾರೆ. ಈ ಸಂಸ್ಥೆಗಳು ವಾಹನ, ಗೃಹ ಮತ್ತು ವ್ಯವಹಾರಗಳಿಗೆ ವಿಮೆ ನೀಡುತ್ತವೆ. ಅವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವ್ಯತ್ಯಾಸವಿಲ್ಲದೆಯೇ ನಮೂನೆ ಅಥವಾ 'ಕುಕಿ-ಕಟರ್‌' ಪಾಲಿಸಿಗಳನ್ನು ಬಳಸುತ್ತವೆ. ಆಧಿಕ್ಯ ಪಂಕ್ತಿಗಳಿಗಿಂತಲೂ ಅವು ಸಾಮಾನ್ಯವಾಗಿ ಕಡಿಮೆ ವಿಮೆಕಂತುಗಳನ್ನು ಹೊಂದಿದ್ದು, ವ್ಯಕ್ತಿಗಳಿಗೆ ನೇರವಾಗಿ ಮಾರಾಟವಾಗುತ್ತವೆ. ವಿಮೆ ಪಾಲಿಸಿಗಳಿಗೆ ಅವರು ವಿಧಿಸುವಂತಹ ಶುಲ್ಕದ ಮೊತ್ತವನ್ನು ನಿರ್ಬಂಧಿಸುವಂತಹ ರಾಜ್ಯ ಕಾನೂನು ನಿಯಂತ್ರಣಗಳಿಗೆ ಒಳಗಾಗಿರುತ್ತವೆ.


ಆಧಿಕ್ಯ ಪಂಕ್ತಿಗಳ ವಿಮಾ ಸಂಸ್ಥೆಗಳು (ಅಥವಾ ಅಧಿಕ್ಯ ಮತ್ತು ಹೆಚ್ಚುವರಿ) ಮಾದರಿಯಾಗಿ ಪ್ರಮಾಣಿತ ಪಂಕ್ತಿ ವಿಮಾ ಸಂಸ್ಥೆಗಳ ವ್ಯಾಪ್ತಿಯಲ್ಲಿರದಂತಹ ಅಪಾಯಗಳಿಗೆ ವಿಮೆ ನೀಡುತ್ತವೆ. ಅಂಗೀಕೃತವಾಗಿರದ ವಿಮೆಗಾರರೊಂದಿಗಿರುವ ಎಲ್ಲ ವಿಮೆಗಳು ಎಂದು ಅವುಗಳನ್ನು ಸ್ಥೂಲವಾಗಿ ಉಲ್ಲೇಖಿಸಲಾಗಿದೆ. ಅಂಗೀಕೃತವಾಗಿರದ ವಿಮೆಗಾರರು ಅಪಾಯಗಳಿರುವ ರಾಜ್ಯಗಳಲ್ಲಿ ಪರವಾನಗಗಿ ಹೊಂದಿರುವುದಿಲ್ಲ. ಈ ಸಂಸ್ಥೆಗಳಿಗೆ ಅಧಿಕವಾಗಿ ಸಂದರ್ಭಕ್ಕೆ ಹೊಂದಿಕೊಳ್ಳುವ ಕ್ಷಮತೆಯಿದ್ದು, ಪ್ರಮಾಣಿತ ವಿಮಾ ಸಂಸ್ಥೆಗಳಿಗಿಂತಲೂ ಬೇಗ ಪ್ರತಿಕ್ರಿಯೆ ನೀಡಬಲ್ಲವು, ಏಕೆಂದರೆ, ಅಂಗೀಕೃತ ವಿಮೆಗಾರರಂತೆ ದರಗಳು ಮತ್ತು ಅರ್ಜಿಗಳನ್ನು ಭರ್ತಿಮಾಡಲು ಅಗತ್ಯ ಅವುಗಳಿಗಿಲ್ಲ. ಆದರೂ, ಅವುಗಳ ಮೇಲೆ ಗಮನಾರ್ಹ ನಿಯಂತ್ರಣಾ ನಿಯಮಗಳನ್ನು ಹೇರಲಾಗಿವೆ. ಪರವಾನಗಿ ಪ್ರಮಾಣಿತ ವಿಮೆಗಾರರೊಂದಿಗೆ ಅಲಭ್ಯವಾಗಿರುವ ವಿಮೆಗಳನ್ನು ಆಧಿಕ್ಯ ಮಧ್ಯವರ್ತಿಗಳು ಮತ್ತು ದಲಾಲರು ಹೊಂದಿರಬೇಕೆಂದು ರಾಜ್ಯ ಕಾನೂನುಗಳು ಸಾಮಾನ್ಯವಾಗಿ ನಿಯಮವನ್ನು ಹೇರುತ್ತವೆ.


ವಿಮಾ ಸಂಸ್ಥೆಗಳನ್ನು ಸಾಮಾನ್ಯವಾಗಿ ಮ್ಯೂಚುಯಲ್‌ ಅಥವಾ ಸ್ಟಾಕ್‌ ಸಂಸ್ಥೆಗಳನ್ನಾಗಿ ವಿಂಗಡಿಸಲಾಗಿದೆ. ಮ್ಯೂಚುಯಲ್‌ ಸಂಸ್ಥೆಗಳು ಪಾಲಿಸಿದಾರರ ಸ್ವಾಮ್ಯದಲ್ಲಿರುತ್ತವೆ, ಪಾಲಿಸಿ ಹೊಂದಿದ ಅಥವಾ ಹೊಂದಿರದ ಸ್ಟಾಕ್‌ದಾರರು ಸ್ಟಾಕ್‌ ವಿಮೆ ಸಂಸ್ಥೆಗಳ ಸ್ವಾಮ್ಯ ವಹಿಸಿರುತ್ತಾರೆ. 20ನೆಯ ಶತಮಾನದ ಅಪರಾರ್ಧದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನವೂ ಸೇರಿದಂತೆ ಕೆಲವು ದೇಶಗಳಲ್ಲಿ ಮ್ಯೂಚುಯಲ್‌ ವಿಮೆಗಾರರ 'ಡಿಮ್ಯೂಚುಯಲೈಸೇಷನ್‌' ಜೊತೆಗೆ ಮ್ಯೂಚುಯಲ್‌ ಹೋಲ್ಡಿಂಗ್‌ ಸಂಸ್ಥೆಯೆಂಬ ಸಂಕರಿತ ಸಂಸ್ಥೆಗಳ ಸ್ಥಾಪನೆಯು ಸಾಮಾನ್ಯವಾದವು. ವಿಮಾ ಸಂಸ್ಥೆಯೊಂದಕ್ಕೆ ಇತರೆ ಸಂಭಾವ್ಯ ನಮೂನೆಗಳಲ್ಲಿ ಪರಸ್ಪರಗಳು ಸಹ ಸೇರಿರುತ್ತವೆ, ಇದರಲ್ಲಿ ಪಾಲಿಸಿದಾರರು ಅಪಾಯ ಮತ್ತು ಲಾಯ್ಡ್ಸ್‌ ಸಂಘಟನೆಗಳೊಂದಿಗೆ 'ವಿನಿಮಯ' ಮಾಡಿಕೊಳ್ಳಬಹುದು.


ವಿಮಾ ಸಂಸ್ಥೆಗಳ ಗುಣಮಟ್ಟವನ್ನು ಎ. ಎಂ. ಬೆಸ್ಟ್‌ ಅಂತಹ ವಿವಿಧ ಮಧ್ಯವರ್ತಿಗಳಿಂದ ನಿರ್ಣಯಿಸಲಾಗುತ್ತದೆ. ಬೇಡಿಕೆಗಾಗಿ ಬಂದ ಪರಿಹಾರ ಧನವನ್ನು ನೀಡಲು ವಿಮಾಗಾರ ಸಂಸ್ಥೆಗೆ ಸಾಮರ್ಥ್ಯ ಇದೆಯೇ ಎಂಬುದನ್ನು ಅಳೆಯಲು ಮತ್ತು ಅದರ ಆರ್ಥಿಕ ದೃಢತೆಯನ್ನು ಒರೆ ಹಚ್ಚುವುದನ್ನು ರೇಟಿಂಗ್ಸ್‌ ಒಳಗೊಂಡಿದೆ. ರೇಟಿಂಗ್ಸ್‌ ನೀಡುವ ಸಂದರ್ಭದಲ್ಲಿ ಇದು ವಿಮಾ ಸಂಸ್ಥೆಯು ನೀಡಿರುವ ಬಾಂಡ್ಸ್‌ಗಳು, ನೋಟ್ಸ್‌ಗಳು ಮತ್ತು ಇತರೆ ಸೇವೆಗಳಂತಹ ಹಣಕಾಸಿನ ಸಾಧನಗಳನ್ನು ಸಹ ಅಳೆದು ನಿರ್ಣಯಿಸುತ್ತದೆ.


ಇತರೆ ವಿಮಾ ಸಂಸ್ಥೆಗಳಿಗೆ ಪಾಲಿಸಿಗಳನ್ನು ಮಾರಿ ಅವುಗಳು ಅಪಾಯಗಳನ್ನು ಕಡಿಮೆಗೊಳಿಸಿ ಭಾರೀ ನಷ್ಟಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅನುವು ಮಾಡುವ ಸಂಸ್ಥೆಗಳೇ 'ಪುನರ್ವಿಮೆ ಸಂಸ್ಥೆಗಳು'. ಪುನರ್ವಿಮಾ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೆಲವೇ ಅತಿದೊಡ್ಡ ಸಂಸ್ಥೆಗಳು ಪ್ರಾಬಲ್ಯ ಮೆರೆದಿದ್ದು, ಈ ಸಂಸ್ಥೆಗಳು ಭಾರೀ ಆಪದ್ಧನವನ್ನು ಹೊಂದಿರುತ್ತವೆ. ಪುನರ್ವಿಮೆಗಾರರೊಬ್ಬರು ವಿಮಾ ಅಪಾಯಗಳ ನೇರ ನಿರ್ವಹಣೆಯನ್ನೂ ಸಹ ಮಾಡಬಲ್ಲರು.


