ವಿಗಲನ
ವೈದ್ಯಶಾಸ್ತ್ರದಲ್ಲಿ, ವಿಗಲನವು (ಅಥವಾ ಡಯಾಲಿಸಿಸ್, ಗ್ರೀಸ್‌ನ ಭಾಷೆಯಲ್ಲಿ "ಡಯಾಲಸಿಸ್" ಎಂದರೆ ಬೇರ್ಪಡಿಸುವಿಕೆ, "ಡಯಾ", ಎಂದರೆ ಮೂಲಕ, ಮತ್ತು "ಲಿಸಿಸ್", ಎಂದರೆ ಸಡಿಲಗೊಳಿಸುವಿಕೆ) ಮುಖ್ಯವಾಗಿ ಮೂತ್ರಪಿಂಡ ವೈಫಲ್ಯದ ಕಾರಣ ವಿಫಲವಾದ ಮೂತ್ರಪಿಂಡ ಕ್ರಿಯೆಗೆ (ಮೂತ್ರಪಿಂಡ ಬದಲಿ ಚಿಕಿತ್ಸೆ) ಒಂದು ಕೃತಕ ಬದಲಿ ವ್ಯವಸ್ಥೆಯನ್ನು ಒದಗಿಸಲು ಬಳಸಲ್ಪಡುತ್ತದೆ. ಹಠಾತ್ತಾಗಿ ಆದರೆ ತಾತ್ಕಾಲಿಕವಾಗಿ ತಮ್ಮ ಮೂತ್ರಪಿಂಡದ ಕಾರ್ಯಭಾರವನ್ನು ಕಳೆದುಕೊಂಡು ಬಹಳ ಅಸ್ವಸ್ಥರಾದ ರೋಗಿಗಳಿಗೆ (ತೀವ್ರ ಮೂತ್ರಪಿಂಡ ವೈಫಲ್ಯ) ಅಥವಾ ತಮ್ಮ ಮೂತ್ರಪಿಂಡದ ಕ್ರಿಯೆಯನ್ನು ಶಾಶ್ವತವಾಗಿ ಕಳೆದುಕೊಂಡಿರುವ ಹೆಚ್ಚುಕಡಮೆ ಸ್ಥಿರವಾಗಿರುವ ರೋಗಿಗಳಿಗೆ (೫ನೇ ಹಂತದ ದೃಢೀಕೃತ ಮೂತ್ರಪಿಂಡ ರೋಗ) ವಿಗಲನವನ್ನು ಬಳಸಬಹುದು. ೫ನೇ ಹಂತದ ರೋಗಿಗಳಿಗೆ, ಅಥವಾ ಕೊನೆ-ಘಟ್ಟದ ಮೂತ್ರಪಿಂಡ ರೋಗದವರಿಗೆ (ಎಂಡ್-ಸ್ಟೇಜ್ ಕಿಡ್ನಿ ಡಿಸೀಸ್-ಇಎಸ್‌ಕೆಡಿ), ಮೂತ್ರಪಿಂಡ ಕ್ರಿಯೆಯ ಕ್ಷೀಣಿಸುವಿಕೆಯು ತಿಂಗಳುಗಟ್ಟಲೇ ಅಥವಾ ವರ್ಷಗಟ್ಟಲೆಯ ಅವಧಿಯಲ್ಲಿ ಉಂಟಾಗಿ ಬದುಕಿ ಉಳಿಯಲು ಚಿಕಿತ್ಸೆ ಅಗತ್ಯವಾದ ಒಂದು ಮಟ್ಟವನ್ನು ಮುಟ್ಟಿರುತ್ತದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |