ವಿದ್ಯುತ್ ಪ್ರವಾಹ ಮಾಪಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಲಿಸುವ ಕಬ್ಬಿಣದ ವಿದ್ಯುತ್ ಪ್ರವಾಹ ಮಾಪಕದ ಪ್ರದರ್ಶನ ಮಾದರಿ. ಸುರಳಿಯ ಮೂಲಕ ವಿದ್ಯುತ್ ಪ್ರವಾಹವು ಹೆಚ್ಚಾದಂತೆ, ಸುರುಳಿಯ ಬಳಿ ಇನ್ನಷ್ಟು ಪ್ಲಂಜರ್ ಎಳೆಯಲ್ಪಡುತ್ತದೆ ಮತ್ತು ಸೂಚಕವು ಬಲ ಭಾಗಕ್ಕೆ ತಿರುಗುತ್ತದೆ.
ವಿದ್ಯುತ್ ಪ್ರವಹಿಸುತ್ತಿರುವ ತಂತಿಯನ್ನು ಮಾಪನ ಮಾಡಬೇಕು.ಪುನಃಸ್ಥಾಪಕ ಬಲವನ್ನು ಒದಗಿಸುತ್ತಿರುವ ಸ್ಪ್ರಿಂಗ್. ಈ ಉದಾಹರಣೆಯು ಕಲ್ಪನಾತ್ಮಕವಾಗಿದೆ; ಪ್ರಾಯೋಗಿಕ ಮೀಟರ್‌ನಲ್ಲಿ, ಕಬ್ಬಿಣದ ದಿಂಡು ನಿಶ್ಚಲವಾಗಿರುತ್ತದೆ, ಮತ್ತು ಮುಂದಿನ ಮತ್ತು ಹಿಂದಿನ ಸುರುಳಿಯಾಕಾರದ ಸ್ಪ್ರಿಂಗ್‌ಗಳು ಸುರುಳಿಗೆ ವಿದ್ಯುತ್ ಅನ್ನು ಕೊಂಡೊಯ್ಯುತ್ತವೆ ಮತ್ತು ಅದು ಆಯತಾಕಾರದ ಬಾಬಿನ್ನಿನ ಮೇಲೆ ಬೆಂಬಲಿತವಾಗಿರುತ್ತದೆ. ಹೆಚ್ಚಿನದಾಗಿ, ಖಾಯಂ ಅಯಸ್ಕಾಂತದ ಧ್ರುವಗಳು ವೃತ್ತದ ಕಮಾನಾಗಿರುತ್ತದೆ.
250 ಪಶ್ಚಿಮ ಮೂವತ್ತೊಂದನೇ ರಸ್ತೆಯಲ್ಲಿರುವ ಹಳೆಯ ಪೆನ್ ಸ್ಟೇಶನ್ ಟರ್ಮಿನಲ್ ಸರ್ವೀಸ್ ಪ್ಲಾಂಟ್‌ನಲ್ಲಿನ ವಿದ್ಯುತ್ ಪ್ರವಾಹ ಮಾಪಕ
ಸೊನ್ನೆ-ಕೇಂದ್ರೀಕೃತ ವಿದ್ಯುತ್ ಪ್ರವಾಹ ಮಾಪಕ
ಅದರ ವೈಶಿಷ್ಟ್ಯದ ರೇಖೀಯ ರಹಿತ ಪ್ರಮಾಣ ಮತ್ತು ಚಿಕ್ಕ ಪ್ರಮಾಣದ ಪಿಸಿ ಮೇಲೆ ಇರಿಸಿರುವ ಚಲಿಸುವ ವಿದ್ಯುತ್ ಪ್ರವಾಹ ಸಂಕೇತದೊಂದಿಗೆ ಒಂದು ಹಳೆಯ ಚಲಿಸುವ ಕಬ್ಬಿಣದ ವಿದ್ಯುತ್ ಪ್ರವಾಹ ಮಾಪಕ.

ವಿದ್ಯುತ್ ಪ್ರವಾಹ ಮಾಪಕ ಎನ್ನುವುದು ಮಾಪನ ಉಪಕರಣವಾಗಿದ್ದು, ಇದನ್ನು ವಿದ್ಯುನ್ಮಂಡಲದಲ್ಲಿರುವ ವಿದ್ಯುತ್ ಪ್ರವಾಹವನ್ನು ಮಾಪನ ಮಾಡಲು ಬಳಸಲಾಗುತ್ತದೆ. ವಿದ್ಯುತ್ ಪ್ರವಾಹವನ್ನು ಆಂಪಿಯರ್ಗಳಲ್ಲಿ (A) ಮಾಪನ ಮಾಡಲಾಗುತ್ತದೆ, ಆದ್ದರಿಂದ ಈ ಹೆಸರು ಬಂದಿದೆ. ಮಿಲಿ ಆಂಪಿಯರ್ ಅಥವಾ ಮೈಕ್ರೋ ಆಂಪಿಯರ್ ಶ್ರೇಣಿಗಳಲ್ಲಿ ಸಣ್ಣ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಮಾಪನ ಮಾಡಲು ಬಳಸಲಾಗುವ ಉಪಕರಣಗಳನ್ನು ಮಿಲಿಆಮ್ಮಿಟರ್‌ಗಳು ಅಥವಾ ಮೈಕ್ರೋಆಮ್ಮೀಟರ್ ಗಳು ಎಂದು ಸೂಚಿಸಲಾಗುತ್ತದೆ. ಮೊದಲಿನ ವಿದ್ಯುತ್ ಪ್ರವಾಹ ಮಾಪಕಗಳು ಪ್ರಯೋಗಾಲಯ ಉಪಕರಣಗಳಾಗಿದ್ದು, ಕಾರ್ಯನಿರ್ವಹಣೆಗಾಗಿ ಕೇವಲ ಭೂಮಿಯ ಅಯಸ್ಕಾಂತೀಯ ಕ್ಷೇತ್ರವನ್ನು ಅವಲಂಬಿಸಿತ್ತು. 19 ನೇ ಶತಮಾನದ ಅಂತ್ಯದ ವೇಳೆಗೆ, ಯಾವುದೇ ಸ್ಥಾನದಲ್ಲಿಡಬಹುದಾದ ಸುಧಾರಿತ ಉಪಕರಣಗಳನ್ನು ವಿನ್ಯಾಸಗೊಳಿಸಲಾಯಿತು ಮತ್ತು ವಿದ್ಯುತ್ ಶಕ್ತಿಯ ವ್ಯೂಹಗಳಲ್ಲಿ ನಿಖರವಾದ ಮಾಪನಕ್ಕೆ ಇದು ಸಾಧ್ಯವಾಗಿಸಿತು,

ಇತಿಹಾಸ[ಬದಲಾಯಿಸಿ]

ವಿದ್ಯುತ್ ಪ್ರವಾಹ, ಅಯಸ್ಕಾಂತೀಯ ಕ್ಷೇತ್ರಗಳು ಮತ್ತು ಭೌತಿಕ ಶಕ್ತಿಗಳ ನಡುವಿನ ಸಂಬಂಧವನ್ನು ಮೊದಲು ಹ್ಯಾನ್ಸ್ ಕ್ರಿಶ್ಚಿಯನ್ ಓರ್ಸ್ಟೆಡ್ ಅವರು ಗಮನಿಸಿದರು, ಅವರು ಪಕ್ಕದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿದಾಗ ದಿಕ್ಸೂಚಿಯ ಮುಳ್ಳು ಉತ್ತರದ ದಿಕ್ಕಿನಿಂದ ಪಕ್ಕಕ್ಕೆ ಬಾಗಿದ್ದನ್ನು 1820 ರಲ್ಲಿ ಗಮನಿಸಿದರು. ಈ ಪರಿಣಾಮವನ್ನು ಬಳಸಿ ವಿದ್ಯುತ್ ಪ್ರವಾಹಗಳನ್ನು ಮಾಪನ ಮಾಡಲು ಟ್ಯಾಂಜೆಂಟ್ ಗ್ಯಾಲ್ವನೋಮೀಟರ್ ಅನ್ನು ಬಳಸಲಾಗುತ್ತಿತ್ತು, ಅಲ್ಲಿ ಸೂಚಕವನ್ನು ಶೂನ್ಯ ಸ್ಥಿತಿಗೆ ಮರಳಿ ತರುವ ಪುನಃಸ್ಥಾಪಕ ಸಾಮರ್ಥ್ಯವನ್ನು ಭೂಮಿಯ ಅಯಸ್ಕಾಂತೀಯ ಕ್ಷೇತ್ರವು ಒದಗಿಸುತ್ತಿತ್ತು. ಇದು ಈ ಉಪಕರಣಗಳನ್ನು ಭೂಮಿಯ ಕ್ಷೇತ್ರದೊಂದಿಗೆ ಸರಿಹೊಂದಿಸಿದಾಗ ಮಾತ್ರ ಬಳಸಬಹುದಾಗಿತ್ತು. ಹೆಚ್ಚುವರಿ ತಂತಿಯ ಸುತ್ತುಗಳನ್ನು ಬಳಸಿ ಪರಿಣಾಮವನ್ನು ದ್ವಿಗುಣಗೊಳಿಸಲು ಉಪಕರಣದ ಸೂಕ್ಷ್ಮತೆಯನ್ನು ಹೆಚ್ಚಿಸಲಾಗುತ್ತಿತ್ತು - ಉಪಕರಣಗಳನ್ನು "ಮಲ್ಟಿಪ್ಲೈಯರ್‌ಗಳು" ಎಂದು ಕರೆಯಲಾಗುತ್ತಿತ್ತು.[೧]

ವಿಧಗಳು[ಬದಲಾಯಿಸಿ]

ಡಿ ಅರ್ಸೋನ್ವಾಲ್ ಗ್ಯಾಲ್ವನೋಮೀಟರ್ ಎನ್ನುವುದು ಚಲಿಸುವ ಸುರುಳಿ ವಿದ್ಯುತ್ ಪ್ರವಾಹ ಮಾಪಕವಾಗಿದೆ. ಇದು ಅಯಸ್ಕಾಂತೀಯ ವಿಚಲನವನ್ನು ಬಳಸುತ್ತದೆ, ಇಲ್ಲಿ ಸುರುಳಿಯ ಮೂಲಕ ಪ್ರವಹಿಸುವ ವಿದ್ಯುತ್ ಪ್ರವಾಹವು ಸುರುಳಿಯನ್ನು ಅಯಸ್ಕಾಂತೀಯ ಕ್ಷೇತ್ರದಲ್ಲಿ ಚಲಿಸುವಂತೆ ಮಾಡುತ್ತದೆ. ಸುರುಳಿಯಾದ್ಯಂತ ವೋಲ್ಟೇಜ್ ಇಳಿತವನ್ನು ಅದನ್ನು ಸೇರ್ಪಡಿಸಲಾಗುವ ಯಾವುದೇ ವಿದ್ಯುನ್ಮಂಡಲದಲ್ಲಿ ವಿದ್ಯುತ್ ಪ್ರವಾಹ ಮಾಪಕದಾದ್ಯಂತ ಪ್ರತಿರೋಧವನ್ನು ಕಡಿಮೆಗೊಳಿಸಲು ಕನಿಷ್ಠ ಪ್ರಮಾಣದಲ್ಲಿ ಇಡಲಾಗುತ್ತದೆ. ಈ ಉಪಕರಣದ ಆಧುನಿಕ ರೂಪವನ್ನು ಎಡ್‌ವರ್ಡ್ ವೆಸ್ಟನ್ಅವರು ಅಭಿವೃದ್ಧಿಪಡಿಸಿದರು, ಮತ್ತು ಇದು ಪುನಃಸ್ಥಾಪಕ ಶಕ್ತಿಯನ್ನು ಒದಗಿಸಲು ಎರಡು ಸುರುಳಿಯಾಕಾರದ ಸ್ಪ್ರಿಂಗ್ ಅನ್ನು ಬಳಸುತ್ತದೆ. ಉಪಕರಣದ ಕಬ್ಬಿಣದ ದಿಂಡು ಮತ್ತು ಅದರ ಖಾಯಂ ಅಯಸ್ಕಾಂತದ ಧ್ರುವಗಳ ನಡುವೆ ಸಮಾನ ಪ್ರಮಾಣದ ವಾಯು ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಉಪಕರಣವು ಉತ್ತಮವಾದ ಲಂಬತೆ ಮತ್ತು ನಿಖರತೆಯನ್ನು ಹೊಂದಿರುತ್ತದೆ. 25 ಮೈಕ್ರೋಆಂಪಿಯರ್‌ಗಳಿಂದ 10 ಮಿಲಿಆಂಪಿಯರ್‌ಗಳವರೆಗಿನ ವಿದ್ಯುತ್ ಪ್ರವಾಹಗಳಿಗೆ ಪೂರ್ಣ-ಪ್ರಮಾಣದ ವಿಚಲವನ್ನು ಮೂಲಭೂತ ಮೀಟರ್‌ನ ಚಲನೆಗಳು ಹೊಂದಿರಬಹುದು ಮತ್ತು ರೇಖೀಯ ಪ್ರಮಾಣಗಳನ್ನು ಹೊಂದಿರುತ್ತದೆ.[೨].

ಚಲಿಸುವ ಕಬ್ಬಿಣ ದ ವಿದ್ಯುತ್ ಪ್ರವಾಹ ಮಾಪಕಗಳು ಕಬ್ಬಿಣದ ತುಂಡನ್ನು ಬಳಸುತ್ತವೆ, ಅದು ತಂತಿಯ ಸ್ಥಿರ ಸುರುಳಿಯ ವಿದ್ಯುತ್ಕಾಂತೀಯ ಶಕ್ತಿಯಿಂದ ಪರಿಣಾಕ್ಕೊಳಗಾದಾಗ ಚಲಿಸುತ್ತದೆ. ನೇರ ಮತ್ತು ಪರ್ಯಾಯವಾಗುವ ಎರಡೂ ಪ್ರಕಾರದ ವಿದ್ಯುತ್ ಪ್ರವಾಹಗಳಿಗೆ (ಕೇವಲ ನೇರ ವಿದ್ಯುತ್ ಆಧಾರದಲ್ಲಿ ಚಲಿಸುವ ಸುರುಳಿ ವಿದ್ಯುತ್ ಪ್ರವಾಹ ಮಾಪಕಗಳಿಗೆ ವಿರುದ್ಧವಾಗಿ) ಈ ಪ್ರಕಾರದ ಮೀಟರ್ ಪ್ರತಿಸ್ಪಂದಿಸುತ್ತದೆ. ಕಬ್ಬಿಣದ ಧಾತುವು ಸೂಚಕಕ್ಕೆ ಸೇರ್ಪಡಿಸಿದ ಚಲಿಸುವ ಅಲಗನ್ನು ಮತ್ತು ಸ್ಥಿರವಾದ ಅಲಗನ್ನು ಹೊಂದಿದ್ದು, ಇವುಗಳನ್ನು ಸುರುಳಿಯು ಸುತ್ತುವರಿದಿರುತ್ತವೆ. ಸುರುಳಿಯ ಮೂಲಕ ಪರ್ಯಾಯವಾದ ಅಥವಾ ನೇರ ವಿದ್ಯುತ್ ಪ್ರವಾಹವು ಪ್ರವಹಿಸಿದಂತೆ ಮತ್ತು ಎರಡೂ ಅಲಗುಗಳಲ್ಲಿ ಅಯಸ್ಕಾಂತೀಯ ಕ್ಷೇತ್ರವನ್ನು ಉಂಟು ಮಾಡಿದಂತೆ, ಅಲಗುಗಳು ಪರಸ್ಪರ ವಿಕರ್ಷಿಸುತ್ತವೆ ಮತ್ತು ಸುರುಳಿಯಾಕಾರದ ಸ್ಪ್ರಿಂಗ್ ಒದಗಿಸುವ ಪುನಃಸ್ಥಾಪಕ ಸಾಮರ್ಥ್ಯದ ವಿರುದ್ಧ ಚಲಿಸುವ ಅಲಗು ಪಕ್ಕಕ್ಕೆ ಬಾಗುತ್ತದೆ.[೨] ಈ ಮೀಟರ್‌ಗಳ ರೇಖೀಯ ರಹಿತ ಮಾಪಕವು ಇದನ್ನು ಜನಪ್ರಿಯವಲ್ಲದಂತೆ ಮಾಡಿವೆ.

