ಜೀವ ವಿಕಾಸವಾದ
ಪರಿವಿಡಿ |
ಜೀವ ವಿಕಾಸವಾದ [ಬದಲಾಯಿಸಿ]
ಜೀವ ವಿಕಾಸವಾದ (ಅಥವ ವಿಕಾಸವಾದ) ಆಧುನಿಕ ಜೀವ ವಿಜ್ಞಾನದ ಬುನಾದಿ. ಈ ವಾದವನ್ನು ಮೊದಲ ಬಾರಿಗೆ ೧೮೫೮ರಲ್ಲಿ ಚಾರ್ಲ್ಸ್ ಡಾರ್ವಿನ್ ಮತ್ತು ಆಲ್ಪ್ರೆಡ್ ವಾಲೇಸ್ ಮಂಡಿಸಿದರು. ಭೂಮಿಯ ಮೇಲೆ ಜೀವ ಉತ್ಪತ್ತಿಯಾದ ನಂತರದಿಂದ ಈಗ ಕಂಡುಬರುವ ಹಾಗು ಅಳಿದುಹೋಗಿರುವ ಜೀವ ಜಾತಿಗಳು ಯಾವ ಆಧಾರಗಳ ಮೇಲೆ ಉತ್ಪತ್ತಿಯಾಗುವವೆಂದು ವಿವರಣೆ ಈ ವಾದದ ಸಾರಾಂಶ.
ಪೀಠಿಕೆ [ಬದಲಾಯಿಸಿ]
ವಿಕಾಸವಾದ ಜೀವಪೀಳಿಗೆಗಳಲ್ಲಿ ಕಾಲಾನುಕ್ರಮದಲ್ಲಿ ಉಂಟಾಗುವ ಬದಲಾವಣೆಗಳನ್ನು ವಿವರಿಸುತ್ತದೆ. ಇದು ಜನಾಂಗಗಳ ಒಂದು ತಲೆಮಾರಿನಿಂದ ಮತ್ತೊಂದರ ವಂಶವಾಹಿಗಳಲ್ಲಿನ ಸೂಕ್ಷ್ಮ ಬದಲಾವಣೆ ಮತ್ತು ಒಂದು ಸಮಾನವಾದ ಮೂಲದಿಂದ ಉಗಮವಾಗಿ ಹಲವಾರು ತಲೆಮಾರುಗಳಲ್ಲಿ ಬೇರೆ ಬೇರೆ ಪೀಳಿಗೆಗಳಾಗಿ ವಿಕಾಸಗೊಳ್ಳುವ ಮಹತ್ತರ ಬದಲಾವಣೆಗಳನ್ನು ವಿವರಿಸುತ್ತದೆ.ಒಟ್ಟಿನಲ್ಲಿ ವಿಕಾಸವಾದ ಜೀವಸಂಕುಲದ ಇತಿಹಾಸವನ್ನು ಅರ್ಥೈಸಲು ಸಹಾಯ ಮಾಡುತ್ತದೆ.ಎಲ್ಲ ಜೀವಿಗಳ ಮೂಲ ಒಂದೇ ಆಗಿದ್ದು, ಕಾಲಾನುಕ್ರಮದಲ್ಲಿ ಆದ ನಿರಂತರ ನಿಧಾನ ಬದಲಾವಣೆಗಳಿಂದ ವೈವಿಧ್ಯಮಯ ಜೀವಸಂಕುಲದ ಉಗಮವಾಗಿದೆ ಎನ್ನುವುದೇ ವಿಕಾಸವಾದದ ಮೂಲತತ್ವ.. ಈ ಕೆಳಗಿನ ಜೀವ ವಿಕಾಸದ ಬೆಳವಣಿಗೆಯನ್ನು ಭೂಮಿಯ ಉತ್ಖ್ನನನ ದ (ಕಲ್ಲಿನ ಪದರಿನಲ್ಲಿ ಸಿಕ್ಕಿದ) ಪಳಿಯುಳಿಕೆ ಮತ್ತು ಇತರೆ ಲೆಕ್ಕಾಚಾರದಿಂದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ . ಅವರಿಗೆ ಸಿಕ್ಕ ಆಧಾರ ದ ಮೇಲೆ ಈ ನಂತರ ತಿಳಿಸಿದ ರೀತಿ ಜೀವ ವಿಕಾಸ ಆಗಿರಬೇಕೆಂದು ನಿರ್ಧರಿಸಿದ್ದಾರೆ.
