ವಿಂದಾ ಕರಂದೀಕರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

(ಜನನ: ಆಗಸ್ಟ್ ೨೩, ೧೯೧೮)-(ಮರಣ : ಮಾರ್ಚ್ ೧೪, ೨೦೧೦)

'ಗೋವಿಂದ್ ವಿನಾಯಕ್ ಕರಂದೀಕರ್' ರವರು ತಮ್ಮ ಪ್ರಿಯರಿಂದ, 'ವಿಂದಾ ಕರಂದೀಕರ್' ಎಂದೇ ಕರೆಯಲ್ಪಡುವ ಮರಾಠಿ ಕವಿ. ಇವರಿಗೆ ೨೦೦೩ ವರ್ಷದ ಜ್ಞಾನಪೀಠ ಪ್ರಶಸ್ತಿ ಸಂದಿದೆ. ಇವರು ಆಧುನಿಕ ಮರಾಠಿ ಕವಿಗಳಲ್ಲಿ ಪ್ರಯೋಗಶೀಲರೆಂದು ವಿಮರ್ಶಕರ ಅಭಿಪ್ರಾಯವಾಗಿದೆ. ಕಾವ್ಯವಷ್ಟೇ ಅಲ್ಲದೆ, ಪ್ರಬಂಧ, ವಿಮರ್ಶೆ ಹಾಗು ಅನುವಾದಗಳನ್ನು ಸಹ ಮಾಡಿದ್ದಾರೆ. ಅರಿಸ್ಟೋಟಲ್ ರಚಿಸಿದ ಗ್ರೀಕ್ ಕಾವ್ಯಗಳನ್ನು ಮರಾಠಿ ಭಾಷೆಗೆ ಅನುವಾದಿಸಿದ್ದಾರೆ ಹಾಗು ತಮ್ಮ ಕವಿತೆಗಳನ್ನು ಆಂಗ್ಲ ಭಾಷೆಗೆ ಭಾಷಾಂತರಿಸಿ, ಆಂಗ್ಲದಲ್ಲಿಯೂ "ವಿಂದಾ ಪೊಯೆಮ್ಸ್ ಆಫ್ ೧೯೭೫" ಕವನ ಸಂಕಲನವನ್ನು ರಚಿಸಿರುವರು. ಧ್ಯಾನೇಶ್ವರಿ, ಅಮೃತಾನುಭವ್ ನಂತಹ ಹಳೆಯ ಮರಾಠಿ ಸಾಹಿತ್ಯ ಕೃತಿಗಳಿಗೆ ನೂತನ ರೂಪ ಕೊಟ್ಟಿರುತ್ತಾರೆ. ಇವರು ಜ್ಞಾನಪೀಠಪ್ರಶಸ್ತಿ ಪಡೆದಿರುವ ೩ ನೆಯ ಮರಾಠಿ ಸಾಹಿತಿ.

ಕೃತಿಗಳು[ಬದಲಾಯಿಸಿ]

 • ಸ್ವೇದಗಂಗಾ (೧೯೪೯)
 • ಮೃದ್ಗಂಧ್ (೧೯೫೪)
 • ಧ್ರುಪದ್
 • ಸಂಹಿತಾ
 • ವಿರೂಪಿಕಾ

ಶಿಶು ಸಾಹಿತ್ಯ[ಬದಲಾಯಿಸಿ]

 • ರಾಣಿಚಿ ಬಾಗ್
 • ಸಶಾಚೇ ಕಾನ
 • ಪರಿ ಗ ಪರಿ

ಪ್ರಶಸ್ತಿ[ಬದಲಾಯಿಸಿ]

 • ಜ್ಞಾನಪೀಠ ಪ್ರಶಸ್ತಿ
 • ಕೇಶವಸುತ ಪ್ರಶಸ್ತಿ
 • ಸೋವಿಯತ್ ಲ್ಯಾಂಡ್ ನೆಹರು ಸಾಹಿತ್ಯ ಪ್ರಶಸ್ತಿ
 • ಕಬೀರ್ ಸಮ್ಮಾನ್
 • ಸಾಹಿತ್ಯ ಅಕಾಡೆಮಿಯ ಫೆಲೋಷಿಪ್

ಮರಣ[ಬದಲಾಯಿಸಿ]

೯೨ ವರ್ಷ ಪ್ರಾಯದ, ಹಿರಿಯ ಕವಿ, ಕರಂದೀಕರ್ ಮುಂಬೈನಲ್ಲಿ ನಿಧನರಾದರು.