ವಿದ್ಯುದ್ಬಲವಿಜ್ಞಾನ ಚಲನೆಯು ಡಿ ಆರ್ಸೋನ್ವಾಲ್ ಚಲನೆಯ ಖಾಯಂ ಅಯಸ್ಕಾಂತದ ಬದಲಿಗೆ ವಿದ್ಯುತ್ಕಾಂತವನ್ನು ಬಳಸುತ್ತದೆ. ಈ ಉಪಕರಣವು ಪರ್ಯಾಯ ಮತ್ತು ನೇರ ವಿದ್ಯುತ್ ಪ್ರವಾಹಗಳೆರಡಕ್ಕೂ ಪ್ರತಿಸ್ಪಂದಿಸುತ್ತದೆ.[೨]

ಉಷ್ಣ-ತಂತಿ ವಿದ್ಯುತ್ ಪ್ರವಾಹ ಮಾಪಕದಲ್ಲಿ , ತಂತಿಯ ಮೂಲಕ ವಿದ್ಯುತ್ ಪ್ರವಾಹವು ಪ್ರವಹಿಸುತ್ತದೆ ಮತ್ತು ಅದು ಬಿಸಿಯಾದಂತೆ ವಿಸ್ತರಿಸಲ್ಪಡುತ್ತದೆ. ಈ ಉಪಕರಣಗಳು ನಿಧಾನಗತಿಯ ಪ್ರತಿಕ್ರಿಯೆ ಸಮಯ ಮತ್ತು ಕಡಿಮೆ ನಿಖರತೆಯನ್ನು ಹೊಂದಿದ್ದರೂ, ಅವುಗಳನ್ನು ಕೆಲವೊಮ್ಮೆ ರೇಡಿಯೋ-ಆವರ್ತನ ವಿದ್ಯುತ್ ಪ್ರವಾಹವನ್ನು ಮಾಪನ ಮಾಡಲು ಬಳಸಲಾಗುತ್ತದೆ.[೨]

ಷಂಟ್ ರೋಧಕದಾದ್ಯಂತ ವೋಲ್ಟೇಜ್ ಅನ್ನು ಮಾಪನ ಮಾಡಲು ಡಿಜಿಟಲ್ ವಿದ್ಯುತ್ ಪ್ರವಾಹ ಮಾಪಕ ವಿನ್ಯಾಸಗಳು ಅನಲಾಗ್‌ನಿಂದ ಡಿಜಿಟಲ್ ಪರಿವರ್ತಕ (ಎಡಿಸಿ) ಅನ್ನು ಬಳಸುತ್ತವೆ; ಷಂಟ್ ಮುಖಾಂತರ ವಿದ್ಯುತ್ ಪ್ರವಾಹವನ್ನು ಓದಲು ಡಿಜಿಟಲ್ ಪ್ರದರ್ಶಕವನ್ನು ಅಳತೆ ಗುರುತು ಮಾಡಿರಲಾಗುತ್ತದೆ.