ಭೂಗೋಲ ಜೀವ ವಿಕಾಸದ ಕಾಲಮಾನ [ಬದಲಾಯಿಸಿ]
- ARCHAEAN - EON
The age of the Earth is 4.54 billion years(4.54 × 109 years ± 1%- Wikipedia/Age of the Earth
- ಅಂಕಿಗಳ ಮುಂದೆ -' ವರ್ಷಗಳ ಹಿಂದೆ ' , ಎಂದು ಓದಿಕೊಳ್ಳಿ :-
- ಅರ್ಚಾಯಿನ್ ಮಹಾಯುಗ
- ಸೂರ್ಯನಿಗೆ ೪೫೭./ ೪೬೫,೦೦,೦೦,೦೦೦ ಕೋಟಿ ವರ್ಷಗಳಾಗಿವೆ ಎಂದು ಅಂದಾಜು ಮಾಡಲಾಗಿದೆ ಸೌರ ವ್ಯೂಹದ ಉದಯ ಕಾಲ -
- ಭೂಮಿಯ ಪ್ರಾಯ ೪೫೪ ಕೋಟಿ ವರ್ಷ (೧% ವ್ಯತ್ಯಾಸಕ್ಕೆ ಅವಕಾಶ ವಿದೆ)
ಸೌರವ್ಯೂಹ ದ ಜನನ [ಬದಲಾಯಿಸಿ]
- ಭೂಮಿಯ ಜನನದ ನಂತರದ ಕಾಲವನ್ನು ಮುಖ್ಯವಾಗಿ ಮೂರು ಮಹಾ ಯುಗಗಳಾಗಿ ವಿಂಗಡಿಸಿದೆ
- ೧)ಪಾತಾಲ ಮಹಾ ªÀĺÁಯುಗ ; ೨)ಆದಿ ಜೀವ ಮಹಾ ಯುಗ ೩) ಜೀವ ವಿಕಾಸ ಮಹಾಯುಗ ಇದನ್ನು ಫಲ ಪುಷ್ಪ ಮಹಾಯುಗ ಎಂದೂ ಕರೆಯುವರು.
- ಅದರಲ್ಲಿ ಮತ್ತೆ ವಿಭಾಗಗಳು
- PRISCOAN -HADEAN : ARCHAEAN - EARTH- EARLY -MIDDLE- LATE
- ೧)ಪಾತಾಲ ಮಹಾಯುಗದಲ್ಲಿ ಯುಗಗಳು ೧.ಅತಿಪ್ರಾಚೀನ ೨.ಆದಿ/ಮಧ್ಯ ಉಷ್ಣ ಯುಗ. ೩. ಅಂತ್ಯ ಉಷ್ಣ ಯುಗ.
ಪಾತಾಲ ಮಹಾÀÄ ಯುಗ [ಬದಲಾಯಿಸಿ]
- ಈರೀತಿಯಲ್ಲೂ ವಿಂಗಡಿಸಿದೆ (ಯುಗ ವಿಂಗಡಣೆಯ ಮತ್ತು ಜೀವ ವಿಕಾಸದ ಕಾಲ ಗಣನೆಯ ವಿಚಾರದಲ್ಲಿ ಅಭಿಪ್ರಾಯ ಬೇಧಗಳಿವೆ))
- ಪಾತಾಲಯುಗ (ಉಷ್ಣ ಯುಗದ ಅಂತ್ಯ ಕಾಲ) ೩೦೦,೦೦,೦೦,೦೦೦ ಅರಂಭಿಕ ಏಕಾಣು ಜೀವ ಕೋಶಗಳು ಕಾಣಿಸಿಕೊಂಡವು.