ಬಂಧಿತ ವಿಮಾ ಸಂಸ್ಥೆಗಳು ಮೂಲ ಸಮೂಹ ಅಥವಾ ಸಮೂಹಗಳಿಂದ ಉದ್ಭವಿಸುವ ಅಪಾಯಗಳಿಗಾಗಿ ಹಣ ಬೆಂಬಲ ನೀಡಲು ಸ್ಥಾಪಿಸಲಾದ 'ಸೀಮಿತ-ಉದ್ದೇಶ' ವಿಮಾ ಸಂಸ್ಥೆಗಳಾಗಿವೆ. ಈ ವ್ಯಾಖ್ಯಾನವನ್ನು ಕೆಲವೊಮ್ಮೆ ಮೂಲ ಸಂಸ್ಥೆಯ ಗ್ರಾಹಕರ ಕೆಲವು ಅಪಾಯಗಳನ್ನು ಸಹ ಒಳಗೊಳ್ಳುವಂತೆ ವಿಸ್ತರಿಸಲಾಗುವುದು. ಸಂಕ್ಷಿಪ್ತವಾಗಿ, ಇದು ಒಂದು ಆಂತರಿಕ ಸ್ವ-ವಿಮೆ ಹೊಂದಿದ ವಾಹನವಾಗಿದೆ. ಬಂಧಿತ ವಿಮಾ ಸಂಸ್ಥೆಗಳು ಸ್ವ-ವಿಮೆ ಹೊಂದಿದ ಮೂಲ ಸಂಸ್ಥೆಯ 100% ಅಂಗಸಂಸ್ಥೆಯಾಗಿರುವ 'ಶುದ್ಧ' ಘಟಕದ; ಹಾಗೂ 'ಮ್ಯೂಚುಯಲ್' ಬಂಧಿತ (ಇದು ಒಂದು ಉದ್ದಿಮೆಯ ಸದಸ್ಯರ ಸಾಮೂಹಿಕ ಅಪಾಯಗಳಿಗೆ ವಿಮೆ ನೀಡುತ್ತದೆ); ಹಾಗೂ ಒಂದು 'ಸಾಂಘಿಕ' ಬಂಧಿತ ವಿಮಾ ಸಂಸ್ಥೆ (ಇದು ವೃತ್ತೀಯ, ವಾಣಿಜ್ಯ ಅಥವಾ ಔದ್ಯಮಿಕ ಸಂಘದ ಸದಸ್ಯರ ಅಪಾಯಗಳನ್ನು ಸ್ವ-ವಿಮೆ ಮಾಡುತ್ತದೆ) ರೂಪವನ್ನು ಹೊಂದಿರಬಹುದು. ವೆಚ್ಚಗಳಲ್ಲಿ ಕಡಿತಗಳಾಗುವ ಸಂದರ್ಭಗಳನ್ನು ಸೃಷ್ಟಿಸಿ, ಅಪಾಯ ನಿರ್ವಹಣೆಯ ಸರಳೀಕರಣ ಮತ್ತು ಅವು ಕಲ್ಪಿಸುವ ನಗದು ಹರಿವಿಗಾಗಿ ಸಾಂದರ್ಭಿಕ ಹೊಂದುವಿಕೆಯ ಕಾರಣ, ಬಂಧಿತ ವಿಮಾ ಸಂಸ್ಥೆಗಳು ಅವುಗಳ ಪ್ರಾಯೋಜಕರಿಗೆ ವಾಣಿಜ್ಯ, ಆರ್ಥಿಕ ಮತ್ತು ತೆರಿಗೆ ಅನುಕೂಲಗಳನ್ನು ನೀಡುತ್ತವೆ. ಇದರ ಜೊತೆಗೆ, ಸಾಂಪ್ರದಾಯಿಕ ವಿಮಾ ಮಾರುಕಟ್ಟೆಯಲ್ಲಿ ನ್ಯಾಯವಾದ ಬೆಲೆಯಲ್ಲಿ ಅರ್ಪಿಸಲಾಗದ ಅಥವಾ ಅಲಭ್ಯವಾದ ಅಪಾಯ-ರಕ್ಷಣೆಗಳನ್ನು ಅವುಗಳು ನೀಡಬಹುದು.


ಬಂಧಿತ ವಿಮಾ ಸಂಸ್ಥೆಗಳು ತಮ್ಮ ಮೂಲ ಸಂಸ್ಥೆಗಳಿಗಾಗಿ ಮಾಡಬಹುದಾದ ವಿಮಾಗಾರಿಕೆಯು, ಸ್ವತ್ತಿಗೆ ಹಾನಿ, ಸಾರ್ವಜನಿಕ ಮತ್ತು ಉತ್ಪನ್ನದ ಹೊಣೆಗಾರಿಕೆ, ವೃತ್ತೀಯ ನಷ್ಟ ಪರಿಹಾರ, ಉದ್ಯೋಗಿ ಸೌಲಭ್ಯಗಳು, ಉದ್ಯೋಗಿಗಳ ಹೊಣೆಗಾರಿಕೆಗಳು ಮತ್ತು ವೈದ್ಯಕೀಯ ಸಹಾಯ ವೆಚ್ವಗಳಂತಹ ಅಪಾಯಗಳನ್ನು ಇದು ಒಳಗೊಂಡಿರುತ್ತದೆ. ಪುನರ್ವಿಮೆಯ ಬಳಕೆಯಿಂದ ಇಂತಹ ಅಪಾಯಗಳಿಗೆ ಬಂಧಿತ ವಿಮಾ ಸಂಸ್ಥೆಯು ತಾನು ಈಡಾಗುವ ಸಂಭವವನ್ನು ಸೀಮಿತಗೊಳಿಸಬಹುದು.


ಅಪಾಯ ನಿರ್ವಹಣೆ ಮತ್ತು ಮೂಲ ಸಂಸ್ಥೆಯ ಅಪಾಯದ ಹಣ ಬೆಂಬಲ ನೀತಿಯ ಅಂಶವಾಗಿ ಬಂಧಿತ ವಿಮಾ ಸಂಸ್ಥೆಗಳ ಪ್ರಾಮುಖ್ಯತೆ ಹೆಚ್ಚುತ್ತಿವೆ. ಕೆಳಕಂಡ ಹಿನ್ನೆಲೆಯಲ್ಲಿ ಇದನ್ನು ಅರ್ಥಮಾಡಿಕೊಳ್ಳಬಹುದು:

  • ವ್ಯಾಪ್ತಿಯ ಪ್ರತಿಯೊಂದು ಪಂಕ್ತಿಯಲ್ಲೂ ಭಾರಿ ಮತ್ತು ಹೆಚ್ಚುತ್ತಿರುವ ವಿಮೆಕಂತು ವೆಚ್ವಗಳು;
  • ಆಕಸ್ಮಿಕ ಅಪಾಯಗಳ ಕೆಲವು ವಿಧಗಳನ್ನು ವಿಮೆ ಮಾಡುವುದು ಕಷ್ಟಕರ;
  • ವಿಶ್ವದ ವಿವಿಧೆಡೆಗಳಲ್ಲಿರುವ ರಕ್ಷಣೆಯ ಪ್ರಮಾಣಿತಗಳ ವ್ಯತ್ಯಾಸಗಳು;
  • ವೈಯಕ್ತಿಕ ನಷ್ಟ ಅನುಭವಕ್ಕಿಂತಲೂ ಹೆಚ್ಚಾಗಿ ಮಾರುಕಟ್ಟೆಯ ವಿದ್ಯಮಾನಗಳನ್ನೂ, ನಿರೂಪಣೆಗಳನ್ನೂ ನಿರ್ಣಯಿಸುವುದು;
  • ಕಡಿತಗಳ ಮತ್ತು/ಅಥವಾ ನಷ್ಟ ನಿಯಂತ್ರಣಗಳಿಗೆ ಸಾಕಾಗದ ಸಾಲ ಸೌಲಭ್ಯ‌.


'ವಿಮಾ ಸಲಹೆಗಾರರು' ಎಂದು ಕರೆಯಲ್ಪಡುವ ಕೆಲವು ಸಂಸ್ಥೆಗಳೂ ಇವೆ. ಇರುವ ಅನೇಕ ವಿಮಾ ಸಂಸ್ಥೆಗಳಿಂದ ನ್ಯಾಯೋಚಿತ ದರದಲ್ಲಿ ಪಾಲಿಸಿಯನ್ನು ಖರೀದಿಸಲು, ಭೋಗ್ಯ ದಲಾಲರಿಗೆ ನೀಡುವ ಶುಲ್ಕದಂತೆ ಈ ಸಂಸ್ಥೆಗಳಿಗೆ ಗ್ರಾಹಕರು ಶುಲ್ಕ ಪಾವತಿಯಾಗುತ್ತದೆ. ವಿಮಾ ಸಲಹೆಗಾರರಂತೆಯೇ, 'ವಿಮಾ ದಲಾಲ'ರೂ ಸಹ ಹಲವಾರು ಸಂಸ್ಥೆಗಳಲ್ಲಿ ಲಭ್ಯವಿರುವ ಅತ್ಯುತ್ತಮ ವಿಮಾ ಪಾಲಿಸಿಯನ್ನು ಆಯ್ದು ಖರೀದಿಸುತ್ತಾರೆ. ಆದರೂ ಸಹ, ನೇರವಾಗಿ ಗ್ರಾಹಕರ ಬದಲಿಗೆ ಆಯ್ಕೆಯಾದ ವಿಮೆಗಾರರಿಂದ ವಿಮಾ ದಲಾಲರಿಗೆ ಕಮಿಷನ್‌ ಸಂದಾಯವಾಗುತ್ತದೆ.