ಸಂಯೋಜಿತಗೊಳಿಸುವ ವಿದ್ಯುತ್ ಪ್ರವಾಹ ಮಾಪಕಗಳು ಎಂದು ಉಲ್ಲೇಖಿಸಲಾಗುವ ಹಲವು ಶ್ರೇಣಿಯ ಸಾಧನಗಳೂ ಸಹ ಇವೆ.[೩][೪] ಈ ವಿದ್ಯುತ್ ಪ್ರವಾಹ ಮಾಪಕಗಳಲ್ಲಿ ವಿದ್ಯುತ್ ಪ್ರವಾಹದ ಪ್ರಮಾಣವನ್ನು ವಿದ್ಯುತ್ ಪ್ರವಾಹದ ಉತ್ಪನ್ನ ಮತ್ತು ಸಮಯದ ಪರಿಣಾಮವನ್ನು ನೀಡುವಂತೆ ಸಮಯಕ್ಕೆ ಮೀರಿ ಮೊತ್ತಗೊಳಿಸಿರಲಾಗುತ್ತದೆ, ಇದು ಆ ವಿದ್ಯುತ್ ಪ್ರವಾಹದೊದಿಗೆ ವರ್ಗಾಯಿತವಾಗ ಶಕ್ತಿಗೆ ಸಮಾನುಪಾತದಲ್ಲಿರುತ್ತದೆ. ಇವುಗಳನ್ನು ಶಕ್ತಿಯ ಮೀಟರ್‌ಗಳು (ವ್ಯಾಟ್-ಅವರ್ ಮೀಟರ್‌ಗಳಿಗೆ) ಅಥವಾ ಬ್ಯಾಟರಿ ಅಥವಾ ಧಾರಕದ ಸಂಚಿತ ಶಕ್ತಿಯನ್ನು ಅಂದಾಜು ಮಾಡಲು ಬಳಸಬಹುದು.

ಪಿಕೋಅಮ್ಮೀಟರ್[ಬದಲಾಯಿಸಿ]

ಪಿಕೋ ವಿದ್ಯುತ್ ಪ್ರವಾಹ ಮಾಪಕ ಅಥವಾ ಪಿಕೋ ಆಮ್ಮೀಟರ್ ಎನ್ನುವುದು ಕಡಿಮೆ ಪ್ರಮಾಣದ ವಿದ್ಯುತ್ ಪ್ರವಾಹವನ್ನು, ಸಾಮಾನ್ಯವಾಗಿ ಕಡಿಮೆ ಮಟ್ಟದ ಪಿಕೋಆಂಪಿಯರ್‌ ಶ್ರೇಣಿಯಿಂದ ಹಿಡಿದು ಹೆಚ್ಚಿಗೆ ಮಟ್ಟದ ಮಿಲಿಆಂಪಿಯರ್ ಶ್ರೇಣಿಯವರೆಗೆ ಮಾಪನ ಮಾಡಲು ಬಳಸಲಾಗುತ್ತದೆ. ಪಿಕೋ ವಿದ್ಯುತ್ ಪ್ರವಾಹ ಮಾಪಕಗಳನ್ನು ಮಾಪನ ಮಾಡುವ ವಿದ್ಯುತ್‌ ಪ್ರವಾಹವು ಮಲ್ಟಿಮೀಟರ್‌ಗಳಂತಹ ಇತರೆ ಸಾಧನಗಳ ಸೂಕ್ಷ್ಮತೆಯ ತಾತ್ವಿಕ ಮಿತಿಗಳಿಗಿಂತ ಕಡಿಮೆ ಇರುವಲ್ಲಿ ಬಳಸಲಾಗುತ್ತದೆ.

ಹೆಚ್ಚಿನ ಪಿಕೋ ವಿದ್ಯುತ್ ಪ್ರವಾಹ ಮಾಪಕಗಳು "ವರ್ಚುವಲ್ ಶಾರ್ಟ್" ತಂತ್ರಜ್ಞಾನವನ್ನು ಬಳಸುತ್ತವೆ ಮತ್ತು ಬಹು ಮಾಪನದ ದಶಕಗಳನ್ನು ಒಳಪಡಿಸಿಕೊಳ್ಳಲು ಬದಲಾಯಿಸಲಾಗುವಂತೆ ಹಲವು ವಿವಿಧ ಮಾಪನದ ಶ್ರೇಣಿಗಳನ್ನು ಹೊಂದಿರುತ್ತವೆ. ಇತರ ಆಧುನಿಕ ಪಿಕೋ ವಿದ್ಯುತ್ ಪ್ರವಾಹ ಮಾಪಕಗಳು ಶ್ರೇಣಿ ಬದಲಾಯಿಸುವಿಕೆ ಮತ್ತು ಸಂಬಂಧಿತ ವೋಲ್ಟೇಜ್ ಕ್ಷಿಪ್ರ ಏರಿಕೆಗಳನ್ನು ತೆಗೆದುಹಾಕುವ ಲಾಗ್ ಸಂಕೋಚನ ಮತ್ತು "ಪ್ರವಾಹ ತಗ್ಗುವಿಕೆ" ವಿಧಾನವನ್ನು ಬಳಸುತ್ತವೆ.[೫]

ಬಳಕೆ[ಬದಲಾಯಿಸಿ]