- ಪೂರ್ವ ಪ್ರಾಚೀನ ಯುಗ ೨೫೦,೦೦,೦೦,೦೦೦ ವರ್ಷಗಳು ಮುಂದುವರೆದ ಏಕಾಣು ಜೀವಕೋಶಗಳು
- ಮಧ್ಯ ಪ್ರಾಚೀನ ೧೬೦,೦೦,೦೦,೦೦೦ ಸ್ಪಷ್ಟ -ಕೇಂದ್ರ ಬೀಜವುಳ್ಳ ಜೀವಕೋಶಗಳು ಮಧ್ಯ ಪ್ರಾಚೀನ
ಆದಿ ಉಷ್ಣ ಯುಗ [ಬದಲಾಯಿಸಿ]
೧.ಅತಿಪ್ರಾಚೀನ
- (ಹೇಡಿಯಾನ್ ಎಂದರೆ ನರಕದ ಯುಗ) ಅತಿಉಷ್ಣ ಯುಗ - ಭೂಮಿ
- (೪೬೫ ಕೋಟಿ ವರ್ಷಗಳ ಹಿಂದೆ) ಅತಿಪ್ರಾಚೀನ (4600ಮಿಲಿಯನ್ ವರ್ಷಗಳ ಹಿಂದೆ)
- ಬಾಲ ಸೂರ್ಯನ ಸುತ್ತುತ್ತಿರುವ ಧೂಳಿನ ಕಣಗಳು ಸಾಂದ್ರತೆ ಯಿಂದ ಒಟ್ಟುಗೂಡಿ ಭೂಮಿಯ ಉದಯವಾಯಿತು. ಆಗಲೇ ಜೀವ ಆಧಾರವಾದ ಸಂಕೀರ್ಣ ಸಂಯುಕ್ತ ಅಣುಗಳ ರಚನೆಯಾಗಿರಬೇಕು
ಮಧ್ಯ ಉಷ್ಣ ಯುಗ [ಬದಲಾಯಿಸಿ]
೨ ಅತಿಉಷ್ಣ - ೪೦೦,೦೦,೦೦,೦೦೦ ಮಧ್ಯ ಉಷ್ಣ ಯುಗ ಥಿಯಾ (ಊಹೆ) ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ತುಂಡು ಚಂದ್ರನಾಗಿ ಮಾರ್ಪಟ್ಟು ಭೂಮಿಯನ್ನು ಸುತ್ತಲು ಆರಂಭಿಸಿತು. ಅದರಿಂದ ಚಂದ್ರನ ಗುರುತ್ವಾಕರ್ಷಣೆ ಭೂಮಿಯ ತನ್ನ ಅಕ್ಷ ಭ್ರಮಣ ವನ್ನು ಒಂದು ಸ್ಥಿರತೆ ಗೆ ತಂದಿತು. ಈ ಅಕ್ಷ ಭ್ರಮಣವೂ ಭೂಮಿಯಲ್ಲಿ ಜೀವ ಧಾರಣೆಗೆ ಅನುಕೂಲ ವಾತಾವರಣವನ್ನು ಉಂಟುಮಾಡಿತು. (ಥಿಯಾ ಸೃಷ್ಟಿಯ ಆದಿ ಮಾತೆ ; ತಿತಾನೆಸ್-ಹೆಲೋಯಿಸ್,ಸೆಲೀನೆ ,ಇಯೋಸ್ ಆದಿ ಪುರುಷರು - ಥಿಯಾ ಇವರ ತಾಯಿ -ಗ್ರೀಕ್ ಪುರಾಣ)
ಅಂತ್ಯ ಉಷ್ಣ ಯುಗ. [ಬದಲಾಯಿಸಿ]
Cells resembling prokaryotes
- ಸುಮಾರು ೩೫೦ (೪೫೦-೩೫೦)ಕೋಟಿ ವರ್ಷಗಳಷ್ಟು ಹಿಂದೆಯೇ ಆದಿ ಜೀವಾಂಕುರ ವಾಗಿರ ಬೇಕೆಂದು ಊಹೆ. ಪ್ರೋಟೋ ಕೋಶಗಳು (ಸೆಲ್) ಉಂಟಾಗಲು ಅನುಕೂಲ ಭೌತಿಕ ಜೈವಿಕ ವಾತಾವರಣ ಸೃಷ್ಟಿ ಯಾಯಿತು
- ೩೯೦ ಕೋಟಿ ವರ್ಷಗಳ ಆಸು-ಪಾಸಿನಲ್ಲಿ ಭೂಮಿಯ ಮೇಲೆ ಉಲ್ಕೆ ಗಳ ಧಾಳಿಗಳಿಂದ ಸತತ ವಾತಾವರಣದ ಏರು ಪೇರಾಗಿ ಜೀವಕೋಶಗಳ ನಿರ್ಮಾಣ ವ್ಯವಸ್ಥೆ ನಾಶವಾದರೂ ಭೂಮಿಯ ಒಳಪದರದ ಜಲಾವರಣದಲ್ಲಿ ಕೆಲವು ಮೈಕ್ರೋಬ್ - ಸೂಕ್ಷ್ಮ ಜೀವ ಧಾತುಗಳು ಉಳಿದಿರಬೇಕು ಎಂದು ಊಹಿಸಲಾಗಿದೆ
- ೩.ಅತಿಉಷ್ಣ - ೩೫೦,೦೦,೦೦,೦೦೦ ಅಂತ್ಯ ಉಷ್ಣ ಯುಗ.