ವಿಮಾ ಸಲಹಾಗಾರರಾಗಲೀ ವಿಮಾ ದಲಾಲರಾಗಲೀ ವಿಮಾ ಸಂಸ್ಥೆಗಳಾಗಿರುವುದಿಲ್ಲ; ಹಾಗೂ ವಿಮಾ ವ್ಯವಹಾರಗಳಲ್ಲಿ ಯಾವುದೇ ಅಪಾಯದ ರಕ್ಷಣೆಯ ಹೊಣೆಯನ್ನು ಅವರಿಗೆ ವರ್ಗಾಯಿಸಲಾಗುವುದಿಲ್ಲ. ಮೂರನೆಯ ಪಕ್ಷದ ಆಡಳಿತವು ವಿಮಾಗಾರಿಕೆಯ ಜೊತೆಗೆ ಕೆಲವೊಮ್ಮೆ ವಿಮಾ ಸಂಸ್ಥೆಗಳಿಗಾಗಿ ವಿಮಾ ಪರಿಹಾರ ಬೇಡಿಕೆಗಳ ಸಂಸ್ಕರಣಾ ಸೇವೆಗಳನ್ನು ನಿರ್ವಹಿಸುವಂತಹ ಸಂಸ್ಥೆಗಳಾಗಿರುತ್ತವೆ. ಈ ಸಂಸ್ಥೆಗಳು ಆಗಾಗ್ಗೆ ವಿಮಾ ಸಂಸ್ಥೆಗಳು ಹೊಂದಿರದಂತಹ ವಿಶೇಷ ಪರಿಣತಿಯನ್ನು ಹೊಂದಿರುತ್ತವೆ.


ವಿಮಾ ಕರಾರನ್ನು ಕೊಂಡುಕೊಳ್ಳುವ ಮುನ್ನ ವಿಮಾ ಸಂಸ್ಥೆಯ ಹಣಕಾಸಿನ ಸ್ಥಿರತೆ ಮತ್ತು ಸಾಮರ್ಥ್ಯವನ್ನು ಮುಖ್ಯವಾಗಿ ಪರಿಗಣಿಸಬೇಕಾದ್ದು ಅತ್ಯವಶ್ಯ. ಚಾಲ್ತಿ ವರ್ಷದಲ್ಲಿ ಪಾವತಿಸಲಾದ ವಿಮೆಕಂತು ಭವಿಷ್ಯದಲ್ಲಿ ಹಲವು ವರ್ಷಗಳ ಕಾಲ ಸಂಭವಿಸುವ ನಷ್ಟಗಳ ವಿರುದ್ಧವೂ ರಕ್ಷಣೆಯನ್ನು ನೀಡಬಲ್ಲದಾಗಿದೆ. ಈ ಕಾರಣಕ್ಕಾಗಿ, ವಿಮಾ ವಾಹಕರ ಕಾರ್ಯಸಾಧ್ಯತೆಯು ಬಹಳ ಮುಖ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಹಲವು ವಿಮಾ ಸಂಸ್ಥೆಗಳು ದಿವಾಳಿಯಾಗಿ, ಅವುಗಳ ಪಾಲಿಸಿದಾರರು ಯಾವುದೇ ರಕ್ಷಣೆಯಿಲ್ಲದಂತಹ (ಅಥವಾ ಕೇವಲ ಸರ್ಕಾರ-ಬಂಬಲಿತ ವಿಮಾ ಸಂಗ್ರಹ ಅಥವಾ ನಷ್ಟವಾದಲ್ಲಿ ಅತ್ಯಲ್ಪ ಪ್ರಮಾಣದ ಪರಿಹಾರಧನವನ್ನು ಒಳಗೊಂಡ ಇತರೆ ವ್ಯವಸ್ಥೆ) ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಬೆಸ್ಟ್ಸ್‌, ಫಿಚ್‌, ಸ್ಟಾಂಡರ್ಡ್ ಅಂಡ್‌ ಪೂರ್ಸ್‌ ಮತ್ತು ಮೂಡಿಸ್‌ ಇನ್ವೆಸ್ಟರ್ಸ್‌ ಸರ್ವಿಸ್‌ನಂತಹ ಹಲವು ಸ್ವತಂತ್ರ ರೇಟಿಂಗ್‌ ಹೊಂದಿದ ಏಜೆನ್ಸಿಗಳು ವಿಮಾ ಸಂಸ್ಥೆಗಳ ಕಾರ್ಯಸಾಧ್ಯತೆಗಳ ಗುಣಮಟ್ಟವನ್ನು ಅಳೆದು ನಿರ್ಣಯಿಸುತ್ತವೆ.


ಜಾಗತಿಕ ವಿಮಾ ಉದ್ಯಮ[ಬದಲಾಯಿಸಿ]

2005ರಲ್ಲಿ ಬರೆದ ಜೀವ ವಿಮಾ ವಿಮೆಕಂತುಗಳು
2005ರಲ್ಲಿ ಬರೆದ ನಾನ್‌-ಲೈಫ್ ಇನ್ಸುರೆನ್ಸ್ ವಿಮೆಕಂತುಗಳು


ಜಾಗತಿಕ ವಿಮೆಕಂತುಗಳು 2007ರಲ್ಲಿ 11%ರಷ್ಟು ಅಭಿವೃದ್ಧಿ ಹೊಂದಿ (ಅಥವಾ ನೈಜ ಮಟ್ಟದಲ್ಲಿ 3.3%) $4.1 ಲಕ್ಷಕೋಟಿಯಷ್ಟು ಅಭಿವೃದ್ಧಿ ಹೊಂದಿತು. ಭಾರೀ-ಆರ್ಥಿಕ ವಾತಾವರಣವು 2007ರಲ್ಲಿ ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಏರುತ್ತಿರುವ ಹಣದುಬ್ಬರದಿಂದ ಚಿತ್ರಿತವಾಗಿತ್ತು. ಆ ವರ್ಷ, ಜೀವವಿಮೆಯಲ್ಲಿ ಲಾಭದಾಯಕತೆಯು ಸುಧಾರಿಸಿತಾದರೂ ಇತರೆ ವಿಮೆ ಕ್ಷೇತ್ರಗಳಲ್ಲಿ ಕುಸಿತ ಕಂಡಿತು. ಜೀವವಿಮೆಕಂತುಗಳು 12.6% ಅಭಿವೃದ್ಧಿ ಕಂಡು, ಜಪಾನ್‌ ಮತ್ತು ಭೂಖಂಡೀಯ ಯುರೋಪ್‌ ಹೊರತುಪಡಿಸಿ, ಮುಂದುವರೆದ ಆರ್ಥಿಕತೆಗಳಲ್ಲಿ ತ್ವರಿತ ಅಭಿವೃದ್ಧಿಯನ್ನು ಕಂಡಿತು. ಆ ವರ್ಷ ಜೀವವಿಮೆ-ಹೊರತುಪಡಿಸಿದ ವಿಮೆಕಂತುಗಳು 7.6%ರಷ್ಟು ಅಭಿವೃದ್ಧಿ ಹೊಂದಿದವು. ವಿಮೆಕಂತು ಆದಾಯಕ್ಕೆ ಸಂಬಂಧಿಸಿದ 2008ರ ಅಂಕಿ-ಅಂಶಗಳು ಇನ್ನೂ ಲಭ್ಯವಿಲ್ಲ, ಆದರೆ ವಿಮಾ ಕ್ಷೇತ್ರವು ಹೊಸ ಉದ್ಯಮದಲ್ಲಿ ನಿಧಾನಪ್ರಗತಿ ಮತ್ತು ಹೂಡಿಕೆಯ ಆದಾಯದಲ್ಲಿ ಇಳಿತವನ್ನು ಅನುಭವಿಸುವ ಸಾಧ್ಯತೆಯಿದೆ.


ಜಾಗತಿಕ ವಿಮೆಯ ಅಧಿಕಾಂಶವನ್ನು ಮುಂದುವರೆದ ಆರ್ಥಿಕತೆಗಳೇ ಹೊಂದಿವೆ. $1,681 ಶತಕೋಟಿ ವಿಮೆಕಂತು ಆದಾಯದೊಂದಿಗೆ ಯುರೋಪ್‌ ಅತಿ ಪ್ರಮುಖ ವಲಯವಾಗಿತ್ತು, ಉತ್ತರ ಅಮೆರಿಕಾ ($1,330 ಶತಕೋಟಿ) ಮತ್ತು ಏಷ್ಯಾ ($814 ಶತಕೋಟಿ) ಕ್ರಮವಾಗಿ ಎರಡನೆಯ ಮತ್ತು ಮೂರನೆಯ ಸ್ಥಾನ ಪಡೆದಿದ್ದವು. 2007ರಲ್ಲಿ, ನಾಲ್ಕು ಅಗ್ರಗಣ್ಯ ದೇಶಗಳದ್ದು ವಿಮೆಕಂತಿನಲ್ಲಿ 60%ರಷ್ಟು ಪಾಲಿತ್ತು. US ಮತ್ತು UK ಮಾತ್ರವೇ ಜಾಗತಿಕ ವಿಮೆಯಲ್ಲಿ 42%ರಷ್ಟು ಪಾಲನ್ನು ಹೊಂದಿತ್ತು. ಇದು ಜಾಗತಿಕ ಜನಸಂಖ್ಯೆಯಲ್ಲಿ ಅವರ ಪಾಲಾದ 7%ರಷ್ಟಕ್ಕಿಂತಲೂ ಅಧಿಕವಾಗಿತ್ತು. ಆಸ್ತಿತ್ವಕ್ಕೆ ಬರುತ್ತಿದ್ದ ಮಾರುಕಟ್ಟೆ ವ್ಯವಸ್ಥೆಗಳು ಜಾಗತಿಕ ಜನಸಂಖ್ಯೆಯ 85%ರಷ್ಟು ಪಾಲನ್ನು ಹೊಂದಿತ್ತು, ಆದರೆ ವಿಮೆಕಂತುಗಳಲ್ಲಿ ಕೇವಲ 10%ರಷ್ಟು ಮಾತ್ರ ಕಲ್ಪಿಸಿದವು.


