ವಿನೋದ್ ಕಾಂಬ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿನೋದ್ ಕಾಂಬ್ಳಿ
ವಿನೋದ್ ಕಾಂಬ್ಳಿ
ಮೂಲ: [೧], ಫೆಬ್ರುವರಿ ೪ ೨೦೦೬

ವಿನೋದ್ ಕಾಂಬ್ಳಿ ಇವರು ಭಾರತ ತಂಡದ ದಾಂಡಿಗರಾಗಿದ್ದರು. ಇವರು ಸಚಿನ್ ತೆಂಡೂಲ್ಕರ್ ಜೊತೆಗೆ ಶಾಲಾ ಕ್ರಿಕೆಟ್ನಲ್ಲಿ ೬೬೪ರನ್ನುಗಳ ಜೊತೆಯಾಟದಲ್ಲಿ ಸಹಭಾಗಿಯಾದಾಗ ಪ್ರಸಿದ್ಧಿಗೆ ಬಂದರು. ಇವರು ಮುಂಬಯಿ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು. ಇವರು ದಲಿತ ಕುಟುಂಬವೊಂದರಲ್ಲಿ ಹುಟ್ಟಿ, ತಮ್ಮ ಸತತ ಸಾಧನೆಯ ನೆರವಿನಿಂದ ಭಾರತೀಯ ತಂಡದಲ್ಲಿ ಸ್ಥಾನ ಪಡೆದರು. ಇವರು ಉತ್ತಮ ದಾಂಡಿಗರಾಗಿದ್ದರೂ ತಮ್ಮ ನಿರೀಕ್ಷಿತ ಸಾಧನೆಯ ಮಟ್ಟವನ್ನು ತಲುಪಲಿಲ್ಲ. ವೇಗದ ಬೌಲರಗಳ ಶಾರ್ಟ್ ಪಿಚ್ ಎಸೆತಗಳನ್ನು ಸಮರ್ಥವಾಗಿ ಎದುರಿಸಲು ತೋರಿದ ವಿಫಲತೆ ಮತ್ತು ಅಶಿಸ್ತಿನಿಂದಾಗಿ ಇವರನ್ನು ತಂಡದಿಂದ ಕೈಬಿಡಲಾಯಿತು. ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಮರಳಲು ಅನೇಕ ಅವಕಾಶಗಳು ಸಿಕ್ಕರೂ ಇವರು ಅವುಗಳನ್ನು ಉಪಯೋಗಿಸಿಕೊಳ್ಳಲು ವಿಫಲರಾದರು. ಇವರು ತಮ್ಮ ಮೊದಲ ೭ ಪಂದ್ಯಗಳಲ್ಲಿ ೨ ದ್ವಿಶತಕ ಮತ್ತು ೨ ಶತಕಗಳನ್ನು ಸಿಡಿಸಿದ್ದರು.

ವಿನೋದ್ ಕಾಂಬ್ಳಿ ಟೆಸ್ಟ್ ಸಾಧನೆ
ಟೆಸ್ಟ್ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು
೧೭ ೧೦೮೪ ೫೪.೨೦
ವಿನೋದ್ ಕಾಂಬ್ಳಿ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು ರನ್ನುಗಳು ಸರಾಸರಿ ಶತಕಗಳು ಅರ್ಧಶತಕಗಳು
೧೦೪ ೨೪೭೭ ೩೨.೫೯ ೧೪

ಬಾಹ್ಯ ಸಂಪರ್ಕ[ಬದಲಾಯಿಸಿ]