- ಭೂಮಿಯ ಮೇಲ್ಪದರ ತಣ್ಣಗಾಗಿ ಗಟ್ಟಿಯಾಯಿತು. ವಾಯು ಮಂಡಲ , ಸಮುದ್ರಗಳು ಉಂಟಾದವು. ಸಮುದ್ರ ತಳದಲ್ಲಿ ಕಬ್ಬಿಣದ ಸಲ್ಫೈಡ್ ಪದರಗಳಾದವು. ಇದರಿಂದ ಆರ್ ಎನ್ ಎ ಗೆ ಬೇಕಾದ ಸಂಯುಕ್ತಗಳಾಗಿರಬಹುದು
-
- ೩೯೦-೨೫೦ ಕೋಟಿ ವರ್ಷಗಳಹಿಂದೆ ಪ್ರೋಕೊ ರೀಅವಟ್ ಗಳೆಂಬ ಆದಿ ಜೀವಕೊಶಗಳು ಉಗಮವಾಗಿರಬೇಕು . ಇವು ಇಂಗಾಲಾಮ್ಲವನ್ನು ಉಪಯೋಸಿ ಆರ‍್ಗ್ಯಾನಿಕ್ ಅಲ್ಲದ ವಸ್ತುಗಳನ್ನು ಆಮ್ಲೀಕರಣ (ಆಕ್ಸಿಡೈಸ್ ) ಮಾಡಿ ಶಕ್ತಿಸಂಚಯ ಮಾಡಿರಬೇಕು. ನಂತರ ಪ್ರೋಕೊರೀಅವಟ್ ಗಳು ರಸಾಯನಿಕ ಕ್ರಿಯೆಯಿಂದ ಗ್ಲೂಕೋಸು ಸಂಯುಕ್ತ ಅಣುಗಳ ರಸಾಯನಿಕ ಬಂಧಗಳ ರಚನೆಮಾಡಿದ್ದು -ಅವು ಸಂಗ್ರಹಗೊಂಡಿರಬೇಕು. ಈ ಗ್ಲೂಕೊಸು ನಂತರದ ಎಲ್ಲಾ ಜೀವ ಕೋಶಗಳಿಗೆ -ಜೀವಿಗಳಿಗೆ ಜೀವಾಧಾರ ಮೂಲವಾಗಿ ಇಂದಿಗೂ ಉಳಿದಿದೆ.
- ಬಹುತೇಕ ೩೫೦ ಕೋಟಿವರ್ಷಗಳ ಹಿಂದೆಯೇ ಅರ್ಚಿಯಾನ್ ಯುಗದಲ್ಲಿ ಕ್ಲೋರೊಫಿಲ್ ಉಳ್ಳ ಸ್ಯನೊ ಬ್ಯಾಕ್ಟೀರಿಯಾಗಳು ಆದಿಜೀವ ಕಣಗಳಿಂದ ಬೇರೆಯಾಗಿ ರೂಪುಗೊಂಡು ಫೋಟೋಸಿಂತೆಸಿಸ್ ( ದ್ಯುತಿಸಂಸ್ಲೇಷಣೆ) ಮೂಲಕ ಆಹಾರ ಉತ್ಪತ್ತಿ ಮಾಡಿರಬೇಕು ಹೀಗೆ ಜೀವಧಾರಣೆಗೆ ಇಂದಿಗೂ ಬೇಕಾದ ಆಮ್ಲಜನಕದ ಉತ್ಪತ್ತಿ ಆಗಿನಿಂದಲೇ ನೆಡೆದಿರಬೇಕು.