[೧೫]


ವಿವಾದಗಳು[ಬದಲಾಯಿಸಿ]

ವಿಮೆ ಎಂಬ ಭಾರೀ ರಕ್ಷಣಾ ಕವಚ[ಬದಲಾಯಿಸಿ]

ತನ್ನ ವಿಮೆದಾರರಿಗೆ ರಕ್ಷಣೆಯ ಕವಚ ಕಲ್ಪಿಸುವುದರ ಮೂಲಕ, ವಿಮೆದಾರರು ಅಪಾಯಗಳನ್ನು ತಪ್ಪಿಸಲು ಅಗತ್ಯ ಉಪಾಯಗಳನ್ನು ಕೈಗೊಳ್ಳವುದರತ್ತ ನಿರ್ಲಕ್ಷ್ಯ ತೋರುವುದೂ ವಿಮಾಗಾರ ಸಂಸ್ಥೆಯ ಕಣ್ಣಿಗೆ ಬೀಳಬಹುದು. ಹೀಗಾಗಿ ವಿಮೆದಾರರು ಅಪಾಯವನ್ನು ವಿಮೆಗಾರರಿಗೆ ವರ್ಗಾಯಿಸಿರುತ್ತಾರೆ. ಇದನ್ನು ನೈತಿಕ ಅಪಾಯ ಎಂದು ಗುರುತಿಸಲಾಗಿದೆ. ತಮ್ಮ ಹಣಕಾಸಿನ ವೆಚ್ಚವನ್ನು ಇತಿಮಿತಿಯೊಳಗಿಡಲು , ವಿಮೆದಾರರು ನಷ್ಟದ ಅಪಾಯವನ್ನು ಇರುವುದಕ್ಕಿಂತಲೂ ದೊಡ್ಡದಾಗಿ ಬಿಂಬಿಸುವಂತಹ ಭೂತಗನ್ನಡಿ ಹಿಡಿದರೆ,ಅಂಥ ಸಂದರ್ಭಗಳಲ್ಲಿ ರಕ್ಷಣೆಯನ್ನು ನೀಡಲೇಬೇಕಾದ ಪ್ರಮಾಣವನ್ನು ತಗ್ಗಿಸುವಂಥ ಷರತ್ತುಗಳನ್ನು ವಿಮಾ ಸಂಸ್ಥೆಗಳು ಹೊಂದಿರಿತ್ತವೆ.[ಸೂಕ್ತ ಉಲ್ಲೇಖನ ಬೇಕು]


ಉದಾಹರಣೆಗೆ, ಜೀವವಿಮಾ ಸಂಸ್ಥೆಗಳಿಗೆ ಅಧಿಕ ಮೊತ್ತದ ವಿಮೆಕಂತುಗಳ ಅಗತ್ಯ ಬೀಳಬಹುದು ಅಥವಾ ಅಪಾಯಕಾರಿ ವೃತ್ತಿಗಳಲ್ಲಿ ಅಥವಾ ಕ್ರೀಡೆಗಳಲ್ಲಲಿ ಪಾಲ್ಗೊಳ್ಳುವವರಿಗೆ ಈ ವಿಮೆಯು ರಕ್ಷಣೆಯಯ ಪೂರೈಕೆಯನ್ನು ನಿರಾಕರಿಸಬಹುದು.ವಿಮೆದಾರರು ಉದ್ದೇಶಪೂರ್ವಕವಾಗಿ ಎಸಗುವ ಅಪರಾಧ ಕೃತ್ಯಗಳಿಂದ ಉದ್ಭವಿಸುವ ಹೊಣೆಗೆ ವಿಮೆಗಾರರು ರಕ್ಷಣೆ ನೀಡುವುದಿಲ್ಲ. ಇಂತಹ ರಕ್ಷಣೆಯನ್ನು ನೀಡುವಷ್ಟು ವಿಚಾರಹೀನ ವಿಮೆಗಾರರಿದ್ದರೂ, ಅಂತಹ ವಿಮೆಯು ಆಸ್ತಿತ್ವದಲ್ಲಿರಲು ಬಹಳಷ್ಟು ದೇಶಗಳಲ್ಲಿ ಸಾರ್ವಜನಿಕರ ವಿರೋಧವೇ ಇದೆ. ಹೀಗಾಗಿ ಇದು ಸಾಮಾನ್ಯವಾಗಿ ಕಾನೂನು-ಬಾಹಿರ.[ಸೂಕ್ತ ಉಲ್ಲೇಖನ ಬೇಕು]


ವಿಮಾ ಪಾಲಿಸಿ ಕರಾರುಗಳ ಜಟಿಲತೆ[ಬದಲಾಯಿಸಿ]

ಪಾಲಿಸಿಯು ಒಳಗೊಂಡಿರುವ ಶುಲ್ಕ ಮತ್ತು ಅಪಾಯ ವ್ಯಾಪ್ತಿ ವಿವರಗಳು ಕೆಲವು ಪಾಲಿಸಿದಾರರಿಗೆ ಅರ್ಥವಾಗದೇ ಇರುವಷ್ಟು ವಿಮೆ ಪಾಲಿಸಿಗಳು ಬಹಳ ಜಟಿಲ.ಇದರ ಪರಿಣಾಮವಾಗಿ, ತಾವು ಒಲ್ಲದ ಷರತ್ತುಗಳೊಂದಿಗೆ ಜನರು ಪಾಲಿಸಿಯನ್ನು ಕೊಳ್ಳುವುದುಂಟು. ಈ ಪ್ರಕರಣಗಳಿಗೆ ಪ್ರತಿಯಾಗಿ, ವಿಮೆ ಪಾಲಿಸಿಗಳಿಗೆ ಕನಿಷ್ಠ ಪಕ್ಷದ ಪ್ರಮಾಣಗಳು ಮತ್ತು ಅವುಗಳನ್ನು ಜಾಹೀರುಗೊಳಿಸಿ ಮಾರುವುದರ ಬಗ್ಗೆಯೂ ಸೇರಿದಂತೆ, ವಿಮೆಯ ವ್ಯವಹಾರ ಸಂಬಂಧ ವಿಸ್ತೃತವಾದ, ಶಾಸನಾಪೇಕ್ಷಿತ ಮತ್ತು ನಿಯಂತ್ರಣಾತ್ಮಕ ನಿಯಮಗಳನ್ನು ಹಲವು ದೇಶಗಳು ಜಾರಿಗೊಳಿಸಿವೆ.


ಉದಾಹರಣೆಗೆ, ಇಂಗ್ಲಿಷ್ ಭಾಷೆಯಲ್ಲಿರುವ ಹಲವು ವಿಮೆ ಪಾಲಿಸಿಗಳ ಕರಡನ್ನು ಸರಳ ಇಂಗ್ಲಿಷ್‌ ಭಾಷೆಯಲ್ಲಿ ರಚಿಸಲಾಗಿವೆ; ವಿಮೆ ಪಾಲಿಸಿಗಳು ಏನನ್ನು ಹೇಳುತ್ತಿವೆ ಎಂಬುದನ್ನು ಅರಿಯಲು ನ್ಯಾಯಾಧೀಶರುಗಳಿಗೇ ಕಷ್ಟವಾಗಿದ್ದು, ನ್ಯಾಯಾಲಯಗಳು ವಿಮೆದಾರರ ವಿರುದ್ಧ ತೀರ್ಪು ನೀಡಲಾರರು ಎಂದು ವಿಮಾ ಕ್ಷೇತ್ರವು ಪ್ರಯಾಸದಿಂದ ಕಲಿಯಿತು.


ವಿಮೆ ಇಳಿಸ ಬಯಸುವ ಹಲವು ಸಾಂಸ್ಥಿಕ ಕೊಳ್ಳುಗರು ವಿಮಾ ದಲಾಲರ ಮೂಲಕ ವಿಮೆಯನ್ನು ಕೊಂಡುಕೊಳ್ಳುತ್ತಾರೆ. ಮೇಲ್ನೋಟಕ್ಕೆ, ದಲಾಲರು ಕೊಳ್ಳುಗರ (ವಿಮಾ ಸಂಸ್ಥೆಯಲ್ಲ) ಪ್ರತಿನಿಧಿಯಾಗಿ ಕಾಣುತ್ತಾರೆ. ಸೂಕ್ತ ರಕ್ಷಣೆ ಮತ್ತು ಪಾಲಿಸಿ ಒದಗಿಸುವ ಇತಿಮಿತಿಗಳನ್ನು ಆಪ್ತ ಸಲಹೆಗಾರರಂತೆ ತಿಳಿಸುತ್ತಾರಾದರೂ, ಬಹುಪಾಲು ಪ್ರಕರಣಗಳಲ್ಲಿ, ದಲಾಲರಿಗೆ ವಿಮೆ ಕಂತಿನ ಮೇಲೆ ಇಂತಿಷ್ಟು ಶೇಕಡಾ ಕಮೀಷನ್‌ ಎಂದು ಹಣ ಸಂದಾಯವಾಗುತ್ತದೆ. ಹೀಗಾಗಿ, ದಲಾಲರ ಹಣಕಾಸಿನ ಆಸಕ್ತಿಯು ಅಗತ್ಯಕ್ಕಿಂತ ಹೆಚ್ಚಿನ ಬೆಲೆಯ ವಿಮೆ ಇಳಿಸಲು ವಿಮೆದಾರರನ್ನು ಪ್ರೇರೇಪಿಸುತ್ತಾರೆ. ದಲಾಲರು ಸಾಮಾನ್ಯವಾಗಿ ಹಲವು ವಿಮೆಗಾರರೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಹಾಗಾಗಿ ದಲಾಲರು ಮಾರುಕಟ್ಟೆಯಲ್ಲಿ ನ್ಯಾಯೋಚಿತ ದರಗಳಲ್ಲಿ ಲಭಿಸುವ ಅತ್ಯುತ್ತಮ ರಕ್ಷಣಾ ಪಾಲಿಸಿಗಳನ್ನು ಕೊಂಡುಕೊಳ್ಳಲು ಅನುಕೂಲವಾಗುತ್ತದೆ.