ಬಹುಪಾಲು ವಿದ್ಯುತ್ ಪ್ರವಾಹ ಮಾಪಕಗಳನ್ನು ಮಾಪನ ಮಾಡುವ ವಿದ್ಯುತ್ ಪ್ರವಾಹವನ್ನು ಹೊತ್ತೊಯ್ಯುವ ವಿದ್ಯುನ್ಮಂಡಲದೊಂದಿಗೆ ಸರಣಿಯಲ್ಲಿ (ಅತ್ಯಲ್ಪ ಭಾಗದ ಆಂಪೀಯರ್‌ಗಳಿಗೆ) ಅಥವಾ ಅವುಗಳ ಷಂಟ್ ರೋಧಕಗಳು ಅದೇ ರೀತಿ ಸರಣಿಯಲ್ಲಿರುವಂತೆ ಸಂಪರ್ಕಿಸಿರಲಾಗುತ್ತದೆ. ಎರಡೂ ಸಂದರ್ಭಗಳಲ್ಲಿ, ಮೀಟರ್ ಮೂಲಕ ಅಥವಾ (ಹೆಚ್ಚಿನದಾಗಿ) ಅದರ ಷಂಟ್ ಮೂಲಕ ವಿದ್ಯುತ್ ಪ್ರವಹಿಸುತ್ತದೆ. ಅವುಗಳನ್ನು ವೋಲ್ಟೇಜ್‌ನ ಮೂಲಕ್ಕೆ ಸಂಪರ್ಕಿಸಬಾರದು; ಅವುಗಳನ್ನು ಕನಿಷ್ಠ ಹೊರೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ, ಅಂದರೆ ಇದು ವಿದ್ಯುತ್ ಪ್ರವಾಹ ಮಾಪಕದಾದ್ಯಂತ ವೋಲ್ಟೇಜ್ ಕುಸಿತವನ್ನು ಉಲ್ಲೇಖಿಸುತ್ತದೆ ಮತ್ತು ಇದು ಅತ್ಯಲ್ಪ ಭಾಗದ ವೋಲ್ಟ್ ಅಗಿದೆ. ಅವುಗಳು ಬಹುಪಾಲು ಶಾರ್ಟ್ ಸರ್ಕೀಟ್ ಆಗಿರುತ್ತದೆ.

ಸಾಮಾನ್ಯವಾದ ವೆಸ್ಟನ್-ಪ್ರಕಾರದ ಮೀಟರ್ ಚಲನೆಗಳು ಹೆಚ್ಚಿನದಾಗಿ ಕೇವಲ ಮಿಲಿಆಂಪಿಯರ್‌ಗಳನ್ನು ಮಾತ್ರ ಮಾಪನ ಮಾಡುತ್ತವೆ, ಏಕೆಂದರೆ ಸ್ಪ್ರಿಂಗ್‌ಗಳು ಮತ್ತು ಪ್ರಾಯೋಗಿಕ ಸರಣಿಗಳು ಕೇವಲ ಸೀಮಿತ ವಿದ್ಯುತ್ ಪ್ರವಾಹವನ್ನು ಮಾತ್ರ ತೆಗೆದುಕೊಂಡು ಹೋಗಬಲ್ಲವು. ದೊಡ್ಡ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಮಾಪನ ಮಾಡಲು ಮೀಟರ್‌ನೊಂದಿಗೆ ಸಮಾನಾಂತರವಾಗಿ ಷಂಟ್ ಎಂದು ಕರೆಯಲಾಗುವ ರೋಧಕವನ್ನು ಇರಿಸಬೇಕು. ಷಂಟ್‌ಗಳ ಪ್ರತಿರೋಧಗಳು ಪೂರ್ಣಾಂಕದಿಂದ ಅತ್ಯಲ್ಪ ಭಾಗದ ಮಿಲಿಓಮ್ ಶ್ರೇಣಿಯಲ್ಲಿರುತ್ತದೆ. ಬಹುಪಾಲು ಎಲ್ಲಾ ವಿದ್ಯುತ್ ಪ್ರವಾಹಗಳು ಷಂಟ್ ಮುಖಾಂತರ ಪ್ರವಹಿಸುತ್ತದೆ ಮತ್ತು ಕೇವಲ ಸ್ಪಲ್ಪವೇ ಭಾಗ ಮೀಟರ್ ಮುಖಾಂತರ ಪ್ರವಹಿಸುತ್ತದೆ. ಇದು ದೊಡ್ಡ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಮಾಪನ ಮಾಡಲು ಸಹಾಯ ಮಾಡುತ್ತದೆ. ಸಾಂಪ್ರದಾಯಿಕವಾಗಿ, ಷಂಟ್‌ನೊಂದಿಗೆ ಬಳಸಲಾಗುವ ಮೀಟರ್ 50 mV ನ ಪೂರ್ಣ-ಪ್ರಮಾಣದ ವಿಚಲನ (ಎಫ್ಎಸ್‌ಡಿ) ಅನ್ನು ಹೊಂದಿರುತ್ತದೆ, ಆದ್ದರಿಂದ ಷಂಟ್‌ಗಳನ್ನು ಅವುಗಳು ಪೂರ್ಣ ಪ್ರಮಾಣದ ವಿದ್ಯುತ್ತನ್ನು ಸಾಗಿಸುತ್ತಿರುವಾಗ 50 mV ನಷ್ಟು ವೋಲ್ಟೇಜ್ ಕುಸಿತವನ್ನು ಉತ್ಪನ್ನ ಮಾಡುವಂತೆ ಸಾಮಾನ್ಯವಾಗಿ ವಿನ್ಯಾಸ ಮಾಡಲಾಗಿರುತ್ತದೆ.