- ನಂತರ ಅರ್ಚಿಯಾನ್ ಯುಗ : ಮತ್ತು ಅಂತ್ಯ :
- Archean Eon
ಜೀವ ವಿಕಾಸ ಮಹಾಯುಗ [ಬದಲಾಯಿಸಿ]
PHANEROZOIC
- ೧.ಪೂರ್ವ ಪ್ರಾಚೀನ ಯುಗ ೨೫೦,೦೦,೦೦,೦೦೦ ವರ್ಷಗಳು ಮುಂದುವರೆದ ಏಕಾಣು ಜೀವಕೋಶಗಳು
- ೨.ಮಧ್ಯ ಪ್ರಾಚೀನ ೧೬೦,೦೦,೦೦,೦೦೦ ಸ್ಪಷ್ಟ -ಕೇಂದ್ರ ಬೀಜವುಳ್ಳ ಜೀವಕೋಶಗಳು ಮಧ್ಯ ಪ್ರಾಚೀನ
- ೩.ನವ್ಯ ಪ್ರಾಚೀನ ೧೦೦,೦೦,೦೦,೦೦೦ ಮೃದು ದೇಹದ (ಬೆನ್ನೆಲುಬಿಲ್ಲದವು) ಅ-ಕಶೇರುಕಗಳು
ಜೀವ ವಿಕಾಸ ಯುಗ [ಬದಲಾಯಿಸಿ]
PALAEOZOIC - ಪೂರ್ವ ಜೀವ ವಿಕಾಸ ಯುಗ
- 1) CAMBRIAN . 2 ORDOVICIAN. 3) SILURIAN . 4)) DEVONIAN .5) CORBOMIFEROUS
- ೧.ಎರಡನೇ ಹಂತ ೫೪,೫೦,೦೦,೦೦೦ ವರ್ಷಗಳು ಗಟ್ಟಿದೇಹದ ಅ-ಕಶೇರುಕಗಳು
- ೨.ಧೃಡಜೀವ ಹಂತ ೪೯,೫೦,೦೦,೦೦೦ ವರ್ಷಗಳು ಕಶೇರುಕಗಳು (ಬೆನ್ನೆಲಬಿನ ಪ್ರಾಣಿಗಳು
- ೩.(ಸೈಲೂರಿಯನ್) *ಸಿಲೂರಿಂii (ಊರು)ಕಾಲ ೪೪,೩೦,೦೦,೦೦೦ ವರ್ಷಗಳು ನಾಳಗಳುಳ್ಳ ಭೂ ಸಸ್ಯಗಳು
- ಡೇವೊನಿ ಯಾದ ಕಾಲ ೪೧,೭೫,೦೦,೦೦೦ ವರ್ಷಗಳು ಭೂಚರ ಸರೀ ಸೃಪಗಳು ; ಉಸಿರಾಡುವ ಕೀಟಗಳು
- ಇಂಗಾಲ ವನ ಕಾಲ ೩೫,೪೫,೦೦,೦೦೦ ವರ್ಷಗಳು ನಿಜ (ದೊಡ್ಡ) ಸರೀಸೃಪಗಳು; ಫರ‍್ನಕಾಡುಗಳು.
- -
MESOZOIC
- ಮಧ್ಯ ಜೀವ ವಿಕಾಸ ಯುಗ
- 1) PERMIAN .-2) TRIASSIC.-3) JURASSIC . 4)CRETACEOUS
- ಪರ್ಮಿಯಾದ ಸಸ್ಯಕಾಲ - ೨೯,೦೦,೦೦,೦೦೦ ವರ್ಷಗಳ ಹಿಂದೆ : ಕೋನಿಫರಸ್ ಸಸ್ಯಗಳು ,ಸಸ್ತನಿಗಳನ್ನು ಹೋಲುವ ಸರೀಸೃಪಗಳು
- ಟ್ರಿಯಾಸಿಕ್ ಶಿಲಾ ರಚನಾ ಕಾಲ ೨೪,೮೨,೦೦,೦೦೦ ವರ್ಷಗಳ ಹಿಂದೆ : ಸಣ್ಣ ಡಿನೋಸಾರುಗಳು; ಸಣ್ಣ ಸಸ್ತನಿಗಳು (ಮೊಲೆ ಹಾಲು ಕುಡಿಸುವ ಪ್ರಾಣಿಗಳು)
- ಜುರಾಸಿಕ್ ಶಿಲಾ ರಚನಾಕಾಲ * ೨೦,೫೭,೦೦,೦೦೦ ವರ್ಷಗಳ ಹಿಂದೆ : ಪಕ್ಷಿಗಳು
- ಸುಣ್ಣದ ಶಿಲಾ ರಚನಾ ಕಾಲ ೧೪,೨೦,೦೦,೦೦೦ ವರ್ಷಗಳ ಹಿಂದೆ : ಹೂ ಬಿಡುವ ಸಸ್ಯಗಳು, ಗರ್ಭಕೋಶಯುಕ್ತ ಸಸ್ತನಿಗಳು
.