ಮಧ್ಯವರ್ತಿಯೊಬ್ಬನ ಮೂಲಕವೂ ಸಹ ವಿಮೆಯನ್ನು ಕೊಳ್ಳಬಹುದು. ಮಧ್ಯವರ್ತಿ ಪಾಲಿಸಿದಾರರನ್ನು ಪ್ರತಿನಿಧಿಸಿದರೆ,ವಿಮೆದಾರರಿಗೆ ಪಾಲಿಸಿಯನ್ನು ಮಾರಿದ ವಿಮಾ ಸಂಸ್ಥೆಯನ್ನು ದಲಾಲ ಪ್ರತಿನಿಧಿಸುತ್ತಾನೆ. ಇವರಿಬ್ಬರದೂ ವಿಭಿನ್ನ ವರ್ತನೆ. ಮಧ್ಯವರ್ತಿಯು ಒಂದಕ್ಕಿಂತಲೂ ಅಧಿಕ ಸಂಸ್ಥೆಗಳನ್ನು ಪ್ರತಿನಿಧಿಸಬಹುದು.


ಒಬ್ಬ ಸ್ವತಂತ್ರ ವಿಮಾ ಸಲಹಾಗಾರರು, ವಿಮೆದಾರರಿಗೆ ಸೇವಾ ಧಾರಕ ಶುಲ್ಕದ ಮೇಲೆ ವಕೀಲರಂತೆ ಸಲಹೆ ನೀಡುವರು. ಇದು ಸಂಪೂರ್ಣ ಸ್ವತಂತ್ರ ಸಲಹೆಯಾಗಿದ್ದು, ದಲಾಲರ ಮತ್ತು/ಅಥವಾ ಮಧ್ಯವರ್ತಿಗಳ ಹಣಕಾಸಿನ ಹಿತಾಸಕ್ತಿಗಳ ಘರ್ಷಣೆಗೆ ಇಲ್ಲಿ ಆಸ್ಪದವಿರುದಿಲ್ಲ. ಆದರೂ, ಅವರ ಗ್ರಾಹಕರಿಗೆ ಪಾಲಿಸಿ ರಕ್ಷಣೆಯನ್ನು ಕೊಡಿಸಲು, ಅಂತಹ ಸಲಹೆಗಾರರು ದಲಾಲರ ಮತ್ತು/ಅಥವಾ ಮಧ್ಯವರ್ತಿಗಳ ಮೂಲಕ ಕಾರ್ಯನಿರ್ವಹಿಸಬೇಕು.


ರೆಡ್‌ಲೈನಿಂಗ್‌[ಬದಲಾಯಿಸಿ]

ನಷ್ಟದ ಸಾಧ್ಯತೆಯು ಅಧಿಕವಾಗಿರುವ ಕಾರಣ, ನಿರ್ದಿಷ್ಟ ಭೌಗೋಳಿಕ ವಲಯಗಳಲ್ಲಿ ವಿಮಾ ರಕ್ಷಣೆಯನ್ನು ನಿರಾಕರಿಸುವುದಕ್ಕೆ ರೆಡ್‌ಲೈನಿಂಗ್‌ ಎನ್ನಲಾಗಿದೆ. ಈ ತಾರತಮ್ಯವು ಕಾನೂನು-ಸಮ್ಮತವಲ್ಲದ್ದೆಂಬ ಆರೋಪಕ್ಕೆ ಇದು ಈಡಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಆಸ್ತಿಪಾಸ್ತಿ ವಿಮಾ ಕ್ಷೇತ್ರದಲ್ಲಿ ವರ್ಣ ಭೇದ ನೀತಿ(=ಜನಾಂಗೀಯ ಭೇದ) ಅಥವಾ ರೆಡ್‌ಲೈನಿಂಗ್‌ಗೆ ದೀರ್ಘಾವಧಿಯ ಇತಿಹಾಸವಿದೆ.ಕ್ಷೇತ್ರದ ವಿಮಾಗಾರಿಕೆ ಮತ್ತು ಮಾರಾಟ-ಪ್ರಚಾರ ಸಾಮಗ್ರಿಗಳು, ನ್ಯಾಯಾಲಯದ ಪತ್ರಗಳ ಅವಲೋಕನ ಹಾಗೂ ತಮ್ಮ ಮಧ್ಯವರ್ತಿಗಳಿಂದ ನಡೆಸಲಾಗುವ ಸರ್ಕಾರೀ ಪ್ರಾಯೋಜಿತ ಉದ್ದಿಮೆ, ಸಮುದಾಯ ಮತ್ತು ಶೈಕ್ಷಣಿಕ ಸಂಶೋಧನಾ ಅಧ್ಯಯನಗಳಿಂದ ದೃಢಪಟ್ಟಿರುವ ಒಂದಂಶವಿದು: ವಿಮಾ ಕ್ಷೇತ್ರದ ನೀತಿ-ನಿಯಮಗಳು ಮತ್ತು ಪ್ರಯೋಗಗಳ ಮೇಲೆ ಜನಾಂಗೀಯತೆ ದೀರ್ಘಾವಧಿಯಿಂದಲೂ ಪ್ರಭಾವ ಬೀರುತ್ತಾ ಬಂದಿದೆ.[೧೬]


ಕ್ರೆಡಿಟ್‌-ಆಧಾರಿತ ವಿಮಾ ಸಂಗತಿಗಳು ಮತ್ತು ವಾಹನ ವಿಮೆ ಕುರಿತ ಅಧ್ಯಯನದ ವರದಿಯನ್ನು ಸಂಯುಕ್ತ ವಹಿವಾಟು ಆಯೋಗವು 2007ರ ಜುಲೈ ತಿಂಗಳಲ್ಲಿ ಬಿಡುಗಡೆ ಮಾಡಿತು. ಗ್ರಾಹಕರು ಸಲ್ಲಿಸಬಹುದಾದ ಪರಿಹಾರ ಬೇಡಿಕೆಗಳ ಬಗ್ಗೆ ಮುನ್ಸೂಚನೆಯನ್ನು ಈ ಸಂಗತಿಗಳು ಪರಿಣಾಮಕಾರಿಯಾಗಿ ನೀಡಬಲ್ಲವು ಎಂದು ಅಧ್ಯಯನವು ಪತ್ತೆಮಾಡಿದೆ. (http://www2.ftc.gov/os/2007/07/P044804FACTA_Report_Credit-Based_Insurance_Scores.pdf Archived 2009-05-11 ವೇಬ್ಯಾಕ್ ಮೆಷಿನ್ ನಲ್ಲಿ.)


ಎಲ್ಲಾ ರಾಜ್ಯಗಳಲ್ಲಿಯೂ ಸಹ ಅವರ ನಿಯಂತ್ರಣಾ ಶಾಸನಗಳಲ್ಲಿ ಅಥವಾ ನ್ಯಾಯಸಮ್ಮತ ವಹಿವಾಟು ಕಾಯಿದೆಗಳಲ್ಲಿ, ದರಗಳನ್ನು ನಿಗದಿಪಡಿಸಿ ವಿಮೆಯನ್ನು ಲಭ್ಯಗೊಳಿಸುವುದರಲ್ಲಿ ರೆಡ್‌ಲೈನಿಂಗ್‌ ಎನ್ನಲಾದ ನ್ಯಾಯಸಮ್ಮತವಲ್ಲದ ತಾರತಮ್ಯವನ್ನು ನಿಷೇಧಿಸುವ ನಿಯಮವಿದೆ.[೧೭]


ವಿಮೆಕಂತು ಮತ್ತು ವಿಮೆಕಂತು ದರ ರಚನೆಗಳನ್ನು ನಿರ್ಣಯಿಸುವುದರಲ್ಲಿ, ಸ್ಥಳ, ಲಭ್ಯ ಮಾಹಿತಿ, ಲಿಂಗ, ಉದ್ಯೋಗ, ವೈವಾಹಿಕ ಸ್ಥಿತಿಗತಿ ಮತ್ತು ಶಿಕ್ಷಣ ಮಟ್ಟಗಳಂತಹ ವಿಮೆಗಾರರು ಕಾರಣಗಳನ್ನು ಪರಿಗಣಿಸುತ್ತಾರೆ. ಆದರೂ, ಇಂತಹ ಕಾರಣಗಳ ಬಳಕೆಯನ್ನು ನ್ಯಾಯಸಮ್ಮತವಲ್ಲದ್ದು, ಕಾನೂನು ಬಾಹಿರವೂ ಮತ್ತು ತಾರತಮ್ಯವುಳ್ಳದ್ದು ಎಂದು ಪರಿಗಣಿಸಲಾಗಿದೆ; ಈ ಧೋರಣೆಯ ವಿರುದ್ಧ ಪ್ರತಿಕ್ರಿಯೆಯು, ವಿಮೆಗಾರರು ವಿಮೆಕಂತುಗಳನ್ನು ನಿರ್ಣಯಿಸುವ ರೀತಿಗಳ ಮತ್ತು ಬಳಕೆಯಾದ ಕಾರಣಗಳನ್ನು ಕುರಿತು ನಿಯಂತ್ರಣಾತ್ಮಕ ಹಸ್ತಕ್ಷೇಪಗಳ ಬಗ್ಗೆ ರಾಜಕೀಯ ವ್ಯಾಜ್ಯಗಳಿಗೆ ಕಾರಣವಾಗಿದೆ.