ಸೊನ್ನೆ-ಕೇಂದ್ರೀಕೃತ ವಿದ್ಯುತ್ ಪ್ರವಾಹ ಮಾಪಕಗಳನ್ನು ಎರಡೂ ಧ್ರುವೀಯತೆಗಳಲ್ಲಿ ವಿದ್ಯುತ್ ಪ್ರವಾಹವನ್ನು ಮಾಪನ ಮಾಡುವ ಅನ್ವಯಿಸುವಿಕೆಗಳಲ್ಲಿ ಬಳಸಲಾಗುತ್ತದೆ, ಇದು ವೈಜ್ಞಾನಿಕ ಮತ್ತು ಕೈಗಾರಿಕಾ ಸಾಧನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಸೊನ್ನೆ-ಕೇಂದ್ರೀಕೃತ ವಿದ್ಯುತ್ ಪ್ರವಾಹ ಮಾಪಕಗಳನ್ನು ಸಾಮಾನ್ಯವಾಗಿ ಬ್ಯಾಟರಿಯೊಂದಿಗೆ ಸರಣಿಯಲ್ಲಿ ಇರಿಸಲಾಗುತ್ತದೆ. ಈ ಬಳಕೆಯಲ್ಲಿ, ಬ್ಯಾಟರಿಗೆ ವಿದ್ಯುತ್ ಪೂರೈಕೆಯು ಮಾಪಕದ ಒಂದು ಭಾಗಕ್ಕೆ ಮುಳ್ಳನ್ನು ತಿರುಗಿಸುತ್ತದೆ (ಸಾಮಾನ್ಯವಾಗಿ ಬಲ ಭಾಗಕ್ಕೆ) ಮತ್ತು ಬ್ಯಾಟರಿಯ ವಿಸರ್ಜಿಸುವಿಕೆಯು ಮುಳ್ಳನ್ನು ಮತ್ತೊಂದು ಭಾಗಕ್ಕೆ ತಿರುಗಿಸುತ್ತದೆ. ಕಾರುಗಳು ಮತ್ತು ಲಾರಿಗಳಲ್ಲಿ ಹೆಚ್ಚಿ ಪ್ರಮಾಣದ ವಿದ್ಯುತ್ ಪ್ರವಾಹವನ್ನು ಪರೀಕ್ಷಿಸಲು ವಿಶೇಷ ಪ್ರಕಾರದ ಸೊನ್ನೆ-ಕೇಂದ್ರೀಕೃತ ವಿದ್ಯುತ್ ಪ್ರವಾಹ ಮಾಪಕವು ಸೂಚಕವನ್ನು ಚಲಿಸುವ ತಿರುಗಣೆ ಅಯಸ್ಕಾಂತದ ತುಂಡನ್ನು ಹೊಂದಿರುತ್ತದೆ ಮತ್ತು ಯಾವುದೇ ವಿದ್ಯುತ್ ಪ್ರವಾಹವಿಲ್ಲದೇ ಸೂಚಕವನ್ನು ಮಧ್ಯದಲ್ಲಿ ಇರಿಸುವ ಸ್ಥಿರವಾದ ಅಯಸ್ಕಾಂತದ ತುಂಡನ್ನು ಹೊಂದಿರುತ್ತದೆ. ಮಾಪನ ಮಾಡಬೇಕಾದ ವಿದ್ಯುತ್ ಪ್ರವಹಿಸುತ್ತಿರುವ ತಂತಿಯ ಸುತ್ತಲಿನ ಅಯಸ್ಕಾಂತೀಯ ಕ್ಷೇತ್ರವು ಚಲಿಸುತ್ತಿರುವ ಅಯಸ್ಕಾಂತವನ್ನು ತಿರುಗಿಸುತ್ತದೆ.

ವಿದ್ಯುತ್ ಪ್ರವಾಹ ಮಾಪಕದ ಷಂಟ್ ಕಡಿಮೆ ಪ್ರತಿರೋಧಕವನ್ನು ಹೊಂದಿರುವುದರಿಂದ, ವಿದ್ಯುತ್ ಪ್ರವಾಹ ಮಾಪವನ್ನು ವೋಲ್ಟೇಜ್ ಮೂಲದೊಂದಿಗೆ ಸಮಾನಾಂತರವಾಗಿ ಜೋಡಿಸುವುದು ಶಾರ್ಟ್ ಸರ್ಕ್ಯೂಟ್ಗೆ ಕಾರಣವಾಗುತ್ತದೆ, ಅತೀ ಹೆಚ್ಚು ಅಂದರೆ ಫ್ಯೂಸ್ ಸುಡುವ ಮೂಲಕ ಉಪಕರಣ ಮತ್ತು ಜೋಡಣೆಗೆ ಹಾನಿ ಮಾಡಬಹುದು ಮತ್ತು ಗಾಯವನ್ನುಂಟುಮಾಡಬಹುದು.