ಅರ್ವಾಚೀನ ಯುಗ [ಬದಲಾಯಿಸಿ]
- CENOZOIC
ಅರ್ವಾಚೀನ'
- ವರ್ತಮಾನ ಜೀವ ವಿಕಾಸ ಯುಗ (ಸೀನೋ ಜೊಯಿಕ್)
-
ಉಪ ತೃತೀಯ ಶಿಲಾಪದರ ಯುಗ. Paiaeogene [ಬದಲಾಯಿಸಿ]
Tertiary sub era
Palaeocene, [ಬದಲಾಯಿಸಿ]
Paiaeogene ?
- ಜೀವ ವಿಕಾಸದ ಕಾಲ ೬,೫೦,೦೦,೦೦೦ ವರ್ಷಗಳು - ಗೊರಸಿನ ಸಸ್ತನಿಗಳು
- ಜೀವ ವಿಕಾಸದ ಕಾಲ ೫,೪೮,೦೦,೦೦೦ ವರ್ಷಗಳು - ಜಲಚರಗಳು ಕಾರ್ನಿವೊರ ಸಸ್ತನಿಗಳು
- ಜೀವ ವಿಕಾಸದ ಕಾಲ ೩,೩೭,೦೦,೦೦೦ ವರ್ಷಗಳು -ಆಧುನಿಕ ಮೂಲಜೀವಿಗಳ ಮೊದಲ ಪೀಳಿಗೆ ೨,೩೮,೦೦,೦೦೦ ವರ್ಷಗಳು ಮುಂದುವರಿದ ಜೀವಿಗಳು
- Neogene
ಅಧಿಕ ಜೀವ ವಿಕಾಸ ಕಾಲ [ಬದಲಾಯಿಸಿ]
Quaternary sub era
- ಜೀವ ವಿಕಾಸ ೨,೩೮,೦೦,೦೦೦ವರ್ಷಗಳು - ಮುಂದುವರಿದ ಜೀವಿಗಳು
- ಜೀವ ವಿಕಾಸ ೫೩,೦೦,೦೦೦ ವರ್ಷಗಳು - ವಾನರರು (ಕಪಿರೂಪಿ ನರರು)
-
2)ಉಪಚಾತುರ್ಥ ಉಪಯುಗ [ಬದಲಾಯಿಸಿ]
- ) .Pleistogene
ಸಮೃದ್ಧ ಜೀವ ವಿಕಾಸ ಕಾಲ
- ಜೀವ ವಿಕಾಸ ೧೮,೦೦,೦೦೦ ವರ್ಷಗಳು - ಮಾನವರು (ಅನಾಗರಿಕರು) ಪ್ರಾಚೀನ ಶಿಲಾಯುಗ
- ಜೀವ ವಿಕಾಸ ೧೦,೦೦೦ ವರ್ಷಗಳು - ನಾಗರಿಕ ಮಾನವರು -(ಆಧುನಿಕ ಮಾನವರು).
ಆಧಾರ [ಬದಲಾಯಿಸಿ]
- ಇಂಗ್ಲಿಷ್ ವಿಕಿಪೀಡಿಯಾ | evolutionary history of lifeಜೀವ ವಿಕಸನದ ವಿಭಾಗ ಫೈಲುಗಳು.filesevolutionary history
- evolutionary history of life
- Timeline of evolutionary history of life Timeline of evolution | en.wikipedia
- ಜೀವ ಜೀವನ - ಡಾ.ಶಿವರಾಮ ಕಾರಂತ
- ವಿವಿಧ ಲೇಖನಗಳು
- ಆರ್ಡಿಪಿಥೆಕಸ್ | ವಿಜ್ಞಾನ ಮತ್ತು ಮಾನವನ ಪೂರ್ವ ಇತಿಹಾಸ ೨೯-೭-೨೦೧೨
Australopithecus *ಆಸ್ತ್ರೇಲೋಪಿಥಿಕಸ್ ಅಪೆರೆನ್ಸಸ್ ೨೯-೭-೨೦೧೨
- ಮಾನವನ ವಿಕಾಸ/Species charಕಾಲ ಸೂಚಿಯನ್ನು ತುಂಬಲಿಕ್ಕಿದೆ
- ( ಸದಸ್ಯ:Bschandrasgr/ಪರಿಚಯದಿಂದ ನಿರ್ದೇಶಿತ :- ಕಾಪಿ ರೈಟಿನಿಂದ ಮುಕ್ತ)
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ನೋಡಿ ಸೃಷ್ಟಿ ಮತ್ತು ಪುರಾಣ | ಸೃಷ್ಟಿ ಮತ್ತು ವಿಜ್ಞಾನ | ಮಾನವ ವಿಕಾಸ |