ನಷ್ಟವಾಗುವ ಸಾಧ್ಯತೆಯ ದೃಷ್ಟಿಕೋನದಿಂದ ಅಪಾಯವನ್ನು ಲೆಕ್ಕಿಸುವುದು ವಿಮೆಗಾರರ ಕೆಲಸವಾಗಿದೆ. ಅಧಿಕ ನಷ್ಟಕ್ಕೆ ಈಡಾಗುವುದನ್ನು ತಪ್ಪಿಸಲು, ಯಾವ ಕಾರಣದಿಂದಾಗಿ ನಷ್ಟವಾಗುತ್ತದೋ, ಅದಕ್ಕೆ ಹೆಚ್ಚಿನ ಶುಲ್ಕ ವಿಧಿಸಬೇಕು. ವಿಮಾ ಸಂಸ್ಥೆಗಳು ಋಣಪರಿಹಾರ ಸಮರ್ಥವಾಗಿರಬೇಕೆಂದಲ್ಲಿ, ವಿಮೆಯ ಈ ಮೂಲಭೂತ ತತ್ವವನ್ನು ಅವುಗಳು ಪಾಲಿಸಲೇಬೇಕು.[ಸಾಕ್ಷ್ಯಾಧಾರ ಬೇಕಾಗಿದೆ] ಹಾಗಾಗಿ, ಅಪಾಯಗಳನ್ನು ಲೆಕ್ಕಿಸಿ ವಿಮೆಕಂತನ್ನು ನಿರ್ಣಯಿಸುವ ಪ್ರಕ್ರಿಯೆಯಲ್ಲಿ ಸಂಭಾವ್ಯ ವಿಮೆದಾರರ ವಿರುದ್ಧದ ತಾರತಮ್ಯವು ವಿಮಾಗಾರಿಕೆಯ ಅಗತ್ಯ ಉಪ-ಉತ್ಪನ್ನವಾಗಿದೆ. ಉದಾಹರಣೆಗೆ, ಜೀವವಿಮೆಗಾಗಿ ಕಿರಿಯರಿಗೆ ಹೋಲಿಸಿದರೆ ವೃದ್ಧರಿಗೆ ಗಮನಾರ್ಹವಾಗಿ ಹೆಚ್ಚಿನ ವಿಮೆಕಂತಿನ ದರಗಳನ್ನು ವಿಮೆಗಾರರು ವಿಧಿಸುತ್ತಾರೆ. ಹೀಗಾಗಿ, ಕಿರಿಯರಿಗಿಂತಲೂ ವೃದ್ಧರನ್ನು ಅನ್ಯ ರೀತಿಯಲ್ಲಿ ನಡೆಸಿಕೊಳ್ಳಾಗುತ್ತದೆ (ಭೇದ ತೋರಲಾಗುತ್ತದೆ, ತಾರತಮ್ಯವೂ ಉಂಟು). ಈ ರೀತಿಯ ಭೇದಭಾವದ ಹಿಂದಿನ ಕಾರಣ, 'ವೃದ್ಧರು ಕಿರಿಯರಿಗಿಂತಲೂ ಬೇಗನೆ ಮರಣ ಹೊಂದುತ್ತಾರೆ, ಹಾಗಾಗಿ ನಷ್ಟದ ಅಪಾಯವು ಯಾವುದೇ ಕಾಲಾವಧಿಯಲ್ಲಿ ಹೆಚ್ಚಾಗಲಿದೆ; ಹೆಚ್ಚಿನ ಅಪಾಯದ ವಿರುದ್ಧ ರಕ್ಷಣೆ ಒದಗಿಸಲು ವಿಮೆಕಂತು ಅಧಿಕ ದರದಲ್ಲಿರಬೇಕು' ಎಂಬುದು ವಿಮೆಗಾರರ ಧೋರಣೆ. ಆದರೂ, ವಿಮಾಗಣಿತದ ದೃಷ್ಟಿಕೋನದಿಂದ ಯಾವುದೇ ಸಮರ್ಪಕ ಕಾರಣವಿಲ್ಲದಿದ್ದರೂ, ವಿಮೆದಾರರನ್ನು ಬೇರೆ ರೀತಿಯಲ್ಲಿ ನಡೆಸಿಕೊಳ್ಳುವುದು ಕಾನೂನುಬಾಹಿರ ತಾರತಮ್ಯ.


ನ್ಯಾಯಸಮ್ಮತ ಮತ್ತು ವಿಮಾಗಣಿತದ ದೃಷ್ಟಿಕೋನದಿಂದ ಸಮಂಜಸವಾದ ಕಾರಣಗಳ ಬಳಕೆಯು ನಿಷೇಧವಾಗಿರುವುದು ಚರ್ಚೆಯಲ್ಲಿ ಕಾಣೆಯಾಗಿರುವ ವಿಚಾರಗಳಾಗಿವೆ; ಅರ್ಥಾತ್‌ ಅಪಾಯಕ್ಕೆ ವಿಧಿಸಲಾದ ವಿಮೆಕಂತಿನ ದರವು ಸಾಕಷ್ಟಿಲ್ಲ ಎಂದು ಹೇಳುವುದು ವ್ಯವಸ್ಥೆಯಲ್ಲಿನ ನ್ಯೂನತೆಯನ್ನು ಗುರುತಿಸುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ] ನ್ಯೂನತೆಯನ್ನು ಸರಿಪಡಿಸುವ ವೈಫಲ್ಯದ ಅರ್ಥವು ದಿವಾಳಿ ಸ್ಥಿತಿಯನ್ನು ಸೂಚಿಸಿ, ಆ ವಿಮಾಸಂಸ್ಥೆಯ ವಿಮೆದಾರರೆಲ್ಲರಿಗೂ ಸಂಕಷ್ಟವನ್ನು ತಂದೊಡ್ಡುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ] ಈ ನ್ಯೂನತೆಯನ್ನು ಸರಿಪಡಿಸಲು ಆಯ್ಕೆಗಳು ಹೀಗಿವೆ: ಈ ನ್ಯೂನತೆಯನ್ನು ಇತರೆ ಪಾಲಿಸಿದಾರರಿಗೆ ಅಥವಾ ಸರ್ಕಾರಕ್ಕೆ ತಗುಲಿಸುವುದು (ಅರ್ಥಾತ್‌ ಸಂಸ್ಥೆಯ ಹೊರಗೆ ಮತ್ತು ಸಮಾಜಕ್ಕೆ ಬಾಹ್ಯೀಕರಿಸುವುದು).[ಸಾಕ್ಷ್ಯಾಧಾರ ಬೇಕಾಗಿದೆ]


ವಿಮೆ ಹಕ್ಕುಸ್ವಾಮ್ಯ[ಬದಲಾಯಿಸಿ]

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವ್ಯಾಪಾರ ವಿಧಾನ ಹಕ್ಕುಸ್ವಾಮ್ಯಈಗ ವಿಮೆಯ ಹೊಸ ಹೊಸ ಮಾದರಿಗಳನ್ನು ರೂಪಿಸುತ್ತಿದ್ದು ಅವುಗಳನ್ನು ಬೇರೆಯವರು ನಕಲು ಮಾಡುವುದರ ವಿರುದ್ಧ ವಿಮಾ ರಕ್ಷಣೆ ಪಡೆಯಬಹುದಾಗಿದೆ.ಆಗ ರೂಪಿಸಲಾದ ಹೊಸ ಉತ್ಪನ್ನವು ಸ್ವಾಮ್ಯದ ಸನ್ನದು ಪಡೆದಂತಾಗುತ್ತದೆ.


ಬಳಕೆ ಆಧಾರಿತ ವಾಹನ ವಿಮೆಇತ್ತೀಚಿಗೆ ಹಕ್ಕುಸ್ವಾಮ್ಯಕ್ಕೊಳಪಟ್ಟ ಹೊಸ ವಿಮಾ ಉತ್ಪನ್ನ . U.S. ವಾಹನ ವಿಮೆ ಕಂಪನಿಯಾದ ಪ್ರೋಗ್ರೆಸೀವ್ ಆಟೋ ಇನ್ಷೂರೆನ್ಸ್ (ಯು.ಎಸ್ ಪೇಟೆಂಟ್ ೫೭,೯೭,೧೩೪) ಮತ್ತು ಸ್ಪಾನಿಷ್ ಸ್ವತಂತ್ರ ಅವಿಷ್ಕಾರಕರಾದ ಸಾಲ್ವೆಡರ್‌ ಮಿಂಗ್ವಿಜನ್‌ ಪೆರೆಜ್‌ (EP 0700009 ) ಸ್ವತಂತ್ರವಾಗಿ ಅವಿಷ್ಕಾರಿಸಿ, ಹಕ್ಕಸ್ವಾಮ್ಯವನ್ನು ಪಡೆದುಕೊಂಢ ಮೊದಲ ಪ್ರಮುಖ ಸಂಸ್ಥೆಗಳು.