ಎಸಿ ವಿದ್ಯುನ್ಮಂಡಲಗಳಲ್ಲಿ, ವಾಹಕದ ಸುತ್ತಲಿನ ಅಯಸ್ಕಾಂತೀಯ ಕ್ಷೇತ್ರವನ್ನು ಸಣ್ಣ ಪ್ರಮಾಣದ ಎಸಿ ವಿದ್ಯುತ್ ಪ್ರವಾಹಕ್ಕೆ ವಿದ್ಯುತ್ ಪರಿವರ್ತಕವು ಬದಲಾಯಿಸುತ್ತದೆ, ಸಾಮಾನ್ಯವಾಗಿ ಪೂರ್ಣ ಪ್ರಮಾಣದ ವಿದ್ಯುತ್ ಪ್ರವಾಹದಲ್ಲಿ 1 Aಅಥವಾ 5 A ಆಗಿರುತ್ತದೆ ಮತ್ತು ಅದನ್ನು ಮೀಟರ್ ಸುಲಭವಾಗಿ ಓದಬಹುದು. ಇದೇ ರೀತಿಯಲ್ಲಿ, ಹಾಲ್ ಪರಿಣಾಮ ಅಯಸ್ಕಾಂತ ಕ್ಷೇತ್ರ ಸಂವೇದಕವನ್ನು ಬಳಸಿಕೊಂಡು ನಿಖರವಾದ ಎಸಿ/ಡಿಸಿ ಸಂಪರ್ಕ-ರಹಿತ ವಿದ್ಯುತ್ ಪ್ರವಾಹ ಮಾಪಕಗಳನ್ನು ನಿರ್ಮಿಸಲಾಗಿದೆ. ಕೈಗಾರಿಕಾ ಮತ್ತು ವಾಣಿಜ್ಯಿಕ ವಿದ್ಯುತ್ ಸಾಧನಗಳನ್ನು ನಿರ್ವಹಣೆ ಮಾಡಲು ತೆಗೆದುಕೊಂಡು ಹೋಗಬಹುದಾದ ಕೈಯಲ್ಲಿ ಹಿಡಿಯಬಹುದಾದ ಕ್ಲಾಂಪ್-ಆನ್ ವಿದ್ಯುತ್ ಪ್ರವಾಹ ಮಾಪಕವು ಸಾಮಾನ್ಯವಾದ ಪರಿಕರವಾಗಿದ್ದು, ವಿದ್ಯುತ್ ಪ್ರವಾಹವನ್ನು ಮಾಪನ ಮಾಡಲು ಇದನ್ನು ತಾತ್ಕಾಲಿಕವಾಗಿ ತಂತಿಯ ಮೇಲೆ ಸಿಕ್ಕಿಸಲಾಗುತ್ತದೆ. ಇತ್ತೀಚಿನ ಕೆಲವು ಪ್ರಕಾರಗಳು ವಾಹಕದ ಎರಡೂ ಬದಿಗಳಲ್ಲಿ ಇರಿಸುವ ಸಮಾನಾಂತರ ಜೋಡಿಯ ಅಯಸ್ಕಾಂತೀಯ-ಮೃದುವಾದ ಕಡ್ಡಿಯಂತಹ ಸಲಕರಣೆಗಳನ್ನು ಹೊಂದಿರುತ್ತವೆ.

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಎಲ್. ಎ. ಗೆಡ್ಡೆಸ್, ಲುಕಿಂಗ್ ಬ್ಯಾಕ್: ಹೌ ಮೆಷರಿಂಗ್ ಎಲೆಕ್ಟ್ರಿಕ್ ಕರೆಂಟ್ ಹಾಸ್ ಇಂಪ್ರೂವ್ಡ್ ಥ್ರೂ ದಿ ಏಜಸ್ , ಐಇಇಇ ಪೊಟೆನ್ಶಿಯಲ್ಸ್ , ಫೆಬ್ರ/ಮಾರ್ಚ್ 1996, ಪುಟಗಳು 40-42
  2. ೨.೦ ೨.೧ ೨.೨ ೨.೩ ಫ್ರಾಂಕ್ ಸ್ಪಿಟ್ಜರ್ ಮತ್ತು ಬ್ಯಾರಿ ಹೌರಾತ್, ಪ್ರಿನ್ಸಿಪಲ್ಸ್ ಆಫ್ ಮಾರ್ಡರ್ನ್ ಇನ್‌ಸ್ಟ್ರುಮೆಂಟೇಶನ್, ಹೋಲ್ಟ್, ರೈನ್‌ಹಾರ್ಟ್ ಮತ್ತು ವಿನ್‌ಸ್ಟನ್, ನ್ಯೂಯಾರ್ಕ್, 1972, ISBN 0-03-080208-3 ಅಧ್ಯಾಯ 11
  3. http://www-project.slac.stanford.edu/lc/local/notes/dr/Wiggler/Wigrad_BK.pdf
  4. "ಆರ್ಕೈವ್ ನಕಲು" (PDF). Archived from the original (PDF) on 2011-07-20. Retrieved 2010-11-11.
  5. Ix Innovations, LLC. "PocketPico Ammeter Theory of Operation" (PDF). Retrieved 2010-19-19. {{cite web}}: Check date values in: |accessdate= (help)[ಶಾಶ್ವತವಾಗಿ ಮಡಿದ ಕೊಂಡಿ]