ಹೊರಗಿನ ಸಂಪರ್ಕ[ಬದಲಾಯಿಸಿ]

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಕನ್ನಡ: ಕುವೆಂಪು | ದ.ರಾ.ಬೇಂದ್ರೆ | ವಿ.ಕೃ.ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್ | ಚಂದ್ರಶೇಖರ ಕಂಬಾರ
ಹಿಂದಿ: ಸುಮಿತ್ರಾ ನಂದನ್ ಪಂತ್ | ರಾಮ್‍ಧಾರಿ ಸಿಂಘ್ ದಿನಕರ್ | ಸಚ್ಚಿದಾನಂದ ವಾತ್ಸಾಯನ | ಮಹಾದೇವಿ ವರ್ಮ | ನರೇಶ್ ಮೆಹ್ತಾ | ನಿರ್ಮಲಾ ವರ್ಮ | ಕುವಂರ ನಾರಾಯಣ | ಅಮರ ಕಾಂತ | ಶ್ರೀ ಲಾಲ್ ಶುಕ್ಲ
ಬೆಂಗಾಲಿ: ತಾರಾಶಂಕರ ಬಂದೋಪಾಧ್ಯಾಯ | ಬಿಷ್ಣು ಡೆ | ಆಶಾಪೂರ್ಣ ದೇವಿ | ಸುಭಾಷ್ ಮುಖ್ಯೋಪಾಧ್ಯಾಯ | ಮಹಾಶ್ವೇತಾದೇವಿ
ಮಲಯಾಳಂ: ಎಂ.ಟಿ.ವಾಸುದೇವನ್ ನಾಯರ್ | ಜಿ. ಶಂಕರ ಕುರುಪ್ | ಎಸ್.ಕೆ.ಪೊಟ್ಟೆಕ್ಕಾಟ್ | ಟಿ. ಶಿವಶಂಕರ ಪಿಳ್ಳೈ
ಗುಜರಾತಿ: ಉಮಾಶಂಕರ್ ಜೋಶಿ | ಪನ್ನಾಲಾಲ್ ಪಟೇಲ್ | ರಾಜೇಂದ್ರ ಕೇಶವ್‌ಲಾಲ್ ಷಾ
ಒರಿಯಾ: ಗೋಪಿನಾಥ್ ಮೊಹಾಂತಿ | ಎಸ್. ರೌತ್ ರಾಯ್ | ಸೀತಾಕಾಂತ್ ಮಹಾಪಾತ್ರ|ಪ್ರತಿಭಾ ರೇ
ಉರ್ದು: ಫಿರಾಕ್ ಗೋರಕ್ ಪುರಿ | ಕುರ್ರಾತುಲೈನ್ ಹೈದರ್ | ಅಲಿ ಸರ್ದಾರ್ ಜಾಫ್ರಿ
ತೆಲುಗು: ವಿಶ್ವನಾಥ ಸತ್ಯನಾರಾಯಣ | ಸಿ. ನಾರಾಯಣ ರೆಡ್ಡಿ | ರಾವುರಿ ಭಾರದ್ವಾಜ
ತಮಿಳು: ಪಿ.ವಿ. ಅಕಿಲಾಂಡಮ್ | ಡಿ. ಜಯಕಾಂತನ್
ಪಂಜಾಬಿ: ಅಮೃತ ಪ್ರೀತಮ್ | ಗುರ್ದಿಯಲ್ ಸಿಂಘ್
ಅಸ್ಸಾಮೀಸ್ ಬಿ.ಕೆ. ಭಟ್ಟಾಚಾರ್ಯ | ಇಂದಿರಾ ಗೋಸ್ವಾಮಿ
ಮರಾಠಿ: ವಿಷ್ಣು ಸಖಾರಾಮ್ ಖಾಂಡೇಕರ್ | ವಿಂದಾ ಕರಂದೀಕರ್ | ಕುಸುಮಾಗ್ರಜ್