ವಿಮಾ ಮಾರುಕಟ್ಟೆಗೆ ದೊಡ್ಡ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪರಿಚಯಿಸುವಾಗ, ಅವುಗಳಿಂದ ಹಕ್ಕುಸ್ವಾಮ್ಯ ರಕ್ಷಣೆ ನೀಡುವುದರಿಂದ ಹಲವು ಸ್ವತಂತ್ರ ಆವಿಷ್ಕಾರಕರು ಹಕ್ಕುಸ್ವಾಮ್ಯದ ಪರ ಇದ್ದಾರೆ. ವಿಮಾ ಕ್ಷೇತ್ರದಲ್ಲಿ ಹೊಸ ಹಕ್ಕುಸ್ವಾಮ್ಯ ಪಡೆಯಲು ಮುಂದಾಗಿರುವವರಲ್ಲಿ U.S.ನ ಸ್ವತಂತ್ರ ಆವಿಷ್ಕಾರಕರ ಪಾಲು 70%ನಷ್ಟಿದೆ.


ವಿಮಾ ಉತ್ಪನ್ನಗಳ ಹಕ್ಕುಸ್ವಾಮ್ಯ ಪಡೆಯುವುದನ್ನು ಹಲವಾರು ವಿಮಾ ಕಾರ್ಯನಿರ್ವಾಹಕರು ವಿರೋಧಿಸುತ್ತಾರೆ. ಏಕೆಂದರೆ ಅದು ಅವರಿಗೆ ಹೊಸ ಅಪಾಯವೊಡ್ಡುತ್ತದೆ.ಉದಾಹರಣೆಗೆ, ಬ್ಯಾನ್‌ಕೋರ್ಪ್‌ ಅನ್ವೇಷಿಸಿದ ಮತ್ತು ಹಕ್ಕುಸ್ವಾಮ್ಯ ಮಾಡಿಸಲ್ಪಟ್ಟ ಜೀವವಿಮಾ ಉತ್ಪನ್ನಕ್ಕೆ ಸಂಬಂಧಿತ ಉದ್ಯಮ ರಹಸ್ಯದ ಕಳವು ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆ ಮೊಕದ್ದಮೆಯನ್ನು ಕಾನೂನುಬದ್ಧವಾಗಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ದಿ ಹಾರ್ಟ್‌ಫೋರ್ಡ್‌ ವಿಮಾ ಕಂಪನಿಯು ಸ್ವತಂತ್ರ ಅವಿಷ್ಕಾರಕ ಸಂಸ್ಥೆ ಬ್ಯಾನ್‌ಕೋರ್ಪ್‌ ಸರ್ವಿಸಸ್‌ಗೆ $80 ದಶಲಕ್ಷ ಪಾವತಿಸುವ ಪರಿಸ್ಥಿತಿ ಒದಗಿ ಬಂತು.


ಅಮೆರಿಕಾ ಸಂಯುಕ್ತ ಸಂಸ್ಥಾನ‌ದಲ್ಲಿ ವಿಮೆ ಅನ್ವೇಷಣೆ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಸುಮಾರು 150 ಹೊಸ ಹಕ್ಕುಸ್ವಾಮ್ಯ ಬೇಡಿಕೆ ಅರ್ಜಿಗಳು ಬರುತ್ತವೆ. ಹಕ್ಕುಸ್ವಾಮ್ಯ ವಿತರಣೆ ದರವು 2002ರಲ್ಲಿ 15ರಷ್ಟಿದ್ದು, ಇದು 2006ರಲ್ಲಿ 44ರಷ್ಟು ಏರಿಕೆ ಕಂಡಿದೆ. [೧೮]


ಅವಿಷ್ಕಾರಕರು ತಮ್ಮ ವಿಮೆ U.S. ಹಕ್ಕುಸ್ವಾಮ್ಯ ಅರ್ಜಿಗಳನ್ನು ಹಕ್ಕುಸ್ವಾಮ್ಯಕ್ಕಾಗಿ ಸಾರ್ವಜನಿಕರ ಮರುಪರಿಶೀಲನೆಗೆ ಒಳಪಡಿಸಬಹುದು. ಮೊದಲ ವಿಮೆ ಹಕ್ಕುಸ್ವಾಮ್ಯ ಅರ್ಜಿಯನ್ನು US2009005522 “ಅಪಾಯ ಮೌಲ್ಯಮಾಪನ ಕಂಪನಿ” Archived 2009-05-10 ವೇಬ್ಯಾಕ್ ಮೆಷಿನ್ ನಲ್ಲಿ.ಯು ಪ್ರಕಟಿಸಿದೆ. ಅದನ್ನು ಮಾರ್ಚ್ 6, 2009ರಲ್ಲಿ ಪ್ರಕಟಿಸಿತು. ಈ ಹಕ್ಕುಸ್ವಾಮ್ಯ ಅರ್ಜಿಯು ಬದಲಾಗುತ್ತಿರುವ ವಿಮಾ ಕಂಪನಿಗಳ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವ ವಿಧಾನವನ್ನು ವಿವರಿಸುತ್ತದೆ.[೧೯]


ವಿಮೆ ಉದ್ಯಮ ಮತ್ತು ಬಾಡಿಗೆ ಆಧಾರಿತ[ಬದಲಾಯಿಸಿ]

ಕೆಲವು ನಿರ್ದಿಷ್ಟ ವಿಮಾ ಉತ್ಪನ್ನಗಳು ಮತ್ತು ನಡವಳಿಕೆಗಳು ಬಾಡಿಗೆ ಪ್ರೇರಿತ ಎಂಬ ಟೀಕೆಗೆ ಗುರಿಯಾಗಿವೆ.[ಸಾಕ್ಷ್ಯಾಧಾರ ಬೇಕಾಗಿದೆ]ದುರ್ಘಟನೆಯ ಅಪಾಯದಿಂದ ರಕ್ಷಿಸುವುದು ಮಾತ್ರವಲ್ಲದೆ, ತೆರಿಗೆಗಳು ಕಡಿಮೆಯಾಗುತ್ತದೆ , ಕಾನೂನು ಸೌಲಭ್ಯಗಳು ದೊರೆಯುವುದರಿಂದ, ಕೆಲವು ವಿಮಾ ಉತ್ಪನ್ನಗಳು ಮತ್ತು ನಡವಳಿಕೆಗಳು ಪ್ರಾಥಮಿಕವಾಗಿ ಉಪಯುಕ್ತವಾಗಿದೆ. ಉದಾಹರಣೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನ ತೆರಿಗೆ ಕಾನೂನಿನಡಿ ಚರ ವರ್ಷಾಶನ ಮತ್ತು ಚರ ಜೀವ ವಿಮೆಯ ಹೆಚ್ಚಿನ ಮಾಲೀಕರು ವಿಮಾಕಂತಿನ ಪಾವತಿಯನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು ಮತ್ತು ವಿಮಾಕಂತನ್ನು ಹಿಂಪಡೆಯುವವರೆಗೆ ಅವರ ಹೂಡಿಕೆಯ ಮೇಲಿನ ಯಾವುದೇ ತೆರಿಗೆಯು ವ್ಯತ್ಯಾಸಗೊಳ್ಳಬಹುದು ಅಥವಾ ಕಡಿಮೆಯಾಗಬಹುದು. ಜನರು ಈ ಉತ್ಪನ್ನಗಳನ್ನು ಬಳಸಲು ಕೆಲವೊಮ್ಮೆ ಈ ತೆರಿಗೆ ಮುಂದೂಡಿಕೆಗಳು ಏಕಮಾತ್ರ ಕಾರಣವಾಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ] ಇನ್ನೊಂದು ಉದಾಹರಣೆಯೆಂದರೆ ಸ್ಥಿರಾಸ್ತಿ ತೆರಿಗೆಯನ್ನು ಪಾವತಿಸುವ ಹಿಂದಕ್ಕೆ ತೆಗೆದುಕೊಳ್ಳಲಾಗದ ನಂಬಿಕೆಯಲ್ಲಿ ಜೀವವಿಮೆಯಿಂದ ಸ್ಥಿರಾಸ್ತಿ ತೆರಿಗೆಯಲ್ಲಿ ವಿನಾಯಿತಿಯನ್ನು ಪಡೆದುಕೊಳ್ಳುವ ಕಾನೂನುಬದ್ಧ ಮೂಲಭೂತ ವ್ಯವಸ್ಥೆಗಳಾಗಿವೆ.


Glossary[ಬದಲಾಯಿಸಿ]

  • 'ಸಂಯೋಜಿತ ಅನುಪಾತ' = ನಷ್ಟ ಅನುಪಾತ + ವೆಚ್ಚ ಅನುಪಾತ + ಕಮೀಷನ್ ಅನುಪಾತ. ನಷ್ಟ ಅನುಪಾತವನ್ನು ಗಳಿಸಿದ ವಿಮಾ ಕಂತಿನ ಮೊತ್ತದಿಂದ ನಷ್ಟವಾದ ಒಟ್ಟು ಮೊತ್ತವನ್ನು (ಕೆಲವೊಮ್ಮೆ ನಷ್ಟ ಹೊಂದಾಣಿಕೆ ವೆಚ್ಚವನ್ನು ಸೇರಿಸಿಕೊಳ್ಳಲಾಗುತ್ತದೆ) ಭಾಗಿಸಿ, ಕಂಡುಹಿಡಿಯಲಾಗುತ್ತದೆ. ವೆಚ್ಚದ ಅನುಪಾತವನ್ನು ನಮೂದಿಸಿದ ವಿಮಾ ಕಂತಿನ ಮೊತ್ತದಿಂದ ಕಾರ್ಯಕಾರಿ ವೆಚ್ಚವನ್ನು ಭಾಗಿಸುವುದರಿಂದ ಕಂಡುಹಿಡಿಯಲಾಗುತ್ತದೆ. ಕಡಿಮೆ ಪ್ರಮಾಣದ ಸಂಖ್ಯೆಯು ವಿಮಾದಾರನು ಅಪಾಯದ ಸಮಯದಲ್ಲಿ ಅವನ ಹೆಸರಿನಲ್ಲಿದ್ದ ಬಂಡವಾಳದ ಮೊತ್ತದಲ್ಲಿ ಉತ್ತಮ ಲಾಭವನ್ನು ಸೂಚಿಸುತ್ತದೆ.
  • 'SSA' = ಚಂದಾದಾರರ ಉಳಿತಾಯ ಖಾತೆ.
  • 'AIF' = ನಿಜವಾದ ವಕೀಲ.


ಇದನ್ನೂ ನೋಡಿರಿ[ಬದಲಾಯಿಸಿ]


ನಿರ್ದಿಷ್ಟ ದೇಶದ ಲೇಖನಗಳು


ಟಿಪ್ಪಣಿಗಳು[ಬದಲಾಯಿಸಿ]

  1. ಮೆಹ್ರ್‌ ಮತ್ತು ಕ್ಯಾಮಾಕ್‌ರವರ “ವಿಮೆಯ ತತ್ವಗಳು” ಚರ್ಚೆಯನ್ನು ಅಳವಡಿಸಿಕೊಳ್ಳಲಾಗಿದೆ, 6ನೇ ಆವೃತ್ತಿ, 1976, ಪು 34 – 37.
  2. "Insured cars by state". Insurance Information Institute. Archived from the original on 2009-06-18. Retrieved 2009-11-12.
  3. C. ಕುಲ್ಪ್‌ ಮತ್ತು J. ಹಾಲ್‌ರವರ ಆಕಸ್ಮಿಕ ವಿಮೆ, ನಾಲ್ಕನೆಯ ಆವೃತ್ತಿ, 1968, ಪುಟ 35
  4. ಆದಾಗ್ಯೂ, ವಿಮಾ ಮಾಡಿದ ವಸ್ತುವಿನ ನಷ್ಟವು ವಿಮಾದಾರನ ನಷ್ಟವನ್ನು ಸಮಾಧಾನಗೊಳಿಸುವುದಿಲ್ಲ. ನಿರ್ದಿಷ್ಟ ವಿಮೆಯ ವಿಧಗಳು, ಉದಾ. ಕಾರ್ಮಿಕರ ಪರಿಹಾರ ಮತ್ತು ವೈಯಕ್ತಿಕ ವಾಹನದಲ್ಲಿರುವ ಸಂಪೂರ್ಣ ವಿಮೆರಕ್ಷಣೆಯನ್ನು ಹೊಂದಿರುವ ಗಾಯಗೊಂಡ ವ್ಯಕ್ತಿಯು ಕಾನೂನು ಅಗತ್ಯಕತೆಗಳಿಗೆ ಬದ್ಧನಾಗಿರುತ್ತಾನೆ. ಐಬಿಡ್, ಪುಟ 35
  5. ಐಬಿಡ್, ಪು 35
  6. "ಆರ್ಕೈವ್ ನಕಲು". Archived from the original on 2009-09-07. Retrieved 2009-11-12.
  7. ಫಿಜ್ಪ್ಯಾಟ್ರಿಕ್‌, ಸೀನ್‌ರವರ ಫಿಯರ್ ಇಸ್ ದ ಕೀ: ವಿಮಾಪತ್ರದ ಜವಾಬ್ದಾರಿಯ ನಿರ್ವಹಣೆ ಚಕ್ರಗಳಿಗೆ ನೈತಿಕ ಮಾರ್ಗಸೂಚಿಗಳು 10 Conn. Ins. L.J. 255 (2004).
  8. ಉದಾ. ವಾನ್‌, E. J., 1997, ರಿಸ್ಕ್ ಮ್ಯಾನೇಜ್‌ಮೆಂಟ್‌ ನೋಡಿ, ನ್ಯೂಯಾರ್ಕ್‌: ವಿಲೀ.
  9. "ಮತ್ತು ನಾನು ಜುಯೆನಾದಲ್ಲಿನ ನಮ್ಮ ಹಡಗನ್ನು ಸುರಕ್ಷಿತವಾಗಿ ತಲುಪುವುದಕ್ಕಾಗಿ ನನ್ನದೇ ಹೆಸರಿನಲ್ಲಿ ಮಾಡಿದ ನೂರು ಪೌಂಡ್‌ಗಳ ಎರಡು ವಿಮಾ ಪಾಲಿಸಿಗಳನ್ನು ಲಂಡನಿನ ಮುಖ್ಯಧಿಕಾರಿ ಡಾಕ್ಟರ್ ಡ್ಯುಕ್‌ರವರ ಕೈಯಲ್ಲಿ ಮರೆತುಬಿಟ್ಟು ಬಂದಿದ್ದರು, ಆಹಾರ ಪದಾರ್ಥದಿಂದ (ದೇವರು ನಿಷೇಧಿಸಿದ) ನಾವು ಯಶಸ್ವಿಯಾಗದಿದ್ದರೆ, ನನಗೆ ಅದರಿಂದ ಅನುಕೂಲವಾಗುತ್ತಿತ್ತು ಎಂದು ನಾವು ಕಸಿನ್ ಥೋಮಸ್ ಮಚೆಲ್‌ಗೆ ಹೇಳಿದೆ... ಒಂದು ವರ್ಷಕ್ಕೆ ನನಗೆ ಇನ್ನೊಂದು ನೂರು ಪೌಂಡ್‌ಗಳ ಇನ್ನೊಂದು ವಿಮಾರಕ್ಷಣೆ ಇದೆ ಎಂದು ಡಾಕ್ಟರ್ ಅರ್ಥರ್ ಡ್ಯುಕ್‌ರವರು ಹೇಳಿದರೂ ಸಹ, ಒಂದುವೇಳೆ ನಾನು ಆ ಸಮಯದೊಳಗೆ ಸತ್ತರೆ, ಥೋಮಸ್ ಮಚೆಲ್‌ರವರ ಸಂಬಂಧಿಗೆ ವಿಮಾಮೊತ್ತವನ್ನು ಪಾವತಿಸುವಂತೆ ಡಾಕ್ಟರ್ ಡ್ಯುಕ್‌‌ರವರಿಗೆ ಹೇಳಿದ್ದೇನು..." ರಾಬರ್ಟ್‌ ಹೇಮನ್‌ನ ಮರಣಶಾಸನ, 1628:ಕ್ಯಾಟರ್‌ಬ್ಯುರಿಯ ರಾಜಾದಿಕಾರದ ನ್ಯಾಯಾಲಯದ ದಾಖಲೆಗಳು, ಗ್ರಂಥಸೂಚಿ ಉಲ್ಲೇಖ PROB 11/163
  10. "Insurance". turtlemint.com.
  11. Insurance Information Institute. "Business insurance information. What does a business owners policy cover?".
  12. Insurance Information Institute. "What is auto insurance?".
  13. Insurance Information Institute. "What is homeowners insurance?".
  14. ಮಾರ್ಗರೇಟ್‌ E. ಲಿಂಚ್‌, ಸಂಪಾದಕ, "ಹೆಲ್ತ ಇನ್ಸುರೆನ್ಸ್ ಟರ್ಮಿನಾಲಜಿ," ಅಮೆರಿಕಾದ ಆರೋಗ್ಯ ವಿಮಾ ಒಕ್ಕೂಟ, 1992, ISBN 1-879143-13-5
  15. http://www.ifsl.org.uk/upload/Insurance%20Update%202008.pdf PDF (365 KB) ಪುಟ 16
  16. ಗ್ರೇಗೊರಿ D. ಸ್ಕೀರಸ್‌ (2003) ಜನಾಂಗೀಯ ವರ್ಣನೆ, ವಿಮೆಯ ಶೈಲಿ: ವಿಮೆ ರೆಡ್‌ಲೈನಿಂಗ್‌ ಮತ್ತು ಮಹಾನಗರ ಪ್ರದೇಶಗಳ ಅಸಮವಾದ ಅಭಿವೃದ್ಧಿ ಜರ್ನಲ್ ಆಫ್‌ ಅರ್ಬನ್ ಅಫೈರ್ಸ್‌ ಸಂಪುಟ 25 ಸಂಚಿಕೆ 4 ಪುಟ 391-410, ನವೆಂಬರ್‌ 2003
  17. Insurance Information Institute. "Issues Update: Regulation Modernization". Retrieved 2008-11-11.
  18. "(ಮೂಲ: ವಿಮೆ IP ಕಿರಹೊತ್ತಿಗೆ, ಡಿಸೆಂಬರ್‌ 15, 2006)". Archived from the original on 2007-09-27. Retrieved 2009-11-12.
  19. ಬಕೋಸ್‌, ನೋವೋಟಾರ್ಸ್ಕಿ, “ಆನ್ ಎಕ್ಸ್‌ಪಿರಿಮೆಂಟ್ ಇನ್ ಬೆಟರ್ ಪೇಟೆಂಟ್ ಎಕ್ಸಾಮಿನೇಷನ್‌”, ಇನ್ಸುರೆನ್ಸ್‌ IP ಕಿರುಹೊತ್ತಿಗೆ, ಡಿಸೆಂಬರ್ 15, 2008


ಹೊರಗಿನ ಕೊಂಡಿಗಳು[ಬದಲಾಯಿಸಿ]



"https://kn.wikipedia.org/w/index.php?title=ವಿಮೆ&oldid=1161145" ಇಂದ ಪಡೆಯಲ್ಪಟ್ಟಿದೆ